Tag: ಟೀಮ್ ಇಂಡಿಯಾ

  • ನೋವಿನಲ್ಲೂ ಫಿಫ್ಟಿ ಹೊಡೆದ  ಪಂತ್‌ – ಏಕದಿನದಂತೆ ಬ್ಯಾಟ್‌ ಬೀಸಿದ ಇಂಗ್ಲೆಂಡ್‌

    ನೋವಿನಲ್ಲೂ ಫಿಫ್ಟಿ ಹೊಡೆದ ಪಂತ್‌ – ಏಕದಿನದಂತೆ ಬ್ಯಾಟ್‌ ಬೀಸಿದ ಇಂಗ್ಲೆಂಡ್‌

    ಮ್ಯಾಂಚೆಸ್ಟರ್‌: ಭಾರತದ (Team India) ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡಿದರೆ ಇಂಗ್ಲೆಂಡ್‌ (England) ಬ್ಯಾಟರ್‌ಗಳು ಏಕದಿನದಂತೆ ಬ್ಯಾಟ್‌ ಬೀಸಿದ್ದಾರೆ. ಎರಡನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್‌ 46 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 225 ರನ್‌ಗಳಿಸಿದ್ದು 133 ರನ್‌ ಹಿನ್ನಡೆಯಲ್ಲಿದೆ.

    ಇನ್ನಿಂಗ್ಸ್‌ ಆರಂಭಿಸಿದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ 195 ಎಸೆತಗಳಲ್ಲಿ 166 ರನ್‌ ಜೊತೆಯಾಟವಾಡಿ ಭದ್ರವಾದ ಅಡಿಪಾಯ ಹಾಕಿದರು. ಜ್ಯಾಕ್ ಕ್ರಾಲಿ 84 ರನ್‌(113 ಎಸೆತ, 13 ಬೌಂಡರಿ, 1 ಸಿಕ್ಸ್‌) ಹೊಡೆದರೆ ಬೆನ್ ಡಕೆಟ್ 94 ರನ್‌(100 ಎಸೆತ, 13 ಬೌಂಡರಿ) ಹೊಡೆದು ಔಟಾದರು.

    ಕ್ರೀಸ್‌ನಲ್ಲಿ ಓಲಿ ಪೋಪ್ 20 ರನ್‌, ಜೋ ರೂಟ್‌ 11 ರನ್‌ ಗಳಿಸಿದ್ದು ಮೂರನೇ ದಿನ ಆಟ ಆಡಲಿದ್ದಾರೆ. ರವೀಂದ್ರ ಜಡೇಜಾ ಮತ್ತು ಇಂದು ಟೆಸ್ಟ್‌ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಅನ್ಶುಲ್ ಕಾಂಬೋಜ್ ತಲಾ ಒಂದು ವಿಕೆಟ್‌ ಪಡೆದರು. ಇದನ್ನೂ ಓದಿ: WWE ಲೆಜೆಂಡ್‌, ಕುಸ್ತಿಪಟು ಹಲ್ಕ್ ಹೊಗನ್ ನಿಧನ

    ಮೊದಲ ದಿನ 4 ವಿಕೆಟ್‌ ಕಳೆದುಕೊಂಡು 264 ರನ್‌ ಗಳಿಸಿದ್ದ ಭಾರತ ಇಂದು ಆ ಮೊತ್ತಕ್ಕೆ 6 ವಿಕೆಟ್‌ಗಳ ಸಹಾಯದಿಂದ 94 ರನ್‌ ಸೇರಿಸಿತು. ಎರಡನೇ ದಿನ ಉತ್ತಮ ಜೊತೆಯಾಟ ಬಾರದ ಕಾರಣ ಭಾರತ ಅಂತಿಮವಾಗಿ 114.1 ಓವರ್‌ಗಳಲ್ಲಿ 358 ರನ್‌ಗಳಿಗೆ ಆಲೌಟ್‌ ಆಯ್ತು.  ಇದನ್ನೂ ಓದಿಏಷ್ಯಾಕಪ್ ಆಯೋಜನೆಗೆ ಬಿಸಿಸಿಐ ಒಪ್ಪಿಗೆ  ಸೆಪ್ಟೆಂಬರ್‌ನಲ್ಲಿ ಭಾರತ, ಪಾಕ್ ಮುಖಾಮುಖಿ?

