Tag: ಟೆಸ್ಲಾ

  • ಟ್ವಿಟ್ಟರ್‌ ಖರೀದಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಮಸ್ಕ್‌

    ಟ್ವಿಟ್ಟರ್‌ ಖರೀದಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಮಸ್ಕ್‌

    ವಾಷಿಂಗ್ಟನ್‌: ನಕಲಿ ಖಾತೆಗಳ ಬಗ್ಗೆ ಅಧಿಕೃತ ಮಾಹಿತಿ ನೀಡದ್ದಕ್ಕೆ ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್‌ ಮಸ್ಕ್‌ ಟ್ವಿಟ್ಟರ್‌ ಖರೀದಿ ಪ್ರಕ್ರಿಯೆಯನ್ನೇ ರದ್ದು ಮಾಡಿದ್ದಾರೆ.

    ಷೇರು ಮಾರುಕಟ್ಟೆಗೆ ಮಸ್ಕ್‌ ವಕೀಲರು ಖರೀದಿ ರದ್ದು ಮಾಡುವುದಾಗಿ ತಿಳಿಸಿದ್ದಾರೆ. ಟ್ವಿಟ್ಟರ್‌ ಬೋರ್ಡ್‌ ರದ್ದು ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗುವುದಾಗಿ ತಿಳಿಸಿದೆ.

    ಒಪ್ಪಂದದ ನಿಯಮಗಳ ಪ್ರಕಾರ ಎಲೋನ್ ಮಸ್ಕ್‌ ವಹಿವಾಟನ್ನು ಪೂರ್ಣಗೊಳಿಸದಿದ್ದರೆ 1 ಶತಕೋಟಿ ಡಾಲರ್‌ ಬ್ರೇಕಪ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಬ್ರೇಕಪ್‌ ಶುಲ್ಕ ಪಾವತಿಸುವ ಸಂಬಂಧ ಟ್ವಿಟ್ಟರ್‌ ಈಗ ಕೋರ್ಟ್‌ ಮೊರೆ ಹೋಗಲಿದೆ. ಅಷ್ಟೇ ಅಲ್ಲದೇ ಟ್ವಿಟ್ಟರ್‌ ಷೇರು ಮೌಲ್ಯ ಕಡಿಮೆಯಾಗಲು ಮಸ್ಕ್‌ ನಿರ್ಧಾರವೇ ಕಾರಣ ಎಂದು ಆರೋಪಿಸಿದೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ

    ಟ್ವಿಟ್ಟರ್‌ನಲ್ಲಿನ ನಕಲಿ ಖಾತೆ (ಸ್ಪ್ಯಾಮ್ ಖಾತೆ) ಗಳಿಗೆ ಸಂಬಂಧಿಸಿದ ವಿವರಗಳು ಬಾಕಿ ಉಳಿದಿವೆ ಎಂಬ ಕಾರಣದಿಂದ ಸದ್ಯಕ್ಕೆ ಟ್ವಿಟ್ಟರ್ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಏಪ್ರಿಲ್‌ನಲ್ಲಿ ಮಸ್ಕ್‌ ತಿಳಿಸಿದ್ದರು.

    ನಿತ್ಯದ ಟ್ವಿಟ್ಟರ್ ಬಳಕೆದಾರರ ಪೈಕಿ ಶೇ.5 ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್ ಖಾತೆಗಳಿರುವುದಾಗಿ ಟ್ವಿಟ್ಟರ್ ಈ ಹಿಂದೆ ಹೇಳಿತ್ತು. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 22.9 ಕೋಟಿ ಬಳಕೆದಾರರಿಗೆ ಜಾಹೀರಾತು ಸೇವೆ ಒದಗಿಸಿತ್ತು. ಆದ್ರೆ, `ಸ್ಪ್ಯಾಮ್ ಬಾಟ್ಸ್’ (ನಕಲಿ ಖಾತೆಗಳ ಮೂಲಕ ಟ್ವೀಟ್‌ಗಳನ್ನು ಹಂಚುವ ತಾಂತ್ರಿಕ ವ್ಯವಸ್ಥೆ)ಯನ್ನು ಮೊದಲು ತೆರವುಗೊಳಿಸುವಂತೆ ಮಸ್ಕ್ ಹೇಳಿದ್ದರು.

    ಮಸ್ಕ್ ಅವರು ಸಾಮಾಜಿಕ ಮಾಧ್ಯಮ `ಟ್ವಿಟ್ಟರ್‌’ ಕಂಪನಿಯನ್ನು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ.) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದರು. ಅದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಉದ್ಯೋಗಿಯಿಂದ ಅವಳಿ ಮಕ್ಕಳು – 51ರ ಮಸ್ಕ್‌ ಈಗ 9 ಮಕ್ಕಳ ತಂದೆ

    ಉದ್ಯೋಗಿಯಿಂದ ಅವಳಿ ಮಕ್ಕಳು – 51ರ ಮಸ್ಕ್‌ ಈಗ 9 ಮಕ್ಕಳ ತಂದೆ

    ವಾಷಿಂಗ್ಟನ್‌: ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾ ಕಂಪನಿಯ ಮಾಲೀಕ, ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ ಅವರು ಕಂಪನಿಯ ಉದ್ಯೋಗಿಯೊಬ್ಬರಿಂದ ಅವಳಿ ಮಕ್ಕಳನ್ನು ಪಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಎಲೋನ್‌ ಮಸ್ಕ್ ಮಾಲೀಕತ್ವದ ಬ್ರೈನ್‌ ಚಿಪ್‌ ಸ್ಟಾರ್ಟಪ್ ನ್ಯೂರಾಲಿಂಕ್‌ನ ಉನ್ನತ ಹುದ್ದೆಯಲ್ಲಿರುವ 36 ವರ್ಷದ ಶಿವೋನ್ ಜಿಲಿಸ್ ಜತೆಗಿನ ಸಂಬಂಧದಿಂದ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

    ಮಕ್ಕಳ ಹೆಸರನ್ನು ಬದಲಾವಣೆ ಮಾಡುವ ಸಂಬಂಧ ನ್ಯಾಯಾಲಯಕ್ಕೆ ಮಸ್ಕ್ ಮತ್ತು ಜಿಲಿಸ್ ಇಬ್ಬರೂ ತೆರಳಿದ್ದರಿಂದ ಈ ವಿಚಾರ ಈಗ ಬಹಿರಂಗವಾಗಿದೆ. ಅವಳಿ ಮಕ್ಕಳಿಂದಾಗಿ 51 ವರ್ಷದ ಮಸ್ಕ್‌ ಅವರು ಒಟ್ಟು 9 ಮಕ್ಕಳಿಗೆ ತಂದೆಯಾಗಿದ್ದಾರೆ.

