ರಾಂಚಿ: ಮೊದಲ ಟಿ20 (T20) ಪಂದ್ಯದಲ್ಲಿ ಭಾರತದ (Team india) ವಿರುದ್ಧ 21 ರನ್‌ಗಳ ಜಯ ಸಾಧಿಸಿದ ನ್ಯೂಜಿಲೆಂಡ್ (New Zealand ) ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗೆಲ್ಲಲು 177 ರನ್‌ಗಳ ಕಠಿಣ ಗುರಿಯನ್ನು ಪಡೆದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ (Washington Sundar) ಹೋರಾಟ ಮಾಡಿದರೂ ಫಲ ಸಿಗಲಿಲ್ಲ. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಹೊಡೆದು ಸೋಲೊಪ್ಪಿಕೊಂಡಿತು.
ಭಾರತ 4.1 ಓವರ್‌ಗಳಲ್ಲಿ 15 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. 4ನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಹಾರ್ದಿಕ್ ಪಾಂಡ್ಯ (Hardik Pandya) 51 ಎಸೆತಗಳಲ್ಲಿ 68 ರನ್ ಚಚ್ಚಿ ಸ್ವಲ್ಪ ಪ್ರತಿರೋಧ ತೋರಿಸಿದರು.
ಸೂರ್ಯಕುಮಾರ್ ಯಾದವ್ 47 ರನ್(34 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾರ್ದಿಕ್ ಪಾಂಡ್ಯ 21 ರನ್( 20 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ 50 ರನ್ (28 ಎಸೆತ, 5 ಬೌಂಡರಿ, 3 ಸಿಕ್ಸರ್) ಹೊಡೆದು ಪೆವಿಲಿಯನ್ ಸೇರಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನ್ಯೂಜಿಲೆಂಡ್ ಪರವಾಗಿ ಫಿನ್ ಅಲೆನ್ 35 ರನ್(23 ಎಸೆತ, 4 ಬೌಂಡರಿ, 2 ಸಿಕ್ಸರ್), ಡೆವೂನ್ ಕಾನ್ವೇ 52 ರನ್(35 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರೆ ಕೊನೆಯಲ್ಲಿ ಡೇರಿಲ್ ಮಿಚೆಲ್ ಔಟಾಗದೇ 59 ರನ್(30 ಎಸೆತ, 3 ಬೌಂಡರಿ, 5 ಸಿಕ್ಸರ್) ಹೊಡೆದ ಪರಿಣಾಮ ತಂಡದ ಮೊತ್ತ 170 ರನ್‌ಗಳ ಗಡಿ ದಾಟಿತು.
ಅದರಲ್ಲೂ ಅರ್ಶ್‌ದೀಪ್ ಸಿಂಗ್ ಎಸೆದ ಕೊನೆಯ ಓವರ್‌ನಲ್ಲಿ 27 ರನ್ ಬಂದಿತ್ತು. ಮಿಚೆಲ್ ಕ್ರಮವಾಗಿ ನೋಬಾಲ್+6,6,6,4,0,2,2 ರನ್ ಚಚ್ಚಿದ್ದರಿಂದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 176 ರನ್ ಹೊಡೆಯಿತು.
ಮೊದಲ 10 ಓವರ್‌ಗಳಲ್ಲಿ 79 ರನ್ ಗಳಿಸಿದ್ದ ನ್ಯೂಜಿಲೆಂಡ್ ನಂತರದ 10 ಓವರ್‌ಗಳಲ್ಲಿ 97 ರನ್ ಹೊಡೆದಿತ್ತು. ಆರ್ಶ್‌ದೀಪ್ 4 ಓವರ್ ಎಸೆದು 51 ರನ್ ನೀಡಿ ದುಬಾರಿಯಾದರೆ ವಾಷಿಂಗ್ಟನ್ ಸುಂದರ್ 4 ಓವರ್ ಎಸೆದು 22 ರನ್ ನೀಡಿ 2 ವಿಕೆಟ್ ಪಡೆದರು.
