Tag: ಟೆಸ್ಟ್ ಪಂದ್ಯ

  • ವೇಗದ ಬೌಲರ್‌ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ: ಇಶಾಂತ್ ಶರ್ಮಾ

    ವೇಗದ ಬೌಲರ್‌ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ: ಇಶಾಂತ್ ಶರ್ಮಾ

    ನವದೆಹಲಿ: ಬಹುನಿರೀಕ್ಷಿತ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ಆರಂಭದಲ್ಲೇ ಟೀಂ ಇಂಡಿಯಾ ಪ್ರಮುಖ ವೇಗಿಗಳ ಸಮಸ್ಯೆ ಎದುರಿಸಿದ ಹೊರತಾಗಿಯೂ ತಂಡದ ಪೇಸರ್ ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

    ಟೀಂ ಇಂಡಿಯಾ ಉತ್ತಮ ವೇಗದ ಬೌಲರ್ ಗಳನ್ನು ನೀಡುವ ಸಾಮರ್ಥ್ಯ ಹೊಂದಿಲ್ಲ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಆದರೆ ಸದ್ಯ ತಂಡದಲ್ಲಿ 8 ರಿಂದ 9 ವೇಗಿಗಳು ಇದ್ದು ಯಾವುದೇ ಸಂದರ್ಭದಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಸಾಮರ್ಥ್ಯ ಟೀಂ ಇಂಡಿಯಾ ಹೊಂದಿದೆ ಎಂದು ತಿಳಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಗಸ್ಟ್ 1 ರಿಂದ ಆರಂಭಗೊಳ್ಳಲಿದ್ದು, ಗಾಯದ ಸಮಸ್ಯೆಯಿಂದ ತಂಡದ ಪ್ರಮುಖ ವೇಗಿಗಳಾದ ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬುಮ್ರಾ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದರೆ ಇವರ ಹೊರತಾಗಿಯೂ ಮಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಎದುರಾಳಿಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಅದ್ದರಿಂದ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಅವಕಾಶಗಳು ಹೆಚ್ಚಿದೆ ಎಂದು ಇಶಾಂತ್ ಅಭಿಪ್ರಾಯಪಟ್ಟಿದ್ದಾರೆ.

    ಇಂಗ್ಲೆಂಡ್ ಪಿಚ್ ಗಳು ಸಹ ವೇಗದ ಬೌಲಿಂಗ್ ಹೆಚ್ಚು ಸಹಕಾರ ನೀಡುವುದರಿಂದ ಬೌಲರ್ ಗಳು ಉತ್ತಮ ಸ್ಪೇಲ್ ನಡೆಸಲು ಸಾಧ್ಯ. ಆದರೆ ತವರು ನೆಲದಲ್ಲಿ ಹಾಗೂ ಇಂಗ್ಲೆಂಡ್ ನಲ್ಲಿ ಆಡಲು ಸಾಕಷ್ಟು ವ್ಯತ್ಯಾಸಗಳಿದೆ. ಅವುಗಳನ್ನು ಅರಿತು ಬೌಲ್ ಮಾಡಬೇಕಿದೆ ಎಂದು ಹೇಳಿದ್ದಾರೆ.

    ತಮ್ಮ ಬೌಲಿಂಗ್ ನಲ್ಲಿಯೂ ಸಾಕಷ್ಟು ಸುಧಾರಣೆಯಾಗಿದೆ. ಈ ಹಿಂದೆ ತರಬೇತಿಯ ಅಗತ್ಯದ ಮಹತ್ವದ ಬಗ್ಗೆ ತಿಳಿದಿರಲಿಲ್ಲ. ಸದ್ಯ ಉತ್ತಮ ತರಬೇತಿ ಪಡೆಯುತ್ತಿದ್ದು, ತಮ್ಮ ಬೌಲಿಂಗ್ ಕೌಶಲ್ಯಗಳಲ್ಲಿ ಮಹತ್ವದ ಬದಲಾವಣೆಯಾಗಿದೆ ಎಂದು ತಿಳಿಸಿದ್ದಾರೆ.

  • ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆದರಿದ ಕ್ರಿಕೆಟ್ ಶಿಶು – ಐತಿಹಾಸಿಕ ಗೆಲುವು ಪಡೆದ ರಹಾನೆ ಬಳಗ

    ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆದರಿದ ಕ್ರಿಕೆಟ್ ಶಿಶು – ಐತಿಹಾಸಿಕ ಗೆಲುವು ಪಡೆದ ರಹಾನೆ ಬಳಗ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 262 ರನ್ ಗಳಿಂದ ಗೆದ್ದುಕೊಂಡಿದೆ.

    ಒಂದೇ ದಿನದಲ್ಲಿ ಅಫ್ಘಾನ್ ತಂಡವನ್ನು ಎರಡು ಬಾರಿ ಅಲೌಟ್ ಮಾಡಿದ ಟೀಂ ಇಂಡಿಯಾ, ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಆಘ್ಘಾನ್‍ಗೆ ಸೋಲಿನ ರುಚಿ ತೋರಿಸಿದ್ದು, ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

    ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ವಿರುದ್ಧ ತಿರುಗಿ ಬಿದ್ದ ಅಫ್ಘಾನ್ ಬೌಲರ್ ಗಳು 474 ರನ್ ಗಳಿಗೆ ತಂಡವನ್ನು ಕಟ್ಟಿ ಹಾಕಲು ಯಶಸ್ವಿಯಾದರು. ಆದರೆ ಬೃಹತ್ ಮೊತ್ತ ಬೆನ್ನತ್ತಿದ್ದ ಅಫ್ಘಾನ್ ಪಡೆ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 27.5 ಓವರ್‍ಗಳಲ್ಲಿ ಕೇವಲ 109 ರನ್‍ಗಳಿಗೆ ಆಲೌಟಾಗಿತ್ತು. ಈ ವೇಳೆ ಅಫ್ಘಾನ್ ವಿರುದ್ಧ ಫಾಲೋವನ್ ಎದುರಿಸಿದ ಟೀಂ ಇಂಡಿಯಾ ಮತ್ತೆ ಬ್ಯಾಟಿಂಗ್ ಗೆ ಆಹ್ವಾನಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲೂ ಯಾವುದೇ ಪ್ರತಿರೋಧವನ್ನು ತೋರದ ಅಫ್ಘಾನ್ ಮತ್ತೆ 38.4 ಓವರ್‍ಗಳಲ್ಲಿ 103 ರನ್‍ಗಳಿಗೆ ತನ್ನ ಎಲ್ಲಾ ಟಿಕೆಟ್ ಕಳೆದುಕೊಂಡಿತು.

    ಅಫ್ಘಾನ ಪರ ಮೊದಲ ಇನ್ನಿಂಗ್ಸ್ ನಲ್ಲಿ ಮೊಹಮ್ಮದ್ ಶಹ್ಜಾದ್ (13), ರಹ್ಮತ್ ಶಾಹ (14), ಹಶ್ಮತುಲ್ಲಾಹ್ ಶಹೀದಿ (11), ನಾಯಕ ಅಸ್ಗರ್ ಸ್ಟಾನಿಕ್‍ಜಾಯಿ (11), ರಶೀದ್ ಖಾನ್ (12) ಎರಡಂಕಿ ದಾಟಿಲು ಯಶಸ್ವಿಯಾದರು. ಎರಡನೇ ಇನ್ನಿಂಗ್ಸ್ ನಲ್ಲಿ ಅಸ್ಗರ್ ಸ್ಟಾನಿಕ್‍ಜಾಯಿ (25) ಹಾಗೂ ಹಶ್ಮತ್‍ತುಲ್ಲಾ ಶಾಹಿದಿ (36 ಅಜೇಯ) ಅಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಇತರ ಆಟಗಾರರು ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು.

    ಇನ್ನು ಭಾರತ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಜಡೇಜಾ ಮೊದಲ ಇನ್ನಿಂಗ್ಸ್ ನಲ್ಲಿ 4, ಎರಡನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಎರಡು ಇನ್ನಿಂಗ್ಸ್ ಗಳಿಂದ ಅಶ್ವಿನ್ 5, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ತಲಾ 4 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ವೇಳೆ ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್‍ನಲ್ಲಿ 100 ವಿಕೆಟ್‍ಗಳ ಸಾಧನೆ ಮಾಡಿದರು.

