Tag: ಟೆಕ್ ನ್ಯೂಸ್

  • 7000 ಎಂಎಎಚ್ ಬ್ಯಾಟರಿಯ ಸ್ಯಾಮ್‍ಸಂಗ್ ಡ್ಯುಯಲ್ ಸಿಮ್ ಫೋನ್ ಬಿಡುಗಡೆ

    7000 ಎಂಎಎಚ್ ಬ್ಯಾಟರಿಯ ಸ್ಯಾಮ್‍ಸಂಗ್ ಡ್ಯುಯಲ್ ಸಿಮ್ ಫೋನ್ ಬಿಡುಗಡೆ

    ನವದೆಹಲಿ: ಸ್ಯಾಮ್‍ಸಂಗ್ ಇತಿಹಾಸದಲ್ಲಿ ಅತಿ ಹೆಚ್ಚು ಬ್ಯಾಟರಿ ಸಾಮರ್ಥ್ಯದ ಫೋನನ್ನು ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎಂ51 ಹೆಸರಿನ ಡ್ಯುಯಲ್ ಸಿಮ್ ಫೋನಿಗೆ 7000 ಎಂಎಎಚ್ ಬ್ಯಾಟರಿಯನ್ನು ನೀಡಿದೆ.

    ಈ ಫೋನ್ ಜರ್ಮನಿಯಲ್ಲಿ ಬಿಡುಗಡೆಯಾಗಿದ್ದು, ಶೀಘ್ರವೇ ಭಾರತದಲ್ಲೂ ಬಿಡುಗಡೆಯಾಗಲಿದೆ. ಹೊಸ ಗ್ಯಾಲಕ್ಸಿ ಹ್ಯಾಂಡ್‍ಸೆಟ್ 25 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸ್ಪೀಡ್ ಸಪೋರ್ಟ್ ಮತ್ತು ಎರಡು ದಿನ ಚಾರ್ಜ್ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿದೆ. ಫೋನಿಗೆ 4 ಕ್ಯಾಮೆರಾ ನೀಡಿದೆ.

    ಬೆಲೆ ಎಷ್ಟು?
    360 ಯೂರೋ (ಅಂದಾಜು 31,400 ರೂ) ಬೆಲೆಯನ್ನು ನಿಗದಿ ಪಡಿಸಲಾಗಿದ್ದು, ಸದ್ಯ ಜರ್ಮನಿಯಲ್ಲಿ ಗ್ಯಾಲಕ್ಸಿ ಎಂ51 ಪ್ರಿ ಆರ್ಡರ್ ನಲ್ಲಿ ಲಭ್ಯವಿದೆ. ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಗ್ಯಾಲಕ್ಸಿ ಎಂ51 ಗ್ರಾಹಕರಿಗೆ ಸಿಗಲಿದೆ.

    ಸೆಪ್ಟೆಂಬರ್ ಎರಡನೇ ವಾರ ಭಾರತದಲ್ಲಿ ಗ್ಯಾಲಕ್ಸಿ ಎಂ51 ಲಭ್ಯವಾಗಲಿದ್ದು, ಇಲ್ಲಿ 25 ರಿಂದ 30 ಸಾವಿರ ರೂ. ಗ್ರಾಹಕರ ಕೈಗೆ ಸೇರಲಿದೆ ಎಂದು ವರದಿಯಾಗಿದೆ. ಸ್ಯಾಮ್‍ಸಂಗ್ ಈಗಾಗಲೇ ಭಾರತದಲ್ಲಿ ಗ್ಯಾಲಕ್ಸಿ ಎಂ51ರ ಪ್ರಚಾರ ಆರಂಭಿಸಿದೆ.

    ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್‍ಪ್ಲೇ:
    163.9* 6.3*9.5 ಮಿಮಿ ಗಾತ್ರ. 213 ಗ್ರಾಂ ತೂಕ, ಸೂಪರ್ ಅಮೊಲೆಡ್ 6.7 ಇಂಚಿನ ಸ್ಕ್ರೀನ್(1080*2340 ಪಿಕ್ಸೆಲ್), 385 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3.

