Tag: ಟೀಂ ಇಂಡಿಯಾ ಕೋಚ್

  • ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗಂಭೀರ್‌ ಫಿಕ್ಸ್‌? – ಗಂಭೀರ್‌ ಸ್ಪಷ್ಟನೆ ಏನು?

    ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗಂಭೀರ್‌ ಫಿಕ್ಸ್‌? – ಗಂಭೀರ್‌ ಸ್ಪಷ್ಟನೆ ಏನು?

    ಮುಂಬೈ: ಟೀಂ ಇಂಡಿಯಾದ ಮುಖ್ಯಕೋಚ್‌ ಆಗಿ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ (Gautam Gambhir) ಆಯ್ಕೆಯಾಗಲಿದ್ದಾರೆ ಎಂಬ ಚರ್ಚೆಗಳು ಕೆಲ ದಿನಗಳಿಂದ ನಡೆಯುತ್ತಿವೆ. ಈ ಬಗ್ಗೆ ಸ್ವತಃ ಗಂಭೀರ್‌ ಅವರೇ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಈಗಾಗಲೇ ಟೀಂ ಇಂಡಿಯಾದ ಮುಖ್ಯ ಕೋಚ್ (eam India Head Coach) ಹುದ್ದೆಯ ಆಕಾಂಕ್ಷಿಯಾಗಿರುವ ಗಂಭೀರ್ ಅವರನ್ನು ಬಿಸಿಸಿಐ ಸಲಹಾ ಸಮಿತಿಯು ಸಂದರ್ಶನ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದೆ ಶ್ರೀಲಂಕಾ ವಿರುದ್ಧ ನಡೆಯಲಿರುವ ದ್ವಿಪಕ್ಷೀಯ ಸರಣಿ ವೇಳೆಗೆ ಗಂಭೀರ್‌ ತಂಡವನ್ನು ಮುನ್ನಡೆಸಲಿದ್ದಾರೆ. ಈ ನಡುವೆ ಮುಖ್ಯ ಕೋಚ್‌ ಹುದ್ದೆಗೆ ಸಂಬಂಧಿಸಿದಂತೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಗಂಭೀರ್‌, ಈ ಸಂದರ್ಭದಲ್ಲಿ ಉತ್ತರಿಸುವುದು ಕಷ್ಟ. ನಾನು ಭವಿಷ್ಯದ ಬಗ್ಗೆ ತುಂಬಾ ಯೋಚಿಸುತ್ತಿಲ್ಲ. ನೀವು ನನಗೆ ಕಠಿಣವಾದ ಪ್ರಶ್ನೆಗಳನ್ನು ಕೇಳಿ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ ಎಂದು ಮಾಧ್ಯಮಗಳಿಗೆ ನಗುಮುಖದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.

    ‘ಈಗ ಇರುವ ಜವಾಬ್ದಾರಿಯನ್ನು (ಕೆಕೆಆರ್ ತಂಡದ ಮೆಂಟ‌ರ್) ಆನಂದಿಸುತ್ತಿದ್ದೇನೆ. ಈಗಷ್ಟೇ ಐಪಿಎಲ್‌ನಲ್ಲಿ ಕೆಕೆಆರ್ 3ನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಕ್ಷಣವನ್ನು ಆನಂದಿಸೋಣ. ಭವಿಷ್ಯದಲ್ಲಿ ಏನು ನಡೆಯಬೇಕೋ ಅದು ನಡೆಯಲಿದೆ. ಸದ್ಯ ತುಂಬಾ ಖುಷಿಯಲ್ಲಿದ್ದೇನೆ. ಕೋಲ್ಕತ್ತಾ ಜನರನ್ನು ಖುಷಿಪಡಿಸುವುದೇ ನನ್ನ ಕೆಲಸ. ನೀವು ಖುಷಿಪಟ್ಟರೆ ನನಗೂ ಖುಷಿ ಎಂದು ಹೇಳಿದ್ದಾರೆ.

