Tag: ಟೆಕ್ ಕಂಪನಿ

  • ಗೂಗಲ್‌ನ 10 ಸಾವಿರ ಉದ್ಯೋಗಿಗಳು ಮನೆಗೆ

    ಗೂಗಲ್‌ನ 10 ಸಾವಿರ ಉದ್ಯೋಗಿಗಳು ಮನೆಗೆ

    ವಾಷಿಂಗ್ಟನ್‌: ಟ್ವಿಟ್ಟರ್‌, ಅಮೆಜಾನ್‌, ಮೆಟಾ ಬಳಿಕ ಗೂಗಲ್‌(Google) ಮಾತೃಸಂಸ್ಥೆ ಅಲ್ಫಾಬೆಟ್‌(Alphabet) ತನ್ನ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದೆ.

    ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಆವರಿಸುತ್ತಿದ್ದಂತೆ ಟೆಕ್‌ ಕಂಪನಿಗಳು ಉದ್ಯೋಗಿಗಳನ್ನು ಖರ್ಚು ಕಡಿಮೆ ಮಾಡಲು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಈಗ ಕಳಪೆ ಕಾರ್ಯಕ್ಷಮತೆ ಆಧಾರದ ಮೇಲೆ ಸುಮಾರು 10 ಸಾವಿರ ಉದ್ಯೋಗಿಗಳನ್ನು ಅಥವಾ ಅದರ ಶೇ. 6ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.

    ಕಳಪೆ ಕಾರ್ಯಕ್ಷಮತೆ ಗುರುತಿಸಲು ಗೂಗಲ್ ಶ್ರೇಯಾಂಕ ಪದ್ಧತಿ ಅನುಸರಿಸಲಿದೆ. ಯಾರಿಗೆ ಕಡಿಮೆ ರೇಟಿಂಗ್‌ ಸಿಗುತ್ತದೋ ಅವರನ್ನು ಕೆಲಸದಿಂದ ತೆಗೆದು ಹಾಕಲು ಕಂಪನಿ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    ಅಲ್ಫಾಬೆಟ್‌ ಕಂಪನಿಯಲ್ಲಿ 1.87 ಲಕ್ಷ ಉದ್ಯೋಗಿಗಳಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಅಲ್ಫಾಬೆಟ್‌ 13.9 ಶತಕೋಟಿ ಡಾಲರ್‌ ನಿವ್ವಳ ಲಾಭಗಳಿಸಿದೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.27ರಷ್ಟು ಕುಸಿತವಾಗಿದೆ.

    ಹೊಸ ಉದ್ಯೋಗ ನೇಮಕಾತಿಯನ್ನು ತಡೆಹಿಡಿಯಲಾಗಿದ್ದು ಉದ್ಯೋಗಿಗಳಿಗೆ ಕಂಪನಿಯಲ್ಲೇ ಬೇರೆ ಕೆಲಸವನ್ನು 60 ದಿನಗಳ ಒಳಗಡೆ ಆಯ್ಕೆ ಮಾಡುವಂತೆ ಗೂಗಲ್‌ ಈ ಹಿಂದೆ ಸೂಚಿಸಿತ್ತು ಎಂದು ವರದಿಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಗೂಗಲ್ ನಂತರ ಇದೀಗ ಇಂಟೆಲ್- ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ

    ವಾಷಿಂಗ್ಟನ್: ಕೆಲವು ದಿನಗಳ ಹಿಂದೆಯಷ್ಟೆ ಗೂಗಲ್ ತನ್ನ ಉದ್ಯೋಗಿಗಳ ಲಸಿಕೆಯನ್ನು ಕಡ್ಡಾಯಗೊಳಿಸಿತ್ತು. ನಿಗದಿತ ಸಮಯದ ಒಳಗಾಗಿ ಲಸಿಕೆ ಹಾಕಿಸಿಕೊಳ್ಳದೇ ಹೋದಲ್ಲಿ ತನ್ನ ಉದ್ಯೋಗಿಗಳಿಗೆ ವೇತನ ನೀಡದೇ ವೈಯಕ್ತಿಕ ರಜೆ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿತ್ತು. ಇದೀಗ ಇಂಟೆಲ್ ಕಂಪನಿಯೂ ತನ್ನ ಉದ್ಯೋಗಿಗಳಿಗೆ ಲಸಿಕೆ ಕಡ್ಡಾಯಗೊಳಿಸಿದೆ.

