Tag: ಟೇಬಲ್ ಟೆನಿಸ್

  • ಖೇಲ್ ರತ್ನ ಪ್ರಶಸ್ತಿಗೆ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಹೆಸರು ಶಿಫಾರಸು

    ಖೇಲ್ ರತ್ನ ಪ್ರಶಸ್ತಿಗೆ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಹೆಸರು ಶಿಫಾರಸು

    ನವದೆಹಲಿ: ಭಾರತದ ಟೇಬಲ್ ಟೆನಿಸ್ (Table Tennis) ಆಟಗಾರ ಅಚಂತಾ ಶರತ್ ಕಮಲ್ (Achanta Sharath Kamal) ಅವರ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (Khel Ratna Award) ಪ್ರಶಸ್ತಿಗೆ ಆಯ್ಕೆ ಸಮಿತಿ ಶಿಫಾರಸು ಮಾಡಿದೆ.

    ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಈ ವರ್ಷ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ 4 ಪದಕಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಅದರಲ್ಲಿ 3 ಚಿನ್ನ ಹಾಗೂ 1 ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಣಿಕಾ ಬಹಾತ್ರ ನಂತರ ಖೇಲ್ ರತ್ನವನ್ನು ಪಡೆಯುತ್ತಿರುವ 2ನೇ ಟೇಬಲ್ ಟೆನಿಸ್ ಆಟಗಾರರಾಗಿ ಶರತ್ ಕಮಲ್ ಹೊರಹೊಮ್ಮಲಿದ್ದಾರೆ.

    ಇನ್ನೂ ಅರ್ಜುನ ಪ್ರಶಸ್ತಿಗೆ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಹಾಗೂ ಕುಸ್ತಿ ಪಟು ಅಂಶು ಮಲ್ಲಿಕ್ ನಿಖತ್ ಜರೀನ್, ಚೆಸ್ ಪ್ರಾಡಿಜಿ ಆರ್ ಪ್ರಗ್ನಾನಂದ ಮತ್ತು ಸರಿತಾ ಮೋರ್ ಸೇರಿದಂತೆ ಒಟ್ಟು 25 ಕ್ರೀಡಾಪಟುಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಅಷ್ಟೇ ಅಲ್ಲದೇ ಈ ವರ್ಷದ ಅರ್ಜುನ ಪ್ರಶಸ್ತಿಗೆ ಯಾವುದೇ ಕ್ರಿಕೆಟಿಗರ ಹೆಸರನ್ನು ಶಿಫಾರಸು ಮಾಡದೇ ಇರುವುದು ಗಮನಾರ್ಹ ವಿಷಯವಾಗಿದೆ. ಇದನ್ನೂ ಓದಿ: ಆಸೀಸ್‌ಗೆ 4 ರನ್‌ಗಳ ರೋಚಕ ಜಯ – ಸೆಮಿಸ್ ಕನಸು ಜೀವಂತ

    ಲಕ್ಷ್ಯ ಸೇನ್ ಕಳೆದ ವರ್ಷ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಜೊತೆ ಆಲ್ ಇಂಗ್ಲೆಂಡ್ ಓಪನ್‍ನಲ್ಲಿ ರನ್ನರ್ ಅಪ್ ಆಗಿದ್ದು, ಥಾಮಸ್ ಕಪ್‍ನಲ್ಲಿ ಚಿನ್ನ ಗೆದ್ದ ಪುರುಷರ ಬ್ಯಾಡ್ಮಿಂಟನ್ ತಂಡದಲ್ಲಿ ಭಾಗಿಯಾಗಿದ್ದರು. ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕವನ್ನು ಪಡೆದರು. ಇದನ್ನೂ ಓದಿ: ಎಬಿಡಿ RCB ತಂಡದ ಬ್ಯಾಟಿಂಗ್ ಕೋಚ್?

    Live Tv
    [brid partner=56869869 player=32851 video=960834 autoplay=true]

  • ಇಂದು ಸುವರ್ಣ ದಿನ- ಟೇಬಲ್ ಟೆನಿಸ್‍ನಲ್ಲಿ ಚಿನ್ನ ಗೆದ್ದ ಭಾರತ

    ಇಂದು ಸುವರ್ಣ ದಿನ- ಟೇಬಲ್ ಟೆನಿಸ್‍ನಲ್ಲಿ ಚಿನ್ನ ಗೆದ್ದ ಭಾರತ

    ಬರ್ಮಿಂಗ್‍ಹ್ಯಾಮ್: ಮಂಗಳವಾರ ಕಾಮನ್‍ವೇಲ್ತ್ ಕ್ರೀಡಾಕೂಟದಲ್ಲಿ ಭಾರತದ ಪಾಲಿಗೆ ಸುವರ್ಣ ದಿನವಾಗಿದ್ದು, ಭಾರತವು ಮೊದಲ ಪಂದ್ಯದಲ್ಲಿ, ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡವು ಫೈನಲ್‍ನಲ್ಲಿ ದಕ್ಷಿಣ ಆಫ್ರಿಕಾವನ್ನು 17-10 ರಿಂದ ಸೋಲಿಸುವ ಮೂಲಕ ಕ್ರೀಡೆಯಲ್ಲಿ ಐತಿಹಾಸಿಕ ಚಿನ್ನವನ್ನು ಗೆದ್ದುಕೊಂಡಿತ್ತು. ಇದೀಗ ಪುರುಷರ ವಿಭಾಗವು ಟೇಬಲ್ ಟೆನಿಸ್‍ನಲ್ಲಿ ಚಿನ್ನವನ್ನು ಗೆದ್ದಿದೆ.

