Tag: ಟಿ20

  • ವೈರಲ್ ಆಗುತ್ತಿದೆ SKY ಸಿಡಿಸಿದ ಬ್ಯಾಕ್‍ವರ್ಡ್ ಪಾಯಿಂಟ್ ಸಾಲಿಡ್ ಸಿಕ್ಸ್

    ವೈರಲ್ ಆಗುತ್ತಿದೆ SKY ಸಿಡಿಸಿದ ಬ್ಯಾಕ್‍ವರ್ಡ್ ಪಾಯಿಂಟ್ ಸಾಲಿಡ್ ಸಿಕ್ಸ್

    ಲಂಡನ್: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್ ಯಾದವ್ ಬ್ಯಾಕ್‍ವರ್ಡ್ ಪಾಯಿಂಟ್ ಮೂಲಕ ಸಿಡಿಸಿದ ಭರ್ಜರಿ ಸಿಕ್ಸ್ ಒಂದು ವೈರಲ್ ಆಗುತ್ತಿದೆ.

    ನಿನ್ನೆ ನಡೆದ ಇಂಗ್ಲೆಂಡ್ ಮತ್ತು ಭಾತರತ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಆಟದ ಮೂಲಕ ಶತಕ ಸಿಡಿಸಿ ಮಿಂಚಿದ್ದರು. ಇಂಗ್ಲೆಂಡ್ ನೀಡಿದ 216 ರನ್‍ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರಿಸ್‍ಗೆ ಆಗಮಿಸಿದ ಸೂರ್ಯಕುಮಾರ್ ಯಾದವ್ ತಂಡಕ್ಕೆ ಆಧಾರವಾಗಿ 117 ರನ್ (55 ಎಸೆತ, 14 ಬೌಂಡರಿ, 6 ಸಿಕ್ಸ್) ಚಚ್ಚಿ ತಂಡದ ಗೆಲುವಿಗಾಗಿ ಹೋರಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅದರಲ್ಲೂ ಸೂರ್ಯಕುಮಾರ್ ಯಾದವ್ ಸಿಡಿಸಿದ 6 ಸಿಕ್ಸರ್‌ಗಳು ಮನಮೋಹಕವಾಗಿತ್ತು. ಈ ಪೈಕಿ ಇದೀಗ ಬ್ಯಾಕ್‍ವರ್ಡ್ ಪಾಯಿಂಟ್‍ನತ್ತ ಸಿಡಿಸಿದ ಸಾಲಿಡ್ ಸಿಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪಂದ್ಯ ಸೋತು ಸರಣಿ ಗೆದ್ದ ಭಾರತ – ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 17 ರನ್‌ಗಳ ಜಯ

     

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 215 ರನ್ ಬಾರಿಸಿತು. 216 ರನ್‍ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಸೂರ್ಯಕುಮಾರ್ ಯಾದವ್ 18 ಓವರ್‌ ಅಂತ್ಯದ ವರೆಗೆ ಹೋರಾಡಿ ಕೊನೆ ಕ್ಷಣದಲ್ಲಿ ವಿಕೆಟ್ ಕೈಜೆಲ್ಲಿಕೊಂಡರು. ಈ ಮೂಲಕ ಭಾರತದ ಗೆಲುವಿನ ಆಸೆ ಕಮರಿತು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿ ಸೋಲುಂಡಿತು. ಇತ್ತ ಸೂರ್ಯಕುಮಾರ್‌ ಯಾದವ್‌ ಸಿಡಿಸಿದ ಚೊಚ್ಚಲ ಶತಕ ವ್ಯರ್ಥವಾದರೂ, ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ 5ನೇ ಆಟಗಾರ ಎಂಬ ಹೆಗ್ಗಳಿಕೆ ಸೂರ್ಯಕುಮಾರ್ ಪಾತ್ರರಾಗಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿಯ ಜಾಹೀರಾತು ನಿಲ್ಲಿಸಿದ ವಿವೋ

    17 ರನ್‍ಗಳ ಅಂತರದ ಜಯದೊಂದಿಗೆ ಇಂಗ್ಲೆಂಡ್ ತವರಿನಲ್ಲಿ ವೈಟ್‍ವಾಶ್ ಮುಖಭಂಗದಿಂದ ತಪ್ಪಿಸಿಕೊಂಡಿತು. ಭಾರತ ತಂಡ 2-1 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿತು.

