ಇಸ್ಲಾಮಾಬಾದ್: ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಪಾಕಿಸ್ತಾನದಲ್ಲಿ (Pakistan) ಅಪಾರ ಅಭಿಮಾನಿಗಳ ಮನಗೆದ್ದಿದ್ದ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮೊಹಮದ್ ರಿಜ್ವಾನ್ (Mohammad Rizwan) ಇದೀಗ ಭಾರೀ ಟೀಕೆಗಳಿಗೆ ಗುರಿಯಾಗಿದ್ದಾರೆ.
ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಿಜ್ವಾನ್ ಅವರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಿಜ್ವಾನ್ ಅವರ ವರ್ತನೆಗೆ ಪಾಕಿಸ್ತಾನದ ಜನ ಸೋಶಿಯಲ್ ಮೀಡಿಯಾ (Social Media)ದಲ್ಲಿ ಕಿಡಿಕಾರಿದ್ದು, ದೇಶದ ಧ್ವಜಕ್ಕೆ ಮರ್ಯಾದೆ ಕೊಡಿ. ಇಂಥ ಅಹಂಕಾರದ ವರ್ತನೆಯನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಟೆಸ್ಟ್ ಸರಣಿ ನಮ್ಮಲ್ಲಿ ಆಡಿಸಿ ಎಂದ ಇಂಗ್ಲೆಂಡ್ – ಅವಶ್ಯಕತೆ ಇಲ್ಲ ಎಂದ BCCI
ಇತ್ತೀಚೆಗೆ ಏಷ್ಯಾಕಪ್ (AisaCup) ಟೂರ್ನಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಆಡಿದ್ದ ರಿಜ್ವಾನ್ ಟೀಂ ಇಂಡಿಯಾ ವಿರುದ್ಧ ನಡೆದಿದ್ದ 2ನೇ ಪಂದ್ಯದಲ್ಲಿ ಅರ್ಧ ಶತಕ ಗಳಿಸುವ ಮೂಲಕ ತಮ್ಮ ಪಾಕಿಸ್ತಾನ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅಲ್ಲದೇ ಇಂದು ನಡೆದ ಇಂಗ್ಲೆಂಡ್ ವಿರುದ್ಧದ ಟಿ20 (T20) ಪಂದ್ಯದಲ್ಲೂ 46 ಎಸೆತಗಳಲ್ಲಿ 63 ರನ್ (3 ಸಿಕ್ಸರ್, 2 ಬೌಂಡರಿ) ಸಿಡಿಸಿದ್ದಾರೆ. ಇದೀಗ ತನ್ನದೇ ದೇಶದ ಧ್ವಜವನ್ನು ಕಾಲಿನಲ್ಲಿ ಎತ್ತುವ ಮೂಲಕ ಅಪಮಾನ ಮಾಡಿದ್ದು, ಟೀಕೆಗಳಿಗೆ ಗುರಿಯಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ನಗರದ ನಿವಾಸಿ ಅವಿನಾಶ್ ಪೋತದಾರಗೆ (Avinash Potdar) ಬಿಸಿಸಿಐ (BCCI) ಮಹತ್ವದ ಜವಾಬ್ದಾರಿ ನೀಡಿದೆ. ನಾಳೆ ನಡೆಯುವ ದಕ್ಷಿಣ ಆಫ್ರಿಕಾ ಮತ್ತು ಭಾರತ (India vs South Africa) ನಡುವಿನ ಟಿ-20 (T20) ಪಂದ್ಯಕ್ಕೆ ಪರೀವೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಕಬ್ಬು ನುರಿಸುವ ಕಾರ್ಖಾನೆ, ಸಿನಿಮಾ ಟಾಕೀಸ್ ಸೇರಿದಂತೆ ಹಲವು ಉದ್ಯಮಗಳು ಅವಿನಾಶ್ ಪೋತದಾರ್ ನಡೆಸುತ್ತಿದ್ದಾರೆ. ಇದೀಗ ನಾಳೆಯಿಂದ ನಡೆಯುವ ಭಾರತ-ದಕ್ಷಿಣ ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಆಯ್ಕೆ ಆಗಿದ್ದಾರೆ. ನಾಳೆ ತಿರುವನಂತಪುರಂನಲ್ಲಿ ಚೊಚ್ಚಲ ಟಿ-20 ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಪಂದ್ಯಗೆದ್ದ ಖುಷಿ – ರೋಹಿತ್‍ಗೆ ಹೊಡೆದು ಸಂಭ್ರಮಿಸಿದ ಕೊಹ್ಲಿ
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಿನ ರೋಚಕ ಕೊನೆಯ ಹಾಗೂ ಫೈನಲ್ ಟಿ20 (T20) ಪಂದ್ಯದಲ್ಲಿ ಕೊಹ್ಲಿ (Virat Kohli) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಭಾರತ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ವಿಶ್ವಚಾಂಪಿಯನ್ನರಿಗೆ ಸೋಲುಣಿಸಿ ಟಿ20 ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
ಆಸ್ಟ್ರೇಲಿಯಾ (Australia) ನೀಡಿದ 187 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ (India) ಚೇಸಿಂಗ್ ಕಿಂಗ್ ಕೊಹ್ಲಿ ಮತ್ತು ಸೂರ್ಯಕುಮಾರ್ ಸ್ಫೋಟಕ ಆಟ ನೆರವಾಯಿತು. ಅಂತಿಮ ಓವರ್ ವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದದಲ್ಲಿ ಫೋರ್ ಹೊಡೆದು ಪಾಂಡ್ಯ ಇನ್ನೊಂದು ಎಸೆತ ಬಾಕಿ ಇರುವಂತೆ 187 ರನ್ ಸಿಡಿಸಿ ಜಯ ತಂದು ಕೊಟ್ಟರು. ಅಂತಿಮವಾಗಿ 19.5 ಓವರ್‌ಗಳ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 187 ರನ್‍ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಭಾರತ ಈ ಗೆಲುವಿನೊಂದಿಗೆ ತವರಿನಲ್ಲಿ ಟಿ20 ಸರಣಿ ಗೆದ್ದುಕೊಂಡಿತು. ಜೊತೆಗೆ ಈ ವರ್ಷ ದಾಖಲೆಯ 21 ಟಿ20 ಪಂದ್ಯವನ್ನು ಗೆದ್ದು ನೂತನ ದಾಖಲೆ ಬರೆಯಿತು. ಇದನ್ನೂ ಓದಿ: 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಹೀಗಾಗಿತ್ತು, ಇದೀಗ ಮತ್ತೆ? – ಏನಿದು ಧೋನಿ ಲಾಜಿಕ್
ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಅನುಭವಿಸಿತು. ರಾಹುಲ್ 1 ರನ್‍ಗೆ ವಿಕೆಟ್ ಕೈಚೆಲ್ಲಿಕೊಂಡರೆ, ರೋಹಿತ್ ಶರ್ಮಾ ಆಟ 17 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಅಂತ್ಯಕಂಡಿತು. 30 ರನ್‍ಗಳಿಗೆ 2ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆ ಬಳಿಕ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ನೆರವಾದರು. ಈ ಜೋಡಿ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದರು. ಭರ್ಜರಿ ಹೊಡೆತಗಳ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಯಾದವ್ ಸ್ಫೋಟಕ ಇನ್ನಿಂಗ್ಸ್ 69 ರನ್ (36 ಎಸೆತ, 5 ಬೌಂಡರಿ, 5 ಸಿಕ್ಸ್)ಗೆ ಅಂತ್ಯಕಂಡಿತು. ಈ ಮೊದಲು 3ನೇ ವಿಕೆಟ್‍ಗೆ ಕೊಹ್ಲಿ ಜೊತೆ 104 ರನ್ (62 ಎಸೆತ) ಜೊತೆಯಾಟವಾಡಿದರು. ಇದನ್ನೂ ಓದಿ: ಬ್ಯಾಟ್ಸ್‌ಮ್ಯಾನ್ ಜೊತೆ ಕಿರಿಕ್ – ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್‍ರನ್ನು ಹೊರನಡಿ ಎಂದ ರಹಾನೆ
ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಕೊಹ್ಲಿ ಜೊತೆ ಗೆಲುವಿಗಾಗಿ ಹೋರಾಡಿದರು. ಅಂತಿಮವಾಗಿ ಕೊಹ್ಲಿ 63 ರನ್ (48 ಎಸೆತ, 3 ಬೌಂಡರಿ, 4 ಸಿಕ್ಸ್) ಚಚ್ಚಿ ಗೆಲುವಿನ ಅಂಚಿನಲ್ಲಿ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಪಾಂಡ್ಯ ಅಜೇಯ 25 ರನ್ (16 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 1 ರನ್ ಬಾರಿಸಿ ಗೆಲುವನ್ನು ಸಂಭ್ರಮಿಸಿದರು. ಇದನ್ನೂ ಓದಿ: ಬುಮ್ರಾ ಯಾರ್ಕರ್‌ಗೆ ಫಿಂಚ್ ಶಬ್ಬಾಸ್‍ಗಿರಿ – ಪಲ್ಟಿ ಹೊಡೆದು ಬೆರಗಾದ ಸ್ಮಿತ್
ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾದಂತೆ ಭಾರತ ಕೂಡ ಆರಂಭಿಕ ಆಘಾತ ಅನುಭವಿಸಿತು. ರಾಹುಲ್ 1 ರನ್‍ಗೆ ವಿಕೆಟ್ ಕೈಚೆಲ್ಲಿಕೊಂಡರೆ, ರೋಹಿತ್ ಶರ್ಮಾ ಆಟ 17 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಅಂತ್ಯಕಂಡಿತು. 30 ರನ್‍ಗಳಿಗೆ 2ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆ ಬಳಿಕ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ನೆರವಾದರು. ಈ ಜೋಡಿ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿತು. ಭರ್ಜರಿ ಹೊಡೆತಗಳ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಯಾದವ್ ಸ್ಫೋಟಕ ಇನ್ನಿಂಗ್ಸ್ 69 ರನ್ (36 ಎಸೆತ, 5 ಬೌಂಡರಿ, 5 ಸಿಕ್ಸ್)ಗೆ ಅಂತ್ಯಕಂಡಿತು. ಈ ಮೊದಲು 3ನೇ ವಿಕೆಟ್‍ಗೆ ಕೊಹ್ಲಿ ಜೊತೆ 104 ರನ್ (62 ಎಸೆತ) ಜೊತೆಯಾಟವಾಡಿದರು.
ಈ ಮೊದಲು ಟಾಸ್ ಗೆದ್ದ ಭಾರತ ಫಿಂಚ್ ಬಳಗವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಆದರೆ ಆರಂಭಿಕರಾಗಿ ಕಣಕ್ಕಿಳಿದ ಫಿಂಚ್ 7 ರನ್‍ಗಳಿಗೆ ಸುಸ್ತಾದರು. ಮತ್ತೆ ಬಂದ ಸ್ಮಿತ್ 9, ಮ್ಯಾಕ್ಸ್‌ವೆಲ್ 6 ರನ್ ಬಾರಿಸಿ ಬೇಗನೆ ಪೆವಿಲಿಯನ್ ಸೇರಿಕೊಂಡರು.
ಇನ್ನೊಂದೆಡೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ಯಾಮರೂನ್ ಗ್ರೀನ್ ಭಾರತದ ಬೌಲರ್‌ಗಳನ್ನು ದಂಡಿಸಿದರು. ಹಿಗ್ಗಾಮುಗ್ಗಾ ಬೌಂಡರಿ, ಸಿಕ್ಸ್ ಚಚ್ಚಿ ಅಂತಿಮವಾಗಿ 52 ರನ್ (21 ಎಸೆತ, 7 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಜೋಶ್ ಇಂಗ್ಲಿಸ್ ಮತ್ತು ಟೀಮ್ ಡೇವಿಡ್ ಅಬ್ಬರಿಸಲು ಆರಂಭಿಸಿದರು. ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದ ಇಂಗ್ಲಿಸ್ 24 ರನ್ (22 ಎಸೆತ, 3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು.
SKY dazzled & how! 🎇 🎇
ICYMI: Here's how he brought up his 5⃣0⃣ before being eventually dismissed for 69.
ಇತ್ತ ಟೀಮ್ ಡೇವಿಡ್ ಮಾತ್ರ ಡೇನಿಯಲ್ ಸ್ಯಾಮ್ ಜೊತೆ ಸೇರಿಕೊಂಡು ಸ್ಲಾಗ್ ಓವರ್‌ಗಳಲ್ಲಿ ಅಬ್ಬರಾದಾಟ ಆಡಿದರು. ಟೀಮ್ ಡೇವಿಡ್ 54 ರನ್ (2 ಬೌಂಡರಿ, 4 ಸಿಕ್ಸ್) ಚಚ್ಚಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಹರ್ಷಲ್ ಪಟೇಲ್‍ಗೆ ವಿಕೆಟ್ ನೀಡಿದರು. ಆ ಬಳಿಕ ಸ್ಯಾಮ್ ಅಜೇಯ 28 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸ್) ನೆರವಿನಿಂದ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 186 ರನ್ ಪೇರಿಸಿತು.
