Tag: ಟೂರ್ನಿ

  • ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ

    ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ

    ದುಬೈ: 2024 ರಿಂದ 2031 ಮುಂದಿನ 10 ವರ್ಷಗಳ ವರೆಗೆ ನಡೆಯಲಿರುವ ಐಸಿಸಿ ಟೂರ್ನಿಗಳ ಆತಿಥ್ಯ ವಹಿಸಲಿರುವ ದೇಶಗಳ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಬಿಡುಗಡೆ ಮಾಡಿದೆ. ಏಕದಿನ, ಟಿ20 ವಿಶ್ವಕಪ್ ಸೇರಿ 3 ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದ್ದು, ಪಾಕಿಸ್ತಾನಕ್ಕೆ ಚಾಂಪಿಯನ್ ಟ್ರೋಫಿ ಆತಿಥ್ಯ ನೀಡಲಾಗಿದೆ.

    2014 ರಿಂದ 2031ರ ವರೆಗೆ 8 ಐಸಿಸಿ ಟೂರ್ನಿಗಳನ್ನು 14 ದೇಶಗಳು ಆತಿಥ್ಯ ವಹಿಸಲಿದೆ. ಈ ಎಲ್ಲಾ ಟೂರ್ನಿಗಳ ಆತಿಥ್ಯದ ಸಿಂಹಪಾಲು ಭಾರತದ ಪಾಲಾಗಿದ್ದು, ಭಾರತದಲ್ಲಿ 2026ರ ಟಿ20 ವಿಶ್ವಕಪ್, 2029ರ ಚಾಂಪಿಯನ್ಸ್ ಟ್ರೋಫಿ ಮತ್ತು 2031ರ ಏಕದಿನ ವಿಶ್ವಕಪ್ ಆತಿಥ್ಯ ಭಾರತದ ಪಾಲಾಗಿದೆ. ಅಚ್ಚರಿ ಎಂಬಂತೆ 2025ರ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಪಾಕಿಸ್ತಾನಕ್ಕೆ ಐಸಿಸಿ ಗ್ರೀನ್ ಸಿಗ್ನಲ್ ನೀಡಿದ್ದು, ಈ ಮೂಲಕ ಪಾಕಿಸ್ತಾನದಲ್ಲಿ 29 ವರ್ಷಗಳ ಬಳಿಕ ಮೊದಲ ಗ್ಲೋಬಲ್ ಟೂರ್ನಿ ನಡೆಸಲು ಪಾಕಿಸ್ತಾನ ಸಿದ್ಧವಾಗುತ್ತಿದೆ. ಈ ನಡುವೆ ಪಾಕಿಸ್ತಾನದಲ್ಲಿ ಆಡಲು ಇತರ ದೇಶಗಳ ತಂಡ ಒಪ್ಪಿಕೊಳ್ಳಲಿದೆಯೇ ಎಂಬ ಆತಂಕವಿದೆ. ಇದನ್ನೂ ಓದಿ: 5 ಕೋಟಿ ಬೆಲೆಯ 2 ವಾಚ್ ಸೀಜ್: ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

    ದುಬೈನಲ್ಲಿ ಕೆಲದಿನಗಳ ಹಿಂದೆ ಮುಗಿದಿದ್ದ 2021ರ ಟಿ20 ವಿಶ್ವಕಪ್ ಬಳಿಕ 2022ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದ್ದು, 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯ ವಹಿಸಲಿದೆ. 2026ರಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸಲಿದೆ. 2028ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ನಡೆಸಲಿದೆ. 2030 ಟಿ20 ವಿಶ್ವಕಪ್ ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್ ಆತಿಥ್ಯದಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿದೆ. ಇದನ್ನೂ ಓದಿ: IPLನಲ್ಲಿ ಬೇಡವಾಗಿದ್ದ ವಾರ್ನರ್ ಟಿ20 ವಿಶ್ವಕಪ್‍ನಲ್ಲಿ ದಾಖಲೆಯ ಒಡೆಯ

    2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಮಿಯಾ ಆತಿಥ್ಯ ವಹಿಸಲಿದ್ದು, 2031 ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ಜಂಟಿಯಾಗಿ ಏಕದಿನ ವಿಶ್ವಕಪ್ ಟೂರ್ನಿ ನಡೆಸಿಕೊಡಲಿದೆ. 2023ರಲ್ಲಿ ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದ್ದು, 2029ರ ಚಾಂಪಿಯನ್ ಟ್ರೋಫಿ ಭಾರತದಲ್ಲಿ ನಡೆಯಲಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಖುಷಿಗೆ ಬೂಟ್‍ನಲ್ಲಿ ಬಿಯರ್ ಸೇವಿಸಿದ ಆಸ್ಟ್ರೇಲಿಯಾ ಆಟಗಾರರು

  • ಕಲಬುರಗಿಯಲ್ಲಿ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ಆಯೋಜನೆ

    ಕಲಬುರಗಿಯಲ್ಲಿ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ಆಯೋಜನೆ

    ಕಲಬುರಗಿ: ಮೂರು ದಿನಗಳ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯನ್ನು ಕಲಬುರಗಿಯಲ್ಲಿ ಆಯೋಜನೆ ಮಾಡಲಾಗಿದೆ.

