Tag: ಟೂರ್

  • ಬೇಸಿಗೆಯಲ್ಲಿ ಪುಟ್ಟಗೌರಿ ಮತ್ತಷ್ಟು ಹಾಟ್: ಕೂರ್ಗಿನಲ್ಲಿ ಸಾನ್ಯಾ ಅಯ್ಯರ್

    ಬೇಸಿಗೆಯಲ್ಲಿ ಪುಟ್ಟಗೌರಿ ಮತ್ತಷ್ಟು ಹಾಟ್: ಕೂರ್ಗಿನಲ್ಲಿ ಸಾನ್ಯಾ ಅಯ್ಯರ್

    ಸಾನ್ಯಾ  ಅಯ್ಯರ್ ತಮ್ಮ ಚೊಚ್ಚಲು ಸಿನಿಮಾ ‘ಗೌರಿ’ ಶೂಟಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ (Dubbing) ಕೂಡ ಮಾಡಿದ್ದಾರೆ. ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಈ ಹಿಂದೆ ಪೋಸ್ಟ್ ಮಾಡಿದ್ದರು. ಇದೀಗ ಸಮ್ಮರ್ ಹಾಲಿಡೇ ಕಳೆಯಲ್ಲಿ ತಾಯಿ ಜೊತೆ ಕೂರ್ಗಿಗೆ ಹೋಗಿದ್ದಾರೆ. ಅಲ್ಲಿ ಫೋಟೋಗೆ ಸಖತ್ ಪೋಸ್ ಕೂಡ ಕೊಟ್ಟಿದ್ದಾರೆ.

    ‘ಗೌರಿ’ (Gauri) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಕಿರುತೆರೆಯ ಪುಟ್ಟಗೌರಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಾನ್ಯಾ ಅಯ್ಯರ್ (Sanya Iyer), ಈ ಚಿತ್ರಕ್ಕಾಗಿ ಮತ್ತೊಂದು ಫೋಟೋ ಶೂಟ್ (Photoshoot) ನಲ್ಲಿ ಭಾಗಿಯಾಗಿದ್ದರು.

    ಬ್ಲೌಸ್ ಇಲ್ಲದೇ ಕೇವಲ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿರುವ ಸಾನ್ಯಾ ಅಯ್ಯರ್. ಆ ಫೋಟೋದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬ್ಯಾಕ್ ಲೆಸ್ ಪೋಸ್ ಕೂಡ ನೀಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು.

    ಈ ಹಿಂದೆಯೂ ಸಾನ್ಯಾ ಬಿಕಿನಿ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಗೌರಿ ಚಿತ್ರಕ್ಕಾಗಿ ಹೊಸ ಲುಕ್‌ನಲ್ಲಿ ಸ್ಟೈಲೀಶ್ ಗೆಟಪ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದರು.

     

    ಗೌರಿ ಸಿನಿಮಾ ಚಿಕ್ಕಮಗಳೂರು ಸೇರಿದಂತೆ ನಾನಾ ಸ್ಥಳಗಳಲ್ಲಿ ಶೂಟ್ ಆಗಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಸಮರ್ಜಿತ್ ನಾನು ಅಂದುಕೊಂಡದಕ್ಕಿಂತ ಚೆನ್ನಾಗಿ ಅಭಿನಯಿಸಿದ್ದಾರೆ. ಸಾನ್ಯ ಅವರು ಕೂಡ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

  • KSRTCಯಿಂದ ದಸರಾಗೆ ವಿಶೇಷ ಟೂರ್ ಪ್ಯಾಕೇಜ್

    KSRTCಯಿಂದ ದಸರಾಗೆ ವಿಶೇಷ ಟೂರ್ ಪ್ಯಾಕೇಜ್

    ಬೆಂಗಳೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪ್ರಯಾಣಿಕರಿಗೆ ವಿಶೇಷ ಟೂರ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

