Tag: ಟೆರರಿಸ್ಟ್

  • ಜಮ್ಮು-ಕಾಶ್ಮೀರದ ಸೋಪೂರ್‌ನಲ್ಲಿ ಎನ್‌ಕೌಂಟರ್ – ಉಗ್ರರ ಒಳನುಸುಳುವಿಕೆ ತಡೆಯಲು ಕೇಂದ್ರ ಮಾಸ್ಟರ್‌ ಪ್ಲ್ಯಾನ್‌!

    ಜಮ್ಮು-ಕಾಶ್ಮೀರದ ಸೋಪೂರ್‌ನಲ್ಲಿ ಎನ್‌ಕೌಂಟರ್ – ಉಗ್ರರ ಒಳನುಸುಳುವಿಕೆ ತಡೆಯಲು ಕೇಂದ್ರ ಮಾಸ್ಟರ್‌ ಪ್ಲ್ಯಾನ್‌!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಸೋಪೋರ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಶನಿವಾರ ಗುಂಡಿನ ಚಕಮಕಿ (Sopore Encounter) ನಡೆದಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

    ಘಟನೆ ನಂತರ ಎಚ್ಚೆತ್ತ ಭದ್ರತಾ ಸಿಬ್ಬಂದಿ ಗುಂಡಿನ ದಾಳಿಗೆ ಪ್ರತಿದಾಳಿ ನಡೆಸಿದರು. ತಕ್ಷಣವೇ ಪಡೆಗಳು ಸೋಪೋರ್‌ನ ವಾಟರ್‌ಗಾಮ್ ಪ್ರದೇಶವನ್ನು ಸುತ್ತುವರಿದು ಉಗ್ರರನ್ನು ಬೇಟೆಯಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಅಸ್ಸಾಂ ಲೈಂಗಿಕ ದೌರ್ಜನ್ಯ ಆರೋಪಿ ಪೊಲೀಸರಿಂದ ಎಸ್ಕೇಪ್ ವೇಳೆ ಕೆರೆಗೆ ಬಿದ್ದು ಸಾವು

    ಕಳೆದ ಐದು ದಿನಗಳ ಹಿಂದೆಯಷ್ಟೇ ಉಧಮ್‌ಪುರದಲ್ಲಿ ಗಸ್ತು ಪಡೆಯ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದರು. ದಾಳಿಯಲ್ಲಿ ಸಿಆರ್‌ಪಿಎಫ್‌ನ 187 ಬೆಟಾಲಿಯನ್‌ನ ಇನ್ಸ್‌ಪೆಕ್ಟರ್ ಕುಲದೀಪ್ ಕುಮಾರ್ ಗುಂಡೇಟಿನಿಂದ ಗಾಯಗೊಂಡರು. ಇದನ್ನೂ ಓದಿ: ಪೋಲೆಂಡ್, ಉಕ್ರೇನ್ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಭಾರತಕ್ಕೆ ವಾಪಸ್

    J&K ನಲ್ಲಿ ಭಯೋತ್ಪಾದಕ ದಾಳಿಗಳ ಹೆಚ್ಚಳ:
    ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಇತ್ತೀಚೆಗೆ ಭಯೋತ್ಪಾದಕ ದಾಳಿಗಳು ಹೆಚ್ಚಾಗುತ್ತಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಏಕೆಂದರೆ ಇತ್ತೀಚೆಗೆ ದೋಡಾದ ಎನ್‌ಕೌಂಟರ್‌ನಲ್ಲಿ ಸೇನಾಧಿಕಾರಿ ಕ್ಯಾಪ್ಟನ್‌ ದೀಪಕ್‌ ಸಿಂಗ್‌ ಸಾವನ್ನಪ್ಪಿದ್ದರು, ಇದಕ್ಕೂ ಮುನ್ನ ಶಿವಗಢ-ಅಸ್ಸಾರ್‌ ಪ್ರದೇಶದ ಕಾರ್ಯಾಚರಣೆ ವೇಳೆ ಅರಣ್ಯ ಪ್ರದೇಶ ಭಾಗದಲ್ಲಿ ಅಧಿಕಾರಿಯೊಬ್ಬರಿಗೆ ಗುಂಡೇಟು ತಗುಲಿತ್ತು.

