Tag: ಟೆಸ್ಲಾ

  • ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

    ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

    – 13 ಹುದ್ದೆಗಳಿಗೆ ಅರ್ಜಿ ಆಹ್ವಾನ

    ನವದೆಹಲಿ: ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರುವಾಗಿದೆ. ಎಲಾನ್‌ ಮಸ್ಕ್‌ ಮತ್ತು ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ನೇಮಕಾತಿ ಆರಂಭವಾಗಿದ್ದು, 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಮಸ್ಕ್ ಅವರ ಎಲೆಕ್ಟ್ರಿಕ್ ವೆಹಿಕಲ್ (ಇವಿ) ದೈತ್ಯ ಟೆಸ್ಲಾ Inc. ಭಾರತದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಟೆಸ್ಲಾ ಸಲಹೆಗಾರ, ಇನ್ಸೈಡ್‌ ಸೇಲ್ ಅಡ್ವೈಸರ್, ಕಸ್ಟಮರ್‌ ಸಪೋರ್ಟ್‌ ಸ್ಪೆಷಲಿಸ್ಟ್‌, ಕನ್ಸ್ಯೂಮರ್‌ ಎಂಗೇಜ್‌ಮೆಂಟ್‌ ಮ್ಯಾನೇಜರ್, ಆರ್ಡರ್‌ ಆಪರೇಷನ್ಸ್‌ ಸ್ಪೆಷಲಿಸ್ಟ್‌, ಸರ್ವೀಸ್‌ ಮ್ಯಾನೇಜರ್, ಬಿಸಿನೆಸ್‌ ಆಪರೇಷನ್ಸ್‌ ಅನಾಲಿಸ್ಟ್‌, ಸ್ಟೋರ್‌ ಮ್ಯಾನೇಜರ್, ಪಾರ್ಟ್ಸ್‌ ಅಡ್ವೈಸರ್, ಸರ್ವೀಸ್‌ ಅಡ್ವೈಸರ್‌, ಡೆಲಿವರಿ ಆಪರೇಷನ್ಸ್‌ ಸ್ಪೆಷಲಿಸ್ಟ್‌ ಮತ್ತು ಕಸ್ಟಮರ್‌ ಸಪೋರ್ಟ್‌ ಸೂಪರ್‌ವೈಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹೆಚ್ಚಿನ ಆಮದು ಸುಂಕದ ಕಳವಳದಿಂದಾಗಿ EV ತಯಾರಕರು ಇಲ್ಲಿಯವರೆಗೆ ಭಾರತದಿಂದ ದೂರ ಉಳಿದಿದ್ದರು.

  • ಶ್ವೇತ ಭವನದಿಂದ ಅವಮಾನವಾಗಿದ್ದಕ್ಕೆ ಕೊನೆಗೂ ಸೇಡು ತೀರಿಸಿಕೊಂಡ ಮಸ್ಕ್‌!

    ಶ್ವೇತ ಭವನದಿಂದ ಅವಮಾನವಾಗಿದ್ದಕ್ಕೆ ಕೊನೆಗೂ ಸೇಡು ತೀರಿಸಿಕೊಂಡ ಮಸ್ಕ್‌!

    ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಕೊನೆಗೂ ಗೆದ್ದಿದ್ದಾರೆ. ಶ್ವೇತಭವನದಿಂದ (White House) ಆದ ಅವಮಾನಕ್ಕೆ ಮಸ್ಕ್‌ ಈಗ ತನ್ನ ಬೆಂಬಲಿತ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಅವರನ್ನು ಅಲ್ಲಿಗೆ ಕಳುಹಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

    ಅಮೆರಿಕ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ (Kamala Harris) ಮತ್ತು ಡೊನಾಲ್ಡ್‌ ಟ್ರಂಪ್‌ ಮಧ್ಯೆ ನೆಕ್‌ಟು ನೆಕ್‌ ಫೈಟ್‌ ಇದೆ ಎಂದು ಸಮೀಕ್ಷೆಗಳು ಹೇಳಿದ್ದವು. ಇವರಿಬ್ಬರು ಸುದ್ದಿಯಾಗುತ್ತಿರುವ ಸಮಯದಲ್ಲಿ ಮಸ್ಕ್‌ ಸಹ ಪ್ರತಿ ನಿತ್ಯ ಸುದ್ದಿಯಾಗುತ್ತಿದ್ದರು.

     

     

     

    ಅಟೋಮೊಬೈಲ್‌ ಕಂಪನಿ ಟೆಸ್ಲಾ, ಬಾಹ್ಯಾಕಾಶ ಕಂಪನಿ ಸ್ಪೇಸ್‌ ಎಕ್ಸ್‌ ಸಂಸ್ಥಾಪಕ ಎಲಾನ್‌ ಮಸ್ಕ್‌ ಅವರು ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ಗೆ ಬಹಿರಂಗ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೇ ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಪ್ರತಿ ದಿನ 1 ಮಿಲಿಯನ್‌ ಡಾಲರ್‌ ಭಾರತದ ರೂಪಾಯಿಯಲ್ಲಿ ಹೇಳುವುದಾದರೆ ಸುಮಾರು 8.40 ಕೋಟಿ ರೂ ನೀಡುವುದಾಗಿ ಘೋಷಣೆ ಮಾಡಿದ್ದರು. ದೇಣಿಗೆ ನೀಡಿದ್ದು ಮಾತ್ರವಲ್ಲದೇ ಟ್ರಂಪ್‌ ಪರ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡಿದ್ದರು.

    ಅಮೆರಿಕ ಉಳಿಯಬೇಕಾದರೆ ಕಮಲಾ ಹ್ಯಾರಿಸ್‌ ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದ್ದರು. ಟ್ರಂಪ್‌ ಪರ ಯುವ ಜನತೆಯನ್ನು ಮಸ್ಕ್‌ ಸೆಳೆದಿದ್ದರು. ಇದೆಲ್ಲದರ ಪರಿಣಾಮ ಟ್ರಂಪ್‌ ಈಗ 47ನೇ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಅಂದು ವಿರೋಧ, ಇಂದು ಲವ್‌!
    ಹಾಗೆ ನೋಡಿದರೆ ಮಸ್ಕ್‌ ಈ ಹಿಂದೆ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಿದ್ದರು. ಮಸ್ಕ್‌ಗೆ ಅಮೆರಿಕ ಪೌರತ್ವ ಸಿಕ್ಕಿದ್ದು 2002ರಲ್ಲಿ. ಈ ಹಿಂದೆ ಬರಾಕ್‌ ಒಬಾಮಾ (Barack Obama) ನಂತರ ಹಿಲರಿ ಕ್ಲಿಂಟನ್‌ (Hillary Clinton) ನಂತರ ಜೋ ಬೈಡನ್‌ (Joe Biden) ಅವರನ್ನು ಮಸ್ಕ್‌ ಬೆಂಬಲಿಸಿದ್ದರು. 2016ರಲ್ಲಿ ಟ್ರಂಪ್‌ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ಆಗುವ ವ್ಯಕ್ತಿಯಲ್ಲ ಎಂದಿದ್ದರು. ರಿಪಬ್ಲಿಕನ್‌ ಪಕ್ಷದ ವಿರೋಧಿಯಾಗಿದ್ದ ಮಸ್ಕ್‌ ಈಗ ಆ ಪಕ್ಷದ ಪರ ಒಲವು ಹೊಂದಲು ಕಾರಣವಾದ ಮೊದಲ ಘಟನೆ ಯಾವುದು ಎಂದರೆ ಅದು ಕೋವಿಡ್.

    ಕೊರೊನಾಗೆ ಲಸಿಕೆ ಕಂಡು ಹಿಡಿದ ನಂತರ ವಿಶ್ವಾದ್ಯಂತ ವಿತರಣೆ ಆರಂಭವಾಯಿತು. ಈ ವೇಳೆ ಮಸ್ಕ್‌ ಲಸಿಕೆಯನ್ನು ನಾನು ಲಸಿಕೆಯನ್ನು ತೆಗೆದುಕೊಳ್ಳಲ್ಲ ಎಂದಿದ್ದರು. ಇದು ಅಮೆರಿಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಯಿತು. ನಂತರ ಮಸ್ಕ್ ಲಸಿಕೆಯನ್ನು ತೆಗೆದುಕೊಂಡಿದ್ದರು. ತೆಗೆದುಕೊಂಡಿದ್ದರೂ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎನ್ನುವುದು ಸರಿಯಲ್ಲ ಎಂದು ಹೇಳಿದ್ದರು. ಬೈಡನ್‌ ಸರ್ಕಾರದ ವಿರುದ್ಧ ಅಸಮಾಧಾನವಿದ್ದರೂ ಮಸ್ಕ್‌ ಅದನ್ನು ಎಲ್ಲಿಯೂ ಬಹಿರಂಗವಾಗಿ ತೋರಿಸಿಕೊಂಡಿರಲಿಲ್ಲ.

