Tag: ಟೆಕ್ನಾಲಜಿ

  • ಕೊಡಗಿನ ಶಿಕ್ಷಕನಿಂದ ಕಾನ್ಫರೆನ್ಸ್ ಕಾಲ್ ಟೀಚಿಂಗ್ – ಶಹಬ್ಬಾಸ್ ಎಂದ ಪೋಷಕರು

    ಕೊಡಗಿನ ಶಿಕ್ಷಕನಿಂದ ಕಾನ್ಫರೆನ್ಸ್ ಕಾಲ್ ಟೀಚಿಂಗ್ – ಶಹಬ್ಬಾಸ್ ಎಂದ ಪೋಷಕರು

    – ಮುಳ್ಳೂರು ಶಾಲೆಯ ವಿದ್ಯಾರ್ಥಿಗಳಿಗೆ ಪಾಠ
    – ಶಾಲೆಯ ಆವರಣದಲ್ಲಿ ವಿಜ್ಞಾನ ಮಾದರಿ

    ಮಡಿಕೇರಿ: ಕೊಡಗಿನ ಸರ್ಕಾರಿ ಶಾಲೆಯ ಶಿಕ್ಷರೊಬ್ಬರು ಮಕ್ಕಳಿಗೆ ಉಪಯುಕ್ತವಾಗಲೆಂದು ಕಾನ್ಫರೆನ್ಸ್ ಕಾಲ್ ಟೀಚಿಂಗ್ ಮಾಡುವ ಮೂಲಕ ಪೋಷಕರ ಮನ ಗೆದ್ದಿದ್ದಾರೆ.

    ಸೋಮವಾರಪೇಟೆ ತಾಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವಿನೂತನ ಕಲಿಕೆ ವಿಧಾನವನ್ನು ಬಳಸಲಾಗುತ್ತಿದೆ. ಇಲ್ಲಿನ ಶಿಕ್ಷಕ ಸತೀಶ್ ಅವರು ಟೆಕ್ನಾಲಜಿ ಬಳಸಿ ವಿನೂತನ ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

    ಇವರ ಈ ವಿಶೇಷ ಪಾಠದ ಪ್ಲಾನ್‍ನಿಂದ ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳು ಕೂಡ ಸಂಜೆ ಮನೆಯಲ್ಲಿಯೇ ಸಂಜೆ ವೇಳೆ ಪಾಠ ಕೇಳ್ತಿದ್ದಾರೆ. ಶಾಲೆಯ ಪಾಠ ಅರ್ಥವಾಗದ ಮಕ್ಕಳು ಮತ್ತೆ ಪಾಠ ಕೇಳಿ ಕಲಿಯುತ್ತಿದ್ದಾರೆ. ಈ ವಿಭಿನ್ನ ಪ್ರಯೋಗ ಮಕ್ಕಳಿಗೂ, ಪೋಷಕರಿಗೂ ಖುಷಿ ಕೊಟ್ಟಿದೆ.

    ಶಾಲೆಯ ಆವರಣದ ಸುತ್ತಲೂ ಸೈನ್ಸ್ ಮಾಡೆಲ್‍ಗಳನ್ನು ನಿರ್ಮಿಸಲಾಗಿದೆ. ಈ ಮಾಡೆಲ್‍ಗಳನ್ನು ನೋಡಿ ಕಲಿತು, ಅದರ ಕೆಲಸದ ಬಗ್ಗೆ ಇಲ್ಲಿನ ಮಕ್ಕಳು ವಿವರಿಸುತ್ತಾರೆ. ಕಾಲೇಜು ಮಟ್ಟದ ಪ್ರಾಕ್ಟಿಕಲ್ ಟೀಚಿಂಗ್ ಕೂಡ ಅಲ್ಲಿದೆ. ಟೆಕ್ನಾಲಜಿಯನ್ನ ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಶಿಕ್ಷಕ ಸತೀಶ್ ಇಲ್ಲಿನ ಮಕ್ಕಳಿಗೆ ಕಲಿಸುತ್ತಿದ್ದಾರೆ.

