Tag: ಟೈಡಾಲ್ ಮಾತ್ರೆ

  • ಟೈಡಾಲ್ ಮಾತ್ರೆ ಸೇವಿಸಿ ಯುವಕರ ಸಾವು ಪ್ರಕರಣ- ಮೆಡಿಕಲ್ ಮಾಲೀಕ ಅರೆಸ್ಟ್

    ಟೈಡಾಲ್ ಮಾತ್ರೆ ಸೇವಿಸಿ ಯುವಕರ ಸಾವು ಪ್ರಕರಣ- ಮೆಡಿಕಲ್ ಮಾಲೀಕ ಅರೆಸ್ಟ್

    ಬೆಂಗಳೂರು: ಟೈಡಾಲ್ ಮಾತ್ರೆ ಸೇವಿಸಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರೆ ಮಾರಾಟ ಮಾಡಿದ್ದ ಮೆಡಿಕಲ್ ಅಂಗಡಿ ಮಾಲೀಕನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

    ರಾಜಾಜಿನಗರದ ಮೋದಿ ಆಸ್ಪತ್ರೆ ಸಿಗ್ನಲ್ ಬಳಿಯ ‘ಮನ್‍ದೀಪ್ ಫಾರ್ಮ್ ಮೆಡಿಕಲ್ ಶಾಪ್’ ಮಾಲೀಕ ಮನೀಶ್ ಕುಮಾರ್ ನನ್ನ ಬಂಧಿಸಲಾಗಿದೆ. 17ರಂದು ಮೃತ ಯುವಕ ಗೋಪಿಗೆ ಅನಧಿಕೃತವಾಗಿ ಮೆಡಿಕಲ್‍ನಿಂದ ಮನೀಶ್ ಕುಮಾರ್ ಟೈಡಾಲ್ ಮಾತ್ರೆ ಮಾರಾಟ ಮಾಡಿದ್ದನು. ಅದೇ ಮಾತ್ರೆಗಳನ್ನು ತಂದು ಗೋಪಿ, ಅಭಿಷೇಕ್, ಸುಹಾಸ್ ಮಾತ್ರೆಯನ್ನು ಪುಡಿ ಮಾಡಿ ಡಿಸ್ಟಿಲ್ ನೀರಿನಲ್ಲಿ ಬೆರಿಸಿ ಸಿರಿಂಜ್ ಮೂಲಕ ದೇಹಕ್ಕೆ ಇಂಜಕ್ಟ್ ಮಾಡಿಕೊಂಡಿದ್ದರು. ಪರಿಣಾಮ ಗೋಪಿ, ಅಭಿಷೇಕ್ ಮೃತಪಟ್ಟಿದ್ದು, ಸುಹಾಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ:ಬರ್ತ್ ಡೇ ಪಾರ್ಟಿಯಲ್ಲಿ ಯುವಕರ ಸಾವು- ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ

    ನವೆಂಬರ್ 19ರ ರಾತ್ರಿ ಮಲ್ಲೇಶ್ವರಂ ಕೋದಂಡರಾಮಪುರದಲ್ಲಿ ಈ ಘಟನೆ ನಡೆದಿತ್ತು. ಗೆಳೆಯನ ಹುಟ್ಟುಹಬ್ಬದ ಪಾರ್ಟಿಗೆ ಗೋಪಿ, ಅಭಿಪೇಕ್ ಜೊತೆಗೆ ಇನ್ನೂ 6 ಮಂದಿ ಯುವಕರು ಹೋಗಿದ್ದರು. ತಡರಾತ್ರಿವರೆಗೂ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದ ಯುವಕರು ನಶೆಗಾಗಿ ಟೈಡಲ್ ಮಾತ್ರೆಯನ್ನು ತೆಗೆದುಕೊಂಡಿದ್ದರು.ಇದನ್ನೂ ಓದಿ:ಗೆಳೆಯನ ಬರ್ತ್ ಡೇ ಪಾರ್ಟಿ ಮಾಡಿದ್ದ ಇಬ್ಬರು ಬಲಿ, 6 ಮಂದಿ ಸ್ಥಿತಿ ಗಂಭೀರ 

