Tag: ಟುಡೇಸ್ ಚಾಣಕ್ಯ

  • Delhi Exit Poll| ದೆಹಲಿಯಲ್ಲಿ ಬಿಜೆಪಿ 50+ ಸ್ಥಾನ ಗೆಲ್ಲಲಿದೆ – ಟುಡೇಸ್‌ ಚಾಣಕ್ಯ

    Delhi Exit Poll| ದೆಹಲಿಯಲ್ಲಿ ಬಿಜೆಪಿ 50+ ಸ್ಥಾನ ಗೆಲ್ಲಲಿದೆ – ಟುಡೇಸ್‌ ಚಾಣಕ್ಯ

    ನವದೆಹಲಿ: ಟುಡೇಸ್‌ ಚಾಣಕ್ಯ (Today’s Chanakya) ಈ ಬಾರಿಯ ದೆಹಲಿ ಚುನಾವಣೆಯಲ್ಲಿ ಬಿಜೆಪಿ (BJP) 50+ ಸ್ಥಾನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.

    ಬುಧವಾರ ತನ್ನ ಚುನಾವಣೋತ್ತರ ಸಮೀಕ್ಷೆಯನ್ನು (Delhi Exit Poll) ಪ್ರಕಟಿಸದ ಟುಡೇಸ್‌ ಚಾಣಕ್ಯ ಇಂದು ಸಂಜೆ 7 ಗಂಟೆಗೆ ದತ್ತಾಂಶವನ್ನು ಬಿಡುಗಡೆ ಮಾಡಿತು.

    ಬಿಜೆಪಿ ಮೈತ್ರಿಕೂಟ 51 ± 6, ಆಪ್‌ 19 ± 6, ಇತರರು 0 ± 3 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಬಿಜೆಪಿ 49%, ಆಪ್‌ 41%, ಇತರರು 10% ಮತ ಪಡೆಯಬಹುದು ಎಂದು ತಿಳಿಸಿದೆ. ಇದನ್ನೂ ಓದಿ: US Deportation| 2009ರಿಂದ 15,000 ಭಾರತೀಯರ ಗಡಿಪಾರು – ಯಾವ ವರ್ಷ ಎಷ್ಟು ಮಂದಿ?

    ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು ಇಲ್ಲಿಯವರೆಗೆ ಪ್ರಕಟವಾದ 12 ಸಮೀಕ್ಷೆಗಳಲ್ಲಿ 10 ಸಮೀಕ್ಷೆಗಳು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರೆ 2 ಸಮೀಕ್ಷೆಗಳು ಆಪ್‌ ಜಯಗಳಿಸಲಿದೆ ಎಂದು ತಿಳಿಸಿದೆ.

    ಒಟ್ಟು 70 ಕ್ಷೇತ್ರಗಳಿಗೆ 699 ಅಭ್ಯರ್ಥಿಗಳು ಕಣದಲ್ಲಿದ್ದು ಫೆ.8 ರಂದು ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.

    ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ (BJP) ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.

     

  • ಅಬ್ಕಿ ಬಾರ್ ಚಾರ್ ಸೌ ಪಾರ್ – ಎನ್‌ಡಿಎ 400ರ ಗಡಿ ದಾಟುತ್ತೆ ಎಂದ ಟುಡೇಸ್‌ ಚಾಣಕ್ಯ

    ಅಬ್ಕಿ ಬಾರ್ ಚಾರ್ ಸೌ ಪಾರ್ – ಎನ್‌ಡಿಎ 400ರ ಗಡಿ ದಾಟುತ್ತೆ ಎಂದ ಟುಡೇಸ್‌ ಚಾಣಕ್ಯ

    ನವದೆಹಲಿ: ಬಿಜೆಪಿಯ ‘ಅಬ್ಕಿ ಬಾರ್, ಚಾರ್ ಸೌ ಪಾರ್’ ಕನಸು ನನಸಾಗುತ್ತದೆ ಎಂದು ಟುಡೇಸ್‌ ಚಾಣಕ್ಯ (Today’s Chanakya) ಹೇಳಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ (Exit Poll) ಎನ್‌ಡಿಎ (NDA) ಈ ಬಾರಿ 400ರ ಗಡಿಯನ್ನು ದಾಟುತ್ತದೆ ಎಂದು ಭವಿಷ್ಯ ನುಡಿದಿದೆ. Exit Poll 2024 | ದ್ರಾವಿಡರ ನಾಡಿನಲ್ಲಿ ಕಮಲೋತ್ಪತ್ತಿ – ಬಿಜೆಪಿಯಿಂದ ಐತಿಹಾಸಿಕ ಸಾಧನೆ!