    ಹಾಗಾಗಿಯೇ ಈ ತಿಂಗಳ ಆರಂಭದಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಹ ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದರು. ದೆಹಲಿಯ ಸೌತ್ ಬ್ಲಾಕ್‌ನಲ್ಲಿ ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರೊಂದಿಗೆ ಮಾತುಕತೆ ನಡೆದಿ ಭದ್ರತೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿತ್ತು. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬೆಂಗಳೂರಿನ ಇಸ್ಕಾನ್ ಟೆಂಪಲ್‌ ಬಳಿ ಸಂಚಾರ ಮಾರ್ಗದಲ್ಲಿ ಬದಲಾವಣೆ

    ಕ್ರಿಯಾ ಯೋಜನೆಗೆ ಪ್ಲ್ಯಾನ್‌:
    ಕಾಶ್ಮೀರ ಕಣಿವೆಯನ್ನು ಭದ್ರ ಪಡಿಸಿರುವ ಕೇಂದ್ರ ಸರ್ಕಾರ ಇದೀಗ ಜಮ್ಮುವನ್ನು ಗುರಿಯಾಗಿಸುತ್ತಿರುವ ಉಗ್ರರನ್ನು ಮಟ್ಟಹಾಕಲು ಮುಂದಾಗಿದೆ. ಅದಕ್ಕಾಗಿ ಜಮ್ಮು ಪ್ರದೇಶದಲ್ಲಿ ಭದ್ರತೆ ಹೆಚ್ಚಿಸುವ ಅಗತ್ಯತೆಗಳನ್ನು ಗುರುತಿಸಿದೆ. ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲು ಭಯೋತ್ಪಾದಕರು ಕಂಡುಕೊಂಡಿರುವ ಒಳನುಸುಳುವಿಕೆ ಮಾರ್ಗಗಳನ್ನು ಗುರುತಿಸಿ ಅನಾಹುತಕ್ಕೆ ತಡೆಹಾಕುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ| ಉಕ್ಕಿನ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ – 22 ಮಂದಿಗೆ ಗಾಯ

    ಕಾಶ್ಮೀರ ಬಿಟ್ಟು ಜಮ್ಮುವಿನತ್ತ ಚಿತ್ತ ಹರಿಸಿದ್ದೇಕೆ?
    2014 ರಿಂದ 2018ರ ಅವಧಿ ಜಮ್ಮು ಮತ್ತು ಕಾಶ್ಮೀರ ಸ್ಥಳಗಳು ಉಗ್ರರ ಸ್ವರ್ಗವಾಗಿತ್ತು. 2014ರಿಂದ 2018ರ ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 1,708 ಉಗ್ರರ ದಾಳಿಗಳು ನಡೆದಿದ್ದವು, 2018ರಿಂದ 2022ರ ವರೆಗೆ 761 ಉಗ್ರರ ದಾಳಿಗಳು ನಡೆದು 174 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ್ದ ಸೇನೆ (Indian Army) 626 ಉಗ್ರರನ್ನು ಬಲಿ ಪಡೆದಿತ್ತು. 2023ರಲ್ಲಿ ಜಮ್ಮು ಪ್ರದೇಶದಲ್ಲಿ ಮಾತ್ರವೇ ಸುಮಾರು 40 ಭಯೋತ್ಪಾದಕ ದಾಳಿಗಳು ನಡೆದಿರುವುದಾಗಿ ಸೇನೆ ಹೇಳಿದೆ. 2019ರಲ್ಲಿಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತು. ಆ ನಂತರ ಹೆಚ್ಚಿನ ದಾಳಿ ನಡೆಯುತ್ತಿದ್ದ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ದೀರ್ಘಕಾಲದ ಶಾಂತಿ ನೆಲೆಸಿತ್ತು. ಹೆಚ್ಚಿನ ಭದ್ರತಾ ಪಡೆಗಳು ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಬೀಡುಬಿಟ್ಟ ಕಾರಣ ಉಗ್ರರು ಜಮ್ಮುವನ್ನು ಟಾರ್ಗೆಟ್‌ ಮಾಡಿ ದಾಳಿ ನಡೆಸುತ್ತಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

  • ಇಬ್ಬರು ಭಯೋತ್ಪಾದಕರನ್ನು ಸದೆಬಡಿದ ಭದ್ರತಾ ಪಡೆ- ಓರ್ವ ಅಧಿಕಾರಿಗೆ ಗಾಯ

    ಇಬ್ಬರು ಭಯೋತ್ಪಾದಕರನ್ನು ಸದೆಬಡಿದ ಭದ್ರತಾ ಪಡೆ- ಓರ್ವ ಅಧಿಕಾರಿಗೆ ಗಾಯ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (jammu Kashmir) ಬಾರಾಮುಲ್ಲಾದಲ್ಲಿ ಇಂದು (ಬುಧವಾರ) ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.

