ಹಾಸನ: ಸಿಎಂ ಕುರ್ಚಿ ಕದನದ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರು ಟೆಂಪಲ್ ರನ್ ಶುರುಮಾಡಿದ್ದು, ಬುಧವಾರ ಸಂಜೆ ದಿಢೀರ್ ನಾಗರನವಿಲೆಯ ನಾಗೇಶ್ವರ ದೇವಾಲಯಕ್ಕೆ (Nageshwara Temple) ಭೇಟಿ ನೀಡಿದ್ದಾರೆ.
ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗರನವಿಲೆ (Nagaranavile) ಗ್ರಾಮದಲ್ಲಿರುವ ನಾಗೇಶ್ವರ ದೇವಸ್ಥಾನಕ್ಕೆ ಡಿಕೆಶಿ ಭೇಟಿ ಕೊಟ್ಟಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ, ಡಿ.ಕೆ ಶಿವಕುಮಾರ್ ಅವರನ್ನು ದೇವಾಲಯಕ್ಕೆ ಕರೆದೊಯ್ದರು. ಇದನ್ನೂ ಓದಿ: ಇಂದು ಜಾಮೀನು ಭವಿಷ್ಯ; ಕೋರ್ಟ್ ತೀರ್ಪಿಗೂ ಮುನ್ನವೇ ರಾಯರ ಮೊರೆ ಹೋದ ಪವಿತ್ರಾಗೌಡ
ಬೆಂಗಾವಲು ವಾಹನವಿಲ್ಲದೆ ಡಿಕೆಶಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದೀಗ ಡಿ.ಕೆ.ಶಿವಕುಮಾರ್ ಅವರು ನಾಗರನವಿಲೆ ದೇವಸ್ಥಾನ ಭೇಟಿ ನೀಡಿರುವುದು ಎಲ್ಲರ ಕುತೂಹಲ ಕಾರಣವಾಗಿದೆ.
ಅನಾರೋಗ್ಯದ ಕಾರಣದಿಂದಾಗಿ ಸಿನಿಮಾ ರಂಗಕ್ಕೆ ಅಲ್ಪವಿರಾಮ ಹೇಳಿರುವ ನಟಿ ಸಮಂತಾ (Samantha), ಅಮೆರಿಕಾಗೆ ಹಾರುವ ಮುನ್ನ ಟೆಂಪಲ್ ರನ್ (Temple Run) ಮಾಡಿದ್ದರು. ಸ್ವಲ್ಪ ದಿನಗಳ ಕಾಲ ಸದ್ಗುರು ಆಶ್ರಮದಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಬಾಬ್ ಕಟ್ (Bob Cut) ಮಾಡಿಕೊಂಡು ಬಾಲಿಗೆ (Bali) ಹಾರಿದ್ದಾರೆ. ಅಲ್ಲಷ್ಟು ದಿನಗಳನ್ನು ಕಳೆದು ಅವರು ಅಮೆರಿಕಾಗೆ ಹಾರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇತರ ಭಕ್ತಾಧಿಗಳ ಜೊತೆಗೆ ನೆಲಹಾಸಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ತಮ್ಮ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೆಲವು ಹೊತ್ತಿಗೆ ಮುಂಚೆ ಏನಾದರೂ ತಿರುವುತ್ತಾ, ಮುರಿಯುತ್ತಾ, ಮೈಯಿ ಕೆರೆಯುತ್ತಾ, ಯೋಚನೆಗಳ ಪ್ರವಾಹಗಳಲ್ಲಿ ಇರುತ್ತಿದ್ದೆ. ಇವುಗಳನ್ನು ಮಾಡದೆ ಸುಮ್ಮನೆ ಕೂರುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೆ. ಆದರೆ ಇಂದು ಸತತವಾಗಿ ಧ್ಯಾನಮಗ್ನಳಾಗಿದ್ದೆ. ಧ್ಯಾನ ನನ್ನ ಶಕ್ತಿ ಎಂದು ಅರಿತುಕೊಂಡೆ. ಧ್ಯಾನ ನನ್ನ ಸಂವಹನ, ನನಗೆ ಸ್ಪಷ್ಟನೆಯನ್ನು ನೀಡುತ್ತದೆ ಎಂದು ಅರಿತುಕೊಂಡೆ. ಇಷ್ಟು ಸರಳವಾದ ಕಾರ್ಯವೊಂದರಲ್ಲಿ ಇಷ್ಟು ಶಕ್ತಿ ಅಡಗಿರುತ್ತದೆ ಎಂದು ತಿಳಿದಿರಲಿಲ್ಲ ಎಂದು ಸಮಂತಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?