Live Tv
[brid partner=56869869 player=32851 video=960834 autoplay=true]
ಕೇಪ್‌ಟೌನ್: ದಕ್ಷಿಣ ಆಫ್ರಿಕಾದ (South Africa) ಆಲ್‌ರೌಂಡರ್ ಡ್ವೈನ್ ಪ್ರಿಟೋರಿಯಸ್ (Dwaine Pretorius) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ವಿದಾಯ ಹೇಳಿದ್ದಾರೆ.
ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಂಡಳಿ (CSA) ಪ್ರಿಟೋರಿಯಸ್ ನಿವೃತ್ತಿ ನಿರ್ಧಾರವನ್ನು ಖಚಿತ ಪಡಿಸಿದೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (Cricket) ಪಾದಾರ್ಪಣೆ ಮಾಡಿದ 31 ವರ್ಷ ವಯಸ್ಸಿನ ಪ್ರಿಟೋರಿಯಸ್, ಈ ವರೆಗೆ 30 ಅಂತಾರಾಷ್ಟ್ರೀಯ ಟಿ20, 27 ಏಕದಿನ ಪಂದ್ಯಗಳು ಹಾಗೂ ಮೂರು ಟೆಸ್ಟ್ ಸರಣಿಗಳಲ್ಲಿ ಪ್ರತಿನಿಧಿಸಿದ್ದಾರೆ. ಎರಡು ವಿಶ್ವಕಪ್‌ಗಳಲ್ಲಿ (World Cup) ತಮ್ಮ ಸಾಮರ್ಥ್ಯ ತೋರಿದ್ದಾರೆ. ಇದನ್ನೂ ಓದಿ: ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಜೊತೆ ಸುತ್ತುತ್ತಿದ್ರು: ಬಾಲಕೃಷ್ಣ ಬಾಂಬ್
ಈ ಕುರಿತು ಮಾತನಾಡಿರುವ ಪ್ರಿಟೋರಿಯಸ್, ಕೆಲ ದಿನಗಳ ಹಿಂದೆ ನಾನು ನನ್ನ ಕ್ರಿಕೆಟ್ ವೃತ್ತಿ ಬದುಕಿನ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದೆ. ನಾನು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ರಾಜ್‍ಕೋಟ್: ಭಾರತ (India) ಹಾಗೂ ಶ್ರೀಲಂಕಾ (Sri Lanka) ನಡುವೆ ಇಂದು ಮೂರನೇ ಮತ್ತು ಅಂತಿಮ ಟಿ20 (T20I) ಪಂದ್ಯ ನಡೆಯಲಿದೆ. ಇದೀಗ ಸರಣಿ 1-1 ಸಮಬಲ ಸಾಧಿಸಿರುವ ಕಾರಣ ಇಂದು ನಡೆಯುವ ಪಂದ್ಯ ಕುತೂಹಲ ಮೂಡಿಸಿದೆ.
