Tag: ಟೂರ್ ಗೈಡ್

  • ನೆಟ್ಟಿಗರ ಮನಗೆದ್ದ ಟೂರ್ ಗೈಡ್ ಡ್ಯಾನ್ಸ್- ವಿಡಿಯೋ ವೈರಲ್

    ನೆಟ್ಟಿಗರ ಮನಗೆದ್ದ ಟೂರ್ ಗೈಡ್ ಡ್ಯಾನ್ಸ್- ವಿಡಿಯೋ ವೈರಲ್

    ಚೆನ್ನೈ: ಇತ್ತೀಚೆಗಷ್ಟೇ ಅಂಕಲ್ ಹಾಗೂ ವೈದ್ಯರೊಬ್ಬರು ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಇದೀಗ ತಮಿಳುನಾಡಿನ ಟೂರ್ ಗೈಡ್ ಹಾಕಿರುವ ಸ್ಟೆಪ್ಸ್ ಕೂಡ ಸಖತ್ ವೈರಲ್ ಆಗಿದೆ.

    ಟೂರ್ ಗೈಡ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಐಎಎಸ್ ಅಧಿಕಾರಿ ಪ್ರಿಯಾಂಕ ಶುಕ್ಲಾ ಮಂಗಳವಾರ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋ ನನಗೆ ವಾಟ್ಸಪ್ ನಲ್ಲಿ ಬಂದಿತ್ತು ಎಂದು ಹೇಳಿದ್ದು, ಟೂರ್ ಗೈಡ್ ನನ್ನು ಅಧಿಕಾರಿ ಹೊಗಳಿದ್ದಾರೆ. ಈ ಯುವಕ ಸ್ಥಳೀಯ ಪ್ರವಾಸ ಮಾರ್ಗದರ್ಶಕನಾಗಿದ್ದು, ಈತನ ಹೆಸರು ಪ್ರಭು ಎಂದಾಗಿದೆ. ತುಂಬಾ ಟ್ಯಾಲೆಂಟೆಡ್ ಆಗಿದ್ದಾನೆ. ಒಂದು ಬಾರಿ ಆತನ ಎಕ್ಸ್ ಪ್ರೆಶನ್ ನೋಡಿ.. ಸಖತ್ತಾಗಿದೆ ಎಂದು ಪ್ರಿಯಾಂಕ ಬರೆದುಕೊಂಡಿದ್ದಾರೆ.

    ವೈರಲ್ ಆದ ವಿಡಿಯೋದಲ್ಲಿ ಪ್ರಭು ಅವರು ಡ್ಯಾನ್ಸ್ ನಲ್ಲಿರುವ ವಿವಿಧ ರೀತಿಯ ‘ಮುದ್ರ’ಗಳ ಬಗ್ಗೆ ವಿವರಣೆ ನೀಡುತ್ತಿದ್ದಾರೆ. ವಿಡಿಯೋ ಬಗ್ಗೆ ಸಾಕಷ್ಟು ಕಮೆಂಟ್ ಗಳು ಬಂದಿವೆ. ಕೆಲವರು ಇದು ‘ಕಥಕ್ಕಳಿ’ ಎಂದು ಹೇಳಿದರೆ ಇನ್ನೂ ಕೆಲವರು ಇವರ ಎಕ್ಸ್ ಪ್ರೆಶನ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಂಕಲ್ ಬಳಿಕ ವೈರಲ್ ಆಯ್ತು ಡಾಕ್ಟರ್ ಡ್ಯಾನ್ಸ್

    ಅಧಿಕಾರಿ ಶೇರ್ ಮಾಡಿದ ಬಳಿಕ ವಿಡಿಯೋ ಸುಮಾರು 4 ಸಾವಿರ ವ್ಯೂವ್ ಆಗಿದ್ದು, ಪ್ರಭುವನ್ನು ಹೊಗಳಿ ಸಾವಿರಾರು ಕಮೆಂಟ್ ಗಳು ಬಂದಿವೆ. ತಮ್ಮ ವೃತ್ತಿಯ ನಡುವೆಯೂ ಪ್ರವಾಸಗರಿಗೆ ಡ್ಯಾನ್ಸ್ ಹೇಳಿಕೊಡುತ್ತಿರುವ ಪ್ರಭು ಆಸಕ್ತಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

    https://twitter.com/Narendr04934812/status/1178887430755119104