Tag: ಟೈಗರ್ ಶ್ರಾಫ್

  • ಬಿಲ್ಡಿಂಗ್‍ನ ತುತ್ತತುದಿಯಲ್ಲಿ ನಿಂತು ಸ್ಟಾರ್ ನಟನ ತಂಗಿಯ ಲಿಪ್‍ಲಾಕ್

    ಬಿಲ್ಡಿಂಗ್‍ನ ತುತ್ತತುದಿಯಲ್ಲಿ ನಿಂತು ಸ್ಟಾರ್ ನಟನ ತಂಗಿಯ ಲಿಪ್‍ಲಾಕ್

    -ಅಣ್ಣ ಸಿಂಗಲ್, ತಂಗಿ ಎಂಗೇಜ್
    -ಹಾಟ್ ಫೋಟೋಗಳಿಂದಲೇ ಸುದ್ದಿಯಾಗೋ ಸ್ಟಾರ್ ಕುಡಿ

    ಮುಂಬೈ: ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ ಪುತ್ರಿ, ಟೈಗರ್ ಶ್ರಾಫ್ ಸೋದರಿ ಕೃಷ್ಣಾ ಶ್ರಾಫ್ ತನ್ನ ಗೆಳೆಯನ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಿದಾಡುತ್ತಿವೆ.

    ಸೋದರ ಜಾಕಿ ಶ್ರಾಫ್ ಸಿಂಗಲ್ ಆಗಿದ್ದರೂ ಸೋದರಿ ಕೃಷ್ಣಾ ಗೆಳೆಯನ ಜೊತೆ ಕೊರೊನಾ ಹಾಲಿಡೇಯನ್ನ ಎಂಜಾಯ್ ಮಾಡ್ತಿದ್ದಾರೆ. ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ನಡುವೆ ಲವ್ ಇದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ಇಬ್ಬರೂ ಮಾತ್ರ ತಾವು ಇನ್ನೂ ಸಿಂಗಲ್ ಅಂತಾನೇ ಹೇಳಿಕೊಂಡಿದ್ದಾರೆ. ಆದ್ರೆ ಟೈಗರ್ ಸೋದರಿ ಬಹು ದಿನಗಳ ಹಿಂದೆ ತನ್ನ ಪ್ರೀತಿಯನ್ನು ಬಹಿರಂಗವಾಗಿಯೇ ಹೇಳಿಕೊಂಡು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    https://www.instagram.com/p/B_pUWQxg4e8/?utm_source=ig_embed

    ಬಾಸ್ಕೆಟ್ ಬಾಲ್ ಆಟಗಾರ ಇಬಾನ್ ಹ್ಯಾಂಸ್ ಪ್ರೇಮಪಾಶದಲ್ಲಿ ಕೃಷ್ಣಾ ಬಂಧಿಯಾಗಿದ್ದು, ಸದ್ಯ ಇಬ್ಬರು ಮುಂಬೈನಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೃಷ್ಣಾ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. 2015ರಲ್ಲಿ ಕೃಷ್ಣಾರ ಟಾಪ್‍ಲೆಸ್ ಫೋಟೋ ಚರ್ಚೆಗೆ ಗ್ರಾಸವಾಗಿತ್ತು.

  • ನಾನು ಈಜಿಕೊಂಡು ಮನೆ ತಲುಪಬಹುದು: ಟೈಗರ್ ಶ್ರಾಫ್

    ನಾನು ಈಜಿಕೊಂಡು ಮನೆ ತಲುಪಬಹುದು: ಟೈಗರ್ ಶ್ರಾಫ್

    ಮುಂಬೈ: ಮಹಾನಗರಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮುಂಬೈನಲ್ಲಿಯೂ ಸಹ ಎಡೆಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಮುಂಬೈನ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದು, ನೀರನ್ನು ತೆರವುಗೊಳಿಸುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ. ಜಲಾವೃತಗೊಂಡ ರಸ್ತೆಗಳಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಮುಂಬೈನ ರಸ್ತೆಗಳನ್ನ ನೋಡಿದ ಬಾಲಿವುಡ್ ನಟ ಟೈಗರ್ ಶ್ರಾಫ್, ನಾನು ಈಜಿಕೊಂಡು ಮನೆಗೆ ಹೋಗಬಹುದು ಎಂದು ವ್ಯಂಗ್ಯವಾಡಿದ್ದಾರೆ.