    ಗಂಭೀರ್ ಕೋಚಿಂಗ್ ಅನುಭವ ಹೇಗಿದೆ?
    ಟೀಂ ಇಂಡಿಯಾಕ್ಕಾಗಿ 2 ಬಾರಿ ವಿಶ್ವಕಪ್‌ ಗೆದ್ದುಕೊಟ್ಟಿರುವ ಗೌತಮ್‌ ಗಂಭೀರ್‌ ಕೋಚಿಂಗ್‌ನಲ್ಲೂ ಅನುಭವ ಹೊಂದಿದ್ದಾರೆ. 2022-23ರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ‌ ಮೆಂಟರ್‌ ಆಗಿ ಕೆಲಸ ಮಾಡಿದ್ದ ಗಂಭೀರ್‌, ತಂಡವನ್ನು ಸತತ ಎರಡು ಬಾರಿ ಪ್ಲೇ ಆಫ್‌ ಪ್ರವೇಶಿಸುವಂತೆ ಮಾಡಿದ್ದರು. ಇದಘ ಗಂಭೀರ್‌ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಮುಖ್ಯಕೋಚ್‌ ಆಗಿದ್ದು, ಇವರ ನೇತೃತ್ವದಲ್ಲಿ ಕೆಕೆಆರ್‌ ಸಹ ಪ್ಲೇ ಆಫ್‌ ಪ್ರವೇಶಿಸಿದೆ. ಆದ್ರೆ ದೇಶೀಯ ಅಥವಾ ಅಂತಾರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಿದ ಅನುಭವ ಗಂಭೀರ್‌ ಅವರಿಗಿಲ್ಲ.

  • ಗೌತಮ್‌ ಗಂಭೀರ್‌ಗೆ ಬ್ಲ್ಯಾಂಕ್‌ ಚೆಕ್‌ ಆಫರ್‌ ಕೊಟ್ಟಿದ್ದೇಕೆ ಶಾರುಖ್‌?

    ಗೌತಮ್‌ ಗಂಭೀರ್‌ಗೆ ಬ್ಲ್ಯಾಂಕ್‌ ಚೆಕ್‌ ಆಫರ್‌ ಕೊಟ್ಟಿದ್ದೇಕೆ ಶಾರುಖ್‌?

    ಮುಂಬೈ: ಭಾರತ ಪುರುಷರ ಕ್ರಿಕೆಟ್‌ ತಂಡಕ್ಕೆ ಗೌತಮ್‌ ಗಂಭೀರ್‌ ಮುಂದಿನ ಮುಖ್ಯಕೋಚ್‌ (Team India Head Coach) ಆಗುವ ಬಗ್ಗೆ ಮಾತುಕತೆ ನಡೆಯುತ್ತಿರುವಾಗಲೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಕೆಕೆಆರ್‌ ತಂಡದ ಸಹ ಮಾಲೀಕರೂ ಆಗಿರುವ ನಟ ಶಾರುಖ್‌ ಖಾನ್‌ (Shah Rukh Khan), ಬ್ಲ್ಯಾಂಕ್‌ ಚೆಕ್‌ ಆಫರ್‌ ಕೊಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    17ನೇ ಐಪಿಎಲ್‌ ಆವೃತ್ತಿಯ ಚಾಂಪಿಯನ್‌ ಆಗಿರುವ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಮೆಂಟರ್‌ ಆಗಿಯೇ ಮುಂದಿನ 10 ವರ್ಷಗಳ ಕಾಲ ಮುಂದುವರಿಯಲು ಶಾರುಖ್‌, ಗೌತಮ್‌ ಗಂಭೀರ್‌(Gautam Gambhir) ಅವರಿಗೆ ಬ್ಲ್ಯಾಂಕ್‌ ಚೆಕ್‌ (Blank Cheque) ಆಫರ್‌ ನೀಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಂದು ಕ್ಯಾಪ್ಟನ್, ಇಂದು ಮೆಂಟರ್‌ ಆಗಿ ಟ್ರೋಫಿ‌ ಗೆದ್ದುಕೊಟ್ಟ ಗಂಭೀರ್‌; ಹಣೆಗೆ ಮುತ್ತಿಟ್ಟು ಖುಷಿ ಹಂಚಿಕೊಂಡ ಬಾದ್‌ ಷಾ

