Tag: ಟೆಂಪೋ ಟ್ರಾವೆಲರ್

  • ವಾಹನ ಚಾಲನೆ ಮಾಡುತ್ತಲೇ ಮೂರ್ಛೆ ಹೋದ ಚಾಲಕ – ಪ್ರವಾಸಿಗರಿದ್ದ ವಾಹನ ಪಲ್ಟಿ

    ವಾಹನ ಚಾಲನೆ ಮಾಡುತ್ತಲೇ ಮೂರ್ಛೆ ಹೋದ ಚಾಲಕ – ಪ್ರವಾಸಿಗರಿದ್ದ ವಾಹನ ಪಲ್ಟಿ

    ಶಿವಮೊಗ್ಗ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ (ಟಿಟಿ) ಚಾಲಕನಿಗೆ ಇದ್ದಕ್ಕಿದ್ದಂತೆ ಮೂರ್ಛೆ ರೋಗ ಕಾಣಿಸಿಕೊಂಡು, ಟೆಂಪೋ ಟ್ರಾವೆಲರ್ ಅಪಘಾತಕ್ಕೀಡಾದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿ ಬಳಿ ನಡೆದಿದೆ.

    ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಓರ್ವ ಪ್ರವಾಸಿಗನ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಮದರಸಾಗಳಲ್ಲಿ ಓದಿದವರು ಹಿಂದೂ ವಿರೋಧಿ, ಭಯೋತ್ಪಾದಕರಾಗಿ ಬರ್ತಾರೆ – ಮುತಾಲಿಕ್ ಕಿಡಿʼ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಡದಿ ಮೂಲದ 10 ಮಂದಿ ಪ್ರವಾಸಿಗರು ಸಿಗಂದೂರು ಚೌಡೇಶ್ವರಿದೇವಿ ದರ್ಶನಕ್ಕೆ ಆಗಮಿಸಿದ್ದರು. ದರ್ಶನ ಮಾಡಿ ವಾಪಸ್ ತೆರಳುತ್ತಿದ್ದರು. ಇಲ್ಲಿನ ಕಳಸವಳ್ಳಿ ಗ್ರಾಮದ ಬಳಿ ವಾಹನ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಮೂರ್ಛೆ ಕಾಣಿಸಿಕೊಂಡಿದೆ. ಇದರಿಂದ ಟಿಟಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ದಿಬ್ಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡುವಂತೆ ಆಗ್ರಹ

    ಟಿಟಿ ವಾಹನದಲ್ಲಿದ್ದ 10 ಮಂದಿ ಪ್ರವಾಸಿಗರಲ್ಲಿ ನಾಲ್ವರಿಗೆ ಪೆಟ್ಟಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಬಾಬು, ಸುಚಿತ್ರಾ, ಡಿಂಪಾ, ಸಂಚಿತ, ಗುತ್ಯಮ್ಮ ಎಂದು ಗುರುತಿಸಲಾಗಿದೆ. ಅವರಿಗೆ ಸಿಗಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

  • ಟೆಂಪೋ ಟ್ರಾವೆಲರ್‌ನಲ್ಲಿ ಪ್ರವಾಸಿಗರ ಹುಚ್ಚಾಟ – ಸಾರ್ವಜನಿಕರಿಂದ ತರಾಟೆ

    ಟೆಂಪೋ ಟ್ರಾವೆಲರ್‌ನಲ್ಲಿ ಪ್ರವಾಸಿಗರ ಹುಚ್ಚಾಟ – ಸಾರ್ವಜನಿಕರಿಂದ ತರಾಟೆ

    ಮಡಿಕೇರಿ: ಹಲವು ದಿನಗಳಿಂದ ಬಣಗುಡುತ್ತಿದ್ದ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲೀಗ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮತ್ತೆ ಪ್ರವಾಸಿಗರ ಕಲರವ ಆರಂಭವಾಗಿದೆ. ವೀಕೆಂಡ್ ಸೇರಿದಂತೆ ಹಬ್ಬಗಳ ರಜೆ ಇರುವುದರಿಂದ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಭಾರೀ ದಂಡು ಕಾಣಸಿಗುತ್ತಿದೆ. ಈ ಮೂಲಕ ಪ್ರವಾಸೋದ್ಯಮ ಕ್ಷೇತ್ರ, ರಾಜ್ಯದ ಆರ್ಥಿಕತೆ ಚೇತರಿಕೆಯ ಮುನ್ಸೂಚನೆ ನೀಡುತ್ತಿದೆ.

