Tag: ಟೆಲ್ ಅವೀವ್

  • ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೆಸ್ತೇನಿಯರ ದುರ್ಮರಣ

    ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೆಸ್ತೇನಿಯರ ದುರ್ಮರಣ

    – ಹಮಾಸ್ ಉಗ್ರರ ಸುರಂಗದಲ್ಲಿ ಐವರು ಒತ್ತೆಯಾಳುಗಳ ಶವ ಪತ್ತೆ

    ಟೆಲ್ ಅವೀವ್: ಒಂದೆಡೆ ಗಾಜಾದ ಮೇಲೆ ಇಸ್ರೇಲ್ (Israel) ವೈಮಾನಿಕ ದಾಳಿ (Airstrike) ನಡೆಸಿದ್ದರೆ, ಇನ್ನೊಂದೆಡೆ ಹಮಾಸ್ (Hamas) ಬಂಡುಕೋರರ ಸುರಂಗದಲ್ಲಿ ಐವರು ಒತ್ತೆಯಾಳುಗಳ ಶವ ಪತ್ತೆಯಾಗಿರುವುದಾಗಿ ವರದಿಯಾಗಿದೆ.

    ಗಾಜಾದ ಮಾಘಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೇನಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಉತ್ತರ ಗಾಜಾದಲ್ಲಿ ಹಮಾಸ್ ಉಗ್ರರ ಭೂಗತ ಸುರಂಗ ಜಾಲದಲ್ಲಿ ಸೆರೆಯಲ್ಲಿದ್ದ ಐವರು ಇಸ್ರೇಲಿ ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಗಾಜಾದ ಮೇಲೆ ಭಾನುವಾರ ರಾತ್ರಿ ಆರಂಭವಾದ ಇಸ್ರೇಲ್ ದಾಳಿ ಕ್ರಿಸ್‍ಮಸ್ ದಿನವಾದ ಸೋಮವಾರ ಬೆಳಗ್ಗೆವರೆಗೂ ಮುಂದುವರಿಯಿತು. ಈ ವೇಳೆ ಗಾಜಾದ ಅಲ್-ಬುರೇಜ್‍ನ ಮೇಲೆ ಇಸ್ರೇಲ್ ತೀವ್ರ ವೈಮಾನಿಕ ದಾಳಿ ನಡೆಸಿದೆ. ಪರಿಣಾಮ ಮಾಘಜಿ ನಿರಾಶ್ರಿತರ ಶಿಬಿರದಲ್ಲಿ 70 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.

    ಇದರ ನಡುವೆಯೇ ಬೆಥ್ ಲೆಹೆಮ್‍ನಲ್ಲಿ (Bethlehem) ಪ್ಯಾಲೇಸ್ತೇನಿ ಜನರು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅ.7ರಂದು ಹಮಾಸ್, ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ 200ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಸೆರೆ ಹಿಡಿದಿತ್ತು. ಹಿಂದಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಹಮಾಸ್ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇಸ್ರೇಲ್ 200 ಪ್ಯಾಲೇಸ್ತೇನಿ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಆಕ್ಸಿಡೆಂಟ್ ಆಗಿ ಕಟ್ ಆದ ತಲೆ ಮೂರೂವರೆ ಗಂಟೆ ಶೋಧದ ಬಳಿಕ ಸಿಕ್ತು..!

  • ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ – 195 ಮಂದಿ ಸಾವು

    ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ – 195 ಮಂದಿ ಸಾವು

    ಟೆಲ್ ಅವೀವ್: ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ (Israel) ನಡೆಸಿದ ವೈಮಾನಿಕ ದಾಳಿಯಿಂದ (Air Strike) ಕನಿಷ್ಠ 195 ಪ್ಯಾಲೆಸ್ತೀನ್‍ನ (Palestine) ನಾಗರೀಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಸುಮಾರು 770ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ದಾಳಿಯ ನಂತರ 120 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಈ ನಡುವೆ ಓರ್ವ ಇಸ್ರೇಲ್ ಸೈನಿಕ ಕೂಡ ಸಾವನ್ನಪ್ಪಿದ್ದಾನೆ ಎಂದು ಹಮಾಸ್ ಹೇಳಿದೆ. ಕಳೆದ ಎರಡು ದಿನಗಳ ದಾಳಿಯಲ್ಲಿ ಇಬ್ಬರು ಹಮಾಸ್ ಮಿಲಿಟರಿ ನಾಯಕರನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಅಲ್ಲದೇ ಇನ್ನೂ ಅಡಗಿರುವ ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ಕಮಾಂಡರ್‌ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ

    ಇಸ್ರೇಲ್, ಈಜಿಪ್ಟ್ ಮತ್ತು ಹಮಾಸ್ ನಡುವಿನ ಒಪ್ಪಂದದ ಅಡಿಯಲ್ಲಿ 500 ಜನರ ಪಟ್ಟಿಯಲ್ಲಿ ಕನಿಷ್ಠ 320 ವಿದೇಶಿ ನಾಗರಿಕರನ್ನು ಈಜಿಫ್ಟ್‌ಗೆ ಕಳುಹಿಸಲಾಗಿದೆ. ಉಳಿದ ವಿದೇಶಿ ನಾಗರಿಕರನ್ನು ಯುದ್ಧ ಪ್ರದೇಶದಿಂದ ಕಳಿಸುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಉಳಿದ ವಿದೇಶಿ ಪ್ರಜೆಗಳನ್ನು ಸುರಕ್ಷಿತವಾಗಿ ಈಜಿಫ್ಟ್‍ಗೆ ಕಳುಹಿಸಲು ಕ್ರಮಕೈಗೊಳ್ಳಲಾಗಿದೆ.