    ಇದಕ್ಕೂ ಮುನ್ನ ಟೀಂ ಇಂಡಿಯಾ ಪರ ಎರಡನೇ ದಿನದಾಟದಲ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ 71 ರನ್ ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣರಾದರು. ಇನ್ನು ಅಫ್ಘಾನ್ ಪರ ಯಮಿನ್ ಅಹ್ಮದ್‍ಜಾಯ್ 3, ವಫಾದಾರ್ ಮತ್ತು ರಶೀದ್ ಖಾನ್ ತಲಾ 2, ಮುಜೀಬ್ ಉರ್ ರೆಹ್ಮಾನ್ ಹಾಗೂ ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆದರು.

  • ಭಾರತ -ಅಫ್ಘಾನಿಸ್ಥಾನ ಟೆಸ್ಟ್ ಕ್ರಿಕೆಟ್‍ಗೆ ಶುಭಕೋರಿದ ಪ್ರಧಾನಿ ಮೋದಿ

    ಭಾರತ -ಅಫ್ಘಾನಿಸ್ಥಾನ ಟೆಸ್ಟ್ ಕ್ರಿಕೆಟ್‍ಗೆ ಶುಭಕೋರಿದ ಪ್ರಧಾನಿ ಮೋದಿ

    ಬೆಂಗಳೂರು: ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯ ಆಡುತ್ತಿರುವ ಅಫ್ಘಾನಿಸ್ಥಾನ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.

    ಬುಧವಾರ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅವರು, ಅಫ್ಘಾನಿಸ್ಥಾನ ತಂಡವು ಮೊದಲ ಬಾರಿಗೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಡಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಭಿನಂದನೆ. ಇದೊಂದು ಐತಿಹಾಸಿಕ ಪಂದ್ಯವಾಗಿದ್ದು, ನಮ್ಮ ನೆಲವನ್ನು ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಉಭಯ ತಂಡಗಳಿಗೆ ಶುಭವಾಗಲಿ. ಕ್ರೀಡೆ ಎರಡು ದೇಶಗಳ ಜನರನ್ನು ಮತ್ತಷ್ಟು ಹತ್ತಿರಗೊಳಿಸುತ್ತಿದೆ ಹಾಗೂ ಸಂಬಂಧ ಬಲಪಡಿಸುತ್ತದೆ ಎಂದು ಬರೆದಿದ್ದಾರೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ನಲ್ಲಿ ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇತ್ತೀಚಿನ ವರದಿ ಬಂದಾಗ 45.1 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿದೆ.

    ಶಿಖರ್ ಧವನ್ 107 ರನ್(96 ಎಸೆತ, 19 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು. ಮುರಳಿ ವಿಜಯ್ ಔಟಾಗದೇ 94 ರನ್(128 ಎಸೆತ, 14 ಬೌಂಡರಿ, 1 ಸಿಕ್ಸ್), ಕೆಎಲ್ ರಾಹುಲ್ ರಾಹುಲ್ ಔಟಾಗದೇ 33 ರನ್(48 ಎಸೆತ, 4 ಬೌಂಡರಿ) ಹೊಡೆದಿದ್ದಾರೆ.