    Live Tv
    [brid partner=56869869 player=32851 video=960834 autoplay=true]

  • ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲು ರೋಹಿತ್ ಶರ್ಮಾಗೆ ಇನ್ನೊಂದೆ ಹೆಜ್ಜೆ

    ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲು ರೋಹಿತ್ ಶರ್ಮಾಗೆ ಇನ್ನೊಂದೆ ಹೆಜ್ಜೆ

    ಮುಂಬೈ: ಟೀಂ ಇಂಡಿಯಾ ನಾಯಕ ಹಾಗೂ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಯಶಸ್ವಿ ಪ್ರದರ್ಶನ ಮುಂದುವರಿದಿದೆ. ಐಪಿಎಲ್‌ನಲ್ಲಿ ಶೂನ್ಯ ಸುತ್ತಿ ತೀವ್ರ ಮುಖಭಂಗಕ್ಕೀಡಾಗಿದ್ದ ರೋಹಿತ್ ಶರ್ಮಾ ಈಗ ಫಾರ್ಮ್‌ನಲ್ಲಿದ್ದು  ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

    ಈಗಾಗಲೇ ಇಂಗ್ಲೆಂಡ್ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ ನೇತೃತ್ವದಲ್ಲಿ ಮುನ್ನಡೆ ಸಾಧಿಸಿದೆ. ಬೆಸ್ಟ್ ಆಫ್ 3ರಲ್ಲಿ ಕ್ರಮವಾಗಿ 50 ಹಾಗೂ 49 ರನ್‌ಗಳ ಅಂತರದಿಂದ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3ನೇ ಪಂದ್ಯದಲ್ಲಿ ಗೆದ್ದು ಇಂಗ್ಲೆಂಡ್ ತವರಲ್ಲೇ ವೈಟ್‌ವಾಶ್ ಮಾಡುವ ಗುರಿ ಹೊಂದಿದೆ. ಈ ನಡುವೆ ನಾಯಕ ರೋಹಿತ್ ಶರ್ಮಾ ಮತ್ತೊಂದು ವಿಶ್ವದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಇದನ್ನೂ ಓದಿ: ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ

    ರಿಕಿ ಪಾಂಟಿಂಗ್ ವಿಶ್ವದಾಖಲೆ ಸರಿಗಟ್ಟುವ ಅವಕಾಶ: ಇಂಗ್ಲೆಂಡ್ ವಿರುದ್ಧದ ಟಿ20ಯ 2 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ರೋಹಿತ್ ನಾಯಕನಾಗಿ ಸತತ 19 ಪಂದ್ಯಗಳನ್ನ ಗೆದ್ದಂತಹ ಸಾಧನೆ ಮಾಡಿದ್ದಾರೆ. ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆಯಲಿರುವ 3ನೇ ಪಂದ್ಯವನ್ನೂ ಗೆದ್ದರೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ. ಇದನ್ನೂ ಓದಿ: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಿ ರೋಹಿತ್‌ ಶರ್ಮಾ ನೇಮಕ

    2003ರಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಅವರ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡವು 20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದು ಪುರುಷರ ಕ್ರಿಕೆಟ್ ಪಂದ್ಯದಲ್ಲಿ ಅತಿದೊಡ್ಡ ಗೆಲುವಾಗಿದೆ. ಆದರೆ ಈಗಾಗಲೇ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ರೋಹಿತ್ ಶರ್ಮಾ ತಂಡವು ಇನ್ನೊಂದು ಪಂದ್ಯದಲ್ಲಿ ಗೆದ್ದರೆ ರೋಹಿತ್ ವಿಶ್ವದಾಖಲೆಗೆ ಖ್ಯಾತಿಯಾಗಲಿದ್ದಾರೆ.

    ಟಿ20 ನಾಯಕತ್ವದ ದಾಖಲೆ: ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಅಮೋಘ ದಾಖಲೆ ಬರೆದಿದ್ದಾರೆ. ಇದುವರೆಗೆ 30 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತವನ್ನ ಮುನ್ನಡೆಸಿರುವ ರೋಹಿತ್ ಶರ್ಮಾ 26 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದು, ಇವರ ನಾಯಕತ್ವದಲ್ಲಿ ಕೇವಲ 4 ಪಂದ್ಯಗಳನ್ನಷ್ಟೇ ಭಾರತ ಸೋತಿದೆ. ಇನ್ನು ಗೆಲುವಿನಲ್ಲಿ ಶೇ.86.66ರಷ್ಟು ಸರಾಸರಿ ಹೊಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ – ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಧೋನಿ

    ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ – ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಧೋನಿ

    ಲಂಡನ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 49 ರನ್‍ಗಳ ಭರ್ಜರಿ ಜಯಗಳಿಸಿದ ಬಳಿಕ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಕಾಣಿಸಿಕೊಂಡಿದ್ದಾರೆ.

    ಟೀಂ ಇಂಡಿಯಾ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. 2ನೇ ಟಿ20 ಪಂದ್ಯ ಗೆದ್ದ ಬಳಿಕ ಧೋನಿ ಭಾರತ ತಂಡದ ಡ್ರೆಸ್ಸಿಂಗ್ ರೂಮ್‍ಗೆ ತೆರಳಿ ಟೀಂ ಇಂಡಿಯಾ ಆಟಗಾರೊಂದಿಗೆ ಮಾತನಾಡಿದ್ದಾರೆ. ಧೋನಿ ತಂಡದ ಆಟಗಾರೊಂದಿಗಿರುವ ಫೋಟೋವನ್ನು ಬಿಸಿಸಿಐ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಆಂಗ್ಲರ ವಿರುದ್ಧ 49 ರನ್‌ಗಳ ಜಯ- ಸರಣಿ ಗೆದ್ದ ಭಾರತ