    ಇತ್ತೀಚೆಗೆ ದೊಡ್ಡ ಟೆಕ್ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಮಾಡುತ್ತಿದೆ. ಲಸಿಕೆ ಹಾಕಿಸಿಕೊಳ್ಳದೇ ಇರುವ ಉದ್ಯೋಗಿಗಳ ಮೇಲೆ ಕಂಪನಿಗಳು ದಯೆ ತೋರುವಂತೆ ಕಾಣಿಸುತ್ತಿಲ್ಲ. ಇಂಟೆಲ್ ಕಂಪನಿಯೂ ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳದೇ ಹೋದಲ್ಲಿ ವೇತನ ನೀಡದ ರಜೆಯನ್ನು ವಿಧಿಸುವುದಾಗಿ ಎಚ್ಚರಿಸಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ- ಗೂಗಲ್ ನಿರ್ಧಾರ

    ಇಂಟೆಲ್ ಕಂಪನಿ ಜನವರಿ 4ರ ಒಳಗಾಗಿ ತನ್ನ ಉದ್ಯೋಗಿಗಳ ಲಸಿಕೆಯ ಪ್ರಮಾಣಪತ್ರವನ್ನು ಸಲ್ಲಿಸಲು ಸೂಚಿಸಿದೆ. ಲಸಿಕೆಯ ವಿವರ ಸಲ್ಲಿಸದೇ ಹೋದಲ್ಲಿ ಉದ್ಯೋಗಿಗಳಿಗೆ ವೇತನ ನೀಡದೇ ರಜೆ ವಿಧಿಸಲಾಗುವುದು ಎಂದು ಹೇಳಿದೆ.

    ಲಸಿಕೆ ಪಡೆಯದ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದರೂ ಸಹ ಪ್ರತೀ ವಾರ ಪರೀಕ್ಷೆಗೆ ಒಳಗಾಗಿ ವರದಿ ಸಲ್ಲಿಸಬೇಕು. 2022ರ ಮಾರ್ಚ್ 15ರ ವರೆಗೆ ಈ ವಿನಾಯಿತಿಯನ್ನು ಪಡೆಯಬಹುದು ಎಂದು ಇಂಟೆಲ್ ಹೆಚ್‌ಆರ್ ಕ್ರಿಸ್ಟಿ ಪಂಬಿಯಾಂಚಿ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಸುಲಭವಾಗಿ ಆನ್‌ಲೈನ್ ಶಾಪಿಂಗ್ – ಏನಿದು ಟೋಕನೈಸೇಶನ್?

    ಈ ವಿನಾಯಿತಿಯನ್ನೂ ಉದ್ಯೋಗಿಗಳು ಸದುಪಯೋಗಪಡಿಸಿಕೊಳ್ಳದೇ ಹೋದಲ್ಲಿ ಏಪ್ರಿಲ್ 4 ರಿಂದ ಮೂರು ತಿಂಗಳ ವೇತನ ರಹಿತ ರಜೆಯನ್ನು ವಿಧಿಸುತ್ತದೆ ಎಂದು ಉದ್ಯೋಗಿಗಳಿಗೆ ನೀಡಲಾದ ಮೆಮೋದಲ್ಲಿ ಉಲ್ಲೇಖಿಸಿದೆ. ಕಂಪನಿ ರಜೆಯಲ್ಲಿರುವ ಉದ್ಯೋಗಿಗಳಿಗೆ ಆರೋಗ್ಯ ಪ್ರಯೋಜನಗಳನ್ನೂ ವಿತರಿಸುತ್ತದೆ ಎಂದು ಹೇಳಿದೆ.