ಭಾರತದ ಪರ ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತು ಬಲಿಷ್ಠ ಆಸ್ಟ್ರೇಲಿಯನ್ ಬ್ಯಾಟಿಂಗ್ ಲೈನ್‍ಅಪ್‍ಗೆ ಕಡಿವಾಣ ಹಾಕಿದರು. ಭುವನೇಶ್ವರ್ ಕುಮಾರ್, ಚಹಲ್, ಹರ್ಷಲ್ ಪಟೇಲ್ ತಲಾ 1 ವಿಕೆಟ್ ಕಿತ್ತರು.
Live Tv
[brid partner=56869869 player=32851 video=960834 autoplay=true]
ನಾಗ್ಪುರ: ಭಾರತ, ಆಸ್ಟ್ರೇಲಿಯಾ (Australia) ವಿರುದ್ಧದ 2ನೇ ಟಿ20 (T20 Match) ಪಂದ್ಯದಲ್ಲಿ ಹಿಟ್‌ಮ್ಯಾನ್ ಬ್ಯಾಟಿಂಗ್ ಅಬ್ಬರದಿಂದ ಭಾರತ ತಂಡ 1-1 ಅಂತರದಲ್ಲಿ ಗೆದ್ದು, ಸರಣಿಯನ್ನು ಸಮಬಲಗೊಳಿಸಿತು. ಆದರೆ ಪಂದ್ಯ ಗೆದ್ದ ನಂತರವೂ ರೋಹಿತ್ ಶರ್ಮಾ (Rohit Sharma) ತಮ್ಮ ಸ್ಫೋಟಕ ಬ್ಯಾಟಿಂಗ್ ಬಗ್ಗೆಯೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮಳೆಯ (Rain) ಕಾರಣದಿಂದಾಗಿ 8 ಓವರ್‌ಗೆ ಇಳಿಕೆ ಕಂಡಿದ್ದ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿಸದ ಆಸ್ಟ್ರೇಲಿಯಾ (Australia) 5 ವಿಕೆಟ್ ನಷ್ಟಕ್ಕೆ 90 ರನ್‌ಗಳನ್ನು ಗಳಿಸಿತು. ಈ ರನ್‌ಗಳ ಗುರಿ ಬೆನ್ನತ್ತಿದ ಭಾರತ 7.2 ಓವರ್‌ಗಳಲ್ಲೇ 4 ವಿಕೆಟ್‌ಗಳ ನಷ್ಟಕ್ಕೆ 92 ರನ್‌ಗಳಿಸಿ ಗೆದ್ದು ಬೀಗಿತು. ಇದನ್ನೂ ಓದಿ: ರೋಹಿತ್ ನಾಯಕನ ಆಟ – ಭಾರತಕ್ಕೆ ಜಯ, ಸರಣಿ ಸಮಬಲ
ಪಂದ್ಯದ ಬಳಿಕ ಮಾತನಾಡಿದ ರೋಹಿತ್, ನಿಜ ಹೇಳಬೇಕೆಂದರೆ ನನಗೆ ನನ್ನ ಬ್ಯಾಟಿಂಗ್‌ನಿಂದ ಸ್ವಲ್ಪ ಅಚ್ಚರಿಯಾಗಿದೆ. ಈ ರೀತಿಯ ಸ್ಫೋಟಕ ಬ್ಯಾಟ್ ಮಾಡುತ್ತೇನೆಂದು ನನಗೆ ಗೊತ್ತಿರಲಿಲ್ಲ. ಏಕೆಂದರೆ ಕಳೆದ 8 ರಿಂದ 9 ತಿಂಗಳು ನಾನು ಈ ರೀತಿ ಆಡಿರಲಿಲ್ಲ. ಇದು ತೀರಾ ಚುಟುಕು ಪಂದ್ಯವಾಗಿದ್ದರಿಂದ ಇದಕ್ಕೆ ಹೆಚ್ಚಿನ ಯೋಜನೆ ಸಹ ರೂಪಿಸಿರಲಿಲ್ಲ. ನಿನ್ನೆ ನನ್ನ ಬ್ಯಾಟಿಂಗ್ ಕಂಡು ನನಗೇ ಅಚ್ಚರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಬೌಲರ್‌ಗಳು ಇನ್ನಷ್ಟು ಎಚ್ಚರ ವಹಿಸಬೇಕು:
ಬೌಲರ್‌ಗಳು ಇನ್ನಷ್ಟು ಎಚ್ಚರಿಕೆಯಿಂದ ಬೌಲಿಂಗ್ (Bowling) ಮಾಡಬೇಕು. ಆದಾಗ್ಯೂ ನಮ್ಮ ಬೌಲರ್‌ಗಳು (Batting) ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಕೊನೆಯಲ್ಲಿ ಇಬ್ಬನಿ ಹೆಚ್ಚಾಗುತ್ತಿತ್ತು. ಈ ಕಾರಣದಿಂದಲೇ ಹರ್ಷಲ್ ಪಟೇಲ್ (Harshal Patel) ಫುಲ್‌ಟಾಸ್ ಎಸೆತಗಳನ್ನು ಹಾಕಿದ್ದರು.
ಹರ್ಷಲ್ ಗಾಯದ ಸಮಸ್ಯೆಯಿಂದ ಗುಣಮುಖನಾಗಿ ಬಂದಿದ್ದಾರೆ, ಆದರೆ ಹಲವು ತಿಂಗಳ ಬಳಿಕ ಕಮ್‌ಬ್ಯಾಕ್ ಮಾಡುವುದು ಸುಲಭವಲ್ಲ. ಆದರೆ ಕೆಲ ನಿರ್ಣಾಯಕ ವಿಕೆಟ್‌ಗಳನ್ನು ನಾವು ಪಡೆದಿದ್ದು ತಂಡದ ಗೆಲುವಿಗೆ ಕಾರಣವಾಗಿದೆ ಎಂದು ಹಿಟ್‌ಮ್ಯಾನ್ (HitMan Rohit Sharma) ಹೇಳಿದ್ದಾರೆ.