    ಬಾರಾಮುಲ್ಲಾದ ಸೋಪೋರ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಸೋಪೋರ್‌ನ ಹಡಿಪೋರಾದಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದಾರೆ. ಅವರ ಗುರುತು ಪತ್ತೆ ಹಚ್ಚಲಾಗಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸೋಮವಾರ, ಕೇಂದ್ರಾಡಳಿತ ಪ್ರದೇಶದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: 24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ ಪುಟಿನ್‌ ಭೇಟಿ – ರಷ್ಯಾ ಅಧ್ಯಕ್ಷನಿಗೆ ಭವ್ಯ ಸ್ವಾಗತ

    ಭಾನುವಾರ ರಾತ್ರಿ ಜಿಲ್ಲೆಯ ಅರಗಂ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸರ್ಚ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಸಿಬ್ಬಂದಿಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಎನ್‌ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

  • ಮಸೀದಿಯಲ್ಲಿ ಟೆರರಿಸ್ಟ್‌ಗಳು ಬಾಂಬ್ ಇಟ್ಟಿದ್ದಾರೆ – ಪೊಲೀಸ್ರ ನಿದ್ದೆಗೆಡಿಸಿದ ಫೇಕ್‌ ಕಾಲ್‌

    ಮಸೀದಿಯಲ್ಲಿ ಟೆರರಿಸ್ಟ್‌ಗಳು ಬಾಂಬ್ ಇಟ್ಟಿದ್ದಾರೆ – ಪೊಲೀಸ್ರ ನಿದ್ದೆಗೆಡಿಸಿದ ಫೇಕ್‌ ಕಾಲ್‌

    ಬೆಂಗಳೂರು: ಮಸೀದಿಯಲ್ಲಿ ಟೆರೆರಿಸ್ಟ್ ಗಳು (Terrorists) ಬಾಂಬ್ ಇಟ್ಟಿದ್ದಾರೆಂದು ತಡರಾತ್ರಿ ಬಂದ ಅನಾಮಧೇಯ ಕರೆಯೊಂದು ಬೆಂಗಳೂರು ಪೊಲೀಸರ (Bengaluru Police) ನಿದ್ದೆಗೆಡಿಸಿದೆ.

    ಹೌದು. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಶಿವಾಜಿನಗರದ ಅಜಾಂ ಮಸೀದಿಯಲ್ಲಿ ಟೆರೆರಿಸ್ಟ್ ಗಳು ಬಾಂಬ್ ಇಟ್ಟಿದ್ದಾರೆಂದು ಕಿಡಿಗೇಡಿಯೊಬ್ಬ ಕರೆ ಮಾಡಿ ಕಾಲ್‌ ಕಟ್‌ ಮಾಡಿದ್ದಾನೆ.

    ಪೊಲೀಸ್‌ ಸಹಾಯವಾಣಿ 112 ಸಹಾಯವಾಣಿಗೆ ಕರೆ ಮಾಡಿದ ನಂತರ ಶಿವಾಜಿನಗರದ ಪೊಲೀಸರು (Shivajinagar Police) ಎದ್ನೋ ಬಿದ್ನೋ ಅಂತಾ ದೌಡಾಯಿಸಿದ್ದಾರೆ. ಮಸೀದಿಯ (Mosque) ಮೂಲೆ ಮೂಲೆಯನ್ನೂ ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲೂ ಬುಲ್ಡೋಜರ್‌ ಸದ್ದು; ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜನೆ ಮಾಡಿದ್ದ ಆರೋಪಿ ಮನೆ ಧ್ವಂಸ

    ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳದಿಂದ ಇಡೀ ಮಸೀದಿ ಪರಿಶೀಲನೆ ಮಾಡಿದ ಬಳಿಕ ಬಾಂಬ್‌ ಸಿಗದೇ ಇದೊಂದು ಫೇಕ್‌ ಕಾಲ್‌ ಅಂತಾ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಸುಳ್ಳು ಕರೆ ಮಾಡಿದ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಬೆಂಗಳೂರಿನಿಂದ ಹೊರಗಡೆ ಕುಳಿತುಕೊಂಡೇ ಕಿಡಿಗೇಡಿ ಪೊಲೀಸರಿಗೆ ಕರೆ ಮಾಡಿರೋದು ಗೊತ್ತಾಗಿದ್ದು, ಸುಳ್ಳು ಬಾಂಬ್ ಕರೆ ಮಾಡಿದ್ದ ವ್ಯಕ್ತಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ರಾಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂಗಳಲ್ಲಿ ಯಾರೂ ಟೆರರಿಸ್ಟ್ ಇಲ್ಲ: ಗೋವಿಂದ ಕಾರಜೋಳ

    ಹಿಂದೂಗಳಲ್ಲಿ ಯಾರೂ ಟೆರರಿಸ್ಟ್ ಇಲ್ಲ: ಗೋವಿಂದ ಕಾರಜೋಳ

    ಮೈಸೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಡಿಸಿಎಂ ಗೋವಿಂದ ಎಂ. ಕಾರಜೋಳ ಪ್ರತಿಕ್ರಿಯಿಸಿದ್ದಾರೆ.