     

    ಜಡೇಜಾ ನಿನ್ನೆಯ ಮೊತ್ತಕ್ಕೆ 1 ರನ್‌ ಸೇರಿಸಿ 20 ರನ್‌ಗಳಿಗೆ ಔಟಾದರೆ ಶಾರ್ದೂಲ್‌ ಠಾಕೂರ್‌ 41 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ವಾಷಿಂಗ್ಟನ್‌ ಸುಂದರ್‌ 27 ರನ್‌ಗಳಿಸಿದರು. 37 ರನ್‌ ಗಳಿಸಿದ್ದಾಗ ಗಂಭೀರವಾಗಿ ಗಾಯಗೊಂಡು ಮೈದಾನ ತೊರೆದಿದ್ದ ರಿಷಭ್‌ ಪಂತ್‌ (Rishabh Pant) ಇಂದು 54 ರನ್‌(74 ಎಸೆತ, 3 ಬೌಂಡರಿ, 2 ಸಿಕ್ಸ್‌) ಸಿಡಿಸಿ 9ನೇಯವರಾಗಿ ಔಟಾದರು.

    ಇಂಗ್ಲೆಂಡ್‌ ಪರ ಬೆನ್‌ ಸ್ಟೋಕ್ಸ್‌ 5 ವಿಕೆಟ್‌ ಪಡೆದರೆ ಜೋಫ್ರಾ ಅರ್ಚರ್‌ 3 ವಿಕೆಟ್‌, ಕ್ರಿಸ್‌ ವೋಕ್ಸ್‌ ಮತ್ತು ಲಿಯಾಮ್ ಡಾಸನ್ ತಲಾ 1 ವಿಕೆಟ್‌ ಪಡೆದರು. ಇದನ್ನೂ ಓದಿ ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌

     

  • ಭಾರತ ಕ್ರಿಕೆಟ್ ತಂಡ ಫೈನಲ್ ಗೆದ್ದರೆ ಬೆತ್ತಲಾಗುವೆ ಎಂದ ನಟಿ ರೇಖಾ

    ಭಾರತ ಕ್ರಿಕೆಟ್ ತಂಡ ಫೈನಲ್ ಗೆದ್ದರೆ ಬೆತ್ತಲಾಗುವೆ ಎಂದ ನಟಿ ರೇಖಾ

    ನಿನ್ನೆಯಷ್ಟೇ ಭಾರತ ಕ್ರಿಕೆಟ್ ತಂಡ (Team India) ಸೆಮಿ ಫೈನಲ್ ಗೆದ್ದು, ಫೈನಲ್ ತಲುಪಿದೆ. ಇಡೀ ದೇಶಕ್ಕೆ ದೇಶವೇ ಟೀಮ್ ಬಗ್ಗೆ ಕೊಂಡಾಡುತ್ತಿದೆ. ಆದರೆ, ನಟಿ ತೆಲುಗಿನ ನಟಿ ರೇಖಾ ಬೊಜ್ (Rekha Boj) ಮತ್ತೊಂದು ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

    ಭಾರತ ಕ್ರಿಕೆಟ್ (Cricket) ತಂಡವು ಫೈನಲ್ ನಲ್ಲಿ ಗೆದ್ದರೆ ತಾವು ವಿಶಾಖಪಟ್ಟಣಂ ಬೀಚ್ ನಲ್ಲಿ ಬೆತ್ತಲೆಯಾಗಿ (Nude) ನಡೆಯುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    12 ವರ್ಷಗಳ ಹಿಂದೆ ಬಾಲಿವುಡ್ ನಟಿ ಪೂನಂ ಪಾಂಡೆ ಅವರು ಇಂಥದ್ದೊಂದು ಸ್ಟೇಟ್ ಮೆಂಟ್ ಕೊಟ್ಟು ಪ್ರಸಿದ್ಧಿಯಾಗಿದ್ದರು. ಭಾರತ ತಂಡ ವಿಶ್ವಕಪ್ ಗೆದ್ದರೆ ಮುಂಬೈ ಬೀದಿಗಳಲ್ಲಿ ಬೆತ್ತಲೆಯಾಗಿ ಓಡಾಡುತ್ತೇನೆ ಎಂದು ಹೇಳಿ ಬಿಟ್ಟಿ ಪ್ರಚಾರ ಪಡೆದಿದ್ದರು. ಇದೀಗ ಇಂಥದ್ದೇ ಹಾದಿಯನ್ನು ತುಳಿದಿದ್ದಾರೆ ನಟಿ ರೇಖಾ.