    ಸದ್ಯ ಗೌತಮ್‌ ಗಂಭೀರ್‌ ಅವರು ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಆಸಕ್ತಿ ತೋರಿದ್ದಾರೆ. ಆದ್ರೆ ಈವರೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಗಂಭೀರ್‌ ಅರ್ಜಿ ಸಲ್ಲಿಸಿದರೆ 100% ಅವರು ಹುದ್ದೆಗೆ ಆಯ್ಕೆಯಾಗುತ್ತಾರೆ. ಗಂಭೀರ್‌ ಮುಂದಿನ ಮುಖ್ಯಕೋಚ್‌ ಹುದ್ದೆಗೆ ಆಸಕ್ತಿ ಹೊಂದಿರುವುದರಿಂದ ಅವರು ಕೆಕೆಆರ್‌ ತಂಡವನ್ನು ತೊರೆಯುವ ಬಗ್ಗೆ ಎಸ್‌ಆರ್‌ಕೆ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: IPL 2024: ದಣಿವರಿಯದೇ ದುಡಿದ ಕ್ರೀಡಾ ಸಿಬ್ಬಂದಿಗೆ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್‌ ಶಾ

    ಕೋಚ್‌ ಹುದ್ದೆಗೆ ಆಸಿಸ್‌ ಆಟಗಾರರನ್ನ ಸಂಪರ್ಕಿಲ್ಲ:
    ಇತ್ತೀಚೆಗೆ ಟೀಂ ಇಂಡಿಯಾದ ಮುಖ್ಯಕೋಚ್‌ ಹುದ್ದೆ ಆಫರ್‌ ತಿರಸ್ಕರಿಸಿರುವುದಾಗಿ ಆಸೀಸ್‌ ಕ್ರಿಕೆಟ್‌ ದಿಗ್ಗಜ ರಿಕಿ ಪಾಂಟಿಂಗ್‌ ಅವರು ಹೇಳಿದ ಬಳಿಕ, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಇದಕ್ಕೆ ಸ್ಪಷ್ಟನೆ ನೀಡಿದ್ದರು. ಟೀಂ ಇಂಡಿಯಾದ ಕೋಚ್‌ ಹುದ್ದೆಗೆ ನಾನು ಯಾವುದೇ ಆಸ್ಟ್ರೇಲಿಯಾ ಆಟಗಾರರನ್ನು ಸಂಪರ್ಕಿಸಿಲ್ಲ. ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರನನ್ನು ಹುಡುಕುವುದು ಒಂದು ನಿಖರವಾದ ಮತ್ತು ಸಂಪೂರ್ಣ ಪ್ರಕ್ರಿಯೆಯಾಗಿದೆ. ಭಾರತೀಯ ಕ್ರಿಕೆಟ್ ರಚನೆಯ ಬಗ್ಗೆ ಆಳವಾದ ತಿಳುವಳಿಕೆ ಹೊಂದಿರುವ ಮತ್ತು ಶ್ರೇಯಾಂಕಗಳ ಮೂಲಕ ಏರಿದ ವ್ಯಕ್ತಿಗಳನ್ನು ಆಯ್ಕೆ ಮಾಡಲು ನಾವು ಗಮನಹರಿಸಿದ್ದೇವೆ. ಟೀಂ ಇಂಡಿಯಾವನ್ನು ಮುಂದಿನ ಹಂತಕ್ಕೆ ಏರಿಸಲು ನಮ್ಮ ದೇಶೀಯ ಕ್ರಿಕೆಟ್ ಚೌಕಟ್ಟಿನ ಬಗ್ಗೆ ನಮ್ಮ ಕೋಚ್ ಆಳವಾದ ಜ್ಞಾನವನ್ನು ಹೊಂದಿರುವುದು ಬಹಳ ಮುಖ್ಯ ಎಂದು ಹೇಳಿದ್ದರು.

    ನವೆಂಬರ್‌ 2021 ರಿಂದ ದ್ರಾವಿಡ್‌ (Rahul Dravid) ಕೋಚ್‌ ಹುದ್ದೆಯನ್ನು ಅಲಂಕರಿಸಿದ್ದು ಪ್ರಸಕ್ತ ವರ್ಷದ ಜೂನ್‌ನಲ್ಲಿ ಅವಧಿ ಅಂತ್ಯವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಕ್ತಾಯವಾಗಲಿದೆ. ಇದನ್ನೂ ಓದಿ: T20 World Cup: ಚುಟುಕು ಕ್ರಿಕೆಟ್ ಯುಗದ ಆರಂಭ – ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್!

  • ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗೌತಮ್‌ ಗಂಭೀರ್‌ ಹೆಸರು ಪ್ರಸ್ತಾಪ!

    ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗೌತಮ್‌ ಗಂಭೀರ್‌ ಹೆಸರು ಪ್ರಸ್ತಾಪ!