    2021 ರಲ್ಲಿ ಅಮೆರಿಕದ ಅಧ್ಯಕ್ಷರ ನಿವಾಸವಾದ ಶ್ವೇತ ಭವನದಲ್ಲಿ ಎಲೆಕ್ಟ್ರಿಕ್‌ ವಾಹನಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಮೆರಿಕದ ಅಟೋಮೊಬೈಲ್‌ ಕಂಪನಿಯ ಮಾಲೀಕರನ್ನು ಆಹ್ವಾನಿಸಲಾಗಿತ್ತು. ಆದರೆ ವಿಶ್ವದ ನಂಬರ್‌ ಒನ್‌ ಎಲೆಕ್ಟ್ರಿಕ್‌ ಕಾರು ಕಂಪನಿಯಾಗಿರುವ ಟೆಸ್ಲಾ ಮಾಲೀಕ ಮಸ್ಕ್‌ ಅವರನ್ನು ಆಹ್ವಾನಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ಅಮೆರಿಕ ಸರ್ಕಾರ ನನ್ನನ್ನು ಕಡೆಗಣಿಸಿ ಅವಮಾನ ಮಾಡಿದ್ದರೆ ಎಂದು ತಿಳಿದ ಮಸ್ಕ್‌ 2022 ರಿಂದ ರಿಪಬ್ಲಿಕನ್‌ ಗುಂಪುಗಳಿಗೆ ಹಣಕಾಸಿನ ನೆರವು ನೀಡಲು ಆರಂಭಿಸಿದರು.

    ನಂತರದ ದಿನದಲ್ಲಿ ಮಸ್ಕ್‌ ಕಂಪನಿಯ ವಿರುದ್ಧ ಬೈಡನ್‌ ಸರ್ಕಾರ ಹಲವಾರು ತನಿಖೆ ಆರಂಭಿಸಿತು. ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಬಂದಾಗಲೂ ತನಿಖೆ ನಡೆಯಿತು. ಟ್ವಿಟ್ಟರ್‌ ಕಂಪನಿಯ ಸ್ವಾಧೀನ ಪ್ರಕ್ರಿಯೆ, ಟೆಸ್ಲಾ ಅಟೋಪೈಲಟ್‌ ವಿಶೇಷತೆ ಮೇಲೆ ತನಿಖೆಯನ್ನು ಎದುರಿಸಬೇಕಾಯಿತು. 2023ರಲ್ಲಿ ನೇರವಾಗಿಯೇ ನಾನು ಜೋ ಬೈಡನ್‌ ಅವರನ್ನು ಬೆಂಬಲಿಸುವುದಿಲ್ಲ ಎಂದು ಸಂದರ್ಶನದಲ್ಲಿ ಮಸ್ಕ್‌ ಹೇಳಿದರು.

    ಖಾತೆ ಕೊಟ್ಟ ಮಸ್ಕ್‌!
    ಅಮೆರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಟ್ರಂಪ್‌ ಬೆಂಬಲಿಗರು ಕ್ಯಾಪಿಟಲ್‌ ಹಿಲ್‌ ಅಂದರೆ ಅಮೆರಿಕದ ಸಂಸತ್‌ ಮೇಲೆ ದಾಳಿ ಮಾಡಿದ್ದರು. ಈ ದಾಳಿಗೆ ಟ್ರಂಪ್‌ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಟ್ವಿಟ್ಟರ್‌ ಕಂಪನಿ 2021 ಟ್ರಂಪ್‌ ಖಾತೆ ಶಾಶ್ವತ ನಿಷೇಧ ಹೇರಿತ್ತು. ಈ ರೀತಿಯ ನಿಷೇಧ ಹೇರಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಒಂದು ಕ್ಷಣದಲ್ಲಿ ಲಕ್ಷಾಂತರ ಮಂದಿಯನ್ನು ತಲುಪುವ ಸಾಮರ್ಥ್ಯ ಹೊಂದಿರುವ ಸಾಮಾಜಿಕ ಜಾಲತಾಣಗಳು ವ್ಯಕ್ತಿಯೊಬ್ಬನನ್ನು ನಿಷೇಧ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿತ್ತು. ಏನೇ ಟೀಕೆ ಬಂದಿದ್ದರೂ ಅಂದಿನ ಟ್ವಿಟ್ಟರ್‌ ಸಿಇಒ ಆಗಿದ್ದ ಜಾಕ್‌ ಡಾರ್ಸಿ ನೇತೃತ್ವದ ತಂಡ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಇದನ್ನೂ ಓದಿ: ಎಡಪಂಥೀಯರ ವಿಕಿಪೀಡಿಯಗೆ ದೇಣಿಗೆ ನೀಡಬೇಡಿ: ಮಸ್ಕ್ ಕರೆ

    ಅಮೆರಿಕ ಸಾಮಾಜಿಕ ಜಾಲತಾಣ ಕಂಪನಿಗಳು ತನ್ನನ್ನು ನಿಷೇಧ ಮಾಡಿದ್ದಕ್ಕೆ ಸಿಟ್ಟಾದ ಟ್ರಂಪ್‌ 2022 ಫೆಬ್ರವರಿಯಲ್ಲಿ ಟ್ರೂಥ್‌ ಹೆಸರಿನಲ್ಲಿ ಒಂದು ವೇದಿಕೆಯನ್ನು ತೆರೆಯುತ್ತಾರೆ. ಆಂಡ್ರಾಯ್ಡ್‌ ಮತ್ತು ಐಓಸ್‌ ಆಪ್‌ ರಿಲೀಸ್‌ ಮಾಡುತ್ತಾರೆ. ಇಂದು ಟ್ರಂಪ್‌ ಬೆಂಬಲಿಗರನ್ನು ಮಾತ್ರ ಸೆಳೆದಿತ್ತು. 2022 ರಲ್ಲಿ ಮಸ್ಕ್‌ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸುತ್ತಾರೆ. 2022ರ ಅಕ್ಟೋಬರ್‌ನಲ್ಲಿ ಟ್ವಿಟ್ಟರ್‌ ಸ್ವಾಧಿನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಟ್ಟಿಟ್ಟರ್‌ ಒಡೆತನ ಸಂಪೂರ್ಣ ಮಸ್ಕ್‌ ಸಿಕ್ಕಿದ ಬೆನ್ನಲ್ಲೇ 2022 ರ ನವೆಂಬರ್‌ನಲ್ಲಿ ನಿಷೇಧಗೊಂಡಿದ್ದ ಟ್ರಂಪ್‌ ಖಾತೆಗೆ ಮತ್ತೆ ಜೀವ ನೀಡುತ್ತಾರೆ. ಟ್ರಂಪ್‌ ಖಾತೆ ಮತ್ತೆ ಚಾಲನೆ ಸಿಕ್ಕಿದ್ದು ಬೈಡನ್‌ ಸರ್ಕಾರ ಕಣ್ಣನ್ನು ಕೆಂಪಗೆ ಮಾಡಿತ್ತು. ಇದರ ಬೆನ್ನಲ್ಲೇ ಮಸ್ಕ್‌ ಕಂಪನಿಯ ವಿರುದ್ಧ ತನಿಖೆಗಳು ಮತ್ತಷ್ಟು ಚುರುಕು ಪಡೆಯುತ್ತದೆ.

    ರಾಜಕೀಯ ಪಕ್ಷಗಳಿಂದ ದೇಣಿಗೆ
    ಅಮೆರಿಕ ಚುನಾವಣೆಯಲ್ಲಿ ಬಹುತೇಕ ಎಲ್ಲಾ ಕಂಪನಿಗಳು ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡುತ್ತಿವೆ. ಗೂಗಲ್‌, ಮೈಕ್ರೋಸಾಫ್ಟ್‌, ಆಪಲ್‌, ಒರಾಕಲ್‌, ಜಾನ್‌ಸನ್‌ ಆಂಡ್‌ ಜಾನ್‌ಸನ್‌ ಕಂಪನಿಗಳು ಕಮಲಾಗೆ ಹಣಸುಕಾಸಿನ ನೆರವು ನೀಡಿದರೆ ಅಮೆರಿಕನ್‌ ಏರ್‌ಲೈನ್ಸ್‌, ವಾಲ್‌ಮಾರ್ಟ್‌, ಬೋಯಿಂಗ್‌, ಲಾಕ್‌ಹಿಡ್‌ ಮಾರ್ಟಿನ್‌ ಕಂಪನಿಗಳು ಟ್ರಂಪ್‌ಗೆ ಬೆಂಬಲ ನೀಡಿವೆ.

