Tag: ಟೆಸ್ಲಾ

  • ಟ್ವಿಟ್ಟರ್‌ಗೆ ಹೊಸ CEO ನೇಮಿಸಿದ ಎಲೋನ್‌ ಮಸ್ಕ್‌ – ಯಾರು ಅನ್ನೋದು ಸಸ್ಪೆನ್ಸ್‌

    ಟ್ವಿಟ್ಟರ್‌ಗೆ ಹೊಸ CEO ನೇಮಿಸಿದ ಎಲೋನ್‌ ಮಸ್ಕ್‌ – ಯಾರು ಅನ್ನೋದು ಸಸ್ಪೆನ್ಸ್‌

    ವಾಷಿಂಗ್ಟನ್‌: ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ 44 ಶತಕೋಟಿ ಡಾಲರ್‌ಗೆ ಟ್ವಿಟ್ಟರ್‌ ಅನ್ನು ಖರೀದಿಸಿದ್ದ ಟೆಸ್ಲಾ (Tesla) ಮುಖ್ಯಸ್ಥ ಎಲೋನ್‌ ಮಸ್ಕ್ (Elon Musk) ಅಂತಿಮವಾಗಿ ಟ್ವಿಟರ್‌ಗೆ ಹೊಸ ಸಿಇಒ (Twitter CEO) ಅನ್ನು ನೇಮಿಸಿಕೊಂಡಿದ್ದಾರೆ. ಈ ಮಾಹಿತಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಟ್ವಿಟರ್‌ ಮುನ್ನಡೆಸಲು ಮಹಿಳೆಯೊಬ್ಬರು ಬರುತ್ತಾರೆ ಎಂದು ತಿಳಿಸಿದ್ದಾರೆ.

    ನಾನು ಟ್ವಿಟರ್‌ಗೆ ಹೊಸ ಸಿಇಒ ಅನ್ನು ನೇಮಕ ಮಾಡಿದ್ದೇನೆ ಎಂದು ತಿಳಿಸಲು ಉತ್ಸುಕನಾಗಿದ್ದೇನೆ. ಅವರು ಇನ್ನು 6 ವಾರಗಳಲ್ಲಿ ಸಿಇಒ ಸ್ಥಾನ ಅಲಂಕರಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದ್ರೆ ಆಕೆ ಯಾರು ಏನು? ಎಂಬುದನ್ನ ಅವರು ತಿಳಿಸಿಲ್ಲ. ಆದರೆ 6 ವಾರಗಳಲ್ಲಿ ಹೊಸ ಸಿಇಒ ಬರುತ್ತಾರೆ ಎಂಬ ಅಂಶ ಮಾತ್ರ ಟ್ವಿಟರ್‌ನಲ್ಲಿದೆ. ಎನ್‌ಬಿಸಿ ಯುನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ (Linda Yaccarino) ಟ್ವಿಟರ್‌ನ ಹೊಸ ಸಿಇಒ ಆಗಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

    ಟ್ವಿಟ್ಟರ್‌ಗೆ ಹೊಸ ಸಿಇಒ ಬಂದ ನಂತರ ಮಸ್ಕ್‌ ಕಾರ್ಯನಿರ್ವಾಹಕ ಅಧ್ಯಕ್ಷ್ಯ ಹಾಗೂ ಸಿಟಿಒ (ಚೀಫ್‌ ಟೆಕ್ನಾಲಜಿ ಆಫೀಸರ್‌) ಆಗಿ ಮುಂದುವರಿಯಲಿದ್ದಾರೆ. ಭವಿಷ್ಯದಲ್ಲಿ ಸ್ಟಾಫ್‌ವೇರ್‌ ಹಾಗೂ ಇತರ ವ್ಯವಹಾರ ನೋಡಿಕೊಳ್ಳುವುದಾಗಿ ಮಸ್ಕ್‌ ಘೋಷಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದಾಗಲೂ ಮೈಕ್ರೋಫೋನ್ ಆನ್! – ವಾಟ್ಸಪ್‌ನ ನಂಬಬೇಡಿ ಎಂದ ಮಸ್ಕ್

    ಮಸ್ಕ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟ್ವಿಟರ್‌ಗೆ ಹೊಸ ಸಿಇಒ ಹುಡುಕಲು ಯೋಜಿಸುತ್ತಿದ್ದಾರೆ ಎಂದು ಸುಮಾರು 6 ತಿಂಗಳಿನಿಂದ ಹೇಳುತ್ತಿದ್ದರು. ನಾನು ಟ್ವಿಟರ್‌ನಲ್ಲಿ ನನ್ನ ಸಮಯ ಕಡಿಮೆ ಮಾಡುತ್ತೇನೆ ಮತ್ತು ಕಾಲಾನಂತರದಲ್ಲಿ ಟ್ವಿಟರ್ ಅನ್ನು ಚಲಾಯಿಸಲು ಬೇರೆಯವರನ್ನ ಹುಡುಕುತ್ತೇನೆ ಎಂದು ಹೇಳಿದ್ದರು.

    ಯಾರಾದರೂ ಮೂರ್ಖತನ ಹೊಂದಿದವರು ಟ್ವಿಟರ್‌ ಸಿಇಒ ಹುದ್ದೆ ವಹಿಸಿಕೊಂಡ ತಕ್ಷಣ ನಾನು ರಾಜೀನಾಮೆ ನೀಡುತ್ತೇನೆ’ ಎಂದೂ ತಿಳಿಸಿದ್ದರು. ಇದನ್ನೂ ಓದಿ: ಬೆಂಗಳೂರು ಬಳಿ ಭಾರೀ ಮೊತ್ತಕ್ಕೆ ಜಾಗ ಖರೀದಿಸಿದ ಆಪಲ್‌ ಐಫೋನ್‌ ತಯಾರಕ ಫಾಕ್ಸ್‌ಕಾನ್‌

    ಮಸ್ಕ್‌ ಟ್ವಿಟ್ಟರ್‌ ಸಿಇಒ ಆದ ನಂತರ ಹಲವು ಬದಲಾವಣೆಗಳನ್ನ ತಂದಿದ್ದರು. ಉದ್ಯೋಗ ಕಡಿತಗೊಳಿಸಿದ್ದಲ್ಲದೇ, ಉದ್ಯೋಗ ಸಮಯ ಹೆಚ್ಚಿಸಿದ್ದರು. ಜೊತೆಗೆ ಬ್ಲೂ ಟಿಕ್‌ ಪಡೆಯಲು ಹಣ ಪಾವತಿಸುವ ಕ್ರಮ ಜಾರಿಗೆ ತಂದರು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

  • Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

    Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

    ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್‌ ಮಸ್ಕ್‌ (Elon Musk) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡಿದ ಬೆನ್ನಲ್ಲೇ ಟೆಸ್ಲಾ (Tesla) ಎಲೆಕ್ಟ್ರಿಕ್‌ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಮೋದಿ ಅವರನ್ನು ಫಾಲೋ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಮಸ್ಕ್‌ ಬಳಿ ನೆಟ್ಟಿಗರು ಭಾರತದಲ್ಲಿ ಇನ್ನೂ ಯಾಕೆ ಟೆಸ್ಲಾ ಕಾರು ಬಂದಿಲ್ಲ? ಕಾರು ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

    2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. 2020ರ ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿರುವ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ.



