ಕೋಲ್ಕತ್ತಾ: ಜಾರ್‌ಗ್ರಾಮ್‌ನಲ್ಲಿ (Jhargram) ರಸ್ತೆ ಬದಿಯ ಟೀ ಸ್ಟಾಲ್‍ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ (Bengal Chief Minister) ಮಮತಾ ಬ್ಯಾನರ್ಜಿ (Mamata Banerjee) ಅವರು ಜನರಿಗೆ ಪಕೋಡ ಹಂಚಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಮತಾ ಬ್ಯಾನರ್ಜಿ ಅವರ ಸುತ್ತಾ ಬೆಂಗಾವಲು ಪಡೆ ಸುತ್ತುವರಿದಿದ್ದು, ಗ್ರಾಹಕರಿಗೆ ಸಣ್ಣ ನ್ಯೂಸ್ ಪೇಪರ್ ತುಂಡಿನಲ್ಲಿ ಪಕೋಡವನ್ನು ಸುತ್ತಿಕೊಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಎಲ್ಲರಿಗೂ ಪಕೋಡ ಸಿಕ್ಕಿದ್ಯಾ ಎಂದು ಹೇಳುತ್ತಿರುವುದನ್ನು ಕೇಳಿಸಿಕೊಳ್ಳಬಹುದಾಗಿದೆ. ಮಮತಾ ಬ್ಯಾನರ್ಜಿ ಅವರು ಬುಡಕಟ್ಟು ಜನಾಂಗದ ಕಾರ್ಯಕ್ರಮಕ್ಕಾಗಿ ಜಾರ್‍ಗ್ರಾಮ್‍ಗೆ ಆಗಮಿದ್ದರು. ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ
#WATCH | West Bengal CM Mamata Banerjee stopped her convoy at a roadside tea stall and started serving pakoda to the people, in Jhargram. pic.twitter.com/2b3NKhXj5q
ಮಮತಾ ಬ್ಯಾನರ್ಜಿ ಅವರು, ಬೀದಿಬದಿಯಲ್ಲಿ ತಿಂಡಿಗಳನ್ನು ಮಾರಾಟ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮುನ್ನ ವರ್ಷದ ಆರಂಭದಲ್ಲಿ ಡಾರ್ಜಿಲಿಂಗ್‍ನ ಒಂದು ಸಣ್ಣ ಸ್ಟಾಲ್‍ವೊಂದರಲ್ಲಿ ಮಮತಾ ಬ್ಯಾನರ್ಜಿ ಅವರು ಮೊಮೋವನ್ನು ತಯಾರಿಸಿದ್ದರು.
Live Tv
[brid partner=56869869 player=32851 video=960834 autoplay=true]
ಪಾಟ್ನಾ: ಸ್ವಂತ ಉದ್ಯಮದ (Startup) ಕನಸು ಕಾಣ್ತಿದ್ದ ಬಿಟೆಕ್ ವಿದ್ಯಾರ್ಥಿನಿ (B Tech Student) ತನ್ನ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೊನೆಗೂ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಬಿಹಾರದ (Bihar) ಬಿ-ಟೆಕ್ ವಿದ್ಯಾರ್ಥಿನಿ ವರ್ತಿಕಾ ಸಿಂಗ್ ಫರಿದಾಬಾದ್‌ನಲ್ಲಿ `ಟೀ ಸ್ಟಾಲ್’ (Tea Stall) ಮಳಿಗೆ ಸ್ಥಾಪಿಸುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ. ತನ್ನ ಪದವಿ ಇನ್ನೂ 4 ವರ್ಷ ಇತ್ತು. ಅಷ್ಟು ಸಮಯ ಕಾಯದೇ `ಬಿ-ಟೆಕ್ ಚಾಯ್‌ವಾಲಿ’ ಎಂಬ ಹೆಸರಿನೊಂದಿಗೆ ಚಹಾ ಅಂಗಡಿ ತೆರೆದಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ (Social Media) ಭಾರಿ ಸದ್ದು ಮಾಡ್ತಿದೆ. ಇದನ್ನೂ ಓದಿ: `ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ
ಪ್ರತಿದಿನ ಬೆಳಿಗ್ಗೆ 5:30 ರಿಂದ ರಾತ್ರಿ 9:30ರ ವರೆಗೆ ಚಹಾ ಅಂಗಡಿ ತೆರೆದಿರಲಿದೆ. ಮಸಾಲಾ ಮತ್ತು ಲೆಮೆನ್ ಚಾಯ್‌ಗೆ ತಲಾ 20 ರೂ., ಸಾಮಾನ್ಯ ಚಾಯ್‌ಗೆ 10 ರೂ. ಇರಲಿದೆ ಎಂದು ವೀಡಿಯೋನಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತುಳು ಭಾಷೆಯಲ್ಲೂ ಬರಲಿದೆ ‘ಕಾಂತಾರ’: ಶೆಟ್ರೇ ಉಡಲ್ ಗೆಂದಿಯರ್
ಮುಂದುವರಿದು, ಈ ಹಿಂದೆ ಅರ್ಥಶಾಸ್ತ್ರ ಪದವೀಧರೆ ಪ್ರಿಯಾಂಕ ಗುಪ್ತಾ 2 ವರ್ಷಗಳಿಂದ ಕೆಲಸ ಸಿಗದೇ ಬಿಹಾರದ ರಾಜಧಾನಿಯಲ್ಲಿ ಮಹಿಳಾ ಕಾಲೇಜು ಬಳಿಯೇ ಟೀ ಸ್ಟಾಲ್ ಹಾಕಿದ್ದರು. 2019ರಲ್ಲಿ ತನ್ನ ಪದವಿ ಪೂರ್ಣಗೊಳಿಸಿದ್ದ ಎಂಬಿಎ ಪದವೀಧರ ಪ್ರಫುಲ್ ಬಿಲ್ಲೋರ್ `ಎಂಬಿಎ ಚಾಯ್‌ವಾಲಾ’ ಎಂದೇ ಪ್ರಸಿದ್ಧಿಯಾದರು ಅವರ ಕಥೆ ನನಗೆ ಟೀ ಸ್ಟಾಲ್ ತೆರೆಯಲು ಸ್ಫೂರ್ತಿಯಾಯಿತು ಎಂದು ನೆನೆದಿದ್ದಾರೆ.
ಈ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು 56 ಸಾವಿರಕ್ಕೂ ಅಧಿಕ ಮಂದಿ ವೀಡಿಯೋ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇನ್ನೊಂದೇ ವರ್ಷದಲ್ಲಿ ನೀವು ಬ್ರ‍್ಯಾಂಡ್ ಆಗುತ್ತೀರಿ ಎಂದು ಶ್ಲಾಘಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: ಟೀ ಸ್ಟಾಲ್ ನಿಂದ ಸಂಪಾದಿಸಿದ ಹಣದಿಂದ ಪತ್ನಿಯೊಂದಿಗೆ ವಿಶ್ವ ಪರ್ಯಟನೆ ಮಾಡುತ್ತಾ ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನವಾಗಿದ್ದಾರೆ.