    ಬೀಚ್ ಬಳಿ ಕಪ್ಪು ಕನ್ನಡಕ ಧರಿಸಿ ನಿಂತಿರುವ ಫೋಟೋ ಹಾಕಿಕೊಂಡು ‘ನಾನು ಈಜಿಕೊಂಡು ಮನೆ ತಲುಪಬಹುದು’ ಎಂದು ಬರೆದುಕೊಂಡಿದ್ದಾರೆ. ಶರ್ಟ್ ಲೆಸ್ ಫೋಟೋಗೆ ಮಹಿಳಾ ಅಭಿಮಾನಿಗಳು ಫಿದಾ ಆಗಿದ್ದು, ಪೋಸ್ಟ್ ಗೆ ಲೈಕ್ ಮತ್ತು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಶನಿವಾರ ರಾತ್ರಿ ಪೋಸ್ಟ್ ಇದೂವರೆಗೂ 11 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 6 ಸಾವಿರಕ್ಕೂ ಅಧಿಕ ಕಮೆಂಟ್ ಪಡೆದಿದೆ.

    https://www.instagram.com/p/B0sdzatn2YL/

    ಸತತ ಮಳೆಯ ಹಿನ್ನೆಲೆಯಲ್ಲಿ ಮುಂಬೈನ ಕೆಲವು ಭಾಗಗಳಲ್ಲಿ ಲೋಕಲ್ ಟ್ರೈನ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಏಳು ವಿಮಾನಗಳ ಹಾರಾಟವನ್ನು ಕ್ಯಾನ್ಸಲ್ ಮಾಡಲಾಗಿದೆ. ಭಾನುವಾರ ಸಹ ಮುಂಬೈನ ಬಹುತೇಕ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸಮುದ್ರದ ಅಲೆಗಳು 4.5 ಮೀಟರ್ ಎತ್ತರದಲ್ಲಿ ಬರುತ್ತಿವೆ. ಸ್ಥಳೀಯರು ಸಮುದ್ರ ದಡಕ್ಕೆ ತೆರಳದಂತೆ ಮತ್ತು ಮನೆಯಿಂದ ಹೊರಬರದಂತೆ ಮಹಾನಗರ ಪಾಲಿಕೆ ಸೂಚನೆಯನ್ನು ನೀಡಿದೆ.

  • ಟೈಗರ್-ದಿಶಾ ಲವ್ ಬ್ರೇಕಪ್

    ಟೈಗರ್-ದಿಶಾ ಲವ್ ಬ್ರೇಕಪ್

    ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಹಾಗೂ ನಟಿ ದಿಶಾ ಪಠಾಣಿ ನಡುವೆ ಲವ್ ಬ್ರೇಕಪ್ ಆಗಿದೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಕೇಳಿ ಬರುತ್ತಿದೆ.

    ಟೈಗರ್ ಹಾಗೂ ದಿಶಾ 3 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಆದರೆ ಈ ಬಗ್ಗೆ ದಿಶಾ ಆಗಲಿ ಟೈಗರ್ ಆಗಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಇಬ್ಬರು ಕಾರ್ಯಕ್ರಮಕ್ಕೆ ಒಟ್ಟಿಗೆ ತಿರುಗಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆ ಆಗಿತ್ತು.

    ಕೆಲವು ದಿನಗಳ ಹಿಂದೆ ಟೈಗರ್ ಹಾಗೂ ದಿಶಾ ಸಂಬಂಧದಲ್ಲಿ ಯಾವುದು ಸರಿ ಇರಲಿಲ್ಲ. ಹಾಗಾಗಿ ಇಬ್ಬರು ಅಧಿಕೃತವಾಗಿ ಬ್ರೇಕಪ್ ಮಾಡಿಕೊಂಡಿದ್ದಾರೆ. ಇಬ್ಬರು ತಮ್ಮ ಒಪ್ಪಿಗೆಯ ಮೇರೆಗೆ ಕೆಲವು ವಾರಗಳ ಹಿಂದೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವೆಬ್‍ಸೈಟ್ ನಲ್ಲಿ ವರದಿಯಾಗಿದೆ. ಇದನ್ನೂ ಓದಿ: ಇದುವರೆಗೂ ಯಾವ ಹುಡ್ಗನೂ ಪ್ರಪೋಸ್ ಮಾಡಿಲ್ಲ: ದಿಶಾ ಪಟಾನಿ

    ರಿಲೇಶನ್‍ಶಿಪ್‍ನಲ್ಲಿ ಇರುವುದಕ್ಕಿಂತ ಒಳ್ಳೆಯ ಸ್ನೇಹಿತರಾಗಿ ಇರಬಹುದು ಎಂದು ಟೈಗರ್ ಹಾಗೂ ದಿಶಾ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ. ಅಲ್ಲದೆ ಟೈಗರ್ ಹಾಗೂ ದಿಶಾ ಇಬ್ಬರು ಮೆಚ್ಯೂರ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರು ಜೋಡಿಯಾಗಿ ಇರುವುದಿಲ್ಲ. ಅವರು ಒಳ್ಳೆಯ ಸ್ನೇಹಿತರಾಗಿ ಇರುತ್ತಾರೆ ಎಂದು ಇಬ್ಬರಿಗೂ ಆತ್ಮೀಯರಾದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