    ಮೈಸೂರು ದಸರಾ ವೈಭವ ನೋಡಲು ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಿ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಮೈಸೂರಿನಿಂದ ಒಂದು ದಿನದ ಟೂರ್ ವ್ಯವಸ್ಥೆ ಮಾಡಲಾಗಿದೆ. ಈ ಪ್ಯಾಕೇಜ್ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 13ರವರೆಗೆ ಇರಲಿದೆ. ಇದರಲ್ಲಿ ಗಿರಿ ದರ್ಶಿನಿ, ಜಲದರ್ಶಿನಿ ಹಾಗೂ ದೇವ ದರ್ಶಿನಿ ಎಂಬ ಮೂರು ರೀತಿಯ ವಿಶೇಷ ಪ್ಯಾಕೇಜ್‍ಗಳಿದ್ದು, ಎಲ್ಲಾ ದರಗಳು ಮೈಸೂರಿನಿಂದ ಅನ್ವಯವಾಗುತ್ತವೆ.

    ಗಿರಿ ದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ. ಈ ಒಂದು ದಿನದ ವಿಶೇಷ ಪ್ಯಾಕೇಜ್‍ಗಾಗಿ ವಯಸ್ಕರಿಗೆ 350 ರೂ. ಹಾಗೂ ಮಕ್ಕಳಿಗೆ 175 ರೂ. ಪಡೆಯಲಾಗುತ್ತದೆ.

    ಜಲ ದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ, ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ, ಕೆಆರ್‍ಎಸ್. ಈ ಪ್ಯಾಕೇಜ್ ಅನ್ವಯ ವಯಸ್ಕರಿಗೆ 375 ರೂ. ಹಾಗೂ ಮಕ್ಕಳಿಗೆ 190 ರೂ. ನಿಗದಿಯಾಗಿದೆ.

    ದೇವ ದರ್ಶಿನಿ: ನಂಜನಗೂಡು, ಬ್ಲಫ್, ಮುಡುಕು ತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗ ಪಟ್ಟಣ. ಈ ಪ್ಯಾಕೇಜ್‍ನ ದರವು ವಯಸ್ಕರಿಗೆ 275 ರೂ. ಹಾಗೂ ಮಕ್ಕಳಿಗೆ 140 ರೂ. ಆಗಿದೆ.

    ಇವುಗಳ ಜೊತೆಗೆ ಐರಾವತ ಕ್ಲಬ್ ಕ್ಲಾಸ್ ಬಸ್ ಪ್ಯಾಕೇಜ್ ಸಹ ನೀಡಲಾಗಿದೆ. ಇದರಲ್ಲಿ ಮಡಿಕೇರಿ, ಬಂಡೀಪುರ, ಶಿಂಷಾ, ಊಟಿ ಎಂಬ 4 ರೀತಿಯ ವಿಶೇಷ ಪ್ಯಾಕೇಜ್ ಇರಲಿದೆ.

    ಮಡಿಕೇರಿ ಪ್ಯಾಕೇಜ್: ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ರಾಜಾಸೀಟ್, ಅಬ್ಬಿ ಫಾಲ್ಸ್. ಈ ಪ್ಯಾಕೇಜ್‍ಗಾಗಿ ವಯಸ್ಕರಿಗೆ 1,200 ರೂ. ಹಾಗೂ ಮಕ್ಕಳಿಗೆ 900 ರೂ. ಪಡೆಯಲಾಗುತ್ತದೆ

    ಬಂಡೀಪುರ ಪ್ಯಾಕೇಜ್: ಸೋಮನಾಥಪುರ, ತಲಕಾಡು, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ, ನಂಜನಗೂಡು. ಈ ವಿಶೇಷ ಪ್ಯಾಕೇಜ್‍ನ ದರವು ವಯಸ್ಕರಿಗೆ 1,000 ರೂ. ಹಾಗೂ ಮಕ್ಕಳಿಗೆ 750 ರೂ. ನಿಗದಿಯಾಗಿದೆ.

    ಶಿಂಷಾ ಪ್ಯಾಕೇಜ್: ಶಿವನ ಸಮುದ್ರ, ಶ್ರೀರಂಗ ಪಟ್ಟಣ, ರಂಗನತಿಟ್ಟು, ಬಲಮುರಿ ಫಾಲ್ಸ್, ಕೆಆರ್‍ಎಸ್. ಈ ಪ್ಯಾಕೇಜ್‍ಗಾಗಿ ವಯಸ್ಕರಿಗೆ 800 ರೂ. ಹಾಗೂ ಮಕ್ಕಳಿಗೆ 600 ರೂ. ಪಡೆಯಲಾಗುತ್ತದೆ.