    ಇದರ ನಡುವೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಇಸ್ರೇಲ್‍ಗೆ ಒಂದು ತಿಂಗಳಲ್ಲಿ ತಮ್ಮ ಎರಡನೇ ಭೇಟಿಗಾಗಿ ಇಂದು ತೆರಳಲಿದ್ದಾರೆ. ಅಲ್ಲಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು (Benjamin Netanyahu) ಸೇರಿದಂತೆ ಇಸ್ರೇಲಿ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಮಸ್ಲಿಂ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಿ ಶಾಂತಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಇಸ್ರೇಲ್‌ ನಿಯಂತ್ರಣವಿಲ್ಲದ ಏಕೈಕ ಕ್ರಾಸಿಂಗ್‌ ದಾಟಿ ಈಜಿಪ್ಟ್‌ಗೆ ಹೊರಟ ವಿದೇಶಿಯರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

    ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

    ಟೆಲ್ ಅವೀವ್: ಇಸ್ರೇಲ್‍ನಿಂದ (Israel) ಹಮಾಸ್ (Hamas) ಉಗ್ರರು ಅಪಹರಿಸಿದ್ದ 200 ಒತ್ತೆಯಾಳುಗಳ ಪೈಕಿ ಇಬ್ಬರು ಅಮೆರಿಕದ (America) ಪ್ರಜೆಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಜನರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ.

    ಹಮಾಸ್ ಉಗ್ರರ ವಶದಲ್ಲಿದ್ದ ಅಮೆರಿಕ ಮೂಲದ ಜುಡಿತ್ ತೈ ರಾನನ್ ಮತ್ತು ಅವರ ಮಗಳು ನಟಾಲಿ ಶೋಷನಾ ರಾನನ್ ತಡರಾತ್ರಿ ಇಸ್ರೇಲ್‍ಗೆ ಮರಳಿದ್ದಾರೆ. ಅವರ ಬಿಡುಗಡೆ ಬಳಿಕ ಅಮೆರಿಕ ಅಧ್ಯಕ್ಷ್ಯ ಜೋ ಬೈಡನ್ ಅವರ ಬಳಿ ಫೋನ್‍ನಲ್ಲಿ ಮಾತಾಡಿದ್ದಾರೆ. ಈ ವಿಷಯ ಬಹಳ ಸಂತೋಷ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Gaganyaan Mission: ತಾಂತ್ರಿಕ ದೋಷದಿಂದ ಸದ್ಯಕ್ಕೆ ಮೊದಲ ಪರೀಕ್ಷಾರ್ಥ ಹಾರಾಟ ಸ್ಥಗಿತ

    ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಕತಾರ್ ಮತ್ತು ಈಜಿಪ್ಟ್‌ನೊಂದಿಗೆ ಮಾತುಕತೆ ನಡೆಸಿ ಒತ್ತಡ ಹಾಕಲಾಗುತ್ತಿದೆ. ಇದರಿಂದ ಹೆಚ್ಚಿನ ಜನರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ಸಾಂಕೇತಿಕವಾಗಿ ಆದ ಬಿಡುಗಡೆ ಎಂದು ಇಸ್ರೇಲ್ ಸರ್ಕಾರ ಹೇಳಿಕೊಂಡಿದೆ.

    ಅಕ್ಟೋಬರ್ 7 ರಂದು ಇಸ್ರೇಲ್-ಗಾಜಾ ಗಡಿಯ (Gaza Border) ಸಮೀಪವಿರುವ ನಹಾಲ್ ಓಜ್ ಕಿಬ್ಬುಟ್ಜ್‍ನಿಂದ ಹಮಾಸ್ ಉಗ್ರರು ಅವರನ್ನು ಅಪಹರಿಸಿದ್ದರು. ಅಪಹರಿಸಲ್ಪಟ್ಟವರಲ್ಲಿ ಹೆಚ್ಚಿನವರು ಇನ್ನೂ ಜೀವಂತವಾಗಿದ್ದಾರೆ. 20 ಕ್ಕೂ ಹೆಚ್ಚು ಒತ್ತೆಯಾಳುಗಳು ಅಪ್ರಾಪ್ತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇದನ್ನೂ ಓದಿ: ಮದುವೆಯಾಗಿ ನೋಂದಾಯಿಸಿಕೊಂಡಿದ್ದ ಪ್ರೇಮಿಗಳನ್ನು ದೂರಮಾಡಿದ ಬಳ್ಳಾರಿ ಪೊಲೀಸರು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿ, ಮುಂಬೈನಿಂದ ಟೆಲ್ ಅವೀವ್‍ಗೆ ನೇರವಿಮಾನ- ಇಸ್ರೇಲ್‍ನಲ್ಲಿರೋ ಭಾರತೀಯರಿಗೆ ಮೋದಿ ಭರ್ಜರಿ ಗಿಫ್ಟ್