ವೈಯಕ್ತಿಕ ಜೀವನದ ಅದ್ಯಾವ ವಿಷಯವನ್ನೂ ಸಮಂತಾ ಮುಚ್ಚಿಡೋದೇ ಇಲ್ಲ. ಇದೀಗ ಶೂಟಿಂಗ್ ಇಲ್ಲದೇ ಇದ್ದಾಗ ದಿನಚರಿ ಹೇಗಿರುತ್ತೆ ಅನ್ನೋದ್ರ ಬಗ್ಗೆ ಸಮಂತಾ ಮನಬಿಚ್ಚಿದ್ದಾರೆ. ಬೆಳಗ್ಗೆ ಬೇಗ ಏಳುವುದು, ಬಳಿಕ ರುದ್ರಾಕ್ಷಿ ಹಿಡಿದು ಧ್ಯಾನ ಮಾಡುವುದು, ಬಳಿಕ ಯೋಗ. ಹೀಗೆ ಕಟ್ಟುನಿಟ್ಟಿನ ದಿನಚರಿಯನ್ನು ಅವರು ಅನುಸರಿಸುತ್ತಾರೆ.
ಸಮಂತಾ ಅವರು ಸಿಟಾಡೆಲ್, ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ (Kushi) ಸಿನಿಮಾವನ್ನು ಮುಗಿಸಿಕೊಟ್ಟಿದ್ದಾರೆ. ಎರಡು ಪ್ರಾಜೆಕ್ಟ್‌ನಲ್ಲೂ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಜೊತೆಗಿನ ಡಿವೋರ್ಸ್, ಅನಾರೋಗ್ಯದ ಸಮಸ್ಯೆ ಇರೋದ್ರಿಂದ ಇದೆಲ್ಲದರಿಂದ ಅವರಿಗೆ ಬಿಡುವು ಬೇಕಾಗಿದೆ. ಆರೋಗ್ಯ ಮತ್ತು ಮನಸ್ಸಿಗೆ ರಿಲಾಕ್ಸೇಷನ್ ಬೇಕಾಗಿದೆ. ಹಾಗಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಬ್ಯುಸಿಯಾಗಿರುತ್ತಾರೆ.
ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರ ಹಾಕಿದ ನಂತರ ಅವರು ನೋವಿನಲ್ಲಿರುವುದನ್ನು ನಾನಾ ರೀತಿಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ. ದಿನವೂ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಗುಡ್ ಮಾರ್ನಿಂಗ್ ಹೇಳುವಾಗ ಜೊತೆ ಜೊತೆಯಲಿ ಧಾರಾವಾಹಿಯ ಫೋಟೋಗಳನ್ನೇ ಬಳಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಆ ಧಾರಾವಾಹಿಯನ್ನು ಅವರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಇದೀಗ ಅನಿರುದ್ಧ ಅವರು ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಆಯಾ ದೇವಸ್ಥಾನಗಳ ಫೋಟೋಗಳನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಹಣೆಗೆ ಭಂಡಾರ ಹಚ್ಚಿದ್ದು ನೋಡಿದರೆ ಅವರು ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸಾಯಿಬಾಬಾ ಫೋಟೋ ಮುಂದಿರ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಾನು ಅಂಬರೀಶ್ ಅಣ್ಣನ ಅಭಿಮಾನಿ, ಅವರ ಮಗನಿಗೆ ಸಿನಿಮಾ ಮಾಡುತ್ತಿರುವುದು ಹೆಮ್ಮೆ : ನಿರ್ದೇಶಕ ಮಹೇಶ್ ಕುಮಾರ್
ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಹೊರ ಬಂದ ನಂತರ ಸೀರಿಯಲ್ ನಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದು, ಅವೆಲ್ಲವನ್ನೂ ಸಸ್ಪೆನ್ಸ್ ಆಗಿಯೇ ಇಡುತ್ತಿದೆ ತಂಡ. ಅನಿರುದ್ಧ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರದ ಬದಲು ಹೊಸದೊಂದು ಪಾತ್ರ ತರಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಆ ಪಾತ್ರವನ್ನು ಹರೀಶ್ ರಾಜ್ ಮಾಡಲಿದ್ದಾರಂತೆ. ಆದರೆ, ಆರ್ಯವರ್ಧನ್ ಪಾತ್ರವನ್ನು ಸದ್ಯಕ್ಕೆ ಯಾರೂ ಮಾಡುವುದಿಲ್ಲ ಎನ್ನಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಬೆಳಗಾವಿ(ಚಿಕ್ಕೋಡಿ): ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಇಂದು ಭರ್ಜರಿ ಪ್ರಚಾರ ಆರಂಭಿಸಿದ್ದು, ಅವರಿಗೆ ಪತ್ನಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಕೂಡ ಯುಗಾದಿ ಹಬ್ಬದ ದಿನಂದಂದು ಸಾಥ್ ನೀಡಿದ್ದಾರೆ.
