Tag: ಟೆಕ್ಕಿ ಅತುಲ್ ಸುಭಾಷ್

  • ಟೆಕ್ಕಿ ಅತುಲ್‌ ಸುಭಾಷ್‌ ಮಗ ಆತನ ತಾಯಿಯ ಜೊತೆಯೇ ಇರಲಿ: ಸುಪ್ರೀಂ ಕೋರ್ಟ್‌ ಅವಕಾಶ

    ಟೆಕ್ಕಿ ಅತುಲ್‌ ಸುಭಾಷ್‌ ಮಗ ಆತನ ತಾಯಿಯ ಜೊತೆಯೇ ಇರಲಿ: ಸುಪ್ರೀಂ ಕೋರ್ಟ್‌ ಅವಕಾಶ

    ನವದೆಹಲಿ: ಆತ್ಮಹತ್ಯೆಗೆ ಶರಣಾದ ಬೆಂಗಳೂರಿನ ಟೆಕ್ಕಿ ಅತುಲ್‌ ಸುಭಾಷ್‌ (Techie Atul Subhash) ಅವರ ಮಗ ತಾಯಿಯೊಂದಿಗೆ ಇರುತ್ತಾನೆ ಎಂದು ಸುಪ್ರೀಂ ಕೋರ್ಟ್‌ (Supreme Court) ತೀರ್ಪು ನೀಡಿದೆ.

    ಡಿಸೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ಮಗ ನಾಲ್ಕು ವರ್ಷದ ಬಾಲಕನ ಪಾಲನೆಯ ಜವಾಬ್ದಾರಿಯನ್ನು ಆತನ ಪತ್ನಿ ನಿಕಿತಾ ಸಿಂಘಾನಿಯಾ ವಹಿಸಿಕೊಳ್ಳಲಿ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ನನ್ನ ಮೊಮ್ಮಗ ಬದುಕಿದ್ದಾನಾ? – ಮಾಧ್ಯಮದ ಮುಂದೆ ಕಣ್ಣೀರಿಟ್ಟ ಅತುಲ್‌ ತಂದೆ

    ಪುತ್ರನನ್ನು ತಮ್ಮ ಸುಪರ್ದಿಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಎಸ್.ಸಿ. ಶರ್ಮಾ ಅವರು ವೀಡಿಯೊ ಲಿಂಕ್ ಮೂಲಕ ಮಗುವಿನೊಂದಿಗೆ ಮಾತನಾಡಿದ ಬಳಿಕ ತೀರ್ಪು ನೀಡಿದ್ದಾರೆ.

    ವಿಚಾರಣೆ ಆರಂಭವಾಗುತ್ತಿದ್ದಂತೆ, ಅರ್ಜಿದಾರರು ಹೆಚ್ಚು ವಿವರವಾದ ಅಫಿಡವಿಟ್ ಸಲ್ಲಿಸಲು ಒಂದು ವಾರದ ಸಮಯಾವಕಾಶ ಕೋರಿದರು. ಆದರೆ ನ್ಯಾಯಮೂರ್ತಿ ನಾಗರತ್ನ ಅವರು, ಅಂತಹ ಯಾವುದೇ ವಿನಂತಿ ನೀಡಲ್ಲ ಎಂದು ವಜಾಗೊಳಿಸಿದರು. ಇದು ಹೇಬಿಯಸ್ ಕಾರ್ಪಸ್ (ಅರ್ಜಿ). ನಾವು ಮಗುವನ್ನು ನೋಡಲು ಬಯಸುತ್ತೇವೆ. ಮಗುವನ್ನು ಹಾಜರುಪಡಿಸಿ. ಸ್ವಲ್ಪ ಸಮಯದ ನಂತರ ನ್ಯಾಯಾಲಯವು ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ತಲೆಮರೆಸಿಕೊಂಡಿದ್ದ ಪತ್ನಿ ಬಂಧನ

    ನಿಕಿತಾ ಸಿಂಘಾನಿಯಾ ಮತ್ತು ಆಕೆಯ ಕುಟುಂಬ ಸದಸ್ಯರಾದ ತಾಯಿ ನಿಶಾ ಮತ್ತು ಸಹೋದರ ಅನುರಾಗ್ ಅವರು 34 ವರ್ಷದ ಅತುಲ್ ಸುಭಾಷ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಇಬ್ಬರನ್ನೂ ಬಂಧಿಸಿ ನಂತರ ಜಾಮೀನು ನೀಡಿತ್ತು. ಇದನ್ನೂ ಓದಿ: ಸಾಯುವುದಕ್ಕೆ 2 ನಿಮಿಷ ಮುಂಚೆ ರಾಷ್ಟ್ರಪತಿಗಳಿಗೆ ಇ-ಮೇಲ್‌ ಕಳುಹಿಸಿದ್ದ ಟೆಕ್ಕಿ ಅತುಲ್‌!