    ರೇಖಾ ಆಗಿರುವ ಪೋಸ್ಟ್ ಗ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಗೆಲ್ಲುತ್ತದೆ. ಅಂದು ನಾವು ಬೀಚ್ ನಲ್ಲಿ ಕಾಯುತ್ತೇವೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ದಿನಾಂಕ ಮತ್ತು ಸಮಯವನ್ನು ತಿಳಿಸಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಮಾತಿಗೆ ತಪ್ಪಬಾರದು ಎಂದು ವಿನಂತಿಸಿದ್ದಾರೆ.

     

    ಸೋಷಿಯಲ್ ಮೀಡಿಯಾದಲ್ಲಿ ಸದಾ ವಿವಾದಾತ್ಮಕ ಪೋಸ್ಟ್ ಮಾಡುವ ಮೂಲಕ ಸುದ್ದಿಯಾಗುವ ರೇಖಾ, ರಂಗೀಲಾ, ಸ್ವಾತಿ ಚಿನುಕು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ಸಿಕ್ಕಿಲ್ಲ. ಹೀಗಾಗಿ ಪದೇ ಪದೇ ವಿವಾದಾತ್ಮಕ ಪೋಸ್ಟ್ ಗಳನ್ನು ಇವರು ಹಂಚಿಕೊಳ್ಳುತ್ತಲೇ ಇರುತ್ತಾರೆ.

  • T20 ವಿಶ್ವಕಪ್‍ನಿಂದಲೂ ಜಡೇಜಾ ಔಟ್?

    T20 ವಿಶ್ವಕಪ್‍ನಿಂದಲೂ ಜಡೇಜಾ ಔಟ್?

    ಮುಂಬೈ: ಗಾಯದ ಸಮಸ್ಯೆಯಿಂದ ಏಷ್ಯಾಕಪ್‍ನಿಂದ ಹೊರಗುಳಿದಿರುವ ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ ಇದೀಗ 2022ರ ಟಿ20 ವಿಶ್ವಕಪ್‍ನಿಂದಲೂ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

    TEAM INDIA

    ಮೊಣಕಾಲಿನ ಗಾಯದಿಂದಾಗಿ ಏಷ್ಯಾಕಪ್‍ನಿಂದ ಹೊರನಡೆದಿರುವ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ 3 ತಿಂಗಳಕಾಲ ವಿಶ್ರಾಂತಿಯಲ್ಲಿರಬೇಕಾದ ಅನಿವಾರ್ಯತೆ ಇದೆ ಅಲ್ಲದೇ ಕೆಲ ಕೇಸ್‍ಗಳಲ್ಲಿ 6 ತಿಂಗಳು ಇರಬೇಕಾಗುತ್ತದೆ ಎಂದು ಎನ್‍ಸಿಎ ವೈದ್ಯರ ತಂಡ ಹೇಳಿದೆ. ಹಾಗಾಗಿ ಜಡೇಜಾ ಟಿ20 ವಿಶ್ವಕಪ್ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ನಾಳೆ ಸೂಪರ್ ಸಂಡೇ – ಕದನ ಕುತೂಹಲ ಮೂಡಿಸಿದ ಇಂಡೋ-ಪಾಕ್ ಹೋರಾಟ

    ಎನ್‍ಸಿಎ ವೈದ್ಯಕೀಯ ತಂಡದ ಪ್ರಕಾರ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆಯಬೇಕು. ಈ ಗಾಯ ವಾಸಿಯಾಗಲು 3 ತಿಂಗಳು ವಿಶ್ರಾಂತಿ ಅತ್ಯಗತ್ಯ. ಕೆಲವೊಮ್ಮೆ 6 ತಿಂಗಳು ವಿಶ್ರಾಂತಿ ಪಡೆಯುವ ಅನಿವಾರ್ಯತೆ ಇರುತ್ತದೆ. ಹಾಗಾಗಿ ಜಡೇಜಾ ಕುರಿತು ಈಗಲೇ ಯಾವುದೇ ಮಾಹಿತಿ ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ಜಡೇಜಾ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರಗಳಲ್ಲಿ ಒಬ್ಬರು. ತನ್ನ ಬಿಗ್‍ಹಿಟ್ ಮತ್ತು ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುವ ತಾಕತ್ ಜಡೇಜಾಗಿದೆ. ಅಲ್ಲದೇ ಕೆಲ ವರ್ಷಗಳಿಂದ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಮೂರು ಮಾದರಿ ಕ್ರಿಕೆಟ್‍ನಲ್ಲೂ ಜಡೇಜಾ ತಂಡಕ್ಕೆ ನೆರವಾಗುತ್ತಿದ್ದಾರೆ. ಇದೆಲ್ಲದರ ಜೊತೆ ಜಡೇಜಾ ಟೀಂ ಇಂಡಿಯಾದ ಗನ್ ಫೀಲ್ಡರ್. ಪ್ರಸ್ತುತ ತಂಡದಲ್ಲಿರುವ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಜಡೇಜಾ ನಂಬರ್ 1 ಸ್ಥಾನದಲ್ಲಿ ನಿಲ್ಲುತ್ತಾರೆ. ಹಾಗಾಗಿ ಜಡೇಜಾ ತಂಡದಿಂದ ಹೊರಗುಳಿದರೆ ಭಾರತ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಇದನ್ನೂ ಓದಿ: 8 ಎಕರೆ ಜಮೀನಿನಲ್ಲಿ ಅನುಷ್ಕಾ-ವಿರಾಟ್ ಫಾರ್ಮ್ ಹೌಸ್: ದುಡ್ಡಿದ್ದೋರ ದುನಿಯಾ ಎಂದ ಫ್ಯಾನ್ಸ್

    2022ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್, ನವೆಂಬರ್‌ನಲ್ಲಿ ನಡೆಯಲಿದೆ. ಈಗಾಗಲೇ ಕೆಲ ದೇಶಗಳು ಟಿ20 ವಿಶ್ವಕಪ್‍ಗಾಗಿ ತಂಡವನ್ನು ಆಯ್ಕೆ ಮಾಡಿದೆ. ಭಾರತ ತಂಡ ಆಯ್ಕೆ ಇನ್ನಷ್ಟೇ ಮಾಡಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

    ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

    ಮುಂಬೈ: ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ.

    ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರ ಕಾರ್ಯಾವಧಿ ಮುಗಿಯಲಿದೆ. ವಿಶ್ವಕಪ್ ಬೆನ್ನಲ್ಲೇ ಟೀಮ್ ಇಂಡಿಯಾ ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ದ ಸರಣಿ ಆಡಬೇಕಿದ್ದು, ಈ ಸರಣಿಯೊಂದಿಗೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಕೆಲಸ ಶುರುವಾಗಲಿದೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

    ಈ ಹಿಂದೆ ಅಂಡರ್ 19 ಟೀಮ್ ಇಂಡಿಯಾ ಹಾಗೂ ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರಾಹುಲ್ ದ್ರಾವಿಡ್ ಕಳೆದ ಬಾರಿ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದ ಹಂಗಾಮಿ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಕೂಡ ರವಿ ಶಾಸ್ತ್ರಿ ಬಳಿಕ ಭಾರತ ತಂಡದ ಕೋಚ್ ಆಗಿ ದ್ರಾವಿಡ್ ಅವರನ್ನು ನೇಮಿಸಲು ಆಸಕ್ತಿವಹಿಸಿದ್ದರು. ಇದೀಗ ಅಂತಿಮವಾಗಿ ಅವಿರೋಧವಾಗಿ ದ್ರಾವಿಡ್ ಅವರನ್ನು ಬಿಸಿಸಿಐ ಟೀಮ್ ಇಂಡಿಯಾ ಕೋಚ್ ಆಗಿ ಆಯ್ಕೆ ಮಾಡಿದೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಜಯ್ ಸೇತುಪತಿ ಪಿಎ ಮೇಲೆ ಹಲ್ಲೆಗೆ ಯತ್ನ

    ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ದೊಡ್ಡ ಗೌರವ. ನಾನು ಈ ಪಾತ್ರಕ್ಕಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ಶಾಸ್ತ್ರಿ ಅವರ ಅಡಿಯಲ್ಲಿ, ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ತಂಡದೊಂದಿಗೆ ಕೆಲಸ ಮಾಡಲು ನಾನು ಭಾವಿಸುತ್ತೇನೆ. NCA, U19  ಮತ್ತು ಇಂಡಿಯಾ ಎ ತಂಡಗಳಲ್ಲಿ ನಾನು ಕಾರ್ಯ ನಿರ್ವಹಿಸಿದ್ದೇನೆ. ಮುಂದಿನ ಎರಡು ವರ್ಷಗಳಲ್ಲಿ ಪ್ರಮುಖ ಟೂರ್ನಿಗಳಿವೆ. ಈ ಟೂರ್ನಿಗಾಗಿ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ದ್ರಾವಿಡ್ ಸಂತಸ ವ್ಯಕ್ತಪಡಿಸಿದ್ದಾರೆ.

  • ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕುಂಬ್ಳೆ, ಲಕ್ಷ್ಮಣ್ !

    ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕುಂಬ್ಳೆ, ಲಕ್ಷ್ಮಣ್ !

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಕೋಚ್ ಸ್ಥಾನಕ್ಕೆ ಅರ್ಜಿ ಹಾಕುವಂತೆ ಭಾರತದ ದಿಗ್ಗಜರಾದ ಅನಿಲ್ ಕುಂಬ್ಳೆ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿಗೆ ಬಿಸಿಸಿಐ ಸೂಚಿಸಬಹುದು ಎಂದು ವರದಿಯಾಗಿದೆ.

    ಈ ಬಾರಿಯ ಟಿ20 ವಿಶ್ವಕಪ್ ಬಳಿಕ ಈಗಿನ ಕೋಚ್ ರವಿ ಶಾಸ್ತ್ರಿ ಅವಧಿ ಪೂರ್ಣಗೊಳ್ಳಲಿದ್ದು, ಕೋಚ್ ಹುದ್ದೆಗೆ ಕುಂಬ್ಳೆ ಅಥವಾ ಲಕ್ಷ್ಮಣ್ ಗೆ ಬಿಸಿಸಿಐ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.

    ಭಾರತದ ದಿಗ್ಗಜ ಬೌಲರ್ ಕರ್ನಾಟಕದ ಅನಿಲ್ ಕುಂಬ್ಳೆ ಈ ಹಿಂದೆ 2016-2017ರಲ್ಲಿ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ಥಾನದ ವಿರುದ್ಧ ಹೀನಾಯವಾಗಿ ಸೋಲು ಕಂಡಿತ್ತು. ಇದನ್ನೂ ಓದಿ:ನಾಳೆಯಿಂದ ದುಬೈನಲ್ಲಿ ಐಪಿಎಲ್ ಕಲರವ

    ಪಾಕಿಸ್ಥಾನದ ವಿರುದ್ಧ ಸೋಲಿನ ಬಳಿಕ ಅನಿಲ್ ಕುಂಬ್ಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದು ಈಗ ಇತಿಹಾಸ. ಬಿಸಿಸಿಐ ಬಾಸ್ ಆಗಿರುವ ಸೌರವ್ ಗಂಗೂಲಿ ಕೋಚ್ ಹುದ್ದೆಗೆ ಕುಂಬ್ಳೆ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕುಂಬ್ಳೆ ಹುದ್ದೆಯನ್ನು ನಿರಾಕರಿಸಿದರೆ ವಿವಿಎಸ್ ಲಕ್ಷ್ಮಣ್ ಮುಂದಿನ ಆಯ್ಕೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮಾಸ್ಕ್ ಹಾಕಿ, ಲಸಿಕೆ ಪಡೆಯಿರಿ- ಧೋನಿ ಕ್ಯಾಂಪೇನ್

    ಪ್ರಸ್ತುತ ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ವಿವಿಎಸ್ ಲಕ್ಷ್ಮಣ್ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ಟೀಂ ಇಂಡಿಯಾದ ಕೋಚ್ ಯಾರಗಲಿದ್ದಾರೆ ಎಂಬ ಪ್ರಶ್ನೆಗೆ ವಿಶ್ವಕಪ್ ನಂತರ ಉತ್ತರ ಸಿಗಲಿದೆ.

     

  • ನಾಲ್ಕನೇ ಟೆಸ್ಟ್ ಟೀಮ್ ಇಂಡಿಯಾದಿಂದ ಬುಮ್ರಾರನ್ನು ಕೈಬಿಟ್ಟ ಬಿಸಿಸಿಐ

    ನಾಲ್ಕನೇ ಟೆಸ್ಟ್ ಟೀಮ್ ಇಂಡಿಯಾದಿಂದ ಬುಮ್ರಾರನ್ನು ಕೈಬಿಟ್ಟ ಬಿಸಿಸಿಐ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಿಂದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಬಿಸಿಸಿಐ ಕೈಬಿಟ್ಟಿದೆ.

    ಜಸ್ಪ್ರೀತ್ ಬುಮ್ರಾ ವೈಯಕ್ತಿಕ ಕಾರಣದಿಂದಾಗಿ ತಂಡದಿಂದ ಹೊರಗುಳಿಯಲು ಅವಕಾಶ ಕೊಡುವಂತೆ ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದರು. ಆ ಮನವಿಯನ್ನು ಪುರಸ್ಕರಿಸಿರುವ ಬಿಸಿಸಿಐ ನಾಲ್ಕನೇ ಟೆಸ್ಟ್ ಪಂದ್ಯದಿಂದ ಬುಮ್ರಾ ಅವರಿಗೆ ತಂಡದಿಂದ ಬೇರ್ಪಡಲು ಅವಕಾಶ ಮಾಡಿಕೊಟ್ಟಿದೆ.

    ಭಾರತ ತಂಡದಿಂದ ನಾಲ್ಕನೇ ಟೆಸ್ಟ್ ಗೆ  ಬುಮ್ರಾ ಅವರನ್ನು ಕೈಬಿಡುವಂತೆ ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದರು. ಈ ಮನವಿಯಂತೆ ಭಾರತದ ವೇಗಿಯನ್ನು ನಾಲ್ಕನೇ ಟೆಸ್ಟ್ ನಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

    ಬುಮ್ರಾರ ಬದಲು ತಂಡಕ್ಕೆ ಯಾವುದೇ ಹೊಸ ಆಟಗಾರನ್ನು ಕರೆಸಿಕೊಂಡಿಲ್ಲ. ಮೂರನೇ ಟೆಸ್ಟ್ ನಲ್ಲಿ ಆಡಿದ ಆಟಗಾರರನ್ನು ಮುಂದುವರಿಸಲಾಗಿದೆ. ಬುಮ್ರಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದರು. ಎರಡನೇ ಟೆಸ್ಟ್ ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೂರನೇ ಟೆಸ್ಟ್ ನಲ್ಲಿ ಬುಮ್ರಾ ಅವರಿಗೆ 6 ಓವರ್ ಎಸೆಯಲು ಮಾತ್ರ ಅವಕಾಶ ಸಿಕ್ಕಿತ್ತು. ಮೊಟೆರಾ ಪಿಚ್ ಸ್ಪಿನ್ನರ್‍ ಗಳಿಗೆ ನೆರವಾಗುತ್ತಿದ್ದರಿಂದ ಬುಮ್ರಾ ಅವರಿಗೆ ಹೆಚ್ಚಿನ ಬೌಲಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ.

    ಮೂರನೇ ಟೆಸ್ಟ್ ಪಂದ್ಯವನ್ನು 10 ವಿಕೆಟ್‍ಗಳಿಂದ ಗೆದ್ದುಕೊಂಡಿರುವ ಭಾರತ 2-1 ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ. ನಾಲ್ಕನೇ ಟೆಸ್ಟ್ ಮೊಟೆರಾ ಕ್ರೀಡಾಂಗಣದಲ್ಲಿ ಮಾರ್ಚ್ 4 ರಿಂದ ಪ್ರರಂಭಗೊಳ್ಳಲಿದೆ.

  • ನೀನು ಜೀವನದ ಅಮೂಲ್ಯ ಉಡುಗೊರೆ: ನಟರಾಜನ್

    ನೀನು ಜೀವನದ ಅಮೂಲ್ಯ ಉಡುಗೊರೆ: ನಟರಾಜನ್

    ಚೆನ್ನೈ: ಭಾರತ ತಂಡ ಯುವ ವೇಗಿ ತಮಿಳುನಾಡಿನ ಟಿ. ನಟರಾಜನ್ ಮಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ನೀನು ನಮ್ಮ ಜೀವನದ ಅಮೂಲ್ಯ ಉಡುಗೊರೆ ಎಂದು ಮಗುವಿನ ಬಗ್ಗೆ ಬರೆದುಕೊಂಡಿದ್ದಾರೆ.

    ನಟರಾಜನ್ ದಂಪತಿಗೆ 4 ತಿಂಗಳ ಹಿಂದೆ ಹೆಣ್ಣು ಮಗು ಹುಟ್ಟಿತ್ತು. ಮಗುವಿಗೆ ಹನ್ವಿಕಾ ಎಂದು ಹೆಸರಿಡಲಾಗಿತ್ತು. ಇದೀಗ ನಟರಾಜನ್ ದಂಪತಿ ಹನ್ವಿಕಾ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ನೀನು ನಮ್ಮ ಜೀವನದ ಅಮೂಲ್ಯವಾದ ಉಡುಗೊರೆಯಾಗಿದ್ದು, ನೀನು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿರುವೇ. ನಮ್ಮನ್ನು ಪೋಷಕರಾಗಿ ಸ್ವೀಕರಿಸಿದ ನಿನಗೆ ಧನ್ಯವಾದಗಳು ಎಂದು ಹಾರ್ಟ್ ಎಮೋಜಿ ಹಾಕಿ ಸಂತೋಷ ವ್ಯಕ್ತಪಡಿಸಿದ್ದಾರೆ.

    ನಟರಾಜನ್ ಹನ್ವಿಕಾ ಜನನದ ವೇಳೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರು. ನಟರಾಜನ್ ಅವರು ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗುವ ಮೂಲಕ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದರು.

    ನಟರಾಜನ್ 13ನೇ ಆವೃತ್ತಿಯ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿ ರಾಷ್ಟ್ರೀಯಾ ತಂಡಕ್ಕೆ ಆಯ್ಕೆಯಾಗಿದ್ದರು. ಆಸ್ಟ್ರೇಲಿಯಾ ಸರಣಿಯ ಟಿ20 ಪಂದ್ಯಗಳಲ್ಲಿ ತಮ್ಮ  ಉತ್ತಮ ಬೌಲಿಂಗ್ ದಾಳಿಯಿಂದ  ಗಮನ ಸೆಳೆದಿದ್ದರು.

    ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ನಟರಾಜನ್ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ.

  • ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ನೆಹ್ರಾ ಆಯ್ಕೆ ಆಗಿದ್ದು ಹೇಗೆ?

    ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ನೆಹ್ರಾ ಆಯ್ಕೆ ಆಗಿದ್ದು ಹೇಗೆ?

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಗೆ ಆಶಿಶ್ ನೆಹ್ರಾ(38) ರನ್ನು ಅಯ್ಕೆ ಮಾಡಿ ಟೀಂ ಇಂಡಿಯಾ ಆಯ್ಕೆ ಸಮಿತಿ ಅಭಿಮಾನಿಗಳಲ್ಲಿ ಅಚ್ಚರಿಯನ್ನು ಮೂಡಿಸಿದೆ.

    ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಫಿಟ್ ನೆಸ್ ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರೆ, ನೆಹ್ರಾ ಫಿಟ್‍ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು 8 ತಿಂಗಳ ಬಳಿಕ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ್ದಾರೆ.

    ನೆಹ್ರಾ ಕಳೆದ ಐಪಿಎಲ್‍ನಲ್ಲಿ ಗಾಯಗೊಂಡು ಕೆಲವು ದಿನಗಳ ಕಾಲ ವಿಶ್ರಾಂತಿಯನ್ನು ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಕಮ್‍ಬ್ಯಾಕ್ ಮಾಡಿರುವ ನೆಹ್ರಾರ ವೃತ್ತಿ ಬದುಕಿನ ಸೆಕೆಂಡ್ ಇನಿಂಗ್ಸ್ ಆರಂಭವಾಗಿದೆ. ಕ್ರೀಡಾಂಗಣದಲ್ಲಿ ಅಪಾರ ಅನುಭವನ್ನು ಹೊಂದಿರುವ ನೆಹ್ರಾ ಯುವ ಬೌಲರ್‍ಗಳಿಗೆ ಉತ್ತಮ ಮಾರ್ಗದರ್ಶನ ನೀಡಲಿದ್ದಾರೆ.

    ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಟೀಮ್ ಹಿರಿಯ ಅಧಿಕಾರಿಯೊಬ್ಬರು ನೆಹ್ರಾ ಕಳೆದ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದು, ಫಿಟ್‍ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ವರ್ಷದ ಆರಂಭದಲ್ಲಿ ಇಂಗ್ಲೆಡ್ ವಿರುದ್ಧ ನಡೆದ ಸರಣಿಯಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಈ ಸರಣಿಯಲ್ಲಿ ಗಾಯಗೊಂಡ ನೆಹ್ರಾ ಅವರಿಗೆ ವೆಸ್ಟ್‍ಇಂಡಿಸ್ ಹಾಗೂ ಶ್ರೀಲಂಕಾ ವಿರುದ್ಧ ಸರಣಿಗಳಿಂದ ಕೆಲವು ದಿನಗಳ ಕಾಲ ವಿಶ್ರಾಂತಿಯನ್ನು ನೀಡಲಾಗಿತ್ತು. ಪ್ರಸ್ತುತ ಅವರು ಸಂಪೂರ್ಣ ಫಿಟ್ ಆಗಿದ್ದು ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

    ನೆಹ್ರಾ ಅವರು ಇದುವರೆಗೂ 26 ಟಿ-20 ಪಂದ್ಯಗಳನ್ನು ಆಡಿದ್ದು, 34 ವಿಕೆಟ್‍ಗಳನ್ನು ಪಡೆದಿದ್ದಾರೆ. ಮೈದಾನದಲ್ಲಿ ಉತ್ತಮ ಪ್ರದರ್ಶವನ್ನು ನೀಡಲು ವಯಸ್ಸಿಗೆ ಸಂಬಂಧವಿಲ್ಲ ಎಂದು 38 ವರ್ಷದ ನೆಹ್ರಾ ಸಾಬೀತುಪಡಿಸಿದ್ದಾರೆ. ನೆಹ್ರಾ ತಮ್ಮ ವೃತ್ತಿ ಬದುಕಿನಲ್ಲಿ ಎಂದೂ ಕೆಟ್ಟ ಪ್ರದರ್ಶನವನ್ನು ನೀಡಿ ತಂಡದಿಂದ ಹೊರಗುಳಿದಿರಲಿಲ್ಲ ಹೆಚ್ಚಿನ ಸಮಯ ಗಾಯ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದರು.

    https://publictv.in/where-is-yuvraj-singh-furious-fans-ask-bcci-after-veteran-cricketer-gets-t20i-snub/