ಕೊಚ್ಚಿ ಮೂಲದ ಟೀ ಸ್ಟಾಲ್ ಮಾಲೀಕ ಕೆ ಆರ್ ವಿಜಯನ್(71) ನಿನ್ನೆ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಟೀ ಸ್ಟಾಲ್ ನಡೆಸಿ ಸಂಪಾದಿಸಿದ ಹಣದಲ್ಲಿ ಅವರು ಪತ್ನಿಯೊಂದಿಗೆ ಪ್ರಪಂಚದಾದ್ಯಂತದ ಪ್ರವಾಸಗಳನ್ನು ಮಾಡಿದ್ದು ಜಾಗತಿಕ ಖ್ಯಾತಿಯನ್ನು ಗಳಿಸಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಕೋಲಾರದಲ್ಲಿ ವರುಣಾರ್ಭಟ- ದಾವಣೆಗೆರೆಯಲ್ಲಿ ದೇಗುಲ ಜಲಾವೃತ
ವಾರಕ್ಕೆ ಎರಡು ಬಾರಿಯಾದರೂ ನನ್ನ ಪರಿಪ್ಪು ವಡಾ, ಪಳಂ ಪೊರಿ ಮತ್ತು ಚಾಯ್ ಒದಗಿಸುವವರು, ಪ್ರಯಾಣದ ಕಥೆಗಳನ್ನು ಹೇಳುವವರು, ಯುವ-ಹೃದಯದ ಗೆಳೆಯ, ಎರ್ನಾಕುಲಂನ ಜಗತ್ತು ಸುತ್ತುವ ಟೀ-ಮಾರಾಟಗಾರ, ವಿಜಯನ್ ನಿಧನರಾದರು. ಅವರು ರಷ್ಯಾದಿಂದ ಹಿಂತಿರುಗಿದ್ದರು, ಅಲ್ಲಿ ಅವರು ಪುಟಿನ್ ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದರು ಎಂದು ಖ್ಯಾತ ಬರಹಗಾರ ಎನ್ ಎಸ್ ಮಾಧವನ್ ಟ್ವೀಟ್ ಮಾಡಿದ್ದಾರೆ. ವಿಜಯನ್ ಅವರು ಪತ್ನಿ, ಇಬ್ಬರು ಪುತ್ರಿಯರಾದ ಶಶಿಕಲಾ, ಉಷಾ ಮತ್ತು ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಬಿಡಿಎ ಅಧಿಕಾರಿಗಳಿಗೆ ಎಸಿಬಿ ಶಾಕ್- ಕಂತೆ ಕಂತೆ ನೋಟು, ಬ್ಯಾಗ್‌ಗಟ್ಟಲೆ ದಾಖಲೆಗಳು ವಶ!
Provider of my parippu vadas, pazham pori and chai on at least twice a week, teller of travel tales, young-at-heart buddy, the globe-trotting tea seller of Ernakulam, Vijayan passes away. He had just returned from Russia, where his wish was to meet Putin. pic.twitter.com/GcbC3PtN7v
ಹಿನ್ನೆಲೆ: ವಿಜಯನ್ ಚಿಕ್ಕವರಿದ್ದಾಗಲೇ ಪ್ರವಾಸ ಮಾಡುವ ಹುಚ್ಚಿತ್ತು. ಅವರು ತನ್ನ ತಂದೆಯೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗುತ್ತಿದ್ದರು. ಆಮೇಲೆ ದೂರದ ಸ್ಥಳಗಳಿಗೆ ಪ್ರವಾಸ ಮಾಡಲು ಶುರು ಮಾಡಿದರು. ಮೊದಲು ದೇಶದೊಳಗೆ ಮತ್ತು ನಂತರ ವಿದೇಶಗಳಿಗೆ. ನಾನು ಯಾವಾಗಲೂ ಪ್ರಯಾಣಿಸಲು ಇಷ್ಟಪಡುತ್ತೇನೆ. ನಾನು ಕೇವಲ 12 ವರ್ಷದವನಿದ್ದಾಗ ನನ್ನ ತಂದೆ ನನ್ನನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಮತ್ತು ನಾನು ಬೆಳೆದ ನಂತರ, ನಾನು ಮುನ್ನಾರ್, ತೇಕ್ಕಡಿ ಅಥವಾ ಕನ್ಯಾಕುಮಾರಿಯಂತ ಸುತ್ತಮುತ್ತಲಿನ ಸ್ಥಳಗಳಿಗೆ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದೆ.
