Tag: ಟೂತ್ ಪೇಸ್ಟ್

  • ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು

    ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು

    ಮಂಗಳೂರು: ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ, ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ  ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಶ್ರಾವ್ಯ(22) ಮೃತ ಯುವತಿ. ಈಕೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ನಿವಾಸಿಯಾಗಿದ್ದಾಳೆ. ಟೂತ್‌ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಿದ್ದಾಳೆ.  ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!

    ಮನೆಯ ಬಾತ್ ರೂಂನ ಕಿಟಕಿ ಬಳಿಯಲ್ಲಿ ಇಲಿ ಪಾಷಾಣ ಹಾಗೂ ಟೂತ್ ಪೇಸ್ಟ್‌ನ್ನು ಒಟ್ಟಿಗೆ ಇಡಲಾಗಿತ್ತು. ಕತ್ತಲಿದ್ದರಿಂದ ಇಲಿ ಪಾಷಾಣ ಕೈಗೆತ್ತಿಕೊಂಡಿದ್ದ ಯುವತಿ ಹಲ್ಲುಜ್ಜಿದ್ದಾಳೆ. ಇಲಿ ಪಾಷಾಣ ಎಂದು ತಡವಾಗಿ ಯುವತಿಗೆ ಗೊತ್ತಾಗಿದೆ. ನಂತರ ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ನಿರಾಣಿ ಸಕ್ಕರೆ ಕಾರ್ಖಾನೆ ವೀಕ್ಷಿಸಿದ ಉತ್ತರ ಪ್ರದೇಶದ ರಾಜ್ಯಪಾಲೆ

  • ಇಲಿ ವಿಷದಿಂದ ಹಲ್ಲುಜ್ಜಿ ಪ್ರಾಣ ಬಿಟ್ಟ 18ರ ಯುವತಿ

    ಇಲಿ ವಿಷದಿಂದ ಹಲ್ಲುಜ್ಜಿ ಪ್ರಾಣ ಬಿಟ್ಟ 18ರ ಯುವತಿ

    ಮುಂಬೈ: ಟೂತ್ ಪೇಸ್ಟ್ ಎಂದು ತಪ್ಪಾಗಿ ಭಾವಿಸಿ ಇಲಿ ವಿಷದಲ್ಲಿ ಬ್ರಷ್ ಮಾಡಿ ಯುವತಿಯೊಬ್ಬಳು ಮೃತಪಟ್ಟಿರುವ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ.

    ಅಫ್ಸಾನಾ ಖಾನ್(18) ಮೃತಳಾಗಿದ್ದಾಳೆ. ಮುಂಬೈ ಧಾರವಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಫ್ಸಾನಾ ಟೂತ್ ಪೇಸ್ಟ್ ಎಂದು ತಪ್ಪಾಗಿ ಭಾವಿಸಿ ಇಲಿ ವಿಷದಲ್ಲಿ ಬ್ರಷ್ ಮಾಡಿ ಪ್ರಾಣ ಕಳೆದುಕೊಂಡಿದ್ದಾಳೆ.

    ಅಫ್ಸಾನಾ ಎಂದಿನಂತೆ ಬೆಳಗ್ಗೆ ಹಲ್ಲುಜ್ಜಲು ತೆರಳಿದ್ದಳು. ನಿದ್ದೆ ಕಣ್ಣಿನಲ್ಲಿದ್ದ ಆಕೆ ಟೂತ್ ಪೇಸ್ಟ್ ಬದಲಿಗೆ ಅದರ ಬಳಿಯಿದ್ದ ಇಲಿ ವಿಷದ ಪೇಸ್ಟ್ ಅನ್ನು ಬ್ರಷ್‍ಗೆ ಹಾಕಿ ಹಲ್ಲುಜ್ಜಿದ್ದಾಳೆ. ತಕ್ಷಣವೇ ವ್ಯತ್ಯಾಸ ಅರಿತ ಆಕೆ ಎಲ್ಲವನ್ನೂ ಉಗುಳಿ ಬಾಯಿಯನ್ನು ತೊಳೆದುಕೊಂಡಳು. ಆದರೆ ಅಷ್ಟರಲ್ಲಾಗಲೇ ತಲೆ ಸುತ್ತು ಬಂದು ಕೆಳಗೆ ಬಿದ್ದುಳು. ತಕ್ಷಣವೇ ಕುಟುಂಬಸ್ಥರು ಅಫ್ಸಾನಾಳನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟೊತ್ತಿಗೆ ತಡವಾಗಿತ್ತು. ವಿಷವು ದೇಹದಲ್ಲಿ ಹರಡಲು ಪ್ರಾರಂಭಿಸಿತು. ಎರಡು ದಿನಗಳ ಚಿಕಿತ್ಸೆಯ ನಂತರ, ಅಫ್ಸಾನಾ ಪ್ರಾಣ ಬಿಟ್ಟಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ರಮ್ಯಾ ಸೌಂದರ್ಯವನ್ನು ಹಾಡಿಹೊಗಳಿದ ಅಭಿಮಾನಿಗಳು

    ವಿದ್ಯಾಭ್ಯಾಸದಲ್ಲಿ ಮುಂದಿದ್ದ ಅಫ್ಸಾನಾ ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ನೆರವಾಗುವ ಭರವಸೆ ಮೂಡಿಸಿದ್ದಳು. ಅಫ್ಸಾನಾ ತಾಯಿ ಹಣ್ಣುಗಳನ್ನು ಮಾರಿ ಕುಟುಂಬದ ಖರ್ಚುಗಳನ್ನು ನೋಡಿಕೊಳ್ಳುತಿದ್ದರು. ತಾಯಿಗೆ ಸಹಾಯ ಮಾಡುತ್ತಾ ಅಫ್ಸಾನಾ ವಿದ್ಯಾಭ್ಯಾಸ ಮುಂದುವರೆಸಿದ್ದರು. ತಾನು ಓದಿ ದೊಡ್ಡ ಉದ್ಯೋಗಕ್ಕೆ ಸೇರಿ ಇಡೀ ಕುಟುಂಬವನ್ನು ಕಾಪಾಡುವ ಭರವಸೆ ಹುಟ್ಟುಹಾಕಿದ್ದಳು. ಆದರೆ ಇದೀಗ ಮಗಳ ದುರಂತ ಸಾವಿನಿಂದ ಇಡೀ ಕುಟುಂಬ ಶೋಕದಲ್ಲಿದೆ.

    ಪೊಲೀಸರು ಈ ಘಟನೆಯನ್ನು ಆಕಸ್ಮಿಕ ಸಾವಿನ ಪ್ರಕರಣವಾಗಿ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಸುಲಭವಾಗಿ ಕೈಗೆ ಸಿಗುವಂತಹ ಸ್ಥಳಗಳಲ್ಲಿ ಇಂತಹ ವಿಷಕಾರಿ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.