    ಮುಂಬೈ: ರಾಹುಲ್‌ ದ್ರಾವಿಡ್‌ ಅವರ ಬಳಿಕ ಟೀಂ ಇಂಡಿಯಾ ಮುಖ್ಯಕೋಚ್‌ (Team India Head Coach) ಯಾರಾಗ್ತಾರೆ ಎಂಬ ಕುತೂಹಲಕ್ಕೆ ಬಿಸಿಸಿಐ ತೆರೆ ಎಳೆದಂತೆ ಕಾಣುತ್ತಿದೆ. ಏಕೆಂದರೆ ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಸ್ಥಾನದಲ್ಲಿ ಮುಂದುವರಿಯಲು ಮತ್ತೆ ಅರ್ಜಿ ಸಲ್ಲಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಅವರ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ (Gautam Gambhir) ಅವರ ಹೆಸರು ಕೇಳಿಬಂದಿದೆ.

    ರಾಹುಲ್‌ ದ್ರಾವಿಡ್‌ (Rahul Dravid) ಅವರ ನಂತರ ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆ ಅಲಂಕರಿಸುವಂತೆ ಬಿಸಿಸಿಐ ಗೌತಮ್‌ ಗಂಭೀರ್‌ ಅವರಿಗೆ ಮನವಿ ಮಾಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ. ಆದ್ರೆ ಈ ಬಗ್ಗೆ ಜಯ್‌ ಶಾ ಅವರಾಗಲಿ ಬಿಸಿಸಿಐ (BCC) ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: IPL 2024: ಮಳೆಗೆ ಪಂದ್ಯ ಬಲಿ – ಸನ್‌ ರೈಸರ್ಸ್‌ ಪ್ಲೇ ಆಫ್‌ಗೆ, ಟೈಟಾನ್ಸ್‌ ಮನೆಗೆ

    ಹೌದು. ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ದ್ರಾವಿಡ್‌ ಅವರ ಮುಖ್ಯಕೋಚ್‌ ಹುದ್ದೆಯ ಅವಧಿ ಮುಕ್ತಾಯಗೊಳ್ಳಲಿದೆ. ದ್ರಾವಿಡ್‌ ಅವರ ಸ್ಥಾನಕ್ಕೆ ಅರ್ಹರನ್ನ ಆಯ್ಕೆ ಮಾಡಲು ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಮೇ 27 ರಂದು ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

    ಈ ಮೊದಲು ಟೀಂ ಇಂಡಿಯಾ ಮುಖ್ಯಕೋಚ್‌ ಸ್ಥಾನಕ್ಕೆ ನ್ಯೂಜಿಲೆಂಡ್‌ನ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರನ್ನು ಆಯ್ಕೆ ಮಾಡುವಲ್ಲಿ ಬಿಸಿಸಿಐ ಉತ್ಸುಕವಾಗಿತ್ತು. ಈ ನಡುವೆ ಗೌತಮ್‌ ಗಂಭೀರ್‌ ಅವರ ಹೆಸರೂ ಕೇಳಿಬಂದಿದೆ. ಈಗಾಗಲೇ ಬಿಸಿಸಿಐ ಗಂಭೀರ್ ಅವರನ್ನ ಸಂಪರ್ಕಿಸಿದ್ದು, 2024ರ ಟಿ20 ವಿಶ್ವಕಪ್‌ ಬಳಿಕ ಅಧಿಕಾರ ವಹಿಸಿಕೊಳ್ಳವಂತೆ ಮನವಿ ಮಾಡಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನಾಳೆ ಆರ್‌ಸಿಬಿ ಮ್ಯಾಚ್‌ – ಚಿನ್ನ‌‌ಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾದ ಸರ್ಕಾರ