    ಈ ಹಿಂದೆ ಕೆನಡಾದ ಗಾಯಕಿ ಗ್ರಿಮ್ಸ್ ಜತೆಗೆ ಇಬ್ಬರು ಮಕ್ಕಳನ್ನು ಮಸ್ಕ್‌ ಪಡೆದಿದ್ದಾರೆ. ಬಳಿಕ ಮಾಜಿ ಪತ್ನಿ ಕೆನಡಾದ ಲೇಖಕಿ ಜಸ್ಟಿನ್ ವಿಲ್ಸನ್ ಜತೆಗಿನ ದಾಂಪತ್ಯದಲ್ಲಿ ಐದು ಮಕ್ಕಳನ್ನು ಪಡೆದಿದ್ದರು. ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು

    ಶಿವೊನ್ ಜಿಲಿಸ್ ಅವರು 2017ರ ಮೇ ತಿಂಗಳಿನಲ್ಲಿ ಮಸ್ಕ್ ಒಡೆತನದ ನ್ಯೂರಾಲಿಂಕ್ ಕಂಪನಿಗೆ ಸೇರಿದ್ದು, ನಂತರದಲ್ಲಿ ಟೆಸ್ಲಾದಲ್ಲಿ ಉನ್ನತ ಹುದ್ದೆಗೆ ಏರಿದ್ದರು.

    ಕೆನಡಾ ಮೂಲದ ಶಿವೋನ್‌ ಜಿಲಿಸ್‌ ಪ್ರಸ್ತುತ ನ್ಯೂರಲಿಂಕ್‌ನಲ್ಲಿ ಆಪರೇಷನ್‌ ಮತ್ತು ಸ್ಪೆಷಲ್‌ ಪ್ರೊಜೆಕ್ಟ್‌ ಡೈರೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮಸ್ಕ್‌ ಅವರ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕಂಪನಿ OpenAI ಬೋರ್ಡ್‌ ಸದಸ್ಯರಾಗಿದ್ದಾರೆ.

    44 ಶತಕೋಟಿ ಡಾಲರ್‌ ಮೌಲ್ಯದ ಟ್ವಿಟ್ಟರ್‌ ಖರೀದಿಯ ಬಳಿಕ ಈ ಕಂಪನಿಯನ್ನು ಮುಂದೆ ಯಾರು ನೋಡಿಕೊಳ್ಳಬಹುದು ಎಂಬ ವಿಚಾರ ಚರ್ಚೆ ಆಗುತ್ತಿದ್ದಾಗ ಶಿವೋನ್ ಜಿಲಿಸ್ ಹೆಸರು ಮುನ್ನೆಲೆಗೆ ಬಂದಿತ್ತು.

    Live Tv
    [brid partner=56869869 player=32851 video=960834 autoplay=true]

  • ಹೊಸ ನೇಮಕಾತಿಗೆ ವಿರಾಮ – 10% ಉದ್ಯೋಗಿಗಳನ್ನು ತೆಗೆದುಹಾಕಬೇಕು ಎಂದ ಟೆಸ್ಲಾ ಸಿಇಒ

    ಹೊಸ ನೇಮಕಾತಿಗೆ ವಿರಾಮ – 10% ಉದ್ಯೋಗಿಗಳನ್ನು ತೆಗೆದುಹಾಕಬೇಕು ಎಂದ ಟೆಸ್ಲಾ ಸಿಇಒ

    ವಾಷಿಂಗ್ಟನ್: ಟೆಸ್ಲಾ ಕಂಪನಿಯ ಸಿಇಒ ಎಲೋನ್ ಮಸ್ಕ್ ತನ್ನ ಕಂಪನಿಯ ಶೇ.10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಬೇಕು ಎಂದು ತಿಳಿಸಿರುವುದಾಗಿ ವರದಿಯಾಗಿದೆ.

    ವಿಶ್ವದ ಶ್ರೀಮಂತ ತನ್ನ ಕಂಪನಿಯ ಆಂತರಿಕ ಮೇಲ್ ಒಂದರಲ್ಲಿ ತಾವು ಪ್ರಸ್ತುತ ಕೆಟ್ಟ ಮನಸ್ಥಿತಿಯಲ್ಲಿರುವುದಾಗಿ ಹೇಳಿ, ತಮ್ಮ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಿಂದ ಶೇ.10 ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಬೇಕಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: 14 ವರ್ಷ ಕಾರ್ಯನಿರ್ವಹಿಸಿ ಶೆರಿಲ್ ಸ್ಯಾಂಡ್‌ಬರ್ಗ್ ಮೆಟಾ ಸಿಒಒ ಹುದ್ದೆಗೆ ರಾಜೀನಾಮೆ

    ಮಸ್ಕ್ ಗುರುವಾರ ಟೆಸ್ಲಾ ಉದ್ಯೋಗಿಗಳಿಗೆ ಕಳುಹಿಸಿದ ಮೇಲ್‌ನಲ್ಲಿ ಕಂಪನಿಗೆ ವಿಶ್ವದ ಎಲ್ಲಾ ಕಡೆಗಳಿಂದಲೂ ಹೊಸ ನೇಮಕಾತಿಗೆ ವಿರಾಮ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ವಾರದ ಆರಂಭದಲ್ಲಿ ಎಲೋನ್ ಮಸ್ಕ್ ಟೆಸ್ಲಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಬಿಟ್ಟು, ಕಂಪನಿಗೆ ಮರಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದರು. ಉದ್ಯೋಗಿಗಳು ಕಂಪನಿಗೆ ಮರಳಲು ಬಯಸದೇ ಹೋದರೆ, ಶಾಶ್ವತವಾಗಿ ಸಂಸ್ಥೆಯನ್ನೇ ತೊರೆಯಬಹುದು ಎಂದಿದ್ದರು. ಇದನ್ನೂ ಓದಿ: ಕಚೇರಿಯಿಂದ್ಲೇ ಕೆಲಸ ಮಾಡಿ, ಇಲ್ಲವೇ ಬಿಟ್ಟುಬಿಡಿ- ಟೆಸ್ಲಾ ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್