ಭರ್ಜರಿ ಪ್ರಚಾರದ ನಡುವೆಯೇ ಯುಗಾದಿ ಹಬ್ಬದ ನಿಮಿತ್ತ ಇಂದು ಜೊಲ್ಲೆ ದಂಪತಿ ಟೆಂಪಲ್ ರನ್ ನಡೆಸಿದ್ದಾರೆ. ರಾಯಬಾಗ ತಾಲೂಕಿನ ಸುಪ್ರಸಿದ್ದ ಚಿಂಚಲಿ ಮಾಯಕ್ಕ ದೇವಿ ದೇವಾಲಯ, ಮುಗಳಖೋಡ ಮಠ, ನಿಡಸೋಷಿ ದುರದುಂಡೇಶ್ವರ ಮಠ ಹಾಗೂ ಅಲಕನೂರು ಅರಣ್ಯಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಜೊಲ್ಲೆ ದಂಪತಿ ದರ್ಶನ ಪಡೆದರು.
ಶಾಸಕ ಪಿ. ರಾಜೀವ್ ಹಾಗೂ ಕುಡಚಿ ಕ್ಷೇತ್ರದ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಜೋಡಿಯಾಗಿ ಮತಯಾಚನೆ ನಡೆಸಿದರು. ಅಲ್ಲದೆ ಈ ಬಾರಿ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕ್ಷೇತ್ರದ ಮತದಾರರ ಬಳಿ ಮನವಿ ಮಾಡಿಕೊಂಡರು.
ಬೆಂಗಳೂರು: ಸಿಎಂ ಕುಮಾರಸ್ವಾಮಿಯವರು ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುವುದುನ್ನು ಬಿಟ್ಟು ದೇವಸ್ಥಾನಗಳಿಗೆ ಹೋಗುವುದನ್ನೇ ಚಟವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಪದೇ ಪದೇ ನಾನು ಜನಗಳಿಂದ ಗೆದ್ದಿಲ್ಲ. ದೇವರ ದಯೆಯಿಂದ ಸಿಎಂ ಆಗಿದ್ದೀನಿ ಎಂದು ಹೇಳುತ್ತಲೇ ಇರುತ್ತಾರೆ. ಹೀಗಾಗಿ ದೇವರ ದಯೆಯಿಂದ ಸಿಎಂ ಆಗಿರುವ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಿಬೇಕಿತ್ತು. ಆದರೆ ಆದನ್ನು ಬಿಟ್ಟು ಟೆಂಪಲ್ ರನ್ ಮಾಡುತ್ತಿದ್ದಾರೆ. ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ, ಆದರೆ ಅವರು ಅದನ್ನೇ ಚಟವನ್ನಾಗಿ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೇವಲ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆಯೇ ಹೊರತು, ಜನಗಳನ್ನು ಸುತ್ತುತ್ತಿಲ್ಲ. ಈಗಾಗಲೇ ಮಂಡ್ಯದಲ್ಲಿ 20 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲದೇ, ನಿರಂತರವಾಗಿ ರೈತರ ಸಾವಾಗುತ್ತಿದೆ. ಸರ್ಕಾರ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ಕರ್ನಾಟಕದ ಜನರೂ ಸಹ ಭ್ರಮ ನಿರಸಗೊಂಡಿದ್ದಾರೆ. ಟೆಂಪಲ್ ರನ್ ಬಿಟ್ಟು, ಮೊದಲು ಜನರ ಬಳಿ ಸಿಎಂ ಕುಮಾರಸ್ವಾಮಿ ರನ್ ಮಾಡಲಿ ಎಂದು ಕಿಡಿಕಾರಿದರು.