    ಊಟಿ ಪ್ಯಾಕೇಜ್: ಊಟಿ, ಬಟಾನಿಕಲ್ ಗಾರ್ಡನ್, ಇಟಾಲಿಯನ್ ಮತ್ತು ರೋಸ್ ಗಾರ್ಡನ್, ಬೋಟ್ ಹೌಸ್. ಈ ಪ್ಯಾಕೇಜ್‍ನ ದರವು ವಯಸ್ಕರಿಗೆ 1,600 ಹಾಗೂ ಮಕ್ಕಳಿಗೆ 1,200 ಆಗಿದೆ.

    ಈ ವಿಶೇಷ ಸಾರಿಗೆಗಳು ಬೆಳಗ್ಗೆ ಮೈಸೂರಿನಿಂದ ಹೊರಟು, ವಿವಿಧ ಸ್ಥಳಗಳಿಗೆ ಸಂದರ್ಶಿಸಿ, ಸಂಜೆ ವೇಳೆಗೆ ಮೈಸೂರಿಗೆ ಮರಳುತ್ತವೆ. ಈ ವಿಶೇಷ ಪ್ಯಾಕೇಜ್ ಟೂರ್ ಟಿಕೆಟ್‍ಗಳನ್ನು Ksrtc.in ನಲ್ಲಿ ಕಾಯ್ದಿರಸಬಹುದಾಗಿದೆ.

  • ಆಗಸದಲ್ಲಿ ಅಪ್ಪು ರೋಚಕ ಸಾಹಸಯಾನ!

    ಆಗಸದಲ್ಲಿ ಅಪ್ಪು ರೋಚಕ ಸಾಹಸಯಾನ!

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಲ್ಲಿ ಆಗಸದಲ್ಲಿ ಸಾಹಸ ಮಾಡಿದ್ದಾರೆ.

    ಸದ್ಯ ದಕ್ಷಿಣ ಅಮೆರಿಕದಲ್ಲಿ ಕುಟುಂಬಸ್ಥರೊಂದಿಗೆ ಪುನಿತ್ ರಾಜ್‍ಕುಮಾರ್ ಬೇಸಿಗೆ ರಜೆ ಕಳೆಯುತ್ತಿದ್ದಾರೆ. ಈ ವೇಳೆ ದಕ್ಷಿಣ ಅಮೇರಿಕಾದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡುತ್ತಾ ಹಾಲಿಡೇ ಸಂಭ್ರಮದಲ್ಲಿದ್ದಾರೆ.

    ಈ ಪ್ರವಾಸದ ವೇಳೆ ಪುನೀತ್ ರಾಜ್‍ಕುಮಾರ್ ಸ್ಕೈ ಡೈವಿಂಗ್ ಮಾಡಿದ್ದು, ಈ ರೋಮಾಂಚನ ಸಾಹಸದ ದೃಶ್ಯಗಳನ್ನು ಪಿಆರ್‌ಕೆ ಸ್ಟೂಡಿಯೋ ಅಧಿಕೃತ ಯೂ ಟ್ಯೂಬ್ ಚಾನೆಲಿನಲ್ಲಿ ಅಪ್ಲೋಡ್ ಆಗಿದೆ.

    ಪುನೀತ್ ಸ್ಕೈ ಡೈವಿಂಗ್ ದೃಶ್ಯಗಳು, ಬೋಟಿಂಗ್, ಜಲಪಾತ, ದಕ್ಷಿಣ ಅಮೇರಿಕದ ಸುಂದರ ಪ್ರಕೃತಿಯ ಚಿತ್ರಣಗಳು ಸೆರೆಯಾಗಿದೆ.

    ದಕ್ಷಿಣ ಅಮೇರಿಕಾದ ಭೇಟಿಯ ಕೆಲವು ಅತ್ಯುತ್ತಮ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ. ಈ ವಿಡಿಯೋ ವೀಕ್ಷಿಸಿ ಮತ್ತು ಆನಂದಿಸಿ ಎಂದು ಕ್ಯಾಪ್ಷನ್ ಕೂಡ ಹಾಕಲಾಗಿದೆ.