ಇನ್ನೂ ಸ್ಪಿನ್ನರ್ ಅಕ್ಷರ್ ಪಟೇಲ್ ಯಾವುದೇ ಸನ್ನಿವೇಶದಲ್ಲೂ ಬೌಲ್ ಮಾಡಬಲ್ಲರು. ವಿಭಿನ್ನ ಪರಿಸ್ಥಿತಿಗಳಿದ್ದರೂ ಇತರೆ ಬೌಲರ್‌ಗಳಿಗಿಂತ ಅವರು ಪರಿಸ್ಥಿತಿಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಅಕ್ಷರ್ ಪಟೇಲ್ ಪವರ್ ಪ್ಲೇನಲ್ಲಿ ಬೌಲ್ ಮಾಡಿಸಿದರೆ, ವೇಗಿಗಳನ್ನು ಮಧ್ಯಮ ಓವರ್‌ಗಳಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಅಕ್ಷರ್ ಬೌಲಿಂಗ್ ಜೊತೆಗೆ ಚೆನ್ನಾಗಿ ಬ್ಯಾಟ್ ಮಾಡುವುದನ್ನೂ ನಾನು ನೋಡಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಭಾರತದ ಪರ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಅಬ್ಬರಿಸಿದರು. ಆರಂಭಿಕರಾಗಿ ಬಂದು ತಂಡದ ಗೆಲುವಿಗಾಗಿ ಕೊನೆಯವರೆಗೆ ಹೋರಾಡಿದ ರೋಹಿತ್ ಅಜೇಯ 46 ರನ್ (20 ಎಸೆತ, 4 ಬೌಂಡರಿ, 4 ಸಿಕ್ಸ್) ಚಚ್ಚಿ ಮಿಂಚಿದರು. ಅಂತಿಮವಾಗಿ ದಿನೇಶ್ ಕಾರ್ತಿಕ್ ಒಂದು ಸಿಕ್ಸ್, ಒಂದು ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ 3 ಟಿ20 ಪಂದ್ಯಗಳ ಸರಣಿ 1-1ರಲ್ಲಿ ಸಮಬಲ ಕಂಡಿದ್ದು, 3ನೇ ಟಿ20 ಪಂದ್ಯ ಕುತೂಹಲ ಮೂಡಿಸಿದೆ.
ಈ ಮೊದಲು ಟಾಸ್ ಗೆದ್ದ ಭಾರತ ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಇತ್ತ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಗೆ ಆರಂಭದಲ್ಲೇ ಶಾಕ್ ಎದುರಾಯಿತು. ಕಳೆದ ಪಂದ್ಯದ ಹೀರೋ ಕ್ಯಾಮರೂನ್ ಗ್ರೀನ್ 5 ರನ್ (4 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಮ್ಯಾಕ್ಸ್‌ವೆಲ್ ಶೂನ್ಯ ಸುತ್ತಿದರು. 19 ರನ್‍ಗಳಿಗೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡಿತು. ಇದನ್ನೂ ಓದಿ: ಓಡೆನ್ ಸ್ಮಿತ್, ಬೇಬಿ ಎಬಿಡಿ ಹೊಡಿಬಡಿ ಆಟ – ತಲಾ ಆರಾರು ಎಸೆತ ಐದೈದು ಸಿಕ್ಸ್ 60 ರನ್
ಇತ್ತ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಫಿಂಚ್, ಪಂಚ್ ಶಾಟ್‍ಗಳ ಮೂಲಕ ಅಬ್ಬರಿಸಲು ಆರಂಭಿಸಿದರು. ಈ ವೇಳೆ ದಾಳಿಗಿಳಿದ ಬುಮ್ರಾ ಯಾರ್ಕರ್ ಎಸೆತದ ಮೂಲಕ 31 ರನ್ (15 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿದ್ದ ಫಿಂಚ್ ವಿಕೆಟ್ ಬೇಟೆಯಾಡಿದರು.
ಬಳಿಕ ಬಂದ ಮ್ಯಾಥ್ಯೂ ವೇಡ್ ಕೊನೆಯ ಓವರ್‌ಗಳಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಅಬ್ಬರಿಸಿದರು. ಅಂತಿಮವಾಗಿ ವೇಡ್ ಅಜೇಯ 43 ರನ್ (20 ಎಸೆತ, 4 ಬೌಂಡರಿ, 3 ಸಿಕ್ಸ್) ಮತ್ತು ಸ್ಟೀವ್ ಸ್ಮಿತ್ 8 ರನ್ (5 ಎಸೆತ, 1 ಬೌಂಡರಿ) ನೆರವಿನಿಂದ ಆಸ್ಟ್ರೇಲಿಯಾ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಕಲೆಹಾಕಿತು. ಭಾರತದ ಪರ ಅಕ್ಷರ್ ಪಟೇಲ್ 2 ವಿಕೆಟ್ ಕಿತ್ತು ಶೈನ್ ಆದರೆ, ಬುಮ್ರಾ 1 ವಿಕೆಟ್ ಪಡೆಯಲು ಯಶಸ್ವಿಯಾದರು.
Live Tv
[brid partner=56869869 player=32851 video=960834 autoplay=true]
ಮೊಹಾಲಿ: ಕೆಮರೋನ್ ಗ್ರೀನ್ (Cameron Green), ಮಾಥ್ಯೂವೇಡ್ (Matthew Wade) ಬ್ಯಾಟಿಂಗ್ ಅಬ್ಬರ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ (Australia) ಮೊದಲ ಪಂದ್ಯದಲ್ಲೇ 4 ವಿಕೆಟ್‌ಗಳ ಜಯ ಸಾಧಿಸಿತು.
ಮೊಹಾಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ (Toss) ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ (Score) ಗಳಿಸಿತು. 209 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆಸಿಸ್ ಪಡೆ 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್‌ಗಳಿಸಿ ಜಯ ಸಾಧಿಸಿತು.
ಟಾಸ್ ಗೆದ್ದು ನಂತರ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಓವರ್‌ನಿಂದಲೇ ಅಬ್ಬರಿಸಲು ಶುರು ಮಾಡಿತು. ನಾಯಕ ಆರನ್ ಫಿಂಚ್ (Aaron Finch) ಜೊತೆ ಕೈಜೋಡಿಸಿದ ಕೆಮರೋನ್ ಗ್ರೀನ್ (Cameron Green) ಸಿಕ್ಸ್ ಫೋರ್‌ಗಳ ಬೇಟೆಯಾಡಿದ್ರು. ಆದರೆ ಅಷ್ಟರಲ್ಲೇ ಆಸಿಸ್ ತಂಡಕ್ಕೆ ಆಘಾತವಾಯಿತು. 13 ಎಸೆತಗಳಲ್ಲಿ 22 ರನ್ ಸಿಡಿಸಿದ್ದ ಆರನ್ ಫಿಂಚ್ ಅಕ್ಷರ್ ಪಟೇಲ್ ಓವರ್‌ನಲ್ಲಿ ಸಿಕ್ಸ್ ಸಿಡಿಸುವ ಪ್ರಯತ್ನದಲ್ಲಿ ಕ್ಲೀನ್ ಬೌಲ್ಡ್ ಆದ್ರು.