    ಮಸ್ಕ್‌ ಪ್ಲ್ಯಾನ್‌ ಏನು?
    ಟೆಸ್ಲಾ ಚೀನಾದಲ್ಲಿ(China) ದೊಡ್ಡ ಫ್ಯಾಕ್ಟರಿ ತೆರೆದಿದ್ದು ಏಷ್ಯಾ ಖಂಡದ ದೇಶಗಳಿಗೆ ಇಲ್ಲಿಂದ ಕಾರುಗಳನ್ನು ರಫ್ತು ಮಾಡಲು ಮುಂದಾಗಿದೆ. ಟೆಸ್ಲಾದ ಈ ನೀತಿಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿದೆ. ಈ ವಿಚಾರಕ್ಕೆ ಹಿಂದೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಭಾರತದಲ್ಲಿ ಕಾರನ್ನು ಟೆಸ್ಲಾ ಉತ್ಪಾದಿಸಬೇಕು. ಚೀನಾ ದೇಶದಲ್ಲಿ ಉತ್ಪಾದನೆಯಾದ ಕಾರನ್ನು ಭಾರತದಲ್ಲಿ ಮಾರಾಟ ಮಾಡಬಾರದು. ಇಲ್ಲಿ ಘಟಕ ತೆರೆಯಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದ್ದರು.

    ಭಾರತದ ವಾದವೇನು?
    2020ರ ಜೂನ್​ನಲ್ಲಾದ ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಮತ್ತು ಚೀನಾದ ಸಂಬಂಧ ಹಳಸಿದೆ. ಚೀನಾಗೆ ಸ್ಪರ್ಧೆ ನೀಡಲೆಂದೇ ಭಾರತ ಮೇಕ್‌ ಇನ್‌ ಇಂಡಿಯಾ (Make In India) ಯೋಜನೆಗೆ ಮತ್ತಷ್ಟು ವೇಗ ನೀಡುತ್ತಿದೆ. ಈ ಕಾರಣಕ್ಕೆ ಕಂಪನಿಗಳು ಭಾರತದಲ್ಲೇ ಉತ್ಪಾದನಾ ಘಟಕಗಳನ್ನು ತೆರೆಯಬೇಕು ಎಂದು ಒತ್ತಡ ಹೇರುತ್ತದೆ. ಎಲೆಕ್ಟ್ರಾನಿಕ್ಸ್‌ ಉತ್ಪನ್ನ, ಅಟೋಮೊಬೈಲ್‌ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಉತ್ಪದನಾ ಹಬ್‌ ಆಗಿ ಬೆಳೆಯಬೇಕು ಎನ್ನುವುದು ಕೇಂದ್ರದ ಕನಸು.  ಪ್ರಸ್ತುತ ವಿದೇಶದಲ್ಲಿ ಉತ್ಪಾದನೆಯಾದ ಎಲೆಕ್ಟ್ರಿಕ್‌ ಕಾರುಗಳ ಮಾರಾಟಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ ಬಾರಿ ಆಮದು ಸುಂಕವನ್ನು ಪಾವತಿಸಿದ ಬಳಿಕ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ.

    ಆಮದು ಸುಂಕ ಎಷ್ಟು?
    ಪ್ರಸ್ತುತ ಮಸ್ಕ್ ಮತ್ತು ಭಾರತ ಸರ್ಕಾರದ ಮಧ್ಯೆ ಅಮದು ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ. ವಿದೇಶದಿಂದ ಭಾರತಕ್ಕೆ ಬರುವ 40 ಲಕ್ಷ ಡಾಲರ್(ಅಂದಾಜು 30 ಲಕ್ಷ ರೂ.) ಮೌಲ್ಯದ ಎಲೆಕ್ಟ್ರಿಕ್ ವಾಹನಕ್ಕೆ ಶೇ.60 ರಷ್ಟು ತೆರಿಗೆ ವಿಧಿಸಲಾಗುತ್ತದೆ. 40 ಲಕ್ಷ ಡಾಲರ್‌ಗಿಂದ ಹೆಚ್ಚಿನ ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಶೇ.100 ರಷ್ಟು ತೆರಿಗೆ ವಿಧಿಸಲಾಗುತ್ತದೆ.

    ಮಸ್ಕ್‌ ಈ ಹಿಂದೆ ಹೇಳಿದ್ದೇನು?
    ಈ ಹಿಂದೆ 2022ರ ಜನವರಿಯಲ್ಲಿ ಭಾರತೀಯ ಟ್ವಿಟ್ಟರ್ ಬಳಕೆದಾರನೊಬ್ಬನ ಪ್ರಶ್ನೆಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡುವ ಮೂಲಕ ಟೆಸ್ಲಾ ಕಾರುಗಳನ್ನು ಮಾರಾಟ ಮಾಡುವ ಬಗ್ಗೆ ಅಪ್‍ಡೇಟ್ ನೀಡಿದ್ದರು. ಟೆಸ್ಲಾ ಕಂಪನಿ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಕಂಪನಿ ಈ ಯೋಜನೆಯ ಕುರಿತಾಗಿ ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು.

    ಕರ್ನಾಟಕದಲ್ಲಿ ಸ್ಥಾಪನೆಯಾಗುತ್ತಾ?
    ಉದ್ಯಮಿ ಎಲಾನ್‌ ಮಸ್ಕ್‌ ಮಾಲೀಕತ್ವದ ಟೆಸ್ಲಾ ಕಂಪನಿ ಕರ್ನಾಟಕದಲ್ಲಿ (Karnataka) ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು 2021ರಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದರು.