    ಹೇಗೆ ಕಾನ್ಫರೆನ್ಸ್ ಕಾಲ್?
    ಸಿಟಿಯ ಹೈಫೈ ಶಾಲೆಗಳಲ್ಲಿ ಮಕ್ಕಳಿಗೆ ವಾಟ್ಸಾಪ್ ಗ್ರೂಪ್ ಮಾಡಿ ಟೀಚ್ ಮಾಡುವಂತಹದ್ದು ಗ್ರಾಮೀಣ ಭಾಗಕ್ಕೆ ಆಗಲ್ಲ, ಅದರ ಬದಲಿಗೆ ಬಂದಿರೋದೆ ಕಾನ್ಫರೆನ್ಸ್ ಕಾಲ್ ಟೀಚಿಂಗ್. ಇದು ತುಂಬಾ ಸಿಂಪಲ್. ಸಂಜೆ ಮಕ್ಕಳು ಮನೆಗೆ ಹೋದ್ಮೇಲೆ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಈ ಕಾನ್ಫರೆನ್ಸ್ ಕಾಲ್ ಟೀಚಿಂಗ್ ಸಮಯ ಫಿಕ್ಸ್ ಆಗಿರುತ್ತೆ. ಏಕಕಾಲದಲ್ಲಿ ಎಂಟರಿಂದ ಹತ್ತು ವಿದ್ಯಾರ್ಥಿಗಳನ್ನು ಕರೆಯಲ್ಲಿ ನಿರತರಾಗುವಂತೆ ಮಾಡಿ ಬೋಧನೆ ಮಾಡಬಹುದು. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಪ್ರತಿನಿತ್ಯ ಈ ಮೂಲಕ ಗಮನಿಸಬಹುದು. ಕೆಲ ಮನೆಗಳಲ್ಲಿ ಪೋಷಕರು ಹಲವು ಕಾರಣಗಳಿಂದ ತಮ್ಮ ಮಕ್ಕಳ ಕಲಿಕೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಅಂತಹ ಮಕ್ಕಳ ಬಗ್ಗೆ ಕೂಡ ನಿಗಾ ವಹಿಸಲು ಇದು ನೆರವಾಗುತ್ತದೆ ಎಂದು ಸತೀಶ್ ತಿಳಿಸಿದ್ದಾರೆ.

    ಪ್ರಸ್ತುತ ನಾನು 3, 4 ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಕ್ಕೊಂದು ವಿಷಯದಂತೆ ಕಾನ್ಫರೆನ್ಸ್ ಕಾಲ್ ಮೂಲಕ ಬೋಧಿಸುತ್ತಿದ್ದೇನೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಕಲಿಯುತ್ತಿದ್ದು, ಸಂಜೆ ತಮ್ಮ ಬರವಣಿಗೆಗಳನ್ನು ಬೇಗ ಬೇಗ ಮುಗಿಸಿಕೊಂಡು ಶಿಕ್ಷಕರ ಕರೆಗಾಗಿ ಕಾಯುತ್ತಿರುತ್ತಾರೆ. ಇದಕ್ಕೆ ಪೋಷಕರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದು, ಕಾನ್ಫರೆನ್ಸ್ ಕಾಲ್ ಟೀಚಿಂಗ್ ಬಳಿಕ ಅದನ್ನು ರೆಕಾರ್ಡ್ ಮಾಡಿಕೊಂಡು ಅತಿ ಉಪಯುಕ್ತ ತರಗತಿಗಳನ್ನು ಶಿಕ್ಷಕರು ಇತರ ಕೆಲಸದಲ್ಲಿ ನಿರತರಾದಾಗ ಮಕ್ಕಳಿಗೆ ಕೇಳಿಸುತ್ತಿದ್ದಾರೆ ಎಂದು ಸತೀಶ್ ಹೇಳಿದ್ದಾರೆ. ಸತೀಶ್ ಅವರ ಈ ವಿಶಿಷ್ಟ ಪ್ರಯತ್ನಕ್ಕೆ ಪೋಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಈಗ ವಾಟ್ಸಪ್ ನಲ್ಲೂ  ಹಣವನ್ನು ಸೆಂಡ್ ಮಾಡಿ!

    ಈಗ ವಾಟ್ಸಪ್ ನಲ್ಲೂ ಹಣವನ್ನು ಸೆಂಡ್ ಮಾಡಿ!

