Tag: ಟೆನಿಸ್

  • Australian Open: 21ನೇ ಗ್ರ್ಯಾನ್‌ ಸ್ಲಾಂಗಾಗಿ ನಡಾಲ್‌, ಮೆಡ್ವೆಡೇವ್‌ ಪೈಪೋಟಿ

    Australian Open: 21ನೇ ಗ್ರ್ಯಾನ್‌ ಸ್ಲಾಂಗಾಗಿ ನಡಾಲ್‌, ಮೆಡ್ವೆಡೇವ್‌ ಪೈಪೋಟಿ

    ಮೆಲ್ಬರ್ನ್‌: ಪ್ರತಿಷ್ಠಿತ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿ ಫೈನಲ್‌ಗೆ ಸ್ಪೇನ್‌ನ ರಫೇಲ್‌ ನಡಾಲ್‌ ಹಾಗೂ ರಷ್ಯಾದ ಡೇನಿಲ್‌ ಮೆಡ್ವೆಡೇವ್‌ ಲಗ್ಗೆ ಇಟ್ಟಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ 21ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಾಗಿ ಇಬ್ಬರೂ ಸೆಣಸಾಡಲಿದ್ದಾರೆ. ಭಾನುವಾರ ರೋಚಕ ಪಂದ್ಯಕ್ಕೆ ಟೆನಿಸ್‌ ಪ್ರಿಯರು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ.

    ಶುಕ್ರವಾರ ಪುರುಷ ಸಿಂಗಲ್ಸ್‌ ವಿಭಾಗದಲ್ಲಿ ನಡೆದ ಸೆಮಿಫೈನಲ್‌ ಮುಖಾಮುಖಿಯಲ್ಲಿ ರಫೆಲ್‌ ನಡಾಲ್‌, ಇಟಲಿಯ ಮಟಿಯೊ ಬೆರೆಟಿನಿ ವಿರುದ್ಧ 6-3, 6-2, 3-6, 6-3 ಅಂತರದಲ್ಲಿ ಗೆಲುವು ದಾಖಲಿಸಿದ್ದು, ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇದನ್ನೂ ಓದಿ: ಕೃನಾಲ್ ಪಾಂಡ್ಯ ಟ್ವಿಟ್ಟರ್ ಖಾತೆ ಹ್ಯಾಕ್ – ಬಿಟ್‍ಕಾಯಿನ್‍ಗೆ ಬೇಡಿಕೆ ಇಟ್ಟ ಹ್ಯಾಕರ್

    ಅಂತೆಯೇ ಡೇನಿಲ್‌ ಮೆಡ್ವೆಡೆವ್‌, ಸ್ಟೆಫಾನೊಸ್‌ ಸಿಸಿಪಸ್‌ ವಿರುದ್ಧ 7-6, 4-6, 6-4, 6-1 ಅಂತರದಲ್ಲಿ ಜಯಗಳಿಸಿ ಫೈನಲ್‌ ಪ್ರವೇಶಿಸಿದ್ದಾರೆ.

    ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಗೆಲುವು ದಾಖಲಿಸಿ ಇತಿಹಾಸ ಬರೆಯಲು ನಡಾಲ್‌, ಮೆಡ್ವೆಡೇವ್‌ ಸೆಣಸಾಟಕ್ಕೆ ಸಜ್ಜಾಗಿದ್ದಾರೆ. 21ನೇ ಗ್ರ್ಯಾನ್‌ ಸ್ಲಾಂ ಯಾರಿಗೆ ಒಲಿಯಲಿದೆ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ: ಧೋನಿ ನನ್ನ ಫೇವರಿಟ್ ಕ್ಯಾಪ್ಟನ್ – CSK ಪರ ಆಡಲು ಬಯಸುತ್ತೇನೆಂದ ಮಾಜಿ RCB ಆಟಗಾರ

  • ಇದು ನನ್ನ ಕೊನೆಯ ಸೀಸನ್: ನಿವೃತ್ತಿ ನಿರ್ಧಾರ ಪ್ರಕಟಿಸಿದ ಟೆನಿಸ್ ತಾರೆ ಸಾನಿಯಾ

    ಇದು ನನ್ನ ಕೊನೆಯ ಸೀಸನ್: ನಿವೃತ್ತಿ ನಿರ್ಧಾರ ಪ್ರಕಟಿಸಿದ ಟೆನಿಸ್ ತಾರೆ ಸಾನಿಯಾ

    ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಇದು ನನ್ನ ಕೊನೆಯ ಸೀಸನ್ ಎಂದು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