    ತುಮಕೂರು ಜಿಲ್ಲೆಯಲ್ಲಿ 7,725 ಕೋಟಿ ರೂ. ವೆಚ್ಚದಲ್ಲಿ ಟೆಸ್ಲಾ ಉತ್ಪಾದನಾ ಘಟಕವನ್ನು ತೆರೆಯಲಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ʼಟೆಸ್ಲಾ ಇಂಡಿಯಾ ಮೋಟಾ​ರ್ಸ್‌ʼ ಹೆಸರಿನಲ್ಲಿ ಕಂಪನಿಯನ್ನು ನೋಂದಣಿ ಮಾಡುವ ಜೊತೆಗೆ ಮೂರು ನಿರ್ದೇಶಕರನ್ನೂ ನೇಮಿಸಲಾಗಿದೆ ಎಂದು ವರದಿಯಾಗಿತ್ತು.  ಇದನ್ನೂ ಓದಿ: ಭಾರತದಲ್ಲಿ ಟ್ವಿಟ್ಟರ್‌ ತುಂಬಾ ನಿಧಾನ – ಎಲೋನ್‌ ಮಸ್ಕ್‌

    ಅಮೆರಿಕ ಮತ್ತು ಚೀನಾದಲ್ಲಿನ ಉತ್ಪಾದನಾ ಕೇಂದ್ರಗಳಿಂದ ಆಮದು ಮಾಡಿಕೊಂಡ ಎಲೆಕ್ಟ್ರಿಕ್‌ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುವ ಮೂಲಕ ಬೇಡಿಕೆಯ ವ್ಯಾಪ್ತಿ-ವಿಸ್ತಾರವನ್ನು ಪರೀಕ್ಷಿಸಲು ಟೆಸ್ಲಾ ಯತ್ನಿಸಿತ್ತು. ಇದಕ್ಕಾಗಿ ಆಮದು ಸುಂಕ ಕಡಿತ ಮಾಡುವಂತೆ ಸರ್ಕಾರದ ಜೊತೆ ಸತತ 1 ವರ್ಷಗಳ ಕಾಲ ಮಾತುಕತೆಯನ್ನೂ ನಡೆಸಿತ್ತು. ಆದರೆ, ಮೇಕ್ ಇನ್ ಇಂಡಿಯಾ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಭಾರತ ಸರ್ಕಾರ ಶೇ.100 ರಷ್ಟು ಸುಂಕ ಕಡಿಮೆ ಮಾಡುವ ಬದಲು ಸ್ಥಳೀಯವಾಗಿಯೇ ಉತ್ಪಾದನೆ ಮಾಡುವಂತೆ ಕಂಪನಿ ಮೇಲೆ ಒತ್ತಡ ಹೇರಿತ್ತು. ಈ ಕಾರಣಗಳಿಂದಾಗಿ ಟೆಸ್ಲಾ ಭಾರತದಿಂದಲೇ ದೂರ ಉಳಿಯಲು ನಿರ್ಧರಿಸಿತ್ತು.

    ಪ್ರಸ್ತುತ ವಿಶ್ವದಲ್ಲೇ ಭಾರತದ ದೊಡ್ಡ ಮಾರುಕಟ್ಟೆಯಾಗಿದ್ದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೇ ಚೀನಾ ಮತ್ತು ಅಮೆರಿಕದ ಸಂಬಂಧ ಮತ್ತಷ್ಟು ಹಾಳಾಗಿದೆ. ಈ ಕಾರಣಕ್ಕೆ ಮಸ್ಕ್‌ ಭಾರತದಲ್ಲಿ ಟೆಸ್ಲಾ ಘಟಕವನ್ನು ತೆರೆಯಲು ಈಗ ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ.

    ಮಾಡೆಲ್‌ 3 ಕಾರಿನ ವಿಶೇಷತೆಗಳು ಏನು?
    ಇಂದಿನ ವರೆಗೆ ಟೆಸ್ಲಾದಿಂದ ಬಿಡುಗಡೆ ಹೊಂದಿದ ಕಾರುಗಳಲ್ಲಿ ಅತ್ಯಂತ ಒಳ್ಳೆಯ ಮಾದರಿ ಇದಾಗಿದ್ದು, ಈ ಕಾರನ್ನು 2017ರಲ್ಲಿ ವಿಶ್ವದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ. ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ ಈ ಕಾರಿಗೆ ಪಡೆದುಕೊಂಡಿದೆ. ಎರಡು ಮಾದರಿಯಲ್ಲಿ ಮಾಡೆಲ್ 3 ಕಾರು ಬಿಡುಗಡೆಯಾಗಿದೆ. ಲಾಂಗ್ ರೇಂಜ್ ಮಾದರಿಯ ಕಾರು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಕ್ರಮಿಸಿದರೆ, ಸ್ಟಾಡಂರ್ಡ್ ಮಾದರಿಯ ಕಾರು 354 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. 15 ನಿಮಿಷದಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಗರಿಷ್ಟ 162 ಕೀ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಕಾರಿಗಿದೆ.

    ಸ್ಟಾರ್‌ಲಿಂಕ್‌ಗೆ ಅನುಮತಿ ಇಲ್ಲ
    ಮಸ್ಕ್ ಅವರ ಸ್ಟಾರ್‌ಲಿಂಕ್‌ (Starlink) ಕಂಪನಿ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ನೀಡಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರದ ಜೊತೆಕಂಪನಿ ಈ ಯೋಜನೆ ಜಾರಿ ಸಂಬಂಧ ಯಾವುದೇ ಮಾತುಕತೆ ನಡೆಸಿರಲಿಲ್ಲ. ಹೀಗಾಗಿ ಈ ಸೇವೆ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿತ್ತು.

  • Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

    Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

    ವಾಷಿಂಗ್ಟನ್‌: ಟೆಸ್ಲಾ (Tesla) ಮುಖ್ಯಸ್ಥ ಹಾಗೂ ಟ್ವಿಟ್ಟರ್‌ ಸಿಇಒ ಎಲೋನ್‌ ಮಸ್ಕ್‌ (Elon Musk) ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಈ ವಿಷಯ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

    87.7 ಮಿಲಿಯನ್ ಫಾಲೋವರ್ಸ್​ಗಳನ್ನ ಹೊಂದಿರುವ ಪ್ರಧಾನಿ ಮೋದಿ ಅವರನ್ನು ಟ್ವಿಟರ್‌ನಲ್ಲಿ (Twitter) ಅತಿ ಹೆಚ್ಚು ಫಾಲೋ ಮಾಡುತ್ತಿರುವ ವಿಶ್ವ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇದೀಗ ಮೋದಿಯನ್ನು ಟ್ವಿಟರ್​ ಸಿಇಒ ಎಲೋನ್ ಮಸ್ಕ್ ಫಾಲೋ ಮಾಡುತ್ತಿದ್ದಾರೆ. ಇದನ್ನೂಓದಿ: ಪೊಲೀಸರ ಬಂಧನದಿಂದ ಎಸ್ಕೇಪ್ ಆಗಿದ್ದ ಅಮೃತ್‌ಪಾಲ್ ಸಿಂಗ್‌ನ ಆಪ್ತ ಸಹಾಯಕ ಅರೆಸ್ಟ್ 

    ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಕೇವಲ 195 ಜನರನ್ನ ಮಾತ್ರ ಫಾಲೋ ಮಾಡುತ್ತಿರುವ ಎಲೋನ್ ಮಸ್ಕ್ 134.3 ಮಿಲಿಯನ್ ಫಾಲೋವರ್ಸ್​ಗಳನ್ನ ಹೊಂದಿದ್ದಾರೆ. ಮಾರ್ಚ್ ಕೊನೆಯಲ್ಲಿ ಮಸ್ಕ್, ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನ ಹಿಂದಿಕ್ಕಿ ಹೆಚ್ಚು ಫಾಲೋವರ್ಸ್​ಗಳನ್ನ ಹೊಂದಿದವರು ಎನಿಸಿಕೊಂಡಿದ್ದರು. ಇದೀಗ 87.7 ಮಿಲಿಯನ್ ಫಾಲೋವರ್ಸ್​ಗಳನ್ನ ಹೊಂದಿರುವ ಪ್ರಧಾನಿ ಮೋದಿ ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿರುವ ಪ್ರಭಾವಿಗಳಲ್ಲಿ ಎಲೋನ್‌ ಮಸ್ಕ್‌ ಒಬ್ಬರಾಗಿದ್ದಾರೆ.

