Tag: ಟೈಗರ್ ಪ್ರಭಾಕರ್

  • ಟೈಗರ್ ಪ್ರಭಾಕರ್ ಆಪ್ತ ವಿಜಯ್‌ಗೆ ‘ಸರಿಗಮ’ ಹೆಸರು ಸೇರಿಕೊಂಡಿದ್ದು ಹೇಗೆ?

    ಟೈಗರ್ ಪ್ರಭಾಕರ್ ಆಪ್ತ ವಿಜಯ್‌ಗೆ ‘ಸರಿಗಮ’ ಹೆಸರು ಸೇರಿಕೊಂಡಿದ್ದು ಹೇಗೆ?

    ನ್ನಡದ ನಟ ಟೈಗರ್ ಪ್ರಭಾಕರ್ ಆಪ್ತ ನಟ ಸರಿಗಮ ವಿಜಯ್‌ಗೆ (Sarigama Vijay) ಸರಿಗಮ (Sarigama) ಹೆಸರು ಸೇರಿಕೊಂಡಿದ್ದು ಹೇಗೆ? ಎಂಬುದರ ಹಿಂದೆ ಇಂಟ್ರರೆಸ್ಟಿಂಗ್ ವಿಚಾರವೊಂದಿದೆ. ವಿಜಯ್ ಕುಮಾರ್ ಆಗಿದ್ದ ಅವರು ‘ಸರಿಗಮ ವಿಜಿ’ ಆಗಿರೋದರ ಹಿಂದೆ ಕಥೆಯಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

    1975ರಲ್ಲಿ ತೆರೆಕಂಡ ಗೀತಪ್ರಿಯ ನಿರ್ದೇಶನದ ‘ಬೆಳುವಲದ ಮಡಿಲಲ್ಲಿ’ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸರಿಗಮ ವಿಜಿ ನಟಿಸಿದ್ದಾರೆ. 2400ಕ್ಕೂ ಹೆಚ್ಚು ಸೀರಿಯಲ್ ಹಾಗೂ 80ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    ಇನ್ನೂ ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕದಿಂದ ಸರಿಗಮ ಹೆಸರು ಅವರಿಗೆ ಬಂತು. ಈ ನಾಟಕ ಅವರಿಗೆ ಹೆಚ್ಚಿನ ಜನಪ್ರಿಯತೆ ನೀಡಿತ್ತು. ಈ ನಾಟಕ 1390ಕ್ಕೂ ಹೆಚ್ಚು ಬಾರಿ ಪ್ರದರ್ಶನ ಕಂಡಿತ್ತು. ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ ಮತ್ತು ಮುಂಬೈನಲ್ಲಿ ಅವರ ಈ ನಾಟಕ ತಂಡ ಯಶಸ್ವಿ ಪ್ರದರ್ಶನ ನೀಡಿತ್ತು. ಅವರ ಹೆಸರಿನ ಜೊತೆ ‘ಸರಿಗಮ’ ಸೇರಿಕೊಂಡು ಅಲ್ಲಿಂದ ಅವರು ‘ಸರಿಗಮ ವಿಜಿ’ ಎಂದೇ ಫೇಮಸ್ ಆದರು.

    ವಿಶೇಷ ಅಂದರೆ, ಇವರ ನಟನೆಯ ಚಿತ್ರಗಳ ಪಟ್ಟಿಯಲ್ಲಿ ಟೈಗರ್ ಪ್ರಭಾಕರ್ ಚಿತ್ರಗಳೇ ಹೆಚ್ಚಾಗಿದೆ. ಟೈಗರ್ ಪ್ರಭಾಕರ್‌ಗೆ ವಿಜಯ್ ಆಪ್ತರಾಗಿದ್ದರು. ಇನ್ನೂ ಸರಿಗಮ ವಿಜಿ ನಟಿಸಿದ ಕೊನೆಯದಾಗಿ ‘ಡಕೋಟಾ ಪಿಕ್ಚರ್’ ಚಿತ್ರದಲ್ಲಿ ನಟಿಸಿದ್ದರು.

    ಇನ್ನೂ ಇಂದು ಬೆಳಗ್ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸರಿಗಮ ವಿಜಿ (76) ನಿಧನರಾಗಿದ್ದಾರೆ. ಇಂದು ನಟನ ನಿವಾಸ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ (ಜ.16) ಅಂತ್ಯಕ್ರಿಯೆ ನಡೆಯಲಿದೆ.