    ನವದೆಹಲಿ: ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್. ಈಗ ವಾಟ್ಸಪ್ ಮೂಲಕವೇ ಹಣವನ್ನು ಆಪ್ತರಿಗೆ ಸೆಂಡ್ ಮಾಡಬಹುದು. ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿಯು ಭಾರತದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಮುಖಾಂತರ ಹಣ ವರ್ಗಾವಣೆ ಮಾಡುವ ವಿಶೇಷತೆಯನ್ನು ಆ್ಯಪ್‍ಗೆ ಸೇರಿಸಿದೆ.

    ಈ ಹೊಸ ವಿಶೇಷತೆಯನ್ನು ಐಓಎಸ್ ಮತ್ತು ಆಂಡ್ರಾಯ್ಡ್ ವಾಟ್ಸಪ್ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ. ಈ ಹೊಸ ವಿಶೇಷತೆಯನ್ನು ವಾಟ್ಸಪ್ 2.18.21 ಐಓಎಸ್ ಮತ್ತು ಆಂಡ್ರಾಯ್ಡ್ಗೆ 2.18.41 ಆವೃತ್ತಿಯ ಆ್ಯಪ್ ಬಳಸುವ ಮಂದಿಗೆ ಸಿಕ್ಕಿದೆ.

    ವಾಟ್ಸಪ್‍ನ ಈ ವಿಶೇಷತೆಯು ಚಾಟ್ ವಿಂಡೋ ನಲ್ಲಿ ಕಾಣಿಸಲಿದ್ದು, ಅಟಾಚ್ಮೆಂಟ್ ಮೆನುವಿನಲ್ಲಿ ಸಿಗುವ ಗ್ಯಾಲರಿ, ವಿಡಿಯೋ, ಡಾಕ್ಯುಮೆಂಟ್‍ಗಳ ಜೊತೆಯಲ್ಲಿ ಈ ವಿಶೇಷತೆ ಸಿಗುತ್ತದೆ. ಇದರಲ್ಲಿ ಹಣ ಪಾವತಿಸುವ ವಿಶೇಷತೆಯನ್ನು ಕ್ಲಿಕ್ ಮಾಡಿದರೆ, ವಿವಿಧ ಬ್ಯಾಂಕ್‍ಗಳ ಆಯ್ಕೆ ಮಾಡಬಹುದಾಗಿದೆ.

    ನಮಗೆ ಬೇಕಾದ ಬ್ಯಾಂಕ್ ಅನ್ನು ಸೆಲೆಕ್ಟ್ ಮಾಡಿ ನಂತರ ಯುಪಿಐಗೆ ಕನೆಕ್ಟ್ ಮಾಡಬೇಕು. ತದನಂತರ ಹೊಸ ಯುಪಿಐ ಖಾತೆ ತೆರೆದು ಪಿನ್ ಸೆಟ್ ಮಾಡಿ, ನಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಬಹುದು. ಹಣ ಕಳುಹಿಸುವ ಹಾಗು ಹಣ ಪಡೆದು ಕೊಳ್ಳುವ ವ್ಯಕ್ತಿಗಳಿಬ್ಬರು ಈ ವಿಶೇಷತೆ ಬಳಸಬೇಕಾದರೆ ಆ್ಯಪ್ ಅಪ್‍ಡೇಟ್ ಮಾಡಿಕೊಳ್ಳಬೇಕಾಗುತ್ತದೆ.

    ವಾಟ್ಸಪ್ 8ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿದ್ದರು. ಈ ವೇಳೆ ಈ ವೇಳೆ ಬುಸಿನೆಸ್ ಕ್ಷೇತ್ರವನ್ನು ಹೇಗೆ ವಿಸ್ತರಿಸುತ್ತೀರಿ ಎನ್ನುವ ಪ್ರಶ್ನೆಗೆ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು.

    2017ರ ಫೆಬ್ರವರಿ 24ರಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಬ್ರಿಯಾನ್ ಆಕ್ಟನ್ ಭೇಟಿ ಮಾಡಿ `ಡಿಜಿಟಲ್ ಇಂಡಿಯಾ’ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು.