    ಈ ವಿಚಾರವನ್ನು ಎಕ್ಸ್‌ ಮುಖ್ಯಸ್ಥ ಎಲೋನ್‌ ಮಸ್ಕ್ (Elon Musk) ಪ್ರಸ್ತಾಪಿಸಿ, ಗೂಗಲ್ ಮತ್ತು ಮೈಕ್ರೋಸಾಫ್ಟ್ ಡೆಮಾಕ್ರಟಿಕ್ ಪಕ್ಷಕ್ಕೆ ಭಾರೀ ದೇಣಿಗೆ ನೀಡಿವೆ. ಈ ಎರಡೂ ಕಂಪನಿಗಳು ಸುಮಾರು 100% ಸರ್ಚ್‌ ನಿಯಂತ್ರಿಸುತ್ತವೆ. ಇವರು ಸಹಾಯ ಮಾಡದೇ ಇದ್ದರೂ ಪಕ್ಷಪಾತವನ್ನು ಪರಿಚಯಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

     

    ಸದ್ಯ ಈಗ ಟ್ರಂಪ್‌ಗೆ ಅತಿ ಹೆಚ್ಚು ದೇಣಿಗೆ ನೀಡಿದ ವ್ಯಕ್ತಿಗಳ ಪೈಕಿ ಮಸ್ಕ್‌ ಮೊದಲ ಸ್ಥಾನದಲ್ಲಿದ್ದಾರೆ. ಅಕ್ಟೋಬರ್‌ 16ರ ವೇಳೆಗೆ ಒಟ್ಟು 75 ಮಿಲಿಯನ್‌ ಡಾಲರ್‌ ಹಣವನ್ನು ಮಸ್ಕ್‌ ಟ್ರಂಪ್‌ಗೆ ದೇಣಿಗೆ ನೀಡಿದ್ದರು. ಅಷ್ಟೇ ಅಲ್ಲದೇ ಎಕ್ಸ್‌ನಲ್ಲಿ ಮಸ್ಕ್‌ ಟ್ರಂಪ್‌ ಅವರನ್ನು ಸಂದರ್ಶನ ಸಹ ಮಾಡಿದ್ದರು. ನಾನು ಚುನಾವಣೆಯಲ್ಲಿ ಜಯಗಳಿಸಿದರೆ ಮಸ್ಕ್‌ ಅವರನ್ನು ‘Government Efficiency’ ತಂಡದ ಮುಖ್ಯಸ್ಥರನ್ನಾಗಿ ಮಾಡುತ್ತೇನೆ ಎಂದು ಟ್ರಂಪ್‌ ಘೋಷಿಸಿದ್ದರು.

    ಈ ಚುನಾವಣೆಯಲ್ಲಿ ಮಸ್ಕ್‌ ಅಮೆರಿಕ ಮಾಧ್ಯಮಗಳನ್ನು ಬಹಿರಂಗವಾಗಿಯೇ ದೂರಿದ್ದರು. ಟ್ರಂಪ್‌ ವಿರುದ್ಧ ಉದ್ದೇಶಪೂರ್ವವಾಗಿಯೇ ಅಪಪ್ರಚಾರ ಮಾಡಲಾಗುತ್ತದೆ. ಇವುಗಳಲ್ಲಿ ಬಂದ ಸುದ್ದಿಗಳನ್ನು ನಂಬಬೇಡಿ. ಎಕ್ಸ್‌ ಅನ್ನು ಫಾಲೋ ಮಾಡಿ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಎಕ್ಸ್‌ನಲ್ಲಿ ಅಮೆರಿಕ ಹೆಸರಿನ ಖಾತೆಯನ್ನು ತೆರೆದು ಟ್ರಂಪ್‌ ಪರ ಪ್ರಚಾರ ಮಾಡಿದ್ದರು.

    ಟ್ರಂಪ್‌ ಅವರ ವಿಜಯೋತ್ಸವ ಪಾರ್ಟಿಯಲ್ಲಿ ಮಸ್ಕ್‌ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ತಮ್ಮ ಭಾಷಣದಲ್ಲಿ ಟ್ರಂಪ್‌, ನಮ್ಮಲ್ಲಿ ಹೊಸ ನಕ್ಷತ್ರವಿದೆ, ನಕ್ಷತ್ರ ಹುಟ್ಟಿದೆ ಅದು ಎಲೋನ್‌. ಅವರು ಅದ್ಭುತ ವ್ಯಕ್ತಿ. ಇಂದು ರಾತ್ರಿ ನಾವು ಒಟ್ಟಿಗೆ ಕುಳಿತಿದ್ದೆವು. ನಿಮಗೆ ಗೊತ್ತಾ, ಅವರು ಎರಡು ವಾರಗಳ ಕಾಲ ಫಿಲಡೆಲ್ಫಿಯಾದಲ್ಲಿ, ಪೆನ್ಸಿಲ್ವೇನಿಯಾದ ವಿವಿಧ ಭಾಗಗಳಲ್ಲಿ ಪ್ರಚಾರ ಮಾಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಚೀನಾಗೆ ಮಸ್ಕ್‌ ಭೇಟಿ; ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನ ಬಿಡುಗಡೆ ಆಗುತ್ತಾ? ಚೀನಾ ಆಯ್ಕೆ ಏಕೆ?

    ಚೀನಾಗೆ ಮಸ್ಕ್‌ ಭೇಟಿ; ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನ ಬಿಡುಗಡೆ ಆಗುತ್ತಾ? ಚೀನಾ ಆಯ್ಕೆ ಏಕೆ?

    ದು ಆಟೊಮ್ಯಾಟಿಕ್ ಕಾಲ. ನೀರಿನ ತೊಟ್ಟಿಯ ನೀರು ನಿಯಂತ್ರಣದಿಂದ ಹಿಡಿದು ವಿಮಾನ, ಮೆಟ್ರೋ ರೈಲು ವರೆಗೂ ಎಲ್ಲವೂ ಆಟೊಮ್ಯಾಟಿಕ್ ಆಗುತ್ತಿದೆ. ಆದರೆ ಈಗ ಸೆಲ್ಫ್ ಡ್ರೈವಿಂಗ್ ವಾಹನ ತಂತ್ರಜ್ಞಾನ ಹೆಚ್ಚು ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಎಲೋನ್ ಮಸ್ಕ್ (Elon Musk) ಚೀನಾಕ್ಕೆ ಭೇಟಿ ನೀಡಿರುವುದು. ಚೀನಾಗೆ ಅಚ್ಚರಿಯ ಭೇಟಿ ಕೊಟ್ಟಿರುವ ಮಸ್ಕ್, ಅಲ್ಲಿನ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ವಯಂಚಾಲಿತ ವಾಹನ ತಂತ್ರಜ್ಞಾನದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

    ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಚೀನಾವು ಜಾಗತಿಕ ಮಟ್ಟದಲ್ಲಿ 2ನೇ ಸ್ಥಾನದಲ್ಲಿದೆ. ಇಲ್ಲಿ ಟೆಸ್ಲಾ ಕಂಪನಿಯು ತನ್ನ ಸಂಪೂರ್ಣ ಸ್ವಯಂಚಾಲಿತ ವಾಹನ (Full Self-Driving) ತಂತ್ರಜ್ಞಾನ ಪರಿಚಯಿಸುವ ಸಾಧ್ಯತೆ ಇದೆ. ಅದಕ್ಕಾಗಿ ಮಸ್ಕ್ ಇಲ್ಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ತನ್ನ ಕಂಪನಿ ಮಾರುಕಟ್ಟೆ ವಿಸ್ತರಣೆಗಾಗಿ ಮಸ್ಕ್, ಚೀನಾದ ಪ್ರಧಾನಿ ಲೀ ಕಿಯಾಂಗ್ ಜೊತೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌!