    ಈ ಹಿಂದೆ ಸಂದರ್ಶನವೊಂದರಲ್ಲಿ ದಿಶಾ, ‘ಇಂದಿನವರೆಗೂ ಯಾವ ಹುಡುಗ ನನಗೆ ಪ್ರಪೋಸ್ ಮಾಡಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ, ಯಾವ ಹುಡುಗರಿಂದಲೂ ನನಗೆ ಪ್ರಪೋಸ್ ಮಾಡುವ ರೀತಿಯ ಸನ್ನೆಗಳು ಬಂದಿಲ್ಲ. ಟೈಗರ್ ಶ್ರಾಫ್ ಜೊತೆ ತಿರುಗಾಡುತ್ತೇನೆ. ಊಟಕ್ಕೆ ಹೋಗಿ ಎಂಜಾಯ್ ಮಾಡುತ್ತೇವೆ. ಕೇವಲ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬ ದೃಷ್ಟಿಕೋನದಿಂದ ತಿರುಗಾಡುತ್ತೇವೆಯೇ ಹೊರತು ನಮ್ಮಿಬ್ಬರ ಮಧ್ಯೆ ಪ್ರೀತಿ ಪ್ರೇಮ ಏನಿಲ್ಲ. ಟೈಗರ್ ಗಾಗಿ ಜಿಮ್ನಾಸ್ಟಿಕ್ ಎಲ್ಲ ಮಾಡಿದ್ರೂ ಅವರು ಇಂಪ್ರೆಸ್ ಆಗಿಲ್ಲ’ ಎಂದು ಹೇಳುವ ಮೂಲಕ ಒನ್‍ಸೈಡ್ ಲವ್ ಕಹಾನಿಯನ್ನ ಬಿಚ್ಚಿಟ್ಟಿದ್ದರು.

  • ಟೈಗರ್ ಶ್ರಾಫ್ ಒಳ್ಳೆಯ ಕಿಸ್ಸರ್, ನನ್ನ ಫಸ್ಟ್ ಕಿಸ್ ಬೆಸ್ಟ್ ಆಗಿತ್ತು: ಅನನ್ಯ ಪಾಂಡೆ

    ಟೈಗರ್ ಶ್ರಾಫ್ ಒಳ್ಳೆಯ ಕಿಸ್ಸರ್, ನನ್ನ ಫಸ್ಟ್ ಕಿಸ್ ಬೆಸ್ಟ್ ಆಗಿತ್ತು: ಅನನ್ಯ ಪಾಂಡೆ

    ಮುಂಬೈ: ಬಾಲಿವುಡ್‍ನಲ್ಲಿ ‘ಸ್ಟುಡೆಂಟ್ ಆಫ್ ದಿ ಇಯರ್- 2’ ಚಿತ್ರದ ಮೂಲಕ ಎಂಟ್ರಿ ಕೊಟ್ಟಿರುವ ನಟಿ ಅನನ್ಯ ಪಾಂಡೆ ನಟ ಟೈಗರ್ ಶ್ರಾಫ್ ಒಳ್ಳೆಯ ಕಿಸ್ಸರ್ ಎಂಬ ಹೇಳಿಕೆಯನ್ನು ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

    ಇತ್ತೀಚೆಗೆ ಟೈಗರ್ ಶ್ರಾಫ್, ನಟಿಯರಾದ ಅನನ್ಯ ಪಾಂಡೆ ಹಾಗೂ ತಾರಾ ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ರೆಡಿಯೋ ಜಾಕಿ ನೀವು ಯಾವುದರಲ್ಲಿ ಬೆಸ್ಟ್ ಎಂದು ಟೈಗರ್ ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಟೈಗರ್ ನಾನು ಯಾವುದರಲ್ಲಿ ಬೆಸ್ಟ್ ಇದ್ದೀನಿ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಆಗ ನಟಿ ಅನನ್ಯ ಪಾಂಡೆ, ಟೈಗರ್ ಕಿಸ್ ಮಾಡುವುದರಲ್ಲಿ ಬೆಸ್ಟ್ ಎಂದು ಹೇಳಿದ್ದಾರೆ.

    ಈ ಚಿತ್ರದಲ್ಲಿ ಟೈಗರ್, ನಟಿ ಅನನ್ಯ ಹಾಗೂ ತಾರಾ ಜೊತೆ ಕಿಸ್ಸಿಂಗ್ ಸೀನ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕಿಸ್ಸಿಂಗ್ ಸೀನ್ ಬಗ್ಗೆ ಅನನ್ಯ ಅವರ ಅನುಭವವನ್ನು ಕೇಳಿದ್ದರು. ಆಗ ಅನನ್ಯ ‘ಇದು ನನ್ನ ಮೊದಲನೇ ಕಿಸ್. ನಾನು ಇದುವರೆಗೂ ಯಾರನ್ನು ಕಿಸ್ ಮಾಡಿಲ್ಲ. ಹಾಗಾಗಿ ನಾನು ಟೈಗರ್ ಅವರನ್ನು ಬೇರೆ ಯಾರಿಗೂ ಹೋಲಿಕೆ ಮಾಡಲು ಆಗುವುದಿಲ್ಲ. ನನ್ನ ಫಸ್ಟ್ ಕಿಸ್ ಬೆಸ್ಟ್ ಆಗಿತ್ತು ಎಂದು ಅನನ್ಯ ತಿಳಿಸಿದ್ದಾರೆ.

    ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಮೂಲಕ ಪುನೀತ್ ಮಲ್ಹೋತ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರ ಇದೇ ತಿಂಗಳು ಮೇ 10ರಂದು ಬಿಡುಗಡೆ ಆಗಲಿದ್ದು, ಸದ್ಯ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

  • ಟೈಗರ್ ಶ್ರಾಫ್‍ಗೆ ಆಯ್ತು ಇಷ್ಕ್ ವಾಲಾ ಲವ್: ರೊಮ್ಯಾಂಟಿಕ್ ವಿಡಿಯೋ ನೋಡಿ

    ಟೈಗರ್ ಶ್ರಾಫ್‍ಗೆ ಆಯ್ತು ಇಷ್ಕ್ ವಾಲಾ ಲವ್: ರೊಮ್ಯಾಂಟಿಕ್ ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ಯುವನಟ ಟೈಗರ್ ಶ್ರಾಫ್ ಅವರು ಇಷ್ಕ್ ವಾಲಾ ಲವ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

    ಟೈಗರ್ ಅತ್ಯುತ್ತಮ ಡ್ಯಾನ್ಸರ್ ಆಗಿದ್ದು, ಇತ್ತೀಚೆಗೆ ಅವರು ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಇಷ್ಕ್ ವಾಲಾ ಲವ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ವಿಡಿಯೋವನ್ನು ಅವರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಟೈಗರ್ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಡ್ಯಾನ್ಸ್ ಅನ್ನು ಪಿಯೂಷ್ ನೃತ್ಯ ನಿರ್ದೇಶನ ಮಾಡಿದ್ದಾರೆ.

    ಟೈಗರ್ ಶ್ರಾಫ್ ಈಗ ಧರ್ಮ ಪ್ರೊಡಕ್ಷನ್‍ನಲ್ಲಿ ಮೂಡಿ ಬರುತ್ತಿರುವ ಸ್ಟೂಡೆಂಟ್ ಆಫ್ ದಿ ಇಯರ್-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮುಂದುವರಿದ ಭಾಗ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಟೈಗರ್ ಗೆ ಅನನ್ಯ ಪಾಂಡೆ ಹಾಗೂ ತಾರಾ ಸುತಾರಿಯಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

    ಸ್ಟೂಡೆಂಟ್ ಆಫ್ ದಿ ಇಯರ್- 2 ಚಿತ್ರವನ್ನು ಪುನೀತ್ ಮಲ್ಹೋತ್ರ ಅವರು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರ 2019, ಮೇ 10ರಂದು ಬಿಡುಗಡೆಯಾಗಲಿದೆ. ಈ ಚಿತ್ರ ಈ ವರ್ಷದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಈ ಚಿತ್ರ ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ ಆಗಿದೆ.

    ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರ 2012ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ಮೂಲಕ ನಟಿ ಅಲಿಯಾ ಭಟ್, ನಟ ವರುಣ್ ಧವನ್ ಹಾಗೂ ನಟ ಸಿದಾರ್ಥ್ ಮಲ್ಹೋತ್ರ ಬಾಲಿವುಡ್‍ಗೆ ಎಂಟ್ರಿ ನೀಡಿದ್ದರು. ಕರಣ್ ಜೋಹರ್ ನಿರ್ದೇಶನ ಮಾಡಿದ ಈ ಚಿತ್ರ ಸೂಪರ್ ಹಿಟ್ ಆಗಿತ್ತು.

    https://twitter.com/iTIGERSHROFF/status/1069620322633011200

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಡ್ಡೆ ಹುಡ್ಗರ ಕಣ್ಣರಳಿಸಿದ ಟೈಗರ್ ಶ್ರಾಫ್ ತಂಗಿಯ ಹಾಟ್ ಬಿಕಿನಿ ಫೋಟೋ

    ಪಡ್ಡೆ ಹುಡ್ಗರ ಕಣ್ಣರಳಿಸಿದ ಟೈಗರ್ ಶ್ರಾಫ್ ತಂಗಿಯ ಹಾಟ್ ಬಿಕಿನಿ ಫೋಟೋ

    ಮುಂಬೈ: ಗುಡ್ ಲುಕಿಂಗ್, ಆ್ಯಕ್ಷನ್ ಸ್ಟಾರ್ ಟೈಗರ್ ಶ್ರಾಫ್ ತಮ್ಮ ಹಾಟ್ ಫೋಟೋಗಳಿಂದಲೇ ಅಪಾರ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಟೈಗರ್ ಸಿಕ್ಸ್ ಪ್ಯಾಕ್ ನೋಡುವುದಕ್ಕಾಗಿ ಬಹುತೇಕ ಹುಡುಗಿಯರು ಚಿತ್ರಮಂದಿರಕ್ಕೆ ಬರುತ್ತಾರೆ ಎನ್ನುವ ಮಾತಿದೆ. ಇತ್ತ ಟೈಗರ್ ತಂಗಿ ಕೃಷ್ಣ ಶ್ರಾಫ್ ಸಹ ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಹಾಟ್ ಬಿಕಿನಿ ಫೋಟೋ ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸಿದೆ.

