ಬಾಲಿವುಡ್ ಸಿನಿಮಾ ರಂಗದ ಖ್ಯಾತ ನಟ ಟೈಗರ್ ಶ್ರಾಫ್ ಶೋವೊಂದರಲ್ಲಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ತಾವು ವಿಮಾನದಲ್ಲೇ ರೊಮ್ಯಾನ್ಸ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಅವರು, ತಾವು ವಿಮಾನದಲ್ಲಿ ರೊಮ್ಯಾನ್ಸ್ ಮಾಡಿರುವ ವಿಚಾರವನ್ನು ಬಹಿರಂಗ ಪಡಿಸಿದರು.

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಡೇಟಿಂಗ್ ಮಾಡುತ್ತಿರುವ ವಿಚಾರ, ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೇ, ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನುವ ವಿಷಯವೂ ಹರಿದಾಡುತ್ತಿದೆ. ಈ ಜೋಡಿ ಒಟ್ಟಿಗೆ ಹಲವು ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ. ಹಾಗಾಗಿ ದಿಶಾ ಜೊತೆಯೇ ವಿಮಾನದಲ್ಲಿ ರೊಮ್ಯಾನ್ಸ್ ಮಾಡಿದರಾ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ, ವಿಮಾನದಲ್ಲಿ ಯಾರ ಜೊತೆ ಟೈಗರ್ ರೊಮ್ಯಾನ್ಸ್ ಮಾಡಿದರು ಎನ್ನುವ ಕುರಿತು ಹೇಳಲಿಲ್ಲ. ಇದನ್ನೂ ಓದಿ:ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಡೇಟಿಂಗ್ ಕುರಿತಾಗಿಯೂ ಕರಣ್ ಪ್ರಶ್ನೆಗಳನ್ನು ಕೇಳಿದರು. ಆ ಹುಡುಗಿ ಜೊತೆ ಡೇಟಿಂಗ್ ಅಂಥದ್ದು ಏನೂ ಇಲ್ಲ. ದಿಶಾ ನನ್ನ ಬೆಸ್ಟ್ ಫ್ರೆಂಡ್ ಎಂದಷ್ಟೇ ಚುಟುಕಾಗಿ ಉತ್ತರಿಸಿ ಅನುಮಾನ ಮೂಡಿಸಿದರು ಟೈಗರ್. ಕೆಲ ದಿನಗಳ ಹಿಂದೆಯಷ್ಟೇ ಟೈಗರ್ ಮತ್ತು ದಿಶಾ ಇಬ್ಬರೂ ಬೇರೆ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಈ ಕುರಿತು ಟೈಗರ್ ಏನನ್ನೂ ಹೇಳಲು ಇಷ್ಟ ಪಡಲಿಲ್ಲ.





ಟೈಗರ್ ಶ್ರಾಫ್, ದಿಶಾ ಪಠಾಣಿ ಅವರು ಸ್ನೇಹಿತರಾಗಿದ್ದರು, ಸ್ನೇಹಿತರಾಗಿ ಉಳಿದಿದ್ದಾರೆ. ಇಬ್ಬರೂ ಜೊತೆಯಾಗಿ ಹೊರಗೆ ಹೋಗೋದನ್ನು ನಾನು ನೋಡಿರುವೆ. ಹಾಗಂತ ನನ್ನ ಮಗನನ್ನು ಟ್ರ‍್ಯಾಕ್ ಮಾಡ್ತೀದ್ದೀನಿ ಅಂತಲ್ಲ. ಅವರಿಬ್ಬರೂ ತುಂಬ ಆತ್ಮೀಯರು ಅಂತ ನನಗೆ ಗೊತ್ತಿದೆ, ಕೆಲಸದ ಹೊರತಾಗಿ ಅವರಿಬ್ಬರೂ ಸಮಯ ಕಳೆಯುತ್ತಾರೆ ಅಂತ ಗೊತ್ತಿದೆ ಎಂದು ಜಾಕಿ ಶ್ರಾಫ್ ಹೇಳಿದ್ದಾರೆ. ಬೇರೆಯಾಗಿರೋದು, ಒಟ್ಟಿಗೆ ಇರೋದು ಅವರಿಬ್ಬರಿಗೆ ಬಿಟ್ಟಿದ್ದು. ನಾನು, ನನ್ನ ಪತ್ನಿ ತರ ಇದು ಅವರ ಲವ್ ಸ್ಟೋರಿ. ದಿಶಾ ಜೊತೆ ನಮಗೆ ಒಳ್ಳೆಯ ಸಂಬಂಧ ಇದೆ ಎಂದು ಜಾಕಿ ಶ್ರಾಫ್ ಹೇಳಿದ್ದಾರೆ.
ಈ ಮೂಲಕ ಪುತ್ರನ ಲವ್ ಬ್ರೇಕಪ್ ವದಂತಿಯ ಕುರಿತು ಜಾಕಿ ಶ್ರಾಫ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಟೈಗರ್ ಮತ್ತು ದಿಶಾ ಸದ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಹಳ ಸಮಯದಿಂದ ಬೇರೆಯಾಗಿರುವ ಈ ಜೋಡಿ. ಬ್ರೇಕಪ್ ಕುರಿತು ಅಧಿಕೃತವಾಗಿ ಹೇಳಿಕೊಂಡಿಲ್ಲ. ಈಗ ಸಾಲು ಸಲು ಸಿನಿಮಾಗಳಲ್ಲಿ ಈ ಜೋಡಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಬಿಟೌನ್‌ನಲ್ಲಿ ಕೈ ಕೈ ಹಿಡಿದು ಓಡಾಡಿಕೊಂಡಿದ್ದ ಟೈಗರ್ ಮತ್ತು ದಿಶಾ ಅವರ ದಾರಿ ಬೇರೆ ಬೇರೆಯಾಗಿದೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ.