    ಸ್ವಯಂಚಾಲಿತ ವಾಹನ ತಂತ್ರಜ್ಞಾನ ಇಂದು ನಿನ್ನೆಯ ಮಾತಲ್ಲ. ಹತ್ತಾರು ವರ್ಷಗಳಿಂದ ತಂತ್ರಜ್ಞಾನದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ದೈತ್ಯ ಕಂಪನಿಗಳು ಸಾಕಷ್ಟು ಪ್ರಯೋಗಗಳನ್ನೂ ನಡೆಸಿವೆ, ನಡೆಸುತ್ತಿವೆ. ಆ ಸಾಲಿನಲ್ಲಿ ಟೆಸ್ಲಾ ಕಂಪನಿ ಕೂಡ ಇದೆ. ಹಾಗಾದ್ರೆ ಸೆಲ್ಫ್ ಡ್ರೈವಿಂಗ್ ತಂತ್ರಜ್ಞಾನ ಹಿನ್ನೆಲೆ, ಅಭಿವೃದ್ಧಿ ಮತ್ತು ಸಾಧಕ-ಬಾಧಕಗಳೇನು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

    ಗೂಗಲ್ ಪ್ರಯೋಗ ವಿಫಲ
    ಇದು 12 ವರ್ಷಗಳಷ್ಟು ಹಿಂದಿನ ಮಾತು. ಸ್ಟೀರಿಂಗ್ ಮತ್ತು ಪೆಡಲ್‌ಗಳೇ ಇಲ್ಲದ ಸೆಲ್ಫ್ ಡ್ರೈವಿಂಗ್ ವ್ಯವಸ್ಥೆಯನ್ನು ಗೂಗಲ್ ಅಭಿವೃದ್ಧಿಪಡಿಸಿತ್ತು. ಕಾರೊಂದಕ್ಕೆ ಅದನ್ನು ಅಳವಡಿಸಿ ಅಮೆರಿಕದಲ್ಲಿ ಪ್ರಾಯೋಗಿಕ ಚಾಲನೆ ನಡೆಸಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಸೆಲ್ಫ್ ಡ್ರೈವಿಂಗ್ ಕಾರು ಬಸ್‌ವೊಂದಕ್ಕೆ ತಾಗಿ ಮುಂದೆ ಸಾಗಿತ್ತು. ಹೀಗಾಗಿ ಪ್ರಯೋಗ ವಿಫಲವಾಯಿತು. ಇದನ್ನೂ ಓದಿ: ಮಸ್ಕ್‌ಗೆ ಭಾರತದ ಮಾರುಕಟ್ಟೆ ಮೇಲೇಕೆ ಕಣ್ಣು? 

    ವಿಮಾನ ಅಪಘಾತ
    ಆಟೊಪೈಲಟ್‌ಗೆ ಮಿತಿ ಇದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದಿದೆ. ಬ್ರೆಜಿಲ್‌ನಿಂದ ಫ್ರಾನ್ಸ್‌ಗೆ ಹೊರಟಿದ್ದ ವಿಮಾನ ಅಟ್ಲಾಂಟಿಕ್ ಸಾಗರದಲ್ಲಿ ಪತನಗೊಂಡಿತ್ತು. ಪತನಕ್ಕೂ ಮುನ್ನ ಆಟೊಪೈಲಟ್ ಮೋಡ್‌ನಲ್ಲಿತ್ತು. ವಿಮಾನ ಆಟೊಪೈಲಟ್ ಮೋಡ್‌ನಲ್ಲಿದ್ದಾಗ ಸಂವೇದಕಗಳು ವೇಗದ ಪ್ರಮಾಣವನ್ನು ತಪ್ಪಾಗಿ ಗ್ರಹಿಸಿದ್ದವು. ವೇಗ ಹೆಚ್ಚಾದಾಗ ಆಟೋ ಪೈಲಟ್ ವ್ಯವಸ್ಥೆ ತಕ್ಷಣವೇ ಬಂದ್ ಆಗುತ್ತದೆ.

    ಟೆಲ್ಸಾ ಕಾರಿಗೆ ಅಪಘಾತ!
    ಇದೇ ಹೊತ್ತಿನಲ್ಲಿ ಅರೆ ಸ್ವಯಂಚಾಲಿತ ಟೆಕ್ನಾಲಜಿ ಇರುವ ಕಾರನ್ನು ಟೆಲ್ಸಾ ಬಿಡುಗಡೆ ಮಾಡಿತ್ತು. ಆಟೊಪೈಲಟ್ ಮೋಡ್‌ನಲ್ಲಿ ಚಲಿಸುತ್ತಿದ್ದ ಟೆಲ್ಸಾ ಕಾರಿನಲ್ಲಿದ್ದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದ. ಇಂತಹ ಕೆಲ ಘಟನೆಗಳು ಸೆಲ್ಫ್ ಡ್ರೈವಿಂಗ್ ತಂತ್ರಜ್ಞಾನಕ್ಕೆ ಸವಾಲಾಗಿವೆ. ಆದರೂ ಸುಧಾರಿತ ತಂತ್ರಜ್ಞಾನದ ಪ್ರಯೋಗಗಳು ನಡೆಯುತ್ತಲೇ ಇವೆ.

    ಎಫ್‌ಎಸ್‌ಡಿ ಎಂದರೇನು?
    ಡ್ರೈವರ್ ಅಸಿಸ್ಟೆಂಟ್ ವೈಶಿಷ್ಟ್ಯಗಳನ್ನು ಆಟೋಪೈಲಟ್ ಅಥವಾ ಎಫ್‌ಎಸ್‌ಡಿ ಎಂದು ಟೆಸ್ಲಾ ಕರೆಯುತ್ತದೆ. ಆದರೆ ವಾಹನ ಚಲನೆಯಲ್ಲಿ ಸಂಪೂರ್ಣ ಸ್ವಾಯತ್ತವಾಗಿರುವುದಿಲ್ಲ. ಸಕ್ರಿಯ ಚಾಲಕ ಮೇಲ್ವಿಚಾರಣೆಯ ಅಗ್ಯವಿದೆ. ಎಫ್‌ಎಸ್‌ಡಿ ಆಟೋಪೈಲಟ್ ಸಾಫ್ಟ್‌ವೇರ್‌ನ ಅತ್ಯಂತ ಸ್ವಾಯತ್ತ ಆವೃತ್ತಿಯಾಗಿದೆ. ಸ್ವಯಂ ಪಾರ್ಕಿಂಗ್, ಸ್ವಯಂ ಪಥ ಬದಲಾವಣೆ, ಟ್ರಾಫಿಕ್ ನ್ಯಾವಿಗೇಷನ್ ಸೇರಿ ಹಲವು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಇದನ್ನೂ ಓದಿ: ಎಲೋನ್‌ ಮಸ್ಕ್‌ ಭಾರತ ಭೇಟಿ ಮುಂದಕ್ಕೆ – ಸದ್ಯಕ್ಕಿಲ್ಲ ಮೋದಿ ಜೊತೆಗೆ ಮಾತುಕತೆ

    2020 ರಲ್ಲೇ ಚೀನಾದಲ್ಲಿ ಟೆಸ್ಲಾ ಘಟಕ
    ಟೆಸ್ಲಾವು (Tesla) 2020 ರಲ್ಲೇ ಶಾಂಘೈನಲ್ಲಿ 58 ಸಾವಿರ ಕೋಟಿ ವೆಚ್ಚದಲ್ಲಿ ತನ್ನ ಘಟಕ ಸ್ಥಾಪಿಸಿತು. ಬಳಿಕ ಚೀನಾದಲ್ಲಿ ಟೆಸ್ಲಾ ಕಂಪನಿ ಕಾರುಗಳು ಜನಪ್ರಿಯವಾದವು. ಆದರೂ ಸ್ವಯಂಚಾಲಿತ ಪಥ ಬದಲಾವಣೆಯಂತಹ ಕಾರ್ಯಾಚರಣೆಗಳಿಗೆ ಸಿಸ್ಟಮ್ ಅನ್ನು ಟೆಸ್ಲಾ ಸೀಮಿತಗೊಳಿಸಿದೆ.

    ಚೀನಾದಲ್ಲಿ ಎಫ್‌ಎಸ್‌ಡಿ ಲಭ್ಯತೆಯು ಟೆಸ್ಲಾಗೆ ವಿಶ್ವದ ಅತಿದೊಡ್ಡ ಆಟೋ ಮಾರುಕಟ್ಟೆಯಲ್ಲಿ ಸ್ಥಳೀಯ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲು ಅನುವು ಮಾಡಿಕೊಡುತ್ತದೆ. ಟೆಸ್ಲಾ ಇಲ್ಲಿಯವರೆಗೆ ಚೀನಾದಲ್ಲಿ 17 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.