    ಹಿಂದೂಗಳಲ್ಲಿ ಯಾರೂ ಟೆರರಿಸ್ಟ್ ಇಲ್ಲ. ಹಿಂದೂ ಟೆರರಿಸಂ ಎನ್ನುವ ಪದವನ್ನೇ ನಾನು ಕೇಳಿಲ್ಲ. ಟೆರರಿಸ್ಟ್ ಎಂದರೆ ಪಾಕಿಸ್ತಾನದಿಂದ ಬಂದವರು ಎಂದು ಅಂದುಕೊಂಡಿದ್ದೇನೆ ಎಂದರು.

    ಬಾಂಬ್ ಪತ್ತೆ ಪ್ರಕರಣ ಸೂಕ್ತ ತನಿಖೆಯಾಗಲಿ. ತನಿಖಾ ಹಂತದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುವುದು ಬೇಡ. ಇಡೀ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಸೋಮವಾರ ನಾನು ದೆಹಲಿಯಲ್ಲಿ ಇದ್ದೆ. ಇಂದು ಮೈಸೂರಿಗೆ ಬಂದಿದ್ದೇನೆ. ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಹೇಳಿದರು.

    ಇದೇ ವೇಳೆ ಪೌರತ್ವ ಬಗ್ಗೆ ಮಾತನಾಡಿದ ಅವರು, ನೊಂದು ಬಂದವರಿಗೂ ಪೌರತ್ವ ಕೊಡಬಾರದಾ ಎಂದು ಪ್ರಶ್ನಿಸಿದ್ದಾರೆ. ನೊಂದು ಬಂದವರಿಗೂ ಪೌರತ್ವ ಕೊಡಬಾರದಾ? ವಿರೋಧ ಪಕ್ಷಗಳು ಸಿಎಎಯನ್ನು ಯಾಕೆ ಇಷ್ಟು ವಿರೋಧ ಮಾಡುತ್ತಿವೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಕಾರಜೋಳ ವಿಪಕ್ಷಗಳ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

    ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮನಮೋಹನ್ ಸಿಂಗ್ ಕಾಲದಲ್ಲಿಯೂ ಪೌರತ್ವ ಕಾಯ್ದೆಗೆ ತಿದ್ದುಪಡಿ ಆಗಿದೆ. ಹಾಗೆಲ್ಲ ವಿರೋಧ ಮಾಡದ ಕಾಂಗ್ರೆಸ್ಸಿನವರು ಈಗ ಯಾಕೆ ಇಷ್ಟೊಂದು ಪ್ರತಿರೋಧ ತೋರುತ್ತಿದ್ದಾರೆ ಎಂದು ಪ್ರಶ್ನಿಸಿದರು. ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಘಾನಿಸ್ತಾನ ದೇಶಗಳಿಂದ ಬಂದ ಶೋಷಿತರಿಗೆ ಪೌರತ್ವ ನೀಡುತ್ತಿದ್ದೇವೆ. ಜೊತೆಗೆ ಆಕ್ರಮ ವಲಸಿಗರನ್ನು ದೇಶದಿಂದ ಹೊರಕ್ಕೆ ಕಳುಹಿಸುತ್ತಿದ್ದೇವೆ. ವಲಸಿಗರು ಇಲ್ಲಿ ಇರುವುದರಿಂದ ದೇಶಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಇಲ್ಲಿ ನೆಲೆಸಿರುವ ಯಾವೊಬ್ಬರಿಗೂ ತೊಂದರೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಬಿಳಿಕ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಯಾದರೆ ಜಗತ್ತು ಪ್ರಳಯ ಆಗಿ ಬಿಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