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 10 ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ 730 ಅಕ್ಟಾಕೋರ್ ಪ್ರೊಸೆಸರ್, ಅಡ್ರಿನೊ 618 ಗ್ರಾಫಿಕ್ಸ್ ಪ್ರೊಸೆಸರ್,6 ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ ಮತ್ತು ಇತರೆ:
    ಹಿಂದುಗಡೆ 64 ಎಂಪಿ, 12 ಎಂಪಿ ಅಲ್ಟ್ರಾ ವೈಡ್, 5 ಎಂಪಿ ಮೈಕ್ರೋ, 5 ಎಂಪಿ ಡೆಪ್ತ್ ಕ್ಯಾಮೆರಾ, ಮುಂದುಗಡೆ ಸೆಲ್ಫಿಗಾಗಿ 32 ಎಂಪಿ ಕ್ಯಾಮರಾ ಹೊಂದಿದೆ.

  • 48 ಎಂಪಿ ಕ್ವಾಡ್ ಕ್ಯಾಮೆರಾ ಸೆಟಪ್ ಇರೋ ಪೋಕೋ ಫೋನ್ ಬಿಡುಗಡೆ

    48 ಎಂಪಿ ಕ್ವಾಡ್ ಕ್ಯಾಮೆರಾ ಸೆಟಪ್ ಇರೋ ಪೋಕೋ ಫೋನ್ ಬಿಡುಗಡೆ

    ನವದೆಹಲಿ: ಹಿಂದುಗಡೆ 4 ಕ್ಯಾಮೆರಾ ಇರುವ ಡ್ಯುಯಲ್ ಸಿಮ್ ಫೋನನ್ನು ಪೋಕೋ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಕ್ಸಿಯೋಮಿಯಿಂದ ಪ್ರತ್ಯೇಕಗೊಂಡಿರುವ ಪೋಕೋ ಎಂ2 ಪ್ರೊ ಹೆಸರಿನಲ್ಲಿ ಮೂರು ಮಾದರಿಯ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಿದ್ದು, ಬೆಲೆ 14 ಸಾವಿರದಿಂದ ಆರಂಭವಾಗಲಿದೆ. ಫೋನ್ 5000 ಎಂಎಚ್ ಬ್ಯಾಟರಿ, 33W ಫಾಸ್ಟ್ ಚಾರ್ಜಿಂಗ್ ಫೀಚರ್ ನಲ್ಲಿ ಹೊಸ ಸ್ಮಾರ್ಟ್‍ಫೋನ್ ಸಿಗಲಿದೆ.

    ಕ್ಸಿಯೋಮಿಯಿಂದ ಪ್ರತ್ಯೇಕಗೊಂಡಿರುವ ಪೋಕೋ ಭಾರತದಲ್ಲಿ ಲಾಂಚ್ ಮಾಡುತ್ತಿರುವ ಮೂರನೇ ಸ್ಮಾರ್ಟ್‍ಫೋನ್ ಇದಾಗಿದೆ. ಜುಲೈ 14ರಿಂದ ಫ್ಲಿಪ್‍ಕಾರ್ಟ್ ನಲ್ಲಿ ಈ ಮೊಬೈಲ್ ಖರೀದಿಸಬಹುದಾಗಿದೆ. ನೀಲಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಪೋಕೋ ಎಂ2 ಪ್ರೊ ಲಭ್ಯವಿದೆ.

    ಯಾವುದಕ್ಕೆ ಎಷ್ಟು ಬೆಲೆ?
    1. 4 ಜಿಬಿ ರ‍್ಯಾಮ್ +64 ಜಿಬಿ ಆಂತರಿಕ ಮೆಮೊರಿ ಬೆಲೆ 13,999 ರೂಪಾಯಿ
    2. 6 ಜಿಬಿ ರ‍್ಯಾಮ್ +64 ಜಿಬಿ ಆಂತರಿಕ ಮೆಮೊರಿ ಬೆಲೆ 14,999 ರೂಪಾಯಿ
    3. 6 ಜಿಬಿ ರ‍್ಯಾಮ್ +128 ಜಿಬಿ ಆಂತರಿಕ ಮೆಮೊರಿ ಬೆಲೆ 16,999 ರೂಪಾಯಿ