    ನಗರದ ಎನ್‍ವಿ ಕಾಲೇಜು ಮೈದಾನದಲ್ಲಿ ಪಂದ್ಯಾವಳಿಗೆ ಭಾನುವಾರ ಸಂಜೆ ಆರ್ ಸಿ ಸುಭೋದ್ ಯಾದವ್ ಚಾಲನೆ ನೀಡಿದ್ದರು. ಸತತ ಮೂರು ವರ್ಷಗಳಿಂದ ನಡೆಯುತ್ತಿರುವ ಈ ಟೂರ್ನಿಯಲ್ಲಿ ಕಲಬುರಗಿ, ಕೊಡಗು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಯ ತಂಡಗಳು ಭಾಗಿಯಾಗಿವೆ.

    ಇದೇ ಮೊದಲ ಬಾರಿಗೆ ಡೇ ಆ್ಯಂಡ್ ನೈಟ್ ಮ್ಯಾಚ್ ಅನ್ನು ಸಹ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರಾಜ್ಯದಲ್ಲಿ ಹಾಕಿ ಕ್ರೀಡೆಗೆ ಪ್ರೋತ್ಸಾಹ ನೀಡಲು ಬೇಕಾದ ಕ್ರಮ ಕೈಗೊಳ್ಳುವುದಾಗಿ ಆರ್ ಸಿ ಸುಭೋದ್ ಯಾದವ್ ಉದ್ಘಾಟನೆ ನಂತರ ಹೇಳಿದ್ದಾರೆ.

  • ವಿಶ್ವಕಪ್ 2019: ಅಭ್ಯಾಸದ ವೇಳೆ ಕೊಹ್ಲಿ ಹೆಬ್ಬೆರಳಿಗೆ ಗಾಯ

    ವಿಶ್ವಕಪ್ 2019: ಅಭ್ಯಾಸದ ವೇಳೆ ಕೊಹ್ಲಿ ಹೆಬ್ಬೆರಳಿಗೆ ಗಾಯ

    ಲಂಡನ್: ವಿಶ್ವಕಪ್ ಕ್ರಿಕೆಟ್ ಅಭ್ಯಾಸದ ವೇಳೆ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ.

    ತರಬೇತಿಯಲ್ಲಿ ಪಾಲ್ಗೊಂಡಿದ್ದ ನಾಯಕ ಕೊಹ್ಲಿ ನೆಟ್‍ನಲ್ಲಿ ಬೆವರಿಳಿಸಿದ್ದರು. ಈ ಸಂದರ್ಭದಲ್ಲಿ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಗಾಯದ ತೀವ್ರತೆ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ. ಗಾಯಗೊಂಡ ವೇಳೆ ಕೊಹ್ಲಿ ತಮ್ಮ ಬೆರಳನ್ನು ಐಸ್ ನಲ್ಲಿ ಡಿಪ್ ಮಾಡಿದ್ದರು. ತಂಡದ ತಜ್ಞ ವೈದ್ಯರು ಗಾಯಕ್ಕೆ ಚಿಕಿತ್ಸೆ ನೀಡಿದ ಬಳಿಕ ಅವರು ತರಬೇತಿ ಮುಂದುವರಿಸದೇ ಮೈದಾನದಿಂದ ಹೊರ ನಡೆದರು.

    ಕೊಹ್ಲಿ ಗಾಯದ ತೀವ್ರತೆಯ ಬಗ್ಗೆ ಟೀಂ ಇಂಡಿಯಾ ಮ್ಯಾನೇಜ್‍ಮೆಂಟ್ ಇದುವರೆಗೂ ಯಾವುದೇ ಸ್ಪಷ್ಟನೆಯನ್ನ ನೀಡಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ 3 ದಿನಗಳು ಬಾಕಿ ಇರುವ ವೇಳೆಯೇ ಘಟನೆ ನಡೆದಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

    ಐಪಿಎಲ್ ಟೂರ್ನಿಯ ವೇಳೆ ಗಾಯಗೊಂಡಿದ್ದ ಕೇದಾರ್ ಜಾಧವ್ ಕೂಡ ಚೇತರಿಕೊಳ್ಳುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯಕ್ಕೆ ಮುನ್ನ ಗಾಯಗೊಂಡಿದ್ದ ವಿಜಯ್ ಶಂಕರ್ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ಬುರ್ಖಾ ಧರಿಸಿ ಚೆಸ್ ಆಡಲ್ಲ ಎಂದ ಸೌಮ್ಯಾ ನಡೆಗೆ ಹ್ಯಾಟ್ಸ್ ಆಫ್ ಎಂದ ಕೈಫ್