ಗ್ರೀನ್ ಶೈನ್: ಟೀಂ ಇಂಡಿಯಾ ಬೌಲರ್‌ಗಳನ್ನು ಬೆಂಡೆತ್ತಿದ ಕೆಮರೋನ್ ಗ್ರೀನ್ ಕೇವಲ 26 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದರು. ಆರಂಭದಿಂದಲೂ ಅಬ್ಬರಿಸಿದ ಗ್ರೀನ್ 30 ಎಸೆತಗಳಲ್ಲಿ ಸ್ಫೋಟಕ 61 ರನ್ (4 ಸಿಕ್ಸರ್, 8 ಬೌಂಡರಿ) ಚಚ್ಚಿದರು. ಗ್ರೀನ್‌ಗೆ ಜೊತೆಯಾದ ಸ್ಟೀವ್ ಸ್ಮಿತ್ (Steven Smith) ಉತ್ತಮ ಸಾಥ್ ನೀಡಿದರು. ಇವರಿಬ್ಬರ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ 40 ಎಸೆತಗಳಲ್ಲಿ 70 ರನ್‌ಗಳನ್ನು ಕಲೆ ಹಾಕಿದರು. ಗ್ರೀನ್ ಆಟಕ್ಕೆ ಬ್ರೇಕ್ ಹಾಕಿದ ಅಕ್ಷರ್ ಪಟೇಲ್ 30ನೇ ಎಸೆತದಲ್ಲಿ ಕ್ಲೀನ್ ಕ್ಯಾಚ್ ಮಾಡಿಸಿದರು.
ನಂತರದಲ್ಲಿ ಸಿಕ್ಸರ್ ವೀರ ಗ್ಲೇನ್ ಮ್ಯಾಕ್ಸ್‌ವೆಲ್ ನಿರೀಕ್ಷಿತ ಆಟವಾಡದೇ 3 ಎಸೆತಗಳಲ್ಲಿ 1 ರನ್ ಗಳಿಸಿ ಪೆವಿಲಿಯನ್ ಸೇರಿದರು. ಜೋಶ್ ಇಂಗ್ಲಿಸ್ 10 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 17 ರನ್ ಬಾರಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಬಂದ ಟಿಂ ಡೇವಿಡ್, ಮಾಥ್ಯೂವೇಡ್ (Matthew Wade) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡ ನಂತರವೂ ತಂಡದಲ್ಲಿ ಸಿಕ್ಸ್ ಬೌಂಡರಿಗಳ ಮಳೆ ಸುರಿಸಿದರು. ಟಿಂ ಡೇವಿಡ್ 14 ಎಸೆತಗಳಲ್ಲಿ 18 ರನ್ ಗಳಿಸಿದರೆ, ಮ್ಯಾಥ್ಯೂ ವೇಡ್ 21 ಎಸೆತಗಳಲ್ಲಿ ಸ್ಫೋಟಕ 45ರನ್ (2 ಸಿಕ್ಸರ್, 6 ಬೌಂಡರಿ) ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮ ಓವರ್‌ನಲ್ಲಿ 1 ರನ್ ಬೇಕಿದ್ದ ವೇಳೆ ಚಾಹಲ್ ಮೊದಲ ಎಸೆತಗದಲ್ಲೇ ಟಿಮ್ ಡೇವಿಡ್ ವಿಕೆಟ್ ಉರುಳಿಸಿದರು. ಕೊನೆಯಲ್ಲಿ ಬಂದ ಪ್ಯಾಟ್ ಕಮ್ಮಿನ್ಸ್ (Pat Cummins) 19 ಓವರ್‌ನ 2ನೇ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಗೆಲುವಿನ ನಗೆ ಬೀರಿದರು.
ಅಕ್ಷರ್ ಪಟೇಲ್ ಬೌಲಿಂಗ್ ದಾಳಿ: 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿದ ಟೀಂ ಇಂಡಿಯಾದ (Team India) ಅಕ್ಷರ್ ಪಟೇಲ್ 3 ಪ್ರಮುಖ ವಿಕೆಟ್‌ಗಳನ್ನು ಕಿತ್ತರು.2 ಓವರ್‌ಗಳಲ್ಲಿ 27 ರನ್ ನೀಡಿದ ಉಮೇಶ್ ಯಾದವ್ 2 ವಿಕೆಟ್‌ಗೆ ತೃಪ್ತಿ ಪಟ್ಟುಕೊಂಡರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. 9 ಎಸೆತ ಎದುರಿಸಿದ ನಾಯಕ ನಾಯಕ ರೋಹಿತ್ ಶರ್ಮಾ 11 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿರಾಟ್ ಕೊಹ್ಲಿ ರನ್ ಗಳಿಸುವಲ್ಲಿ ವಿಫಲರಾದರು. 7 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿದ ಕೊಹ್ಲಿ ನಥಾನ್ ಎಲ್ಲಿಸ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಆದರೆ ಮತ್ತೊಬ್ಬ ಆರಂಭಿಕನಾಗಿದ್ದ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಅಬ್ಬರ ನಿಲ್ಲಲಿಲ್ಲ. ರಾಹುಲ್‌ಗೆ 3ನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್ ಯಾದವ್ ಉತ್ತಮ ಸಾಥ್ ನೀಡಿದರು. ಈ ಇಬ್ಬರ ಜೋಡಿ ಉತ್ತಮ ಸಿಕ್ಸ್ ಫೋರ್‌ಗಳನ್ನು ಸಿಡಿಸುತ್ತಾ ಆಸಿಸ್ ಬೌಲರ್‌ಗಳನ್ನು ಬೆಂಡೆತ್ತಿತು. ನಿಧಾನ ಗತಿಯ ಸ್ಟ್ರೈಕ್ ರೇಟ್ ಮತ್ತು ಕಳಪೆ ಫಾರ್ಮ್‌ಗಾಗಿ ಟೀಕೆಗೆ ಗುರಿಯಾಗಿದ್ದ ಕೆ.ಎಲ್ ರಾಹುಲ್ ತಮ್ಮ ಬ್ಯಾಟ್ ಮೂಲಕ ಉತ್ತರ ನೀಡಿದರು.