    ಹಿಂದುಗಡೆ 48 ಎಂಪಿ ಕ್ವಾಡ್ ಕ್ಯಾಮೆರಾ: ಪೋಕೋ ಎಂ2 ಪ್ರೊ ಫೋನಿನಲ್ಲಿ 48 ಮೆಗಾಪಿಕ್ಸಲ್ ನ ಕ್ವಾಡ್ ರಿಯಲ್ ಕ್ಯಾಮೆರಾ ಸೆಟಪ್ ಇದೆ. ರಿಯರ್ ನಲ್ಲಿ 48 ಎಂಪಿಯ ಪ್ರೈಮರಿ ಸೆನ್ಸರ್, 8ಎಂಪಿ ವೈಡ್ ಆ್ಯಂಗಲ್ ಸೆನ್ಸರ್, 5 ಎಂಪಿ ಮೈಕ್ರೋ ಸೆನ್ಸರ್ ಮತ್ತು 2ಎಂಪಿ ಡೆಪ್ತ್ ಸೆನ್ಸರ್ ಕ್ಯಾಮೆರಾವನ್ನು ನೀಡಲಾಗಿದೆ. ಕ್ಯಾಮೆರಾ ಆ್ಯಪ್‍ನಲ್ಲಿ ಪ್ರೊ ಕಲರ್ ಮೋಡ್, ಪ್ರೊ ವಿಡಿಯೋ ಮೋಡ್ ಮತ್ತು ರಾ ಮೋಡ್ ಆಪ್ಶನ್‍ಗಳಿವೆ. ಸೆಲ್ಫಿಗಾಗಿ ಮುಂದುಗಡೆ 16 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಫ್ರಂಟ್ ಕ್ಯಾಮೆರಾದ ನೈಟ್ ಮೋಡ್ ಫೀಚರ್ ಸಹ ಇದೆ.

    ಇತರೆ ಫೀಚರ್ಸ್: ಪೋಕೋ ಎಂ2 ಪ್ರೊ 6.67 ಇಂಚಿನ ಐಪಿಎಸ್ ಎಲ್‍ಸಿಡಿ ಡಿಸ್‍ಪ್ಲೇ (1080*2400, 395 ಪಿಪಿಐ). ಗೊರಿಲ್ಲ ಗ್ಲಾಸ್ 5, ಆಂಡ್ರಾಯ್ಡ್ 10, ಕ್ವಾಲಕಂ ಸ್ನಾಪ್‍ಡ್ರಾಗನ್ 720 ಅಕ್ಟಾಕೋರ್ ಪ್ರೊಸೆಸರ್, 5 ಗೊರಿಲ್ಲಾ ಗ್ಲಾಸ್, 209 ಗ್ರಾಂ ತೂಕ ಹೊಂದಿದೆ. 33W ಫಾಸ್ಟ್ ಚಾರ್ಜಿಂಗ್ ಇರುವ ಕಾರಣ ಕೇವಲ ಅರ್ಧಗಂಟೆಯಲ್ಲಿ ಶೇ.50ರಷ್ಟು(2500 ಎಂಎಎಚ್) ಬ್ಯಾಟರಿ ಚಾರ್ಜ್ ಆಗುತ್ತದೆ ಎಂದು ಕಂಪನಿ ತಿಳಿಸಿದೆ.

  • ವಾಟ್ಸಪ್ ನಿಂದ ಫೋನ್ ಮೆಮೊರಿ ಫುಲ್ ಆಗಿದ್ಯಾ?

    ವಾಟ್ಸಪ್ ನಿಂದ ಫೋನ್ ಮೆಮೊರಿ ಫುಲ್ ಆಗಿದ್ಯಾ?

    ತಿ ಹೆಚ್ಚು ಜನರು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್. ಡಿಜಿಟಲ್ ಲೋಕದಲ್ಲಿರುವ ಪ್ರತಿಯೊಬ್ಬರು ಸಹ ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಷನ್ ಬಳಕೆ ಮಾಡುತ್ತಿದ್ದಾರೆ. ಚಾಟಿಂಗ್ ಜೊತೆ ಫೋಟೋ, ವಿಡಿಯೋ ಕಾಲ್ ಸಹ ಸೌಲಭ್ಯ ವಾಟ್ಸಪ್ ನಲ್ಲಿ ಲಭ್ಯವಿದೆ. ವಾಟ್ಸಪ್ ನಲ್ಲಿ ಬರುವ ಫೋಟೋ ಮತ್ತು ವಿಡಿಯೋಗಳ ಡೌನ್ ಲೋಡ್ ನಿಂದ ಫೋನ್ ಮೆಮೊರಿ ಕಡಿಮೆಯಾಗುತ್ತದೆ.