    ಟೆಸ್ಲಾ ಕಂಪನಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ವಾರಕ್ಕೆ ಕನಿಷ್ಠ 40 ಗಂಟೆಗಳ ಕಾಲ ಕಚೇರಿಯಲ್ಲಿಯೇ ಇರಬೇಕು. ಇನ್ನು ಮುಂದೆ ಮನೆಯಿಂದ ಕೆಲಸ ಮಾಡುವುದು ಸ್ವೀಕಾರ್ಹವಲ್ಲ. ಒಂದು ವೇಳೆ ಉದ್ಯೋಗಿಗಳು ಕಂಪನಿಗೆ ಹಾಜರಾಗದೇ ಹೋದರೆ, ಕೆಲಸವನ್ನೇ ತೊರೆದಿರುವುದಾಗಿ ಪರಿಗಣಿಸಲಾಗುವುದು ಎಂದು ಇ-ಮೇಲ್‌ನಲ್ಲಿ ಖಡಕ್ ಎಚ್ಚರಿಕೆ ನೀಡಿದ್ದರು.

  • ಕಚೇರಿಯಿಂದ್ಲೇ ಕೆಲಸ ಮಾಡಿ, ಇಲ್ಲವೇ ಬಿಟ್ಟುಬಿಡಿ- ಟೆಸ್ಲಾ ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್

    ಕಚೇರಿಯಿಂದ್ಲೇ ಕೆಲಸ ಮಾಡಿ, ಇಲ್ಲವೇ ಬಿಟ್ಟುಬಿಡಿ- ಟೆಸ್ಲಾ ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್

    ವಾಷಿಂಗ್ಟನ್: ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಇದೀಗ ಟೆಸ್ಲಾ ಸಿಇಒ ವಾರ್ನಿಂಗ್ ನೀಡಿದ್ದಾರೆ. ಕೆಲಸ ಮಾಡಲು ಬಯಸುವವರು ಆಫೀಸ್‌ಗೆ ಬನ್ನಿ ಇಲ್ಲವೆಂದರೆ ಸಂಸ್ಥೆಯನ್ನೇ ಬಿಟ್ಟುಬಿಡಿ ಎಂದು ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ತನ್ನ ಉದ್ಯೋಗಿಗಳಿಗೆ ಖಾರವಾಗಿ ಆದೇಶ ನೀಡಿದ್ದಾರೆ.

    ಕೊರೊನಾ ಕಾರಣಕ್ಕೆ ಕಳೆದ ೨ ವರ್ಷಗಳಿಂದ ಹೆಚ್ಚಿನ ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಮಾಡಿಕೊಟ್ಟಿತು. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಹಲವಾರು ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿವೆ. ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಘಟಕ ತೆರೆಯುತ್ತೇನೆ, ಆದ್ರೆ ನನ್ನ ಷರತ್ತು ಮೊದಲು ಪೂರ್ಣಗೊಳ್ಳಬೇಕು: ಮಸ್ಕ್

    ಆದರೆ ಕೆಲವು ಕಂಪನಿಗಳ ಉದ್ಯೋಗಿಗಳು ಆರಾಮದಾಯಕವಾಗಿದ್ದ ವರ್ಕ್ ಫ್ರಂ ಹೋಮ್ ಬದಲು ಕಚೇರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅದೆಷ್ಟೋ ಉದ್ಯೋಗಿಗಳು ಶಾಶ್ವತವಾಗಿ ವರ್ಕ್ ಫ್ರಂ ಹೋಮ್ ನಿಯಮ ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1

    ಇದ್ಯಾವ ಮಾತಿಗೂ ಬಗ್ಗದ ಮಸ್ಕ್, ಇದೀಗ ತನ್ನ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮನೆಯಿಂದಲೇ ಕೆಲಸ ಮಾಡುವುದು ಇನ್ನು ಮುಂದೆ ಸ್ವೀಕಾರ್ಹವಲ್ಲ. ಪ್ರತಿಯೊಬ್ಬ ಉದ್ಯೋಗಿಗಳೂ ವಾರಕ್ಕೆ ಕನಿಷ್ಠ ೪೦ ಗಂಟೆ ಕಚೇರಿಯಲ್ಲಿರಬೇಕು. ಮನೆಯಲ್ಲಿಯೇ ಕೆಲಸ ಮಾಡಲು ಬಯಸುವ ಉದ್ಯೋಗಿಗಳು ಬೇಕೆಂದರೆ ಸಂಸ್ಥೆಯನ್ನೇ ತೊರೆಯಬಹುದು. ಇಲ್ಲವೇ ಮನೆಯಲ್ಲಿ ಕೆಲಸ ಮಾಡುವಂತೆ ನಟಿಸಬೇಕು ಅಷ್ಟೇ ಎಂದು ಹೇಳಿದ್ದಾರೆ.

  • ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1

    ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1

    ವಾಷಿಂಗ್ಟನ್: ಫಾರ್ಚೂನ್ 500ನ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳ ಪೈಕಿ ಟೆಸ್ಲಾ ಕಂಪನಿ ಹಾಗೂ ಸ್ಪೇಸ್‌ಎಕ್ಸ್‌ನ ಸಿಇಒ ಎಲೋನ್ ಮಸ್ಕ್ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

    ಫಾರ್ಚೂನ್ 500 ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳ ವರದಿಯನ್ನು ಹೊರತಂದಿದೆ. ಇದರಲ್ಲಿ ಮಸ್ಕ್ ಅಗ್ರ ಸ್ಥಾನವನ್ನು ಪಡೆದಿದ್ದರೆ, ಆಪಲ್, ನೆಟ್‌ಫ್ಲಿಕ್ಸ್ ಕಂಪನಿಯ ಸಿಇಒ ಸೇರಿದಂತೆ ಅನೇಕರು ಅಗ್ರ 10 ಸ್ಥಾನದ ಪಟ್ಟಿಯಲ್ಲಿದ್ದಾರೆ.