    ಗಂಭೀರ್ ಕೋಚಿಂಗ್ ಅನುಭವ ಹೇಗಿದೆ?
    ಟೀಂ ಇಂಡಿಯಾಕ್ಕಾಗಿ 2 ಬಾರಿ ವಿಶ್ವಕಪ್‌ ಗೆದ್ದುಕೊಟ್ಟಿರುವ ಗೌತಮ್‌ ಗಂಭೀರ್‌ ಕೋಚಿಂಗ್‌ನಲ್ಲೂ ಅನುಭವ ಹೊಂದಿದ್ದಾರೆ. 2022-23ರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ‌ ಮೆಂಟರ್‌ ಆಗಿ ಕೆಲಸ ಮಾಡಿದ್ದ ಗಂಭೀರ್‌, ತಂಡವನ್ನು ಸತತ ಎರಡು ಬಾರಿ ಪ್ಲೇ ಆಫ್‌ ಪ್ರವೇಶಿಸುವಂತೆ ಮಾಡಿದ್ದರು. ಇದಘ ಗಂಭೀರ್‌ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಮುಖ್ಯಕೋಚ್‌ ಆಗಿದ್ದು, ಇವರ ನೇತೃತ್ವದಲ್ಲಿ ಕೆಕೆಆರ್‌ ಸಹ ಪ್ಲೇ ಆಫ್‌ ಪ್ರವೇಶಿಸಿದೆ. ಆದ್ರೆ ದೇಶೀಯ ಅಥವಾ ಅಂತಾರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಿದ ಅನುಭವ ಗಂಭೀರ್‌ ಅವರಿಗಿಲ್ಲ.

  • ಜೂನ್‌ ಬಳಿಕ ಟೀಂ ಇಂಡಿಯಾಕ್ಕೆ ಹೊಸ ಮುಖ್ಯಕೋಚ್‌ – ಜಯ್‌ ಶಾ ಹೇಳಿದ್ದೇನು?

    ಜೂನ್‌ ಬಳಿಕ ಟೀಂ ಇಂಡಿಯಾಕ್ಕೆ ಹೊಸ ಮುಖ್ಯಕೋಚ್‌ – ಜಯ್‌ ಶಾ ಹೇಳಿದ್ದೇನು?

    ಮುಂಬೈ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಶೀಘ್ರದಲ್ಲೇ ಹೊಸ ಕೋಚ್‌ಗಾಗಿ ಜಾಹೀರಾತನ್ನು ಪ್ರಕಟಿಸಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್‌ ಬಳಿಕ ಟೀಂ ಇಂಡಿಯಾಕ್ಕೆ (Team India) ಹೊಸ ಮುಖ್ಯಕೋಚ್‌ ಬರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.

    ಈ ಕುರಿತು ಮುಂಬೈನಲ್ಲಿ (Mumbai) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೀಂ ಇಂಡಿಯಾದ ಹಾಲಿ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಅವರ ಅಧಿಕಾರ ಅವಧಿಯು ಜೂನ್‌ ತಿಂಗಳವರೆಗೆ ಮಾತ್ರ ಇರಲಿದೆ. ಒಂದು ವೇಳೆ ರಾಹುಲ್‌ ದ್ರಾವಿಡ್‌ (Rahul Dravid) ಮತ್ತೆ ಕೋಚ್‌ ಆಗಲು ಬಯಸಿದ್ರೆ ಅರ್ಜಿ ಸಲ್ಲಿಸಬಹುದು ಎಂದು ಜಯ್‌ ಶಾ ಹೇಳಿದ್ದಾರೆ.

    ಮೊದಲಿಗೆ ಮುಖ್ಯಕೋಚ್‌ ಅನ್ನು ಆಯ್ಕೆ ಮಾಡಲಾಗುತ್ತದೆ. ಹೊಸ ಕೋಚ್‌ನೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಬ್ಯಾಟಿಂಗ್‌, ಫೀಲ್ಡಿಂಗ್‌ ಇತರ ಕೋಚ್‌ ಸಿಬ್ಬಂದಿಯನ್ನು ಆಯ್ಕೆ ಮಾಡುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕದನದೊಳ್‌ ಕೊಹ್ಲಿ ಕೆಣಕಿ ಉಳಿದವರುಂಟೇ – ಐಪಿಎಲ್‌ನಲ್ಲಿ ಗನ್‌ಶೂಟ್‌ ಕದನ – ಕಲಾಶ್‌ ನಿಕಾವೋಗೆ ಹೋಲಿಸಿ ಟ್ರೆಂಡ್‌!