ಇದೇ ವೇಳೆ ಕಾಂಗ್ರೆಸ್ಸಿನ ಆಂತರಿಕ ಜಗಳ, ಬೆಳಗಾವಿ ಕಿತ್ತಾಟ ಹಾಗೂ ಹೊಸಕೋಟೆ ಕಿತ್ತಾಟ ವಿಚಾರದಲ್ಲಿ ಬಿಜೆಪಿಯ ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿ, ಅದು ಅವರ ಆತಂರಿಕ ಕಿತ್ತಾಟ ಅಷ್ಟೇ. ನಾವು ಆಪರೇಷನ್ ಕಮಲ ಮಾಡಲ್ಲ. ಆಪರೇಷನ್ ಕಮಲದ ಬಗ್ಗೆ ನಮಗೆ ವಿಶ್ವಾಸ ಇಲ್ಲ. ಅವರೇ ಬಿದ್ದು ಹೋದರೆ, ಏನೂ ಮಾಡುವುದಕ್ಕೆ ಆಗಲ್ಲ. ಆ ಮೇಲೆ ಬೇಕಾದರೆ ಬಿಜೆಪಿ ಸರ್ಕಾರ ರಚನೆಯಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತಿರುಗಾಡಿದಷ್ಟು ನಾವು ದೇವಸ್ಥಾನಕ್ಕೆ ಹೋಗಿಲ್ಲ. ಕುಲದೇವರಿಗೆ ಹೋಗಿ ಪೂಜೆ ಮಾಡಬಾರದೇ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಪ್ರಶ್ನಿಸಿ ಬಿಎಸ್‍ವೈಗೆ ಟಾಂಗ್ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಟೆಂಪಲ್ ರನ್ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಮ್ಮ ಮನೆ ದೇವರಿಗೆ ಪೂಜೆ ಮಾಡುವುದು ತಪ್ಪಾ? ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಮ್ಮು-ಕಾಶ್ಮೀರದ ವೈಷ್ಣವಿ ದೇವಿ ದೇವಸ್ಥಾನಕ್ಕೆ ಹೋಗಿದ್ದರು. ನಾವು ಇನ್ನು ಅಲ್ಲಿಯವರೆಗೆ ಹೋಗಿಲ್ಲ, ಇಲ್ಲಿಯ ದೇವರನ್ನು ಅಷ್ಟೇ ನೋಡುತ್ತಿದ್ದೇವೆ. ಅವರಂತೆ ದೇಶದ ಹಾಗೂ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಹೋಗಿಲ್ಲ ಎಂದು ಕಾಲೆಳೆದರು.
ಕುಮಾರಸ್ವಾಮಿ 42 ದೇವಸ್ಥಾನಕ್ಕೆ ಹೋಗಿದ್ದರಿಂದಲೇ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ರೈತರ ಸಾಲ ಮನ್ನಾ ಆಗುತ್ತಿದೆ ಎಂದು ತಮ್ಮ ಟೆಂಪಲ್ ರನ್ ಸಮರ್ಥಿಸಿಕೊಂಡರು.
ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಪ್ರಧಾನಿ ನರೇಂದ್ರ ಮೋದಿಗೆ ಮಧ್ಯಪ್ರವೇಶಿಸಿ ಮಹದಾಯಿ ಸಮಸ್ಯೆಯನ್ನು ಇತ್ಯರ್ಥ ಮಾಡುಬೇಕೆಂದು ರಾಜ್ಯದ 17 ಜನ ಬಿಜೆಪಿ ಸಂಸದರು ಹಾಗೂ ಬಿಎಸ್ ಯಡಿಯೂರಪ್ಪ ಕೇಳಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡ ಸಚಿವರು, ನಾವು 36.5 ಟಿಎಂಸಿ ನೀರು ಕೇಳಿದ್ದೇವು. ಆದರೆ ನಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲ ಎಂದು ಪ್ರತಿಕ್ರಿಯಿಸಿದರು.
ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಶೀಘ್ರ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಣಕ್ಕೆ ಯಾವುದೇ ಚಿಂತೆಬೇಡವೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ರಸ್ತೆಯ ಮೇಲೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು. ಶೀಘ್ರವೇ ರಸ್ತೆ ದುರಸ್ತಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.
ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೆಂಪಲ್ ರನ್ ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ನಯವಾಗಿಯೇ ತಿವಿದಿದ್ದಾರೆ.
ರಾಹುಲ್ ಗಾಂಧಿ ಮೈಸೂರು ಪ್ರವಾಸದ ವೇಳೆಯಲ್ಲಿಯೇ ಎಚ್‍ಡಿಕೆ ಟಾಂಗ್ ನೀಡಿರುವುದು ವಿಶೇಷ. ಎಚ್.ಡಿ.ಕುಮಾರಸ್ವಾಮಿ ಅವರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ಪೋಸ್ಟ್ ನ ಪೂರ್ಣರೂಪ ಇಲ್ಲಿದೆ.
ರಾಹುಲ್ ಗಾಂಧಿ ಅವರೇ ಚಾಮುಂಡಿತಾಯಿಯ ನಾಡು ಮೈಸೂರಿಗೆ ಬಂದಿದ್ದೀರಿ. ಚಾಮುಂಡಿ ಸನ್ನಿಧಿಗೆ ಹೊಗುತ್ತಿದ್ದೀರಿ ಎಂದು ತಿಳಿಯಿತು. ನೀವು ನಂಬಿದ ಡೋಂಗಿ ಸಿದ್ಧಾಂತಗಳು ದೇಶಾದ್ಯಂತ ನಿಮಗೆ ಕೊಟ್ಟ ಹೊಡೆತಕ್ಕೆ ನಲುಗಿ ಹಿಂದಿನ ನಾಸ್ತಿಕತೆಯನ್ನು ಬಿಟ್ಟು ಈಗ… https://t.co/Mvvagsi9qv
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) March 24, 2018
ರಾಹುಲ್ ಗಾಂಧಿ ಅವರೇ ಚಾಮುಂಡಿತಾಯಿಯ ನಾಡು ಮೈಸೂರಿಗೆ ಬಂದಿದ್ದೀರಿ. ಚಾಮುಂಡಿ ಸನ್ನಿಧಿಗೆ ಹೊಗುತ್ತಿದ್ದೀರಿ ಎಂದು ತಿಳಿಯಿತು. ನೀವು ನಂಬಿದ ಡೋಂಗಿ ಸಿದ್ಧಾಂತಗಳು ದೇಶಾದ್ಯಂತ ನಿಮಗೆ ಕೊಟ್ಟ ಹೊಡೆತಕ್ಕೆ ನಲುಗಿ ಹಿಂದಿನ ನಾಸ್ತಿಕತೆಯನ್ನು ಬಿಟ್ಟು ಈಗ ಬಿಜೆಪಿಯವರಂತೆ ಕಪಟ ಭಕ್ತಿ ಪ್ರದರ್ಶಿಸುತ್ತಾ #ಟೆಂಪಲ್_ರನ್ ಕೈಗೊಂಡಿದ್ದೀರಿ. ಆಗಲಿ.
ನನಗಾದ ಶಸ್ತ್ರ ಚಿಕಿತ್ಸೆ ನಂತರ ನಾನು ಪುನಃ ರಾಜಕೀಯ ಆರಂಭಿಸಲು ಪ್ರೇರಣೆ ನೀಡಿದ ಆ ತಾಯಿ ಚಾಮುಂಡಿಯು ನಿಮಗೆ ಅಪ್ರಬುದ್ಧತೆಯನ್ನು ನೀಗಲಿ ಎಂದು ಆಶಿಸುತ್ತೇನೆ.