  • ಹೆತ್ತ ಮಗು ತನ್ನ ಬಳಿಯಿಲ್ಲದಿದ್ದರೂ ಅನಾಥ ಮಕ್ಕಳಿಗೆ ಸಹಾಯ – ಅತುಲ್ ಸಮಾಜಮುಖಿ ಕಾರ್ಯಕ್ಕೆ ಮನಸೋತ ಸ್ನೇಹಿತರು

    ಹೆತ್ತ ಮಗು ತನ್ನ ಬಳಿಯಿಲ್ಲದಿದ್ದರೂ ಅನಾಥ ಮಕ್ಕಳಿಗೆ ಸಹಾಯ – ಅತುಲ್ ಸಮಾಜಮುಖಿ ಕಾರ್ಯಕ್ಕೆ ಮನಸೋತ ಸ್ನೇಹಿತರು

    – ಮಕ್ಕಳಿಗೆ ಫ್ರೀ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೀಚಿಂಗ್
    – ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

    ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ (Atul Subhash) ಆತ್ಮಹತ್ಯೆ ಕೇಸ್ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅತುಲ್ ಸಾವಿಗೆ ಇಡೀ ದೇಶವೇ ಮರುಗುತ್ತಿದ್ದು, ಆತನನ್ನು ಈ ವ್ಯವಸ್ಥೆಯೇ ಬಲಿ ಪಡೆದಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇದರ ನಡುವೆ ಅತುಲ್ ಕೇವಲ ಒಬ್ಬ ಎಂಜಿನಿಯರ್ ಆಗಿರಲಿಲ್ಲ, ಬದಲಾಗಿ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು.

    ‘ನ್ಯಾಯ ಬಾಕಿಯಿದೆ’ ಎಂಬ ಪದ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬೆಂಗಳೂರಿನ (Bengaluru) ಟೆಕ್ಕಿ ಅತುಲ್ ಆತ್ಮಹತ್ಯೆ ಇದಕ್ಕೆ ಕಾರಣ. ರಾಷ್ಟ್ರಮಟ್ಟದಲ್ಲಿ ಹಲ್‌ಚಲ್ ಎಬ್ಬಿಸಿದ, ಅತುಲ್ ಒಳಗೊಬ್ಬ ನಿಜವಾದ ಸಮಾಜಮುಖಿ ವ್ಯಕ್ತಿತ್ವವಿತ್ತು. ಜೀವನದಲ್ಲಿ ಅದೆಷ್ಟೋ ನೋವುಗಳನ್ನು ಅನುಭವಿಸುತ್ತಿದ್ದರೂ, ಸಮಾಜಕ್ಕಾಗಿ (Social Work) ಏನಾದರೂ ಮಾಡಬೇಕು, ಬಡವರ ಹಾಗೂ ಅನಾಥರಿಗೆ ಕೈಲಾದ ಸಹಾಯ ಮಾಡಬೇಕು ಎಂಬ ಹಂಬಲವಿತ್ತು. ಇದೇ ಕಾರಣದಿಂದ ‘ಸೇವ್ ಇಂಡಿಯನ್ ಫ್ಯಾಮಿಲಿ’ ಫೌಂಡೇಶನ್ ಸೇರಿದಂತೆ ಕೆಲ ಎನ್‌ಜಿಒಗಳಲ್ಲಿ ಸದಸ್ಯರಾಗಿದ್ದರು. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಹಾಗೂ ಅನಾಥಾಶ್ರಮಕ್ಕೆ ಸಹಾಯಹಸ್ತ ಚಾಚಿದ್ದ ಅತುಲ್ ಸ್ನೇಹಿತರು ಅತುಲ್‌ನನ್ನು ಗುಣಗಾನ ಮಾಡುತ್ತಿದ್ದಾರೆ. ಇದನ್ನೂ ಓದಿ: 16 ವರ್ಷದಿಂದ ಗದಗ ಮೃಗಾಲಯದಲ್ಲಿ ಘರ್ಜಿಸುತ್ತಿದ್ದ ಹುಲಿ ಸಾವು

    ಇನ್ನೂ ಅತುಲ್ ತನ್ನ ಮಗು ತನ್ನ ಜೊತೆಯಲ್ಲಿ ಇಲ್ಲದಿದ್ದರೂ ಅನೇಕ ಅನಾಥಶ್ರಮಗಳ ಜೊತೆ ಸಂಪರ್ಕ ಹೊಂದಿದ್ದರು. ಅನೇಕ ಅನಾಥ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಜೊತೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿವರಿಸಿದ್ದಾರೆ. ಎಐ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಲ್ಲಿ ಎಕ್ಸ್‌ಪರ್ಟ್ ಆಗಿದ್ದ ಅತುಲ್, ಅನೇಕ ವಿದ್ಯಾರ್ಥಿಗಳಿಗೆ ಫ್ರೀಯಾಗಿ ಟೀಚಿಂಗ್ ಮಾಡುತ್ತಿದ್ದರು. ಇದೆಲ್ಲವನ್ನೂ ನೆನದು ಅತುಲ್ ಸ್ನೇಹಿತರು ಭಾವುಕರಾದರು. ಒಟ್ಟಿನಲ್ಲಿ ಅತುಲ್‌ನ ಈ ವ್ಯಕ್ತಿತ್ವಕ್ಕೆ ಮಾರುಹೋದ ಅನೇಕ ಜನ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಗ್ರಾಮೀಣ ಕ್ರೀಡೋತ್ಸವಕ್ಕೆ ಸಾಕ್ಷಿಯಾದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