    ಸಂಪುಟ ವಿಸ್ತರಣೆ ಆದರೆ ಮಹಾ ಸ್ಫೋಟ ನಡೆಯುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಸಚಿವ ಸಂಪುಟ ವಿಸ್ತರಣೆಯಾಗುತ್ತೆ. ಆದರೆ ಸಿದ್ದರಾಮಯ್ಯ ಹೇಳುವಂತೆ ಯಾವ ಸ್ಫೋಟವೂ ಆಗುವುದಿಲ್ಲ, ಏನೂ ಆಗುವುದಿಲ್ಲ. ಸಿದ್ದರಾಮಯ್ಯ ಅವರು ಭ್ರಮೆಯಲ್ಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬುದನ್ನ ನಮ್ಮ ನಾಯಕರು ನಿರ್ಧಾರ ಮಾಡುತ್ತಾರೆ. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಬೇಕು ಎಂಬುದು ನನ್ನ ಅಭಿಪ್ರಾಯ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ, ಭಿನ್ನಾಭಿಪ್ರಾಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

  • ಸರ್ಕಾರಿ ಆದೇಶ ಉಲ್ಲಂಘಿಸಿದ ಸತ್ಯ ಹೇಳಿದ್ದಕ್ಕೆ ಪ್ರಿಯಾಂಕ್ ಖರ್ಗೆ ಮಾಧ್ಯಮಗಳ ಮೇಲೆ ಗರಂ!

    ಸರ್ಕಾರಿ ಆದೇಶ ಉಲ್ಲಂಘಿಸಿದ ಸತ್ಯ ಹೇಳಿದ್ದಕ್ಕೆ ಪ್ರಿಯಾಂಕ್ ಖರ್ಗೆ ಮಾಧ್ಯಮಗಳ ಮೇಲೆ ಗರಂ!

    ಬೆಂಗಳೂರು: ಮಾಡೋದೆಲ್ಲಾ ಮಾಡ್ಬಿಟ್ಟು ಈಗ ತಾನು ಸಂಭಾವಿತ ಎಂಬಂತೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಪೋಸು ಕೊಡುತ್ತಿದ್ದಾರೆ. ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಸರ್ಕಾರ 3 ದಿನ ಶೋಕಾಚರಣೆ ಮಾಡುವಂತೆ ಆದೇಶ ಹೊರಡಿಸಿದ್ದರೂ, ಈ ಆದೇಶವನ್ನು ಉಲ್ಲಂಘಿಸಿ ಕಾರ್ಯಕ್ರಮವನ್ನು ನಡೆಸಿ ಪ್ರಿಯಾಂಕ್ ಖರ್ಗೆ ಅವರು ವಿವಾದವನ್ನು ತಾವಾಗಿಯೇ ಮೈ ಮೇಲೆ ಎಳೆದುಕೊಂಡಿದ್ದರು. ಈ ವಿಚಾರವನ್ನು ಜನರ ಗಮನಕ್ಕೆ ತಂದಿದ್ದೇ ತಪ್ಪು ಎಂಬ ಅರ್ಥದಲ್ಲಿ ಪ್ರಿಯಾಂಕ್ ಖರ್ಗೆ ಈಗ ಮಾಧ್ಯಮಗಳ ವಿರುದ್ಧವೇ ಗರಂ ಆಗಿದ್ದಾರೆ.

    ವಿಕಾಸಸೌಧದಲ್ಲಿ ಟಿವಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಭಯೋತ್ಪಾದಕರು ಒಂದೇ ಗುಂಡಿಗೆ ಸಾಯಿಸುತ್ತಾರೆ. ಆದರೆ ಮಾಧ್ಯಮಗಳು ಪ್ರತಿದಿನ ಕಾಟ ಕೊಟ್ಟು ಸಾಯಿಸುತ್ತಿವೆ. ಇತ್ತೀಚಿಗೆ ನಾನು ಮಾಧ್ಯಮಗಳಿಂದ ಸಂತ್ರಸ್ತನಾಗಿದ್ದೇನೆ ಎಂದು ತಿಳಿಸಿದರು. ಇತ್ತೀಚಿಗೆ ನನಗೂ ಈ ಅನುಭವ ಆಗಿದೆ. ಮಾಧ್ಯಮಗಳು ಅರ್ಧ ಕೇಳಿಸಿಕೊಂಡು, ಅದು ತಪ್ಪೋ ಸರಿಯೋ ಎಂದು ತಿಳಿದುಕೊಳ್ಳದೇ ವರದಿ ಮಾಡುತ್ತವೆ. ದೇಶದಲ್ಲಿ ಹಲವು ಮಾಧ್ಯಮಗಳು ಸುಳ್ಳನ್ನೇ ಹೇಳುತ್ತಿವೆ. ಆದರೆ ಎಲ್ಲಾ ಮಾಧ್ಯಮಗಳು ಇದೇ ರೀತಿ ಇದೆ ಎಂದು ನಾನು ಹೇಳುತ್ತಿಲ್ಲ. ಮಾಧ್ಯಮಗಳು ಸತ್ಯದ ಪರ ವರದಿ ಮಾಡಬೇಕು. ಬಾಬಾ ಅಂಬೇಡ್ಕರ್ ಅವರ ಪ್ರಬುದ್ಧ ಭಾರತದ ಕನಸು ನನಸಾಗಲು ಮಾಧ್ಯಮಗಳ ಕಾರ್ಯವೂ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