    ಕೊಡಗು ಜಿಲ್ಲೆಯಲ್ಲೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ಕಲರವ ಕಂಡು ಬರುತ್ತಿದೆ. ಅದರೆ ಬಂದ ಪ್ರವಾಸಿಗರು ಹುಚ್ಚಾಟ ನಡೆಸುತ್ತಿದ್ದಾರೆ. ಹೌದು, ಕೊಡಗಿಗೆ ಜಾಲಿ ರೈಡ್ ನೆಪದಲ್ಲಿ ಬಂದ ಪ್ರವಾಸಿಗರು ಅಪಾಯಕಾರಿ ಪ್ರಯಾಣಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ತಡೆದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಡಿಕೇರಿ ಸಮೀಪದ ಗಾಳಿಬೀಡು ರಸ್ತೆ ಮೂಲಕ ನಗರಕ್ಕೆ ಮರಳುತ್ತಿದ್ದ ಟೆಂಪೋ ಟ್ರಾವೆಲರ್ ವಾಹನವೊಂದು ವೇಗವಾಗಿ ಸಾಗುತ್ತಿದ್ದು, ವಾಹನದ ಮೇಲೆ 12 ಮಕ್ಕಳು ಅಪಾಯಕಾರಿ ಸ್ಥಿತಿಯಲ್ಲಿ ಕುಳಿತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಸಾರ್ವಜನಿಕರು ವೇಗವಾಗಿ ಚಲಿಸುತ್ತಿದ್ದ ವಾಹನವನ್ನು ಹಿಂಬಾಲಿಸಿ, ಚಾಲಕ ಹಾಗೂ ಒಳಗೆ ಕುಳಿತಿದ್ದ ಪಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: RRR ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ ರೆಡ್ಡಿ ಹಾಡಿದ ಕೊಮ್ಮ ಉಯ್ಯಾಲ ಹಾಡು ರಿಲೀಸ್

    ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನ ರಸ್ತೆಗಳಲ್ಲಿ ಸಾಕಷ್ಟು ತಿರುವುಗಳಿವೆ. ಆದರೂ ಮಕ್ಕಳನ್ನು ವಾಹನದ ಟಾಪ್ ಮೇಲೆ ಕೂರಿಸಿಕೊಂಡು ಪ್ರಯಾಣಿಸುತ್ತಿದ್ದೀರಿ. ಏನಾದರೂ ಅನಾಹುತ ಆದರೆ ಮಕ್ಕಳ ಸ್ಥಿತಿ ಏನಾಗಬೇಡ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಯೇಸುವಿನ ಮರಣದ ಜೀವಂತ ದೃಶ್ಯ ರೂಪಕ ಕಂಡು ಕಣ್ಣೀರು ಹಾಕಿದ ಭಕ್ತರು

    ಬೆಂಗಳೂರು ಮೂಲದ ಪ್ರವಾಸಿಗರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಸ್ಥಳದಲ್ಲೇ ಕ್ಷಮೆ ಕೇಳಿ ಬಳಿಕ ಮಕ್ಕಳನ್ನು ಗಾಡಿ ಒಳಗೆ ಕೂರಿಸಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಪ್ರವಾಸಿಗರು ಈ ರೀತಿಯ ವರ್ತನೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

