Tag: ಟೆಂಪೋ

  • ಅರಿಶಿನಕುಂಟೆ ಬಳಿ 30 ಅಡಿ ಎತ್ತರದ ಫ್ಲೈಓವರ್ ನಿಂದ ಕೆಳಗೆ ಬಿದ್ದ ಟೆಂಪೋ- ಟೊಮೇಟೋ ಚೆಲ್ಲಾಪಿಲ್ಲಿ, ಟ್ರಾಫಿಕ್ ಜಾಮ್

    ಅರಿಶಿನಕುಂಟೆ ಬಳಿ 30 ಅಡಿ ಎತ್ತರದ ಫ್ಲೈಓವರ್ ನಿಂದ ಕೆಳಗೆ ಬಿದ್ದ ಟೆಂಪೋ- ಟೊಮೇಟೋ ಚೆಲ್ಲಾಪಿಲ್ಲಿ, ಟ್ರಾಫಿಕ್ ಜಾಮ್

    ಬೆಂಗಳೂರು: ಟೊಮೇಟೊ ತುಂಬಿದ ಟೆಂಪೋ ಫ್ಲೈಓವರ್ ನಿಂದ ಕೆಳಗೆ ಬಿದ್ದ ಘಟನೆ ನೆಲಮಂಗಲದ ಅರಿಶಿನಕುಂಟೆ ಬಳಿ ನಡೆದಿದೆ.

    30 ಅಡಿ ಎತ್ತರದ ಫ್ಲೈಓವರ್ ನಿಂದ ಕೆಳಗೆ ಬಿದ್ದ ಪರಿಣಾಮ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಟೊಮೇಟೊ ಚಲ್ಲಾಪಿಲ್ಲಿಯಾಗಿದೆ.

    ಚಿಕ್ಕಬೆಳವಂಗಲದಿಂದ ರೈತರು ಯಶವಂತಪುರ ಮಾರುಕಟ್ಟೆಗೆ ಟೊಮೇಟೋ ರವಾನೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ಟೆಂಪೋದಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

     

    ಘಟನೆಯಿಂದ ಕೆಲಕಾಲ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆಟ್ಟು ನಿಂತಿದ್ದ ಟೆಂಪೋಗೆ ಕ್ರೂಸರ್ ಡಿಕ್ಕಿ- ಇಬ್ಬರು ಸಾವು

    ಕೆಟ್ಟು ನಿಂತಿದ್ದ ಟೆಂಪೋಗೆ ಕ್ರೂಸರ್ ಡಿಕ್ಕಿ- ಇಬ್ಬರು ಸಾವು

    ಕೋಲಾರ: ಕೆಟ್ಟು ನಿಂತಿದ್ದ ಟೆಂಪೋಗೆ ಕ್ರೂಸರ್ ಡಿಕ್ಕಿಯಾಗಿ ಭೀಕರ ಅಪಘಾತವಾಗಿದ್ದು, ಇಬ್ಬರು ಸಾವನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ತಾಲೂಕು ರಾಷ್ಟ್ರೀಯ ಹೆದ್ದಾರಿ 75 ರ ಕೆಂದಟ್ಟಿ ಬಳಿ ಈ ಘಟನೆ ನಡೆದಿದೆ. ಕೆಟ್ಟು ನಿಂತಿದ್ದ ಮೀನು ತುಂಬಿದ್ದ ಟೆಂಪೋಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ರಿಪೇರಿ ಮಾಡುತ್ತಿದ್ದ ಆಂಧ್ರದ ಪಲಮನೇರು ಮೂಲದ ಸೋಮಶೇಖರ್(28) ಹಾಗೂ ಚರಣ್ (30) ಸಾವನ್ನಪ್ಪಿದ್ದಾರೆ.

    ಘಟನೆಯಲ್ಲಿ ಕೋಲಾರ ತಾಲೂಕು ಚಿಕ್ಕ ಹಸಾಳ ಗ್ರಾಮದ ನಾಗೇಶ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.

    ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ನಿಂತಿದ್ದ ಟಿಪ್ಪರ್ ಲಾರಿಗೆ ಟೆಂಪೋ ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ನಿಂತಿದ್ದ ಟಿಪ್ಪರ್ ಲಾರಿಗೆ ಟೆಂಪೋ ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಚಿಕ್ಕಬಳ್ಳಾಪುರ: ನಿಂತಿದ್ದ ಟಿಪ್ಪರ್ ಲಾರಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 7ರ ಆರೂರು ಬಳಿ ನಡೆದಿದೆ.