ರಾಜ್‍ಕೋಟ್‍ನಲ್ಲಿ (Rajkot) ಫೈನಲ್ ಫೈಟ್ ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳು ಹೈವೋಲ್ಟೇಜ್ ಮ್ಯಾಚ್‍ಗಾಗಿ ಕಾದು ಕುಳಿತಿದ್ದಾರೆ. 3 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯವನ್ನು ಭಾರತ 2 ರನ್‍ಗಳಿಂದ ರೋಚಕವಾಗಿ ಗೆದ್ದುಕೊಂಡರೆ, 2 ಪಂದ್ಯವನ್ನು ಶ್ರೀಲಂಕಾ 16 ರನ್‍ಗಳ ಗೆಲುವಿನೊಂದಿಗೆ ಸರಣಿಯನ್ನು ಸಮಬಲ ಗೊಳಿಸಿಕೊಂಡಿದೆ. ಹಾಗಾಗಿ ಮೂರನೇ ಪಂದ್ಯ ಫೈನಲ್‍ನಂತೆ ಗೋಚರಿಸುತ್ತಿದ್ದು, ಗೆದ್ದವರು ಸರಣಿ ಕೈವಶ ಮಾಡಿಕೊಳ್ಳಲಿದ್ದಾರೆ. ಇದನ್ನೂ ಓದಿ: ನೋಬಾಲ್ ಎಸೆಯುವುದು ಅಪರಾಧ – ಅರ್ಶ್‍ದೀಪ್ ಸಿಂಗ್ ತಪ್ಪಿಗೆ ಚಾಟಿ ಬೀಸಿದ ಪಾಂಡ್ಯ
ಟೀಂ ಇಂಡಿಯಾ ಟಿ20 ತಂಡದ ಸಾರಥ್ಯ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ರಾಜ್‍ಕೋಟ್‍ನಲ್ಲಿ ಗೆಲುವಿನ ಸಂಭ್ರಮಾಚರಣೆಗೆ ಕಾದು ಕುಳಿತಿದ್ದು, ಈ ಗೆಲುವಿನೊಂದಿಗೆ ಟಿ20 ತಂಡದ ಚುಕ್ಕಾಣಿ ಭದ್ರಪಡಿಸಿಕೊಳ್ಳುವ ಪ್ಲಾನ್‍ನಲ್ಲಿದ್ದಾರೆ. ಇನ್ನೊಂದೆಡೆ ಶ್ರೀಲಂಕಾ ಟಿ20 ಕ್ರಿಕೆಟ್‍ನಲ್ಲಿ ಶ್ರೇಷ್ಠ ಪ್ರದರ್ಶನದೊಂದಿಗೆ ತವರಿನಲ್ಲಿ ಭಾರತಕ್ಕೆ ಟಕ್ಕರ್ ನೀಡಲು ಹವಣಿಸುತ್ತಿದೆ.
ಈಗಾಗಲೇ ನಡೆದಿರುವ 2 ಪಂದ್ಯಗಳು ಕೂಡ ಪೈಪೋಟಿಯಿಂದ ಕೊಡಿತ್ತು. ಪುಣೆಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ರನ್ ಹೊಳೆ ಹರಿದಿತ್ತು. ಬೌಂಡರಿ, ಸಿಕ್ಸರ್‌ಗಳ ಮೂಲಕ ಬ್ಯಾಟ್ಸ್‌ಮ್ಯಾನ್‌ಗಳು ವಿಜೃಂಭಿಸಿದ್ದರು. ಇದೀಗ ಮೂರನೇ ಪಂದ್ಯ ಭಾರೀ ಕುತೂಹಲ ಮೂಡಿಸಿದ್ದು, ಎರಡೂ ತಂಡಗಳು ಗೆಲುವಿಗಾಗಿ ಹೋರಾಡಲಿದೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿ ಸುರಿಮಳೆ – ಸ್ಫೋಟಕ ಅರ್ಧ ಶತಕ ಸಿಡಿಸಿ ದಾಖಲೆ ಬರೆದ ಅಕ್ಷರ್ ಪಟೇಲ್
ಟೀಂ ಇಂಡಿಯಾ ಪರ ಮೊದಲೆರಡು ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಭಮನ್ ಗಿಲ್ ಉತ್ತಮ ಆರಂಭ ನೀಡಲು ವಿಫಲರಾಗಿದ್ದರು. ಹಾಗಾಗಿ ಅವರ ಸ್ಥಾನದಲ್ಲಿ ಋತುರಾಜ್ ಗಾಯಕ್ವಾಡ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ರಾಹುಲ್ ತ್ರಿಪಾಠಿ ನಿರಾಸೆ ಮೂಡಿಸಿದ್ದರು. ಹಾಗಾಗಿ ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್‌ರನ್ನು ಕಣಕ್ಕಿಳಿಸುವ ಸಾಧ್ಯತೆ ಕಂಡುಬರುತ್ತಿದೆ. ಬೌಲಿಂಗ್‍ನಲ್ಲಿ ದುಬಾರಿಯಾದ ಅರ್ಶ್‍ದೀಪ್ ಸಿಂಗ್ ಬದಲು ಮತ್ತೆ ಹರ್ಷಲ್ ಪಟೇಲ್ ಸ್ಥಾನ ಪಡೆಯಬಹುದು. ಈ ಮೂರು ಬದಲಾವಣೆಯೊಂದಿಗೆ ಭಾರತ ಮೂರನೇ ಪಂದ್ಯವಾಡುವ ಸಾಧ್ಯತೆ ಗೋಚರಿಸುತ್ತಿದೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಅಕ್ಷರ್ ಪಟೇಲ್ (Axar Patel), ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಸ್ಫೋಟಕ ಅರ್ಧಶತಕದಿಂದ ಗೆಲುವಿನ ಹತ್ತಿರ ಬಂದಿದ್ದ ಭಾರತ (Team India) ಕೊನೆಯಲ್ಲಿ ವಿಕೆಟ್ ಕಳೆದುಕೊಂಡು ಸೋತಿದೆ. ಎರಡನೇ ಟಿ20 ಪಂದ್ಯವನ್ನು 16 ರನ್‌ಗಳಿಂದ ಲಂಕಾ (Srilanka) ಗೆದ್ದುಕೊಂಡಿದ್ದು, ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮವಾಗಿದೆ.