  • ಹಳ್ಳಕ್ಕೆ ಬಿದ್ದ ಟೆಂಪೋ ಟ್ರಾವೆಲರ್ – ಮೂವರ ದುರ್ಮರಣ

    ಹಳ್ಳಕ್ಕೆ ಬಿದ್ದ ಟೆಂಪೋ ಟ್ರಾವೆಲರ್ – ಮೂವರ ದುರ್ಮರಣ

    ಚಾಮರಾಜನಗರ: ರಸ್ತೆ ಬದಿಯಲ್ಲಿದ್ದ ಹಳ್ಳಕ್ಕೆ ಟೆಂಪೋ ಟ್ರಾವೆಲರ್ ಮಗುಚಿ ಬಿದ್ದ ಪರಿಣಾಮ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ತಾಲೂಕು ಸುವರ್ಣಾವತಿ ಸಮೀಪ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 209 ರ ಗುಡಿ ಬೋರೆ ಎಂಬಲ್ಲಿ ಅಪಘಾತ ಸಂಭವಿಸಿದೆ. ಟಿಟಿ ತಮಿಳುನಾಡಿನ ತಿರುಪುರ್ ನಿಂದ ಮೈಸೂರಿಗೆ ಬರುತ್ತಿತ್ತು. ಮೈಸೂರಿಗೆ ಚಾಮುಂಡಿ ತಾಯಿ ದರ್ಶನಕ್ಕೆ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

    ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ರೆ 11 ಮಂದಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಚಾಮರಾಜನಗರ ಪೊಲೀಸರು ಮೃತರ ಮಾಹಿತಿ ಕಲೆಹಾಕಿದ್ದಾರೆ.

  • ಮರ್ಯಾದೆ ಹೋಯ್ತು, ನಾನ್ ಮನೆಗೆ ಬರಲ್ಲ – ಹಲ್ಲೆಗೊಳಗಾಗಿದ್ದ ಸುನೀಲ್ ಫೋನ್ ಸ್ವಿಚ್ ಆಫ್

    ಮರ್ಯಾದೆ ಹೋಯ್ತು, ನಾನ್ ಮನೆಗೆ ಬರಲ್ಲ – ಹಲ್ಲೆಗೊಳಗಾಗಿದ್ದ ಸುನೀಲ್ ಫೋನ್ ಸ್ವಿಚ್ ಆಫ್

    – ಸುನೀಲ್ ವಿರುದ್ಧವೇ ಟ್ರಾಫಿಕ್ ಪೊಲೀಸ್ ದೂರು

    ಬೆಂಗಳೂರು: ಹಲಸೂರು ಟ್ರಾಫಿಕ್ ಪೊಲೀಸರಿಂದ ಡ್ರೈವರ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಟೆಂಪೋ ಟ್ರಾವೆಲರ್ ಸುನೀಲ್ ಪೋಷಕರು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

    ಹಲ್ಲೆಗೊಳಗಾದ ಬೇಸರದಲ್ಲಿ ಕಳೆದ 3 ದಿನಗಳಿಂದ ಮನೆ ಹೋಗದ ಸುನೀಲ್, ತಾಯಿಗೆ ಕರೆ ಮಾಡಿ ನನ್ನ ಮರ್ಯಾದೆ ಹೋಯ್ತು. ನಾನು ಮನೆಗೆ ಬರಲ್ಲ ಎಂದು ಕಾಲ್ ಕಟ್ ಮಾಡಿದ್ದಾರೆ. ಅಲ್ಲದೆ 3 ದಿನದಿಂದ ಸುನೀಲ್ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಹೆತ್ತವರನ್ನು ಆತಂಕ್ಕೀಡು ಮಾಡಿದೆ.

    ಸುನೀಲ್ ಕಳೆದ ಶುಕ್ರವಾರ ಹಲಸೂರು ಬಳಿ ಟ್ರಾಫಿಕ್ ಎಎಸ್‍ಐ ಮಹಾಸ್ವಾಮಿಯಿಂದ ಹಲ್ಲೆಗೊಳಗಾಗಿದ್ದರು. ಅದೇ ದಿನ ರಾತ್ರಿ ಜೆ.ಪಿ.ನಗರದ ಜರಗನಹಳ್ಳಿಯ ಸುನೀಲ್ ನಿವಾಸಕ್ಕೆ ಬಂದ ಏಳೆಂಟು ಜನರು ಬೆದರಿಕೆ ಹಾಕಿದ್ದಾರೆ. ಮೀಡಿಯಾ ಮುಂದೆ ಹೋದರೆ ನಿಮ್ಮನ್ನು ಸುಮ್ನೆ ಬಿಡಲ್ಲವೆಂದು ಧಮ್ಕಿ ಹಾಕಿದ್ದರು. ಒಂದು ವೇಳೆ ನನ್ನ ಮಗನಿಗೆ ಏನಾದ್ರೂ ಆದರೆ ಪೊಲೀಸರೇ ಕಾರಣ ಎಂದು ಸುನೀಲ್ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಪ್ರಕರಣ..?
    ಟೆಂಪೋ ಟ್ರಾವೆಲರ್ ಚಾಲಕನಾಗಿರುವ ಸುನೀಲ್ ಅವರು ಶುಕ್ರವಾರ ಬಿಬಿಎಂಪಿ ಕಡೆಯಿಂದ ಟೌನ್ ಹಾಲ್ ಬಳಿ ಯೂಟರ್ನ್ ತೆಗೆದುಕೊಂಡರು ಎಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರೊಬ್ಬರು ಥಳಿಸಿದ್ದರು. ಅಲ್ಲದೆ ಅವಾಚ್ಯ ಶಬ್ದಳಿಂದ ನಿಂದಿಸಿದ್ದರು.