    ಯಾವುದಕ್ಕೆ ಎಷ್ಟು?
    ಬಿಜೆಪಿ 335 ± 15
    ಎನ್‌ಡಿಎ 400 ± 15
    ಕಾಂಗ್ರೆಸ್‌ 50 ± 11
    INDIA 107 ± 11
    ಇತರರು 36 ± 9  ಇದನ್ನೂ ಓದಿ: ಎನ್‌ಡಿಎ ಸರ್ಕಾರವನ್ನು ಮತ್ತೆ ಆಯ್ಕೆ ಮಾಡಲು ಜನ ದಾಖಲೆ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ: ಮೋದಿ

    ಇಂಡಿಯಾ ಟುಡೆ ಸಮೀಕ್ಷೆ ಈ ಬಾರಿಗೆ  ಎನ್‌ಡಿಎಗೆ 361-401, ಇಂಡಿಯಾ ಒಕ್ಕೂಟಕ್ಕೆ 131-166, ಇತರರಿಗೆ 8-20 ಸ್ಥಾನಗಳನ್ನು ನೀಡಿದೆ.


    2009, 2014, 2019 ಲೋಕಸಭಾ ಚುನಾವಣೆಯ (Lok Sabha Election) ಸಂದರ್ಭದಲ್ಲಿ ಟುಡೇಸ್‌ ಚಾಣಕ್ಯ ಬಹುತೇಕ ನಿಖರ ಭವಿಷ್ಯ ನುಡಿದಿತ್ತು. 2014ರ ಚುನಾವಣೆಯಲ್ಲಿ ಎನ್‌ಡಿಎ 340 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು. ಫಲಿತಾಂಶ ಬಂದಾಗ ಬಿಜೆಪಿ 282, ಎನ್‌ಡಿಎ 336 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದನ್ನೂ ಓದಿ: Exit Polls | ಕೇರಳದಲ್ಲೂ ಖಾತೆ ತೆರೆಯಲಿದೆ ಬಿಜೆಪಿ

    2019 ರ ಚುನಾವಣೆಯಲ್ಲಿ ಎನ್‌ಡಿಎಗೆ 340 ಸ್ಥಾನ ಸಿಗಬಹುದು ಎಂದು ಟುಡೇಸ್‌ ಚಾಣಕ್ಯ ಭವಿಷ್ಯ ನುಡಿದಿತ್ತು. ಅಂತಿಮ ಫಲಿತಾಂಶ ಬಂದಾಗ ಬಿಜೆಪಿ 303, ಎನ್‌ಡಿಎ 352 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

  • ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು – ಇದು ಟುಡೇಸ್‌ ಚಾಣಕ್ಯ ಭವಿಷ್ಯ

    ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು – ಇದು ಟುಡೇಸ್‌ ಚಾಣಕ್ಯ ಭವಿಷ್ಯ

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಹುತೇಕ ನಿಖರ ಫಲಿತಾಂಶದ ಭವಿಷ್ಯ ನುಡಿದಿದ್ದ ಟುಡೇಸ್‌ ಚಾಣಕ್ಯ (Today’s Chanakya) ಈ ಬಾರಿ ಮಧ್ಯಪ್ರದೇಶದಲ್ಲಿ (Madhya Pradesh) ಬಿಜೆಪಿ,ತೆಲಂಗಾಣದಲ್ಲಿ (Telangana) ಕಾಂಗ್ರೆಸ್‌ ಭರ್ಜರಿ ಜಯಗಳಿಸಲಿದೆ ಎಂದು ಹೇಳಿದೆ.

    ರಾಜಸ್ಥಾನದಲ್ಲಿ (Rajasthan) ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಟಫ್‌ ಫೈಟ್‌ ಇದ್ದರೆ ಛತ್ತೀಸ್‌ಗಢದಲ್ಲಿ (Chhattisgarh) ಕಾಂಗ್ರೆಸ್‌ ಅಧಿಕಾರದಲ್ಲೇ ಮುಂದುವರಿಯಲಿದೆ ಭವಿಷ್ಯ ನುಡಿದಿದೆ.