ಹೊಸದನ್ನು ಕಲಿಯಲು ಅಥವಾ ನಾನು ಏನನ್ನಾದರೂ ಅನುಭವಿಸಿದ್ದೇನೆ ಎಂದು ಹೇಳಿಕೊಳ್ಳಲು ನಾನು ಪ್ರಯಾಣಿಸುವುದಿಲ್ಲ. ನಾನು ಇದನ್ನು ಮಾಡುತ್ತೇನೆ ಏಕೆಂದರೆ ನಾನು ಇದನ್ನು ನನ್ನ ಸ್ವಂತ ಕಣ್ಣುಗಳಿಂದ ನೋಡಬೇಕು. ಪ್ರಪಂಚದ ಇತರ ಭಾಗಗಳು ಎಷ್ಟು ಸುಂದರವಾಗಿವೆ ಎಂಬುದರ ಕುರಿತು ಇನ್ನೊಬ್ಬ ವ್ಯಕ್ತಿಯ ಹೇಳುವುದನ್ನು ಕೇಳಿಸಿಕೊಳ್ಳಲು ನನಗೆ ಆಸಕ್ತಿಯಿಲ್ಲ. ನಾನು ಅದನ್ನು ನೋಡಿ ಮತ್ತು ನಾನೇ ನಿರ್ಧರಿಸಲು ಬಯಸುತ್ತೇನೆ. ಮತ್ತು ನಾನು ಪ್ರೀತಿಸುವ ಮಹಿಳೆಯೊಂದಿಗೆ ಜಗತ್ತನ್ನು ನೋಡಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನದ್ದೇನಿದೆ ಎಂದು ವಿಜಯನ್ ಹೇಳಿದ್ದರು.
ಇತ್ತೀಚೆಗೆ ಒರು ಚಿರಿ ಇರು ಚಿರಿ ಬಂಪರ್ ಚಿರಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಂಪತಿ ಮುಂದಿನ ಪ್ರಯಾಣ ಜಪಾನ್ ದೇಶಕ್ಕೆ ಎಂದು ಹೇಳಿದ್ದರು.ತನ್ನ 69 ವರ್ಷದ ಪತ್ನಿ ಮೋಹನ ಅವರೊಂದಿಗೆ ವಿಯೆಟ್ನಾಂ ಮತ್ತು ಕಾಂಬೋಡಿಯಾದ ನಂತರ ಜಪಾನ್ ಪ್ರವಾಸ ಮಾಡಲು ಅವರು ಬಯಸಿದ್ದರು. ದಂಪತಿ ಕಳೆದ ವರ್ಷ(ಚಾಯ ವಿಟ್ಟು ವಿಜಯನ್ಡೇಯುಂ ಮೋಹನಯುಡೆಯುಂ ಲೋಕ ಸಂಚಾರ) ಚಹಾ ಮಾರಿ ವಿಜಯನ್ ಮತ್ತು ಮೋಹನ ಅವರ ಪ್ರಪಂಚ ಸುತ್ತಾಟ ಎಂಬ ಪುಸ್ತಕವನ್ನು ಹೊರತಂದಿದ್ದರು.
ಗಾಂಧಿನಗರ: ಪ್ರಧಾನಿ ಮೋದಿ ಅವರ ಮೊದಲು ಚಹಾ ವ್ಯಾಪಾರಿ ಆಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರು ಟೀ ಮಾಡಿದ ಅಂಗಡಿಯನ್ನು ಸರ್ಕಾರ ಪ್ರವಾಸಿ ತಾಣ ಮಾಡಲು ನಿರ್ಧಾರ ಮಾಡಿದೆ.
ಚಹಾ ಮಾರಿಕೊಂಡು, ದೇಶಕ್ಕೆ ಎರಡು ಬಾರಿ ಪ್ರಧಾನಿ ಅದ ಮೋದಿ ಅವರು, ಅವರ ಆರಂಭಿಕ ಜೀವನದಲ್ಲಿ ಗುಜರಾತ್‍ನ ವಾಡ್ನಾಗರದಲ್ಲಿರುವ ರೈಲು ನಿಲ್ದಾಣದಲ್ಲಿ ಒಂದು ಪುಟ್ಟ ಟೀ ಸ್ಟಾಲ್‍ನಲ್ಲಿ ಟೀ ಮಾರುತ್ತಿದ್ದರು. ಈಗ ಈ ಟೀ ಸ್ಟಾಲ್‍ನ್ನು ಸರ್ಕಾರ ಪ್ರವಾಸಿ ತಾಣ ಮಾಡಲು ಮುಂದಾಗಿದೆ.