  • ಅರ್ಧ ವೃತ್ತಿ ಜೀವನ ಮುಗಿದಿದೆ – ಟೆಸ್ಟ್ ಕ್ರಿಕೆಟ್ ದಾಖಲೆಯ ಯೋಚನೆ ಇಲ್ಲ: ರೋಹಿತ್ ಶರ್ಮಾ

    ಅರ್ಧ ವೃತ್ತಿ ಜೀವನ ಮುಗಿದಿದೆ – ಟೆಸ್ಟ್ ಕ್ರಿಕೆಟ್ ದಾಖಲೆಯ ಯೋಚನೆ ಇಲ್ಲ: ರೋಹಿತ್ ಶರ್ಮಾ

    ಮುಂಬೈ: ಸಿಮೀತ ಓವರ್ ಗಳ ರನ್ ಮಿಷಿನ್ ಎಂದೇ ಹೆಸರು ಪಡೆದಿರುವ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಕುರಿತು ಸದ್ಯ ಯಾವುದೇ ಯೋಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ಸದ್ಯ ತಮ್ಮ ವೃತ್ತಿ ಜೀವನ ಅರ್ಧ ಭಾಗ ಪೂರ್ಣಗೊಂಡಿದ್ದು, ಉಳಿದ ಸಮಯವನ್ನು ಉತ್ತಮ ಪ್ರದರ್ಶನ ನೀಡಿ ಸಂತಸದಿಂದ ಕಳೆಯಬೇಕು. ಸಿಮೀತ ಓವರ್ ಕ್ರಿಕೆಟ್ ಕಡೆ ಹೆಚ್ಚು ಗಮನ ಹರಿಸಿದ್ದು, ಆಯ್ಕೆ ಸಮಿತಿ ತನ್ನನ್ನು ಟೆಸ್ಟ್ ಕ್ರಿಕೆಟ್‍ಗೆ ಆಯ್ಕೆ ಮಾಡುವ ಕುರಿತು ಚಿಂತನೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

    ಟೀಂ ಇಂಡಿಯಾ ಪರ ಸಿಮೀತ ಓವರ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರೋಹಿತ್, ಟೆಸ್ಟ್ ಮಾದರಿಯಲ್ಲಿ ಕಳಪೆ ದಾಖಲೆಯನ್ನು ಹೊಂದಿದ್ದಾರೆ. ಇದುವರೆಗೂ 25 ಟೆಸ್ಟ್ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ 39.97 ಸರಾಸರಿಯಲ್ಲಿ 1,479 ರನ್ ಗಳನ್ನು ಗಳಿಸಿದ್ದಾರೆ.

    20 ವರ್ಷ ವಯಸ್ಸಿಲ್ಲೇ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ರೋಹಿತ್ ಶರ್ಮಾ, 6 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಕಳಪೆ ಫಾರ್ಮ್ ನಿಂದ ಬಹುಬೇಗ ಟೆಸ್ಟ್ ಕ್ರಿಕೆಟ್ ಅವಕಾಶಗಳನ್ನು ಕೈಚೆಲ್ಲಿದ್ದರು. ಅಲ್ಲದೇ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಕಳಪೆ ಪ್ರದರ್ಶನ ನೀಡಿದ ಕಾರಣ ಮುಂಬರುವ ಜೂನ್ 14 ರಂದು ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಡೆಯುವ ಟೆಸ್ಟ್ ನಿಂದಲೂ ಕೈಬಿಡಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರೋಹಿತ್ ಶರ್ಮಾ ಅಯ್ಕೆ ಸಮಿತಿಯ ನಿರ್ಧಾರದಿಂದ ತಾನು ಅಚ್ಚರಿಗೊಂಡಿಲ್ಲ. ಟೀಂ ಇಂಡಿಯಾ ಮುಂದೇ ಹಲವು ಸರಣಿಗಳಲ್ಲಿ ಭಾಗವಹಿಸಬೇಕಿದೆ. ಸದ್ಯ ತಾನು ಈ ಕುರಿತು ಗಮನಹರಿಸಿರುವುದಾಗಿ ತಿಳಿಸಿದ್ದಾರೆ.

  • ಬೆಂಗ್ಳೂರಿನ ಟೆಸ್ಟ್ ವೇಳೆ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಕೊಹ್ಲಿ!

    ಬೆಂಗ್ಳೂರಿನ ಟೆಸ್ಟ್ ವೇಳೆ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಕೊಹ್ಲಿ!

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುವುದು ಖಚಿತವಾಗಿದ್ದು, ಈ ಕುರಿತು Surrey ತಂಡದ ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೊಹ್ಲಿಗೆ ಸ್ವಾಗತ ಕೋರಿ ಟ್ವೀಟ್ ಮಾಡಿದೆ.

    ಕೌಂಟಿ ಕ್ರಿಕೆಟ್ ನಲ್ಲಿ ಕೊಹ್ಲಿ ಭಾಗವಹಿಸುತ್ತಿರುವ ಕುರಿತು ಹೆಮ್ಮೆ ವ್ಯಕ್ತಪಡಿಸಿರುವ Surrey  ಕ್ಲಬ್, ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ನಮ್ಮ ತಂಡದಲ್ಲಿ ಆಡಲಿದ್ದಾರೆ ಎಂಬುದು ಸಂತಸದ ವಿಷಯ. ಜೂನ್ ತಿಂಗಳು ಪೂರ್ತಿ ಕೊಹ್ಲಿ ಅವರು ಕೌಂಟಿ ಕ್ರಿಕೆಟ್‍ನಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ಲಬ್ ತಿಳಿಸಿದೆ.