    ಇದೇ ವೇಳೆ ಭಾರತೀಯರೇ ಕೋಚ್‌ ಆಗ್ತಾರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಯ್‌ ಶಾ, ಹೊಸ ಕೋಚ್‌ ಭಾರತೀಯ ಅಥವಾ ವಿದೇಶಿಗರೋ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಇದು ಕ್ರಿಕೆಟ್‌ ಸಲಹಾ ಸಮಿತಿಗೆ (CAC)ಗೆ ಬಿಟ್ಟಿರುತ್ತದೆ. ಹೊಸ ಕೋಚ್‌ ಅನ್ನು ಆರಂಭಿಕ 3 ವರ್ಷ ಅವಧಿಗಳ ನಂತರ ದೀರ್ಘಾವಧಿಗೆ ಆಯ್ಕೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮನರಂಜನೆ ಮಾತ್ರವಲ್ಲ ಜಾಗೃತಿಯೂ ಉಂಟು – ಗಿಲ್‌ ಪಡೆ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿಯೋದು ಏಕೆ?

    ಇಂಪ್ಯಾಕ್ಟ್‌ ರೂಲ್ಸ್‌ ಬಗ್ಗೆ ಜಯ್‌ ಶಾ ಹೇಳಿದ್ದೇನು?
    ಇದೇ ವೇಳೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಬಳಕೆಯಾಗುತ್ತಿರುವ ಇಂಪ್ಯಾಕ್ಟ್‌ ಪ್ಲೇಯರ್‌ (Impact Player) ರೂಲ್ಸ್‌ ಬಗ್ಗೆ ಮಾತನಾಡಿದ ಜಯ್‌ ಶಾ, ಎಲ್ಲಾ ತಂಡಗಳ ನಾಯಕರು ಹಾಗೂ ತರಬೇತುದಾರರೊಂದಿಗೆ ಸಮಾಲೋಚಿಸಿದ ಬಳಿಕ ಈ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಐಪಿಎಲ್‌ನ ವೇದಿಕೆಯೊಂದರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ಬಗ್ಗೆ ಆಕ್ರೋಶ ಹೊರಹಾಕಿದ್ದರು.

  • ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯಿಂದ ಉಡುಪಿಯಲ್ಲಿ ನಾಗಾರಾಧನೆ

    ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯಿಂದ ಉಡುಪಿಯಲ್ಲಿ ನಾಗಾರಾಧನೆ

    ಉಡುಪಿ: ಕಾರ್ಕಳ ಸಮೀಪದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಸೇವೆ ನೀಡಿದರು. ನಾಗಬನದಲ್ಲಿ ತನು ತಂಬಿಲ ಸೇವೆ ನೀಡಿದರು. ಟೀಂ ಇಂಡಿಯಾ ಬಗ್ಗೆ ಕೂಡಾ ಮಾತನಾಡಿದ್ರು.

    ಕ್ರಿಕೆಟಿಗೂ ನಾಗಬ್ರಹ್ಮನಿಗೂ ಏನಾದ್ರೂ ಸಂಬಂಧ ಇದ್ಯಾ? ಇಲ್ಲ ಅಂತ ಹೇಳ್ಬೇಡಿ. ವಿಶ್ವದ ನಂಬರ್ ಒನ್ ಟೀಂನ ಕೋಚ್ ರವಿಶಾಸ್ತ್ರಿಗೂ ಭಾರೀ ಸಂಬಂಧವಿದೆ. ಅವರ ವೃತ್ತಿ ಜೀವನಕ್ಕೆ ಕ್ರಿಕೆಟ್ ಕೈ ಹಿಡಿದ್ರೆ  ಸಾಂಸಾರಿಕಾ ಜೀವನದ ಕೈ ಹಿಡಿದದ್ದು ದೇವರ ಮೇಲಿನ ನಂಬಿಕೆ.

    ಮದುವೆಯಾಗಿ 17 ವರ್ಷ ಸಂತಾನ ಭಾಗ್ಯ ಇಲ್ಲದೇ ಇದ್ದಾಗ ರವಿಶಾಸ್ತ್ರಿ ಎರ್ಲಪ್ಪಾಡಿ ಕ್ಷೇತ್ರಕ್ಕೆ ಭೇಟಿಕೊಟ್ಟು ಹರಕೆ ಹೊತ್ತಿದ್ದರು. ನಂತರ ರವಿಶಾಸ್ತ್ರಿಗೆ ಸಂತಾನಭಾಗ್ಯ ದಕ್ಕಿತು. ನಾಗದೇವರ ಆಶೀರ್ವಾದವನ್ನು ನೆನೆಯುವ ರವಿಶಾಸ್ತ್ರಿ ಪ್ರತೀ ವರ್ಷ ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ಎರ್ಲಪ್ಪಾಡಿಗೆ ಬರುತ್ತಾರೆ. ನಾಗಾರಾಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಬಾರಿ ಕೂಡಾ ನಾಗಬನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ರವಿಶಾಸ್ತ್ರಿ ಸಂಬಂಧಿ, ಆಪ್ತ ಮನೋಹರ ಪ್ರಸಾದ್ ಹೇಳಿದರು.