    ಮಧ್ಯಪ್ರದೇಶ:
    ಒಟ್ಟು ಸ್ಥಾನ : 230
    ಸರಳ ಬಹುಮತ : 116
    ಬಿಜೆಪಿ: 151 ± 12 , ಕಾಂಗ್ರೆಸ್‌: 74 ± 12, ಇತರೇ 5 ± 4 ಇದನ್ನೂ ಓದಿ: ಶೆಟ್ಟರ್ ಮತ್ತೆ ಬಿಜೆಪಿಗೆ ಸೇರ್ತಾರೆ: ಈಶ್ವರಪ್ಪ ಬಾಂಬ್

     

    ರಾಜಸ್ಥಾನ:
    ಒಟ್ಟು ಸ್ಥಾನ : 199
    ಸರಳ ಬಹುಮತ :100
    ಕಾಂಗ್ರೆಸ್‌+: 101 ± 12, ಬಿಜೆಪಿ 89 ± 12, ಇತರೇ 9 ± 7

    ತೆಲಂಗಾಣ:
    ಒಟ್ಟು ಸ್ಥಾನಗಳು: 119
    ಸರಳ ಬಹುಮತ : 60
    ಬಿಜೆಪಿ 7 ± 5, ಕಾಂಗ್ರೆಸ್‌ 71 ± 9, ಬಿಆರ್‌ಎಸ್‌ 33 ± 9, ಇತರೇ 8 ± 3

    ಛತ್ತೀಸ್‌ಗಢ:
    ಒಟ್ಟು ಸ್ಥಾನಗಳು: 90
    ಸರಳ ಬಹುಮತ: 46
    ಬಿಜೆಪಿ 33 ± 8, ಕಾಂಗ್ರೆಸ್‌ 57 ± 8, ಇತರೇ 00 ± 3

     

  • ಮುಗಿಯಿತು ಮತ ಸಮರ, ಶುರುವಾಯ್ತು ಲೆಕ್ಕಾಚಾರ – ಮತಗಟ್ಟೆ ಸಮೀಕ್ಷೆಗಳಲ್ಲಿ `ಕೈ’ ಮುನ್ನಡೆ

    ಮುಗಿಯಿತು ಮತ ಸಮರ, ಶುರುವಾಯ್ತು ಲೆಕ್ಕಾಚಾರ – ಮತಗಟ್ಟೆ ಸಮೀಕ್ಷೆಗಳಲ್ಲಿ `ಕೈ’ ಮುನ್ನಡೆ

    ಬೆಂಗಳೂರು: ಮಹತ್ವದ ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election) ಮತದಾನ ಕಾರ್ಯ ಮುಕ್ತಾಯಗೊಂಡಿದ್ದು, ಇದೀಗ ರಾಜಕೀಯ ಪಕ್ಷಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳ (Exit Polls) ಲೆಕ್ಕಾಚಾರ ಶುರುವಾಗಿದೆ.

    2018ರ ಚುನಾವಣೆಯಲ್ಲಿ 72.10% ಮತದಾನ ನಡೆದಿದ್ದರೆ ಈ ಬಾರಿ 72.81% ಮತದಾನ ನಡೆದಿದೆ. ಬಹುಮತಕ್ಕೆ 113 ಸ್ಥಾನಗಳ ಅಗತ್ಯವಿದ್ದು ಕಾಂಗ್ರೆಸ್ (Congress), ಬಿಜೆಪಿ (BJP) ಮಧ್ಯೆ ಜಿದ್ದಾಜಿದ್ದಿ ನಡೆಯುತ್ತಿದೆ. ಎಕ್ಸಿಟ್ ಪೋಲ್‌ನ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕರೆ, ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇನ್ನೂ ಕೆಲವು ಸಮೀಕ್ಷೆಗಳಲ್ಲಿ ಅಂತ್ರವಾಗಿದ್ದು ಮತ್ತೊಮ್ಮೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಟುಡೇಸ್‌ ಚಾಣಕ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ

    ಇನ್ನೂ ಲೋಕಸಭಾ ಚುನಾವಣೆಯಲ್ಲಿ ನಿಖರ ಫಲಿತಾಂಶ ನೀಡಿದ್ದ ಟುಡೇಸ್ ಚಾಣಕ್ಯ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಈ ನಡುವೆ ಮತಗಟ್ಟೆಗಳಲ್ಲಿ ನಡೆದ ಸಮೀಕ್ಷೆಯಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿರುವುದು ಕಂಡುಬಂದಿದೆ. ಇದನ್ನೂ ಓದಿ: ಈ ಬಾರಿ ಬಿಜೆಪಿ 125ರಿಂದ 130 ಸ್ಥಾನಗಳನ್ನು ಗೆಲ್ಲಲಿದೆ: ಯಡಿಯೂರಪ್ಪ ವಿಶ್ವಾಸ