    ಮೃತ ಯುವಕನನ್ನು ವಿಜಯ್ ಕುಮಾರ್ (21) ಎಂದು ಗುರುತಿಸಲಾಗಿದೆ. ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಟಿಪ್ಪರ್ ನ ಹಿಂಬದಿಗೆ ಟೆಂಪೋ ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

    ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

    https://www.youtube.com/watch?v=379h-ao45-U&feature=youtu.be

  • ನಿಂತಿದ್ದ ಟಿಪ್ಪರ್ ಗೆ ಟೆಂಪೋ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ನಾಲ್ವರ ಸ್ಥಿತಿ ಗಂಭೀರ

    ನಿಂತಿದ್ದ ಟಿಪ್ಪರ್ ಗೆ ಟೆಂಪೋ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ನಾಲ್ವರ ಸ್ಥಿತಿ ಗಂಭೀರ

    ಚಿಕ್ಕಬಳ್ಳಾಪುರ: ರಸ್ತೆ ಬದಿ ನಿಂತಿದ್ದ ಟಿಪ್ಪರ್ ಗೆ ಹಿಂದಿನಿಂದ ಬಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟು, ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 7ರ ಚಿಕ್ಕಬಳ್ಳಾಪುರ ತಾಲೂಕು ಅರೂರು ಗೇಟ್ ಬಳಿ ನಡೆದಿದೆ.

    ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರ ಕಡೆಗೆ ಬರುತ್ತಿದ್ದ ಟೆಂಪೋ ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗದಿಂದ ಟಿಪ್ಪರ್ ಗೆ ಡಿಕ್ಕಿ ಹೊಡೆದಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಚಿಕ್ಕಬಳ್ಳಾಪುರ ತಾಲೂಕು ಮಂಚನಬಲೆ ಗ್ರಾಮದ 21 ವರ್ಷ ವಿಜಯ್ ಕುಮಾರ್ ಮೃತ ದುರ್ದೈವಿ.

     

    ಎಲ್ಲರೂ ಕೂಲಿ ಕೆಲಸಕ್ಕೆಂದು ತರಕಾರಿ ಕೀಳಲು ಹೋಗಿ ವಾಪಸ್ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ಸಂಬಂಧ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 2 ರೂ.ಗೆ ಮೊಟ್ಟೆ ಮಾರಾಟ- ಪ್ಲಾಸ್ಟಿಕ್ ಮೊಟ್ಟೆಯೆಂದು ರಸ್ತೆಗೆಸೆದು ನಾಶ ಮಾಡಿದ ಸಾರ್ವಜನಿಕರು

    2 ರೂ.ಗೆ ಮೊಟ್ಟೆ ಮಾರಾಟ- ಪ್ಲಾಸ್ಟಿಕ್ ಮೊಟ್ಟೆಯೆಂದು ರಸ್ತೆಗೆಸೆದು ನಾಶ ಮಾಡಿದ ಸಾರ್ವಜನಿಕರು

    ಬೆಂಗಳೂರು: ಪ್ಲಾಸ್ಟಿಕ್ ಮೊಟ್ಟೆ ಹಂಚುತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಮೊಟ್ಟೆ ಸಾಗಾಣೆ ಮಾಡುತ್ತಿದ್ದ ಟೆಂಪೋವನ್ನು ತಡೆದು ಧ್ವಂಸ ಮಾಡಿರುವ ಘಟನೆ ನೈಸ್ ರಸ್ತೆಯ ಗೊಲ್ಲರಹಳ್ಳಿಯಲ್ಲಿ ನಡೆದಿದೆ.

    ಮುನಿದೋರೆ ಎಂಬಾತ ನೈಸ್ ರಸ್ತೆಯ ಗೊಲ್ಲರಹಟ್ಟಿಯಲ್ಲಿ ಎರಡು ರೂಪಾಯಿಗೆ ಮೊಟ್ಟೆ ಮಾರಾಟ ಮಾಡ್ತಿದ್ದ. ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ಐದು ರೂಪಾಯಿ ಬೆಲೆ ಇದೆ. ಆದ್ರೆ ಈತ ಎರಡು ರೂಪಾಯಿಗೆ ಮಾರಾಟ ಮಾಡುತ್ತಿದ್ದ ಕಾರಣ ಅನುಮಾನಗೊಂಡ ಸ್ಥಳೀಯರು ಪ್ಲಾಸ್ಟಿಕ್ ಮೊಟ್ಟಯೆಂದು ಒಡೆದು ಸ್ಥಳದಲ್ಲೇ ಆಮ್ಲೆಟ್ ಮಾಡಿ ಪರೀಕ್ಷೆ ಮಾಡಿದ್ರು.

    ಇಷ್ಟೇ ಅಲ್ಲದೇ ಇಡೀ ಟೆಂಪೋದಲ್ಲಿದ್ದ ಮೊಟ್ಟೆಗಳನ್ನು ರಸ್ತೆಗೆ ಎಸೆದು ನಾಶ ಮಾಡಿದ್ರು. ನೂರಾರು ಜನ ಸೇರಿದ್ದ ಕಾರಣ ಪೊಲೀಸರು ಅಲ್ಲಿದ್ದ ಜನರನ್ನು ಚದುರುಸಿ ವಾಪಾಸ್ ಕಳುಹಿಸಿದ್ರು.