    ಈ ವಿಚಾರ ಇದೀಗ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಕೆಲವರು ಮಸ್ಕ್‌ ಮೋದಿಯನ್ನ ಫಾಲೋ ಮಾಡಲು ಕಾರಣವೇನು ಎಂದು ಪ್ರಶ್ನಿಸಿದ್ದು, ಮಸ್ಕ್, ಮೋದಿಯನ್ನ ಫಾಲೋ ಮಾಡ್ತಿದ್ದಾರೆ ಅಂದ್ರೆ ಶೀಘ್ರದಲ್ಲೇ ಟೆಸ್ಲಾ ಭಾರತಕ್ಕೆ ಬರುತ್ತೆ ಎಂದರ್ಥ ಎಂದು ಮತ್ತೊಬ್ಬರು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂಓದಿ: ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ: ಅಮಿತ್ ಶಾ 

  • ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ

    ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ

    ವಾಷಿಂಗ್ಟನ್: ಸೀಟ್‌ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತವಾಗಿ (Loose Bolts) ಮತ್ತು ಬಿಗಿಯಾಗಿಲ್ಲ ಎಂದು ಕಾರಣ ನೀಡಿ ಟೆಸ್ಲಾ (Tesla) ಕಂಪನಿ 3,470 ಕಾರುಗಳನ್ನ ಹಿಂದಕ್ಕೆ ಪಡೆದಿದೆ.

    ಅಮೆರಿಕದಲ್ಲಿ ಬಿಡುಗಡೆ ಮಾಡಿದ `ಮಾಡೆಲ್ ವೈ’ (Model Y) 2ನೇ ಸಾಲಿನಲ್ಲಿರುವ ಸೀಟ್ ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತವಾಗಿಲ್ಲ ಎಂದು ಶನಿವಾರ ಹೇಳಿದೆ. ಇದನ್ನೂ ಓದಿ: ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

    ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (NHTSA) ಈ ಬಗ್ಗೆ ಪ್ರತಿಕ್ರಿಯಿಸಿ, ಸಡಿಲವಾದ ಸೀಟ್ ಫ್ರೇಮ್ ಬೋಲ್ಟ್, ಸೀಟ್ ಬೆಲ್ಟ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಕಡಿಮೆಮಾಡುತ್ತದೆ. ಜೊತೆಗೆ ಅಪಘಾತದ ಸಮಯದಲ್ಲಿ ಗಾಯ ಹಾಗೂ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಓಲಾದಿಂದ 7,614 ಕೋಟಿ ಹೂಡಿಕೆ- ಸಿಎಂ ಸ್ಟಾಲಿನ್‌ ಸಹಿ

    Elon Musk

    ಈ ಬಗ್ಗೆ ಪರಿಶೀಲಿಸುವುದಾಗಿ ಟೆಸ್ಲಾ ಹೇಳಿದೆ. 2ನೇ ಸಾಲಿನ ಡ್ರೈವರ್ ಸೈಡ್ ಮತ್ತು ಪ್ಯಾಸೆಂಜರ್ ಸೈಡ್ ಸೀಟ್ ಬ್ಯಾಕ್ ಫ್ರೇಮ್‌ಗಳ ಬೋಲ್ಟ್ಗಳನ್ನು ಪರಿಶೀಲಿಸಲಾಗುತ್ತದೆ. ಅಗತ್ಯವಿದ್ದರೆ ಅವುಗಳನ್ನು ಸುರಕ್ಷಿತಗೊಳಿಸುವ (ಬಿಗಿಗೊಳಿಸುವ) ಕೆಲಸ ಮಾಡುತ್ತದೆ ಎಂದು ತಿಳಿಸಿದೆ.

  • ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

    ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

    ವಾಷಿಂಗ್ಟನ್: ಕಳೆದ 2 ತಿಂಗಳ ಹಿಂದೆ ವಿಶ್ವದ ಶ್ರೀಮಂತ ವ್ಯಕ್ತಿಗಳ (World’s Richest Person) ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಇಳಿದಿದ್ದ ಟೆಸ್ಲಾ (Tesla) ಹಾಗೂ ಟ್ವಿಟ್ಟರ್ (Twitter) ಸಿಇಒ ಎಲೋನ್ ಮಸ್ಕ್ (Elon Musk) ಇದೀಗ ಮತ್ತೆ ನಂ.1 ಸ್ಥಾನವನ್ನು ಮರಳಿ ಪಡೆದಿದ್ದಾರೆ.

    ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಪ್ರಕಾರ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರಳಿ ಪಡೆದಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಫ್ರೆಂಚ್ ಐಷಾರಾಮಿ ಬ್ರ‍್ಯಾಂಡ್ ಲೂಯಿ ವಿಟಾನ್‌ನ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರು ಎಲೋನ್ ಮಸ್ಕ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನವನ್ನು ಪಡೆದಿದ್ದರು. ಇದೀಗ 2 ತಿಂಗಳು ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಮಸ್ಕ್ ಮತ್ತೆ ಮೊದಲನೇ ಸ್ಥಾನಕ್ಕೆ ಮರಳಿದ್ದಾರೆ.