    ನವೆಂಬರ್ 8ರಂದು ಕೇಂದ್ರ ಸರ್ಕಾರ 1 ಸಾವಿರ ಮತ್ತು 500 ರೂ. ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಭಾರತದಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಟ್ಸಪ್ ಈಗ ಈ ಕ್ಷೇತ್ರದತ್ತ ಕಣ್ಣುಹಾಕಿದೆ. ಈ ಸಂಬಂಧವಾಗಿ ವಾಟ್ಸಪ್ ಕಂಪೆನಿ ಈ ಹಿಂದೆ ಜಾಹಿರಾತು ಪ್ರಕಟಿಸಿ, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಭೀಮ್ ಆ್ಯಪ್ ಮತ್ತು ಆಧಾರ್ ನಂಬರ್ ಇವುಗಳಲ್ಲಿ ಪರಿಣಿತಿ ಹೊಂದಿರುವ ಅಭ್ಯರ್ಥಿಗಳನ್ನು ಹುಡುಕುತ್ತಿರುವುದಾಗಿ ತಿಳಿಸಿತ್ತು.

    2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 20 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ.

    ವಾಟ್ಸಪ್ ಪ್ರಕಟಿಸಿದ್ದ ಜಾಹಿರಾತು

  • ವಾಟ್ಸಪ್ ಈಗ ಮತ್ತಷ್ಟು ಸುರಕ್ಷಿತ: ಏನಿದು ಹೊಸ ವಿಶೇಷತೆ?

    ವಾಟ್ಸಪ್ ಈಗ ಮತ್ತಷ್ಟು ಸುರಕ್ಷಿತ: ಏನಿದು ಹೊಸ ವಿಶೇಷತೆ?

    ಕ್ಯಾಲಿಫೋರ್ನಿಯಾ: ಕಳೆದ ಕೆಲವು ತಿಂಗಳಿನಿಂದ ಪರೀಕ್ಷಾ ಹಂತದಲ್ಲಿದ್ದ ವಾಟ್ಸಪ್ ಟು ಸ್ಟೆಪ್ ವೆರಿಫಿಕೇಷನ್ ಸೆಕ್ಯೂರಿಟಿ ಫೀಚರ್ ಈಗ ಎಲ್ಲಾ ವಾಟ್ಸಪ್ ಬಳಕೆದಾರರಿಗೆ ಸಿಗಲಿದೆ. ಈ ಫೀಚರ್ ಮೂಲಕ ವಿಂಡೋಸ್, ಐಒಎಸ್, ಆ್ಯಂಡ್ರಾಯ್ಡ್ ಫೋನ್ ಹೊಂದಿರುವ ಬಳಕೆದಾರರು ಹೊಸದಾಗಿ ವಾಟ್ಸಪ್ ಅಪ್‍ಡೇಟ್ ಮಾಡಿಕೊಂಡರೆ ಹೆಚ್ಚಿನ ಭದ್ರತೆಯೊಂದಿಗೆ ಫೋನ್‍ನಂಬರ್ ವೆರಿಫಿಕೇಷನ್ ಮಾಡಿಕೊಳ್ಳಬಹುದಾಗಿದೆ. ವಾಟ್ಸಪ್‍ನಲ್ಲಿ ಮತ್ತೊಮ್ಮೆ ರೆಜಿಸ್ಟರ್ ಆಗಲು ಅಥವಾ ಫೋನ್ ನಂಬರ್ ವೆರಿಫಿಕೇಷನ್ ಮಾಡಲು ಬಯಸಿದಲ್ಲಿ ವಾಟ್ಸಪ್ ಬಳಕೆದಾದರರು 6 ಅಂಕಿಗಳ ಪಾಸ್‍ಕೋಡ್ ನೀಡಬೇಕು.

    ಈ ಫೀಚರನ್ನು ನಿಮ್ಮ ಫೋನ್‍ನಲ್ಲಿ ಸಕ್ರಿಯಗೊಳಿಸಲು ಹೀಗೆ ಮಾಡಿ:
    ವಾಟ್ಸಪ್ > ಸೆಟ್ಟಿಂಗ್ಸ್ > ಅಕೌಂಟ್ > ಟು ಸ್ಟೆಪ್ ವೆರಿಫಿಕೇಷನ್ > ಎನೇಬಲ್.