    ಬುರ್ಖಾ ಧರಿಸಿ ಚೆಸ್ ಆಡಲ್ಲ ಎಂದ ಸೌಮ್ಯಾ ನಡೆಗೆ ಹ್ಯಾಟ್ಸ್ ಆಫ್ ಎಂದ ಕೈಫ್

    ನವದೆಹಲಿ: ಇರಾನ್ ನಲ್ಲಿ ನಡೆಯುತ್ತಿರುವ 2018 ರ ಏಷ್ಯಾ ಚೆಸ್ ಟೂರ್ನಿಯಿಂದ ಇತ್ತೀಚೆಗಷ್ಟೇ ಹೊರ ನಡೆಯುವ ನಿರ್ಧಾರ ಪ್ರಕಟಿಸಿದ ಭಾರತ ತಂಡದ ಆಟಗಾರ್ತಿ ಸೌಮ್ಯಾ ಸ್ವಾಮಿನಾಥನ್ ನಡೆಗೆ ಕ್ರಿಕೆಟಿಗ ಮಹಮ್ಮದ್ ಕೈಫ್ ಬೆಂಬಲ ಸೂಚಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕೈಫ್, ಯಾವುದೇ ಕ್ರೀಡೆಯಲ್ಲಿ ಧಾರ್ಮಿಕ ನಿಯಮಗಳನ್ನು ಅನುಸರಿಸುವಂತೆ ಒತ್ತಡ ಹೇರುವುದು ಉತ್ತಮವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಇರಾನ್ ಟೂರ್ನಿಯಿಂದ ಹೊರ ನಡೆದ ನಿಮ್ಮ ನಿರ್ಧಾರಕ್ಕೆ `ಹ್ಯಾಟ್ಸ್ ಅಫ್’ ಸೌಮ್ಯಾ. ಕ್ರೀಡಾಪಟುಗಳ ಮೇಲೆ ಯಾವುದೇ ಧಾರ್ಮಿಕ ವಸ್ತ್ರ ಸಂಹಿತೆಯನ್ನು ಹೇರಬಾರದು. ಅದರಲ್ಲೂ ಅಂತರಾಷ್ಟ್ರೀಯ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವ ರಾಷ್ಟ್ರ ನಿಯಮ ರೂಪಿಸಬಾರದು. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕೈಫ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಸದ್ಯ ಸೌಮ್ಯಾ ಅವರ ನಿರ್ಧಾರಕ್ಕೆ ಕೈಫ್ ಅಲ್ಲದೇ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹ ಬೆಂಬಲ ನೀಡಿದ್ದು, ಸೌಮ್ಯಾ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಹಲವರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.

    https://www.facebook.com/permalink.php?story_fbid=2177807325593182&id=218386564868611

    ಏನಿದು ಪ್ರಕರಣ?
    ಇರಾನ್ ನಲ್ಲಿ ಜೂನ್ 26 ರಿಂದ ಆಗಸ್ಟ್ 4 ವರೆಗೆ ನಡೆಯಲಿರುವ ಏಷ್ಯಾ ಚೆಸ್ ಟೂರ್ನಿಯಿಂದ ಭಾರತದ ತಂಡದ ಆಟಗಾರ್ತಿ ಸೌಮ್ಯಾ ಸ್ವತಃ ನಿರ್ಧಾರದಿಂದ ಹೊರ ನಡೆದಿದ್ದರು. ಇರಾನ್ ದೇಶ ಮಹಿಳೆಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ನಿಯಮವಿದೆ. ಇದರಂತೆ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರ್ತಿಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ನಿಯಮ ರೂಪಿಸಿತ್ತು. ಈ ಕಾರಣದಿಂದ ಸ್ಕಾರ್ಫ್ ಧರಿಸಲು ನಿರಾಕರಿಸಿದ್ದ ಸೌಮ್ಯ ಟೂರ್ನಿಯಿಂದ ಹೊರ ನಡೆಯುವ ತೀರ್ಮಾನವನ್ನು ಪ್ರಕಟಿಸಿದ್ದರು.

    ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಸೌಮ್ಯ, ಇರಾನ್ ಕಾನೂನು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ, ಚಿಂತನೆ, ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಗಳು ಸೇರಿದಂತೆ ನನ್ನ ಮಾನವ ಹಕ್ಕುಗಳನ್ನು ರಕ್ಷಿಸಿ ಕೊಳ್ಳಲು ಟೂರ್ನಿಗೆ ತೆರಳದೇ ಇರುವುದು ಸೂಕ್ತ ಎಂದು ಬರೆದುಕೊಂಡಿದ್ದಾರೆ.

    ಇದೇ ಮೊದಲಲ್ಲ: ಭಾರತೀಯ ಆಟಗಾರರು ಡ್ರೆಸ್ ಕೋಡ್ ಕಾರಣದಿಂದ ಈ ಹಿಂದೆಯೂ ಹಲವು ಟೂರ್ನಿಗಳಿಂದ ಹೊರ ನಡೆದಿದ್ದರು. ಪ್ರಮುಖವಾಗಿ 2016 ರಲ್ಲಿ ಶೂಟರ್ ಹೀನಾ ಸಿಂಧು ಏಷ್ಯಾ ಏರ್ ಗನ್ ಶೂಟಿಂಗ್ ಚಾಂಪಿಯನ್ ಶಿಪ್ ನಿಂದ ಹೊರ ನಡೆದಿದ್ದರು.