    ವರದಿಗಳ ಪ್ರಕಾರ ಈ ವರ್ಷ ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯ ಶೇ.70 ರಷ್ಟು ಏರಿಕೆಯಾಗಿರುವುದೇ ಮಸ್ಕ್ ಮತ್ತೆ ತಮ್ಮ ಸ್ಥಾನವನ್ನು ಮರಳಿ ಪಡೆಯಲು ಕಾರಣವಾಗಿದೆ. ಅಂದಾಜಿನ ಪ್ರಕಾರ ಸೋಮವಾರ ಷೇರು ಪೇಟೆ ಮುಕ್ತಾಯವಾದ ಬಳಿಕ ಮಸ್ಕ್ ಸಂಪತ್ತಿನ ಮೌಲ್ಯ 187.1 ಬಿಲಿಯನ್ ಡಾಲರ್ (ಸುಮಾರು 15.46 ಲಕ್ಷ ಕೋಟಿ ರೂ.) ಆಗಿದ್ದು, 185.3 ಬಿಲಿಯನ್ ಡಾಲರ್ (ಸುಮಾರು 15.29 ಲಕ್ಷ ಕೋಟಿ ರೂ.) ಸಂಪತ್ತಿನ ಮೌಲ್ಯ ಹೊಂದಿರುವ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಕುಸಿದ ಅದಾನಿ

    ಈಗ ಮೊದಲ ಸ್ಥಾನ ಏರಿದರೂ ಟೆಸ್ಲಾ ಮುಖ್ಯಸ್ಥನ ನಿವ್ವಳ ಸಂಪತ್ತಿನ ಮೌಲ್ಯ ಕಳೆದ ವರ್ಷ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ 200 ಶತಕೋಟಿ ಡಾಲರ್‌ಗಿಂತಲೂ ಕಡಿಮೆಯಾಗಿದೆ. ಇದು ಇತ್ತೀಚಿನ ಇತಿಹಾಸದಲ್ಲೇ ಅತಿ ದೊಡ್ಡ ಸಂಪತ್ತಿನ ನಷ್ಟಗಳಲ್ಲಿ ಒಂದಾಗಿದೆ.

    ಇದೆಲ್ಲದರ ನಡುವೆ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಅವರು ಕಂಪನಿಯಲ್ಲಿ ವೆಚ್ಚವನ್ನು ಕಡಿತಗೊಳಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ. 44 ಬಿಲಿಯನ್ ಡಾಲರ್ ಖರ್ಚು ಮಾಡಿ ಟ್ವಿಟ್ಟರ್ ಅನ್ನು ಖರೀದಿಸಿದ ಮಸ್ಕ್ ಕಂಪನಿ ದಿನಕ್ಕೆ ಸುಮಾರು 4 ಮಿಲಿಯನ್ ಡಾಲರ್ ನಷ್ಟವನ್ನು ಅನುಭವಿಸುತ್ತಿದೆ ಎಂದು ನವೆಂಬರ್‌ನಲ್ಲಿ ತಿಳಿಸಿದ್ದರು. ಈ ಹಿನ್ನೆಲೆ ಅವರು ಕಂಪನಿಯ ಅರ್ಧಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಇದನ್ನೂ ಓದಿ: ಕೇವಲ 2 ತಿಂಗಳಿನಲ್ಲಿ ಟೆಕ್ ಕಂಪನಿಗಳಿಂದ 1.2 ಲಕ್ಷಕ್ಕೂ ಮಂದಿ ವಜಾ

  • 80 ಸಾವಿರಕ್ಕೂ ಅಧಿಕ ಕಾರನ್ನು ಹಿಂದಕ್ಕೆ ಪಡೆದ ಟೆಸ್ಲಾ

    80 ಸಾವಿರಕ್ಕೂ ಅಧಿಕ ಕಾರನ್ನು ಹಿಂದಕ್ಕೆ ಪಡೆದ ಟೆಸ್ಲಾ

    ಬೀಜಿಂಗ್‌: ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ(Tesla) ಕಂಪನಿಯೂ ಚೀನಾದಲ್ಲಿ ಉತ್ಪಾದನೆಯಾದ 80 ಸಾವಿರಕ್ಕೂ ಅಧಿಕ ಕಾರು ಹಿಂದಕ್ಕೆ ಪಡೆದಿದೆ.

    ಸಾಫ್ಟ್‌ವೇರ್‌ ಮತ್ತು ಸೀಟ್‌ ಬೆಲ್ಟ್‌ನಲ್ಲಿ ದೋಷ ಇರುವ ಹಿನ್ನೆಲೆಯಲ್ಲಿ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಚೀನಾದ ಮಾರುಕಟ್ಟೆ ನಿಯಂತ್ರಕಕ್ಕೆ(Chinese Market Regulator) ಟೆಸ್ಲಾ ತಿಳಿಸಿದೆ. ಇದನ್ನೂ ಓದಿ: ಗೂಗಲ್‌ನ 10 ಸಾವಿರ ಉದ್ಯೋಗಿಗಳು ಮನೆಗೆ

    2013ರ ಸೆ.25 ರಿಂದ 2020 ನ.21ರವರೆಗೆ ಉತ್ಪಾದನೆಯಾದ 67,698 ಮಾಡೆಲ್‌ ಎಸ್‌, ಮಾಡೆಲ್‌ ಎಕ್ಸ್‌(Model S, Model X) ಕಾರುಗಳಲ್ಲಿ ಸಾಫ್ಟ್‌ವೇರ್‌ ಸಮಸ್ಯೆಯಿಂದ ಬ್ಯಾಟರಿ ನಿರ್ವಹಣೆಯಲ್ಲಿ ಸಮಸ್ಯೆ ಬರುತ್ತಿರುವ ಹಿನ್ನೆಲೆಯಲ್ಲಿ ಟೆಸ್ಲಾ ಈ ಕ್ರಮಕ್ಕೆ ಮುಂದಾಗಿದೆ. ಹಿಂದಕ್ಕೆ ಪಡೆದ ಕಾರುಗಳ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಲಾಗುವುದು ಎಂದು ಟೆಸ್ಲಾ ಹೇಳಿದೆ.

    ಏಪ್ರಿಲ್‌ನಲ್ಲಿ ಉತ್ಪಾದನೆಯಾದ ಚೀನಾ ಮೇಡ್‌ ಮಾಡೆಲ್‌ 3 ಕಾರಿನ ಸೆಮಿಕಂಡಕ್ಟರ್‌ನಲ್ಲಿ ದೋಷ ಇರುವ ಹಿನ್ನೆಲೆಯಲ್ಲಿ ಟೆಸ್ಲಾ ಕಂಪನಿ 1,27,785 ಕಾರನ್ನು ಹಿಂದಕ್ಕೆ ಪಡೆದಿತ್ತು.

    China, Tesla, Automobile, Elon musk

    Live Tv
    [brid partner=56869869 player=32851 video=960834 autoplay=true]

  • ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿದಂತೆ ಪ್ರಮುಖರು ವಜಾ

    ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿದಂತೆ ಪ್ರಮುಖರು ವಜಾ

    ವಾಷಿಂಗ್ಟನ್‌: ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್‌ ಮಸ್ಕ್‌(Elon Musk) ಟ್ವಿಟ್ಟರ್‌ ಕಂಪನಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ಸಿಇಒ ಪರಾಗ್‌ ಅಗರ್‌ವಾಲ್‌ ಮತ್ತು ಅದರ ಉನ್ನತ ಅಧಿಕಾರಿಗಳನ್ನು ವಜಾಗೊಳಿಸಿದ್ದಾರೆ.