    ಮಾಧ್ಯಮಗಳು ಸಮಾಜದಲ್ಲಿ ಅಭಿಪ್ರಾಯ ರೂಪಿಸುವ ಸಾಧನಗಳಾಗಿದ್ದು, ಜನಪ್ರತಿನಿಧಿಗಳಾಗಿ ನಮಗೇ ಎಷ್ಟು ಜವಾಬ್ದಾರಿ ಇರುತ್ತದೋ, ಅಷ್ಟೇ ಮಾಧ್ಯಮಗಳಿಗೂ ಇದೆ. ನಮ್ಮ ಬಗ್ಗೆ ಕೆಲವೇ ಮಂದಿಗೆ ನಿಜ ಗೊತ್ತಿರುತ್ತದೆ. ಆದರೆ ಮಾಧ್ಯಮಗಳು ಜಗತ್ತಿನ ಮಂದಿಗೆ ತೋರಿಸುವ ವೇಳೆ ನೈಜ ಹೇಳಬೇಕು. ಮಾಧ್ಯಮ ವರದಿಗಳಲ್ಲಿ ಅರ್ಧ ಸತ್ಯ ಇದ್ದರೆ, ಉಳಿದ ಭಾಗ ಪ್ರಚೋದನೆ ಇರುತ್ತದೆ. ಮಾಧ್ಯಮಗಳಲ್ಲಿ ದಿನನಿತ್ಯ ವರದಿಗಳು ಬರುತ್ತಿದ್ದರೆ ಜನರಲ್ಲಿ ಅನುಮಾನ ಮೂಡುತ್ತದೆ. ಆದ್ದರಿಂದ ಮಾಧ್ಯಮಗಳು ನೈಜತೆಯ ಪರ ವರದಿ ಮಾಡಿ. ತುರ್ತು ಪರಿಸ್ಥಿತಿಯ ವೇಳೆಯೂ ಕೂಡ ಮಾಧ್ಯಮಗಳು ತಮ್ಮ ಜವಾಬ್ದಾರಿ ನಿರ್ವಹಿಸಿದ್ದವು. ಇದನ್ನು ಇತಿಹಾಸದ ಪುಟಗಳಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದರು.

    ಆಗಿದ್ದೇನು?
    ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ದಿನ ರಾಜ್ಯದಲ್ಲಿ ಸರ್ಕಾರ 3 ದಿನಗಳ ಕಾಲ ಶೋಕಾಚರಣೆಯ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಮಂಗಳವಾರ ಸಮಾಜ ಕಲ್ಯಾಣ ಇಲಾಖೆ ಸಮಾನತೆ ಅನ್ವೇಷಣೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮವನ್ನು ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಆಯೋಜಿಸಿತ್ತು. ಮಂಗಳವಾರ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ, ಲಿಂಗೈಕ್ಯರಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಕಾರ್ಯಕ್ರಮವನ್ನು ಮುಂದುವರಿಸಲಾಗಿತ್ತು. ಇಡೀ ರಾಜ್ಯವೇ ಶೋಕಾಚರಣೆ ಮಾಡುತ್ತಿರುವಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ತಪ್ಪು ಎಂದು ಬಿಜೆಪಿ ಆಕ್ಷೇಪಿಸಿತ್ತು.