    ರವಿಶಾಸ್ತ್ರಿ ಪೂರ್ವಿಕರು ಕಾರ್ಕಳ ತಾಲೂಕಿನ ಎರ್ಲಪ್ಪಾಡಿಯಲ್ಲಿ ನೆಲೆಸಿದ್ದರು. ಇಲ್ಲಿಂದ ವಲಸೆ ಹೋದ ನಂತರವೂ ಇಲ್ಲಿನ ಕಾರ್ಣಿಕ ತಿಳಿದ ರವಿ ಶಾಸ್ತ್ರಿ ವರ್ಷಕ್ಕೊಮ್ಮೆಯಾದ್ರೂ ಇಲ್ಲಿಗೆ ಭೇಟಿ ಕೊಡುವ ಪರಿಪಾಠ ಬೆಳೆಸಿದ್ದಾರೆ.

    ವಿಷ್ಣುಮೂರ್ತಿ ದೇವಸ್ಥಾನ ಮತ್ತು ನಾಗಬನದ ಸೇವೆಯಲ್ಲಿ ನಾನು ಮನಶಾಂತಿ ಪಡೆಯುತ್ತೇನೆ. ಭಾರತ ಮುಂದೆ ದೊಡ್ಡ ಪಂದ್ಯಾಟವನ್ನು ಎದುರು ನೋಡುತ್ತಿದೆ. ಇದೇ ಸಂದರ್ಭ ದೇವರ ದರ್ಶನವಾಗಿರುವುದು ಖುಷಿಯಾಗಿದೆ ಎಂದರು. ಟೀಂನ ಹುಡುಗರಿಗೂ ನನಗೂ ಹೊಂದಾಣಿಕೆ ಚೆನ್ನಾಗಿದೆ. ಹೀಗಾಗಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.

    ರವಿಶಾಸ್ತ್ರಿ ಕರ್ವಾಲು ದೇವಸ್ಥಾನಕ್ಕೆ ಆಗಮಿಸುವುದೆಂದರೆ ಗ್ರಾಮಸ್ಥರಿಗೆ ಹಬ್ಬವಿದ್ದಂತೆ. ರವಿಶಾಸ್ತ್ರಿ ಬಂದ್ರೆ ದೇವಸ್ಥಾನದಲ್ಲಿ ಹಬ್ಬದೂಟ ಆಯೋಜನೆಯಾಗುತ್ತದೆ.  ಶಾಸ್ತ್ರಿ ಸಾಮಾನ್ಯ ಜನರಂತೆ ಸಹಭೋಜನದಲ್ಲಿ ಪಾಲ್ಗೊಂಡರು. ರವಿ ಶಾಸ್ತ್ರಿಯನ್ನು ದೇವಸ್ಥಾನದ ಆಡಳಿತ ಮಂಡಳಿ, ಊರಿನ ಜನರು ಸನ್ಮಾನಿಸಿದರು.

    ರವಿಶಾಸ್ತ್ರಿಗೂ ಈ ಊರಿನ ಜೊತೆ ಅವಿನಾಭಾವ ಸಂಬಂಧ. ಇಲ್ಲಿನ ಸರ್ಕಾರಿ ಶಾಲೆಗೆ ಒಂದು ಲಕ್ಷ ರೂಪಾಯಿ ನೀಡಿದ್ದರು. ದೇವಸ್ಥಾನಕ್ಕೆ ಆರ್ಥಿಕ ಸಹಾಯ ಮಾಡುತ್ತಾ ಬಂದಿದ್ದಾರೆ. ಮುಂದಿನ ಕ್ರಿಕೆಟ್ ಮಹಾಸಮರಕ್ಕೆ ಸಿದ್ಧಗೊಳ್ಳುತ್ತಿರುವ ರವಿಶಾಸ್ತ್ರಿಯ ತಂಡಕ್ಕೆ  ಎರ್ಲಪ್ಪಾಡಿ ಗ್ರಾಮದ ಜನ ಶುಭಕೋರಿದ್ದಾರೆ.