Tag: ಟೈಯರ್

  • ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಕಳಚಿಬಿತ್ತು ವಿಮಾನದ ಟೈರ್- 2 ಕಾರುಗಳು ಜಖಂ

    ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಕಳಚಿಬಿತ್ತು ವಿಮಾನದ ಟೈರ್- 2 ಕಾರುಗಳು ಜಖಂ

    ಸ್ಯಾನ್ ಫ್ರಾನ್ಸಿಸ್ಕೋ: ಜಪಾನ್‌ಗೆ (japan) ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ಜೆಟ್‌ಲೈನರ್ ಸ್ಯಾನ್ ಫ್ರಾನ್ಸಿಸ್ಕೋದಿಂದ (San Francisco) ಟೇಕಾಫ್ ಆಗಿತ್ತು. ಹೀಗೆ ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಟೈರ್‌ ಕಳಚಿಬಿದ್ದಿದೆ. ಪರಿಣಾಮ 2 ಕಾರುಗಳು ಜಖಂಗೊಂಡಿವೆ.

    ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಟೈರ್‌ ಕಳಚಿ ಬೀಳುತ್ತಿರುವ ವೀಡಿಯೋ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಟೇಕ್‌ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನವು ತನ್ನ 6 ಟೈಯರ್‌ಗಳಲ್ಲಿ ಒಂದು ಕಳಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ಲಾಸ್ ಏಂಜಲೀಸ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.

    ಈ ಸಂಬಂಧ ವಿಮಾನ ನಿಲ್ದಾಣದ ವಕ್ತಾರ ಡೌಗ್ ಯಾಕೆಲ್ ಅವರು, ಸ್ಯಾನ್ ಫ್ರಾನ್ಸಿಸ್ಕೊ ​​​​ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರುಗಳ ಮೇಲೆ ಟೈರ್‌ ಬಿದ್ದಿದೆ. ಪರಿಣಾಮ ಕಾರುಗಳು ಜಖಂಗೊಂಡಿವೆ. ಆದರೆ ಯಾರಿಗೂ ಹಾನಿಯಾಗಿಲ್ಲ. ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್‌ಗೆ ನಿರಾಕರಿಸಿದ್ದ ವ್ಯಕ್ತಿ ಸ್ನೇಹಿತರಿಂದಲೇ ಹತ್ಯೆ – 9 ದಿನಗಳ ನಂತ್ರ ನೀರಿಲ್ಲದ ಕೊಳದಲ್ಲಿ ಶವ ಪತ್ತೆ

    ವಿಮಾನದಲ್ಲಿ 235 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಇದ್ದರು. ಘಟನೆ ನಡೆದ ಕೂಡಲೇ ಅವರನ್ನು ಪ್ರಯಾಣಿಕರನ್ನು ಮತ್ತೊಂದು ವಿಮಾನಕ್ಕೆ ಸ್ಥಳಾಂತರಿಸಲಾಯಿತು ಎಂದು ಯುನೈಟೆಡ್ ತಿಳಿಸಿದೆ. ಬೋಯಿಂಗ್ 777ಗಳ ಎರಡು ಮುಖ್ಯ ಲ್ಯಾಂಡಿಂಗ್ ಗೇರ್‌ಗಳಲ್ಲಿ ತಲಾ 6 ಟೈರ್‌ಗಳನ್ನು ಹೊಂದಿವೆ. ಅವುಗಳಲ್ಲಿ ಒಂದು ಕಳಚಿಕೊಂಡಿದೆ ಎಂಬುದಾಗಿ ವರದಿಯಾಗಿದೆ.

    ವಿಮಾನಗಳು ಟೈರ್‌ಗಳನ್ನು ಕಳೆದುಕೊಳ್ಳುವುದು ಇದು ಅಪರೂಪದ ಘಟನೆಯಾಗಿದೆ ಎಂದು ವಾಯುಯಾನ ತಜ್ಞರು ಹೇಳಿದ್ದಾರೆ.

  • ಟಯರ್ ಬ್ಲಾಸ್ಟ್ ಆಗಿ ಕಾರು ಅಪಘಾತ-ತರಕಾರಿ ಮಾರುವ ಮಹಿಳೆ ಸಾವು

    ಟಯರ್ ಬ್ಲಾಸ್ಟ್ ಆಗಿ ಕಾರು ಅಪಘಾತ-ತರಕಾರಿ ಮಾರುವ ಮಹಿಳೆ ಸಾವು

    ಬಳ್ಳಾರಿ: ಚಲಿಸುತ್ತಿದ್ದ ಕಾರಿನ ಮುಂದಿನ ಟಯರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮರದ ಕೆಳಗಡೆ ತರಕಾರಿ ಮಾರಾಟ ಮಾರುತ್ತಿದ್ದ ಮಹಿಳೆ ಧಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ವರದಿಯಾಗಿದೆ.