    ರಾತ್ರಿ ಪಾರ್ಟಿ ಮಾಡಿದ ಬಳಿಕ ಯುವಕರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಾತ್ರ ಸೇವನೆಯಿಂದ ಗೋಪಿ ಹಾಗೂ ಅಭಿಷೇಕ್ ಮೃತಪಟ್ಟಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಯುವಕರು ಟೈಡಾಲ್ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾರೆ ಎಂಬುದು ಬಯಲಾಗಿತ್ತು. ಈ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಯುಡಿಆರ್ ಕೇಸ್ ದಾಖಲಾಗಿತ್ತು. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದರು.

  • ಬರ್ತ್ ಡೇ ಪಾರ್ಟಿಯಲ್ಲಿ ಯುವಕರ ಸಾವು- ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ

    ಬರ್ತ್ ಡೇ ಪಾರ್ಟಿಯಲ್ಲಿ ಯುವಕರ ಸಾವು- ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ

    ಬೆಂಗಳೂರು: ಕೋದಂಡರಾಮಪುರ ಇಬ್ಬರು ಯುವಕರ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ಮೃತರ ಮರಣೊತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದ್ದು, ಮಾದಕವಸ್ತು ಅಂಶವಿರುವ ಮಾತ್ರೆಯನ್ನು ಸೇವಿಸಿ ಯುವಕರು ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದು ಬಂದಿದೆ.

    ಮೃತ ಯುವಕರು ಹಾಗೂ ಅವರ ಸ್ನೇಹಿತರು ಟೈಡಾಲ್ ಎಂಬ ಮಾದಕವಸ್ತು ಅಂಶವಿರೋ ಮಾತ್ರೆಯನ್ನು ಗೆಳೆಯನ ಹುಟ್ಟುಹಬ್ಬದ ಪಾರ್ಟಿ ವೇಳೆ ಸೇವಿಸಿದ್ದರು. ಟೈಡಾಲ್ ಮಾತ್ರೆಯಲ್ಲಿ ಮಾದಕವಸ್ತು ಅಂಶವಿರುತ್ತದೆ. ಟೈಡಾಲ್ ಮಾತ್ರೆ ಸೇವನೆಯಿಂದ ನಶೆ ಏರುತ್ತದೆ ಹಾಗೆಯೇ ಯುವಕರಿಗೆ ಇದು ಸುಲಭವಾಗಿ ಸಿಗುವ ಔಷಧಿಯಾಗಿದೆ. ಹೀಗಾಗಿ ನಶೆಗಾಗಿ ಯುವಕರು ಪಾರ್ಟಿ ಮಾಡುವ ವೇಳೆ ಇದನ್ನು ಸೇವಿಸಿದ್ದಾರೆ ಎನ್ನುವುದು ಬಯಲಾಗಿದೆ. ಇದನ್ನೂ ಓದಿ:ಗೆಳೆಯನ ಬರ್ತ್ ಡೇ ಪಾರ್ಟಿ ಮಾಡಿದ್ದ ಇಬ್ಬರು ಬಲಿ, 6 ಮಂದಿ ಸ್ಥಿತಿ ಗಂಭೀರ