    ಟ್ವಿಟರ್(Twitter) ಸಿಇಒ ಪರಾಗ್ ಅಗರ್‌ವಾಲ್‌(Parag Agarwal) ಜೊತೆ ಕಾನೂನು, ನೀತಿ ಮತ್ತು ಟ್ರಸ್ಟ್ ಮುಖ್ಯಸ್ಥರಾದ ವಿಜಯ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಸೇರಿದಂತೆ ಪ್ರಮುಖರನ್ನು ವಜಾ ಮಾಡಲಾಗಿದೆ ಎಂದು ವರದಿಯಾಗಿದೆ.

    ಕಂಪನಿಯ ಸಿಇಒ ಜಾಕ್‌ ಡೋರ್ಸೆ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತೀಯ ಮೂಲದ ಪರಾಗ್‌ ಅಗರ್‌ವಾಲ್‌ ಕಂಪನಿಯ ಸಿಇಒ ಸ್ಥಾನವನ್ನು ಅಲಂಕರಿಸಿದ್ದರು. ಇದನ್ನೂ ಓದಿ: ಹೌದು, ನಾವು ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸುತ್ತವೆ – ಟ್ವಿಟ್ಟರ್‌ ಉದ್ಯೋಗಿಯ ವೀಡಿಯೋ ವೈರಲ್‌

    ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald Trump) ಅವರನ್ನು ಟ್ವಿಟ್ಟರ್‌ನಿಂದ ಶಾಶ್ವತವಾಗಿ ಗೇಟ್‌ಪಾಸ್‌ ನೀಡುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಜಯ ಗದ್ದೆ ಪ್ರಮುಖ ಪಾತ್ರವನ್ನು ವಹಿಸಿದ್ದರು.

    ಟ್ವಿಟ್ಟರ್‌ ಕಂಪನಿ ತಮ್ಮ ತೆಕ್ಕೆ ಬಂದ ಬೆನ್ನಲ್ಲೇ ಮಸ್ಕ್‌ ಹಕ್ಕಿ ಈಗ ಮುಕ್ತವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

    ಮಸ್ಕ್ ಅವರು ಕಳೆದ ಏಪ್ರಿಲ್‌ನಲ್ಲಿ ಟ್ವಿಟ್ಟರ್‌’ ಕಂಪನಿಯನ್ನು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ.) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದರು. ಅದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದರು.  ಇದನ್ನೂ ಓದಿ: ಪತ್ರಿಕಾ ಅಂಕಣದಿಂದಾಗಿ ಟ್ವಿಟ್ಟರ್‌ ಕಂಪನಿ ಖರೀದಿಗೆ ಮುಂದಾದ್ರಾ ಮಸ್ಕ್‌?

    ನಿತ್ಯದ ಟ್ವಿಟ್ಟರ್ ಬಳಕೆದಾರರ ಪೈಕಿ ಶೇ.5 ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್ ಖಾತೆಗಳಿರುವುದಾಗಿ ಟ್ವಿಟ್ಟರ್ ಈ ಹಿಂದೆ ಹೇಳಿತ್ತು. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 22.9 ಕೋಟಿ ಬಳಕೆದಾರರಿಗೆ ಜಾಹೀರಾತು ಸೇವೆ ಒದಗಿಸಿತ್ತು. ಆದರೆ ಸ್ಪ್ಯಾಮ್ ಬಾಟ್ಸ್ (ನಕಲಿ ಖಾತೆಗಳ ಮೂಲಕ ಟ್ವೀಟ್‌ಗಳನ್ನು ಹಂಚುವ ತಾಂತ್ರಿಕ ವ್ಯವಸ್ಥೆ)ಯನ್ನು ಮೊದಲು ತೆರವುಗೊಳಿಸುವಂತೆ ಮಸ್ಕ್ ಬೇಡಿಕೆ ಇಟ್ಟಿದ್ದರು. ತನ್ನ ಬೇಡಿಕೆಗೆ ಸರಿಯಾದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮಸ್ಕ್‌ ಟ್ವಿಟ್ಟರ್‌ ಖರೀದಿ ಪ್ರಕ್ರಿಯೆಯನ್ನೇ ರದ್ದು ಮಾಡಿದ್ದರು.

    ಮಸ್ಕ್‌ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿದ ಬೆನ್ನಲ್ಲೇ ಟ್ವಿಟ್ಟರ್‌ ಷೇರು ಮೌಲ್ಯ ಭಾರೀ ಕುಸಿತ ಕಂಡಿತ್ತು. ಒಪ್ಪಂದದ ನಿಯಮಗಳ ಪ್ರಕಾರ ಎಲೋನ್ ಮಸ್ಕ್‌ ವಹಿವಾಟನ್ನು ಪೂರ್ಣಗೊಳಿಸದಿದ್ದರೆ 1 ಶತಕೋಟಿ ಡಾಲರ್‌ ಬ್ರೇಕಪ್ ಶುಲ್ಕವನ್ನು ಪಾವತಿಸಬೇಕಾಗಿತ್ತು. ಈ ಬ್ರೇಕಪ್‌ ಶುಲ್ಕ ಪಾವತಿಸುವ ಸಂಬಂಧ ಟ್ವಿಟ್ಟರ್‌ ಈಗ ಕೋರ್ಟ್‌ ಮೊರೆ ಹೋಗಿತ್ತು. ಅಷ್ಟೇ ಅಲ್ಲದೇ ಟ್ವಿಟ್ಟರ್‌ ಷೇರು ಮೌಲ್ಯ ಕಡಿಮೆಯಾಗಲು ಮಸ್ಕ್‌ ನಿರ್ಧಾರವೇ ಕಾರಣ ಎಂದು ಆರೋಪಿಸಿತ್ತು. ಈ ಎಲ್ಲಾ ಬೆಳವಣಿಗೆಯ ಮಧ್ಯೆ ಮಸ್ಕ್‌ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

    ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

    ವಾಷಿಂಗ್ಟನ್: ಟೆಸ್ಲಾ (Tesla) ಮುಖ್ಯಸ್ಥ ಎಲಾನ್ ಮಸ್ಕ್ (Elon Musk), 44 ಶತಕೋಟಿ ಡಾಲರ್ ಮೊತ್ತದ ಟ್ವೀಟ್ ಖರೀದಿ ಪ್ರಕ್ರಿಯೆ ಮುಗಿಯುವ ಮೊದಲೇ ತಮ್ಮನ್ನು ತಾವು ಟ್ವಿಟರ್ (Twitter) ಮುಖ್ಯಸ್ಥ ಎಂದು ಘೋಷಿಸಿಕೊಂಡಿದ್ದು, ಟ್ವಿಟ್ಟರ್ ಬಯೋ ಬದಲಿಸಿದ್ದಾರೆ.