9.1 ಓವರ್‌ಗಳಲ್ಲಿ 57 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದರಿಂದ 207 ರನ್‌ಗಳ ಗುರಿ ಭಾರತಕ್ಕೆ ಕಠಿಣವಾಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅಕ್ಷರ್ ಪಟೇಲ್ ಮತ್ತು ಸೂರ್ಯಕುಮಾರ್ ಯಾದವ್ ಕೇವಲ 41 ಎಸೆತಗಳಿಗೆ 91 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹತ್ತಿರ ತಂದಿಟ್ಟರು. ಬಳಿಕ ಅಕ್ಷರ್ ಪಟೇಲ್ ಮತ್ತು ಶಿವಂ ಮಾವಿ 22 ಎಸೆತಗಳಲ್ಲಿ 41 ರನ್ ಚಚ್ಚಿದ್ದರು. ಆದರೆ ಕೊನೆಯಲ್ಲಿ ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್ ಔಟ್ ಆದ ಕಾರಣ ಭಾರತ 8 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಸೋಲು ಅನುಭವಿಸಿತು.
ಸಿಕ್ಸರ್ ಬೌಂಡರಿಗಳ ಈ ಆಟದಲ್ಲಿ ಒಟ್ಟು 26 ಸಿಕ್ಸರ್ ಹಾಗೂ 21 ಬೌಂಡರಿಗಳು ದಾಖಲಾದವು. ಶ್ರೀಲಂಕಾ ಪರ 14 ಸಿಕ್ಸರ್, 10 ಬೌಂಡರಿಗಳು ದಾಖಲಾದರೆ, ಟೀಂ ಇಂಡಿಯಾ ಪರ 12 ಸಿಕ್ಸರ್, 11 ಬೌಂಡರಿಗಳು ದಾಖಲಾದವು. 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿದ್ದ ಟೀಂ ಇಂಡಿಯಾ ಉಳಿದ 10 ಓವರ್‌ಗಳಲ್ಲಿ 126 ರನ್‌ಗಳನ್ನು ಪೇರಿಸಿ ಕೊನೆಯವರೆಗೂ ಹೋರಾಡಿತು.