    ಈ ರೀತಿ ನಿಮ್ಮ ಮೊಬೈಲ್ ಫೋನ್ ಮೆಮೊರಿ ವಾಟ್ಸಪ್ ನಿಂದ ಬರುವ ಸಂದೇಶಗಳಿಂದ ಭರ್ತಿಯಾಗಿದ್ರೆ ಕೆಲವು ಸಿಂಪಲ್ ಟ್ರಿಕ್ ಬಳಸುವ ಮೂಲಕ ಈ ಸಮಸ್ಯೆಯಿಂದ ದೂರವಾಗಬಹುದು. ವಾಟ್ಸಪ್ ಸೆಟ್ಟಿಂಗ್ ಗೆ ತೆರಳಿ ಕೆಲವು ಬದಲಾವಣೆ ಮಾಡಿಕೊಂಡಲ್ಲಿ ಫೋನ್ ಮೆಮೊರಿ ಸೇವ್ ಮಾಡಿಕೊಳ್ಳಬಹುದು.
    * ಮೊದಲು ನಿಮ್ಮ ಮೊಬೈಲಿನಲ್ಲಿಯ ವಾಟ್ಸಪ್ ಅಪ್ಲಿಕೇಶನ್ ಓಪನ್ ಮಾಡಿ
    * ಬಲಭಾಗದಲ್ಲಿರುವ ಮೂರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್ ನಲ್ಲಿ ಹೋಗಿ ಚಾಟ್ಸ್ ಮೇಲೆ ಕ್ಲಿಕ್ ಮಾಡಿ.
    * ಚಾಟ್ಸ್ ಮೇಲೆ ಕ್ಲಿಕ್ ಮಾಡಿದ ಬಳಿಕ ಕೆಲವು ಆಯ್ಕೆಗಳು ನಿಮ್ಮ ಮುಂದೆ ಕಾಣಿಸುತ್ತವೆ. ಮೀಡಿಯಾ ವಿಸಿಬಿಲಿಟಿಯ ಟಾಗಲ್ ಆಫ್ ಮಾಡಿ.

    ಆಟೋ ಡೌನ್‍ಲೋಡ್ ಮಾಡಲು ಇಚ್ಛಿಸದಿದ್ದಲ್ಲಿ ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ
    * ವಾಟ್ಸಪ್ ಓಪನ್ ಮಾಡಿ, ನೀವು ಆಟೋ ಡೌನ್‍ಲೋಡ್ ಇಚ್ಚಿಸದ ಖಾತೆಯ ಮೇಲೆ ಕ್ಲಿಕ್ಕಿಸಿ, ಅಲ್ಲಿ ಬಲಭಾಗದಲ್ಲಿರುವ ಮೂರು ಡಾಟ್ ಮೇಲೆ ಕ್ಲಿಕ್ಕಿಸಿ. ಸೆಟ್ಟಿಂಗ್ ಪ್ರವೇಶಿಸಿ
    * ಅಲ್ಲಿ View Contact ಮೇಲೆ ಕ್ಲಿಕ್ಕಿಸಿದಾಗ ಆ ಖಾತೆಯ ಮಾಹಿತಿ ಬರುತ್ತದೆ.
    * ತದನಂತರ Media visibility ಕ್ಲಿಕ್ಕಿಸಿದಾಗ ನಿಮ್ಮ ಸ್ಕ್ರೀನ್ ಮೇಲೆ ‘Show newly downloaded media from this chat in your phone’s gallery? ಪ್ರಾಂಪ್ಟ್ ಕಾಣಿಸಿದಾಗ NO ಆಯ್ಕೆ ಮಾಡಿಕೊಳ್ಳಿ

    ಈ ರೀತಿ ಮಾಡುವದರಿಂದ ನಿಮ್ಮ ವಾಟ್ಸಪ್ ಗೆ ಬಂದಿರುವ ಫೈಲ್ ಗಳು ತನ್ನಿಂದ ತಾನೇ ಡೌನ್‍ಲೋಡ್ ಆಗುವುದಿಲ್ಲ. ಈ ಸೆಟ್ಟಿಂಗ್ ಬಳಿಕ ಬಂದಿರುವ ನಿಮಗೆ ಬೇಕಾಗಿರುವ ಫೈಲ್ ಮಾತ್ರ ಡೌನ್ ಲೋಡ್ ಮಾಡಬಹುದು.