    ಜಾಕಿ ಶ್ರಾಫ್ ಅವರ ಮುದ್ದಿನ ಮಕ್ಕಳು ಟೈಗರ್ ಮತ್ತು ಕೃಷ್ಣ. ಜಾಕಿ ಶ್ರಾಫ್ ಪುತ್ರಿ ಕೃಷ್ಣ ಶ್ರಾಫ್ ಇನ್ನು ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿಲ್ಲ. ವಿದೇಶ ಪ್ರವಾಸ ಇಷ್ಟಪಡುವ ಕೃಷ್ಣ ಗೆಳತಿ ಜೊತೆಗೆ ಬಿಕಿನಿ ಧರಿಸಿ ನಿಂತಿರುವ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಕೇವಲ ತಮ್ಮ ಫೋಟೋಗಳ ಮೂಲಕವೇ ಬಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ಹಿಂದೆ ಸೋದರ ಟೈಗರ್ ಅಭಿನಯದ ‘ಮುನ್ನಾ ಮೈಕಲ್’ ಸಿನಿಮಾಗೆ ಸಹ ನಿರ್ದೇಶಕಿಯಾಗಿ ಕೃಷ್ಣ ಕೆಲಸ ಮಾಡಿದ್ದರು.

    ಟೈಗರ್ ಶ್ರಾಫ್‍ಗಿಂತ ಮೂರು ವರ್ಷ ಚಿಕ್ಕವಳಾಗಿರುವ ಕೃಷ್ಣ ಶೀಘ್ರದಲ್ಲಿಯೇ ಬಾಲಿವುಡ್‍ಗೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ. ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಕೃಷ್ಣ, ಸ್ಟಾರ್ ಮಕ್ಕಳು ಎಂದು ನನ್ನನ್ನು ಕರೆಯುತ್ತಿದ್ದರು. ಆದ್ರೆ ಇಂದು ನನ್ನ ಪರಿಶ್ರಮದಿಂದ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ. ನನ್ನ ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮಥ್ರ್ಯವನ್ನು ಹೊಂದಿದ್ದೇನೆ. ನನ್ನ ನಿರ್ಧಾರವನ್ನು ಕುಟುಂಬಸ್ಥರು ಬೆಂಬಲಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BoT-HbMHABX/?hl=en&taken-by=kishushroff

    https://www.instagram.com/p/BUHms5TDZEG/?hl=en&taken-by=kishushroff

    https://www.instagram.com/p/BT6G_rQjbSn/?hl=en&taken-by=kishushroff

  • ಮೊಬೈಲ್ ಪಾಸ್‍ವರ್ಡ್ ನಿಂದಾಗಿ ದಿಶಾ-ಟೈಗರ್ ಮಧ್ಯೆ ಬ್ರೇಕಪ್-ಏನಿದು ಲವ್ ಸ್ಟೋರಿ?

    ಮೊಬೈಲ್ ಪಾಸ್‍ವರ್ಡ್ ನಿಂದಾಗಿ ದಿಶಾ-ಟೈಗರ್ ಮಧ್ಯೆ ಬ್ರೇಕಪ್-ಏನಿದು ಲವ್ ಸ್ಟೋರಿ?

    ಮುಂಬೈ: ಮೂರು ವರ್ಷಗಳಿಂದ ಲವ್ ನಲ್ಲಿದ್ದ ಬಾಲಿವುಡ್ ಹಾಟ್ ಕಪಲ್ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎಂಬ ಸುದ್ದಿಯೊಂದು ಸಿನಿ ಗಲ್ಲಿಯಲ್ಲಿ ಹರಿದಾಡುತ್ತಿದೆ. ಟೈಗರ್ ಶ್ರಾಫ್ ದಿಢೀರ್ ಅಂತಾ ತಮ್ಮ ಮೊಬೈಲ್ ಪಾಸ್ ವರ್ಡ್ ಬದಲಾಯಿಸಿದ್ದರಿಂದ ದಿಶಾ ಕೋಪಗೊಂಡು ಗೆಳೆಯನಿಂದ ದೂರ ಉಳಿದುಕೊಂಡಿದ್ದಾರೆ ಎಂದು ಹಿಂದಿ ವೆಬ್‍ಸೈಟ್ ಪ್ರಕಟಿಸಿದೆ.

    ಮೂರು ವರ್ಷಗಳಿಂದ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕಳೆದರೆಡು ತಿಂಗಳನಿಂದ ಎಲ್ಲಿಯೂ ಕಾಣುತ್ತಿಲ್ಲ. ಟೈಗರ್ ಮತ್ತು ದಿಶಾ ಇಬ್ಬರು ಭಾಗಿ-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಇಬ್ಬರ ಒಡನಾಟ, ಬಾಂಧವ್ಯ ಎಲ್ಲವೂ ತಾವು ಪ್ರೀತಿಯಲ್ಲಿದಿದ್ದನ್ನು ತೋರಿಸುತ್ತಿತ್ತು. ಒಂದು ಮೂಲಗಳ ಪ್ರಕಾರ ಇಬ್ಬರ ಮದುವೆಗೂ ಎರಡೂ ಕುಟುಂಬಸ್ಥರು ಒಪ್ಪಿಗೆಯನ್ನು ಸೂಚಿಸಿದ್ದರು. ಇತ್ತೀಚೆಗೆ ಟೈಗರ್ ಸ್ವತಃ ತಾವೇ ದಿಶಾರಿಂದ ದೂರ ಉಳಿಯುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ.