ಪಾಂಡ್ಯ ಪರಾಕ್ರಮ, ರಾಹುಲ್ ಮಿಂಚಿಂಗ್: ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡರೂ ರನ್ ವೇಗ ಕಡಿಮೆಯಾಗಲಿಲ್ಲ. ಸೂರ್ಯಕುಮಾರ್ ಯಾದವ್ ಹಾಗೂ ರಾಹುಲ್ (KL Rahul) ಇಬ್ಬರ ಜೋಡಿಯೂ ಪವರ್‌ಪ್ಲೇ ನಿಂದಲೇ ಅಬ್ಬರಿಸಲು ಶುರು ಮಾಡಿತು. ಪ್ರತಿ ಓವರ್‌ನಲ್ಲೂ ಬೌಂಡರಿ ಸಿಕ್ಸರ್‌ಗಳ ಚೆಂಡಾಡಿ, ಆಸಿಸ್ ಬೌಲರ್‌ಗಳ ಬೆವರಿಳಿಸಿ, 65 ರನ್‌ಗಳ ಜೊತೆಯಾಟವಾಡಿತು. 35 ಎಸೆತಗಳಲ್ಲಿ 55 ರನ್ (3 ಸಿಕ್ಸರ್, 4 ಬೌಂಡರಿ) ಗಳಿಸಿದ ಕೆ.ಎಲ್ ರಾಹುಲ್ (KL Rahul) ವಿಕೆಟ್ ಒಪ್ಪಿಸಿದರು. ಅರ್ಧ ಶತಕ ಪೂರೈಸುವ ಮೂಲಕ ಟಿ20 ನಲ್ಲಿ 18ನೇ ಅರ್ಧಶತಕ ಹಾಗೂ 2 ಸಾವಿರ ರನ್ ಗಳಿಸಿದರು.
ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್ ಯಾದವ್ (Suryakumar Yadav) ಸಹ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ್ರು. 24 ಎಸೆತಗಳಲ್ಲಿ 46 ರನ್ (4 ಸಿಕ್ಸರ್, 2 ಬೌಂಡರಿ) ಗಳಿಸಿದ್ದ ಸೂರ್ಯಕುಮಾರ್ ಯಾದವ್ ಅರ್ಧ ಶತಕದ ಸನಿಹದಲ್ಲಿರುವಾಗಲೇ ಸಿಕ್ಸರ್ ಸಿಡಿಸುವ ಬರದಲ್ಲಿ ಔಟಾದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ಅಕ್ಷರ್ ಪಟೇಲ್ 5 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು. ದಿನೇಶ್ ಕಾರ್ತಿಕ್ ಕೂಡ 5 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು.
ಕೊನೆಯ ಓವರ್‌ವರೆಗೂ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಸ್ಫೋಟಕ ಆಟ ಭಾರತ ಬೃಹತ್ ಮೊತ್ತದ ರನ್ ಕಲೆ ಹಾಕಲು ನೆರವಾಯಿತು. 30 ಎಸೆತಗಳಲ್ಲಿ 7 ಬೌಂಡರಿ 5 ಭರ್ಜರಿ ಸಿಕ್ಸರ್ ನೆರವಿನಿಂದ 71 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಟೀಂ ಇಂಡಿಯಾವನ್ನು 200 ರನ್‌ಗಳ ಗಡಿ ದಾಟಿಸಿದರು.
ಆಸ್ಟ್ರೇಲಿಯಾ ಪರವಾಗಿ ಜೋಶ್ ಹೇಜಲ್‌ವುಡ್ 4 ಓವರ್ ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದರು. ನಥಾನ್ ಎಲ್ಲಿಸ್ 4 ಓವರ್ ಗಳಲ್ಲಿ ರನ್ ನೀಡಿ 3 ವಿಕೆಟ್ ಪಡೆದರು.
Live Tv
[brid partner=56869869 player=32851 video=960834 autoplay=true]
ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ (Indian Womens Cricket Team) ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ಐಸಿಸಿ (ICC) ರ‍್ಯಾಂಕಿಂಗ್‌ಪಟ್ಟಿಯಲ್ಲಿ 2ನೇ ಸ್ಥಾನ ಗಳಿಸುವ ಮೂಲಕ ಟಿ20 ವೃತ್ತಿಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟರ್ ಬೆತ್ ಮೂನಿ 743 ಶ್ರೇಯಾಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, 731 ಶ್ರೇಯಾಂಕಗಳನ್ನು ಗಳಿಸಿರುವ ಸ್ಮೃತಿ ಮಂಧಾನ 2ನೇ ಸ್ಥಾನದಲ್ಲಿ ಮಿಂಚಿದ್ದಾರೆ. ಐಸಿಸಿಯ 2021ರ ರಾಚೆಲ್ ಹೇಹೋ ಫ್ಲಿಂಟ್ ಪ್ರಶಸ್ತಿಗೆ ಆಯ್ಕೆಯಾಗಿದ್ದ ಸ್ಮೃತಿ ಮಂಧಾನ ಇದೀಗ ವೃತ್ತಿ ಜೀವನದ ಸಾಧನೆ ಮಾಡಿದ್ದಾರೆ. ಟಿ20 ಅಗ್ರಕ್ರಮಾಂಕದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಭಾರತ-ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಸರಣಿಯ 3 ಪಂದ್ಯಗಳಲ್ಲಿ 111 ರನ್‌ಗಳಿಸಿದ್ದು, ಐಸಿಸಿ ರ‍್ಯಾಂಕಿಂಗೆ ಇನ್ನಷ್ಟು ಸಹಕಾರಿಯಾಯಿತು. ಹಾಗೆಯೇ ಏಕದಿನ ಕ್ರಿಕೆಟರ್‌ಗಳ ಪಟ್ಟಿಯಲ್ಲೂ ಟಾಪ್-10ನಲ್ಲಿರುವ ಮಂಧಾನ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ 91 ರನ್‌ಗಳಿಸಿ 7ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದನ್ನೂ ಓದಿ: T20 WorldCupಗೆ ಡಿಕೆ ಓಕೆ, ರಿಷಭ್ ಯಾಕೆ – ಪಂತ್ ಕೈಬಿಡೋದು ಸೂಕ್ತ ಅಂದ ಮಾಜಿ ಕ್ರಿಕೆಟಿಗ
ಇನ್ನೂ ಏಕದಿನ ಕ್ರಿಕೆಟ್‌ನಲ್ಲಿ 13ನೇ ಸ್ಥಾನದಲ್ಲಿದ್ದ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) 9ನೇ ಸ್ಥಾನಕ್ಕೆ ಜಿದ್ದಾರೆ. ಆಲ್‌ರೌಂಡರ್ ದೀಪ್ತಿ ಶರ್ಮಾ 33 ರಿಂದ 32ನೇ ಸ್ಥಾನಕ್ಕೆ ಹಾಗೂ ವಿಕೆಟ್ ಕೀಪರ್ ಯಾಸ್ತಿಕಾ ಭಾಟಿಯಾ 45 ರಿಂದ 37ನೇ ಸ್ಥಾನಕ್ಕೇರಿದ್ದಾರೆ. ಬೌಲರ್ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದ ದೀಪ್ತಿ 12ನೇ ಸ್ಥಾನಕ್ಕೆ ಜಿಗಿದು ಸಾಧನೆ ಮಾಡಿದ್ದಾರೆ.
ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಹರ್ಮನ್ ಪ್ರೀತ್ ಕೌರ್ 14ನೇ ಸ್ಥಾನಕ್ಕೆ, ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ 10ನೇ ಸ್ಥಾನಕ್ಕೆ ಹಾಗೂ ರಾಧಾ ಯಾದವ್ 14ನೇ ಸ್ಥಾನಕ್ಕೆ ಜಿಗಿದರೇ, ಆಲ್‌ರೌಂಡರ್ ವಿಭಾಗದಲ್ಲಿ ಸ್ನೇಹಾ ರಾಣಾ ಹಾಗೂ ಪೂಜಾ ವಸ್ತ್ರಕರ್ ಇಬ್ಬರೂ 41ನೇ ಸ್ಥಾನ ಹಂಚಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಆಸ್ಟ್ರೇಲಿಯಾ (Australia) ವಿರುದ್ಧದ ತವರಿನ ಟಿ20 ಸರಣಿ (T20I Series) ಆರಂಭಕ್ಕೂ ಮುನ್ನ ಭಾರತಕ್ಕೆ (India) ಶಾಕ್ ಎದುರಾಗಿದೆ. ಟಿ20 ಸರಣಿಗೆ ಆಯ್ಕೆ ಆಗಿದ್ದ ವೇಗಿ ಮೊಹಮ್ಮದ್ ಶಮಿಗೆ (Mohammed Shami) ಕೊರೊನಾ (Corona) ಪಾಸಿಟಿವ್ ಕಂಡುಬಂದ ಕಾರಣ ಸರಣಿಯಿಂದ ಹೊರ ನಡೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಸೆ.20 ರಿಂದ ಆರಂಭವಾಗಲಿದ್ದು, ಈಗಾಗಲೇ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಈ ವೇಳೆ ಕೊರೊನಾ ಟೆಸ್ಟ್ ಮಾಡಿದಾಗ ಶಮಿಗೆ ಪಾಸಿಟಿವ್ ವರದಿಯಾಗಿದೆ. ಬಳಿಕ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಿದ್ದು, ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿಯಲಿದ್ದಾರೆ. ಮುಂದಿನ ದಕ್ಷಿಣ ಆಫ್ರಿಕಾ ಸರಣಿ ವೇಳೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಬಿಸಿಸಿಐನ (BCCI) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿಯನ್ನು ಆರಂಭಿಕನನ್ನಾಗಿ ಆಡಿಸಿ ತಲೆ ಇಲ್ಲದ ಕೆಲಸ ಮಾಡ್ಬೇಡಿ- ಗಂಭೀರ್ ಗರಂ
ಶಮಿ ತಂಡದಿಂದ ಹೊರನಡೆದಿರುವುದರಿಂದ ಅವರ ಸ್ಥಾನಕ್ಕೆ ಉಮೇಶ್ ಯಾದವ್ (Umesh Yadav) ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ 3 ವರ್ಷಗಳ ಬಳಿಕ ಟಿ20 ತಂಡಕ್ಕೆ ಕಂಬ್ಯಾಕ್ ಮಾಡಿದಂತಾಗಿದೆ. ಉಮೇಶ್ ಯಾದವ್ 2019ರಲ್ಲಿ ಕೊನೆಯದಾಗಿ ಭಾರತ ಪರವಾಗಿ ಟಿ20 ಪಂದ್ಯವಾಡಿದ್ದರು ಬಳಿಕ ಟಿ20 ತಂಡದಿಂದ ಡ್ರಾಪ್ ಆಗಿದ್ದ ಉಮೇಶ್ ಯಾದವ್ 2022ರ ಐಪಿಎಲ್‍ನಲ್ಲಿ (IPL) ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪರ ಭರ್ಜರಿ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಇದನ್ನೂ ಓದಿ: ಮಹತ್ತರವಾದ ಕಾರಣಕ್ಕಾಗಿ ಮತ್ತೆ ಕ್ರಿಕೆಟ್ ಆಡಲು ಮೈದಾನಕ್ಕಿಳಿದ ಲೆಜೆಂಡ್ ಕ್ರಿಕೆಟಿಗರು
ಇದೀಗ ಶಮಿ ಬದಲಿಗೆ ಯಾದವ್ ಕಡೆ ಆಯ್ಕೆ ಸಮಿತಿ ಒಲವು ತೋರಿದ್ದು, ಯಾದವ್ ಕೌಂಟಿ ಕ್ರಿಕೆಟ್‍ನಲ್ಲೂ ಗಮನಾರ್ಹ ಬೌಲಿಂಗ್ ಪ್ರದರ್ಶಿಸಿದ್ದರು. ಹಾಗಾಗಿ ಮತ್ತೊಮ್ಮೆ ಟಿ20 ತಂಡಕ್ಕೆ ಯಾದವ್ ಆಯ್ಕೆ ಅಚ್ಚರಿ ಪಡಬೇಕಾಗಿಲ್ಲ.
Live Tv
[brid partner=56869869 player=32851 video=960834 autoplay=true]
ಕ್ಯಾನ್‌ಬೆರಾ: ಆಸ್ಟ್ರೇಲಿಯಾ (Australia) ತಂಡದ ನಾಯಕ ಆರನ್ ಫಿಂಚ್ (Aaron Finch) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದು, ಭಾನುವಾರ ನ್ಯೂಜಿಲೆಂಡ್ ವಿರುದ್ಧ 3ನೇ ಪಂದ್ಯದ ಬಳಿಕ ಅವರು ಏಕದಿನ ಕ್ರಿಕೆಟ್ (ODI Cricket)ಗೆ ನಿವೃತ್ತಿ ಘೋಷಿಸಲಿದ್ದಾರೆ. ಬಳಿಕ ಫಿಂಚ್ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ.