ಎಲ್ಲಕ್ಕಿಂತ ಪ್ರಮುಖವಾಗಿ ಕಳೆದ ಬಾರಿ ನೀವು ಕರ್ನಾಟಕಕ್ಕೆ ಬಂದಾಗ ಜೆಡಿಎಸ್ ವಿರುದ್ಧ ಬಾಲಿಶ ಹೇಳಿಕೆ ಕೊಟ್ಟು ಹೋಗಿದ್ದಿರಿ. ಅದಕ್ಕೆ ನಾನು ಸೂಕ್ತ ಉತ್ತರ ಕೊಟ್ಟಿದ್ದೇನೆ. ನಾನು ಹೇಳಿದ್ದಕ್ಕೆ ನಿಮ್ಮ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದೇನೆ. ಆ ಮೂಲಕ ಜನರ ಸಂಶಯವನ್ನು ನಾನು ನಿವಾರಿಸಬೇಕಿದೆ. ನೀವು ಉತ್ತರ ಕೊಡದಿದ್ದರೆ ನನ್ನ ವಾದ ಒಪ್ಪಿದಂತೆ ಮತ್ತು #ಹಿಟ್_ಆಂಡ್_ರನ್ ಮಾಡಿದಂತೆ. ಆನಂತರ ನೀವು ಕೇವಲ #ಟೆಂಪಲ್_ರನ್_ರಾಹುಲ್ ಆಗಿ ಉಳಿದಿರುವುದಿಲ್ಲ. ಬದಲಿಗೆ #ಹಿಟ್_ಆಂಡ್_ರನ್_ರಾಹುಲ್ ಆಗಲಿದ್ದೀರಿ.
ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಟ್ವಿಟ್ಟರ್ ವಾರ್ ಜೋರಾಗಿಯೇ ನಡೆಯುತ್ತಿದ್ದು, ಇದೀಗ ಬಿಜೆಪಿಯವರು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತಿರುಗಿ ಬಿದ್ದಿದ್ದಾರೆ.
ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಟೆಂಪಲ್ ರನ್ ಮುಗಿಸಿ ಹೋದ ನಂತರ ಟೀಕೆಗಳು ಆರಂಭವಾಗಿವೆ. ಬಿಜೆಪಿಯವರು ಇದೀಗ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.
1427 ಎಂಜಿನಿಯರ್ ಹುದ್ದೆಗಳ ಅಕ್ರಮ ನೇಮಕಾತಿಯ ಆರೋಪ ಮಾಡಲಾಗಿದ್ದು, ಬನ್ನೇರುಘಟ್ಟದಲ್ಲಿ 500 ಕೋಟಿ ಮೌಲ್ಯದ ಕಾಂಪ್ಲೆಕ್ಸ್, ರಾಮಯ್ಯ ಮೆಡಿಕಲ್ ಕಾಲೇಜು ಸಮೀಪ 25 ಕೋಟಿ ವೆಚ್ಚ ಕಟ್ಟಡ, ಕೆಂಗೇರಿ ಬಳಿ ಸರ್ಕಾರಿ ಜಾಗದಲ್ಲಿ 40 ಎಕರೆ ಫಾರ್ಮ್ ಹೌಸ್, ಮಗಳ ಹೆಸರಿನಲ್ಲಿ 50 ಕೋಟಿ ವೆಚ್ಚದ ಮನೆ, 13 ಎಕರೆ ಬಳ್ಳಾರಿ ರಸ್ತೆಯಲ್ಲಿ ಜಮೀನು, ಇಂದಿರಾನಗರದಲ್ಲಿ 3 ಬಿಲ್ಡಿಂಗ್, ಸದಾಶಿವನಗರದಲ್ಲಿ ಎರಡು ಮನೆ ಇದೆ. ಇವುಗಳ ಬಗ್ಗೆ ಯಾಕೆ ತನಿಖೆ ಆಗ್ತಿಲ್ಲ ಅಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನು ದೇಶದ 6ನೇ ಶ್ರೀಮಂತ ಸಿಎಂ ಆಗಿದ್ದು ಹೇಗೆ: ಸಿದ್ದರಾಮಯ್ಯ ಹೇಳ್ತಾರೆ ಓದಿ
ನಿಮಗೆ ಬೇರೆ ಯಾರು ವಿರೋಧ ಪಕ್ಷದ ನಾಯಕನ ನೇಮಕ ಮಾಡಲು ಆಗಲಿಲ್ಲವಾ? ಲೋಕಾಯುಕ್ತ ಅಧಿಕಾರವನ್ನು ಕಿತ್ತು ಹಾಕಿದ್ದು ಇದಕ್ಕೇನಾ ಸಿದ್ದರಾಮಯ್ಯ ಅವರೇ? ಚಾರ್ಜ್ ಮಾಡುವ ಕಾಲ ಬಂದಿದೆ. ಹೀಗಾಗಿ ಉತ್ತರ ಕೊಡಿ ಅಂತ ಬಿಜೆಪಿಯವರು ರಾಹುಲ್ ಹಾಗೂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.
You have just left K'taka. If you look in your rear view mirror, @OfficeOfRG you will find your LOP mired in corruption. Your CM destroyed the agency which was investigating these charges. And you unflinchingly support these corrupt leaders! Oh wait, you are just one of them. pic.twitter.com/JR9Besq1qM
ಬೆಂಗಳೂರು: ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರ ಟೆಂಪಲ್ ರನ್ ವರ್ಕೌಟ್ ಆಗಲ್ಲ ಅಂತ ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಟಾಂಗ್ ನೀಡಿದ್ದಾರೆ.
ರಾಜ್ಯದ ಸಿಎಂ ಹಿಂದೂಗಳ ಎದೆಗೆ ಇರಿದು ಆಗಿದೆ. ನಿಮ್ಮ ಸಾಫ್ಟ್ ಹಿಂದುತ್ವ ಇಲ್ಲಿ ಫಲ ಕೊಡಲ್ಲ ಅಂತಾ ವಾಗ್ದಾಳಿ ನಡೆಸಿದ ಅವರು, ಧರ್ಮಸ್ಥಳದ ವಿಚಾರ ಹಾಗೂ ಕೃಷ್ಟಮಠಕ್ಕೆ ಭೇಟಿ ಕೊಡದ ವಿಚಾರದಲ್ಲಿ ಮಾತಾನಾಡದ ರಾಹುಲ್ ಈಗ್ಯಾಕೆ ಬರುತ್ತಿದ್ದಾರೆ ಮಂದಿರಕ್ಕೆ ಅನ್ನೋದು ಜನರಿಗೆ ಗೊತ್ತಾಗಿದೆ. ಧರ್ಮಸ್ಥಳದ ವಿಚಾರದಲ್ಲೂ, ಉಡುಪಿಯ ಕೃಷ್ಟ ದೇವಾಸ್ಥಾನದಲ್ಲಿ ಸಿಎಂ ಉದ್ಧಟತನ ತೋರಿದ್ದು ಮರೆತಿಲ್ಲ. ಕಾಮ್ರೇಡ್‍ಗಳ ಪ್ರಭಾವದಿಂದ ಹಿಂದೂಗಳ ಹೃದಯಕ್ಕೆ ಇರಿದಿದ್ದಾರೆ. ಇಲ್ಲಿ ರಾಹುಲ್ ಟೆಂಪಲ್ ರನ್ ವರ್ಕೌಟ್ ಆಗಲ್ಲ ಅಂತ ಕಟುವಾಗಿ ಟೀಕಿಸಿದ್ದಾರೆ.
ಮುಸ್ಲಿಂ ಓಲೈಸುತ್ತಿದ್ದ ಸಿಎಂ ಅವರ ನಡುವೆ ಈಗ ರಾಹುಲ್ ಟೆಂಪಲ್ ರನ್ ಮಾಡಿದ್ದು ಮುಸ್ಲಿಂರನ್ನು ಚಿಂತೇಗಿಡು ಮಾಡಿದೆ. ತ್ರಿವಳಿ ತಲಾಖ್ ನಿಷೇಧ ಮಾಡಿರುವ ಹಾಗೂ ಮುಸ್ಲಿಂ ಮಹಿಳೆಯರ ಅಭಿವೃದ್ಧಿಗೆ ಮೋದಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇದ್ರಿಂದ ಮುಸ್ಲಿಂರ ಮನೆ ಒಡೆದಿದೆ. ಗಂಡ ಮೋದಿ ವಿರುದ್ಧನಾದ್ರೂ ಮುಸ್ಲಿಂ ಮಹಿಳೆ ಮಾತ್ರ ಮೋದಿ ಜಪ ಮಾಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗುವ ಸಾಧ್ಯತೆ ದಟ್ಟವಾಗಿದೆ ಅಂತ ಅವರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರನ್ನೇ ತುಳಿಯುತ್ತಿದ್ದಾರೆ. ಸಿಎಂ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಪರಮೇಶ್ವರ್‍ನೊಳಗೆ ಬೆಂಕಿ ಚೆಂಡು ಇದೆ. ದಿನೇಶ್ ಗುಂಡುರಾವ್ ಮುಖ್ಯಮಂತ್ರಿಯಾಗಲು ಕಾಯುತ್ತಿದ್ದಾರೆ ಅಂದ್ರು.