    ಟೆಸ್ಲಾ ಕಂಪನಿಯ ಸಿಇಒ (CEO) ಎಲಾನ್ ಮಸ್ಕ್ ಸ್ಯಾನ್‌ಫ್ರಾನ್ಸಿಸ್ಕೊ (San Francisco) ನಗರದಲ್ಲಿರುವ ಟ್ವಿಟರ್ ಕಂಪನಿಯ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಕೈ ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಕಚೇರಿಗೆ ತಂದರು. ಟ್ವಿಟ್ಟರ್ (Twitter) ಕಚೇರಿಗೆ ಹೋಗುತ್ತಿದ್ದೇನೆ. ಅದು ನನ್ನೊಂದಿಗೆ ಬೆರೆತುಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 3.36 ಲಕ್ಷ ಕೋಟಿಗೆ ಟ್ವಿಟ್ಟರ್‌ ಡೀಲ್‌ ಮಾಡಿದ ಎಲಾನ್‌ ಮಸ್ಕ್‌

    _Elon Musk

    ಮಸ್ಕ್ ಭೇಟಿಗೂ ಮುನ್ನ ಟ್ವಿಟ್ಟರ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ, ಲೆಸ್ಲಿ ಬರ್‌ಲೆಂಡ್ ಎಲ್ಲ ಸಿಬ್ಬಂದಿಗೂ ಕಳಿಸಿದ್ದ ಇಮೇಲ್‌ನಲ್ಲಿ ವಹಿವಾಟು ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಟ್ವಿಟ್ಟರ್‌ನ ಸ್ಯಾನ್‌ಫ್ರಾನ್ಸಿಸ್ಕೊ ಕಚೇರಿಗೆ ಮಸ್ಕ್ ಬರಲಿದ್ದಾರೆ ಎಂದು ಹೇಳಿದ್ದರು. ಟ್ವಿಟ್ಟರ್ ಖರೀದಿ ಪ್ರಕ್ರಿಯೆಯು ಕಳೆದ ಏಪ್ರಿಲ್ ತಿಂಗಳಿಂದ ಚರ್ಚೆಯಲ್ಲಿದೆ. ಹಲವು ನಾಟಕೀಯ ಬೆಳವಣಿಗೆಗಳೂ ನಡೆದವು. ನಕಲಿ ಖಾತೆಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ, ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಟ್ವಿಟರ್‌ನ ಉನ್ನತ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಮಸ್ಕ್ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.

    ಇದನ್ನು ವಿರೋಧಿಸಿ ಟ್ವಿಟ್ಟರ್‌ ಮಸ್ಕ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿತ್ತು. ಖರೀದಿ ಒಪ್ಪಂದ ಉಲ್ಲಂಘಿಸಲು ಮಸ್ಕ್ ನಕಲಿ ಖಾತೆಗಳ ನೆಪ ಹೇಳುತ್ತಿದ್ದಾರೆ ಎಂದು ಟ್ವಿಟರ್ ಆರೋಪಿಸಿತ್ತು. ಇದನ್ನೂ ಓದಿ: ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ – 10 ಕೋಟಿಗೆ ಬೇಡಿಕೆ ಇಟ್ಟಿತ್ತಾ ಮಹಿಳೆ ಆ್ಯಂಡ್ ಟೀಂ?

    ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಅಕ್ಟೋಬರ್ 28ಕ್ಕೆ ಮುಂದೂಡಿ, ಅಷ್ಟರಲ್ಲಿ ವಹಿವಾಟು ಅಂತಿಮ ಘಟ್ಟಕ್ಕೆ ಬರಬೇಕು ಎಂದಿದ್ದರು. ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಮಸ್ಕ್ ಅವರಿಗೆ ಇನ್ನು ಕೇವಲ ಒಂದು ದಿನದ ಅವಕಾಶವಿದೆ ಎಂದು ಹೇಳಿತ್ತು. ಹಾಗಾಗಿ ಮಸ್ಕ್ ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಮಸ್ಕ್ ಟ್ವಿಟ್ಟರ್ ಮುಖ್ಯಸ್ಥರಾಗುತ್ತಿದ್ದಂತೆ ಸುಮಾರು ಒಂದು ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುವುದು ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಟ್ವಿಟ್ಟರ್ ಡೀಲ್ ರದ್ದು ಮಾಡುವ ಮೊದಲೇ ಪರಾಗ್‍ಗೆ ಮೆಸೇಜ್ ಮಾಡಿದ್ದ ಮಸ್ಕ್

    ಟ್ವಿಟ್ಟರ್ ಡೀಲ್ ರದ್ದು ಮಾಡುವ ಮೊದಲೇ ಪರಾಗ್‍ಗೆ ಮೆಸೇಜ್ ಮಾಡಿದ್ದ ಮಸ್ಕ್

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಟ್ವಿಟ್ಟರ್ ನಡುವಿನ ವಿವಾದ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಕಲಿ ಖಾತೆಗಳ ಬಗ್ಗೆ ಅಧಿಕೃತ ಮಾಹಿತಿ ನೀಡದ್ದಕ್ಕೆ ಮಸ್ಕ್ ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನೇ ರದ್ದು ಮಾಡಿದ್ದಾರೆ.

    ಈಗ ಬಂದಿರುವ ಹೊಸ ಸುದ್ದಿಗಳ ಪ್ರಕಾರ ಈ ಡೀಲ್ ರದ್ದು ಮಾಡುವ ಮೊದಲೇ ಮಸ್ಕ್ ಟ್ವಿಟ್ಟರ್ ಸಿಇಒ ಪರಾಗ್ ಅಗರವಾಲ್ ಮಸ್ಕ್ ಸಂದೇಶ ಕಳುಹಿಸಿದ್ದರು. ಜೂನ್ 28 ರಂದೇ ಮಸ್ಕ್ ಪರಾಗ್ ಅಗರವಾಲ್ ಅವರಿಗೆ ಮೆಸೇಜ್ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಟ್ವಿಟ್ಟರ್‌ ಖರೀದಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಮಸ್ಕ್‌

    _Elon Musk

    ಟ್ವಿಟ್ಟರ್ ಸಿಇಒ ಪರಾಗ್ ಅಗರವಾಲ್ ಅವರಿಗೆ ಟ್ವಿಟ್ಟರ್ ವಕೀಲರ ಬಗ್ಗೆ ಬರೆದು ಒಂದು ಪತ್ರವನ್ನು ಕಳುಹಿಸಿದ್ದಾರೆ. ಈ ಪತ್ರದಲ್ಲಿ ಮಸ್ಕ್, ಹಣಕಾಸಿನ ವಿವರಗಳ ಬಗ್ಗೆ ಮಾಹಿತಿ ಕೇಳಿದ ನಂತರ ಟ್ವಿಟ್ಟರ್ ವಕೀಲರು ನಮಗೆ ತೊಂದರೆ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದರು.

