Tag: ಟೆಕ್ನಿಷಿಯನ್

  • ಮಂಗಳಮುಖಿಗೆ ಸ್ಕ್ಯಾನಿಂಗ್ ಮಾಡಲು ಪೂರ್ಣ ವಿವಸ್ತ್ರಗೊಳಿಸಿ ಮಲಗುವಂತೆ ಹೇಳಿದ ಟೆಕ್ನಿಶಿಯನ್!

    ಮಂಗಳಮುಖಿಗೆ ಸ್ಕ್ಯಾನಿಂಗ್ ಮಾಡಲು ಪೂರ್ಣ ವಿವಸ್ತ್ರಗೊಳಿಸಿ ಮಲಗುವಂತೆ ಹೇಳಿದ ಟೆಕ್ನಿಶಿಯನ್!

    ಬೆಂಗಳೂರು: ಸ್ಕ್ಯಾನಿಂಗ್ ಸೆಂಟರ್ ವೊಂದರಲ್ಲಿ ಮಂಗಳಮುಖಿಗೆ ಕಿರುಕುಳ ನೀಡಿರುವ ಆರೋಪವೊಂದು ಕೇಳಿಬಂದಿದೆ.

    ಬೆಂಗಳೂರಿನ ಆಸ್ಟೀನ್ ಟೌನ್‍ನಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ರಿಯಾನ ಎಂಬ ಮಂಗಳಮುಖಿಗೆ ಕೇರ್ ಸ್ಕ್ಯಾನ್ ಆಂಡ್ ಡಯಾಗ್ನೋಸ್ಟಿಕ್ ಸೆಂಟರ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ವ್ಯಕ್ತವಾಗಿದೆ.

    ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದ ರಿಯಾನ ಇಂದು ಬೆಳಗೆ ಸ್ಕಾನಿಂಗ್ ಮಾಡಿಸಲೆಂದು ಸ್ಕ್ಯಾನಿಂಗ್ ಸೆಂಟರ್ ಗೆ ತೆರಳಿದ್ದರು. ಈ ವೇಳೆ ಸ್ಕ್ಯಾನಿಂಗ್ ಸೆಂಟರ್ ನ ಟೆಕ್ನಿಶಿಯನ್ ಆಗಿರೋ ಮಹೇಂದ್ರ ಎಂಬಾತ ಮೈಮೇಲಿದ್ದ ಬಟ್ಟೆಗಳನ್ನು ಸಂಪೂರ್ಣ ಕಳಚಿ ಮಲಗುವಂತೆ ಹೇಳಿದ್ದಾನೆ. ಆದ್ರೆ ರಿಯಾನ ಇದನ್ನು ನಿರಾಕರಿಸಿದ್ದಾರೆ. ಇದೀಗ ರಿಯಾನ ತನಗೆ ಮಹೇಂದ್ರ ಲೈಂಗಿಕ ಕಿರುಕುಳ ನೀಡಿದ್ದಾನೆ ಅಂತ ಆರೋಪಿಸುತ್ತಿದ್ದಾರೆ.