    ಕನ್ನಯ್ಯ ಕುಮಾರ್, ಓವೈಸಿ ಅತಿಥಿಗಳಾಗಿದ್ದರಿಂದ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಬಿಜೆಪಿ ಗೋ ಮಧುಸೂದನ್ ವಾಪಸ್ ಆಗಿದ್ದರು. ಕನ್ನಡ ಸಂಘಟನೆಗಳು ಸಹ ಪ್ರತಿಭಟನೆ ನಡೆಸಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಿಯಾಂಕ್ ಖರ್ಗೆ ವಿರುದ್ಧ ಕಟು ಟೀಕೆ ವ್ಯಕ್ತವಾಗಿತ್ತು. ಸಿದ್ದಗಂಗಾ ಶ್ರೀಗಳ ಲಿಂಗೈಕ್ಯರಾದ ದಿನವೇ ಖಾಸಗಿ ಹೋಟೆಲ್‍ನಲ್ಲಿ ಕಾರ್ಯಕ್ರಮ ನಡೆಸುವ ಅಗತ್ಯವೇನಿತ್ತು? ಸರ್ಕಾರಿ ದುಡ್ಡನ್ನು ಪೋಲು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಓದಿ: ರೆಸಾರ್ಟ್ ಗಲಾಟೆಯಿಂದ ಹತಾಶೆಗೊಂಡ ‘ಕೈ’ ನಾಯಕರು – ಮಾಧ್ಯಮಗಳ ವಿರುದ್ಧ ದಿನೇಶ್ ಗುಂಡೂರಾವ್ ಗರಂ

    ಪ್ರಿಯಾಂಕ್ ಖರ್ಗೆಗೆ ಪಬ್ಲಿಕ್ ಪ್ರಶ್ನೆ:
    ಮಿನಿಸ್ಟರ್ ಪ್ರಿಯಾಂಕ ಖರ್ಗೆ ಅವರಿಗೆ ನಿಮಗೆ ಮಾಧ್ಯಮಗಳ ಮೇಲೆ ಕೆಂಡದಂತಹ ಕೋಪ ಏಕೆ? ಸರ್ಕಾರಿ ಆದೇಶವನ್ನು ಉಲ್ಲಂಘಿಸಿದರೆ ನೌಕರರ ಮೇಲೆ ಕ್ರಮ ಕೈಗೊಳ್ಳಲು ಆದೇಶಿಸುವ ನೀವು ನಿಮ್ಮದೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದು ಸರಿಯೇ? ರಾಜ್ಯದಲ್ಲಿ ಶೋಕಾಚರಣೆ ಇದ್ದರೂ ಸರ್ಕಾರಿ ಕಾರ್ಯಕ್ರಮ ನಡೆಸಿದ್ದು ತರವೇ? ಮಾಧ್ಯಮಗಳು ನಿತ್ಯ ಕಾಟ ಕೊಟ್ಟು ಸಾಯಿಸುತ್ತಾರೆ ಎಂದರೆ ಅರ್ಥ ಏನು? ನಿಮ್ಮ ಕಣ್ಣಿಗೆ ಮಾಧ್ಯಮಗಳು ಉಗ್ರಗಾಮಿಗಳಿಗಿಂತ ಅಪಾಯಕಾರಿಯೇ? ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಡೆಸಿದ ಕಾರ್ಯಕ್ರಮನ್ನು ಹಾಡಿ ಹೊಗಳಬೇಕಿತ್ತೇ?

    ಒಂದಂತೂ ನಿಜ. ಯಾರು ತಪ್ಪು ಮಾಡುತ್ತಾರೋ, ಅವರು ಯಾರೇ ಆಗಲಿ ಅವರನ್ನು ನಾವು ಪ್ರಶ್ನೆ ಮಾಡುತ್ತೇವೆ. ತಪ್ಪು ಮಾಡಿದರೆ ತಪ್ಪು ಎಂದು ಹೇಳುತ್ತೇವೆ. ಉತ್ತಮ ಕಾರ್ಯ ಮಾಡಿದಾಗ ಈ ಹಿಂದೆಯೂ ಹೇಳಿದ್ದೇವೆ, ಮುಂದೆಯೂ ಹೇಳುತ್ತೇವೆ.

    https://www.youtube.com/watch?v=NR3FLrkVlDI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರ ಚವಟುವಟಿಕೆಯಲ್ಲಿ ಭಾಗಿಯಾಗುವಂತೆ ಕಿರುಕುಳ ನೀಡ್ತಿದ್ದಾರೆಂದು ಪತ್ರ ಬರೆದು ಯುವಕ ಆತ್ಮಹತ್ಯೆಗೆ ಯತ್ನ

    ಉಗ್ರ ಚವಟುವಟಿಕೆಯಲ್ಲಿ ಭಾಗಿಯಾಗುವಂತೆ ಕಿರುಕುಳ ನೀಡ್ತಿದ್ದಾರೆಂದು ಪತ್ರ ಬರೆದು ಯುವಕ ಆತ್ಮಹತ್ಯೆಗೆ ಯತ್ನ