ಕೊನೆಯ ಓವರ್‌ನಲ್ಲಿ ಟೀಂ ಇಂಡಿಯಾಕ್ಕೆ 21 ರನ್‌ಗಳ ಅಗತ್ಯವಿತ್ತು. ಈ ವೇಳೆ 20ನೇ ಓವರ್‌ನ ಮೊದಲ ಎಸೆತವನ್ನು ಮಾವಿ ಸಿಂಗಲ್ ತಂದುಕೊಟ್ಟರು. ಬಳಿಕ ಸ್ಟ್ರೈಕ್ ತೆಗೆದುಕೊಂಡ ಅಕ್ಷರ್ ಪಟೇಲ್ 2ನೇ ಎಸೆತದಲ್ಲಿ 2 ರನ್ ಕದಿಯುವಲ್ಲಿ ಯಶಸ್ವಿಯಾದರು. 3ನೇ ಎಸೆತದಲ್ಲಿ ಸಿಕ್ಸ್ ಎತ್ತುವ ಬರದಲ್ಲಿ ಬೌಂಡರಿ ಲೈನ್ ಬಳಿ ಕ್ಯಾಚ್ ನೀಡಿ ಔಟಾದರು. 4, 5ನೇ ಎಸೆತದಲ್ಲಿ ತಲಾ ಒಂದೊಂದು ರನ್ ಸೇರ್ಪಡೆಯಾಯಿತು. ಕೊನೆಯ ಎಸೆತದಲ್ಲಿ ಮಾವಿ ಕ್ಯಾಚ್ ನೀಡಿದರು.
ಶ್ರೀಲಂಕಾ ತಂಡದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ತೀವ್ರ ಆಘಾತ ಎದುರಾಗಿತ್ತು. ಕ್ರೀಸ್‌ನಲ್ಲಿ ಅಬ್ಬರಿಸಬೇಕಿದ್ದ ಪ್ರಮುಖ ಬ್ಯಾಟರ್‌ಗಳು ಕೈಕೊಟ್ಟು ಪೆವಿಲಿಯನ್ ಸೇರಿದ್ರು.
ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ಶುಭಮನ್ ಗಿಲ್ ಜೋಡಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಇಶಾನ್ ಕೇವಲ 2 ರನ್ ಗಳಿಸಿದ್ರೆ ಗಿಲ್ 5 ರನ್ ಗಳಿಸಿ ಔಟಾದರು. ನಂತರ ಬಂದ ರಾಹುಲ್ ತ್ರಿಪಾಟಿ ಸಹ 5 ರನ್ ಗಳಿಗೆ ಮಕಾಡೆ ಮಲಗಿದ್ರು. ಭರವಸೆಯ ಆಟಗಾರ, ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸಹ 12 ಎಸೆತಗಳಲ್ಲಿ 1 ಸಿಕ್ಸರ್, 1 ಬೌಂಡರಿಯೊಂದಿಗೆ 12 ರನ್ ಗಳಿಸಿ ಔಟಾದರು. ಒಟ್ಟಿನಲ್ಲಿ ಪವರ್ ಪ್ಲೇ ಮುಗಿಯುವಷ್ಟಲ್ಲಿ ಟೀಂ ಇಂಡಿಯಾ 41 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆಲ್‌ರೌಂಡರ್ ದೀಪಕ್ ಹೂಡಾ ಸಹ 9 ರನ್ ಗಳಿಸಿ ಪೆವಿಲಿಯನ್ ಸೇರಿದ್ರು.
ಅಕ್ಷರ್-ಸೂರ್ಯ ಹೊಡಿಬಡಿ ಆಟ:
ಬಸವಳಿದಿದ್ದ ಟೀಂ ಇಂಡಿಯಾಕ್ಕೆ (Team India) ಮಧ್ಯಮ ಕ್ರಮಾಂಕದಲ್ಲಿ ಬಂದ ಅಕ್ಷರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ಆಸರೆಯಾದರು. ಸಿಕ್ಸರ್, ಬೌಂಡರಿಗಳ ಮೂಲಕ ಲಂಕಾ ಬೌಲರ್‌ಗಳನ್ನು ಬೆಂಡೆತ್ತಿ ರನ್ ಕಲೆ ಹಾಕಿದರು. ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 3 ಸಿಕ್ಸರ್, 3 ಬೌಂಡರಿಯೊಂದಿಗೆ ಆಕರ್ಷಕ ಅರ್ಧ ಶತಕ ಗಳಿಸಿದ್ರೆ, ಕೊನೆಯವರೆಗೂ ಅಬ್ಬರಿಸಿದ ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 6 ಸಿಕ್ಸರ್, 3 ಬೌಂಡರಿಳೊಂದಿಗೆ 65 ರನ್ ಚಚ್ಚಿ ಔಟಾದರು. ಈ ವೇಳೆ ಶಿವಂ ಮಾವಿ 15 ಎಸೆತಗಳಲ್ಲಿ ಸ್ಫೋಟಕ 26 ರನ್ ಗಳಿಸಿ ಔಟಾದರು.