    ನಿಮ್ಮ ವಕೀಲರು ಕೆಲವು ಸಂಭಾಷಣೆಗಳನ್ನು ಇಟ್ಟುಕೊಂಡು ನಮಗೆ ತೊಂದರೆ ಉಂಟುಮಾಡಲು ಬಯಸುತ್ತಿದ್ದಾರೆ. ಅದನ್ನು ನಿಲ್ಲಿಸುವುದು ಅಗತ್ಯವಿದೆ ಎಂದು ಬರೆದು ಕಳುಹಿಸಿದ್ದಾರೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ

    ಮಸ್ಕ್ ಅವರು ಸಾಮಾಜಿಕ ಮಾಧ್ಯಮ `ಟ್ವಿಟ್ಟರ್’ ಕಂಪನಿಯನ್ನು 44 ಬಿಲಿಯನ್ ಡಾಲರ್(55,14,78,840) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದರು. ಆದರೆ ಅದರಿಂದ ಹಿಂದೆ ಸರಿಯಲು ನಿರ್ಧರಿಸಿದ ನಂತರ ಟ್ವಿಟ್ಟರ್, ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದೆ.

    Live Tv
    [brid partner=56869869 player=32851 video=960834 autoplay=true]

  • ದತ್ತುಪುತ್ರಿಯೊಂದಿಗೆ ರಹಸ್ಯ ಮಗು ಹೊಂದಿದ್ದ 76 ವರ್ಷದ ಎಲಾನ್ ಮಸ್ಕ್ ತಂದೆ

    ದತ್ತುಪುತ್ರಿಯೊಂದಿಗೆ ರಹಸ್ಯ ಮಗು ಹೊಂದಿದ್ದ 76 ವರ್ಷದ ಎಲಾನ್ ಮಸ್ಕ್ ತಂದೆ

    ವಾಷಿಂಗ್ಟನ್: ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಅವರ 76 ವರ್ಷದ ತಂದೆ ತನ್ನ ದತ್ತುಪುತ್ರಿಯೊಂದಿಗೆ ಮಗು ಹೊಂದಿದ್ದ ರಹಸ್ಯ ಇದೀಗ ಬಯಲಾಗಿದೆ.

    ಕಳೆದ ಮೂರು ವರ್ಷಗಳಿಂದ ಅವರೊಂದಿಗೆ ಸಂಪರ್ಕದಲ್ಲಿದ್ದು, 35 ವರ್ಷದ ದತ್ತುಪುತ್ರಿ ಜಾನಾ ಬೆಜುಡೆನ್‌ಹೌಟ್‌ನೊಂದಿಗೆ ರಹಸ್ಯವಾಗಿ 2ನೇ ಮಗು ಹೊಂದಿರುವ ಮಾಹಿತಿ ಬಹಿರಂಗವಾಗಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಎರೋಲ್ ಮಸ್ಕ್ ಅವರೇ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ-ಕಾಲೇಜುಗಳ ಆಸ್ತಿ ರಕ್ಷಣೆಗೆ ಶಿಕ್ಷಣ ಇಲಾಖೆಯಿಂದ ವಿಶೇಷ ಅಭಿಯಾನ

    76 ವರ್ಷ ವಯಸ್ಸಿನ ದಕ್ಷಿಣ ಆಫ್ರಿಕಾದ ಎಂಜಿನಿಯರ್ ಆಗಿರುವ ಮಸ್ಕ್, ನಾವು ಭೂಮಿಯ ಮೇಲಿರುವುದಕ್ಕೆ ಏಕೈಕ ಕಾರಣವೇ ಸಂತಾನೋತ್ಪತ್ತಿ ಮಾಡುವುದು ಎಂದಿದ್ದಾರೆ. ಜಾನಾ ಬೆಝುಯಿಡೆನ್‌ಹೌಟ್ ಎರೋಲ್ ಅವರ 2ನೇ ಪತ್ನಿ ಹೈಡೆ ಬೆಜುಡೆನ್ ಹೌಟ್ ಅವರ ಮಗಳು. 1979 ರಲ್ಲಿ ಎರೋಲ್ ಅವರ ತಾಯಿ ಮಾಯೆ ಹಾಲ್ಡೆಮನ್ ಮಸ್ಕ್ ಅವರೊಂದಿಗೆ ಬೇರ್ಪಟ್ಟ ನಂತರ ವಿವಾಹವಾದರು.

    ಎರೋಲ್ ಮತ್ತು ಹೈಡೆ ಒಟ್ಟಿಗೇ ಇಬ್ಬರು ಸ್ವಂತ ಮಕ್ಕಳನ್ನು ಹೊಂದಿದ್ದರು. ಆದರೆ ಅವರು ಜಾನಾ 4 ವರ್ಷ ವಯಸ್ಸಿನವರಾಗಿದ್ದಾಗ ಅವರು ದತ್ತು ಪೋಷಕರೆಂಬುದು ಗೊತ್ತಾಗಿದೆ. ಎರೋಲ್ ಮತ್ತು ಹೈಡ್ ಅಂತಿಮವಾಗಿ 18 ವರ್ಷಗಳ ನಂತರ ವಿಚ್ಛೇದನ ಪಡೆದರು. ಆದರೆ ಇದು ಪ್ರಾಯೋಗಿಕವಾಗಿಲ್ಲ. ನಾನು ಇನ್ನೂ ಸುತ್ತಮುತ್ತಲಿದ್ದರೆ ಅವಳು ನನ್ನೊಂದಿಗೆ ಹಿಂದಿರುಗಬಹುದೂ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ: 8 ವರ್ಷಗಳಿಂದ ಲಿವಿಂಗ್ ರಿಲೇಷನ್, 14 ಬಾರಿ ಗರ್ಭಪಾತ – ಮಹಿಳೆ ಆತ್ಮಹತ್ಯೆ, ಟೆಕ್ಕಿ ವಿರುದ್ಧ FIR

    2017ರಲ್ಲಿ ಜನಾ ಅವರಿಗೆ ಮೊದಲ ಮಗುವಿನ ಗರ್ಭಧಾರಣೆ ಆಯಿತು. ಆದರೆ ಇದು ಇಡೀ ಮಸ್ಕ್ ಕುಡುಂಬವನ್ನೇ ಆಘಾತಗೊಳಿಸಿತು. ಎಲಾನ್ ಮಸ್ಕ್ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಎರೋಲ್ ಹೇಳಿಕೊಂಡಿದ್ದಾರೆ. ಈ ಕುರಿತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರ ಹೇಳಿಕೆಯನ್ನು ನಿರೀಕ್ಷಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]