    ಕೌಂಟಿ ಕ್ರಿಕೆಟ್‍ನ ಭವಿಷ್ಯದ ಕುರಿತು ಪ್ರಶ್ನಿಸುತ್ತಿದ್ದ ವೇಳೆ ಕೊಹ್ಲಿಯಂತಹ ಆಟಗಾರರು ತಂಡದ ಪರ ಆಡುತ್ತಿರುವುದು ಉತ್ತಮ ಬೆಳವಣಿಗೆ. ಇದು ದೇಶಿಯ ಕ್ರಿಕೆಟ್‍ಗೆ ಪ್ರೇರಣೆ ನೀಡಲಿದೆ. ಅಲ್ಲದೇ ನಮ್ಮ ತಂಡದಲ್ಲಿ ಕೊಹ್ಲಿ ಆಡುವುದರಿಂದ ಅವರಿಂದ ಅನೇಕ ಸಲಹೆಗಳನ್ನು ಪಡೆದುಕೊಳ್ಳಲು ಆಟಗಾರರಿಗೆ ಅನುಕೂಲವಾಗುತ್ತದೆ ಎಂದು Surrey ತಂಡದ ನಿರ್ದೇಶಕ ಅಲೆಕ್ಸ್ ಸ್ಟಿವರ್ಟ್ ಹೇಳಿದ್ದಾರೆ.

    ಮುಂಬರುವ ಇಂಗ್ಲೆಂಡ್ ನಡುವಿನ ಟೂರ್ನಿಗೆ ಸಿದ್ಧತೆ ನಡೆಸಿಕೊಳ್ಳುವ ಉದ್ದೇಶದಿಂದ ವಿರಾಟ್ ಕೊಹ್ಲಿ ಕೌಟಿ ಕ್ರಿಕೆಟ್‍ನಲ್ಲಿ ಆಡುತ್ತಿದ್ದು, Surrey ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ಕೌಂಟಿ ಕ್ರಿಕೆಟ್ ನಲ್ಲಿ ಆಡಬೇಕೆನ್ನುವುದು ನನ್ನ ಕನಸಾಗಿತ್ತು. ಇದನ್ನು Surrey ಕ್ಲಬ್ ನನಸಾಗಿಸಿದೆ. ಇದಕ್ಕಾಗಿ ತಂಡದ ನಿರ್ದೇಶಕ ಅಲೆಕ್ ಸ್ಟಿವರ್ಟ್ ಹಾಗೂ ಅದರ ಆಡಳಿತ ಮಂಡಳಿಗೆ ಕೃತಜ್ಞನಾಗಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಕಳೆದ ಬಾರಿ ಇಂಗ್ಲೆಂಡ್ ವಿರುದ್ಧ ನಡೆದ ಪೂರ್ಣಾವಧಿಯ ಟೂರ್ನಿಯಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಸರಣಿಯಲ್ಲಿ ಸ್ವಿಂಗ್ ಬೌಲಿಂಗ್ ಎದುರಿಸಲು ಕಷ್ಟಪಟ್ಟಿದ್ದರು. ಅದರಲ್ಲೂ ಟೆಸ್ಟ್ ಮಾದರಿಯಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಕೌಂಟಿ ಕ್ರಿಕೆಟ್ ಪರ ಆಡಲು ಕೊಹ್ಲಿ ಸಹಿ ಹಾಕಿದ್ದಾರೆ.

    ಕೊಹ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಭಾಗವಹಿಸುವುದರಿಂದ ಇಂಗ್ಲೆಂಡ್ ಟೂರ್ನಿಗೂ ಮೊದಲು ಅಫ್ಘಾನಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ಜೂನ್ 14 ರಿಂದ 18 ವರೆಗೆ ನಡೆಯುವ ಏಕೈಕ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

