Tag: ಟೀ ವ್ಯಾಪಾರಿ

  • ಟೀ ಮಾರುತ್ತಿದ್ದ ಅವತಾರ್ ಸಿಂಗ್ ಉತ್ತರ ದೆಹಲಿಯ ಮೇಯರ್

    ಟೀ ಮಾರುತ್ತಿದ್ದ ಅವತಾರ್ ಸಿಂಗ್ ಉತ್ತರ ದೆಹಲಿಯ ಮೇಯರ್

    ನವದೆಹಲಿ: ಜೀವನ ನಿರ್ವಹಣೆಗಾಗಿ ಟೀ ಮಾರುತ್ತಿದ್ದ ಬಿಜೆಪಿಯ ಕಾರ್ಪೋರೇಟರ್ ಅವತಾರ್ ಸಿಂಗ್ ಅವಿರೋಧವಾಗಿ ಉತ್ತರ ದೆಹಲಿಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

    ಉತ್ತರ ದೆಹಲಿ ಮೇಯರ್ ಸ್ಥಾನಕ್ಕೇರಿದ ಮೊದಲ ದಲಿತ ಸಿಖ್ ನಾಯಕ ಎಂಬ ಹೆಗ್ಗಳಿಕೆಗೆ ಅವತಾರ್ ಸಿಂಗ್ ಪಾತ್ರರಾಗಿದ್ದಾರೆ.

    ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಅವರು ಅವತಾರ್ ಸಿಂಗ್ ಹೆಸರನ್ನು ನಾಮನಿರ್ದೆಶನ ಮಾಡಿದ್ದರು. ಸೋಮವಾರ ನಡೆದ ಚುನಾವಣೆಯಲ್ಲಿ ಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನಗರ ನಿಗಮದ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

    ಈ ವಿಚಾರವಾಗಿ ದೆಹಲಿ ಬಿಜೆಪಿಯ ಹಿರಿಯ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿ, ಅವತಾರ್ ಸಿಂಗ್ ಅವರು ಬಿಜೆಪಿಯ ಅತ್ಯಂತ ಶ್ರಮಜೀವಿ ಕಾರ್ಯಕರ್ತರು. ಚಹಾ ಮಾರುತ್ತಿದ್ದ ಸಿಂಗ್ ಅವರು ಕಠಿಣ ಪರಿಶ್ರಮದಿಂದ ಮೇಯರ್ ಸ್ಥಾನಕ್ಕೇರಿದ್ದಾರೆ ಎಂದು ಹೇಳಿ ಶ್ಲಾಘಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅವತಾರ್ ಸಿಂಗ್ ಅವರಿಗೆ ಶುಭಕೋರಿದ್ದಾರೆ. ಅಷ್ಟೇ ಅಲ್ಲದೆ ದಕ್ಷಿಣ ದೆಹಲಿ ಹಾಗೂ ಪೂರ್ವ ದೆಹಲಿಗೆ ಕ್ರಮವಾಗಿ ಮೇರಯ್ ಆಗಿ ಆಯ್ಕೆಯಾದ ಸುನಿತಾ ಕಾಂಗ್ರಾ ಮತ್ತು ಅಂಜು ಕಮಲ್‍ನಾಥ್ ಅವರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    ಮೇಯರ್ ಆಯ್ಕೆಯಾದವರು ಒಂದು ವರ್ಷ ಅಧಿಕಾರ ನಡೆಸಲಿದ್ದಾರೆ. ದೆಹಲಿ ಕಾರ್ಪೋರೇಷನ್‍ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದೆ. ಮೂರನೇ ವರ್ಷ ಪರಿಶಿಷ್ಟ ಜಾತಿಯ ಅಭ್ಯರ್ಥಿಯನ್ನು ಮೇಯರ್ ಮಾಡಬೇಕಿತ್ತು. ಹೀಗಾಗಿ ಬಿಜೆಪಿಯು ಅವತಾರ್ ಸಿಂಗ್ ಸೇರಿದಂತೆ ಮೂವರು ಪರಿಶಿಷ್ಟ ಜಾತಿಯ ನಾಯಕರಿಗೆ ಮೇಯರ್ ಅವಕಾಶ ಕಲ್ಪಿಸಿದೆ.