    ಬಾಗಲಕೋಟೆ: ಉಗ್ರ ಚವಟುವಟಿಕೆಯಲ್ಲಿ ಭಾಗಿಯಾಗುವಂತೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪತ್ರ ಬರೆದು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗ ಜಿಲ್ಲೆ ಗಜೇಂದ್ರಗಢ ಪಟ್ಟಣ್ಣದ ಬಳಿ ನಡೆದಿದ್ದು, ಯುವಕನನ್ನ ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶರಣಪ್ಪ ನಾಗರಾಳ ಎಂಬ ಯುವಕ ಗದಗ ಜಿಲ್ಲೆಯ ಗಜೇಂದ್ರಗಢ ಬಳಿ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಆತನನ್ನ ಗಜೇಂದ್ರಗಢ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸೂಕ್ತ ಚಿಕಿತ್ಸೆ ಸಿಗದ ಕಾರಣ ಶರಣಪ್ಪನನ್ನ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಚಿಕಿತ್ಸೆ ನಂತರ ಚೇತರಿಸಿಕೊಂಡ ಶರಣಪ್ಪ, ಮಹಮದ್ ರಫೀಕ್ ಹಾಗೂ ಇಸ್ಮಾಯಿಲ್ ನನ್ನನ್ನ ಅಪಹರಣ ಮಾಡಿ ಕರೆದೊಯ್ದು ಚಿತ್ರ ಹಿಂಸೆ ಕೊಡ್ತಿದ್ರಲ್ಲದೆ ಅವರೇ ಮೇಲ್ ಐಡಿ ಕ್ರಿಯೆಟ್ ಮಾಡಿ, ಮೇಲ್ ಮೂಲಕ ನನ್ನ ಕರೆಯಿಸಿಕೊಂಡು ಟೆರರಿಸಂ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸುತ್ತಿದ್ದರು ಎಂದಿದ್ದಾನೆ. ನಾನು ಓದುತ್ತಿದ್ದ ವಿದ್ಯಾ ವಿಕಾಸ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬಾಂಬ್ ಇಡುವಂತೆ ಬೆದರಿಸುತ್ತಿದ್ದರು ಎಂದು ಆರೋಪಿಸ್ತಿದ್ದಾನೆ. ಅಲ್ಲದೇ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಶಾಕ್ ಟ್ರೀಟ್ ಮೆಂಟ್ ನೀಡಿದ್ದಾರೆಂದು ತಿಳಿಸಿದ್ದಾನೆ.

    ಮಹ್ಮದ್ ರಫೀಕ್, ಇಸ್ಮಾಯಿಲ್ ಎಂಬುವರ ಹೆಸರು ಮಾತ್ರ ಹೇಳುತ್ತಿರುವ ಯುವಕ ಅವರ ಪರಿಚಯ ಹೇಗಾಯ್ತು, ಅವರು ಎಲ್ಲಿಯವರು ಎಂದು ಸ್ಪಷ್ಟಪಡಿಸುತ್ತಿಲ್ಲ. ಹೀಗಾಗಿ ಶರಣಪ್ಪನ ಮಾತುಗಳು ಗೊಂದಲಮಯವಾಗಿವೆ. ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೋಡಿಹಾಳ ಗ್ರಾಮದ ನಿವಾಸಿಯಾಗಿರೋ ಶರಣಪ್ಪ, ಮೈಸೂರಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ. ಜೊತೆಗೆ ಫೇಸ್‍ ಬುಕ್ ಸ್ಟೇಟಸ್ ನಲ್ಲಿ ಲಾಸ್ಟ್ ಡೇ ಬಾಯ್ ಬಾಯ್. ಲವ್ ಯೂ ಆಲ್ ಎಂದು ಬರೆದುಕೊಂಡಿದ್ದ.

    ಇನ್ನು ಈ ಬಗ್ಗೆ ಆತನ ಸಹೋದರ ಹನುಮಂತ, ತಮ್ಮನಾದ ಶರಣಪ್ಪನಿಗೆ ಮಾನಸಿಕ ಸ್ಥಿತಿ ಸರಿ ಇರಲಿಲ್ಲ. ಹಿಂದೆಯೂ ಕೂಡ ಈತನಿಗೆ ಚಿಕಿತ್ಸೆ ಕೊಡಿಸಿದ್ದೆವು. ಪತ್ರದ ಬಗ್ಗೆ ನನಗೇನು ಗೊತ್ತಿಲ್ಲ. ಟೆರರಿಸ್ಟ್ ಬೆದರಿಕೆಯೆಲ್ಲ ಸುಳ್ಳಿರಬಹುದು. ಈ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ತನಿಖೆ ನಂತರವಷ್ಟೇ ಇದರ ಸತ್ಯಾಂಶ ಬಯಲಾಗಬೇಕಿದೆ.