    ಕಾಂಗ್ರೆಸ್‌ನಲ್ಲಿ ನಾಯಕರೂ ಸಹ ಲೆಕ್ಕಾಚಾರ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಲೆಕ್ಕದಲ್ಲಿ ಕಾಂಗ್ರೆಸ್ 130+, ಬಿಜೆಪಿ 65+, ಜೆಡಿಎಸ್ 22+, ಇತರೆ 3 ಸ್ಥಾನ ಬಂದರೆ, ಡಿಕೆಶಿ ಲೆಕ್ಕಚಾರದಲ್ಲಿ ಕಾಂಗ್ರೆಸ್ 141+, ಬಿಜೆಪಿ 60+, ಜೆಡಿಎಸ್ 20+, ಇತರೆ 2+ ಸ್ಥಾನಗಳು ಬರಲಿವೆ. ಇಬ್ಬರು ಕಾಂಗ್ರೆಸ್ ನಾಯಕರ ಲೆಕ್ಕಾಚಾರದಲ್ಲೂ ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತವಾಗಿದ್ದು, ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ಟುಡೇಸ್‌ ಚಾಣಕ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ

    ಟುಡೇಸ್‌ ಚಾಣಕ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಿಖರ ಫಲಿತಾಂಶ ನೀಡಿದ್ದ ಟುಡೇಸ್‌ ಚಾಣಕ್ಯ ಈ ಬಾರಿ ಕರ್ನಾಟಕದಲ್ಲಿ (Karnataka Election) ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ (Exit Polls) ಸ್ಪಷ್ಟವಾಗಿ ತಿಳಿಸಿದೆ.

    ಬಿಜೆಪಿ 92 ± 11 ಸ್ಥಾನ, ಕಾಂಗ್ರೆಸ್‌ 120 ± 11 ಸ್ಥಾನ, ಜೆಡಿಎಸ್‌ 12 ± 7 ಸ್ಥಾನ, ಇತರರು 0 ± 3 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಬಿಜೆಪಿ 39% ± 3%, ಕಾಂಗ್ರೆಸ್‌ 42% ± 3%, ಜೆಡಿಎಸ್‌ 13% ± 3%, ಇತರರು 6% ± 3% ರಷ್ಟು ಮತಗಳನ್ನು ಗಳಿಸಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ – ಜನತೆಗೆ ಧನ್ಯವಾದ ತಿಳಿಸಿದ ರಾಗಾ

    ಒಟ್ಟು 224 ಸ್ಥಾನಗಳ ಪೈಕಿ ಬಹುಮತಕ್ಕೆ 113 ಸ್ಥಾನ ಬೇಕು. ಮತದಾನ ಮುಗಿದ ಕೂಡಲೇ ಹಲವು ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಎಕ್ಸಿಟ್‍ಪೋಲ್‍ಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಕೆಲವೊಂದು ಸಂಸ್ಥೆಗಳು ಕಾಂಗ್ರೆಸ್‍ಗೆ ಬಹುಮತ ನೀಡಿದರೆ ಇನ್ನೂ ಕೆಲವು ಬಿಜೆಪಿಗೆ ಅಧಿಕಾರ ಎನ್ನುತ್ತಿವೆ. ಕೆಲ ಸಂಸ್ಥೆಗಳು ಮತ್ತೆ ಅತಂತ್ರ ಫಲಿತಾಂಶದ ಸುಳಿವು ನೀಡಿವೆ.  ಇದನ್ನೂ ಓದಿ: ಈ ಬಾರಿ ಬಿಜೆಪಿ 125ರಿಂದ 130 ಸ್ಥಾನಗಳನ್ನು ಗೆಲ್ಲಲಿದೆ: ಯಡಿಯೂರಪ್ಪ ವಿಶ್ವಾಸ

  • EXIT POLL 2022: ಪಂಚರಾಜ್ಯಗಳ ಬಗ್ಗೆ ಚಾಣಕ್ಯ ಫಲಿತಾಂಶ ಏನು?

    EXIT POLL 2022: ಪಂಚರಾಜ್ಯಗಳ ಬಗ್ಗೆ ಚಾಣಕ್ಯ ಫಲಿತಾಂಶ ಏನು?