    ಟೆಸ್ಲಾ ವಾಹನ ಮಾರಾಟವು ಸುಮಾರು 4 ವರ್ಷಗಳಲ್ಲಿ ಮೊದಲ ಬಾರಿಗೆ ಕುಸಿತ ಕಂಡಿತು. ಕಂಪನಿಯು ಎರಡನೇ ತ್ರೈಮಾಸಿಕದಲ್ಲಿ ತನ್ನ ಜಾಗತಿಕ ಉದ್ಯೋಗಿಗಳ ಪೈಕಿ ಶೇ.10 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತು. ಅಮೆರಿಕ, ಚೀನಾ ಮತ್ತು ಯೂರೋಪ್ ಸೇರಿದಂತೆ ಪ್ರಮುಖ ಮಾರುಕಟ್ಟೆಯಲ್ಲಿ ವಾಹನಗಳ ಬೆಲೆ ಕಡಿತಗೊಳಿಸಿತು. ಇದನ್ನೂ ಓದಿ: ಮಸ್ಕ್‌ನ ಸ್ಪೇಸ್‍ಎಕ್ಸ್ ರಾಕೆಟ್‍ನಲ್ಲಿ ಶೀಘ್ರ ಇಸ್ರೋ ಉಪಗ್ರಹ ಉಡಾವಣೆ

    ಬೀಜಿಂಗ್‌ನಲ್ಲಿ ಆಟೊ ಶೋ ಪ್ರಾರಂಭವಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚೀನಾದ ಆಹ್ವಾನದ ಮೇರೆಗೆ ಮಸ್ಕ್ ಚೀನಾಗೆ ಭೇಟಿ ನೀಡಿದ್ದಾರೆ.

    ಚೀನಾ ಆಯ್ಕೆ ಏಕೆ?
    ಟೆಸ್ಲಾ ಕಂಪನಿಯು ನಾಲ್ಕು ವರ್ಷಗಳ ಹಿಂದೆಯೇ ಸಂಪೂರ್ಣ ಸ್ವಯಂ ಚಾಲಿತ (ಎಫ್‌ಎಸ್‌ಡಿ) ಆಟೋಪೈಲಟ್‌ ಸಾಫ್ಟ್‌ವೇರನ್ನು ಹೊರ ತಂದಿದೆ. ಆದರೂ ಚೀನಾದಲ್ಲಿ (China) ಅದನ್ನು ಬಳಕೆಗೆ ಬಿಡುಗಡೆ ಮಾಡಿಲ್ಲ. ಎಫ್‌ಎಸ್‌ಡಿ ಬಿಡುಗಡೆಗೆ ಗ್ರಾಹಕರು ಮಸ್ಕ್‌ ಅವರಲ್ಲಿ ಆಗ್ರಹಿಸಿದ್ದಾರೆ. ಅದಕ್ಕೆ ಮಸ್ಕ್‌ ಸಕಾರಾತ್ಮವಾಗಿಯೇ ಸ್ಪಂದಿಸಿದ್ದರು. ಶಾಂಘೈ ಘಟಕದಲ್ಲಿ ಟೆಸ್ಲಾ ಮಾಡೆಲ್‌ 3 ಮತ್ತು ಮಾಡೆಲ್‌ ವೈ ಸೇರಿ ವರ್ಷಕ್ಕೆ ಒಟ್ಟು 10 ಲಕ್ಷ ಎಲೆಕ್ಟ್ರಿಕ್‌ ಕಾರುಗಳನ್ನು ತಯಾರಿಸುತ್ತಿದೆ. ಸ್ವಯಂ ಚಾಲಿತ ತಂತ್ರಾಂಶಕ್ಕೆ ರಸ್ತೆ, ನಿಯಮಗಳ ಬಗ್ಗೆ ತರಬೇತಿ ನೀಡುವ ನಿಟ್ಟಿನಲ್ಲಿ ಟೆಸ್ಲಾ ಚೀನಾದಲ್ಲಿ 2021ರಿಂದ ಮಾಹಿತಿ ಕಲೆ ಹಾಕಿದೆ. ಅಲ್ಗಾರಿದಮ್‌ನ ತರಬೇತಿಗಾಗಿ ಆ ಮಾಹಿತಿಯನ್ನು ವರ್ಗಾಯಿಸಲು ಸರ್ಕಾರದ ಅನುಮೋದನೆಗಾಗಿ ಮಸ್ಕ್ ಕೋರಿದ್ದಾರೆ.

  • ʻಜೈ ಶ್ರೀರಾಮ್‌, ಜೈ ಶ್ರೀರಾಮ್‌ʼ ಹಾಡಿಗೆ ನೂರಾರು ಟೆಸ್ಲಾ ಕಾರು ಡಾನ್ಸ್

    ʻಜೈ ಶ್ರೀರಾಮ್‌, ಜೈ ಶ್ರೀರಾಮ್‌ʼ ಹಾಡಿಗೆ ನೂರಾರು ಟೆಸ್ಲಾ ಕಾರು ಡಾನ್ಸ್

    ವಾಷಿಂಗ್ಟನ್‌: ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಅಯೋಧ್ಯೆ (Ayodhya Ram Mandir) ರಾಮಮಯವಾಗಿ ಸಿಂಗಾರಗೊಳ್ಳುತ್ತಿದೆ. ಎಲ್ಲೆಲ್ಲೂ ರಾಮನಾಮ, ರಾಮಭಕ್ತಿ, ರಾಮಜಪ (Ram Paths) ಕೇಳಿಬರುತ್ತಿದೆ. ನೂರಾರು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿರುವುದಕ್ಕೆ ರಾಮಭಕ್ತರು ಸಂತಸಗೊಂಡಿದ್ದಾರೆ.

    ವಿದೇಶಗಳಲ್ಲೂ ಶ್ರೀರಾಮನ ಮಹಿಮೆ ಕಂಡುಬರುತ್ತಿವೆ. ಪ್ರಾಣಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾದುಕುಳಿತಿವೆ. ಈ ನಡುವೆ ವಿಶ್ವದ ಪ್ರತಿಷ್ಠಿತ ಕಾರು ಕಂಪನಿಯಾದ ಟೆಸ್ಲಾ (Tesla Car), ಆದಿಪುರುಷ್‌ ಚಿತ್ರದ ʻಜೈ ಶ್ರೀರಾಮ್‌, ಜೈ ಶ್ರೀರಾಮ್‌ ರಾಜಾರಾಮ್‌ʼ ಹಾಡಿಗೆ ವಿಶೇಷ ಗೌರವ ಸೂಚಿಸುವುದಕ್ಕಾಗಿ ತನ್ನ ಕಾರುಗಳನ್ನು ಬಳಸಿಕೊಂಡು ಲೈಟ್ ಮೂಲಕ ಡಾನ್ಸ್ (Dance) ಮಾಡಿಸಿದೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣವನ್ನು 74% ಮುಸ್ಲಿಮರು ಸಂಭ್ರಮಿಸ್ತಾರೆ: ಮುಸ್ಲಿಂ ರಾಷ್ಟ್ರೀಯ ಮಂಚ್

    ವಿಶ್ವಹಿಂದೂ ಪರಿಷತ್‌ ಅಮೆರಿಕದ ಘಟಕ ಆಯೋಜಿಸಿದ್ದ ಮ್ಯೂಸಿಕಲ್‌ ಲೈಟ್‌ಶೋ ಕಾರ್ಯಕ್ರಮದಲ್ಲಿ ಟೆಸ್ಲಾ ಕಂಪನಿಯ ಕಾರುಗಳ ಲೈಟ್‍ ಗಳು ಡಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

    ಈ ಹಿಂದೆಯೂ ನೂರಾರು ಕಾರುಗಳನ್ನು ಸಾಲು-ಸಾಲಾಗಿ ನಿಲ್ಲಿಸಿ, ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿಗೆ ಇದೇ ರೀತಿ ಡಾನ್ಸ್‌ ಮಾಡಿಸಲಾಗಿತ್ತು. ಇದೀಗ, ದೇಶದೆಲ್ಲೆಡೆ ಶ್ರೀರಾಮನ ಸದ್ದು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀರಾಮನಿಗೆ ನೃತ್ಯದ ಮೂಲಕ ವಿಶೇಷ ಗೌರವವನ್ನು ಟೆಸ್ಲಾ ಕಂಪನಿ ಸಲ್ಲಿಸಿದೆ.