    2021ರಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಇಒಗಳ ಹೆಸರು ಇಂತಿವೆ. ಇದರಲ್ಲಿ Apple, netflix, microsoftನ ಮುಖ್ಯಸ್ಥರು ಸೇರಿದಂತೆ ಕೆಲವು ಟೆಕ್ ಮತ್ತು ಬಯೋಟೆಕ್‌ನ ಸಿಇಒಗಳನ್ನು ಒಳಗೊಂಡಿವೆ. ಇದನ್ನೂ ಓದಿ: ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಇಂದು ಚಾಲನೆ: ಮಕ್ಕಳಿಗೆ ಏನು ಸಿಗುತ್ತೆ?

    ಯಾರಿಗೆ ಎಷ್ಟು ಸಂಬಳ?

    1. ಟಿಮ್ ಕುಕ್ (ಆಪಲ್)- 770.5 ಬಿಲಿಯನ್ ಡಾಲರ್
    2. ಜೆನ್ಸನ್ ಹುವಾಂಗ್ (ಎನ್ವಿಡಿಯಾ) – 561 ಬಿಲಿಯನ್ ಡಾಲರ್
    3. ರೀಡ್ ಹೇಸ್ಟಿಂಗ್ಸ್ (ನೆಟ್‌ಫ್ಲಿಕ್ಸ್)- 453.5 ಬಿಲಿಯನ್ ಡಾಲರ್
    4. ಲಿಯೊನಾರ್ಡ್ ಷ್ಲಿಫರ್ (ರೆಜೆನೆರಾನ್ ಫಾರ್ಮಾಸ್ಯುಟಿಕಲ್) – 452.9 ಬಿಲಿಯನ್ ಡಾಲರ್
    5. ಮಾರ್ಕ್ ಬೆನಿಯೋಫ್ (ಸೇಲ್ಸ್ಫೋರ್ಸ್) – 439 ಬಿಲಿಯನ್ ಡಾಲರ್
    6. ಸತ್ಯ ನಾಡೆಲ್ಲ (ಮೈಕ್ರೋಸಾಫ್ಟ್)- 309.4 ಮಿಲಿಯನ್ ಡಾಲರ್
    7. ರಾಬರ್ಟ್ ಎ. ಕೊಟಿಕ್( ಆಕ್ಟಿವಿಸನ್ ಬ್ಲಿಝಾರ್ಡ್)- 296.7 ಮಿಲಿಯನ್ ಡಾಲರ್
    8. ಹಾಕ್ ಇ. ಟ್ಯಾನ್ (ಬ್ರಾಡ್ಕಾಮ್) – 288 ಮಿಲಿಯನ್ ಡಾಲರ್
    9. ಸಫ್ರಾ ಎ. ಕ್ಯಾಟ್ಜ್ (ಒರಾಕಲ್)- 239.5 ಮಿಲಿಯನ್ ಡಾಲರ್

    500 ಸಿಇಒಗಳ ವೇತನ ಪ್ಯಾಕೇಜ್‌ಗಳನ್ನು ಮೌಲ್ಯಮಾಪನ ಮಾಡಿದ್ದು, ಇದರಲ್ಲಿ ಈ ಮೆಲಿನವರ ವೇತನವು ಸರಾಸರಿ ಒಟ್ಟು 15.9 ಮಿಲಿಯನ್ ಡಾಲರ್ ಅಧಿಕವಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೆ. 30ರಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

  • ಭಾರತದಲ್ಲಿ ಟೆಸ್ಲಾ ಘಟಕ ತೆರೆಯುತ್ತೇನೆ, ಆದ್ರೆ ನನ್ನ ಷರತ್ತು ಮೊದಲು ಪೂರ್ಣಗೊಳ್ಳಬೇಕು: ಮಸ್ಕ್

    ಭಾರತದಲ್ಲಿ ಟೆಸ್ಲಾ ಘಟಕ ತೆರೆಯುತ್ತೇನೆ, ಆದ್ರೆ ನನ್ನ ಷರತ್ತು ಮೊದಲು ಪೂರ್ಣಗೊಳ್ಳಬೇಕು: ಮಸ್ಕ್

    ವಾಷಿಂಗ್ಟನ್: “ಮೊದಲು ಕಾರು ಮಾರಾಟಕ್ಕೆ ಅವಕಾಶ ನೀಡಿ. ಮಾರಾಟಕ್ಕೆ ಅವಕಾಶ ನೀಡಿದ ಬಳಿಕ ಉತ್ಪಾದನಾ ಘಟಕ ತೆರೆಯುತ್ತೇವೆ” – ಭಾರತ ಸರ್ಕಾರ ನೀಡಿದ ಷರತ್ತಿಗೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಈ ಷರತ್ತು ಹಾಕಿದ್ದಾರೆ.

    ಪ್ರಸಿದ್ಧ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ಬಗ್ಗೆ ನಿರಂತರವಾಗಿ ಸುದ್ದಿ ಹರಡುತ್ತಲೇ ಇದೆ. ಆದರೆ ಭಾರತ ಟೆಸ್ಲಾ ಕಂಪನಿಗೆ ಕಾರುಗಳನ್ನು ಮಾರಾಟ ಮಾಡಲು ಅವಕಾಶ ನೀಡದೇ ಇರುವ ಹಿನ್ನೆಲೆ, ಉತ್ಪಾದನಾ ಘಟಕಗಳನ್ನೂ ತೆರೆಯುವುದು ಅಸಾಧ್ಯವಾಗಿದೆ.

    TESLA

    ಈ ಬಗ್ಗೆ ಟ್ವೀಟ್‌ನಲ್ಲಿ ಉತ್ತರಿಸಿದ ಟೆಸ್ಲಾ ಸಿಇಒ ಎಲೋನ್ ಮಸ್ಕ್, ಅಮೆರಿಕ ಮೂಲದ ಕಾರುಗಳನ್ನು ಮೊದಲು ಮಾರಾಟ ಮಾಡಲು ಹಾಗೂ ಸೇವೆ ನೀಡಲು ಯಾವುದೇ ದೇಶದಲ್ಲೇ ಅನುಮತಿ ಸಿಗದೇ ಉತ್ಪಾದನಾ ಘಟಕವನ್ನು ತೆರೆಯುವುದಿಲ್ಲ ಎಂದಿದ್ದಾರೆ.