    ಆಸ್ಟ್ರೇಲಿಯಾ ಓಪನ್‌ನ ಮಹಿಳೆಯರ ಡಬಲ್ಸ್ ನಲ್ಲಿ ಮೊದಲ ಸುತ್ತಿನಲ್ಲೇ ಸಾನಿಯಾ ಮಿರ್ಜಾ ಮತ್ತು ಜೊತೆಯಾಟಗಾರ್ತಿ ನಾದಿಯಾ ಕಿಚೆನೊಕ್ ಸೋಲನ್ನು ಅನುಭವಿಸಿದ್ದಾರೆ. ಕಾಜಾ ಜುವಾನಾ ಮತ್ತು ತಮಾರಾ ಜಿಡಾನ್ಸೆಕ್ 6-4, 7-6 ಅಂತರದಲ್ಲಿ ಸಾನಿಯಾ ಮತ್ತು ಕಿಚೆನೊಕ್ ಅವರನ್ನು ಸೋಲಿಸಿದರು. ಇದಾದ ಬಳಿಕ ಸಾನಿಯಾ ನಿವೃತ್ತಿ ಹೊಂದುವ ಉದ್ದೇಶವನ್ನು ಪ್ರಕಟಿಸಿದ್ದಾರೆ. ಇದನ್ನೂ ಓದಿ: ಟೆಸ್ಟ್ ನಾಯಕತ್ವಕ್ಕೆ ಗುಡ್‌ಬೈ – ಕೊಹ್ಲಿ ಬ್ರ್ಯಾಂಡ್ ಮೌಲ್ಯ ಇಳಿಕೆ?

    ನನ್ನ ನಿವೃತ್ತಿ ನಿರ್ಧಾರಕ್ಕೆ ಹಲವು ಕಾರಣಗಳಿವೆ. ಆಡಬೇಕೆಂದು ನಿರ್ಧರಿಸುವುದು ನನಗೆ ಸರಳವೆನಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದೇನೆ. 3 ವರ್ಷದ ನನ್ನ ಪುತ್ರನೊಂದಿಗೆ ನಿರಂತರ ಪ್ರಯಾಣದ ಮೂಲಕ ಆತನನ್ನೂ ಅಪಾಯಕ್ಕೆ ಸಿಲುಕಿಸುತ್ತಿದ್ದೇನೆ. ನನ್ನ ದೇಹವೂ ಕ್ಷೀಣಿಸುತ್ತಿದೆ. ಈಗಲೂ ನನ್ನ ಮೊಣಕಾಲು ನೋಯುತ್ತಿದೆ. ಈ ಪಂದ್ಯದಲ್ಲಿ ನಾವು ಸೋತಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ ನನಗೆ ವಯಸ್ಸಾಗುತ್ತಿದ್ದಂತೆ ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದು ತಮ್ಮ ನಿರ್ಧಾರಕ್ಕೆ ಪ್ರಮುಖ ಕಾರಣಗಳನ್ನು ಸಾನಿಯಾ ಬಿಚ್ಚಿಟ್ಟಿದ್ದಾರೆ.

    ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ನಲ್ಲಿ ನಂಬರ್ ಒನ್ ರ‍್ಯಾಂಕಿಂಗ್ ತಲುಪಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2009ರಲ್ಲಿ ಮಿಶ್ರ ಡಬಲ್ಸ್ ನಲ್ಲಿ ಆಸ್ಟ್ರೇಲಿಯಾ ಓಪನ್, 2012ರಲ್ಲಿ ಫ್ರೆಂಚ್ ಓಪನ್, 2014ರಲ್ಲಿ ಯುಎಸ್ ಓಪನ್ ಹಾಗೂ ಮಹಿಳೆಯರ ಡಬಲ್ಸ್, 2015ರಲ್ಲಿ ವಿಂಬಲ್ಡನ್ ಮತ್ತು ಯುಎಸ್ ಓಪನ್, 2016ರಲ್ಲಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾ ವೀಸಾ ರದ್ದತಿ ನಿರಾಶೆ ತಂದಿದೆ: ನೊವಾಕ್ ಜೊಕೊವಿಕ್