    ದೆಹಲಿ, ಮುಂಬೈನಿಂದ ಟೆಲ್ ಅವೀವ್‍ಗೆ ನೇರವಿಮಾನ- ಇಸ್ರೇಲ್‍ನಲ್ಲಿರೋ ಭಾರತೀಯರಿಗೆ ಮೋದಿ ಭರ್ಜರಿ ಗಿಫ್ಟ್

    ನವದೆಹಲಿ: ಇಸ್ರೇಲ್ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅಲ್ಲಿನ ಭಾರತೀಯರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಇಸ್ರೇಲ್‍ನಲ್ಲಿರೋ ಭಾರತೀಯರಿಗೆ ಓಐಸಿ ಕಾರ್ಡ್ ಪಡೆಯಲು ನಿಯಮಗಳನ್ನ ಸಡಿಲಿಸಿದ್ದು, ಮುಂಬೈ ಹಾಗೂ ದೆಹಲಿಯಿಂದ ಟೆಲ್ ಅವೀವ್‍ಗೆ ನೇರ ವಿಮಾನ ಸಂಚಾರ ಆರಂಭಿಸೋದಾಗಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರವಾಸದಲ್ಲಿ ಬುಧವಾರ ರಾತ್ರಿ ಭಾರತೀಯ ಮೂಲದ ಇಸ್ರೇಲ್ ಪ್ರಜೆಗಳನ್ನು ಭೇಟಿ ಮಾಡಿದ್ರು. ಟೆಲ್ ಅವೀವ್ ಕನ್ವೆನ್ಷನ್ ಹಾಲ್‍ನಲ್ಲಿ ಸೇರಿದ್ದ 5 ಸಾವಿರಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ 2 ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ರು.

    ಇಸ್ರೇಲ್‍ನಲ್ಲಿ ಕಡ್ಡಾಯ ಮಿಲಿಟರಿ ಸೇವೆ ಮಾಡಿರುವ ಭಾರತೀಯ ಮೂಲದ ಜನರು ಓಸಿಐ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ ಅಂದ್ರು. ಭಾರತೀಯ ಮೂಲದ ಇಸ್ರೇಲ್ ಜನರಿಗೆ ಒಸಿಐ(ಓವರ್‍ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ಕೊಡುವ ನಿಯಮಗಳನ್ನು ಸರಳ ಮಾಡ್ತೇವೆ. ಜೊತೆಗೆ ಮುಂಬೈ ಹಾಗೂ ದೆಹಲಿಯಿಂದ ಟೆಲ್ ಅವೀವ್‍ಗೆ ನೇರ ವಿಮಾನ ಸಂಚಾರ ಆರಂಭಿಸುತ್ತೇವೆ ಎಂದು ಮೋದಿ ಹೇಳಿದ್ರು.

    ಐ ಫಾರ್ ಐ ಅಂದ್ರೆ ಇಂಡಿಯಾ ಫಾರ್ ಇಸ್ರೇಲ್ ಹಾಗೂ ಇಸ್ರೇಲ್ ಫಾರ್ ಇಂಡಿಯಾ ಅಂತ ಪ್ರಧಾನಿ ಮೋದಿ ಹೇಳಿದ್ರು. ಮೋದಿ ಅವರನ್ನ ರಾಷ್ಟ್ರಪತಿ ರಿವ್ಲಿನ್ ಅಪ್ಪುಗೆ ಮೂಲಕ ಸ್ವಾಗತಿಸಿದ್ರು. ಈ ಬಗ್ಗೆ ಟ್ವೀಟ್ ಮಾಡಿರೋ ಮೋದಿ, ಇಸ್ರೇಲ್‍ನ ರಾಷ್ಟ್ರಪತಿ ಪ್ರೊಟೊಕಾಲ್ ಮುರಿದು ನನ್ನನ್ನು ಬಹಳ ಆತ್ಮೀಯವಾಗಿ ಬರಮಾಡಿಕೊಂಡ್ರು. ಇದು ಭಾರತೀಯರಿಗೆ ಸಿಕ್ಕ ಗೌರವದ ಸಂಕೇತ ಎಂದಿದ್ದಾರೆ.

    70 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್‍ಗೆ ಭೇಟಿ ನೀಡೋ ಅವಕಾಶ ಸಿಕ್ಕಿದೆ. ಇದು ಖುಷಿಯ ವಿಚಾರ ಎಂದು ಮೋದಿ ಹೇಳಿದ್ರು.