    ಎಲೋನ್ ಮಸ್ಕ್ ಭಾರತದಲ್ಲಿ ಕಾರುಗಳನ್ನು ತಯಾರು ಮಾಡಲು ಅಗತ್ಯದ ಆಮದಿಗೆ ಸುಂಕವನ್ನು ಕಡಿತಗೊಳಿಸುವ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ಫಲ ನೀಡದ ಕಾರಣ ಮಸ್ಕ್ ಫೆಬ್ರವರಿಯಲ್ಲಿ ಟೆಸ್ಲಾವನ್ನು ಭಾರತಕ್ಕೆ ತರುವ ಯೋಜನೆ ಕೈ ಬಿಟ್ಟರು. ಇದನ್ನೂ ಓದಿ: ವಿಶ್ವದಲ್ಲೇ ಅತೀ ವೇಗದ ಚಾರ್ಜಿಂಗ್ ಬ್ಯಾಟರಿ – ಬೆಂಗಳೂರು ಸ್ಟಾರ್ಟ್ಅಪ್ ಸಂಶೋಧನೆ

    ಚೀನಾದಲ್ಲಿ ಉತ್ಪಾದನಾ ಘಟಕ ತೆರೆದಿರುವ ಮಸ್ಕ್ ಭಾರತದಲ್ಲಿ ಮಾರಾಟ ಮಾಡಲು ಮುಂದಾಗಿದ್ದರು. ಮಸ್ಕ್ ಈ ನೀತಿಗೆ ಕೇಂದ್ರ ಸಾರಿಗೆ ಸಚಿವ ಗಡ್ಕರಿ, ಚೀನಾದಿಂದ ಭಾರತಕ್ಕೆ ಕಾರುಗಳನ್ನು ತಂದು ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಇಲ್ಲೇ ಘಟಕ ತೆರೆಯಲು ಅವಕಾಶ ನೀಡುತ್ತೇವೆ. ಘಟಕ ತೆರೆಯಲು ಬೇಕಾದ ಜಾಗ, ನೀರು, ವಿದ್ಯುತ್‌ಗಳನ್ನು ನಾವು ನೀಡುತ್ತೇವೆ. ಇಲ್ಲಿ ಘಟಕ ತೆರೆದರೆ ನಮ್ಮ ಜನಗಳಿಗೆ ಉದ್ಯೋಗ ಸಿಗುತ್ತದೆ ಎಂದು ಖಡಕ್ ಆಗಿ ಹೇಳಿ ತಿರುಗೇಟು ನೀಡಿದ್ದರು. ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

    ಪ್ರಸ್ತುತ ಮಸ್ಕ್ ಮತ್ತು ಭಾರತ ಸರ್ಕಾರದ ಮಧ್ಯೆ ಅಮದು ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ. ವಿದೇಶದಿಂದ ಭಾರತಕ್ಕೆ ಬರುವ 40 ಲಕ್ಷ ಡಾಲರ್(ಅಂದಾಜು 30 ಲಕ್ಷ ರೂ.) ಮೌಲ್ಯದ ಎಲೆಕ್ಟ್ರಿಕ್ ವಾಹನಕ್ಕೆ ಶೇ.60 ರಷ್ಟು ತೆರಿಗೆ ವಿಧಿಸಲಾಗುತ್ತದೆ. 40 ಲಕ್ಷ ಡಾಲರ್‌ಗಿಂದ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಶೇ.100 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಭಾರತದ ಆಮದು ತೆರಿಗೆ ಜಾಸ್ತಿ ಆಯಿತು ಎಂದು ಹೇಳಿ ಉತ್ಪಾದನಾ ಘಟಕ ತೆರೆಯುವ ಯೋಜನೆಯಿಂದ ಮಸ್ಕ್ ಹಿಂದಕ್ಕೆ ಸರಿದಿದ್ದಾರೆ.

  • ಡೆಮಾಕ್ರಟಿಕ್ ಬೆಂಬಲಿಸಲ್ಲ, ಇನ್ನು ಮುಂದೆ ರಿಪಬ್ಲಿಕ್‌ಗೆ ಮತ ಹಾಕ್ತೀನಿ: ಮಸ್ಕ್

    ಡೆಮಾಕ್ರಟಿಕ್ ಬೆಂಬಲಿಸಲ್ಲ, ಇನ್ನು ಮುಂದೆ ರಿಪಬ್ಲಿಕ್‌ಗೆ ಮತ ಹಾಕ್ತೀನಿ: ಮಸ್ಕ್

    ವಾಷಿಂಗ್ಟನ್: ಇಲ್ಲಿಯವರೆಗೆ ನಾನು ಡೆಮಾಕ್ರಟಿಕ್ ಪರವಾಗಿ ಮತ ಹಾಕುತ್ತಿದ್ದೆ. ಇನ್ನು ಮುಂದೆ ರಿಪಬ್ಲಿಕ್ ಪರವಾಗಿ ಮತ ಹಾಕುತ್ತೇನೆ ಎಂದು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

    ನಾನು ಇನ್ನು ರಿಪಬ್ಲಿಕ್ ಪಕ್ಷಕ್ಕೆ ಮತ ಹಾಕುತ್ತೇನೆ. ಏಕೆಂದರೆ ಅದು ತುಂಬಾ ದಯೆಯುಳ್ಳ ಪಕ್ಷ ಎಂದಿದ್ದಾರೆ. ಮಸ್ಕ್ ಅವರ ಈ ಹೇಳಿಕೆಯಿಂದ ಟೆಸ್ಲಾ ಕಂಪನಿ ಷೇರು ಮೌಲ್ಯ ಇಳಿಕೆಯಾಗಿದೆ. ಒಂದೇ ದಿನದಲ್ಲಿ ಶೇ.7.51 ರಷ್ಟು ಇಳಿಕೆಯಾಗಿದೆ. ಇದನ್ನೂ ಓದಿ: ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ

    ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಈ ಹಿಂದೆ ನಾನು ಡೆಮಾಕ್ರಟಿಕ್ ಪಕ್ಷಕ್ಕೆ ಮತ ಹಾಕಿದ್ದೇನೆ. ಆಗ ಅವರು ದಯೆಯುಳ್ಳ ಪಕ್ಷವಾಗಿತ್ತು. ಈಗ ದ್ವೇಷದ ಪಕ್ಷವಾಗಿ ವಿಭಜನೆಯಾಗುತ್ತಿದೆ. ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ. ಆದ್ದರಿಂದ ರಿಪಬ್ಲಿಕ್‌ಗೆ ಮತ ಹಾಕುತ್ತೇನೆ. ಇನ್ನು ಮುಂದೆ ನನ್ನ ವಿರುದ್ಧ ನಡೆಸುವ ಕ್ಯಾಂಪೇನ್ ತಂತ್ರಗಳು ಹಾಗೂ ರಾಜಕೀಯ ದಾಳಿಗಳನ್ನು ನೋಡಬಹುದು. ಬರುವ ಚುನಾವಣೆಯಲ್ಲಿ ನಾನು ರಿಪಬ್ಲಿಕನ್ನರಿಗೆ ಮತ ಹಾಕುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಟ್ವಿಟ್ಟರ್ ಹೇರಿದ ನಿಷೇಧವನ್ನು ರದ್ದು ಮಾಡುತ್ತೇನೆ. ನಾನು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು.

  • ಭಾರತದಲ್ಲಿ ಟೆಸ್ಲಾ ಕಂಪನಿ ಇಲ್ಲ – ಇಂಡೋನೇಷ್ಯಾದಲ್ಲಿ ಮಸ್ಕ್ ಫೀಲ್ಡ್ ವಿಸಿಟ್

    ಭಾರತದಲ್ಲಿ ಟೆಸ್ಲಾ ಕಂಪನಿ ಇಲ್ಲ – ಇಂಡೋನೇಷ್ಯಾದಲ್ಲಿ ಮಸ್ಕ್ ಫೀಲ್ಡ್ ವಿಸಿಟ್

    ಬೀಜಿಂಗ್ / ನವದೆಹಲಿ: ಟ್ವಿಟ್ಟರ್ ಖರೀದಿಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಕಂಪೆನಿಯು ಇದೀಗ ಭಾರತದಲ್ಲಿ ಎಲೆಕ್ಟ್ರಿಕ್‌  ಕಾರುಗಳ ಉತ್ಪಾದನೆ ಕೈಬಿಡುವ ಯೋಚನೆ ಮಾಡಿದೆ.

    ಭಾರತ ಸರ್ಕಾರದಿಂದ ಕಾರುಗಳ ಮೇಲಿನ ಆಮದು ಸುಂಕ ಕಡಿತಗೊಳಿಸಲು ನಡೆಸಿದ ಯತ್ನ ವಿಫಲವಾಗಿರುವ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್ ಇದೀಗ ಕಾರುಗಳ ಉತ್ಪಾದನೆಗೆ ಇಂಡೋನೇಷ್ಯಾದತ್ತ ಚಿತ್ತ ಹರಿಸಿದ್ದಾರೆ. ಇದನ್ನೂ ಓದಿ: ಬೋಳು ತಲೆ ಅಂತ ಕರೆಯುವುದೂ ಲೈಂಗಿಕ ಕಿರುಕುಳ- ಉದ್ಯೋಗ ನ್ಯಾಯಮಂಡಳಿ ತೀರ್ಪು 

    Elon Musk twitter 1

    ಈಗಾಗಲೇ ಮಸ್ಕ್ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊ ಅವರನ್ನು ಭೇಟಿಯಾಗಿದ್ದಾರೆ. ಇದು ಉತ್ಪಾದನಾ ಘಟಕಗಳಿಗೆ ಜಾಗದ ಹುಡುಕಾಟ ಎಂದುಕೊಳ್ಳಲಾಗಿದೆ. ಇಂಡೋನೇಷ್ಯಾ ಬ್ಯಾಟರಿಗಳಿಗೆ ಪ್ರಮುಖ ಲೋಹವಾದ ನಿಕಲ್‌ನ ಪ್ರಮುಖ ಉತ್ಪಾದಕ ದೇಶವೂ ಆಗಿದೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ನಡೆದರೆ ಟೆಸ್ಲಾ ಇಂಡೋನೇಷ್ಯಾದಲ್ಲಿ ಬೇರೂರಲಿದೆ.

    ಜಾಗತಿಕ ಮಾರುಕಟ್ಟೆಗೆ ಟೆಸ್ಲಾ ಕಾರುಗಳನ್ನು ಉತ್ಪಾದಿಸಲು ಜಾಗ ಹುಡುಕುತ್ತಿರುವ ಮಸ್ಕ್, ಅಲ್ಲಿಯೇ ಹೊಸ ಉತ್ಪಾದನಾ ಘಟಕ ಸ್ಥಾಪಿಸಿ ಅದನ್ನು ಏಷ್ಯಾದ ಹಬ್ ಆಗಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಳ್ಳರಿಗೆ ಅಧಿಕಾರ ನೀಡುವುದಕ್ಕಿಂತ, ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕೋದು ಒಳ್ಳೆಯದು: ಇಮ್ರಾನ್ ಖಾನ್

    TESLA

    ಸಿಲಿಕಾನ್ ಸಿಟಿಗೆ ಕೈತಪ್ಪಿದ ಅವಕಾಶ:
    ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಟೆಸ್ಲಾ ಬೆಂಗಳೂರಿನಲ್ಲಿ ಕಂಪನಿಯನ್ನು ನೊಂದಾಯಿಸಿ, ಮಳಿಗೆ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿತ್ತು. ಒಂದಿಷ್ಟು ಅಧಿಕಾರಿಗಳನ್ನೂ ನೇಮಿಸಿದ್ದ ಕಂಪನಿ, ಆಮದು ಸುಂಕ ಕಡಿತಕ್ಕಾಗಿ ಸರ್ಕಾರದ ಮೇಲೆ ಪದೇ-ಪದೇ ಒತ್ತಡ ಹೇರುತ್ತಲೇ ಇತ್ತು. ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಶೋರೂಮ್ ಮತ್ತು ಸೇವಾ ಕೇಂದ್ರಗಳನ್ನು ತೆರೆಯಲು ರಿಯಲ್ ಎಸ್ಟೇಟ್ ಆಯ್ಕೆಗಳಿಗಾಗಿ ಟೆಸ್ಲಾ ಹಲವು ತಿಂಗಳ ಕಾಲ ಹುಡುಕಾಟ ನಡೆಸಿತ್ತು.