  • ಇಂದಿನಿಂದ ಇಂಡೋ-ಆಸೀಸ್ 2ನೇ ಟೆಸ್ಟ್- ಮಹಾಕದನಕ್ಕೆ ಸಜ್ಜಾಗಿದೆ ಚಿನ್ನಸ್ವಾಮಿ ಕ್ರೀಡಾಂಗಣ

    ಇಂದಿನಿಂದ ಇಂಡೋ-ಆಸೀಸ್ 2ನೇ ಟೆಸ್ಟ್- ಮಹಾಕದನಕ್ಕೆ ಸಜ್ಜಾಗಿದೆ ಚಿನ್ನಸ್ವಾಮಿ ಕ್ರೀಡಾಂಗಣ

    – ತವರಲ್ಲಿ ಗೆಲ್ಲಿಸುವ ಜವಬ್ದಾರಿ ಕೋಚ್ ಕುಂಬ್ಳೆಗೆ

    ಬೆಂಗಳೂರು: ವಿಶ್ವ ಶ್ರೇಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇಂದಿನಿಂದ 2ನೇ ಟೆಸ್ಟ್ ಕದನ ಶುರುವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಪುಣೆಯಲ್ಲಿ ಭಾರತಕ್ಕೆ ಸೋಲುಣಿಸುವ ಮೂಲಕ 1-0 ಮುನ್ನಡೆ ಸಾಧಿಸಿರುವ ಸ್ಟೀವ್ ಸ್ಮಿತ್ ಪಡೆ ಗೆಲುವಿನ ಹುಮ್ಮಸ್ಸಿನಲ್ಲಿದೆ. ಆದ್ರೆ ಸೋಲಿನ ಸೇಡು ತೀರಿಸಿಕೊಳ್ಳೋಕೆ ಕೊಹ್ಲಿ ಹುಡುಗರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಎರಡು ತಂಡಗಳಲ್ಲೂ ಬಲಿಷ್ಠ ಆಟಗಾರರಿದ್ದಾರೆ. ಟೀಂ ಇಂಡಿಯಾಗೆ ಕಳಪೆ ಬ್ಯಾಟಿಂಗ್ ಪ್ರದರ್ಶನ ದೊಡ್ಡ ಹೊಡೆತ ಕೊಟ್ಟಿದೆ. ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆಗೆ ತವರು ನೆಲದಲ್ಲಿ ತಂಡವನ್ನು ಗೆಲುವಿನ ಹಳಿಗೆ ತರುವ ದೊಡ್ಡ ಜವಾಬ್ದಾರಿಯಿದೆ. ಜೊತೆಗೆ ಆಸೀಸ್ ಬ್ಯಾಟಿಂಗ್ ಪಡೆಯನ್ನ ಕಟ್ಟಿಹಾಕುವ ಆಯುಧಗಳಾದ ಅಶ್ವಿನ್, ಜಡೇಜಾ ಸರಿಯಾಗಿ ಆಡಿದ್ರೆ ಆದ್ರೆ ಕಾಂಗೂರುಗಳ ಬೆನ್ನೆಲುಬು ಮುರಿಯೋದು ಸುಲಭ.

    ಚಿನ್ನಸ್ವಾಮಿ ಅಂಗಳದಲ್ಲಿ ಆಸೀಸ್ ವಿರುದ್ಧ ಟೀಂ ಇಂಡಿಯಾ ಇದುವರೆಗೆ 05 ಟೆಸ್ಟ್ ಪಂದ್ಯಗಳನ್ನ ಆಡಿದ್ದು, 1ರಲ್ಲಿ ಜಯಭೇರಿ ಬಾರಿಸಿದೆ. ಆಸ್ಟ್ರೇಲಿಯಾ 2 ರಲ್ಲಿ ಗೆಲುವು ದಾಖಲಿಸಿದೆ. ಇನ್ನು 2 ಪಂದ್ಯಗಳಲ್ಲಿ ಫಲಿತಾಂಶ ಬಾರದೆ ಡ್ರಾನಲ್ಲಿ ಅಂತ್ಯವಾಗಿದೆ.

    ಒಟ್ನಲ್ಲಿ ಆಸೀಸ್ ಹಿಸ್ಟ್ರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನಾಗಿದೆ. ಆದ್ರೆ ಕುಂಬ್ಳೆ ಭಾರತಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಕೊಹ್ಲಿ ಪಡೆಯನ್ನ ಯಾವ ರೀತಿ ಗೆಲುವಿನ ಟ್ರ್ಯಾಕ್‍ ಗೆ ತರ್ತಾರೆ ಕಾದು ನೋಡ್ಬೇಕು.