    ಟ್ರಾಫಿಕ್ ಪೊಲೀಸ್ ಹಲ್ಲೆ ಹಾಗೂ ನಿಂದಿಸಿರುವುದನ್ನು ಸುನೀಲ್ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೀಡಾಗಿತ್ತು. ಟ್ರಾಫಿಕ್ ಪೊಲೀಸಪ್ಪನ ದೌರ್ಜನ್ಯವನ್ನು ಕಂಡ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

    ಯೂಟರ್ನ್ ತೆಗೆದುಕೊಂಡ ಎಂಬ ಕಾರಣಕ್ಕೆ ಟೆಂಪೋ ಏರಿ ಚಾಲಕ ಸುನೀಲ್ ಪಕ್ಕ ಕುಳೀತ ಪೇದೆ ಮೊದಲಿಗೆ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಚಾಲಕ ಇಲ್ಲಿ ವಾಹನಗಳಿವೆ ಮುಂದೆ ನಿಲ್ಲಿಸುತ್ತೇನೆ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸ್, ತಾನೇ ವಾಹನದ ಸ್ಟೇರಿಂಗ್ ವ್ಹೀಲ್ ಹಿಡಿದು ಪಕ್ಕಕ್ಕೆ ಎಳೆಯು ಪ್ರಯತ್ನ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ವೈರಲ್ ಆದ ಬೆನ್ನಲ್ಲೇ ಸುನೀಲ್ ವಿರುದ್ಧವೇ ಟ್ರಾಫಿಕ್ ಪೊಲೀಸ್ ಎಫ್‍ಐಆರ್ ದಾಖಲು ಮಾಡಿದ್ದಾರೆ.

  • ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಕಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬೈಕ್ ಸವಾರ- ಟಿಟಿ ಹರಿದು ಸಾವು

    ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಕಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬೈಕ್ ಸವಾರ- ಟಿಟಿ ಹರಿದು ಸಾವು

    ಬೆಂಗಳೂರು: ಡೀಸೆಲ್ ಮುಗಿದು ನಿಂತಿದ್ದ ವ್ಯಾಗನಾರ್ ಕಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿಳುತ್ತಿದ್ದಂತೆ ಹಿಂದಿನಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಎಲಿವೆಟೆಡ್ ಫ್ಲೈಓವರ್ ಮೇಲೆ ನಡೆದಿದೆ.

    ತೇಜಸ್ವಿ ಪೊನಪೋಲ್ಲಿ(32) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಎಲಿವೆಟೆಡ್ ಫ್ಲೈಓವರ್ ಮೇಲೆ 3.30ರ ಸುಮಾರಿನಲ್ಲಿ ಕೆಂಪು ಬಣ್ಣದ ವ್ಯಾಗನಾರ್ ಕಾರು ಡೀಸೆಲ್ ಮುಗಿದು ನಿಂತಿತ್ತು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಬೈಕ್ ಸವಾರ ಮೊದಲು ಕಾರಿಗೆ ಗುದ್ದಿ ಕೆಳಗೆ ಬಿದ್ದಿದ್ದಿದ್ದಾರೆ. ಬಳಿಕ ಹಿಂದಿನಿಂದ ಬಂದ ಟಿಟಿ ವಾಹನ ಹರಿದು ಸ್ಥಳದಲ್ಲೇ ತೇಜಸ್ವಿ ಸಾವನಪ್ಪಿದ್ದಾರೆ.