    ಅಮೆರಿಕ ಮತ್ತು ಚೀನಾದಲ್ಲಿನ ಉತ್ಪಾದನಾ ಕೇಂದ್ರಗಳಿಂದ ಆಮದು ಮಾಡಿಕೊಂಡ ಎಲೆಕ್ಟ್ರಿಕ್‌ ವಾಹನಗಳನ್ನು (ಇವಿಗಳು) ಕಡಿಮೆ ಸುಂಕದಲ್ಲಿ ದೇಶದಲ್ಲಿ ಮಾರಾಟ ಮಾಡುವ ಮೂಲಕ ಬೇಡಿಕೆಯ ವ್ಯಾಪ್ತಿ-ವಿಸ್ತಾರವನ್ನು ಪರೀಕ್ಷಿಸಲು ಯತ್ನಿಸಿತ್ತು. ಇದಕ್ಕಾಗಿ ಆಮದು ಸುಂಕ ಕಡಿತ ಮಾಡುವಂತೆ ಸರ್ಕಾರದ ಜೊತೆ ಸತತ 1 ವರ್ಷಗಳ ಕಾಲ ಮಾತುಕತೆಯನ್ನೂ ನಡೆಸಿತ್ತು. ಆದರೆ, ಮೇಕ್ ಇನ್ ಇಂಡಿಯಾ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಭಾರತ ಸರ್ಕಾರ ಶೇ.100 ರಷ್ಟು ಸುಂಕ ಕಡಿಮೆ ಮಾಡುವ ಬದಲು ಸ್ಥಳೀಯವಾಗಿಯೇ ಉತ್ಪಾದನೆ ಮಾಡುವಂತೆ ಕಂಪೆನಿ ಮೇಲೆ ಒತ್ತಡ ಹೇರಿತ್ತು. ಈ ಕಾರಣಗಳಿಂದಾಗಿ ಟೆಸ್ಲಾ ಭಾರತದಿಂದಲೇ ದೂರ ಉಳಿಯಲು ನಿರ್ಧರಿಸಿದೆ.

    ಇದೀಗ ಮಳಿಗೆಗೆ ಸ್ಥಳ ಹುಟುಕಾಟವನ್ನು ನಿಲ್ಲಿಸಿದ್ದು, ಭಾರತದಲ್ಲಿದ್ದ ಆ ತಂಡದ ಒಂದಿಷ್ಟು ಅಧಿಕಾರಿಗಳೂ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

  • ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಮಸ್ಕ್

    ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಮಸ್ಕ್

    ವಾಷಿಂಗ್ಟನ್: ಟ್ವಿಟ್ಟರ್ ಖರೀದಿಗೆ ಮುಂದಾಗಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿನ ನಕಲಿ ಖಾತೆ (ಸ್ಪ್ಯಾಮ್ ಖಾತೆ) ಗಳಿಗೆ ಸಂಬಂಧಿಸಿದ ವಿವರಗಳು ಬಾಕಿ ಉಳಿದಿವೆ ಎಂಬ ಕಾರಣದಿಂದ ಸದ್ಯಕ್ಕೆ ಟ್ವಿಟ್ಟರ್ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಹೇಳಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಮಸ್ಕ್, ಷೇರುಪೇಟೆ ಸಾರ್ವಜನಿಕ ವಹಿವಾಟು ಆರಂಭಕ್ಕೂ ಮುನ್ನ (ಪ್ರೀ-ಮಾರ್ಕೆಟ್ ಟ್ರೇಡಿಂಗ್) ಟ್ವಿಟರ್‌ನ ಷೇರು ಬೆಲೆ ಶೇ.18ರಷ್ಟು ಕುಸಿದಿದೆ. ಇದರೊಂದಿಗೆ ಟೆಸ್ಲಾ ಶೇ.5 ರಷ್ಟು ಜಿಗಿದಿದೆ ಎಂದು ತಮ್ಮ ಟ್ವೀಟ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಬಗೆಗಿನ ನಂಬಿಕೆ ಬದಲಾಗಿಲ್ಲ: ಮಸ್ಕ್‌ಗೆ ಕೇಂದ್ರ ಪ್ರತಿಕ್ರಿಯೆ

    _Elon Musk

    ನಿತ್ಯದ ಟ್ವಿಟ್ಟರ್ ಬಳಕೆದಾರರ ಪೈಕಿ ಶೇ.5 ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್ ಖಾತೆಗಳಿರುವುದಾಗಿ ಟ್ವಿಟ್ಟರ್ ಈ ಹಿಂದೆ ಹೇಳಿತ್ತು. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 22.9 ಕೋಟಿ ಬಳಕೆದಾರರಿಗೆ ಜಾಹೀರಾತು ಸೇವೆ ಒದಗಿಸಿತ್ತು. ಆದ್ರೆ, `ಸ್ಪ್ಯಾಮ್ ಬಾಟ್ಸ್’ (ನಕಲಿ ಖಾತೆಗಳ ಮೂಲಕ ಟ್ವೀಟ್‌ಗಳನ್ನು ಹಂಚುವ ತಾಂತ್ರಿಕ ವ್ಯವಸ್ಥೆ)ಯನ್ನು ಮೊದಲು ತೆರವುಗೊಳಿಸುವಂತೆ ಮಸ್ಕ್ ಹೇಳಿದ್ದರು. ಇದನ್ನೂ ಓದಿ: 3.36 ಲಕ್ಷ ಕೋಟಿಗೆ ಟ್ವಿಟ್ಟರ್‌ ಡೀಲ್‌ ಮಾಡಿದ ಎಲಾನ್‌ ಮಸ್ಕ್‌

    ಮಸ್ಕ್ ಅವರು ಸಾಮಾಜಿಕ ಮಾಧ್ಯಮ `ಟ್ವಿಟರ್’ ಕಂಪನಿಯನ್ನು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ.) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದಾರೆ. ಅದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ.