    ಈ ವೀಡಿಯೋವನ್ನು ಟೆಸ್ಲಾ ಕಂಪನಿ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದೆ. ಇದಕ್ಕೆ ರಾಮಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ 

  • ಗುಜರಾತ್‌ನಲ್ಲಿ ಟೆಸ್ಲಾ ಘಟಕ – ಜನವರಿಯಲ್ಲಿ ಘೋಷಣೆ ಸಾಧ್ಯತೆ

    ಗುಜರಾತ್‌ನಲ್ಲಿ ಟೆಸ್ಲಾ ಘಟಕ – ಜನವರಿಯಲ್ಲಿ ಘೋಷಣೆ ಸಾಧ್ಯತೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ತವರು ರಾಜ್ಯ ಗುಜರಾತ್‌ನಲ್ಲಿ (Gujarat) ಟೆಸ್ಲಾ (Tesla) ಕಂಪನಿ ತನ್ನ ಫ್ಯಾಕ್ಟರಿ ತೆರೆಯುವ ಸಾಧ್ಯತೆಯಿದೆ.

    ಟೆಸ್ಲಾ ಕಂಪನಿ ಭಾರತದಲ್ಲಿ ಘಟಕ ತೆರೆಯಲಿದೆ ಎಂಬ ಸುದ್ದಿ ಕೆಲ ವರ್ಷಗಳಿಂದ ಪ್ರಕಟವಾಗುತ್ತಲೇ ಇದೆ. ಆದರೆ ಇಲ್ಲಿಯವರೆಗೆ ಎಲ್ಲಿ ಘಟಕ ತೆರೆಯಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಈಗ ಗುಜರಾತ್‌ನಲ್ಲಿ ಫ್ಯಾಕ್ಟರಿ ತೆರೆಯಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತೀಯ ಮೂಲದ ವೈಭವ್ ತನೇಜಾ ಟೆಸ್ಲಾ CFO – ಬೆಂಗಳೂರಿಗೆ ಇದೆ ಲಿಂಕ್‌

    ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್‌ ಗುಜರಾತ್‌ (Vibrant Gujarat) ಹೂಡಿಕೆ ಸಮಾವೇಶದಲ್ಲಿ ಈ ಬಗ್ಗೆ ಅಂತಿಮ ಘೋಷಣೆಯಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕಳೆದ ಕೆಲ ವರ್ಷಗಳಿಂದ ಅಟೋಮೊಬೈಲ್‌ ಕ್ಷೇತ್ರಕ್ಕೆ ಗುಜರಾತ್‌ ಉದ್ಯಮ ಸ್ನೇಹಿ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ಟೆಸ್ಲಾ ಇಲ್ಲೇ ತನ್ನ ಘಟಕ ತೆರೆಯಲು ಮುಂದಾಗಿದೆ ಎನ್ನಲಾಗುತ್ತಿದೆ. ಸಾನಂದ್, ಬೆಚರಾಜಿ  ಅಥವಾ ಧೋಲೇರಾ ಪೈಕಿ ಒಂದು ಜಾಗದಲ್ಲಿ ಘಟಕ ನಿರ್ಮಾಣವಾಗಲಿದೆ. ಇದನ್ನೂ ಓದಿ: ನಾನೂ ಸಹ ಮೋದಿಯ ಅಭಿಮಾನಿಯಾಗಿದ್ದೇನೆ: ಎಲಾನ್ ಮಸ್ಕ್

    ಈಗಾಗಲೇ ಗುಜರಾತ್‌ನಲ್ಲಿ ಮಾರುತಿ ಸುಜುಕಿ, ಸಿಇಎಟಿ ಟಯರ್‌, ಫೋರ್ಡ್‌, ಹೋಂಡಾ, ಎಂಜಿ ಮೋಟಾರ್, ಜೆಸಿಬಿ ಕಂಪನಿಗಳು ಉತ್ಪಾದನಾ ಘಟಕವನ್ನು ತೆರೆದಿವೆ.

     

    2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮಸ್ಕ್ ಬಳಿ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. 2020ರ ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದ್ದ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ.

     

  • ಭಾರತೀಯ ಮೂಲದ ವೈಭವ್ ತನೇಜಾ ಟೆಸ್ಲಾ CFO – ಬೆಂಗಳೂರಿಗೆ ಇದೆ ಲಿಂಕ್‌

    ಭಾರತೀಯ ಮೂಲದ ವೈಭವ್ ತನೇಜಾ ಟೆಸ್ಲಾ CFO – ಬೆಂಗಳೂರಿಗೆ ಇದೆ ಲಿಂಕ್‌

    ನ್ಯೂಯಾರ್ಕ್‌: ಭಾರತೀಯ ಮೂಲದ ವೈಭವ್ ತನೇಜಾ (Indian-Origin Vaibhav Taneja) ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ (Chief Financial Officer) ಎಲಾನ್‌ ಮಸ್ಕ್‌ (Elon Musk) ಒಡೆತನದ ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾ (Tesla) ನೇಮಕ ಮಾಡಿದೆ.

    ಕಳೆದ ನಾಲ್ಕು ವರ್ಷಗಳಿಂದ ಟೆಸ್ಲಾದ ಮಾಸ್ಟರ್ ಆಫ್ ಕಾಯಿನ್ ಮತ್ತು ಹಣಕಾಸು ಮುಖ್ಯಸ್ಥರಾದ ಕಿರ್‌ಹಾರ್ನ್ ಅವರು ಕೆಳಗಿಳಿದ ನಂತರ 45 ವರ್ಷದ ವೈಭವ್ ತನೇಜಾ ಅವರನ್ನು ನೇಮಿಸಲಾಗಿದೆ.

    ಚಾರ್ಟರ್ಡ್ ಅಕೌಂಟೆಂಟ್ ಓದಿರುವ ತನೇಜಾ ಅವರು ಮಾರ್ಚ್ 2019 ರಿಂದ ಟೆಸ್ಲಾದಲ್ಲಿ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಫೆಬ್ರವರಿ 2017 ಮತ್ತು ಮೇ 2018 ರ ನಡುವೆ ಸಹಾಯಕ ಕಾರ್ಪೊರೇಟ್ ನಿಯಂತ್ರಕರಾಗಿ ಸೇವೆ ಸಲ್ಲಿಸಿದರು. ಇದನ್ನೂ ಓದಿ: ಭಾರತದಲ್ಲಿ 20 ಲಕ್ಷಕ್ಕೆ ಕಾರು – ಕೇಂದ್ರದ ಜೊತೆ ಟೆಸ್ಲಾ ಮಾತುಕತೆ

    ಟೆಸ್ಲಾ ಸೇರ್ಪಡೆಯಾಗಿದ್ದು ಹೇಗೆ?
    ಅಮೆರಿಕದ ಸೌರ ಫಲಕ ಅಭಿವೃದ್ಧಿ ಪಡಿಸುವ ಸೋಲಾರ್‌ ಸಿಟಿ ಕಂಪನಿಯ ಹಣಕಾಸು ವಿಭಾಗದಲ್ಲಿ ವೈಭವ್ ತನೇಜಾ ಕೆಲಸ ಮಾಡುತ್ತಿದ್ದರು. ಟೆಸ್ಲಾ 2016 ರಲ್ಲಿ ಈ ಸೋಲಾರ್‌ ಸಿಟಿ ಕಂಪನಿಯನ್ನು ಖರೀದಿಸಿತ್ತು. ಇದಕ್ಕೂ ಮೊದಲು ತನೇಜಾ ಅವರು ಜುಲೈ 1999 ಮತ್ತು ಮಾರ್ಚ್ 2016 ರ ನಡುವೆ ಪ್ರೈಸ್‌ವಾಟರ್‌ ಹೌಸ್‌ಕೂಪರ್ಸ್‌ನಲ್ಲಿ ಉದ್ಯೋಗಿಯಾಗಿದ್ದರು.