    ನಿನ್ನೆ ನಡೆದ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಇಂಗ್ಲೆಂಡ್‍ಗೆ 171 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಭಾರತದ ಬೌಲರ್‌ಗಳ ಬಿಗಿ ದಾಳಿಗೆ ನಲುಗಿ ಕೇವಲ 121 ರನ್‍ಗಳಿಗೆ ಗಂಟುಮೂಟೆ ಕಟ್ಟಿ ಸೋಲನುಭವಿಸಿತು. ಭಾರತ ತಂಡ 49 ರನ್‍ಗಳ ಅಂತರದ ಜಯದೊಂದಿಗೆ ತವರಿನ ತಂಡಕ್ಕೆ ಟಕ್ಕರ್ ನೀಡಿತು. ಇದನ್ನೂ ಓದಿ: ರಿಮೋಟ್ ಕಂಟ್ರೋಲ್ ಕಾರ್ ಮೂಲಕ ಗ್ರೌಂಡ್‌ಗೆ ಪ್ರವೇಶಿಸಿತು ಕ್ರಿಕೆಟ್ ಚೆಂಡು

    ಭಾರತದ ಪರ ರವೀಂದ್ರ ಜಡೇಜಾ ಅಜೇಯ 46 ರನ್ (29 ಎಸೆತ, 5 ಬೌಂಡರಿ) ಸಿಡಿಸಿ ಬ್ಯಾಟಿಂಗ್‍ನಲ್ಲಿ ಮಿಂಚಿದರೆ, ಬೌಲಿಂಗ್‍ನಲ್ಲಿ ಭುವನೆಶ್ವರ್ ಕುಮಾರ್ 3 ವಿಕೆಟ್, ಬುಮ್ರಾ ಮತ್ತು ಚಹಾಲ್ ತಲಾ 2 ವಿಕೆಟ್ ಕಿತ್ತು ಗೆಲುವು ತಂದುಕೊಟ್ಟರು.

    Live Tv
    [brid partner=56869869 player=32851 video=960834 autoplay=true]

  • 51 ರನ್‌ ಚಚ್ಚಿ 4 ವಿಕೆಟ್‌ ಕಿತ್ತ ಪಾಂಡ್ಯ – ನಂಬರ್ ಗೇಮ್‍ನಲ್ಲಿ ಸೋತ ಆಂಗ್ಲರು

    51 ರನ್‌ ಚಚ್ಚಿ 4 ವಿಕೆಟ್‌ ಕಿತ್ತ ಪಾಂಡ್ಯ – ನಂಬರ್ ಗೇಮ್‍ನಲ್ಲಿ ಸೋತ ಆಂಗ್ಲರು

    ಲಂಡನ್: ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್‌ ಆಟಕ್ಕೆ ಮಂಕಾದ ಆಂಗ್ಲರು ಮೊದಲ ಟಿ20 ಪಂದ್ಯದಲ್ಲಿ ತವರಿನಲ್ಲಿ ಸೋಲು ಕಂಡಿದ್ದಾರೆ. ಇತ್ತ ಟೀಂ ಇಂಡಿಯಾ 50 ರನ್‍ಗಳ ಅಂತರದ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ ಶುಭಾರಂಭ ಕಂಡಿದೆ.

    ಟೀಂ ಇಂಡಿಯಾ ಪರ ಪಾಂಡ್ಯ ಬ್ಯಾಟಿಂಗ್‍ನಲ್ಲಿ 51 ರನ್ (33 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಬೌಲಿಂಗ್‍ನಲ್ಲಿ 4 ಓವರ್ ಎಸೆದು 33 ರನ್ ನೀಡಿ 4 ವಿಕೆಟ್ ಕಿತ್ತು ಆಂಗ್ಲರ ಹೆಡೆಮುರಿ ಕಟ್ಟಿದರು. ಭಾರತ ನೀಡಿದ 199 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿ 148 ರನ್‍ಗಳಿಗೆ ಸರ್ವಪತನ ಕಂಡು ಸೋಲುಂಡಿತು. ಇತ್ತ ನಂಬರ್ ಗೇಮ್‍ನಲ್ಲಿ ಮಿಂಚಿದ ಪಾಂಡ್ಯ 51 ರನ್ ಸಿಡಿಸಿದರೆ, ಭಾರತಕ್ಕೆ 50 ರನ್‍ಗಳ ಜಯ ತಂದುಕೊಟ್ಟರು. ಇದನ್ನೂ ಓದಿ: ಇನ್ನಷ್ಟು ಕಾಲ ಕ್ರಿಕೆಟ್ ಆಡಿ ಎಂದು ಧೋನಿಗೆ ಮನವಿ ಮಾಡಿಕೊಂಡ ಪಾಕ್ ಕ್ರಿಕೆಟರ್

    ಈ ಮೂಲಕ ಪಾಂಡ್ಯ ಟಿ20 ಕ್ರಿಕೆಟ್‍ನಲ್ಲಿ 50+ ರನ್ ಮತ್ತು 4 ವಿಕೆಟ್ ಪಡೆದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಗ್ಲೆಂಡ್ ವಿರುದ್ಧ 3 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಪಡೆದುಕೊಂಡಿದೆ.