     

    ಐಫೋನ್ ಬಳಕೆದಾರರು:
    * ವಾಟ್ಸಪ್ ಓಪನ್ ಮಾಡಿ, ಕೆಳಗಡೆ ಬಲಭಾಗದಲ್ಲಿರುವ ಸೆಟ್ಟಿಂಗ್ ಪ್ರವೇಶಿಸಿ.
    * ಚಾಟ್ಸ್ ಮೇಲೆ ಟ್ಯಾಪ್ ಮಾಡಿ Save to camera roll ಹೋಗಿ ಟಾಗಲ್ ಆಫ್ ಮಾಡಿ

    ಐಫೋನ್ ನಲ್ಲಿ ಮೀಡಿಯಾ ಡೌನ್‍ಲೋಡ್ ಆಗದಂತೆ ತಡೆಯಲು ಪ್ರಿಫರೆಂಸ್ ನಲ್ಲಿ ಸೆಟ್ ಮಾಡಿಕೊಳ್ಳಬಹುದು.
    * ವಾಟ್ಸಪ್ ಸೆಟ್ಟಿಂಗ್ ನಲ್ಲಿ ಹೋಗಿ ಡೇಟಾ ಆ್ಯಂಡ್ ಸ್ಟೋರೆಜ್ ಪ್ರವೇಶಿಸಿ, ಇಲ್ಲಿ ನಿಮಗೆ ಮೊಬೈಲ್ ಡೇಟಾ, ವೈಫೈ ಮತ್ತು ರೋಮಿಂಗ್ ಆಯ್ಕೆ ಸಿಗುತ್ತದೆ.
    * ಇಲ್ಲಿ ಯಾವ ಡೇಟಾದಲ್ಲಿ ಮೀಡಿಯಾ ಫೈಲ್ ಆಟೋ ಡೌನ್‍ಲೋಡ್ ಮಾಡಿಕೊಳ್ಳಲು ಇಚ್ಛಿಸುತ್ತಿರಿ ಒಂದು ಆಯ್ಕೆಯ ಮೇಲೆ ಕ್ಲಿಕ್ಕಿಸಬಹುದು.

  • ಆಗಸ್ಟ್ 12ಕ್ಕೆ ಜಿಯೋ ಗಿಗಾ ಫೈಬರ್ ಲಾಂಚ್

    ಆಗಸ್ಟ್ 12ಕ್ಕೆ ಜಿಯೋ ಗಿಗಾ ಫೈಬರ್ ಲಾಂಚ್

    ಮುಂಬೈ: ರಿಲಯನ್ಸ್ ಜಿಯೋ ಕಂಪನಿಯ ಫಿಕ್ಸೆಡ್ ಬ್ರಾಡ್‍ಬ್ಯಾಂಡ್ ಸೆಗ್ಮೆಂಟ್ ಹೊಸ ಕನೆಕ್ಷನ್ ‘ಜಿಯೋಗಿಗಾಫೈಬರ್’ ಸೇವೆ ಆಗಸ್ಟ್ 12ರಂದು ಲಾಂಚ್ ಆಗಲಿದೆ ಎಂದು ವರದಿಯಾಗಿದೆ. ರಿಲಯನ್ಸ್ ಜಿಯೋ ಕಂಪನಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ‘ಜಿಯೋಗಿಗಾಫೈಬರ್’ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

    ಜಿಯೋಗಿಗಾಫೈಬರ್ ಸಂಪರ್ಕ ವಿಶ್ವದ ಅತಿದೊಡ್ಡ ಗ್ರೀನ್ ಫೀಲ್ಡ್ ಫಿಕ್ಸಡ್ ಬ್ರಾಡ್‍ಬ್ಯಾಂಡ್ ಲೈನ್ ಆಗಲಿದೆ. ಭಾರತದ ಸುಮಾರು 1,100 ನಗರಗಳಲ್ಲಿ ಜಿಯೋಗಿಗಾಫೈಬರ್ ಸೇವೆ ಲಭ್ಯವಾಗಲಿದೆ ಎಂದು 2018ರ ಜುಲೈನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ತಿಳಿಸಿದ್ದರು.