  • 4 ತಿಂಗಳಲ್ಲಿ 26 ಕೆಜಿ ತೂಕ ಇಳಿಸಿದ ಸಾನಿಯಾ- ಕದನಕ್ಕೆ ಭಾರೀ ಸಿದ್ಧತೆ

    4 ತಿಂಗಳಲ್ಲಿ 26 ಕೆಜಿ ತೂಕ ಇಳಿಸಿದ ಸಾನಿಯಾ- ಕದನಕ್ಕೆ ಭಾರೀ ಸಿದ್ಧತೆ

    ನವದೆಹಲಿ: ಭಾರತದ ಮಹಿಳಾ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅಂತರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸುವುದಕ್ಕಾಗಿ ಜಿಮ್‍ನಲ್ಲಿ ದೇಹ ದಂಡಿಸುತ್ತಿದ್ದಾರೆ. ಟೆನ್ನಿಸ್ ಕದನಕ್ಕೆ ನುಗ್ಗಲು ಸಿದ್ಧತೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    32 ವರ್ಷದ ಅನುಭವಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ತಮ್ಮ ಚೊಚ್ಚಲ ತಾಯ್ತನದ ಬಳಿಕ ಟೆನ್ನಿಸ್ ವೃತ್ತಿ ಬದುಕಿನಿಂದ ದೂರವೇ ಉಳಿದಿದ್ದರು. ಪ್ಯಾರಿಸ್ ಪ್ರವಾಸ ಮುಗಿಸಿ ಕೆಲ ದಿನಗಳ ಹಿಂದಷ್ಟೇ ತಾಯ್ನಾಡಿಗೆ ಹಿಂದಿರುಗಿರುವ ಸಾನಿಯಾ, ಸಂದರ್ಶನವೊಂದರಲ್ಲಿ ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಪದಕ ಗೆಲ್ಲುವುದು ನಮ್ಮ ಗುರಿ ಎಂದು ಹೇಳಿಕೊಂಡಿದ್ದರು. ಈ ನಿಟ್ಟಿನಲ್ಲಿ ಅರ್ಹತೆ ಪಡೆಯಲು ಟೆನ್ನಿಸ್ ತಾರೆ ಭರ್ಜರಿ ತಯಾರಿಯಲ್ಲಿ ನಡೆಸಿದ್ದಾರೆ.

    https://www.instagram.com/p/B208sxWFkbW/

    ಸಾನಿಯಾ ಮಿರ್ಜಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ವರ್ಕೌಟ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಟಿಶರ್ಟ್ ಹಾಗೂ ಕೆಂಪು ಪ್ಯಾಂಟ್ ಧರಿಸಿ ವರ್ಕೌಟ್ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಸಾನಿಯಾ ತಮ್ಮ ದೇಹತ ತೂಕ ಇಳಿಸಿಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ.

    ಮಗುವಿಗೆ ಜನ್ಮ ನೀಡುವ ಮುನ್ನ ನನ್ನ ದೇಹದ ತೂಕ ಏರಿಕೆ ಬಗ್ಗೆ ಪ್ರಶ್ನಿಸಿದ್ದರು. ಈಗ ತೂಕ ಇಳಿಕೆ ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ನಾನು ನನ್ನ ಮಗುವಿಗೆ ಜನ್ಮ ನೀಡಿದ ಬಳಿಕ 23 ಕೆಜಿ ತೂಕ ಇಳಿಯಬೇಕೆಂದು ಗುರಿ ಹೊಂದಿದ್ದೆ. ಅದರಂತೆ ನಾನು 26 ಕೆಜಿ ಇಳಿಸಿದೆ. ಇದೆಲ್ಲವೂ ಶ್ರಮ, ಕ್ರಮಶಿಕ್ಷಣ, ಏಕಾಗ್ರತೆ, ಬದ್ಧತೆಯಿಂದಲೇ ಸಾಧ್ಯವಾಯಿತು. ಮಗುವಿಗೆ ಜನ್ಮ ನೀಡಿದ ಬಳಿಕ ಇಷ್ಟೊಂದು ತೂಕ ಇಳಿಸುವುದು ಸಾಮಾನ್ಯವಲ್ಲ. ದಪ್ಪಗಿರುವ ಮಹಿಳೆಯರು ಕಠಿಣ ಶ್ರಮ, ನಿರ್ದಿಷ್ಟ ಮನಸ್ಸಿನಿಂದ ವ್ಯಾಯಾಮ ಕೈಗೊಂಡರೆ ಅವರು ಸಹ ತೂಕ ಇಳಿಸುತ್ತಾರೆ. ಪ್ರತಿದಿನ ಒಂದರಿಂದ ಎರಡು ಗಂಟೆಯವರೆಗೆ ಜಿಮ್‍ನಲ್ಲಿ ಶ್ರಮವಹಿಸಿ ಬಳಿಕ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯುತ್ತೆ ಎಂದು ಸಾನಿಯಾ, ಮಹಿಳೆಯರಿಗೆ ಕಿವಿ ಮಾತು ಹೇಳಿದ್ದಾರೆ.