    199 ರನ್‍ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‍ಗೆ ಪಾಂಡ್ಯ ಆರಂಭದಿಂದಲೇ ಕಾಡತೊಡಗಿದರು. ಆರಂಭಿಕ ಆಟಗಾರ ಜೇಸನ್ ರಾಯ್ 4 ರನ್ (16 ಎಸೆತ) ಗಳಿಸಿ ಪಾಂಡ್ಯಗೆ ಮೊದಲ ವಿಕೆಟ್ ರೂಪದಲ್ಲಿ ಹೊರ ನಡೆದರೆ, ನಾಯಕ ಜೋಸ್ ಬಟ್ಲರ್ ಶೂನ್ಯ ಸುತ್ತಿ ಹೊರನಡೆದರು. ಡೇವಿಡ್ ಮಲಾನ್ 21 ರನ್ (14 ಎಸೆತ, 4 ಬೌಂಡರಿ) ಸಿಡಿಸಿ ಸಿಡಿಯುವ ಸೂಚನೆ ನೀಡಿದಾಗ ಮತ್ತೆ ದಾಳಿಗಿಳಿದ ಪಾಂಡ್ಯ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಬ್ರೂಕ್ 28 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್), ಮೊಯಿನ್ ಅಲಿ 36 ರನ್ (4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಇಂಗ್ಲೆಂಡ್ ಸೋಲು ಖಚಿತಗೊಂಡಿತು. ಅಂತಿಮವಾಗಿ ಕ್ರಿಸ್ ಜೋರ್ಡಾನ್ ಅಜೇಯ 26 ರನ್ (17 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡದ ಸೋಲಿನ ಅಂತರವನ್ನು ಕುಗ್ಗಿಸಿದರು. ಅಂತಿಮವಾಗಿ 19. 3 ಓವರ್‌ಗಳಲ್ಲಿ ಇಂಗ್ಲೆಂಡ್ 148 ರನ್‍ಗಳಿಗೆ ಆಲೌಟ್ ಆಯಿತು. ಭಾರತ ಪರ ಪಾಂಡ್ಯ 4 ವಿಕೆಟ್, ಚಹಲ್ ಮತ್ತು ಹರ್ಷದೀಪ್ ಸಿಂಗ್ ತಲಾ 2 ವಿಕೆಟ್ ಹಂಚಿಕೊಂಡರೆ, ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಓಂ ಹೆಲಿಕಾಪ್ಟರಾಯ ನಮಃ ಎಂದು ಧೋನಿಗೆ ವಿಶ್ ಮಾಡಿದ ಸೆಹ್ವಾಗ್

    ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಪರ ರೋಹಿತ್ ಶರ್ಮಾ 24 ರನ್ (14 ಎಸೆತ, 5 ಬೌಂಡರಿ) ಸಿಡಿಸಿ ಉತ್ತಮ ಆರಂಭ ನೀಡಿದರು. ಬಳಿಕ ದೀಪಕ್ ಹೂಡಾ 33 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 39 ರನ್ (19 ಎಸೆತ, 4 ಬೌಂಡರಿ, 2 ಸಿಕ್ಸ್) ಚಚ್ಚಿ ಮಧ್ಯಮಕ್ರಮಾಂಕದಲ್ಲಿ ರನ್ ಹೆಚ್ಚಿಸಿದರು. ಈ ಜೋಡಿ 43 ರನ್ (23 ಎಸೆತ) ಗಳ ಜೊತೆಯಾಟವಾಡಿ ಬೇರ್ಪಟ್ಟ ಬಳಿಕ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಆರಂಭಿಸಿದರು. ಇಂಗ್ಲೆಂಡ್ ಬೌಲರ್‌ಗಳಿಗೆ ಬೌಂಡರಿ ರುಚಿ ತೋರಿಸುತ್ತ ಸಾಗಿದ ಪಾಂಡ್ಯ 51 ರನ್ (33 ಎಸೆತ, 6 ಬೌಂಡರಿ, 1 ಸಿಕ್ಸ್) ಚಚ್ಚಿ ತಂಡದ ಮೊತ್ತವನ್ನು 180ರ ಗಡಿದಾಟಿಸಿ ಔಟ್ ಆದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.

    Live Tv
    [brid partner=56869869 player=32851 video=960834 autoplay=true]

  • ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್?

    ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್?

    ಲಂಡನ್: ಇಂಗ್ಲೆಂಡ್ ಮತ್ತು ಭಾರತ ನಡುವೆ ಜುಲೈ 7 ರಿಂದ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾದ ಕೋಚ್ ಆಗಿ ಎನ್‍ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ.

    ಇದೀಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಅಂತ್ಯಗೊಂಡ ಬಳಿಕ 3 ಪಂದ್ಯಗಳ ಟಿ20 ಸರಣಿ ಜುಲೈ 7 ರಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾದ ಖಾಯಂ ಕೋಚ್ ರಾಹುಲ್ ದ್ರಾವಿಡ್ ಸಹಿತ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಸಹಿತ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಹಾಗಾಗಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ತಂಡದಲ್ಲಿರುವ ಸಾಧ್ಯತೆ ಇದೆ. ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ

    ಲಕ್ಷ್ಮಣ್ ಈಗಾಗಲೇ ಟೀಂ ಇಂಡಿಯಾದೊಂದಿಗೆ ಇಂಗ್ಲೆಂಡ್‍ನಲ್ಲಿದ್ದಾರೆ. ಅಲ್ಲದೇ ಲಕ್ಷ್ಮಣ್ ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಐರ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಸರಣಿಯಲ್ಲಿ ಭಾರತ ತಂಡ 2-0 ಅಂತರದಲ್ಲಿ ಗೆದ್ದಿತ್ತು. ಆ ಬಳಿಕ ಇಂಗ್ಲೆಂಡ್‍ನಲ್ಲಿ ಭಾರತ ತಂಡ ಟೆಸ್ಟ್ ಸರಣಿ ಆಡುತ್ತಿದ್ದಂತೆ ಇನ್ನೊಂದು ತಂಡ ಟಿ20 ಸರಣಿಗಾಗಿ ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಈ ತಂಡಕ್ಕೆ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಸುಮ್ನೆ ಬ್ಯಾಟಿಂಗ್ ಮಾಡ್ ಗುರು – ಬೈರ್‌ಸ್ಟೋವ್ ಜೊತೆ ವಾಗ್ವಾದಕ್ಕಿಳಿದ ಕೊಹ್ಲಿ

    ಜುಲೈ 7, 9 ಮತ್ತು 10 ರಂದು ಮೂರು ಟಿ20 ಪಂದ್ಯಗಳು ನಡೆಯಲಿದೆ. ಈಗಾಗಲೇ ಟೀಂ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ ಕೊರೊನಾದಿಂದ ಚೇತರಿಕೆ ಕಂಡು ತಂಡವನ್ನು ಮುನ್ನಡೆಸಲು ಸಿದ್ಧತೆಯಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ವಿದಾಯ

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ವಿದಾಯ

    ಲಂಡನ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಇಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

    2021ರ ಐಪಿಎಲ್ ನಂತರ ಸತತ ಬ್ಯಾಟಿಂಗ್ ವೈಫಲ್ಯದಿಂದ ಹಿನ್ನಡೆ ಕಂಡಿದ್ದ ಇಯಾನ್ ಮಾರ್ಗನ್ ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.

    13 ವರ್ಷಗಳ ಇಂಗ್ಲೆಂಡ್ ತಂಡದ ಪಯಣದಲ್ಲಿ ಐಯಾನ್ ಮಾರ್ಗನ್ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡ 2019ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮೊಟ್ಟ ಮೊದಲ ಬಾರಿಗೆ ಗೆದ್ದು ಸಂಭ್ರಮಿಸಿತ್ತು. 2010ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದಲ್ಲಿ ಮಾರ್ಗನ್ ಆಡಿದ್ದರು. 2021ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನೊಂದಿಗೆ ಸೆಣಸಾಡಿ ಕೆಕೆಆರ್ ತಂಡಕ್ಕೆ ರನ್ನರ್‌ಅಪ್ ಪ್ರಶಸ್ತಿ ತಂದುಕೊಡುವಲ್ಲಿ ಮಾರ್ಗನ್ ಅವರ ಪಾತ್ರ ಅಪಾರವಾಗಿತ್ತು.

    2006ರಲ್ಲಿ ಐರ್ಲೆಂಡ್ ಪರ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 3 ವರ್ಷಗಳ ಬಳಿಕ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಯಾದರು. ಹಲವು ವರ್ಷಗಳ ಕಾಲ ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಐಸಿಇ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನೂ ಕಾಯ್ದುಕೊಂಡಿತ್ತು.

    ಇಯಾನ್ ಮಾರ್ಗನ್ ಈವರೆಗೆ 225 ಏಕದಿನ, 73 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 13 ಶತಕಗಳೊಂದಿಗೆ 39.75ರ ಸರಾಸರಿಯಲ್ಲಿ 6,957 ರನ್ ದಾಖಲಿಸಿದ್ದಾರೆ. ಅದರಲ್ಲೂ ಅವರು 126 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 76 ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ.

    Live Tv

  • ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ

    ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ

    ಡಬ್ಲಿನ್: ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮಳೆಯಾಟದ ನಡುವೆ ಭಾರತ ತಂಡ 7 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ ಶುಭಾರಂಭ ಕಂಡಿದೆ.