    ಯಾಕೆ ಈ ದೂರ?
    ಕರಣ್ ಜೋಹರ್ ನಿರ್ಮಾಣದ ‘ಸ್ಟೂಡೆಂಟ್ ಆಫ್ ದಿ ಇಯರ್-2’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರದಲ್ಲಿ ಟೈಗರ್ ಗೆ ಜೊತೆಯಾಗಿ ತಾರಾ ಸುತಾರಿಯಾ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಟೈಗರ್ ಮತ್ತು ತಾರಾ ಒಬ್ಬರಿಗೊಬ್ಬರು ಹತ್ತಿರ ಆಗುತ್ತಿದ್ದಾರೆ ಎಂಬ ಸುದ್ದಿ ಸಹ ಬಾಲಿವುಡ್ ಸುದ್ದಿ ಅಂಗಳದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಟೈಗರ್ ಸಹ ದಿಶಾರಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಮೊಬೈಲ್ ಪಾಸ್‍ವರ್ಡ್ ಬದಲಿಸಿ ಪ್ರೈವೇಸಿ ಕಾಪಾಡುತ್ತಿದ್ದಾರಂತೆ.

    ಟೈಗರ್ ಮುನ್ನಾ ಮೈಕಲ್ ಸಿನಿಮಾದ ವೇಳೆಯೂ ನಿಧಿ ಅಗರವಾಲ್ ಜೊತೆ ಅತ್ಯಂತ ಸಲುಗೆಯಿಂದ ನಡೆದುಕೊಳ್ಳುತ್ತಿದ್ದನ್ನು ಕಂಡಿದ್ದ ದಿಶಾ ಗೆಳೆಯನ ಮೇಲೊಂದು ಕಣ್ಣಿಟ್ಟಿದ್ದರು. ಈ ಬಾರಿ ಮೊಬೈಲ್ ಪಾಸ್‍ವರ್ಡ್ ಬದಲಿಸಿದ ಕೂಡಲೇ ದಿಶಾ ಸಂಶಯ ಮತ್ತಷ್ಟು ಬಲವಾಗಿದೆ. ಕಳೆದ ಒಂದೆರಡು ತಿಂಗಳನಿಂದ ಇಬ್ಬರ ನಡುವಿನ ಮುನಿಸು ಇಂದು ಹೊರ ಬಿದ್ದಿದೆ. 2018ರ ಹೊಸ ವರ್ಷ ಆಚರಣೆಗಾಗಿ ದಿಶಾ ಮತ್ತು ಟೈಗರ್ ಮಾಲ್ಡೀವ್ಸ್ ಗೆ ತೆರಳಿದ್ದರು. ಮಾಲ್ವೀವ್ಸ್ ನಲ್ಲಿ ಟೈಗರ್ ಟಾಪ್ ಲೆಸ್ ಆಗಿರೋ ಫೋಟೋ ಮತ್ತು ದಿಶಾರ ಬಿಕಿನಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಹೃತಿಕ್‍ಗೆ ಟಕ್ಕರ್ ಕೊಡ್ತಾರಾ ಟೈಗರ್!

    ಹೃತಿಕ್‍ಗೆ ಟಕ್ಕರ್ ಕೊಡ್ತಾರಾ ಟೈಗರ್!

    ಮುಂಬೈ: ಬಾಲಿವುಡ್ ಮೋಸ್ಟ್ ಮೇಲ್ ಸೆಕ್ಸಿ ಸ್ಟಾರ್ ಗಳು ಒಂದೇ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ತಮ್ಮ ನೃತ್ಯ, ಕಟ್ಟು ಮಸ್ತಿನ ದೇಹದ ಮೂಲಕವೇ ಗುರುತಿಸಿಕೊಂಡಿರುವ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಈ ಹಿಂದೆ ಟೈಗರ್ ತಾವು ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಈಗ ತಮ್ಮ ಡ್ಯಾನ್ಸಿಂಗ್ ಗುರು ಎಂದು ಕರೆದುಕೊಳ್ಳುವ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳುತ್ತಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

    ಹೃತಿಕ್ ರೋಷನ್ ಸಿನಿಮಾ ಸೆಟ್ಟೇರಿದ್ರೆ ಯಾವ ರೀತಿ ಡ್ಯಾನ್ಸ್ ಮಾಡಲಿದ್ದಾರೆ ಎಂಬ ಕುತೂಹಲ ಹುಟ್ಟು ಹಾಕುತ್ತದೆ. ಅದೇ ರೀತಿ ಟೈಗರ್ ಶ್ರಾಫ್ ಸಹ ಡ್ಯಾನ್ಸ್ ಮತ್ತು ಆ್ಯಕ್ಷನ್ ಸೀನ್ ಗಳಿಂದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಬ್ಬರು ಸಹ ಸಿಕ್ಸ್ ಪ್ಯಾಕ್ ಹೊಂದಿದ್ದು, ನೋಡಲು ಕಟ್ಟುಮಸ್ತಾಗಿದ್ದಾರೆ. ಹಾಗಾಗಿ ಯಶ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಬಹು ನಿರೀಕ್ಷೆಯನ್ನು ಮೂಡಿಸಿದೆ.