     

    ಘಟನೆಯಿಂದಾಗಿ ಫ್ಲೈಓವರ್ ಮೇಲೆ ಕಿಲೋಮೀಟರ್ ಉದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಎಲಿವೆಟೆಡ್ ಫ್ಲೈಓವರ್ ಮೇಲೆ ಪದೇ ಪದೇ ಈ ರೀತಿಯ ಅಪಘಾತಗಳು ಸಂಭವಿಸುತ್ತಿದ್ದು, ಹೆದ್ದಾರಿ ಪ್ರಾಧಿಕಾರ ಈ ಫ್ಲೈಓವರ್ ಸರಿಯಾಗಿ ನಿರ್ವಹಣೆ ಮಾಡದಿರುವುದೇ ಇಂತಹ ಘಟನೆಗೆ ಕಾರಣವಾಗಿದೆ. ಇಂದು ಸಹ ಡೀಸೆಲ್ ಮುಗಿದಿದ್ದ ಕಾರಿನ ಮಾಲೀಕರು ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ವಾಹನವನ್ನು ತೆರವುಗೊಳಿಸಲು ಮುಂದಾಗದಿರುವುದೇ ಇಂದಿನ ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

  • ತಿರುಪತಿ ಮಾರ್ಗ ಮಧ್ಯೆ ಜವರಾಯನ ಅಟ್ಟಹಾಸ – ಬಸ್, ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ 5 ಜನ ದುರ್ಮರಣ

    ತಿರುಪತಿ ಮಾರ್ಗ ಮಧ್ಯೆ ಜವರಾಯನ ಅಟ್ಟಹಾಸ – ಬಸ್, ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ 5 ಜನ ದುರ್ಮರಣ

    ಕೋಲಾರ: KSRTC ಬಸ್, ಟೆಂಪೋ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮಹಿಳೆಯರು ಸೇರಿದಂತೆ ಐದು ಜನ ಸಾವನ್ನಪ್ಪಿದ್ದಾರೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರು ಪಾಳ್ಯಂನ ಕೆಜಿ ಸತ್ರಂ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದ ಸಾರಿಗೆ ಬಸ್‍ಗೆ ತಿರುಪತಿಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿದೆ. ಪರಿಣಾಮ ಐವರು ಸಾವನ್ನಪ್ಪಿದ್ದು, ಟೆಂಪೋದಲ್ಲಿದ್ದ 11 ಜನ ಗಾಯಗೊಂಡಿದ್ದಾರೆ.

    ಟೆಂಪೋ ಟ್ರಾವೆಲರ್ ನಲ್ಲಿದ್ದ 18 ಮಂದಿ ಛತ್ತೀಸ್‍ಗಢದಿಂದ ತಿರುಪತಿ ದರ್ಶನ ಪಡೆದು ಮೈಸೂರು ಪ್ರವಾಸ ಕೈಗೊಂಡಿದ್ರು. ಸಾರಿಗೆ ಬಸ್‍ನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಸೇತುವೆ ಮೇಲೆ ಟಿ.ಟಿ ಪಲ್ಟಿ- 14 ಪ್ರಯಾಣಿಕರು ಸೇಫ್