ಕೆಟ್ಟ ದಾಖಲೆ ಬರೆದ ಅರ್ಷ್ ದೀಪ್‌ಸಿಂಗ್:
ಗಾಯದ ಸಮಸ್ಯೆಯಿಂದಾಗಿ ಮೊದಲ ಟಿ20 ಯಲ್ಲಿ ಹೊರಗುಳಿದಿದ್ದ ಅರ್ಷ್‌ದೀಪ್ ಸಿಂಗ್ ಈ ಪಂದ್ಯದಲ್ಲಿ ಭಾರೀ ನಿರಾಸೆ ಅನುಭವಿಸಿದ್ದಾರೆ. ಕೇವಲ 2 ಓವರ್‌ಗಳ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಬರೊಬ್ಬರಿ 37 ರನ್ ಚಚ್ಚಿಸಿಕೊಂಡರು. 18.50 ಎಕಾನಮಿಯಲ್ಲಿ ಬೌಲಿಂಗ್ ನಡೆಸಿ ಹಿನ್ನಡೆ ಅನುಭವಿಸಿದ್ದು ಮಾತ್ರವಲ್ಲದೇ ಒಂದೇ ಮ್ಯಾಚ್‌ನಲ್ಲಿ ಹ್ಯಾಟ್ರಿಕ್ ನೋಬಾಲ್ ನೀಡಿ ಅಂತ್ಯಂತ ಕೆಟ್ಟದಾಖಲೆ ಬರೆದರು.
ಲಂಕಾ ಸಿಕ್ಸರ್, ಬೌಂಡರಿ ಆಟ:
ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಲಂಕಾ ಬ್ಯಾಟ್ಸ್‌ಮ್ಯಾನ್‌ಗಳು ಟೀಂ ಇಂಡಿಯಾ ಬೌಲರ್‌ಗಳ ವಿರುದ್ಧ ಮೇಲುಗೈ ಸಾಧಿಸಿದ್ರು. ಮಧ್ಯಮ ಓವರ್‌ಗಳಲ್ಲಿ ಲಂಕಾ ಪಡೆಯನ್ನು ಕಟ್ಟಿಹಾಕಿತ್ತಾದರೂ ಡೆತ್ ಓವರ್‌ನಲ್ಲಿ ಅಬ್ಬರಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳ ಬೆವರಿಳಿಸಿದರು.
ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಲಂಕಾ ಉತ್ತಮ ಶುಭಾರಂಭ ಪಡೆಯಿತು. ಅದರಲ್ಲೂ ಕುಸಾಲ್ ಮೆಂಡಿಸ್ (Kusal Mendis) ಟೀಂ ಇಂಡಿಯಶ ಬೌಲರ್‌ಗಳ ಬೆವರಿಳಿಸುತ್ತಾ ಸಾಗಿದರು. ಪಾತುಮ್ ನಿಸ್ಸಂಕ ಹಾಗೂ ಮೆಂಡಿಸ್ ಜೋಡಿ 8.2 ಓವರ್‌ಗಳಲ್ಲಿ 80 ರನ್ ಕಲೆ ಹಾಕಿ ಬೇರ್ಪಟ್ಟಿತು. ಮೆಂಡಿಸ್ 31 ಎಸೆತಗಳಲ್ಲಿ 52 ರನ್ (4 ಸಿಕ್ಸರ್, 3 ಬೌಂಡರಿ) ಗಳಿಸಿ ಮಿಂಚಿದರು. ಪಾತುಮ್ ನಿಸ್ಸಂಕ 35 ಎಸೆತಗಳಲ್ಲಿ 33 ರನ್ ಕಲೆಹಾಕಿ ಔಟಾದರು.