    ಬೆಂಗಳೂರಿಗೆ ಇದೆ ಸಂಬಂಧ
    ಭಾರತದಲ್ಲಿ ಕಂಪನಿ ಸ್ಥಾಪನೆ ಸಂಬಂಧ ಟೆಸ್ಲಾ ಕೇಂದ್ರ ಸರ್ಕಾರದ ಜೊತೆ ಕೆಲ ವರ್ಷಗಳಿಂದ ಮಾತುಕತೆ ನಡೆಸುತ್ತಿದೆ. ಇದಕ್ಕೆ ಪೂರಕ ಎಂಬಂತೆ 2021 ಜನವರಿಯಲ್ಲಿ ಟೆಸ್ಲಾ ಭಾರತದಲ್ಲಿ ಕಚೇರಿ ತೆರೆಯುವ ಸಂಬಂಧ ನೋಂದಣಿ ಮಾಡಿತ್ತು. ಟೆಸ್ಲಾ ಇಂಡಿಯಾ ಮೋಟಾರ್ಸ್‌ ಆಂಡ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಬೆಂಗಳೂರಿನ (Bengaluru) ಲ್ಯಾವೆಲ್ಲೆ ರಸ್ತೆಯಲ್ಲಿ ಕಂಪನಿಯನ್ನು ನೋಂದಣಿ ಮಾಡುವ ಜೊತೆಗೆ ಮೂರು ನಿರ್ದೇಶಕರನ್ನೂ ನೇಮಿಸಿತ್ತು. ಮೂರು ನಿರ್ದೇಶಕರ ಪೈಕಿ ವೈಭವ್ ತನೇಜಾ ಅವರ ಹೆಸರು ಇತ್ತು. ವೈಭವ್ ತನೇಜಾ ಜೊತೆ ವೆಂಕಟರಂಗಮ್‌ ಶ್ರೀರಾಮ್‌ ಮತ್ತು ಜಾನ್‌ ಫೆನ್‌ಸ್ಟಿನ್‌ ಅವರನ್ನು ಟೆಸ್ಲಾ ನಿರ್ದೇಶಕರನ್ನಾಗಿ ನೇಮಿಸಿತ್ತು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Tesla India Office: ಭಾರತದ ಈ ನಗರದಲ್ಲಿ ಆರಂಭವಾಗಲಿದೆ ಟೆಸ್ಲಾದ ಮೊದಲ ಕಚೇರಿ

    Tesla India Office: ಭಾರತದ ಈ ನಗರದಲ್ಲಿ ಆರಂಭವಾಗಲಿದೆ ಟೆಸ್ಲಾದ ಮೊದಲ ಕಚೇರಿ

    ಮುಂಬೈ: ಯುಎಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಎಲೋನ್‌ ಮಸ್ಕ್‌ (Elon Musk) ನಡುವಿನ ಭೇಟಿಯ ಒಂದು ತಿಂಗಳ ನಂತರ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಟೆಸ್ಲಾ ಕಂಪನಿ ತನ್ನ ಶಾಖೆಯನ್ನ ತೆರೆಯಲು ಜಾಗ ಪಡೆದುಕೊಂಡಿದೆ.

    ಟೆಸ್ಲಾ ಇಂಡಿಯಾ ಮೋಟಾರ್ (Tesla India Motors) ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ (Energy Private Limited) ಪುಣೆಯ ವಿಮಾನ ನಗರದಲ್ಲಿರುವ ಪಂಚಶೀಲ್ ಬ್ಯುಸಿನೆಸ್‌ ಪಾರ್ಕ್‌ನಲ್ಲಿ ಕಚೇರಿಗೆ ತೆರೆಯಲು ಸ್ಥಳವನ್ನ ಗುತ್ತಿಗೆ ಪಡೆದುಕೊಂಡಿದೆ.

    ಇದು ಭಾರತದ ಮಾರುಕಟ್ಟೆಗೆ ಟೆಸ್ಲಾ (Tesla) ಎಲೆಕ್ಟ್ರಿಕ್‌ ವಾಹನ ಪ್ರವೇಶಕ್ಕೆ ದೊಡ್ಡ ಹೆಜ್ಜೆಯಾಗಿದೆ. ಈ ಹಿಂದೆ ಟೆಸ್ಲಾದ ಹಿರಿಯ ಅಧಿಕಾರಿಗಳು ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆ ರೂಪಿಸಲು ಇನ್ವೆಸ್ಟ್‌ ಇಂಡಿಯಾದ ತಮ್ಮ ಸಹವರ್ತಿಗಳೊಂದಿಗೆ ಚರ್ಚಿಸಿದ್ದರು. ಇದನ್ನೂ ಓದಿ: JioBook: 16,499 ರೂ.ಗೆ ಸಿಗಲಿದೆ ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್..!

    ಮಾಹಿತಿಗಳ ಪ್ರಕಾರ, ಟೆಸ್ಲಾದ ಭಾರತೀಯ ಅಂಗಸಂಸ್ಥೆಯು ಪಂಚಶೀಲ್ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ಬಿ ವಿಂಗ್‌ನ ಮೊದಲ ಮಹಡಿಯಲ್ಲಿ 5,580 ಚದರ ಅಡಿ ಕಚೇರಿ ಸ್ಥಳಕ್ಕಾಗಿ ಟೇಬಲ್‌ಸ್ಪೇಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ 5 ವರ್ಷಗಳ ಗುತ್ತಿಗೆ ಪಡೆದುಕೊಂಡಿದೆ. ಒಪ್ಪಂದದ ಪ್ರಕಾರ 34.95 ಲಕ್ಷ ಭದ್ರತಾ ಠೇವಣಿಯೊಂದಿಗೆ ಮಾಸಿಕ 11.65 ಲಕ್ಷ ರೂ.ಗಳನ್ನು ಟೆಸ್ಲಾ ಸಂಸ್ಥೆ ಪಾವತಿಸಲಿದೆ. ಇದನ್ನೂ ಓದಿ: ದೈತ್ಯ ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌ಗೆ ಸೆಡ್ಡು ಹೊಡೆಯಲು TikTok ಮಾಸ್ಟರ್‌ ಪ್ಲ್ಯಾನ್‌!

    ಇದೇ 2023ರ ಅಕ್ಟೋಬರ್ 1 ರಿಂದ ಕಚೇರಿ ಸ್ಥಳದ ಬಾಡಿಗೆ ಪ್ರಾರಂಭವಾಗುತ್ತದೆ. ಈ ಲೀಸ್ ಒಪ್ಪಂದ 36 ತಿಂಗಳ ಲಾಕ್​ ಇನ್​ ಅವಧಿ ಹೊಂದಿದ್ದು, ಪ್ರತಿ ವರ್ಷ 5% ರಷ್ಟು ಬಾಡಿಗೆ ಹೆಚ್ಚಳ ಮಾಡುವ ಷರತ್ತಿಗೆ ಎರಡು ಕಂಪನಿಗಳು ಒಳಪಟ್ಟಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದಲ್ಲಿ 20 ಲಕ್ಷಕ್ಕೆ ಕಾರು – ಕೇಂದ್ರದ ಜೊತೆ ಟೆಸ್ಲಾ ಮಾತುಕತೆ

    ಭಾರತದಲ್ಲಿ 20 ಲಕ್ಷಕ್ಕೆ ಕಾರು – ಕೇಂದ್ರದ ಜೊತೆ ಟೆಸ್ಲಾ ಮಾತುಕತೆ

    ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು ಘಟಕ (Electric Car Manufacturing Plant) ನಿರ್ಮಾಣ ಸಂಬಂಧ ಎಲಾನ್‌ ಮಸ್ಕ್‌ (Elon Musk) ಮಾಲೀಕತ್ವದ ಟೆಸ್ಲಾ (Tesla) ಕಂಪನಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ.

    ವಾರ್ಷಿಕ 5 ಲಕ್ಷ ಎಲೆಕ್ಟ್ರಿಕ್ ವಾಹನ ತಯಾರಿಸುವ ಸಾಮರ್ಥ್ಯದ ಘಟಕ ಸ್ಥಾಪನೆ ಸಂಬಂಧ ಹೂಡಿಕೆಯ ಪ್ರಸ್ತಾಪಕ್ಕಾಗಿ ಟೆಸ್ಲಾ ಭಾರತ ಸರ್ಕಾರದೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಭಾರತದಲ್ಲಿ ತಯಾರಾಗುವ ಎಲೆಕ್ಟ್ರಿಕ್ ಕಾರಿನ ಬೆಲೆ 20 ಲಕ್ಷ ರೂ. ನಿಂದ ಆರಂಭವಾಗುವ ಸಾಧ್ಯತೆಯಿದೆ. ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳಿಗೆ ಭಾರತದಿಂದ (India) ಕಾರುಗಳನ್ನು ರಫ್ತು ಮಾಡಲು ಟೆಸ್ಲಾ ಮುಂದಾಗಿದೆ ಎಂದು ವರದಿಯಾಗಿದೆ.  ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

     

    ಕಳೆದ ತಿಂಗಳು ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಮಸ್ಕ್ ಅವರು ಪ್ರಧಾನಿ ಮೋದಿ (PM Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

    ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್‌, ಈ ಭೇಟಿ ನನಗೆ ರೋಮಾಂಚನಕಾರಿ ಅನುಭವ ನೀಡಿದೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಇದರಿಂದಾಗಿ ಅವರ ಬಗ್ಗೆ ನನಗೆ ತಿಳಿದಿದೆ. ಅವರು ನನಗೆ ಭಾರತಕ್ಕೆ ಆಮಂತ್ರಣ ನೀಡಿದ್ದಾರೆ. ಶೀಘ್ರದಲ್ಲೇ ನಾನು ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದ್ದರು.