⭐️ 145 ODIs ⭐️ 5401 runs ⭐️ 17 centuries ⭐️ 2020 Aus men’s ODI Player of the Year ⭐️ 2015 World Cup winner https://t.co/60KYlfwhMq
ಆರನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಕಳೆದ ವರ್ಷ ಯುಎಇ (UAE) ಆತಿಥ್ಯದಲ್ಲಿ ನಡೆದಿದ್ದ 2021ರ ಟಿ20 ವಿಶ್ವಕಪ್ (World Cup) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೇ ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ನಡೆಯುವ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಫಿಂಚ್ ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ – ಕಿಂಗ್ ಕೊಹ್ಲಿ ಭಾವುಕ
145 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ಆರನ್ ಫಿಂಚ್ 5,401 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 17 ಶತಕಗಳೂ ಇವೆ. ಅಲ್ಲದೇ 2020ರಲ್ಲಿ ಆಸ್ಟ್ರೇಲಿಯಾ ಪುರುಷರ ಏಕದಿನ ಕ್ರಿಕೆಟ್ ವಿಭಾಗದ `ಪ್ಲೇಯರ್ ಆಫ್ ದಿ ಯಿಯರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೊತೆಗೆ 2015ರ ವಿಶ್ವಕಪ್ ಗೆಲ್ಲಲ್ಲು ಪ್ರಮುಖ ಪಾತ್ರ ವಹಿಸಿದ್ದಾರೆ.
ಆರನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿತ್ತು. ಆದರೆ ಕ್ವಾಲಿಫೈಯರ್‌ನಲ್ಲಿ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ ಸೋಲನ್ನು ಅನುಭವಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಫಿಂಚ್, ನನ್ನ ಕ್ರಿಕೆಟ್ ಬದುಕಿನ ಈ ಪಯಣ ಕೆಲವು ಅಸಾಧಾರಣ ನೆನಪುಗಳಿಂದ ಕೂಡಿದೆ. ಆಸ್ಟ್ರೇಲಿಯಾ ಏಕದಿನ ತಂಡದ ಸದಸ್ಯನಾಗಿದ್ದಕ್ಕೆ ನಾನು ತುಂಬಾ ಸಂತಸ ಪಡುತ್ತೇನೆ. ನನ್ನ ಜೊತೆ ಆಡಿದ ಹಾಗೂ ತೆರೆಮರೆಯಲ್ಲಿ ನನಗೆ ಸದಾ ಪ್ರೋತ್ಸಾಹಿಸುತ್ತಿದ್ದ ಹಲವರಿಂದ ನಾನು ಆಶೀರ್ವದಿಸಲ್ಪಟ್ಟಿದ್ದೇನೆ ಎಂದಿದ್ದಾರೆ.
ಮುಂದಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಾಗಿ ಇಂದಿನಿಂದಲೇ ತಯಾರಿ ಆರಂಭಿಸಲು ನೆರವಾಗುವ ನಿಟ್ಟಿನಲ್ಲಿ ನಾನು ನಾಯಕತ್ವವನ್ನು ಬೇರೆ ಆಟಗಾರನಿಗೆ ವಹಿಸಲು ಉದ್ದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಲೀಗ್‌ನಲ್ಲಿ ಭಾರತ, ಪಾಕಿಸ್ತಾನದ ಎದುರು ಸೋಲನ್ನು ಅನುಭವಿಸಿತು.
ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ 10 ಓವರ್‌ಗಳವರೆಗೂ ಉತ್ತಮ ರನ್‌ಗಳನ್ನೇ ಕಲೆಹಾಕಿತ್ತು. 9.4 ಓವರ್‌ಗಳಿದ್ದಾಗ ತಂಡದ ಮೊತ್ತ 3 ವಿಕೆಟ್‌ಗೆ 91 ರನ್‌ಗಳಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಿಷಭ್ ಪಂತ್ 12 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ ಕೇವಲ 14 ರನ್ ಗಳಿಸಿದರು. ರಿವರ್ಸ್ ಸ್ವೀಪ್ ಶಾಟ್ ಮೂಲಕ ಮತ್ತೊಂದು ಬೌಂಡರಿ ಎತ್ತುವ ಪ್ರಯತ್ನ ಮಾಡಿದ ಪಂತ್ ಎದುರಾಳಿ ತಂಡದ ಆಸಿಫ್ ಅಲಿ ಕೈಗೆ ಸುಲಭ ಕ್ಯಾಚ್ ನೀಡಿದರು. ಇದನ್ನೂ ಓದಿ: ವಿದೇಶಿ ಲೀಗ್‌ನತ್ತ ಕಣ್ಣು – ಐಪಿಎಲ್‌ಗೆ ರೈನಾ ಗುಡ್‌ಬೈ
ನಂತರದಲ್ಲಿ ಬಂದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಟೀಂ ಇಂಡಿಯಾ 7 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ರನ್‌ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 19.5 ಓವರ್‌ಗಳಲ್ಲಿ 182 ರನ್ ಗಳಿಸಿ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿತು.
`ಸೂಪರ್ ಫೋರ್ ಲೀಗ್‌ನ ಆ ಹಂತದಲ್ಲಿ ಪಂತ್ ಅಂತಹ ಶಾಟ್ ಆಡುವ ಅಗತ್ಯವಿರಲಿಲ್ಲ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವೀಪ್ ಆಡುತ್ತಾರೆ ಎಂಬುದು ನನಗೆ ತಿಳಿದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅಗ್ರ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಎಂಬುದೂ ಗೊತ್ತಿದೆ. ಆದರೆ ಈ ಹಂತದಲ್ಲಿ ಆ ಹೊಡೆತ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ರಿವರ್ಸ್ ಸ್ವೀಪ್ ಹೊಡೆಯುವುದು ಪಂತ್ ಅವರ ಶಾಟ್ ಅಲ್ಲ. ಲಾಂಗ್ ಆನ್ ಅಥವಾ ಡೀಪ್ ಮಿಡ್‌ವಿಕೆಟ್ ಅವರ ಪಕ್ಕಾ ಶಾಟ್. ಅದೇ ಅವರ ಶಕ್ತಿ. ಆ ಸಂದರ್ಭದಲ್ಲಿ ರಿವರ್ಸ್ ಸ್ವೀಪ್ ಅಗತ್ಯವಿರಲಿಲ್ಲ. ಅದು ಅವರ ಶಕ್ತಿಯೂ ಅಲ್ಲ ಎಂದು ಗಂಭೀರ್ ಅಸಮಾಧಾನ ಹೊರಹಾಕಿದ್ದಾರೆ.
Live Tv
[brid partner=56869869 player=32851 video=960834 autoplay=true]