    ಮಳೆಯಿಂದಾಗಿ 12 ಓವರ್‍ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 4 ವಿಕೆಟ್ ನಷ್ಟಕ್ಕೆ 108 ಬಾರಿಸಿತು. 109 ರನ್‍ಗಳ ಗುರಿ ಬೆನ್ನಟ್ಟಿದ ಭಾರತ 9.2 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 111 ರನ್ ಬಾರಿಸಿ ಇನ್ನೂ 16 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಅಂತರದ ಜಯ ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ – ಕ್ಯಾನ್ಸಲ್ ಆಗುತ್ತಾ ಟೆಸ್ಟ್ ಪಂದ್ಯ?

    111 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತದ ಪರ ದೀಪಕ್ ಹೂಡಾ ಆರಂಭಿಕರಾಗಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಇಶಾನ್ ಕಿಶನ್ 26 ರನ್ (11 ಎಸೆತ, 3 ಬೌಂಡರಿ, 2 ಸಿಕ್ಸ್), ಹಾರ್ದಿಕ್ ಪಾಂಡ್ಯ 24 ರನ್ (12 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ತಂಡಕ್ಕೆ ನೆರವಾದರು. ಇತ್ತ ಆರಂಭಿಕರಾಗಿ ಕಣಕ್ಕಿಳಿದು ಕಡೆಯ ವರೆಗೆ ಹೋರಾಡಿದ ದೀಪಕ್ ಹೂಡಾ ಅಜೇಯ 47 ರನ್ (29 ಎಸೆತ, 6 ಬೌಂಡರಿ, 2 ಸಿಕ್ಸ್) ಚಚ್ಚಿ ತಂಡಕ್ಕೆ ಜಯ ತಂದುಕೊಟ್ಟರು. ಇದನ್ನೂ ಓದಿ: ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

    ಈ ಮೊದಲು ಐರ್ಲೆಂಡ್ ತಂಡದ ಆರಂಭಿಕರು ಬ್ಯಾಟಿಂಗ್‍ನಲ್ಲಿ ಮಿಂಚಲು ವಿಫಲರಾದರು. ಆ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಟೆಕ್ಟರ್ ಸಿಡಿಲ್ಲಬ್ಬರ ಬ್ಯಾಟಿಂಗ್ ಮೂಲಕ ಐರ್ಲೆಂಡ್‍ಗೆ ನೆರವಾದರು. ಹ್ಯಾರಿ ಟೆಕ್ಟರ್ ಅಜೇಯ 64 ರನ್ (33 ಎಸೆತ, 6 ಬೌಂಡರಿ, 3 ಸಿಕ್ಸ್) ಬಾರಿಸಿದ ಪರಿಣಾಮ ಐರ್ಲೆಂಡ್ ತಂಡ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಪೇರಿಸುವಂತಾಯಿತು.

    Live Tv

  • ಮಳೆಯಿಂದ ಭಾರತ Vs ಆಫ್ರಿಕಾ ಟಿ20 ಪಂದ್ಯ ರದ್ದು – ನಿರಾಶಾದಾಯಕ ಅಂತ್ಯಗೊಂಡ ಸರಣಿ

    ಮಳೆಯಿಂದ ಭಾರತ Vs ಆಫ್ರಿಕಾ ಟಿ20 ಪಂದ್ಯ ರದ್ದು – ನಿರಾಶಾದಾಯಕ ಅಂತ್ಯಗೊಂಡ ಸರಣಿ

    ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಹೈವೋಲ್ಟೇಜ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಈ ಮೂಲಕ ಸರಣಿ 2-2ರಲ್ಲಿ ಸಮಬಲದೊಂದಿಗೆ ನಿರಾಶಾದಾಯಕ ಅಂತ್ಯಗೊಂಡಿದೆ.

    ಸರಣಿ 2-2ರಲ್ಲಿ ಸಮಬಲ ಸಾಧಿಸಿದ್ದ ಉಭಯ ತಂಡಗಳಿಗೂ ಚಿನ್ನಸ್ವಾಮಿಯಲ್ಲಿ ನಡೆದ ಇಂದಿನ ಪಂದ್ಯ ಫೈನಲ್ ಪಂದ್ಯವಾಗಿತ್ತು. ಹಾಗಾಗಿ ಬ್ಯಾಟಿಂಗ್ ಸ್ನೇಹಿ ಪಿಚ್‍ನಲ್ಲಿ ಇಂದು ರನ್ ಪ್ರವಾಹ ಹರಿಯುವ ಸಾಧ್ಯತೆ ಇತ್ತು. ಆದರೆ ಪಂದ್ಯಕ್ಕೆ ವರುಣ ಅಡ್ಡಿ ಬಂದ ಪರಿಣಾಮ ಪಂದ್ಯವನ್ನು ರದ್ದುಗೊಳಿಸಲು ಬಿಸಿಸಿಐ ತೀರ್ಮಾನಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಎರಡು ಪಂದ್ಯವನ್ನು ಗೆದ್ದು ಸಮಬಲಕ್ಕೆ ತೃಪ್ತಿ ಪಟ್ಟಿದೆ. ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

    ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿದ ಪರಿಣಾಮ ಪಂದ್ಯ ತಡವಾಗಿ ಆರಂಭವಾಯಿತು. ಟಾಸ್ ಗೆದ್ದ ಆಫ್ರಿಕಾ ನಾಯಕ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಇಶಾನ್ ಕಿಶನ್ 15 ರನ್ (7 ಎಸೆತ, 2 ಸಿಕ್ಸ್) ಬಾರಿಸಿ ಲುಂಗಿ ಎನ್‍ಗಿಡಿ ಬೌಲಿಂಗ್‍ನಲ್ಲಿ ಬೌಲ್ಡ್ ಆದರು. ಇವರ ಹಿಂದೆ ಇನ್ನೋರ್ವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಕೂಡ 10 ರನ್ (12 ಎಸೆತ, 1 ಬೌಂಡರಿ) ಬಾರಿಸಿ ಔಟ್ ಆದರು.

    ಲುಂಗಿ ಎನ್‍ಗಿಡಿ ಎರಡು ವಿಕೆಟ್ ಕಿತ್ತು ಯಶಸ್ಸು ಗಳಿಸುತ್ತಿದ್ದಂತೆ ಮತ್ತೆ ಮಳೆ ಆರಂಭವಾಯಿತು. ಈ ವೇಳೆ 3.3 ಓವರ್‌ಗಳಲ್ಲಿ ಭಾರತ ತಂಡ 2 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿತ್ತು. ಆ ಬಳಿಕ ಮಳೆ ಬಿಡದ ಕಾರಣ ಪಂದ್ಯ ಯಾವುದೇ ಫಲಿತಾಂಶ ಕಾಣದೆ ರದ್ದುಗೊಂಡಿದೆ.

    Live Tv

  • ಭಾರತ Vs ಆಫ್ರಿಕಾ ಹೈವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರು ಸಜ್ಜು – ವರುಣನ ಕಾಟ ಸಾಧ್ಯತೆ

    ಭಾರತ Vs ಆಫ್ರಿಕಾ ಹೈವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರು ಸಜ್ಜು – ವರುಣನ ಕಾಟ ಸಾಧ್ಯತೆ

    ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಇಂದು ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಲಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ.

    ಈಗಾಗಲೇ ಸರಣಿ 2-2ರಲ್ಲಿ ಸಮಬಲ ಸಾಧಿಸಿರುವ ಉಭಯ ತಂಡಗಳಿಗೂ ಇಂದಿನ ಪಂದ್ಯ ಫೈನಲ್ ಪಂದ್ಯವಾಗಿದೆ. ಹಾಗಾಗಿ ಬ್ಯಾಟಿಂಗ್ ಸ್ನೇಹಿ ಪಿಚ್‍ನಲ್ಲಿ ಇಂದು ರನ್ ಪ್ರವಾಹ ಹರಿಯುವ ಸಾಧ್ಯತೆ ಹೆಚ್ಚಿದೆ. ಪಂತ್ ಸಾರಥ್ಯದ ಭಾರತ ತಂಡದಲ್ಲಿ ಟಿ20 ಕ್ರಿಕೆಟ್‍ನ ಬ್ಯಾಟಿಂಗ್ ಪಂಟರ್‌ಗಳಿದ್ದರೆ, ಆಫ್ರಿಕಾ ತಂಡದಲ್ಲಿ ಪಂಚ್ ಹಿಟ್ಟರ್‌ಗಳ ಬಲಿಷ್ಠ ಬ್ಯಾಟಿಂಗ್ ಲೈನ್‍ಅಪ್ ಇದೆ. ಜೊತೆಗೆ ಎರಡು ತಂಡದ ಬೌಲಿಂಗ್ ಲೈನ್‍ಅಪ್ ಕೂಡ ಉತ್ತಮವಾಗಿದ್ದು, ಗೆಲುವಿಗಾಗಿ ತೀವ್ರ ಪೈಪೋಟಿ ಕಾಣಸಿಗುವುದಂತು ಕಂಡಿತ. ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

    ಸರಣಿಯ ಮೊದಲ ಎರಡು ಪಂದ್ಯಗಳನ್ನು ಆಫ್ರಿಕಾ ತಂಡ ಗೆದ್ದರೆ, ಇನ್ನೂಳಿದ ಎರಡು ಪಂದ್ಯಗಳನ್ನು ಭಾರತ ತಂಡ ಗೆದ್ದು ಕಂಬ್ಯಾಕ್ ಮಾಡಿದೆ. ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯ ಗೆದ್ದವರು ಸರಣಿ ಜಯಿಸಿ ಸಂಭ್ರಮಿಸಲಿದ್ದಾರೆ. ಇಂದಿನ ಪಂದ್ಯಕ್ಕೆ ಮಳೆ ಅಡಚಣೆಯಾಗುವ ಸಾಧ್ಯತೆ ಹೆಚ್ಚಿದೆ. ಕಳೆದ ಎರಡು, ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಬರುತ್ತಿರುವುದರಿಂದ ಇಂದು ಕೂಡ ಮಳೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್‌ಗಿಲ್ಲ ಅವಕಾಶ?

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಳೆ ಬಂದು ಮೈದಾನ ಒದ್ದೆಯಾದರೂ ಕೂಡ ಮಳೆ ನಿಂತ ಮೇಲೆ ಮೈದಾನವನ್ನು ಮತ್ತೆ ಆಟಕ್ಕೆ ಸಿದ್ಧಪಡಿಸುವ ಅತ್ಯಾಧುನಿಕ ತಂತ್ರಜ್ಞಾನವಿದೆ. ಹಾಗಾಗಿ ಪಂದ್ಯ ಫಲಿತಾಂಶ ಕಾಣುವ ಸಾಧ್ಯತೆ ಹೆಚ್ಚಿದೆ. ಇತ್ತ ಕ್ರಿಕೆಟ್ ಪ್ರೇಮಿಗಳು ಹೈವೋಲ್ಟೇಜ್ ಪಂದ್ಯಕ್ಕಾಗಿ ಕಾದು ಕುಳಿತಿದ್ದು ವರಣನೊಂದಿಗೆ ಬಿಡುವು ನೀಡುವಂತೆ ಪ್ರಾರ್ಥಿಸುತ್ತಿದ್ದಾರೆ.

    Live Tv

  • ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

    ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

    ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯ ನಡೆಯಲಿರುವ ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ.

    ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಪೊಲೀಸ್ ಇಲಾಖೆ, ಜೂನ್ 19 ರಂದು ಮದ್ಯಾಹ್ನ 2 ಗಂಟೆಯಿಂದ ರಾತ್ರಿ 12.30ರವರೆಗೆ ಈ ಎಲ್ಲಾ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಕ್ವೀನ್ ರಸ್ತೆಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ, ಎಂ.ಜಿ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ಕಾವೇರಿ ಎಂಪೋರಿಯಂ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ, ಲಿಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ, ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ, ಕಬ್ಬನ್ ರಸ್ತೆಯಲ್ಲಿ, ಸಿ.ಟಿ.ಓ ವೃತ್ತದಿಂದ ಕಾಮರಾಜ ರಸ್ತೆ ವರೆಗೆ ರಸ್ತೆಯ ಎರಡು ಕಡೆಗಳಲ್ಲಿ. ಇದನ್ನೂ ಓದಿ: ನಾಳೆ IND Vs SA ಹೈ ಓಲ್ಟೇಜ್ ಮ್ಯಾಚ್ – ಬೆಂಗ್ಳೂರಿನತ್ತ ಎಲ್ಲರ ಚಿತ್ತ

    ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್‍ನಿಂದ ಡಿಕೆನ್ಸ್ ರಸ್ತೆ ಜಂಕ್ಷನ್ ವರೆಗೆ ಬಿ.ಎಂ.ಟಿ.ಸಿ ಬಸ್‍ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ. ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ, ಕ್ಯಾಶ್ ಫಾರ್ಮಸಿ ಜಂಕ್ಷನ್‍ನಿಂದ ಅನಿಲ್ ಕುಂಬ್ಳೆ ವೃತ್ತದ ವರೆಗೆ, ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆವರೆಗೆ ಹಾಗೂ ರೆಸಿಡೆನ್ಸಿ ರಸ್ತೆ ವರೆಗೆ., ಕಸ್ತೂರಬಾ ರಸ್ತೆಯಲ್ಲಿ, ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ, ಕಬ್ಬನ್‍ಪಾರ್ಕ್ ಒಳಭಾಗದ ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಫೌಟೇನ್ ರಸ್ತೆ. ಲ್ಯಾವೆಲ್ಲಿ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ವಿಠಲ್ ಮಲ್ಯ ಜಂಕ್ಷನ್ ವರೆಗೆ, ವಿಠಲ್ ಮಲ್ಯ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಬಿಷಪ್ ಕಾಟನ್ ಬಾಲಕಿಯರ ಶಾಲೆಯವರೆಗೆ ವಾಹನ ನಿಲುಗಡೆ ನಿಷೇಧವಿದೆ. ಇದನ್ನೂ ಓದಿ:  ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

    ಜೊತೆಗೆ ಪಂದ್ಯ ವೀಕ್ಷಣೆ ಮಾಡಲು ಬರುವ ಸಾರ್ವಜನಿಕರ ವಾಹನಗಳಿಗೆ ಬದಲಿ ವ್ಯವಸ್ಥೆ ಮಾಡಿಕೊಡಲಾಗಿದೆ. ಈಗಾಗಲೇ ಮೆಟ್ರೋ ಸಮಯವನ್ನೂ ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ 5ನೇ ಟಿ20 ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿದ್ದು, 5ನೇ ಪಂದ್ಯ ಗೆದ್ದವರು ಸರಣಿ ಜಯಿಸಲಿದ್ದಾರೆ.

    Live Tv