  • ಪ್ರೇಮವಿವಾಹದ ವೇಳೆ ಅಣ್ಣನಂತೆ ಭುಜಕೊಟ್ಟರು – ಟೈಗರ್ ಪ್ರಭಾಕರ್ ಸ್ಮರಿಸಿದ್ರು ಜಗ್ಗೇಶ್

    ಪ್ರೇಮವಿವಾಹದ ವೇಳೆ ಅಣ್ಣನಂತೆ ಭುಜಕೊಟ್ಟರು – ಟೈಗರ್ ಪ್ರಭಾಕರ್ ಸ್ಮರಿಸಿದ್ರು ಜಗ್ಗೇಶ್

    ಬೆಂಗಳೂರು: ಇಂದು ದಿವಂಗತ ನಟ ಟೈಗರ್ ಪ್ರಭಾಕರ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ನವರಸನಾಯಕ ಜಗ್ಗೇಶ್ ಇಂದು ಅವರನ್ನು ಸ್ಮರಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ನಾವಿಬ್ಬರು ನಟಿಸಿದ ಚಿತ್ರ ಅರ್ಜುನ ಅಭಿಮನ್ಯು 1995 ಸಮಯದಲ್ಲಿ ಅಮ್ಮ ತೀರಿಕೊಂಡಳು! ಜಗವೆ ಶೂನ್ಯವಾಗಿ ದುಃಖಿಸುವಾಗ 2ಕೈ ನನ್ನ ತಬ್ಬಿ ಅಳುತ್ತಾ ರಾಜಣ್ಣೆ ನೀನು ನನ್ನಂತೆ ಅಮ್ಮನ ಕಳೆದುಕೊಂಡೆಯಾ ಎಂದಾಗ ನನ್ನ ದುಃಖದ ಕಟ್ಟೆಯೊಡೆದು ಹುಚ್ಚನಂತೆ ಅತ್ತುಬಿಟ್ಟೆ! ಅಂಥ ಕರುಣಾಮಯಿ ಪ್ರಭಣ್ಣ ನಿಮಗೆ ಹುಟ್ಟುಹಬ್ಬದ ಶುಭಾಶಯ! ನಿಮ್ಮ ಪ್ರೀತಿ ಅವಿಸ್ಮರಣೀಯ ಎಂದು ಬರೆದುಕೊಂಡಿದ್ದಾರೆ.

    ಇನ್ನೊಂದು ಟ್ವೀಟ್ ಮಾಡಿ, ಪ್ರಭಣ್ಣ ನನ್ನ ಸ್ನೇಹ ಆದದ್ದು 1987 ಚಿತ್ರ #ಅಗ್ನಿಪರ್ವ! ನನ್ನ ಪ್ರೇಮವಿವಾಹ ಆಗಿ ಯಾರ ಸಹಾಯ ಇಲ್ಲದೆ ಪರದಾಡಬೇಕಾದರೆ ಅಣ್ಣನಂತೆ ಭುಜಕೊಟ್ಟರು! ಅಲ್ಲಿಂದ ನನ್ನ ಬೆಳವಣಿಗೆ ನೋಡಿ ಆನಂದಿಸುತ್ತಿದ್ದರು! ಎಷ್ಟೋ ದಿನಗಳು ನಾವಿಬ್ಬರೇ ಗುಂಡುಪಾರ್ಟಿ ಸಹಪಾಟಿಗಳು! ಅವರ ಮರಣಯಾತ್ರೆವರೆಗೂ ಜೊತೆ ಇದ್ದೆ! ಅವರು ನನ್ನ ಕರೆಯುತ್ತಿದ್ದ ಶೈಲಿ ರಾಜಣ್ಣೆ ಅದ್ಭುತ ಎಂದು ಕೆಲ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಟೈಗರ್ ಪ್ರಭಾಕರ್ ಅವರನ್ನು ನೆನಪಿಸಿಕೊಂಡರು.

    ಸ್ಯಾಂಡಲ್‍ವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಹಾಗೂ ಬಾಲಿವುಡ್ ಹೀಗೆ ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿ ಟೈಗರ್ ಪ್ರಭಾಕರ್ ಮಿಂಚಿದ್ದರು. ಅವರು ನಮ್ಮನ್ನು ಅಗಲಿ ಎರಡು ದಶಕಗಳೇ ಉರುಳಿವೆ. ಆದರೂ ಸಿನಿಪ್ರಿಯರು, ಆಪ್ತರು ಹಾಗೂ ಅವರ ಅಭಿಮಾನಿಗಳ ಹೃದಯದಲ್ಲಿ ನಟ ಇಂದಿಗೂ ನೆಲೆಸಿದ್ದು, ಜನ್ಮದಿನದ ಹಿನ್ನೆಲೆಯಲ್ಲಿ ಎಲ್ಲರೂ ಅವರನ್ನು ನೆನಪಿಸಿಕೊಂಡಿದ್ದಾರೆ.