    ಸೇತುವೆ ಮೇಲೆ ಟಿ.ಟಿ ಪಲ್ಟಿ- 14 ಪ್ರಯಾಣಿಕರು ಸೇಫ್

    ಉಡುಪಿ: ಟೆಂಪೋ ಟ್ರಾವೆಲರ್ ಪಲ್ಟಿಯಾಗಿ ಪವಾಡ ಸದೃಶ ರೀತಿಯಲ್ಲಿ 14 ಜನ ಪಾರಾದ ಘಟನೆ ಉಡುಪಿಯ ಸಂತಕಟ್ಟೆ ನಯಂಪಳ್ಳಿ ಸೇತುವೆ ಮೇಲ್ಭಾಗದಲ್ಲಿ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲೆಯ ಪೂತ್ತೂರಿನಿಂದ ಸುಮಾರು 14 ಮಂದಿ ಪ್ರಯಾಣಿಕರಿದ್ದ ಟೆಂಪೋ ಟ್ರಾವೆಲರ್ ಉಡುಪಿಯ ಸಂತೆಕಟ್ಟೆ ಸಮೀಪದ ನಯಂಪಳ್ಳಿ ಸೇತುವೆ ಸಮೀಪಿಸುತ್ತಿದ್ದಂತೆ ಉರುಳಿ ಬಿದ್ದಿದೆ. ಟಿ.ಟಿ ಒಳಗಡೆ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೆಂಪೋ ಬೀಳುತ್ತಿದ್ದಂತೆ ಒಳಗಿದ್ದವರು ತಾವೇ ಹೊರಗೆ ಬಂದಿದ್ದಾರೆ. ವಾಹನದ ಮುಂಭಾಗದ ಗಾಜು ಪುಡಿಯಾಗಿದ್ದು ಪ್ರಯಾಣಿಕರಿಗೆ ಗಾಯಗಳಾಗಿದೆ.

    ಬೆಳ್ಳಗ್ಗಿನಿಂದ ಮಳೆ ಸುರಿಯುತ್ತಿದ್ದು ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಪಲ್ಟಿಯಾಗಿದೆ ಎನ್ನಲಾಗಿದೆ. ಸೇತುವೆ ಮಧ್ಯದಲ್ಲಿಯೇ ವಾಹನ ಪಲ್ಟಿಯಾದ ಕಾರಣ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ವ್ಯತ್ಯಯವಾಯ್ತು. ಉಡುಪಿ ಮತ್ತು ಬ್ರಹ್ಮಾವರ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಟೆಂಪೋವನ್ನು ಎತ್ತಿ ಬದಿಗಿರಿಸಿದರು.

    ಕೇರಳ- ಮಂಗಳೂರು- ಉಡುಪಿ- ಕಾರವಾರ ಮಾರ್ಗವಾಗಿ ಗೋವಾ ರಾಜ್ಯಕ್ಕೆ ನೂರಾರು ಮೀನಿನ ವಾಹನ ಸಂಚಾರ ಮಾಡುತ್ತವೆ. ಮೀನಿನ ಎಣ್ಣೆ ರಸ್ತೆ ಮೇಲೆಲ್ಲಾ ಬಿದ್ದು ಜಾರುತ್ತಿರುತ್ತದೆ. ಈ ಪ್ರಕರಣದಲ್ಲಿಯೂ ಚಾಲಕನ ನಿಯಂತ್ರಣ ತಪ್ಪಲು ಮೀನಿನೆಣ್ಣೆ ರಸ್ತೆಗೆ ಬಿದ್ದಿದ್ದೇ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • ಟೈರ್ ಸ್ಫೋಟಗೊಂಡು ಟೆಂಫೋ ಟ್ರಾವೆಲರ್ ಪಲ್ಟಿ- 12 ಜನರಿಗೆ ಗಂಭೀರ ಗಾಯ

    ಟೈರ್ ಸ್ಫೋಟಗೊಂಡು ಟೆಂಫೋ ಟ್ರಾವೆಲರ್ ಪಲ್ಟಿ- 12 ಜನರಿಗೆ ಗಂಭೀರ ಗಾಯ

    ತುಮಕೂರು: ಟೈರ್ ಸ್ಫೋಟಗೊಂಡ ಪರಿಣಾಮ ಟೆಂಪೋ ಟ್ರಾವೆಲರ್ ಪಲ್ಟಿ ಹೊಡೆದಿದ್ದು, 12 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹಿರೇಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

    ಬೀರೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್‍ನ ಟೈರ್ ಬಿಸಿಲಿನಿಂದಾಗಿ ಸ್ಫೋಟಗೊಂಡಿದೆ. ಇದರ ಪರಿಣಾಮ ಟೆಂಪೋ ಪಲ್ಟಿಯಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಘಟನೆಯಲ್ಲಿ ಗಾಯಗೊಂಡವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಹೆದ್ದಾರಿಯಲ್ಲಿದ್ದ ಟೆಂಪೋ ತೆರವು ಮಾಡುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಆಟೋಗಳಿಗೆ ಲಾರಿ ಡಿಕ್ಕಿಯಾಗಿ 12 ಮಂದಿ ಸ್ಥಳದಲ್ಲೇ ಸಾವು