  • ಚಲಿಸುತ್ತಿದ್ದ ರೈಲಿಗೆ ಸಿಲುಕಿ ಟೀ ವ್ಯಾಪಾರಿಯ ಬಲಗಾಲು ಕಟ್

    ಚಲಿಸುತ್ತಿದ್ದ ರೈಲಿಗೆ ಸಿಲುಕಿ ಟೀ ವ್ಯಾಪಾರಿಯ ಬಲಗಾಲು ಕಟ್

    ತುಮಕೂರು: ಚಲಿಸುತ್ತಿದ್ದ ರೈಲಿಗೆ ಸಿಲುಕಿ ರೈಲಿನಲ್ಲಿ ಚಹಾ ವ್ಯಾಪಾರ ಮಾಡ್ತಿದ್ದ ಯುವಕನ ಕಾಲು ತುಂಡಾದ ಘಟನೆ ತುಮಕೂರಿನ ತಿಪಟೂರು ತಾಲೂಕಿನ ಹೊನ್ನವಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಕಾಲು ಕಳೆದುಕೊಂಡ ಯುವಕ 20 ವರ್ಷದ ನರಸಿಂಹ ಎಂದು ತಿಳಿದುಬಂದಿದೆ. ಹುಬ್ಬಳಿಯಿಂದ ಬೆಂಗಳೂರಿಗೆ ಹೋಗ್ತಿದ್ದ ಮಹಾಲಕ್ಷ್ಮಿ ರೈಲಿಗೆ ಸಿಲುಕಿದ ಪರಿಣಾಮ ನರಸಿಂಹ ಅವರ ಬಲಗಾಲು ಮೊಣಕಾಲಿನವರೆಗೆ ಸಂಪೂರ್ಣ ತುಂಡಾಗಿದೆ. ಎಡಗಾಲು ಕೂಡ ಗಾಯಗೊಂಡಿದೆ.

    ಗಾಯಾಳು ನರಸಿಂಹರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಗೆ ರವಾನಿಸಲಾಗಿದೆ.

  • ತುಮಕೂರು: ಮಾಮೂಲಿ ಕೊಡ್ಲಿಲ್ಲವೆಂದು ಬಡ ಟೀ ವ್ಯಾಪಾರಿ ಮೇಲೆ ಪಿಎಸ್‍ಐ ಹಲ್ಲೆ

    ತುಮಕೂರು: ಮಾಮೂಲಿ ಕೊಡ್ಲಿಲ್ಲವೆಂದು ಬಡ ಟೀ ವ್ಯಾಪಾರಿ ಮೇಲೆ ಪಿಎಸ್‍ಐ ಹಲ್ಲೆ

    ತುಮಕೂರು: ಇತ್ತೀಚೆಗಷ್ಟೆ ಕ್ರಷರ್ ಮಾಲೀಕರಿಂದ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ ತುಮಕೂರು ಜಿಲ್ಲೆ ತಿಪಟೂರು ಗ್ರಾಮಾಂತರ ಪಿಎಸ್‍ಐ ಶ್ರೀಕಾಂತ್ ಅವರ ಇನ್ನೊಂದು ದರ್ಪ ಬಯಲಾಗಿದೆ. ಮಾಮೂಲಿ ಕೊಡ್ಲಿಲ್ಲ ಅಂತಾ ಅಮಾಯಕ, ಬಡ ಟೀ ಅಂಗಡಿ ಮಾಲೀಕನ ಮೇಲೆ ಪಿಎಸ್‍ಐ ದರ್ಪ ತೋರಿದ್ದಾರೆ.

    ಬಿದರೆಗುಡಿಯ ಅಂಗಡಿ ಮಾಲೀಕ ನಾರಾಯಣ್ ಕುಮಾರ್‍ಗೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇವರ ಜೊತೆ ಟೀ ಕುಡಿಯುತ್ತಿದ್ದ ಇಬ್ಬರು ಗ್ರಾಹಕರಿಗೂ ಥಳಿಸಿದ್ದಾರೆ. ಈ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕಳೆದ 15 ವರ್ಷಗಳಿಂದ ನಾರಾಯಣ ಕುಮಾರ್ ರಾತ್ರಿ ವೇಳೆ ಟೀ ಅಂಗಡಿ ನಡೆಸಿಕೊಂಡು ಬಂದಿದ್ದಾರೆ. ಇನ್ಮುಂದೆ ರಾತ್ರಿ ವ್ಯಾಪಾರ ಮಾಡೋದಾದ್ರೆ ತಿಂಗಳಿಗೆ ಐದು ಸಾವಿರ ರೂಪಾಯಿ ಲಂಚ ಕೊಡಬೇಕು ಎಂದು ಪಿಎಸ್‍ಐ ಬೇಡಿಕೆ ಇಟ್ಟಿದ್ರು ಎನ್ನಲಾಗಿದೆ. ಲಂಚ ನೀಡಲು ನಿರಾಕರಿಸಿದಾಗ ಸಿಬ್ಬಂದಿಯೊಂದಿಗೆ ಬಂದು ದರ್ಪ ತೋರಿದ್ದಾರೆ.

    https://www.youtube.com/watch?v=MZF1PSuVnDA&feature=youtu.be