    ಈ ಫೀಚರ್ ಸಕ್ರಿಯಗೊಳಿಸಿದ ನಂತರ ಬಳಕದಾರರು ತಾವು ಆಯ್ಕೆ ಮಾಡುವ 6 ಅಂಕಿಗಳ ಪಾಸ್‍ಕೋಡ್ ನೀಡಬೇಕು. ಹಾಗೆ ಇದರ ಜೊತೆಗೆ ಇ ಮೇಲ್ ಐಡಿ ನೀಡಬೇಕು. ಒಂದು ವೇಳೆ ಪಾಸ್‍ಕೋಡ್ ಮರೆತುಹೋದ್ರೆ ಅಕೌಂಟ್ ಮರಳಿ ಪಡೆಯಲು ಇ ಮೇಲ್ ವಿಳಾಸ ಸಹಾಯಕವಾಗುತ್ತದೆ. ವಾಟ್ಸಪ್‍ನಿಂದ ಇ ಮೇಲ್ ವಿಳಾಸಕ್ಕೆ ಒಂದು ಲಿಂಕ್ ಬರುತ್ತದೆ. ಇದರ ಮೂಲಕ ಟು ಸ್ಟೆಪ್ ವೆರಿಫಿಕೇಷನನ್ನು ನಿಷ್ಕ್ರಿಯಗೊಳಿಸಿ ಅಕೌಂಟನ್ನು ಮರಳಿ ಪಡೆಯಬಹುದು ಎಂದು ಈ ಹೊಸ ಫೀಚರ್‍ನ ಎಫ್‍ಎಕ್ಯೂ ಪೇಜ್‍ನಲ್ಲಿ ತಿಳಿಸಲಾಗಿದೆ. ಆದ್ರೆ ಬಳಕೆದಾರರು ನೀಡೋ ಇ ಮೇಲ್ ವಿಳಾಸ ಸರಿ ಇದೆಯೇ ಎಂದು ವಾಟ್ಸಪ್ ಪರೀಕ್ಷಿಸುವುದಿಲ್ಲ. ಆದ್ದರಿಂದ ಬಳಕೆದಾರರು ಸರಿಯಾದ ಇಮೇಲ್ ವಿಳಾಸ ನೀಡದಿದ್ದರೆ ಅಕೌಂಟ್ ಲಾಕ್ ಆಗಿ ಮರಳಿ ಪಡೆಯಲಾರದಂತೆ ಆಗುತ್ತದೆ.

    ಒಂದು ವೇಳೆ ನೀವು ವಾಟ್ಸಪ್‍ನಲ್ಲಿ ಈ ಟು ಸ್ಟೆಪ್ ವೆರಿಫಿಕೇಷನ್ ಫೀಚರ್ ಸಕ್ರಿಯಗೊಳಿಸಿದ್ದರೆ ನೀವು ಪಾಸ್‍ಕೋಡ್ ಬಳಸದೆ ವಾಟ್ಸಪ್ ಬಳಸಿದ 7 ದಿನಗಳ ಒಳಗೆ ಮತ್ತೆ ಫೋನ್ ನಂಬರ್ ವೆರಿಫೈ ಮಾಡಲು ಅವಕಾಶವಿಲ್ಲ. ಅಂದ್ರೆ ಒಂದು ವೇಳೆ ನೀವು ಇಮೇಲ್ ವಿಳಾಸ ನೀಡದೇ ನಿಮ್ಮ ಪಾಸ್‍ಕೋಡ್ ಮರೆತು ಹೋದ್ರೆ ಮುಂದಿನ 7 ದಿನಗಳವರೆಗೆ ವಾಟ್ಸಪ್ ಬಳಸಲು ಸಾಧ್ಯವಾಗುವುದಿಲ್ಲ.

    7 ದಿನಗಳ ನಂತರ ಪಾಸ್‍ಕೋಡ್ ಇಲ್ಲದೆ ರೀವೆರಿಫೈ ಮಾಡಲು ಅವಕಾಶವಿರುತ್ತದೆ. ಆದ್ರೆ ಪೆಂಡಿಂಗ್ ಮೆಸೇಜ್‍ಗಳೆಲ್ಲವೂ ಡಿಲೀಟ್ ಆಗಿರುತ್ತದೆ. ಅವನ್ನು ಮತ್ತೆ ಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ 30 ದಿನಗಳ ನಂತರ ನೀವು ಪಾಸ್‍ಕೋಡ್ ಇಲ್ಲದೆ ಫೋನ್ ನಂಬರ್ ರೀವೆರಿಫೈ ಮಾಡಿದ್ರೆ ನಿಮ್ಮ ಅಕೌಂಟ್ ಡಿಲೀಟ್ ಆಗಿ ಹೊಸ ಅಕೌಂಟ್ ಸೃಷ್ಟಿಯಾಗುತ್ತದೆ.