ಇತ್ತೀಚಿಗೆ ಈ ಜಾಗಕ್ಕೆ ಬಂದಿದ್ದ ರಾಜ್ಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಅವರು, ಮೋದಿ ಅವರ ಚಹಾ ವ್ಯಾಪಾರ ಮಾಡಿದ್ದ ಈ ಜಾಗವನ್ನು ನಾವು ಪ್ರವಾಸಿ ತಾಣ ಮಾಡಲು ನಿರ್ಧಾರ ಮಾಡಿದ್ದೇವೆ. ಇದನ್ನು ಯಾವ ರೀತಿಯಲ್ಲೂ ಬದಲಾವಣೆ ಮಾಡದೇ ಈ ರೀತಿಯಲ್ಲೇ ಈ ಜಾಗವನ್ನು ಟೂರಿಸ್ಟ್ ಸ್ಪಾಟ್ ಮಾಡಲಿದ್ದೇವೆ ಮತ್ತು ಮೋದಿ ಅವರ ಟೀ ಸ್ಟಾಲ್‍ಗೆ ಗಾಜಿನ ಹೊದಿಕೆ ಮಾಡಿಸಿ ಸಂರಕ್ಷಣೆ ಮಾಡುತ್ತೇವೆ ಎಂದು ಹೇಳಿದ್ದರು.
ತಾನು ಒಬ್ಬ ಟೀ ವ್ಯಾಪಾರಿ ಎಂದು ಹೆಮ್ಮೆ ಇಂದು ಹೇಳಿಕೊಳ್ಳುವ ಪ್ರಧಾನಿ ಮೋದಿ, ವಿರೋಧ ಪಕ್ಷದವರು ಅ ವಿಚಾರದಲ್ಲಿ ಟೀಕೆ ಮಾಡಿದರೆ ಹೌದು ನಾನು ಟೀ ಮಾರಾಟ ಮಾಡಿ ಬಡ ಕುಟುಂದಿಂದ ಬಂದು ಪ್ರಧಾನಿಯಾಗಿದ್ದೇನೆ. ಆದರೆ ನಾನು ಟೀ ಮಾರಿದ್ದೇನೆ ಹೊರತು ದೇಶವನ್ನು ಮಾರಾಟ ಮಾಡಿಲ್ಲ ಎಂದು ಟಾಂಗ್ ಕೊಟ್ಟಿದ್ದರು.
ಪುಣೆ: ಅಚಾನಕ್ಕಾಗಿ ವ್ಯಕ್ತಿ ಮೇಲೆ ಟೀ ಬಿದ್ದಿದ್ದಕ್ಕೆ 19 ವರ್ಷದ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆಯೊಂದು ಪುಣೆ ವಿಶ್ವವಿದ್ಯಾಲಯದ ಸಮೀಪ ನಡೆದಿದೆ.
ಮೃತ ದುರ್ದೈವಿ ಯುವಕನನ್ನು ಅಕ್ತರ್ ಖಾನ್ ಎಂಬುವುದಾಗಿ ಗುರುತಿಸಲಾಗಿದೆ. ಘಟನೆಯಿಂದ ಅಕ್ತರ್ ಗೆಳೆಯ 21 ವರ್ಷದ ಕರೀಂ ಸೈಯದ್ ಎಂಬಾತನ ಕೈ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಘಟನೆ ಸಂಬಂಧಿಸಿದಂತೆ ಮತ್ತೋರ್ವ ಗೆಳೆಯ ಅಮ್ಜಿತ್ ನಡಾಫ್ ದೂರು ದಾಖಲಿಸಿದ್ದು, ಚತುಶ್ರ್ರಿಂಗಿ ಪೊಲೀಸರು ಐಪಿಸಿ ಸೆಕ್ಷನ್ 302(ಕೊಲೆ) ಹಾಗೂ 307(ಕೊಲೆಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
`ಮನೆಗೆ ವಾಪಾಸ್ಸಾಗೋ ಮೊದಲು ನಾವು ಮೂವರು ಗೆಳೆಯರು ಟೀ ಕುಡಿಯಲೆಂದು ಹೋಗಿದ್ದೆವು. ಅಂತೆಯೇ ಟೀ ಸ್ಟಾಲ್ ನಲ್ಲಿ ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಆಟೋ-ರಿಕ್ಷಾದಿಂದಿಳಿದ ವ್ಯಕ್ತಿ ನೇರವಾಗಿ ಅದೇ ಟೀ ಸ್ಟಾಲ್ ಗೆ ಬಂದ್ರು. ಇದೇ ವೇಳೆ ಗೆಳೆಯ ಅಕ್ತರ್ ಕೈಲಿದ್ದ ಗ್ಲಾಸ್ ನಿಂದ ಅಚಾನಕ್ ಆಗಿ ಟೀ ಚೆಲ್ಲಿತ್ತು. ಇದು ಆ ವ್ಯಕ್ತಿಯ ಬಟ್ಟೆಯ ಮೇಲೆ ಬಿತ್ತು. ಇದರಿಂದ ಕೋಪಗೊಂಡ ಆತ ಬೈಯಲು ಶುರು ಮಾಡಿದ. ಆದ್ರೆ ಅಕ್ತರ್ ಕ್ಷಮಿಸುವಂತೆ ಪರಿಪರಿಯಾಗಿ ಬೇಡಿಕೊಂಡರೂ ಸುಮ್ಮನಾಗದ ವ್ಯಕ್ತಿ ಹರಿತವಾದ ಚೂರಿಯಿಂದ ಅಕ್ತರ್ ಗೆ ಇರಿದಿದ್ದಾನೆ. ಈ ವೇಳೆ ನಾನು ಅಲ್ಲಿಂದ ಓಡಿ ಪಾರಾಗಿದ್ದು, ಅಕ್ತರ್ ಹಾಗೂ ಗೆಳೆಯ ಕರೀಂಗೆ ಗಂಭೀರ ಗಾಯಗಳಾಗಿದೆ’ ಅಂತ ನಡಾಫ್ ಘಟನೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ.
ಮೃತ ಯುವಕ ನಿರುದ್ಯೋಗಿಯಾಗಿದ್ದು, ಘಟನೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುವುದು. ಅಲ್ಲದೇ ಆರೋಪಿಯನ್ನು ಕೂಡ ಈ ಮೂಲಕ ಶೀಘ್ರವೇ ಪತ್ತೆ ಹಚ್ಚಲಾಗುವುದು ಅಂತ ಚತುಶ್ರ್ರಿಂಗಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ದನ್ಯಾನಂದ್ ಧೋಮ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ನವದೆಹಲಿ: ಇಲ್ಲಿನ ಓಕ್ಲಾ ಫೇಸ್ 1ರ ಸಮೀಪದಲ್ಲಿರೋ ಟೀ ಸ್ಟಾಲ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಐವರು ಮೃತಪಟ್ಟು, ಹಲವು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು, ರಾತ್ರಿ 10 ಗಂಟೆಗೆ ಮಾಲೀಕ ಸ್ಟಾಲ್ ಗೆ ಬೀಗ ಹಾಕಿ ಹೋದ ಬಳಿಕ ಸಿಲಿಂಡರ್ ರೆಗ್ಯುಲೇಟರ್ ನಿಂದ ಗ್ಯಾಸ್ ಲೀಕ್ ಆಗಿ ಸ್ಫೋಟವಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಮಾಹಿತಿ ತಿಳಿದ ತಕ್ಷಣವೇ 4 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಸ್ಟಾಲ್ ಹಿಂಬದಿಯೇ ಮಾಲೀಕ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಇನ್ನು ಸ್ಫೋಟದ ಪರಿಣಾಮ ಇತರ ಕಟ್ಟಡಗಳಿಗೂ ಹಾನಿಯಾಗಿದೆ ಎಂಬುವುದಾಗಿ ವರದಿಯಾಗಿದೆ.
ಘಟನೆ ಬಗ್ಗೆ ಡಿಸಿಪಿ ರೋಮಿಲ್ ಬಾನಿಯಾ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ 8 ಮಂದಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದ್ರೆ ನಾಲ್ವರು ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ರು ಎಂದು ತಿಳಿಸಿದ್ದಾರೆ
ನಿರ್ಲಕ್ಷ್ಯ ಆರೋಪದ ಮೇಲೆ ಟೀ ಸ್ಟಾಲ್ ಮಾಲೀಕನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಟೀ ಸ್ಟಾಲ್ ಮಾಲೀಕ ಕೂಡ ಗಾಯಗೊಂಡಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.