    ಟೈಡಾಲ್ ಮಾತ್ರೆಯನ್ನು ಡಿಸ್ಟಿಲ್ ವಾಟರ್‌ನಲ್ಲಿ ಬೆರೆಸಿ ಸಿರಿಂಜ್ ಮೂಲಕ ಯುವಕರು ತಮ್ಮ ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಾರೆ. 17ರಂದು ಮೂರು ಮಂದಿ ಯುವಕರು ಈ ಟೈಡಾಲ್ ಮಾತ್ರೆಯನ್ನು ತೆಗೆದುಕೊಂಡಿದ್ದರು. ಆದರೆ ಅವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಮಾತ್ರೆ ಹೇಗೆ ತಂದರು? ಈ ಹಿಂದೆ ಇದನ್ನು ಸೇವಿಸಿದ್ದರಾ ಅನ್ನೋದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೂರು ಮಂದಿ ಸೇರಿ ಮಾತ್ರೆ ತೆಗೆದುಕೊಂಡು ಬಂದಿದ್ದರು ಅನ್ನೋದು ಗೊತ್ತಾಗಿದೆ. ಬೇರೆವರ ಬಗ್ಗೆ ಮಾಹಿತಿ ಇಲ್ಲ. ಯುವಕರು ಈ ಮಾತ್ರೆಯನ್ನು ಸಿರಿಂಜ್ ಮೂಲಕ ತೆಗೆದುಕೊಂಡಿದ್ದಾರೆ. ಆಸ್ಪತ್ರೆಗೆ ಯುವಕರು ಅಡ್ಮಿಟ್ ಆದಮೇಲೆ ಮಾತ್ರೆ ತೆಗೆದುಕೊಂಡಿರೋ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಅಕ್ರಮವಾಗಿ ಮೆಡಿಕಲ್ ಸ್ಟೋರ್‌ನಿಂದ ಮಾರಾಟವಾಗಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಇದು ಹೆಚ್ಚಾಗಿ ಬಳಸಿದರೆ ಇದರ ನಶೆ ಅಡಿಟ್ ಆಗುತ್ತಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋರ್ ಹೇಳಿದ್ದಾರೆ.

    ರಾತ್ರಿ ಪಾರ್ಟಿ ಮಾಡಿದ ಬಳಿಕ ಯುವಕರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯ್ಯಾಲಿಕಾವಲ್ ಪೊಲೀಸರು ಅಸ್ವಸ್ಥರ ಪೈಕಿ ಸುಮನ್ ಎಂಬ ಯುವಕನಿಂದ ಹೇಳಿಕೆ ಪಡೆದಿದ್ದಾರೆ. ಈ ಮಾತ್ರ ಸೇವನೆಯಿಂದ ಗೋಪಿ ಹಾಗೂ ಅಭಿಲಾಷ್ ಮೃತಪಟ್ಟಿದ್ದು, ಎರಡೂ ಶವಗಳ ಮತಣೋತ್ತರ ಪರೀಕ್ಷೆ ಮುಗಿಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಪೊಲೀಸರು ಒಪ್ಪಿಸಿದ್ದಾರೆ.

    ಸದ್ಯ ಈ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಯುಡಿಆರ್ ಕೇಸ್ ದಾಖಲಾಗಿದೆ. ಅಲ್ಲದೆ ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

    ಮಲ್ಲೇಶ್ವರಂ ಕೋದಂಡರಾಮಪುರದಲ್ಲಿ ಈ ಘಟನೆ ನಡೆದಿದೆ. ಪಾರ್ಟಿ ಮುಗಿಸಿ ಬಂದ ಅಭಿಲಾಷ್, ಗೋಪಿ ದುರ್ಮರಣ ಹೊಂದಿದ್ದು, ಮತ್ತೊಬ್ಬ ಯುವಕ ಕೂಡ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಚಿಟ್ಟೆ ಅಲಿಯಾಸ್ ಸುಮನ್ ಸೇರಿದಂತೆ 6 ಮಂದಿ ಯುವಕರ ಸ್ಥಿತಿ ಗಂಭೀರವಾಗಿದೆ.

    ಈ ಯುವಕರು ಮಂಗಳವಾರ ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದರು. ಹುಟ್ಟುಹಬ್ಬದ ಸೆಲೆಬ್ರೇಷನ್ ಅಂತ ಯುವಕರು ಗಾಂಜಾ ಸೇವನೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ತಡರಾತ್ರಿವರೆಗೂ ಪಾರ್ಟಿ ಮಾಡಿ ಮನೆಗೆ ತೆರೆಳಿದ್ದ ಯುವಕರು ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.