    ಬ್ರಾಡ್‍ಬ್ಯಾಂಡ್, ಲ್ಯಾಂಡ್‍ಲೈನ್ ಮತ್ತು ಟಿವಿ ಕಾಂಬೋ ಮೂರು ಸೇವೆಗಳನ್ನು ತಿಂಗಳಿಗೆ 600 ರೂ.ಗೆ ನೀಡಲು ಜಿಯೋ ಮುಂದಾಗಿದೆ. ಜಿಯೋ ಗಿಗಾಫೈಬರ್ ಕಳೆದ ವರ್ಷದಿಂದ ಮುಂಬೈ ಮತ್ತು ದೆಹಲಿಯಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. ಗಿಗಾ ಫೈಬರ್ ಪಡೆದ ಗ್ರಾಹಕರು 100 ಮೆಗಾಬೈಟ್ಸ್ ಪರ್ ಸೆಕೆಂಡ್ (ಎಂಬಿಪಿಎಸ್) ವೇಗದ ಇಂಟರ್ ನೆಟ್ ಸಿಗಲಿದೆ.

    ರೂಟರ್ ಖರೀದಿ:
    ಜಿಯೋ ಗಿಗಾ ಫೂಬರ್ ಒಂದು ವರ್ಷ ಉಚಿತ ಸೇವೆ ಆದರೂ ಗ್ರಾಹಕರು ಆರಂಭದಲ್ಲಿ 4,500 ರೂ. ನೀಡಿ ರೂಟರ್ ಖರೀದಿಸಬೇಕು. ಎಲ್ಲ ಇಂಟರ್ ನೆಟ್ ಸೇವೆಗಳು ಆಪ್ಟಿಕಲ್ ನೆಟ್‍ವರ್ಕ್ ಟರ್ಮಿನಲ್ (ಒಎನ್‍ಟಿ) ಬಾಕ್ಸ್ ರೂಟರ್ ಮೂಲಕ ನಡೆಯಲಿದ್ದು, ಒಂದೇ ಬಾರಿಗೆ ಒಟ್ಟು 40-45 ಡಿವೈಸ್ ಗಳನ್ನು ಕನೆಕ್ಟ್ ಮಾಡಬಹುದು. ಮೊಬೈಲ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಗೇಮಿಂಗ್, ಸಿಸಿಟಿವಿ, ಸ್ಮಾರ್ಟ್ ಹೋಮ್ ಸಿಸ್ಟಂ ಸಹ ಕನೆಕ್ಟ್ ಮಾಡಬಹುದು.

    ಈ ಸೇವೆಯ ಇನ್ನೊಂದು ವಿಶೇಷ ಏನೆಂದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೇರಿದಂತೆ ಇತರ ಡೇಟಾಗಳನ್ನು ಕ್ಲೌಡ್ ಮೂಲಕ ಸೇವ್ ಆಗಲಿದೆ. ಈ ಮೂಲಕ ಎಲ್ಲೇ ಹೋದರೂ ಡೇಟಾಗಳನ್ನು ಗ್ರಾಹಕರು ಚೆಕ್ ಮಾಡಬಹುದು.

  • ಹೊಸ ವರ್ಷಕ್ಕೆ ಜಿಯೋನಿಂದ ಧಮಾಕಾ ಆಫರ್!

    ಹೊಸ ವರ್ಷಕ್ಕೆ ಜಿಯೋನಿಂದ ಧಮಾಕಾ ಆಫರ್!

    ನವದೆಹಲಿ: ಹಬ್ಬಗಳು ಬಂದರೆ ಸಾಕು ವ್ಯಾಪಾರಸ್ಥರು ಗ್ರಾಹಕರಿಗಾಗಿ ವಿಶೇಷ ಆಫರ್ ಗಳನ್ನು ನೀಡುತ್ತಾರೆ. ಈ ಆಫರ್ ಗಳ ಮುಲಕ ಗ್ರಾಹಕರನ್ನು ತಮ್ಮ ಉತ್ಪನ್ನದತ್ತ ಸೆಳೆದುಕೊಳ್ಳುವುದು ಮಾರುಕಟ್ಟೆಯ ಮತ್ತೊಂದು ಉದ್ದೇಶ. ಮೊಬೈಲ್ ಗ್ರಾಹಕರಿಗೂ ಈ ರೀತಿ ಸೌಲಭ್ಯಗಳು ಲಭ್ಯವಾಗಿರುತ್ತೇವೆ. ಇದೀಗ ಜಿಯೋ ತನ್ನ ನೆಟ್‍ವರ್ಕ್ ಬಳಕೆದಾರರಿಗೆ ಬಂಪರ್ ಆಫರ್ ನೀಡಿದೆ.