    https://www.instagram.com/p/B2yXA-Alrmo/

    ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟರ್ ಶೋಯಬ್ ಮಲಿಕ್ ಅವರನ್ನು 2010ರಲ್ಲಿ ಮದುವೆಯಾಗಿದ್ದರು. ಬಳಿಕ 2017ರಲ್ಲಿ ಸಾನಿಯಾ ಭಾರತದ ಪರ ಚೀನಾ ಓಪನ್‍ನಲ್ಲಿ ಕೊನೆಯಬಾರಿ ಆಡಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಇಜಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದಾರೆ.

  • ಟೆನಿಸ್ ಆಟಗಾರ್ತಿ ಸಾನಿಯಾಗೆ ಸೇವಾ ತೆರಿಗೆ ಇಲಾಖೆಯಿಂದ ಶಾಕ್

    ಹೈದರಾಬಾದ್: ಟೆನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾಗೆ ಸೇವಾ ತೆರಿಗೆ ಇಲಾಖೆ ಶಾಕ್ ನೀಡಿದೆ.

    20 ಲಕ್ಷ ರೂ. ಸರ್ವಿಸ್ ಟ್ಯಾಕ್ಸ್ ಪಾವತಿ ಮಾಡದ ಸಾನಿಯಾ ಮಿರ್ಜಾಗೆ ಹೈದರಾಬಾದ್‍ನ ಸೇವಾ ತೆರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಫೆ.6ರಂದು ಸಮನ್ಸ್ ಜಾರಿ ಮಾಡಿದ್ದಾರೆ. ಇದೇ 16ರೊಳಗೆ ಖುದ್ದು ಅಥವಾ ಅವರ ಪ್ರತಿನಿಧಿಯಾಗಲಿ ಹಾಜರಾಗಿ ದಂಡ ಪಾವತಿಸುವಂತೆ ಸೂಚನೆ ನೀಡಿದ್ದಾರೆ.

    ಸಾನಿಯಾ ಮಿರ್ಜಾ 2014ರಲ್ಲಿ ತೆಲಂಗಾಣ ರಾಯಭಾರಿಯಾಗಿ ನೇಮಕವಾಗಿದ್ದರು. ರಾಯಭಾರಿಯಾಗಿದ್ದಕ್ಕೆ ತೆಲಂಗಾಣ ಸರ್ಕಾರ 1 ಕೋಟಿ ರೂ. ಹಣವನ್ನು ಬಹುಮಾನವಾಗಿ ನೀಡಿತ್ತು. ಈ ಬಹುಮಾನಕ್ಕೆ ಸೇವಾ ತೆರಿಗೆಯನ್ನು ಸಾನಿಯಾ ಪಾವತಿ ಮಾಡಿರಲಿಲ್ಲ. ಪಾವತಿ ಮಾಡದ ಹಿನ್ನೆಲೆಯಲ್ಲಿ ಸೇವಾ ತೆರಿಗೆ ಮತ್ತು ದಂಡ ಸೇರಿ ಒಟ್ಟು 20 ಲಕ್ಷ ರೂ. ಹಣವನ್ನು ಪಾವತಿ ಮಾಡುವಂತೆ ಇಲಾಖೆ ಸೂಚಿಸಿದೆ.

    ಅಷ್ಟೇ ಅಲ್ಲದೇ ನಮ್ಮ ಅನುಮತಿ ಇಲ್ಲದೇ ದೇಶವನ್ನು ಬಿಟ್ಟು ಹೊರಗಡೆ ತೆರಳುವಂತಿಲ್ಲ ಎಂದು ಇಲಾಖೆ ಸಾನಿಯಾ ಮಿರ್ಜಾಗೆ ಸೂಚಿಸಿದೆ.