    ಹೃತಿಕ್ ರೋಷನ್ ರನ್ನು ಗುರುವಿನ ರೂಪದಲ್ಲಿ ಕಾಣುವ ಟೈಗರ್ ಸಿನಿಮಾದಲ್ಲಿಯೂ ಗುರು-ಶಿಷ್ಯನ ಪಾತ್ರದಲ್ಲಿ ನಟಿಸಲಿದ್ದಾರೆ. ತೊಂದರೆಯಲ್ಲಿ ಸಿಲುಕಿಕೊಳ್ಳುವನ ಶಿಷ್ಯನ ಪಾತ್ರದಲ್ಲಿ ಟೈಗರ್ ನಟಿಸಿದ್ರೆ, ರಕ್ಷಿಸುವ ಗುರುವಾಗಿ ಹೃತಿಕ್ ರೋಷನ್ ನಟಿಸಲಿದ್ದಾರೆ. ಹೃತಿಕ್ ಗೆ ಜೊತೆಯಾಗಿ ಬೇಫಿಕ್ರೆ ಬೆಡಗಿ ವಾಣಿ ಕಪೂರ್ ನಟಿಸಲಿದ್ದಾರೆ. ವಾಣಿ ಮತ್ತು ಹೃತಿಕ್ ಮಧ್ಯೆ ರೊಮ್ಯಾನ್ಸ್ ಸೀನ್ ಗಳಿವೆ ಎಂದು ಹೇಳಲಾಗುತ್ತಿದೆ.

    ಎರಡು ದಿನಗಳ ಹಿಂದೆ ಟೈಗರ್ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುವ ಇದಾಗಿದ್ದು, ಸೂಪರ್ ಹೀರೋ ಜೊತೆ ನಟಿಸುತ್ತಿದ್ದು, ಅದಕ್ಕಾಗಿ ದೇಹವನ್ನು ಮತ್ತಷ್ಟು ಹುರಿಗೊಳಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಚಿತ್ರ ಅಗಸ್ಟ್ ತಿಂಗಳ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಲಿದೆ ಎಂದು ವರದಿಯಾಗಿದೆ.

    https://www.instagram.com/p/BlNAJF4AnRj/?hl=en&taken-by=tigerjackieshroff

  • ಟೈಗರ್ ಶ್ರಾಫ್ ವೈರಲ್ ಸ್ಟಂಟ್ ವಿಡಿಯೋ ನೋಡಿ

    ಟೈಗರ್ ಶ್ರಾಫ್ ವೈರಲ್ ಸ್ಟಂಟ್ ವಿಡಿಯೋ ನೋಡಿ

    ಮುಂಬೈ: ಬಾಲಿವುಡ್‍ನಲ್ಲಿ ಸ್ಟಂಟ್ ಹಾಗೂ ಮೈಕಟ್ಟಿನ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ಟೈಗರ್ ಶ್ರಾಫ್ ಅವರು ನಾಲ್ಕು ದಿನಗಳ ಹಿಂದೆ ಇನ್‍ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ.

    ಇತ್ತೀಚೆಗೆ ಬಿಡುಗಡೆಯಾಗಿದ್ದ ಬಾಗಿ 2 ಸಿನಿಮಾದ ಮೂಲಕ ನಾಯಕ ಟೈಗರ್ ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದಾರೆ. ಯುವ ಹಾಗೂ ಉತ್ಸಾಹಿ ನಟರಾಗಿರುವ ಜಾಕಿ ಶ್ರಾಫ್ ಸಮರ ಕಲೆಗಳಲ್ಲಿ ಪರಿಣಿತಿ ಪಡೆದಿದ್ದು, ಇತ್ತೀಚೆಗೆ ಟೇಕ್ವಾಂಡೋದ ಬ್ಯಾಕ್ ಬೆಲ್ಟ್‍ನಲ್ಲಿ ಐದನೇ ಪದವಿಯನ್ನು ಪೂರೈಸಿದ್ದಾರೆ. ಈ ವೇಳೆ ಪ್ರದರ್ಶಿಸಿದ ತಮ್ಮ ಸಾಹಸದ ವಿಡಿಯೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋವನ್ನು 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

    https://www.instagram.com/p/BilWNpAnFMf/?utm_source=ig_embed

    ಬಾಗಿ 2 ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಹಿಟ್ ಆಗಿದ್ದು, 165 ಕೋಟಿ ರೂ.ಗಳಿಸಿದೆ. ಅಭಿಮಾನಿಗಳ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹ ದೊರೆತಿದ್ದು, ಈ ಬೆನ್ನಲ್ಲೇ ನಿರ್ಮಾಪಕರು ಬಾಗಿ 3 ಚಿತ್ರಕ್ಕೆ ಮುಂದಾಗಿದ್ದಾರೆ.