    ಜಿಯೋ ಬಳಕೆದಾರರು 399 ರೂ. ರಿಚಾರ್ಜ್ ಮಾಡಿಕೊಂಡಲ್ಲಿ 100% ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಆಫರ್ ಡಿಸೆಂಬರ್ 29ರಿಂದ ಆರಂಭವಾಗಿದ್ದು, ಜನವರಿ 30, 2019ರವರೆಗೂ ಲಭ್ಯವಿರಲಿದೆ. ಈ ಆಫರ್ ಪಡೆದುಕೊಳ್ಳಲು ಗ್ರಾಹಕರು ಮೊದಲಿಗೆ MyJio ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಈ ಆ್ಯಪ್ ಮೂಲಕವೇ 399 ರೂ. ರಿಚಾರ್ಜ್ ಮಾಡಿಕೊಳ್ಳಬೇಕು. ರಿಚಾರ್ಜ್ ಬಳಿಕ ಮೈ ಕೂಪನ್ ಸೆಕ್ಷನ್ ನಿಂದ 399 ರೂ. AJIO  ಕೂಪನ್ ಸಿಗುತ್ತದೆ. AJIO ಮುಂದಿನ 72 ಗಂಟೆಗಳಲ್ಲಿ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ.

    ಕ್ಯಾಶ್‍ಬ್ಯಾಕ್ ಪಡೆದುಕೊಳ್ಳೋದು ಹೇಗೆ?: 72 ಗಂಟೆಗಳ ಬಳಿಕ 399 ರೂ. ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ. AJIO ವೆಬ್‍ಸೈಟ್ ಗೆ ಹಣವನ್ನ ರಿದೀಮ್ ಮಾಡಿಕೊಳ್ಳಬಹುದು. ಈ ಕ್ಯಾಶ್‍ಬ್ಯಾಕ್ ಪಡೆದುಕೊಳ್ಳಲು ನೀವು ಕನಿಷ್ಠ 1 ಸಾವಿರ ರೂ. ಶಾಪಿಂಗ್ ಮಾಡಬೇಕು. ಅಂದರೆ ನೀವು 1 ಸಾವಿರ ರೂ. ಶಾಪಿಂಗ್ ಮಾಡಿದಾಗ ಬಿಲ್ ನಲ್ಲಿ ತಾನಾಗಿಯೇ 399 ರೂ. ಕಡಿತವಾಗುತ್ತದೆ. 15 ಮಾರ್ಚ್, 2019ರವರೆಗೆ ಈ ಕೂಪನ್ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

    399 ರೂ. ರಿಚಾರ್ಜ್ ಪ್ಲಾನ್ ಹೀಗಿದೆ: ಈ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಒಟ್ಟಾರೆಯಾಗಿ ನಿಮಗೆ ಈ ರಿಚಾರ್ಜ್ ನಿಂದ 126 ಜಿಬಿ 4ಜಿ ಡಾಟಾ ಸಿಗಲಿದೆ. ಒಂದು ದಿನಕ್ಕೆ 1.5ಜಿಬಿ 4ಜಿ ಡಾಟಾ ನಿಮ್ಮದಾಗಲಿದೆ. ಪ್ರತಿದಿನ 100 SMS ಉಚಿತ. ಎಲ್ಲ ನೆಟ್‍ವರ್ಕ್ ಕಾಲಿಂಗ್ ಫ್ರೀ ಜೊತೆ ರೋಮಿಂಗ್ ಸಿಗಲಿದೆ. ಈ ರಿಚಾರ್ಜ್ ನಿಂದ ಜಿಯೋದ ಎಲ್ಲ ಆ್ಯಪ್ ಗಳ ಬಳಕೆ ಉಚಿತವಾಗಿ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv