Tag: ಟೀಚರ್

  • ಟೀಚರ್‌ ಮೇಲೆ ಸಿಕ್ಕಾಪಟ್ಟೆ ಲವ್‌ –  ದೂರು ನೀಡಿದ್ದಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಹಳೇ ವಿದ್ಯಾರ್ಥಿ

    ಟೀಚರ್‌ ಮೇಲೆ ಸಿಕ್ಕಾಪಟ್ಟೆ ಲವ್‌ – ದೂರು ನೀಡಿದ್ದಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಹಳೇ ವಿದ್ಯಾರ್ಥಿ

    ಭೋಪಾಲ್‌: ಟ್ರೆಂಡ್‌ ಬದಲಾದಂತೆ ಪ್ರೀತಿ (Love) ಮಾಡುವ ವಿಧಾನ ಕೂಡ ಬದಲಾಗ್ತಿದೆ. ಈಗಿನ ಕಾಲದ ಕೆಲವು ಲವ್ ಸ್ಟೋರಿಗಳು ಹೇಗಿರ್ತಾವೆ ಅಂದ್ರೆ ಬೆಳಗ್ಗೆ ವಾಟ್ಸಪ್‌ನಲ್ಲಿ ಪ್ರಪೋಸ್ ಮಾಡಿದ್ರೆ, ಮಧ್ಯಾಹ್ನ ಕೈಕೈ ಹಿಡಿದು ಸುತ್ತಾಡಿಕೊಂಡಿರ್ತಾರೆ, ಸಂಜೆ ಬ್ರೇಕಪ್ ಮಾಡಿಕೊಳ್ಳಾರೆ. ಅದಕ್ಕಾಗಿ ಖತರ್ನಾಕ್ ಪ್ಲ್ಯಾನ್‌ಗಳನ್ನೂ ಮಾಡಿರ್ತಾರೆ. ಒಂದು ವೇಳೆ ಪ್ರೇಯಸಿ ಮದ್ವೆ ಅಂತೇನಾದ್ರೂ ಪೀಡಿಸಿದ್ರೆ ಕಥೆ ಮುಗಿಸಿಯೇ ಬಿಡ್ತಾರೆ. ಪ್ರೀತಿ ವಿಚಾರದಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗಿರೋದ್ರಿಂದ ನಿಜವಾದ ಪ್ರೀತಿ ಹುಡುಕುವಲ್ಲಿ ಯುವ ಮನಸ್ಸುಗಳು ಸೋಲುತ್ತಿವೆ. ಆದ್ರೆ ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

    ಯೆಸ್‌. ಮಧ್ಯಪ್ರದೇಶದ (Madhya Pradesh) ನರಸಿಂಹಪುರ ಜಿಲ್ಲೆಯಲ್ಲಿ 18 ವರ್ಷದ ವಿದ್ಯಾರ್ಥಿಯೊಬ್ಬ ತಾನು ಹಿಂದೆ ಕಲಿತ ಶಾಲೆಯ 26 ವರ್ಷದ ಅತಿಥಿ ಶಿಕ್ಷಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನ ನರಸಿಂಹಪುರ ಜಿಲ್ಲೆಯ ಕೋಟವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಎಕ್ಸಲೆನ್ಸ್ ಸ್ಕೂಲ್‌ನ ಮಾಜಿ ವಿದ್ಯಾರ್ಥಿ ಸೂರ್ಯಾಂಶ್ ಕೊಚಾರ್ ಅಂತ ಗುರುತಿಸಲಾಗಿದೆ.

    ಆರೋಪಿಗೆ ಶಿಕ್ಷಕಿ ಮೇಲೆ ಒನ್ ಸೈಡ್ ಲವ್ ಇತ್ತು ಅಂತ ಹೇಳಲಾಗ್ತಿದೆ, ಆತನ ವಿರುದ್ಧ ದೂರು ನೀಡಿದ್ದರಿಂದ ಕೋಪಗೊಂಡ ಯುವಕ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ದೆಹಲಿ ಸಿಎಂಗೆ ಕಪಾಳಮೋಕ್ಷ – ತಿಹಾರ್‌ ಜೈಲಿನಲ್ಲಿದ್ದ ತನ್ನ ಸಂಬಂಧಿ ಬಿಡಿಸೋದಕ್ಕಾಗಿ ರೇಖಾ ಗುಪ್ತಾ ಭೇಟಿಗೆ ಬಂದಿದ್ದ ವ್ಯಕ್ತಿ

    ಹೌದು. ಇದೇ ಆಗಸ್ಟ್‌ 18ರಂದು ಮಧ್ಯಾಹ್ನ 3:30ರ ಆರೋಪಿ ಪೆಟ್ರೋಲ್ ತುಂಬಿದ ಬಾಟಲ್‌ ತೆಗೆದುಕೊಂಡು ಶಿಕ್ಷಕಿಯ ಮನೆಗೆ ಹೋಗಿದ್ದಾನೆ. ಆಕೆ ಮಾತನಾಡೋದಕ್ಕೂ ಅವಕಾಶ ಕೊಡದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್‌ ಆಗಿದ್ದಾನೆ. 10-15% ನಷ್ಟು ಗಾಯಗಳಾಗಿರುವ ಸಂತ್ರಸ್ತೆಯನ್ನ ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುಟ್ಟಗಾಯಗಳು ಗಂಭೀರವಾಗಿದ್ದರೂ, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಟಿಬಿ ಡ್ಯಾಂನಿಂದ 1.30 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ರಾಯರ ಏಕಶಿಲಾ ವೃಂದಾವನ ಜಲಾವೃತ

    ಈ ಕುರಿತು ಮಾತನಾಡಿರುವ ಉಪವಿಭಾಗೀಯ ಪೊಲೀಸ್ ಅಧಿಕಾರಿ ಮನೋಜ್ ಗುಪ್ತಾ, ಆರೋಪಿ ಮತ್ತು ಶಿಕ್ಷಕಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಪರಸ್ಪರ ಪರಿಚಿತರಾಗಿದ್ದರು. ಸೂರ್ಯಾಂಶ್ ಶಿಕ್ಷಕಿ ಬಗ್ಗೆ ಒನ್ ಸೈಡ್ ಲವ್ ಬೆಳಸಿಕೊಂಡಿದ್ದ. ಆದ್ರೆ ಒಂದೆರಡು ವರ್ಷಗಳ ಹಿಂದೆ ಆರೋಪಿ ವಿದ್ಯಾರ್ಥಿಯನ್ನ ಶಿಕ್ಷಕಿ ಕಲಿಸುತ್ತಿದ್ದ ಶಾಲೆಯಿಂದ ಹೊರಹಾಕಲಾಗಿತ್ತು. ಬಳಿಕ ಆರೋಪಿ ಬೇರೆ ಶಾಲೆಯಲ್ಲಿ ಓದುತ್ತಿದ್ದ. ಇದೇ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಆರೋಪಿಯು ಶಿಕ್ಷಕಿ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊತ್ವಾಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಎಮ್ಮೆ ಕೊಡಿಸೋದಾಗಿ KD ನಿರ್ದೇಶಕನಿಗೆ ಲಕ್ಷ ಲಕ್ಷ ವಂಚನೆ – ಪ್ರೇಮ್ ಹೇಳಿದ್ದೇನು..?

  • ಲವ್ವರ್ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಹಸೆಮಣೆ ಏರಬೇಕಿದ್ದ ಶಿಕ್ಷಕಿ ಆತ್ಮಹತ್ಯೆ

    ಲವ್ವರ್ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಹಸೆಮಣೆ ಏರಬೇಕಿದ್ದ ಶಿಕ್ಷಕಿ ಆತ್ಮಹತ್ಯೆ

    ಗದಗ: ಲವ್ವರ್ (Lover) ಬ್ಲ್ಯಾಕ್‌ಮೇಲ್‌ನಿಂದ ಹಸೆಮಣೆ ಏರಬೇಕಿದ್ದ ದೈಹಿಕ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಸುಂಡಿ (Asundi) ಗ್ರಾಮದಲ್ಲಿ ನಡೆದಿದೆ.

    ಸೈರಾಬಾನು ನದಾಫ್(29) ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕಿ. ಮದುವೆಗೆ ಇನ್ನೂ ಕೇವಲ 8 ದಿನ ಬಾಕಿ ಇರುವಾಗಲೇ ಸೈರಾಬಾನು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಕೃಷ್ಣದೇವರಾಯನ ಸಮಾಧಿ ಮೇಲೆ ಮಾಂಸ ಮಾರಾಟ: ಯತ್ನಾಳ್‌ ಆಕ್ರೋಶ

    ಭಾನುವಾರ ಸೈರಾಬಾನು ಪೋಷಕರು ಮದುವೆ (Marriage) ಸಾಮಗ್ರಿಗಳನ್ನು ತರಲು ಪೇಟೆಗೆ ಹೋಗಿದ್ದರು. ಪೋಷಕರು ಮರಳಿ ಬರುವಷ್ಟರಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?

    ಕಳೆದ 5 ವರ್ಷಗಳಿಂದ ಸೈರಾಬಾನು, ಮೈಲೇರಿ ಎಂಬಾತನನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಲವ್ ಬ್ರೇಕಪ್ ಆಗಿತ್ತು. ಬ್ರೇಕಪ್ ಬಳಿಕ ಪೋಷಕರ ಒತ್ತಾಯದ ಮೇರೆಗೆ ಸೈರಾಬಾನು ಬೇರೆ ಮದುವೆಗೆ ಒಪ್ಪಿಕೊಂಡಿದ್ದರು. ಆದರೆ ಸೈರಾಬಾನು ಮದುವೆ ತಯಾರಿ ನೋಡಿ ಲವರ್ ಮೈಲಾರಿ ಟಾರ್ಚರ್ ಶುರುವಾಗಿತ್ತು. ಬೇರೆ ಮದುವೆ ಆದರೆ ಇಬ್ಬರ ಫೋಟೋ ಹಾಗೂ ವೀಡಿಯೋಗಳನ್ನು ವೈರಲ್ ಮಾಡುತ್ತೇನೆ ಎಂದು ಆತ ಬೆದರಿಕೆ ಹಾಕ್ತಿದ್ದ ಎಂಬ ಆರೋಪವಿದೆ. ಸೈರಾಬಾನು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಶರಣಾಗಿದ್ದಾರೆ ಎಂಬ ಶಂಕ ವ್ಯಕ್ತವಾಗಿದೆ. ಇದನ್ನೂ ಓದಿ: 2 ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಝೊಮ್ಯಾಟೋ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

    ಕೊನೆಯ ಮಗಳು ಎಂದು ಹೆತ್ತವರು ಭರ್ಜರಿಯಾಗಿ ಮದುವೆ ಮಾಡಿಕೊಡಲು ಸಿದ್ಧತೆ ಮಾಡಿಕೊಂಡಿದ್ದರು. ಮದುವೆಯ ಸಂಭ್ರಮದಲ್ಲಿದ್ದ ಮನೆಗೆ ಈಗ ಸೂತಕದ ಛಾಯೆ ಆವರಿಸಿದೆ.

    ಸೈರಾಬಾನು, ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿದ್ದರು. ರಾಷ್ಟ್ರಮಟ್ಟದ ಕುಸ್ತಿಪಟು ಆಗಿ ಸಾಕಷ್ಟು ಹೆಸರು ಮಾಡಿದ್ದ ಇವರು ಹತ್ತಾರು ಮೆಡಲ್, ಕಪ್ ಗೆದ್ದುಕೊಂಡಿದ್ದರು. ಗಂಡು ಮಕ್ಕಳಿಲ್ಲದ ಕಾರಣ ಸೈರಾಬಾನು ಇಡೀ ಮನೆ ಜವಾಬ್ದಾರಿಯನ್ನು ಹೊತ್ತಿದ್ದರು. ಇದನ್ನೂ ಓದಿ: PBKS vs RCB – ಕೊಹ್ಲಿ ರನೌಟ್‌ ಥ್ರೋ, ಸಂಭ್ರಮಾಚರಣೆ ವಿಡಿಯೋ ವೈರಲ್‌

    ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಟಾರ್ಚರ್ ನೀಡಿರುವ ಯುವಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಒತ್ತಾಯಿಸಿದರು. ಇದನ್ನೂ ಓದಿ: ಚಿತ್ರದುರ್ಗ | ಬೆಲೆ ಕುಸಿತ – ಕಟಾವು ಮಾಡದೇ ಹೊಲದಲ್ಲೇ ಟೊಮೆಟೊ ಬಿಟ್ಟ ರೈತರು

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನೆಯ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Gadag Rural Police Station) ಪ್ರಕರಣ ದಾಖಲಾಗಿದೆ.

  • 2013ರಲ್ಲೇ ಮೃತಪಟ್ಟ ಶಿಕ್ಷಕಿ ಹೆಸರಿಗೆ 7 ಕೋಟಿ ತೆರಿಗೆ ನೋಟಿಸ್‌ – ಕುಟುಂಬಸ್ಥರು ಶಾಕ್‌!

    2013ರಲ್ಲೇ ಮೃತಪಟ್ಟ ಶಿಕ್ಷಕಿ ಹೆಸರಿಗೆ 7 ಕೋಟಿ ತೆರಿಗೆ ನೋಟಿಸ್‌ – ಕುಟುಂಬಸ್ಥರು ಶಾಕ್‌!

    ಭೋಪಾಲ್:‌ ಮಧ್ಯಪ್ರದೇಶದ (Madhya Pradesh) ಸರ್ಕಾರಿ ಶಾಲಾ ಶಿಕ್ಷಕರೊಬ್ಬರ ಹೆಸರಿಗೆ 7 ಕೋಟಿ ರೂ. ತೆರಿಗೆ ನೋಟಿಸ್‌ (Tax Notice) ಬಂದಿದೆ. ನೋಟಿಸ್‌ ಕಂಡು ಶಿಕ್ಷಕಿಯ ಕುಟುಂಬಸ್ಥರೇ ದಿಗ್ಭ್ರಮೆಗೊಂಡಿದ್ದಾರೆ. ಏಕೆಂದರೆ 2013ರಲ್ಲೇ ಆ ಶಿಕ್ಷಕಿ ಸಾವನ್ನಪ್ಪಿದ್ದಾರೆ. ನೋಟೀಸ್‌ ಕೋಡ 2017-18ರ ಮೌಲ್ಯಮಾಪನಕ್ಕೆ ಸಂಬಂಧಿಸಿದ್ದಾಗಿದೆ.

    ಶಿಕ್ಷಕಿ (Teacher) ಕುಟುಂಬದವರು ಮಾತ್ರವಲ್ಲ, ಆದಿವಾಸಿಗಳ ಪ್ರಾಬಲ್ಯ ಹೆಚ್ಚಾಗಿರುವ ಬೇತುಲ್‌ ಜಿಲ್ಲೆಯ 44 ಮಂದಿಗೆ 1 ರಿಂದ 10 ಕೋಟಿ ರೂ.ಗಳ ವರೆಗೆ ತೆರಿಗೆ ನೋಟೀಸ್‌ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ (Income Tax Department) ಮೂಲಗಳು ತಿಳಿಸಿವೆ. ಇದನ್ನೂ ಓದಿ: 88% ರಷ್ಟು 2 ಸಾವಿರ ರೂ. ನೋಟುಗಳು ಬ್ಯಾಂಕಿಗೆ ವಾಪಸ್ ಆಗಿವೆ: ಆರ್‌ಬಿಐ

    ಉಷಾ ಸೋನಿ ಎಂಬವರು ಪಟಖೇಡ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಕಳೆದ ಜುಲೈ 26 ರಂದು ಆಕೆಯ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಬಂದಿದ್ದು, 7.55 ಕೋಟಿ ತೆರಿಗೆ ಪಾವತಿಗೆ ಆದೇಶ ನೀಡಿತ್ತು. ನಂತರ ಅವರ ಮಗ ಪವನ್‌ ಸೋನಿ ʻನನ್ನ ತಾಯಿ 2013ರ ನವೆಂಬರ್‌ 16ರಂದೇ ದೀರ್ಘಕಾಲಿಕ ಅನಾರೋಗ್ಯದಿಂದ ನಿಧನರಾದರು. ಅಲ್ಲದೇ ಈ ನೋಟಿಸ್‌ 2017-18ರ ಮೌಲ್ಯ ಮಾಪನಕ್ಕೆ ಸಂಬಂಧಿಸಿದ್ದಾಗಿದೆ. ದಾಖಲೆಯಲ್ಲಿ ನ್ಯಾಚುರಲ್‌ ಕಾಸ್ಟಿಂಗ್‌ ಕಂಪನಿ ಎಂದು ಉಲ್ಲೇಖಿಸಲಾಗಿದೆ. ಅದು ಇನ್ನೂ ಖರೀದಿ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

    ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ನನ್ನ ತಾಯಿಯ ಪ್ಯಾನ್‌ಕಾರ್ಡ್‌ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ನೋಟಿಸ್‌ ಬಗ್ಗೆ ನಮಗೇನು ತಿಳಿದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಶ್ವ ನಾಯಕರೂ ಮೋದಿಯನ್ನ ʻಬಾಸ್‌ʼ ಅಂತಾರೆ – ಮಹಾರಾಷ್ಟ್ರ ಸಿಎಂ ಶ್ಲಾಘನೆ

    ಅಲ್ಲದೇ ಕಬ್ಬಣದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ತಿಂಗಳಿಗೆ 5 ರಿಂದ 7 ಸಾವಿರ ರೂ. ಸಂಪಾದಿಸುವ ನಿತಿನ್‌ ಜೈನ್‌ ಎಂಬ ವ್ಯಕ್ತಿಗೆ 1.26 ಕೋಟಿ ರೂ. ತೆರಿಗೆ ಬಂದಿರೋದನ್ನ ಕಂಡು ಆಘಾತಕ್ಕೊಳಗಾಗಿದ್ದಾರೆ. ಅವರು ಆದಾಯ ತೆರಿಗೆ ಖಾತೆ ತೆರೆಯಲು ಹೋದಾಗ, ತಮಿಳುನಾಡಿನ ಕುರ್ಟಾಲಂನಲ್ಲಿ ಅವರ ಹೆಸರಲ್ಲಿ ಖಾತೆ ಇರುವುದು ಕಂಡುಬಂದಿದೆ. 2014-15ರಲ್ಲಿ ಅವರ ಹೆಸರಿನಲ್ಲಿ ಖಾತೆ ತೆರೆಯಲಾಗಿದ್ದು, ಇದೇ ಖಾತೆಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆದಿದೆ. ಈ ಕಾರಣಕ್ಕಾಗಿ ನಿತೀಶ್‌ ಜೈನ್‌ಗೆ ನೋಟಿಸ್‌ ಬಂದಿರುವುದಾಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ʼಸರ್‌ʼ, ʼಮೇಡಂʼ ಅನ್ನುವಂತಿಲ್ಲ.. ʼಟೀಚರ್‌ʼ ಎನ್ನಬೇಕು – ಕೇರಳ ಮಕ್ಕಳ ಹಕ್ಕುಗಳ ಆಯೋಗ

    ʼಸರ್‌ʼ, ʼಮೇಡಂʼ ಅನ್ನುವಂತಿಲ್ಲ.. ʼಟೀಚರ್‌ʼ ಎನ್ನಬೇಕು – ಕೇರಳ ಮಕ್ಕಳ ಹಕ್ಕುಗಳ ಆಯೋಗ

    ತಿರುವನಂತಪುರಂ: ಶಾಲಾ ಶಿಕ್ಷಕರನ್ನು ಇನ್ಮುಂದೆ ʼಸರ್‌ʼ (Sir), ʼಮೇಡಂʼ (Madam) ಎಂದು ಕರೆಯುವಂತಿಲ್ಲ. ಅವರನ್ನು ʼಟೀಚರ್‌ʼ (Teacher) ಅಂತಾ ಕರೆಯಬೇಕು ಎಂದು ಮಕ್ಕಳಿಗೆ ಸೂಚಿಸಬೇಕು ಎಂದು ರಾಜ್ಯದ ಎಲ್ಲಾ ಶಾಲೆಗಳಿಗೆ ಕೇರಳ (Kerala) ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ನಿರ್ದೇಶಿಸಿದೆ.

    ʼಸರ್‌ʼ, ʼಮೇಡಂʼ ಎನ್ನುವುದಕ್ಕಿಂತ ʼಟೀಚರ್‌ʼ ಅನ್ನುವ ಪದ ʼಲಿಂಗ ತಟಸ್ಥʼವಾಗಿರುವುದರಿಂದ ಹೀಗೆಯೇ ಕರೆಯಬೇಕು ಎಂದು ತಿಳಿಸಿದೆ. ಶಿಕ್ಷಕರು ಕೂಡ ಈ ಪದ ಬಳಸುವುದನ್ನು ಕಡಿಮೆ ಮಾಡಬೇಕು ಎಂದು ಕೆಎಸ್‌ಸಿಪಿಸಿಆರ್‌ ಸೂಚಿಸಿದೆ. ಇದನ್ನೂ ಓದಿ: ವಿಶ್ವದ ಅತೀ ಉದ್ದದ ನದಿ ವಿಹಾರ ನೌಕೆ `ಎಂವಿ ಗಂಗಾ ವಿಲಾಸ್’ ಕ್ರೂಸ್‌ಗೆ ಮೋದಿ ಅದ್ಧೂರಿ ಚಾಲನೆ

    ಸಮಿತಿಯ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಮತ್ತು ಸದಸ್ಯ ಸಿ.ವಿಜಯಕುಮಾರ್ ಅವರನ್ನೊಳಗೊಂಡ ಪೀಠ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಟೀಚರ್‌’ ಪದವನ್ನು ಬಳಸಲು ಸೂಚನೆಗಳನ್ನು ನೀಡುವಂತೆ ಸಾಮಾನ್ಯ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.

    ಸರ್ ಅಥವಾ ಮೇಡಂ ಎಂದು ಕರೆಯುವ ಬದಲು ಟೀಚರ್ ಎಂದು ಕರೆದರೆ ಎಲ್ಲ ಶಾಲೆಗಳ ಮಕ್ಕಳಲ್ಲಿ ಸಮಾನತೆ ಕಾಪಾಡಲು ಸಹಕಾರಿಯಾಗುತ್ತದೆ. ಶಿಕ್ಷಕರೊಂದಿಗೆ ಅವರ ಬಾಂಧವ್ಯ ಹೆಚ್ಚುತ್ತದೆ ಎಂದು ಮಕ್ಕಳ ಹಕ್ಕು ಆಯೋಗ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: BJP ನೀತಿಗಳಿಂದ ಭಾರತದಲ್ಲೂ ತಾಲಿಬಾನ್‌ನಂಥ ಭಯಾನಕ ಪರಿಸ್ಥಿತಿ ಎದುರಾಗುತ್ತೆ: KCR

    ಶಿಕ್ಷಕರನ್ನು ಅವರ ಲಿಂಗಕ್ಕೆ ಅನುಗುಣವಾಗಿ ‘ಸರ್’ ಮತ್ತು ‘ಮೇಡಂ’ ಎಂದು ಸಂಬೋಧಿಸುವುದು ತಾರತಮ್ಯ ಸೂಚಿಸುತ್ತದೆ. ಅದನ್ನು ತಪ್ಪಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಈ ನಿರ್ದೇಶನ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೋಚಿಂಗ್‌ ನಡುವೆ ಪ್ರೇಮಾಂಕುರ – 50 ವಯಸ್ಸಿನ ಶಿಕ್ಷಕನನ್ನು ವರಿಸಿದ 20ರ ವಿದ್ಯಾರ್ಥಿನಿ

    ಕೋಚಿಂಗ್‌ ನಡುವೆ ಪ್ರೇಮಾಂಕುರ – 50 ವಯಸ್ಸಿನ ಶಿಕ್ಷಕನನ್ನು ವರಿಸಿದ 20ರ ವಿದ್ಯಾರ್ಥಿನಿ

    ಪಾಟ್ನಾ: ಬಿಹಾರ್‌ನ (Bihar) ಸಮಸ್ತಿಪುರದಲ್ಲಿ (Samastipur) 50 ವರ್ಷ ವಯಸ್ಸಿನ ಇಂಗ್ಲಿಷ್‌ ಶಿಕ್ಷಕರೊಬ್ಬರು 20 ವಯಸ್ಸಿನ ತನ್ನ ವಿದ್ಯಾರ್ಥಿನಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ.

    ಶ್ವೇತಾ ಕುಮಾರಿ ವಿದ್ಯಾರ್ಥಿನಿ (Student), ಶಿಕ್ಷಕ (Teacher) ಸಂಗೀತ್‌ ಕುಮಾರ್‌ ಅವರನ್ನು ವರಿಸಿದ್ದಾರೆ. 20 ವರ್ಷದ ವಿದ್ಯಾರ್ಥಿನಿಯು ಇಂಗ್ಲಿಷ್‌ ಕಲಿಯಲು ಮನೆಯಿಂದ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದಳು. ಅಲ್ಲಿ 50 ವರ್ಷದ ಇಂಗ್ಲಿಷ್ ಶಿಕ್ಷಕನೊಂದಿಗೆ ವಿದ್ಯಾರ್ಥಿನಿಗೆ ಪ್ರೇಮಾಂಕುರವಾಗಿದೆ. ಕೊನೆಗೆ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾದರು. ಇದನ್ನೂ ಓದಿ: ಪುಲ್ವಾಮಾದಲ್ಲಿ ಜೆಇಎಂ ಭಯೋತ್ಪಾದಕನ ಅಕ್ರಮ ಮನೆ ನೆಲಸಮ

    ಸಮಸ್ತಿಪುರದ ದೇವಸ್ಥಾನದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಇವರಿಬ್ಬರ ಮದುವೆಗೆ ಪರಿಚಯಸ್ಥರು ಸಾಕ್ಷಿಯಾಗಿದ್ದಾರೆ. ಇಬ್ಬರ ಮದುವೆಯ ವೀಡಿಯೋ ಕೂಡ ಮಾಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ.

    50 ವರ್ಷದ ಇಂಗ್ಲಿಷ್ ಶಿಕ್ಷಕ ಸಂಗೀತ್ ಅವರ ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾದರು. ಅವರು ಎರಡನೇ ಮದುವೆ ಕೂಡ ಮಾಡಿಕೊಂಡಿರಲಿಲ್ಲ. ಶ್ವೇತಾ ಮತ್ತು ಅವರ ಮನೆ ಕೇವಲ 800 ಮೀಟರ್ ದೂರದಲ್ಲಿದೆ. ಇಂಗ್ಲಿಷ್ ಕೋಚಿಂಗ್ ಸಮಯದಲ್ಲಿ ಇಬ್ಬರೂ ಪ್ರೀತಿಸುತ್ತಿದ್ದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಹಿಮಾಚಲಕ್ಕೆ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಆಯ್ಕೆ ಮಾಡಿದ ಕಾಂಗ್ರೆಸ್

    Live Tv
    [brid partner=56869869 player=32851 video=960834 autoplay=true]

  • ಆನ್‍ಲೈನ್ ವಂಚನೆ – ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೀಚರ್

    ಆನ್‍ಲೈನ್ ವಂಚನೆ – ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೀಚರ್

    ಬೀದರ್: ಉದ್ಯೋಗಕ್ಕಾಗಿ ಆನ್‍ಲೈನ್‍ನಲ್ಲಿ (Online) ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಉಪನ್ಯಾಸಕಿ (Teacher)  ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.

    ಆರತಿ ಕನಾಟೆ (28) ಆತ್ಮಹತ್ಯೆ ಮಾಡಿಕೊಂಡ ಟೀಚರ್. ಆನ್‍ಲೈನ್‍ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹಣದ ವ್ಯವಹಾರ ನಡೆಸಿ ವಂಚನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನ್‍ಲೈನ್‍ನಲ್ಲಿ ಮನೆಯಲ್ಲೇ ಕುಳಿತು ಉದ್ಯಮ ಮಾಡಲು ಹಣ ಹೂಡಿಕೆ ಮಾಡಿ ಎಂದ ವ್ಯಕ್ತಿಯನ್ನು ನಂಬಿದ ಉಪನ್ಯಾಸಕಿ ಬರೋಬ್ಬರಿ 2.50 ಲಕ್ಷ ವರೆಗೆ ಹಣ ಕಳುಹಿಸಿದ್ದಾರೆ. ಬಳಿಕ ಇನ್ನೂ 82 ಸಾವಿರ ಹಣ ಕಳಿಸಿದ್ರೆ ಉದ್ಯೋಗದ ಜೊತೆಗೆ ಹೂಡಿಕೆ ಮಾಡಿದ ಎಲ್ಲಾ ಹಣವನ್ನು ವಾಪಸ್ ಕೊಡುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ತನ್ನ ಲವರ್ ಜೊತೆ ಮಗಳಿಗೆ ಮದುವೆ ಮಾಡಿಸಿದ ತಾಯಿ – ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯ

    ಮನೆಯವರ ಗಮನಕ್ಕೆ ತಾರದೆ ಲಕ್ಷಾಂತರ ರೂಪಾಯಿ ಕಳೆದುಕೊಂಡ ಭೀತಿಯಿಂದ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಹಣ ಹೂಡಿಕೆ ಮಾಡಿದ್ದ ಏಜೆನ್ಸಿ ಬಗ್ಗೆ ಡೆತ್‍ನೋಟ್‍ನಲ್ಲಿ ಉಲ್ಲೇಖ ಮಾಡಿ ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉಪನ್ಯಾಸಕಿ ಬಸವಕಲ್ಯಾಣ ನಗರದ ಖಾಸಗಿ ಕಾಲೇಜಿನಲ್ಲಿ (Collage) ಕಾರ್ಯನಿರ್ವಹಿಸುತ್ತಿದ್ದರು. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಪಿತೂರಿ ಕೇಸ್- ಮಠದ ಅಡುಗೆ ಸಹಾಯಕಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಪರೀಕ್ಷೆಯಲ್ಲಿ ಕಾಪಿ ಹೊಡೆದು ಮೋಹಿನ್ ಆತ್ಮಹತ್ಯೆ – ಟೀಚರ್ ವಿರುದ್ಧ ಪ್ರಕರಣ ದಾಖಲು

    ಪರೀಕ್ಷೆಯಲ್ಲಿ ಕಾಪಿ ಹೊಡೆದು ಮೋಹಿನ್ ಆತ್ಮಹತ್ಯೆ – ಟೀಚರ್ ವಿರುದ್ಧ ಪ್ರಕರಣ ದಾಖಲು

    ಬೆಂಗಳೂರು: ಪರೀಕ್ಷೆ ವೇಳೆ ಕಾಪಿ ಹೊಡೆದ ಎಂಬ ಕಾರಣಕ್ಕೆ ತರಗತಿಯಿಂದ ಟೀಚರ್ (Teacher) ಹೊರಹಾಕಿದ್ದ ವಿದ್ಯಾರ್ಥಿ (Student) ಮೋಹಿನ್ ಎಂಬಾತ ಅಪಾರ್ಟ್ಮೆಂಟ್‌ನ (Apartment) ಹದಿನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಿನ್ನೆ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಟೀಚರ್ ವಿರುದ್ಧ ಪ್ರಕರಣ ದಾಖಲಾಗಿದೆ.

    SUICIDE

    ಬೆಂಗಳೂರಿನ (Bengaluru) ನಾಗವಾರ ಬಳಿಯ ಆರ್ ಆರ್ ಸಿಗ್ನೇಚರ್ ಅಪಾರ್ಟ್ಮೆಂಟ್‌ನಲ್ಲಿ ಮೋಹಿನ್ ಆತ್ಮಹತ್ಯೆಗೆ ಶರಣಾಗಿದ್ದ. ಮಹಮ್ಮದ್ ನೂರ್, ನೋಹೇರಾ ದಂಪತಿಯ ಒಬ್ಬನೇ ಮಗನಾಗಿದ್ದ ಮೋಹಿನ್ ಖಾಸಗಿ ಸ್ಕೂಲ್‍ನಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ. ಪರೀಕ್ಷೆ ನಡೆಯುತ್ತಿದ್ದ ವೇಳೆ ಕಾಪಿ ಹೊಡೆಯುತ್ತಿದ್ದ ಮೋಹಿನ್ ಅನ್ನು ಕಂಡ ಶಿಕ್ಷಕರು ತರಗತಿಯಿಂದ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಸ್ಕೂಲ್‍ನಿಂದ ಮೋಹಿನ್ ಹೊರಬಂದಿದ್ದನು. ಘಟನೆಯಿಂದ ಮನನೊಂದ ಮೋಹಿನ್ ಸಂಜೆ ಐದು ಗಂಟೆ ವೇಳೆಗೆ ಸಿಗ್ನೇಚರ್ ಅಪಾರ್ಟ್ಮೆಂಟ್‌ನ ಹದಿನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಬಳಿಕ ಪೋಷಕರು ನೀಡಿರುವ ದೂರಿನ್ವಯ ಸಂಪಿಗೆಹಳ್ಳಿ ಪೊಲೀಸರು ಟೀಚರ್ ವಿರುದ್ಧ ಎಫ್‍ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾಪಿ ಹೊಡೆದು ಸಿಕ್ಕಿಬಿದ್ದ ವಿದ್ಯಾರ್ಥಿ- 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

    ಪೋಷಕರು ನೀಡಿರುವ ದೂರಿನ್ವಯ ಪ್ರಾಥಮಿಕವಾಗಿ ಶಾಲೆಯ ಶಿಕ್ಷಕರನ್ನು ವಿಚಾರಣೆ ನಡೆಸಿದ ಪೊಲೀಸರು ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. IPC 306 – ಆತ್ಮಹತ್ಯೆ ಗೆ ಪ್ರಚೋದನೆ ಅಡಿಯಲ್ಲಿ ಟೀಚರ್ ವಿರುದ್ಧವಾಗಿ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದಕ್ಕೆ ಹೆತ್ತತಾಯಿಯಿಂದಲೇ ಮಗುವಿನ ಕೊಲೆ

    ಪ್ರಕರಣ ಸಂಬಂಧ ಕ್ಲಾಸ್ ಟೀಚರ್, ಅಪಾರ್ಟ್ಮೆಂಟ್‌ನ ಭದ್ರತಾ ಸಿಬ್ಬಂದಿ ಸೇರಿದಂತೆ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕಿದರು. ವಿಚಾರಣೆ ವೇಳೆ ವಿದ್ಯಾರ್ಥಿಯನ್ನು ಕೊಠಡಿಯ ಮುಂಭಾಗ ನಿಲ್ಲಿಸಿದ್ದ ಶಿಕ್ಷಕಿ ಶಾಲೆಯಿಂದ ಹೊರಗೆ ವಿದ್ಯಾರ್ಥಿಯನ್ನು ಕಳುಹಿಸಿರಲಿಲ್ಲ. ಆದರೆ ಸ್ವಲ್ಪ ಹೊತ್ತಿನ ಬಳಿಕ ಟೀಚರ್ ಕೊಠಡಿಯ ಹೊರಬಂದು ನೋಡಿದಾಗ ಆತ ಇರಲಿಲ್ಲ. ಆಗ ಶಾಲಾ ಶಿಕ್ಷಕರು ಸಂಪೂರ್ಣ ಶಾಲೆಯನ್ನು ಹುಡುಕಾಡಿದ್ದರು. ವಿದ್ಯಾರ್ಥಿ ಕಾಣದಿದ್ದಾಗ ತಕ್ಷಣವೇ ಅವರ ಪೋಷಕರಿಗೆ ಮಾಹಿತಿ ನೀಡಿದ್ರು.

    ಆತ್ಮಹತ್ಯೆಗೂ ಮುನ್ನ ಅಪಾರ್ಟ್ಮೆಂಟ್‌ ಪ್ರವೇಶ:
    ಮೋಹಿನ್ ಮನೆಯಿರುವುದು ಅಪಾರ್ಟ್ಮೆಂಟ್‌ ಮುಂಭಾಗದ ರಸ್ತೆಯ ಬದಿಯಲ್ಲಾಗಿದೆ. ಅಪಾರ್ಟ್ಮೆಂಟ್‌ಗೆ ಅಪರಿಚಿತ ಎಂಟ್ರಿ ಇಲ್ಲ, ಆದ್ರೂ ಹೇಗೆ ಅಪಾರ್ಟ್ಮೆಂಟ್‌ನ ಟೆರೇಸ್‍ಗೆ ಮೋಹಿನ್ ಹೋದ ಎಂಬುದರ ಬಗ್ಗೆ ಪ್ರಶ್ನೆ ಇತ್ತು. ಇದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಮೋಹಿನ್ ಅಪಾರ್ಟ್ಮೆಂಟ್‌ಗೆ ಹೋಗುವಾಗ ಅದೇ ಅಪಾರ್ಟ್ಮೆಂಟ್‌ನ ವಿದ್ಯಾರ್ಥಿಯ ಜೊತೆಗೆ ಒಳ ಹೋಗಿದ್ದ ಆ ಅಪಾರ್ಟ್ಮೆಂಟ್‌ನ ವಿದ್ಯಾರ್ಥಿಗೂ ಮೋಹಿನ್ ಗೊತ್ತಿರಲಿಲ್ಲ. ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಈತ ಅಪಾರ್ಟ್ಮೆಂಟ್‌ಗೆ ಹೋಗಿದ್ದರಿಂದ ಸೆಕ್ಯೂರಿಟಿಯವರು ಗೊಂದಲಕ್ಕೀಡಾಗಿದ್ರೂ. ಮೋಹಿನ್ ಸಮವಸ್ತ್ರ ಧರಿಸಿದ್ದರಿಂದ ಸೆಕ್ಯೂರಿಟಿಗೆ ಗೊಂದಲಕ್ಕೀಡಾಗಿ ಒಳಬಿಟ್ಟಿದ್ದರು ಎಂಬ ಸತ್ಯ ವಿಚಾರಣೆ ವೇಳೆ ಬಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಟ್ಯೂಶನ್‍ಗೆ ಬರುತ್ತಿದ್ದ ಬಾಲಕಿಯರಿಗೆ ಟೀಚರ್ ತಂದೆಯಿಂದಲೇ ಕಿರುಕುಳ

    ಟ್ಯೂಶನ್‍ಗೆ ಬರುತ್ತಿದ್ದ ಬಾಲಕಿಯರಿಗೆ ಟೀಚರ್ ತಂದೆಯಿಂದಲೇ ಕಿರುಕುಳ

    ಚಂಡೀಗಢ: ಟ್ಯೂಶನ್‍ಗೆಂದು ಬರುತ್ತಿದ್ದ ಬಾಲಕಿಯರಿಗೆ ಟೀಚರ್ ತಂದೆಯೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಛತ್ತೀಸ್‍ಗಢದ (Chhattisgarh) ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.

    11 ಮತ್ತು 12 ವರ್ಷ ಬಾಲಕಿಯರು ಆರೋಪಿಯನ್ನು ತಮ್ಮ ಟ್ಯೂಶನ್ ಟೀಚರ್ ತಂದೆ ಎಂದು ತಿಳಿಸಿದ್ದಾರೆ. ಆಸಾರಾಮ್ ಬಾಪು ನಗರದಲ್ಲಿ ಮಹಿಳೆಯೊಬ್ಬರು ನಡೆಸುತ್ತಿದ್ದ ಟ್ಯೂಶನ್‍ಗೆ 11-12 ವರ್ಷದ ಬಾಲಕಿಯರು ಬರುತ್ತಿದ್ದರು. ಈ ವೇಳೆ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪದಡಿ ಇದೀಗ ಮಹಿಳೆಯ ತಂದೆಯನ್ನು ಬಂಧಿಸಲಾಗಿದೆ ಎಂದು ಮುಖ್ಯ ಪೊಲೀಸ್ ಅಧೀಕ್ಷಕ (ಸಿಎಸ್‍ಪಿ) ಕಂಟೋನ್ಮೆಂಟ್ ಪ್ರಭಾತ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ನನ್ನನ್ನು ದೀದಿ ಮಾ ಅಂತ ಕರೆಯಿರಿ – ಕುಟುಂಬ ತ್ಯಜಿಸಿದ ಬಿಜೆಪಿ ನಾಯಕಿ ಉಮಾ ಭಾರತಿ

    ಅಸಾರಾಂ ಬಾಪು ನಗರದಲ್ಲಿರುವ (Asaram Bapu Nagar) ಭಿಲಾಯಿಯ ಜಮುಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Bhilai’s Jamul police station area) ಈ ಘಟನೆ ನಡೆದಿದೆ. ಮನೆಯ ಸುತ್ತಮುತ್ತಲಿರುವ ಮಕ್ಕಳಿಗೆ ಮಹಿಳೆಯೊಬ್ಬರು ಟ್ಯೂಶನ್ ಹೇಳಿಕೊಡುತ್ತಿದ್ದರು. ಈ ಮಧ್ಯೆ ಮನೆಕೆಲಸವನ್ನು ಮಾಡಲು ಒಳಗೆ ಹೋದಾಗ, ಮಹಿಳೆಯ ತಂದೆ ಹುಸೇನ್ ಚಾಕೊಲೇಟ್ ನೀಡಿ ಬಾಲಕಿಯರಿಗೆ ಕಿರುಕುಳ ನೀಡುತ್ತಿರುತ್ತಾನೆ ಎಂದು ಐದನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಕುಟುಂಬಸ್ಥರಿಗೆ ಈ ಬಗ್ಗೆ ತಿಳಿಸಿದ್ದಾಳೆ. ಇದಾದ ಬಳಿಕ ಇತರ ಹುಡುಗಿಯರು ಕೂಡ ಈ ವಿಚಾರವನ್ನು ಮನೆಯವರ ಬಳಿ ಹೇಳಿಕೊಂಡಿದ್ದಾರೆ.

    ಬಳಿಕ ಅನೇಕ ಬಾಲಕಿಯರ ಕುಟುಂಬಸ್ಥರು ಜಮುಲ್ ಪೊಲೀಸ್ ಠಾಣೆಗೆ ಆಗಮಿಸಿ ಶಹದತ್ ಹುಸೇನ್ ವಿರುದ್ಧ ದೂರು ದಾಖಲಿಸಿ, ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ದೂರಿನನ್ವಯ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಸೆಕ್ಷನ್ 354 ಮತ್ತು ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕದ ಬಾರ್‌ ಬಳಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ -12 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ಎಫೆಕ್ಟ್ – ಮಕ್ಕಳಿಗೆ ರಜೆ, ಶಿಕ್ಷಕರಿಗೆ ಕೆಲಸದ ಹೊರೆ

    ಕೊರೊನಾ ಎಫೆಕ್ಟ್ – ಮಕ್ಕಳಿಗೆ ರಜೆ, ಶಿಕ್ಷಕರಿಗೆ ಕೆಲಸದ ಹೊರೆ

    ಬೆಂಗಳೂರು: ಕೊರೊನಾ ಭೀತಿಯಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ ಮಾರ್ಚ್ 31 ರವರೆಗೆ ರಜೆ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 1-6 ನೇ ತರಗತಿವರೆಗೆ ಪರೀಕ್ಷೆ ರದ್ದು ಮಾಡಲಾಗಿದ್ದು, ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. 7-9 ನೇ ತರಗತಿವರೆಗೆ ಪರೀಕ್ಷೆ ಮುಂದೂಡಲಾಗಿದೆ. ಮಾರ್ಚ್ 31ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳಿಗೆ ರಜೆ ಘೋಷಣೆ ಮಾಡಿರೋ ಸರ್ಕಾರ ಶಿಕ್ಷಕರಿಗೆ ಮಾತ್ರ ರಜೆ ಕೊಟ್ಟಿರಲಿಲ್ಲ. ಈಗ ಮಾರ್ಚ್ 31ವರೆಗೆ ಕಾಲ ಕಳೆಯಲು ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಶೈಕ್ಷಣಿಕ ಚಟುವಟಿಕೆಗಳ ಸಿದ್ಧತೆ ಮಾಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಿದ್ದು, ಮಾರ್ಚ್ 31ರ ಒಳಗೆ ಎಲ್ಲಾ ಸಿದ್ಧತೆ ಮುಗಿಸಿ ಅಂತ ಸೂಚನೆ ನೀಡಿದೆ.

    ಮಾರ್ಚ್ 16ರಿಂದ ಮಾರ್ಚ್ 31ರವರೆಗೆ ಶಿಕ್ಷಕರು ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನ ಪೂರ್ಣಗೊಳಿಸಬೇಕು ಅಂತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ವಿದ್ಯಾರ್ಥಿಗಳು ಮತ್ತೆ ಶಾಲೆಗೆ ವಾಪಸ್ ಬರುವ ವೇಳೆ ಶಾಲೆಯನ್ನು ಸಿದ್ಧಪಡಿಸಿ ಅಂತ ಸೂಚನೆ ನೀಡಿದೆ.

    ಶಿಕ್ಷಕರಿಗೆ ನೀಡಿರುವ ಶೈಕ್ಷಣಿಕ ವೇಳಾಪಟ್ಟಿ ಪ್ರಮುಖ ಅಂಶಗಳು ಹೀಗಿವೆ:
    * 2020-21ನೇ ಸಾಲಿನ ಶಾಲಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು.
    * ಮಕ್ಕಳ ಕಲಿಕಾ ಫಲಗಳ ಆಧಾರದ ಮೇಲಿನ ಬೋಧನೆಗೆ ಕ್ರಿಯಾ ಯೋಜನೆ ಸಿದ್ಧಪಡಿಸುವುದು
    * SDMC ಅವ್ರ ಜೊತೆ ಸೇರಿ ಶಾಲಾ ಮುಖ್ಯೋಪಾಧ್ಯಾಯರು ಶೈಕ್ಷಣಿಕ ಯೋಜನೆ ಸಿದ್ಧಪಡಿಸುವುದು
    * ಸೇತು ಬಂಧ ಪರೀಕ್ಷೆಗೆ ಪ್ರಶ್ನೆಗೆ ಪತ್ರಿಕೆ ತಯಾರು ಮಾಡುವುದು
    * ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ತಯಾರಿಸುವುದು

    * ಶಾಲಾ ಗ್ರಂಥಾಲಯ, ಭೂಪಟ, ಕ್ರೀಡಾ ಸಾಮಾಗ್ರಿ ಸಿದ್ಧ ಮಾಡುವುದು
    * ಸಂಭ್ರಮದ ಶನಿವಾರ(ನೋ ಬ್ಯಾಗ್ ಡೇಗೆ) ರೂಪುರೇಷೆ ಸಿದ್ಧ ಮಾಡಬೇಕು
    * ಪಠ್ಯಕ್ರಮ, ಸಹಪಠ್ಯ ಚಟುವಟಿಕೆಗಳನ್ನ ಒಳಗೊಂಡ ವಾರ್ಷಿಕ ಶಾಲಾ ಪಂಚಾಂಗ ರೆಡಿ ಮಾಡುವುದು
    * ದೀಕ್ಷಾ ಪೊರ್ಟಲ್ ಗೆ ಅಗತ್ಯ ಮಾಹಿತಿಯನ್ನ ಅಪಲೋಡ್ ಮಾಡುವುದು
    * ಸಂಪೂರ್ಣ ಶಾಲೆಯ ಸ್ವಚ್ಛತಾ ಕಾರ್ಯ ನಡೆಸುವುದು
    * ಕ್ರೀಡಾ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು

  • ಬಂಡೀಪುರ ಕಾಡಂಚಿನ ಶಾಲೆಗಳಲ್ಲಿ ಹೊಸ ಸಮಸ್ಯೆ -ವಿದ್ಯಾರ್ಥಿಗಳು ಬಂದ್ರೂ ಕ್ಲಾಸ್ ನಡೆಯೋದು ಮಧ್ಯಾಹ್ನವೇ

    ಬಂಡೀಪುರ ಕಾಡಂಚಿನ ಶಾಲೆಗಳಲ್ಲಿ ಹೊಸ ಸಮಸ್ಯೆ -ವಿದ್ಯಾರ್ಥಿಗಳು ಬಂದ್ರೂ ಕ್ಲಾಸ್ ನಡೆಯೋದು ಮಧ್ಯಾಹ್ನವೇ

    ಚಾಮರಾಜನಗರ: ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನಲ್ಲಿ ಇರುವ ಸರ್ಕಾರಿ ಶಾಲೆಗಳಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಬಡತನದ ನೋವು ಉಂಡವರು. ಶಾಲೆಗಾದ್ರೂ ಸೇರಿಸಿ ಮಕ್ಕಳಿಗೆ ಜೀವನದ ಪಾಠ ಕಲಿಸಬೇಕು ಎಂಬುದು ಪೋಷಕರ ಅಭಿಲಾಷೆಯಾದ್ರೆ, ಬಸ್ ಸಮಸ್ಯೆಯಿಂದ ಅದು ಈಡೇರುತ್ತಿಲ್ಲ.

    ನಗರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲ ಅಂತ ಒಂದು ಕಡೆ ಮುಚ್ಚುತ್ತಿದ್ದಾರೆ. ಆದರೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿದ್ದರೂ ಸರಿಯಾಗಿ ಶಾಲೆಗಳು ನಡೀತಾ ಇಲ್ಲ. ಶಾಲೆಗಳಿಗೆ ಶಿಕ್ಷಕರು ಇಲ್ಲ ಅಂತೇನಲ್ಲ. ಮಕ್ಕಳೂ ಇದ್ದಾರೆ ಶಿಕ್ಷಕರೂ ಇದ್ದಾರೆ. ಆದರೆ ಶಾಲೆಗೆ ಬರೋಕೆ ಸಾರಿಗೆ ವ್ಯವಸ್ಥೆನೇ ಇಲ್ಲ. ಜಕ್ಕಳ್ಳಿ, ಎಲಚ್ಚಟ್ಟಿ, ಕಣಿಯನಪುರ, ಕಣಿಯನಪುರ ಕಾಲೋನಿ, ಮಂಗಲ, ಬಂಡಿಪುರ ಮತ್ತು ಮೇಲುಕಾಮನಹಳ್ಳಿ ಸೇರಿದಂತೆ ಒಟ್ಟು 7 ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಿಗೆ ಸುಮಾರು 20ಕ್ಕೂ ಹೆಚ್ಚು ಶಿಕ್ಷಕರು ಗುಂಡ್ಲುಪೇಟೆ ಪಟ್ಟಣದಿಂದಲೇ ಪ್ರತಿನಿತ್ಯ ಸಂಚರಿಸುತ್ತಾರೆ. ಶಾಲೆ ವೇಳೆಗೆ ಸರಿಯಾಗಿ ಬಸ್ ಬರದೇ ಮಧ್ಯಾಹ್ನದ ವೇಳೆಗೆ ಬರುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಶಾಲೆ ನಡೆಯುತ್ತಿಲ್ಲ. ಮಧ್ಯಾಹ್ನದ ನಂತರ ಶಾಲೆ ಆರಂಭವಾಗುತ್ತಿದೆ ಎಂದು ಶಿಕ್ಷಕಿ ಲಕ್ಷ್ಮಿ ಹೇಳಿದ್ದಾರೆ.

    ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಿಲೋಮೀಟರ್ ದೂರ ಕಾಡು ಪ್ರಾಣಿಗಳ ಭಯವನ್ನೂ ಲೆಕ್ಕಿಸದೇ ಶಾಲೆಗೆ ಬರುತ್ತಿದ್ದಾರೆ. ಆದರೂ ನಿಗದಿತ ಸಮಯಕ್ಕೆ ಶಾಲೆ ಆರಂಭವಾಗದೇ ಇರೋದಕ್ಕೆ ಪೋಷಕರು ಆಸಮಾಧಾನ ವ್ಯಕ್ತಪಡಿಸಿದ್ದಾರೆ. ರೆಸಾರ್ಟ್‍ಗಳಿಗೆ ಹೋಗುವ ಉದ್ಯೋಗಿಗಳಿಗಾಗಿ ಬಸ್ ವಿಳಂಬವಾಗಿ ಬರುತ್ತಿದೆ. ಗುಂಡ್ಲುಪೇಟೆ ಬಸ್ ಡಿಪೋದಿಂದ 9 ಗಂಟೆಗೆ ಬಸ್ ಬಿಟ್ಟರೇ 10 ಗಂಟೆ ವೇಳೆಗಾದ್ರೂ ಬಸ್ ಬಂದ್ರೆ ಶಾಲೆಗಳು ಹೆಚ್ಚು ಕಡಿಮೆ ಆರಂಭವಾಗುತ್ತದೆ. ಆದರೆ ರೆಸಾರ್ಟಿಗೆ ಬರೋ ಉದ್ಯೋಗಿಗಳು 11 ಗಂಟೆ ಬರುವ ಸಮಯ ಗಮನದಲ್ಲಿ ಇಟ್ಟುಕೊಂಡು ಬಸ್ ಬರುತ್ತಿದೆ. ಹೀಗಾಗಿ ಬಸ್ ನಿಗದಿತ ವೇಳೆಗೆ ಬರುವಂತೆ ಅನುಕೂಲ ಮಾಡಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಒಟ್ಟಾರೆ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಈ ದುಸ್ಥಿತಿ ಇರೋದು ವಿಪರ್ಯಾಸ. ಇನ್ಮುಂದೆಯಾದ್ರೂ ಸಚಿವರು ಇತ್ತ ಗಮನ ಹರಿಸಿ ಸಕಾಲದಲ್ಲಿ ಬಸ್ ವ್ಯವಸ್ಥೆ ಮಾಡಬೇಕಾಗಿದೆ.