    ಮೋದಿಯವರು ನಿಜವಾಗಿಯೂ ಭಾರತದ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾರೆ. ಅಲ್ಲದೇ ಅವರು ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಈಗ ತಮ್ಮ ದೇಶದಲ್ಲಿ ಹೂಡಿಕೆ ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಇದು ಭಾರತದ ಅಭಿವೃದ್ಧಿಗೆ ಸಹಕಾರವಾಗಲಿದೆ. ಇದೇ ವರ್ಷದಲ್ಲಿ ಟೆಸ್ಲಾ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪಿಸಲು ಸ್ಥಳವನ್ನು ಗುರುತಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದರು.

    2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮಸ್ಕ್ ಬಳಿ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. 2020ರ ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿರುವ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ.

    ಈಗಾಗಲೇ ಅಮೆರಿಕ, ಕೆನಡಾ, ಜರ್ಮನಿ, ಚೀನಾ, ಮೆಕ್ಸಿಕೋದಲ್ಲಿ ಟೆಸ್ಲಾ ಕಂಪನಿ ದೊಡ್ಡ ಫ್ಯಾಕ್ಟರಿ ತೆರೆದಿದೆ. ಏಷ್ಯಾ ಖಂಡದ ದೇಶಗಳಿಗೆ ಚೀನಾದಿಂದ ಕಾರುಗಳನ್ನು ರಫ್ತು ಮಾಡಲು ಮುಂದಾಗಿತ್ತು. ಟೆಸ್ಲಾದ ಈ ನೀತಿಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನೂ ಸಹ ಮೋದಿಯ ಅಭಿಮಾನಿಯಾಗಿದ್ದೇನೆ: ಎಲಾನ್ ಮಸ್ಕ್

    ನಾನೂ ಸಹ ಮೋದಿಯ ಅಭಿಮಾನಿಯಾಗಿದ್ದೇನೆ: ಎಲಾನ್ ಮಸ್ಕ್

    ನ್ಯೂಯಾರ್ಕ್: ನಾನು ಭಾರತದ (India) ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಅಭಿಮಾನಿ ಎಂದು ಟೆಸ್ಲಾ (Tesla) ಸಿಇಒ ಮತ್ತು ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ.

    ಅಮೆರಿಕ ಪ್ರವಾಸದಲ್ಲಿರುವ ಮೋದಿಯವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭೇಟಿ ನನಗೆ ರೋಮಾಂಚನಕಾರಿ ಅನುಭವ ನೀಡಿದೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಇದರಿಂದಾಗಿ ಅವರ ಬಗ್ಗೆ ನನಗೆ ತಿಳಿದಿದೆ. ಅವರು ನನಗೆ ಭಾರತಕ್ಕೆ ಆಮಂತ್ರಣ ನೀಡಿದ್ದಾರೆ. ಶೀಘ್ರದಲ್ಲೇ ನಾನು ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

    ಮೋದಿಯವರು ನಿಜವಾಗಿಯೂ ಭಾರತದ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾರೆ. ಅಲ್ಲದೇ ಅವರು ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಈಗ ತಮ್ಮ ದೇಶದಲ್ಲಿ ಹೂಡಿಕೆ ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಇದು ಭಾರತದ ಅಭಿವೃದ್ಧಿಗೆ ಸಹಕಾರವಾಗಲಿದೆ. ಇದೇ ವರ್ಷದಲ್ಲಿ ಟೆಸ್ಲಾ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪಿಸಲು ಸ್ಥಳವನ್ನು ಗುರುತಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

    2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮಸ್ಕ್ ಬಳಿ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. 2020ರ ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿರುವ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಬಾಂಬೆ ಐಐಟಿಗೆ 315 ಕೋಟಿ ರೂ. ದೇಣಿಗೆ ನೀಡಿದ ಇನ್ಫೋಸಿಸ್ ಸಹ ಸಂಸ್ಥಾಪಕ

  • ಮತ್ತೆ ವಿಶ್ವದ ನಂ.1 ಶ್ರೀಮಂತನಾದ ಎಲಾನ್ ಮಸ್ಕ್

    ಮತ್ತೆ ವಿಶ್ವದ ನಂ.1 ಶ್ರೀಮಂತನಾದ ಎಲಾನ್ ಮಸ್ಕ್

    ವಾಷಿಂಗ್ಟನ್: ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ (Worlds Richest Person) ಹೊರಹೊಮ್ಮಿದ್ದಾರೆ. LMVH ಷೇರುಗಳ ಬೆಲೆ ಕುಸಿತ ಕಂಡ ನಂತರ ಖ್ಯಾತ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ (Bernard Arnault) ಅವರನ್ನ ಹಿಂದಿಕ್ಕಿ, ಮಸ್ಕ್ ನಂ.1 ಸ್ಥಾನಕ್ಕೇರಿದ್ದಾರೆ.

    ಬುಧವಾರ ಪ್ಯಾರಿಸ್‌ನ ವಹಿವಾಟಿನಲ್ಲಿ ಅರ್ನಾಲ್ಟ್‌ನ LMVH ಷೇರುಗಳ ಬೆಲೆ 2.6% ಕಡಿಮೆಯಾಗಿದೆ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಅಲ್ಲದೇ ಎಲ್‌ವಿಎಂಹೆಚ್ ಷೇರುಗಳ ಬೆಲೆ ಕಳೆದ ಏಪ್ರಿಲ್‌ನಿಂದ ಸುಮಾರು 10 ಪ್ರತಿಶತದಷ್ಟು ಕುಸಿತ ಕಂಡಿದೆ. ಇದರಿಂದ ಒಂದೇ ದಿನದಲ್ಲಿ ಅರ್ನಾಲ್ಟ್‌ ಸಂಪತ್ತಿನ ಮೌಲ್ಯದಲ್ಲಿ ಏಕಾಏಕಿ 11 ಶತಕೋಟಿ ಡಾಲರ್‌ನಷ್ಟು ಸಂಪತ್ತು ಕರಗಿದೆ. ಇದನ್ನೂ ಓದಿ: ಕುಳಿತಲ್ಲೇ ನೋಡಿ ನಿಮ್ಮ ನಗರ – ಗೂಗಲ್  ಸ್ಟ್ರೀಟ್ ವ್ಯೂ ಈಗ ಇಡೀ ಭಾರತದಲ್ಲಿ ಲಭ್ಯ

    2022ರ ಡಿಸೆಂಬರ್‌ನಲ್ಲಿ ಎಲಾನ್ ಮಸ್ಕ್ ಅವರ ಟೆಸ್ಲಾ (Tesla) ಷೇರು ಮೌಲ್ಯ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಮಸ್ಕ್‌ ಅವರ ಸಂಪತ್ತಿನ ಮೌಲ್ಯವು 200 ಶತಕೋಟಿ ಡಾಲರ್‌ನಷ್ಟು ಕಡಿಮೆಯಾಗಿತ್ತು. ಏಕೆಂದರೆ ಮಸ್ಕ್ ಅವರು ತಮ್ಮಲ್ಲಿದ್ದ ಷೇರುಗಳನ್ನ ಮಾರಾಟ ಮಾಡಿ 44 ಶತಕೋಟಿ ಡಾಲರ್‌ಗೆ ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸಿದ್ದರು. ಇದರಿಂದಾಗಿ ಮೊದಲ ಬಾರಿಗೆ ಬ್ರಾಂಡ್ ಲೂಯಿ ವಿಟಾನ್ ಮೂಲ ಕಂಪನಿಯಾದ LMVH ಸಿಇಒ ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಇದನ್ನೂ ಓದಿ: ಟ್ವಿಟ್ಟರ್‌ಗೆ ಹೊಸ ಸಿಇಒ – ಅಧಿಕೃತವಾಗಿ ಘೋಷಿಸಿದ ಮಸ್ಕ್