    ಬಾಗಿ ಸಿನಿಮಾದಲ್ಲಿ ಟೈಗರ್ ಶ್ರಾಫ್‍ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ನಟಿಸಿದ್ದರೆ, ಬಾಗಿ-2 ಚಿತ್ರದಲ್ಲಿ ದಿಶಾ ಪಠಾಣಿ ಕಾಣಿಸಿಕೊಂಡಿದ್ದರು. ಬಾಗಿ-3 ಚಿತ್ರದಲ್ಲಿ ಟೈಗರ್‍ಗೆ ಜೋಡಿ ಯಾರು ಆಗಲಿದ್ದಾರೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.

    ದಿಶಾ ಹಾಗೂ ಟೈಗರ್ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದರೂ ಇವರಿಬ್ಬರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಲ್ಲೂ ಹೇಳಿಕೊಂಡಿಲ್ಲ.

  • ಇದೇ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ ಬಾಗಿ-2!

    ಇದೇ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ ಬಾಗಿ-2!

    ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಈ ಹಿಂದೆ ನಟಿಸಿದ ಬಾಗಿ ಚಿತ್ರ ಸಾಕಷ್ಟು ಯಶಸ್ಸು ಕಂಡು 100 ಕೋಟಿ ಬಾಕ್ಸ್ ಆಫೀಸ್ ಕ್ಲಬ್ ಸೇರಿತ್ತು. ಈಗ ಮತ್ತೆ ತಮ್ಮ ಹವಾ ಎಬ್ಬಿಸಲು ಬಾಗಿ-2 ಚಿತ್ರ ಇದೇ ಶುಕ್ರವಾರ ವಿಶ್ವಾದ್ಯಂತ ತೆರೆ ಕಾಣಲಿದೆ.

    2016ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ‘ಕ್ಷಣಂ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗಿದ್ದು, ಅದ್ದಕ್ಕೆ ಬಾಗಿ-2 ಎಂದು ಟೈಟಲ್ ಇಡಲಾಗಿದೆ. ಚಿತ್ರದಲ್ಲಿ ನಟ ಟೈಗರ್ ಶ್ರಾಫ್ ರೋನಿ ಪಾತ್ರದಲ್ಲಿ ಮಿಂಚಿದ್ದು, ನಟಿ ದಿಶಾ ಪಠಾಣಿ ನೇಹಾ ಪಾತ್ರದಲ್ಲಿ ಮಿಂಚಿದ್ದಾರೆ.

    ಈ ಚಿತ್ರದಲ್ಲಿ ಟೈಗರ್ ಕಮಾಂಡೋ ಪಾತ್ರ ನಿರ್ವಹಿಸಿದ್ದು, ಕಳೆದು ಹೋದ ಮಗುವಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಅಷ್ಟೇ ಅಲ್ಲದೇ ಸಾಕಷ್ಟು ಆಕ್ಷನ್ ಹಾಗೂ ಥ್ರಿಲ್ಲರ್ ವನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾವನ್ನು ಅಹ್ಮದ್ ಖಾನ್ ನಿರ್ದೇಶನ ಮಾಡಿದ್ದು, ಸಾಜಿದ್ ನದಿಯಾವಾಲಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.

    ಈ ಹಿಂದೆ ಬಿಡುಗಡೆಯಾಗಿದ್ದ ಬಾಗಿ ಸಿನಿಮಾದಲ್ಲಿ ಟೈಗರ್ ಮಾರ್ಷಲ್ ಆರ್ಟ್ಸ್ ಪಾತ್ರದಲ್ಲಿ ಮಿಂಚಿದ್ದು, ಈಗ ಬಾಗಿ-2 ಚಿತ್ರದಲ್ಲಿ ಕಮಾಂಡೋ ಆಗಿ ಮಿಂಚಿದ್ದಾರೆ. ಬಾಗಿ ಸಿನಿಮಾದಲ್ಲಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹಾಗೂ ತನ್ನ ಗುರುವಿನ ಸಾವಿಗೆ ಕಾರಣವಾದವರ ಮೇಲೆ ಸೇಡು ತಿರಿಸಿಕೊಳ್ಳುವ ಸಿನಿಮಾವಾಗಿತ್ತು.

    ಬಾಗಿ ಚಿತ್ರದಲ್ಲಿ ಟೈಗರ್ ಶ್ರಾಫ್‍ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ನಟಿಸಿದ್ದರು. ಆದರೆ ಈಗ ಬಾಗಿ-2 ಚಿತ್ರದಲ್ಲಿ ನಟಿ ದಿಶಾ ಪಠಾಣಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಾಕ್ವೇಲಿನ್ ಫೆರ್ನಂಡಿಸ್ ಕೂಡ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಂದು ತೇಜಬ್ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಹೆಜ್ಜೆ ಹಾಕಿದ ‘ಏಕ್ ದೋ ತಿನ್’ ಹಾಡಿಗೆ ಇಂದು ಜಾಕ್ವೇಲಿನ್ ಹೆಜ್ಜೆ ಹಾಕಿದ್ದಾರೆ.

    ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಟ್ರೇಲರ್ ಯೂ ಟ್ಯೂಬ್ ನಲ್ಲಿ 5 ಕೋಟಿಗೂ ಅಧಿಕ ವ್ಯೂ ಕಂಡಿದೆ.