  • ಆಪಲ್ ಉದ್ಯೋಗಿಗಳು ಆಫಿಸ್‌ಗೆ ಮರಳುವ ಪ್ಲ್ಯಾನ್ ಕ್ಯಾನ್ಸಲ್ – WFH ಮುಂದುವರಿಕೆ

    ಆಪಲ್ ಉದ್ಯೋಗಿಗಳು ಆಫಿಸ್‌ಗೆ ಮರಳುವ ಪ್ಲ್ಯಾನ್ ಕ್ಯಾನ್ಸಲ್ – WFH ಮುಂದುವರಿಕೆ

    ವಾಷಿಂಗ್ಟನ್: ಓಮಿಕ್ರಾನ್ ಕೇಸ್‌ಗಳು ಹೆಚ್ಚಿದಂತೆ ವಿಶ್ವವ್ಯಾಪಿ ಹೆಚ್ಚಿನ ಕಂಪನಿಗಳು ಆಫಿಸ್‌ಗೆ ಮರಳುವ ಯೋಜನೆಯನ್ನು ಮುಂದೂಡಿದೆ. ಈ ಪಟ್ಟಿಯಲ್ಲಿ ಆಪಲ್ ಕಂಪನಿಯೂ ಒಂದಾಗಿದ್ದು, ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ವಿಧಾನವನ್ನೇ ಮುಂದುವರಿಸಲಾಗುತ್ತಿದೆ.

    ಆಪಲ್ ಈ ಹಿಂದೆ ತನ್ನ ಉದ್ಯೋಗಿಗಳನ್ನು 2022ರ ಫೆಬ್ರವರಿ 1 ರಿಂದ ಆಫಿಸ್‌ಗೆ ಕರೆಸಿಕೊಳ್ಳುವ ಬಗ್ಗೆ ಯೋಜಿಸಿತ್ತು. ಆದರೆ ಕೋ‌ವಿಡ್-19 ರೂಪಾಂತರಿ ಓಮಿಕ್ರಾನ್ ವೈರಸ್‌ನ ಭೀತಿ ಎಲ್ಲೆಡೆ ಹೆಚ್ಚಾಗಿದ್ದು, ಈ ಗಡುವನ್ನು ಮುಂದಕ್ಕೆ ಹಾಕಲು ಯೋಜಿಸಿದೆ. ಇದನ್ನೂ ಓದಿ: ಜಪಾನ್‌ನ ಕ್ಲಿನಿಕ್‌ನಲ್ಲಿ ಅಗ್ನಿ ದುರಂತ – 27 ಜನರ ಸಾವು

    ಪ್ರಪಂಚದ ಎಲ್ಲಾ ಭಾಗಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಆಫಿಸ್‌ಗೆ ಕರೆಸಿಕೊಳ್ಳುವ ಯೋಜನೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆಪಲ್ ಕಂಪನಿಯ ಸಿಇಒ ಟಿಮ್ ಕುಕ್ ಉದ್ಯೋಗಿಗಳಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ.

    ಆಪಲ್ ತನ್ನ ಎಲ್ಲಾ ಉದ್ಯೋಗಿಗಳಿಗೂ ವ್ಯಾಕ್ಸಿನೇಷನ್ ಹಾಗೂ ಬೂಸ್ಟರ್ ಡೋಸ್‌ಗಳನ್ನು ಪಡೆಯಲು ಪ್ರೋತ್ಸಾಹಿಸುತ್ತಿರುವುದರೊಂದಿಗೆ ವರ್ಕ್ ಫ್ರಮ್ ಹೋಮ್ ವಿಧಾನ ದಿಂದ ಉದ್ಯೋಗಿಗಳು ಹಾಗೂ ಅವರ ಸಮುದಾಯದವರು ಸುರಕ್ಷಿತವಾಗಿ ಇರಬಹುದು ಎಂದು ಹೇಳಿದೆ. ಇದನ್ನೂ ಓದಿ: ಮಗನ ಕೈ ಹಿಡಿದಿರುವ ವೀಡಿಯೋ ಶೇರ್ ಮಾಡಿದ ನುಸ್ರತ್ ಜಹಾನ್

    ಆಪಲ್ ಮಾತ್ರವಲ್ಲದೇ ಗೂಗಲ್, ಮೈಕ್ರೊಸಾಫ್ಟ್ಗಳಂತಹ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಕೂಡಾ ಉದ್ಯೋಗಿಗಳನ್ನು ಆಪಿಸ್‌ಗೆ ಕರೆಸುವ ಯೋಜನೆಯನ್ನು ಸದ್ಯ ಕೈ ಬಿಟ್ಟಿದೆ.