    ಹಳೇಕೋಟೆ ಗ್ರಾಮದ ನಿವಾಸಿ ಕುರುಬರ ಶಾಂತಮ್ಮ(42) ಮೃತ ದುರ್ದೈವಿ. ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಬಳಿ ಗಾದಿಲಿಂಗ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರಿನ ಮುಂದಿನ ಟಯರ್ ಸ್ಫೋಟಗೊಂಡಿದೆ. ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಮರದ ಕೆಳಗಡೆ ತರಕಾರಿ ಮರುತ್ತಿದ್ದ ಶಾಂತಮ್ಮ ಸ್ಥಳದಲ್ಲೇ ಅಸುನಿಗಿದ್ದಾರೆ. ಇದನ್ನೂ ಓದಿ: ಮೈಲಾರಲಿಂಗೇಶ್ವರ ದರ್ಶನ ಪಡೆದ ರವಿ ಚನ್ನಣ್ಣನವರ್

    ಘಟನೆಯಲ್ಲಿ ಕಾರಿನ ಚಾಲಕ ಗಾದಿಲಿಂಗ ಸೇರಿದಂತೆ ತರಕಾರಿ ಖರೀದಿಗೆ ಆಗಮಿಸಿದವರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಗಾಯಗಳಾದ ಒಬ್ಬರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೆಕ್ಕಲಕೋಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ರಸ್ತೆ ರಿಪೇರಿ ಮಾಡಿಸದ ಅಧಿಕಾರಿಯ ಜೀಪಿನ ಟೈಯರ್ ಪಂಕ್ಚರ್ ಮಾಡಿದ ಗ್ರಾಮಸ್ಥರು

    ರಸ್ತೆ ರಿಪೇರಿ ಮಾಡಿಸದ ಅಧಿಕಾರಿಯ ಜೀಪಿನ ಟೈಯರ್ ಪಂಕ್ಚರ್ ಮಾಡಿದ ಗ್ರಾಮಸ್ಥರು

    ಧಾರವಾಡ: ರಸ್ತೆ ಕೆಟ್ಟಿರುವುದನ್ನು ಖಂಡಿಸಿ ರೈತರು ಗ್ರಾಮಕ್ಕೆ ಬಂದ ಅಧಿಕಾರಿಯ ವಾಹನ ಟೈಯರ್ ಅನ್ನು ಪಂಕ್ಚರ್ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ನಡೆದಿದೆ.

    ಕಳೆದ ಮೂರು ವರ್ಷಗಳಿಂದ ಮಲಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಕಾರ್ಯ ನಡೆದಿದೆ. ಈ ಹಿನ್ನೆಲೆ ಕಾಲುವೆ ಪಕ್ಕದಲ್ಲಿ ನೀರಾವರಿ ಇಲಾಖೆಯ ವಾಹನ ಓಡಾಡಿದ್ದರಿಂದ ಹೊಲಕ್ಕೆ ಹೋಗುವ ರಸ್ತೆ ಎಲ್ಲ ಹಾಳಾಗಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇದನ್ನು ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದರು.

    ಇವತ್ತು ಈ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಶ್ರೀಧರ್ ಬಂದಿರುವುದನ್ನು ನೋಡಿದ ಶಿರೂರ ಗ್ರಾಮಸ್ಥರು, ಅಧಿಕಾರಿಯ ವಾಹನದ ಟೈಯರ್‍ನ ಗಾಳಿಯನ್ನು ತೆಗೆದು ನಿಲ್ಲಿಸಿದ್ದಾರೆ. ಅಲ್ಲದೇ ಶಿರೂರ ಹಾಗೂ ಹಿರೇಕುಂಬಿ ಗ್ರಾಮದ ರಸ್ತೆ ದುರಸ್ತಿ ಮಾಡದೇ ಇದ್ದಲ್ಲಿ ವಾಹನಕ್ಕೆ ಬೆಂಕಿ ಹಚ್ಚುವ ಎಚ್ಚರಿಕೆ ಕೂಡ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ರೈತರಿಗೆ ಹೊಲಕ್ಕೆ ಹೋಗಲು ಹಾಗೂ ಬೆಳೆದ ಬೆಳೆಯನ್ನು ತರಲು ಇದೇ ರಸ್ತೆ ಉಪಯೋಗ ಮಾಡುತ್ತಿದ್ದರು. ಆದರೆ ರಸ್ತೆ ಹಾಳಾಗಿದ್ದರಿಂದ ರೈತರಿಗೆ ತೊಂದರೆಯಾಗಿತ್ತು.