    ನವದೆಹಲಿ: ಪಂಚರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆ ಮುಗಿದಿದೆ. ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಗಳು ಕೂಡ ಪ್ರಕಟಗೊಂಡಿವೆ. ಚುನಾವಣೆಗೆ ಸಂಬಂಧಿಸಿದಂತೆ ಟುಡೇಸ್‌ ಚಾಣಕ್ಯ (Today’s Chanakya) ಸಮೀಕ್ಷೆ ಫಲಿತಾಂಶ ಹೀಗಿದೆ.

    ಉತ್ತರ ಪ್ರದೇಶ: ಟುಡೇಸ್‌ ಚಾಣಕ್ಯ ಸಮೀಕ್ಷೆಯಲ್ಲಿ ಬಿಜೆಪಿ 294 ± 19, ಎಸ್‌ಪಿ 105 ± 19, ಬಿಎಸ್‌ಪಿ 2 ± 2, ಕಾಂಗ್ರೆಸ್‌ 1 ± 1, ಇತರೆ 1 ± 1 ಸ್ಥಾನ ಗಳಿಸಬಹುದು ಎಂದು ತಿಳಿಸಿದೆ.

    ಪಂಜಾಬ್‌: ರಾಜ್ಯದಲ್ಲಿ ಎಎಪಿ 100 ± 11, ಕಾಂಗ್ರೆಸ್‌ 10 ± 7, ಎಸ್‌ಎಡಿ 6 ± 5, ಬಿಜೆಪಿ 1 ± 1, ಇತರೆ 0 + 1 ಸ್ಥಾನಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.

    ಉತ್ತರಾಖಂಡ: ಇಲ್ಲಿ ಬಿಜೆಪಿ 43 ± 7, ಕಾಂಗ್ರೆಸ್‌ 24 ± 7, ಇತರೆ 3 ± 3 ಸ್ಥಾನ ಪಡೆಯಬಹುದು ಎಂದು ಸಮೀಕ್ಷೆ ವಿವರಿಸಿದೆ.

  • ಬಿಜೆಪಿಗೆ ಸ್ಪಷ್ಟ ಬಹುಮತ: ಟುಡೇಸ್ ಚಾಣಕ್ಯ ಸಮೀಕ್ಷೆ

    ಬಿಜೆಪಿಗೆ ಸ್ಪಷ್ಟ ಬಹುಮತ: ಟುಡೇಸ್ ಚಾಣಕ್ಯ ಸಮೀಕ್ಷೆ

    ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ನಿಖರ ಭವಿಷ್ಯ ನುಡಿದಿದ್ದ ಟುಡೇಸ್ ಚಾಣಕ್ಯ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ 120 ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದೆ.

    ಬಿಜೆಪಿ 120 ± 11 ಸ್ಥಾನ, ಕಾಂಗ್ರೆಸ್ 73 ± 11, ಜೆಡಿಎಸ್ 26 ± 7, ಇತರೇ 3 ± 3 ಸ್ಥಾನ ಸಿಗಲಿದೆ ಎಂದು ತಿಳಿಸಿದೆ. ಬಿಜೆಪಿಗೆ 39% ± 3% ವೋಟ್ ಬಿದ್ದರೆ, ಕಾಂಗ್ರೆಸ್ 36% ± 3%, ಜೆಡಿಎಸ್ 18% ± 3%, ಇತರೆ 7% ± 3% ವೋಟ್ ಪಡೆಯಲಿದೆ ಎಂದು ತಿಳಿಸಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಟುಡೇಸ್ ಚಾಣಕ್ಯ ಬಿಜೆಪಿ 291 ಸ್ಥಾನಗಳಿಸಲಿದೆ ಎಂದು ಹೇಳಿತ್ತು. ಫಲಿತಾಂಶ ಬಂದಾಗ ಬಿಜೆಪಿ 282 ಸ್ಥಾನ ಗೆದ್ದುಕೊಂಡಿತ್ತು. ಆದರೆ ಬಿಹಾರ ಚುನಾವಣೆಯಲ್ಲಿ ಟುಡೇಸ್ ಚಾಣಕ್ಯದ ಲೆಕ್ಕಾಚಾರ ತಲೆಕೆಳಾಗಿತ್ತು. ಬಿಜೆಪಿ ಮೈತ್ರಿಕೂಟ 155 ಸ್ಥಾನಗಳಿಸಲಿದೆ ಎಂದು ಟುಡೇಸ್ ಚಾಣಕ್ಯ ಹೇಳಿತ್ತು. ಆದರೆ ಫಲಿತಾಂಶ ಬಂದಾಗ ಎನ್‍ಡಿಎ ಮೈತ್ರಿಕೂಟ 61 ಸ್ಥಾನಗಳಿಸಿತ್ತು.