    ಇದೀಗ ಸಿಂಗಾಪುರ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 3-1 ಅಂತರದಲ್ಲಿ ಗೆಲುವು ದಾಖಲಿಸಿರುವ ತಂಡ ಭಾರತಕ್ಕೆ 5ನೇ ಚಿನ್ನದ ಪದಕವನ್ನು ತಂದುಕೊಟ್ಟಿದೆ. ಈ ಮೂಲಕ ಇಂದೇ 2 ಚಿನ್ನ ಹಾಗೂ ಒಂದು ಬೆಳ್ಳಿ ಭಾರತಕ್ಕೆ ಬಂದಿದೆ. ಇದನ್ನೂ ಓದಿ: ಲಾನ್‌ ಬಾಲ್ಸ್‌ನಲ್ಲಿ ಇತಿಹಾಸ ಸೃಷ್ಟಿ – ಚಿನ್ನ ಗೆದ್ದ ವನಿತೆಯರು

    ಚಂತಾ ಕಮಲ್ ನಾಯಕತ್ವದ ತಂಡ ಈ ಹಿಂದೆ ಬಾರ್ಬಡೋಸ್, ಉತ್ತರ ಐರ್ಲೆಂಡ್, ಬಾಂಗ್ಲಾದೇಶದ ವಿರುದ್ಧ ಗೆಲುವು ದಾಖಲಿಸಿತ್ತು.

    ಇನ್ನುಳಿದಂತೆ ಭಾರತದ ಬ್ಯಾಡ್ಮಿಂಟನ್ ತಂಡವು ಮಿಕ್ಸೆಡ್ ಟೀಮ್ ಫೈನಲ್‍ನಲ್ಲಿ ಮಲೇಷ್ಯಾವನ್ನು ಎದುರಿಸುವುದರಿಂದ ಭಾರತಕ್ಕೆ ಮತ್ತೊಂದು ಪದಕ ಬರುವ ನೀರಿಕ್ಷೆಯಿದೆ. ಇದನ್ನೂ ಓದಿ: ಏಷ್ಯಾ ಕಪ್‌ – ಭಾರತ್‌, ಪಾಕ್‌ ಪಂದ್ಯಕ್ಕೆ ಡೇಟ್‌ ಫಿಕ್ಸ್‌

    ಅಥ್ಲೆಟಿಕ್ಸ್‌ನಲ್ಲಿ ಮುರಳಿ ಶ್ರೀಶಂಕರ್ ಮತ್ತು ಮುಹಮ್ಮದ್ ಅನೀಸ್ ಯಾಹಿಯಾ ಪುರುಷರ ಲಾಂಗ್ ಜಂಪ್ ಫೈನಲ್‍ಗೆ ಅರ್ಹತೆ ಪಡೆದಿದ್ದಾರೆ. ಹಾಗೂ ಸ್ಟಾರ್ ಶಾಟ್‍ಪುಟ್ ಆಟಗಾರ್ತಿ ಮನ್‍ಪ್ರೀತ್ ಕೌರ್ ಫೈನಲ್‍ಗೆ ಅರ್ಹತೆ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ – ಇತಿಹಾಸ ನಿರ್ಮಿಸಿದ ಭವಿನಾಬೆನ್ ಪಟೇಲ್

    ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ – ಇತಿಹಾಸ ನಿರ್ಮಿಸಿದ ಭವಿನಾಬೆನ್ ಪಟೇಲ್

    ಟೋಕಿಯೋ: ಪ್ಯಾರಾಲಿಂಪಿಕ್ಸ್ ವನಿತಾ ವಿಭಾಗದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಭವಿನಾಬೆನ್ ಪಟೇಲ್ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

    ಫೈನಲ್ ಪಂದ್ಯದಲ್ಲಿ ಚೀನಾದ ಯಿಂಗ್ ಜ್ಯೂ ಅವರು ಭವಿನಾಬೆನ್ ಪಟೇಲ್, 7-11, 5-11, 6-11 ನೇರ ಸೆಟ್‍ಗಳಿಂದ ಜಯಗಳಿಸಿದರು. ಫೈನಲ್ ಸೋತರೂ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಪರ ಮೊದಲ ಪದಕ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!

    ಈ ಮೊದಲು ನಡೆದ ಕ್ವಾರ್ಟರ್ ಫೈನಲ್ ಪಂದಲ್ಲಿ ಪರಿಕ್ ರ್ಯಾನ್ಕೊವಿಕ್ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ನಂತರ ಸೆಮಿಪೈನಲ್ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಜಾಂಗ್ ಮಿಯಾವೂ ಅವರನ್ನು 7-11, 11-7, 11-4, 9-11, 11-8, ಸೆಟ್‍ಗಳ ಅಂತರದಿಂದ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದ್ದರು. ಇದನ್ನೂ ಓದಿ: ಕ್ರಿಶ್ಚಿಯಾನೊ ರೊನಾಲ್ಡೊ ಹೊಸ ಕ್ಲಬ್ ಸೇರ್ಪಡೆ: ಟ್ರೆಂಡ್ ಆಯ್ತು ನಂ-7

    ಗುಜರಾತ್ ಮೂಲದ34 ವರ್ಷದ ಭವಿನಾಬೆನ್ 12 ವರ್ಷದವರಿದ್ದಾಗ ಪೋಲಿಯೊ ಕಾಣಿಸಿಕೊಂಡಿತ್ತು. ಬಳಿಕ ಕ್ರೀಡೆಯಲ್ಲಿ ತೊಡಗಿಕೊಂಡು ಇದೀಗ ಟೋಕಿಯೋ ಪ್ಯಾರಾಲಿಂಪಿಕ್ಸ್ ಮಹಿಳಾ ವಿಭಾಗದ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.