    ಅಕಸ್ಮಾತ್ ಟ್ವಿಟರ್ ಖರೀದಿಯಿಂದ ಹಿಂದೆ ಸರಿದರೆ, ಭಾರತದಲ್ಲಿ ಟೆಸ್ಲಾ ಕಾರು ತಯಾರಿಕೆಗೆ ಹೂಡಿಕೆ ಮಾಡುವಂತೆ ಎಲಾನ್ ಮಸ್ಕ್ ಅವರಿಗೆ ಸೀರಂ ಇನ್‌ಸ್ಟಿಟ್ಯೂಟ್‌ನ (ಎಸ್‌ಐಐ) ಸಿಇಒ ಆದಾರ್ ಪೂನಾವಾಲಾ ಇತ್ತೀಚೆಗಷ್ಟೇ ತಿಳಿಸಿದ್ದರು. ಇದನ್ನೂ ಓದಿ: ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಕೊನೆಯ ಹಂತದಲ್ಲಿದೆ ಡೀಲ್‌ ಮಾತುಕತೆ

    ಹಿಂದಿನಿಂದಲೂ ಟ್ವಿಟರ್‌ಗೆ ಹಲವು ಬದಲಾವಣೆಗಳನ್ನು ಸೂಚಿಸುತ್ತಿರುವ ಮಸ್ಕ್, ವಾಣಿಜ್ಯ ಬಳಕೆ ಮತ್ತು ಸರ್ಕಾರದ ಖಾತೆಗಳಿಗೆ ಟ್ವಿಟರ್ ಶುಲ್ಕ ವಿಧಿಸುವುದಾಗಿ ಪ್ರಕಟಿಸಿದ್ದರು. ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಉಚಿತವಾಗಿಯೇ ಇರಲಿದೆ ಎಂದಿರುವ ಅವರು, ವಾಣಿಜ್ಯ ಮತ್ತು ಸರ್ಕಾರದ ಖಾತೆಗಳಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸಬಹುದು ಎಂದು ಹೇಳಿದ್ದರು. ಇದೀಗ ತಾತ್ಕಾಲಿಕ ತಡೆ ಘೋಷಿಸಿದ್ದಾರೆ.

  • ಚೀನಾದಿಂದ ಟೆಸ್ಲಾ ಕಾರುಗಳನ್ನ ಆಮದು ಮಾಡಿಕೊಂಡು ಭಾರತದಲ್ಲಿ ಮಾರುವ ಹಾಗಿಲ್ಲ: ಗಡ್ಕರಿ

    ಚೀನಾದಿಂದ ಟೆಸ್ಲಾ ಕಾರುಗಳನ್ನ ಆಮದು ಮಾಡಿಕೊಂಡು ಭಾರತದಲ್ಲಿ ಮಾರುವ ಹಾಗಿಲ್ಲ: ಗಡ್ಕರಿ

    ನವದೆಹಲಿ: ಯುಎಸ್ ಇಲೆಕ್ಟ್ರಿಕ್ ವಾಹನ ಟೆಸ್ಲಾ ಕಂಪನಿ ಭಾರತದಲ್ಲಿ ಮಳಿಗೆಯನ್ನು ಸ್ಥಾಪಿಸುವುದಾದರೆ ಅದು ಸ್ವಾಗತರ್ಹವಾಗಿದೆ. ಆದರೆ ಕಾರುಗಳನ್ನು ಭಾರತಕ್ಕೆ ಮಾರಾಟ ಮಾಡಲು ಮತ್ತು ರಫ್ತು ಮಾಡಲು ಚೀನಾದಿಂದ ಆಮದು ಮಾಡಿಕೊಳ್ಳಬಾರದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

    ಸರ್ಕಾರಿ ಸಮ್ಮೆಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚೀನಾದಿಂದ ತಯಾರಿಸಿದ ವಾಹನಗಳನ್ನು ಇಲ್ಲಿ ಮಾರಾಟ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ಇದರಿಂದಾಗಿ ಚೀನಾದಿಂದ ಕಾರುಗಳನ್ನು ಆಮದು ಮಾಡಿಕೊಳ್ಳಬಾರದು ಎಂದರು.

    ಟೆಸ್ಲಾ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ಆಮದು ಮಾಡಿಕೊಳ್ಳಲು ಮತ್ತು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ. ಸುಂಕವನ್ನು ಕಡಿತಗೊಳಿಸಲು ಸುಮಾರು ಒಂದು ವರ್ಷಗಳ ಕಾಲ ನವದೆಹಲಿಯಲ್ಲಿ ಅಧಿಕಾರಿಗಳನ್ನು ನೇಮಿಸಿದೆ. ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ ಆಗಿದ್ದಾರೆ. ಮಸ್ಕ್‌ ಅವರು ಭಾರತದಲ್ಲಿ ಹೂಡಿಕೆ  ಮಾಡಲು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ ಎಂದು ನುಡಿದರು. ಉಕ್ರೇನ್ ರಿಟರ್ನ್ ವಿದ್ಯಾರ್ಥಿಗಳು ಶೀಘ್ರವೇ ಗುಡ್ ನ್ಯೂಸ್: ಸುಧಾಕರ್

    ಟೆಸ್ಲಾ ಭಾರತದಲ್ಲಿ ಹೂಡಿಕೆ ಮಾಡಲು ದೃಢವಾದ ಯೋಜನೆಯನ್ನು ಬಹಿರಂಗಪಡಿಸದ ಕಾರಣ ಅದರ ಪ್ರಯತ್ನಗಳು ಸ್ಥಗಿತಗೊಂಡಿವೆ. ಒಂದು ವೇಳೆ ಇದು ಕಾರ್ಯಗತವಾದರೆ ಮೇಕ್ ಇನ್ ಇಂಡಿಯಾ ಯೋಜನೆಗೆ ಪುಷ್ಠಿ ನೀಡುತ್ತದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದರು. ಮುತ್ತಿಡಲು ಹೋದಾಗ ಹಾಯಲು ಬಂದ ಹೋರಿ- ಗಲಿಬಿಲಿಗೊಂಡ ಸಿಎಂ