  • ಈ ಬಾರಿ ಅತಂತ್ರ ವಿಧಾನಸಭೆ ಸೃಷ್ಟಿ- ಟುಡೇಸ್ ಚಾಣಕ್ಯ ಸ್ಪಷ್ಟನೆ

    ಈ ಬಾರಿ ಅತಂತ್ರ ವಿಧಾನಸಭೆ ಸೃಷ್ಟಿ- ಟುಡೇಸ್ ಚಾಣಕ್ಯ ಸ್ಪಷ್ಟನೆ

    ಬೆಂಗಳೂರು: ಟುಡೇಸ್ ಚಾಣಕ್ಯ ಹೆಸರಿನಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ಎಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂಬುದಾಗಿ ತಿಳಿದುಬಂದಿದೆ.

    ಈ ಕುರಿತು ಟುಡೇಸ್ ಚಾಣಕ್ಯ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅಕೌಂಟ್ ನಲ್ಲಿ ಸ್ಪಷ್ಟನೆ ನೀಡಿದೆ. ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ವಿಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಇದೊಂದು ಸುಳ್ಳು ಸುದ್ದಿಯಾಗಿದೆ. ದಯವಿಟ್ಟು ಈ ಟ್ವೀಟ್ ಗೆ ಪ್ರತಿಕ್ರಿಯಿಸಿ.. ಧನ್ಯವಾದಗಳು ಅಂತ ತಿಳಿಸಿದೆ.

    ಏನಿದು ಸುದ್ದಿ?: ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದ್ದು, ಮೂರು ಪ್ರಮುಖ ಪಕ್ಷಗಳು 70+ ಸ್ಥಾನಗಳನ್ನು ಪಡೆಯಲಿವೆ. ಆಡಳಿತಾರೂಢ ಕಾಂಗ್ರೆಸ್ ಸಾಕಷ್ಟು ಸಂಖ್ಯೆಯಲ್ಲಿ ಸ್ಥಾನ ಕಳೆದುಕೊಳ್ಳಲಿದ್ದು, 224 ಕ್ಷೇತ್ರಗಳ ಪೈಕಿ 76 ಸ್ಥಾನ ಗಳಿಸಿದೆ. ಬಿಜೆಪಿ 75 ಮತ್ತು ಜೆಡಿಎಸ್-ಬಿಎಸ್‍ಪಿ ಮೈತ್ರಿಕೂಟ 70 ಸ್ಥಾನಗಳಿಸಿದ್ದು, ಮೂರು ಸ್ಥಾನಗಳು ಪಕ್ಷೇತರರಿಗೆ ಸಿಗಲಿದೆ. ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಶೇ. 35 ಬಿಜೆಪಿಗೆ ಶೇ.34 ಮತ್ತು ಜೆಡಿಎಸ್ ಶೇ.27ರಷ್ಟು ಮತಗಳು ಹಂಚಿಕೆಯಾಗಲಿದ್ದು, ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಒಟ್ಟಿನಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ. ಮಾ. 10ರಿಂದ 21ರವರೆಗೆ ರಾಜ್ಯದ 283 ವಿಧಾನಸಭಾ ಕ್ಷೇತ್ರಗಳ 14 ಸಾವಿರ ಮತದಾರರನ್ನು ಸಂಪರ್ಕಿಸಿ ಟುಡೇಸ್ ಚಾಣಕ್ಯ ಈ ವರದಿ ಸಿದ್ಧಪಡಿಸಿದೆ ಎಂಬುದಾಗಿ ಹರದಾಡುತ್ತಿದೆ.

    2014ರ ಲೋಕಸಭಾ ಚುನಾವಣೆ ವೇಳೆ ಎಲ್ಲ ಸಮೀಕ್ಷೆಗಳಿಗಿಂತ ಟುಡೇಸ್ ಚಾಣಕ್ಯ ಸಮೀಕ್ಷೆ ಹೆಚ್ಚು ನಿಖರವಾಗಿತ್ತು. ಬಿಜೆಪಿ 291 ಸ್ಥಾನಗಳಿಸಲಿದ್ದು ಇದರಲ್ಲಿ 14 ಸ್ಥಾನ ಜಾಸ್ತಿ ಅಥವಾ ಕಡಿಮೆ ಪಡೆಯಬಹುದು ಎಂದು ತಿಳಿಸಿತ್ತು.