ನಂತರ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಚರಿತ್ ಅಸಲಂಕಾ ಹಾಗೂ ನಾಯಕ ದಾಸುನ್ ಶನಕ (Dasun Shanaka) ಸಿಕ್ಸರ್ ಬೌಂಡರಿಗಳ ಭರ್ಜರಿ ಜೊತೆಯಾಟವಾಡಿದರು.
ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಅಬ್ಬರಿಸಿದ ನಾಯಕ ಶನಕ ಕೇವಲ 22 ಎಸೆತಗಳಲ್ಲಿ ಭರ್ಜರಿ 56 ರನ್ (6 ಸಿಕ್ಸರ್, 2 ಬೌಂಡರಿ) ಚಚ್ಚಿದರೆ, ಅಸಲಂಕಾ 19 ಎಸೆತಗಳಲ್ಲಿ 4 ಸಿಕ್ಸರ್‌ಗಳೊಂದಿಗೆ 37 ಬಾರಿಸಿದರು. ಈ ಮೂಲಕ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ ಭರ್ಜರಿ 206 ರನ್ ಕಲೆಹಾಕಿತು. ಬಾನುಕಾ ರಾಜಪಕ್ಷ 2 ರನ್, ಧನಂಜಯ ಡಿ.ಸೆಲ್ವ 3 ರನ್ ಗಳಿಸಿದ್ರೆ ವಾನಿಂದು ಹಸರಂಗ ಶೂನ್ಯಕ್ಕೆ ನಿರ್ಗಮಿಸಿದ್ರು.
4 ಓವರ್‌ಗಳಲ್ಲಿ 48 ರನ್ ನೀಡಿದ ಉಮ್ರಾನ್ ಮಲಿಕ್ 3 ವಿಕೆಟ್ ಪಡೆದರೆ, 24 ರನ್ ನೀಡಿದ ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು. ಯಜುವೇಂದ್ರ ಚಾಹಲ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.
Live Tv
[brid partner=56869869 player=32851 video=960834 autoplay=true]
ಮುಂಬೈ: ಪ್ರವಾಸಿ ಶ್ರೀಲಂಕಾ (Sri Lanka) ಉತ್ತಮವಾಗಿ ಆಡಿ ಕೊನೆ ಕ್ಷಣದಲ್ಲಿ ಪಂದ್ಯ ಕೈಚೆಲ್ಲಿಕೊಂಡರೆ, ಡೆಬ್ಯೂ ಸ್ಟಾರ್ ಶಿವಂ ಮಾವಿ (Shivam Mavi) ಬೌಲಿಂಗ್‍ನಲ್ಲಿ ಲಗಾಮು ಹಾಕಿದ ಪರಿಣಾಮ ತವರಿನಲ್ಲಿ ಭಾರತ (India) 2 ರನ್‍ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
ಗೆಲ್ಲಲು 163 ರನ್‌ಗಳ ಗುರಿ ಪಡೆದ ಶ್ರೀಲಂಕಾಗೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 13 ರನ್ ಬೇಕಾಗಿತ್ತು. ಅಕ್ಷರ್ ಪಟೇಲ್ ಎಸೆದ ಕೊನೆಯ ಓವರ್‌ನ ಮೊದಲ ಎಸೆತ ವೈಡ್ ಆಯಿತು. ನಂತರ ಮೊದಲ ಎರಡು ಎಸೆತಗಳಲ್ಲಿ ಒಂದೊಂದು ರನ್ ಬಂದರೆ, 3ನೇ ಎಸೆತ ಸಿಕ್ಸ್, 4 ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ನಂತರ 5ನೇ ಎಸೆತದಲ್ಲಿ ವಿಕೆಟ್ ಬಿತ್ತು. ಕೊನೆಯ ಎಸೆತದಲ್ಲಿ ಶ್ರೀಲಂಕಾ ಗೆಲುವಿಗೆ 4 ರನ್ ಬೇಕಾಗಿತ್ತು. ಆದರೆ ಬ್ಯಾಟ್ಸ್‌ಮ್ಯಾನ್ ರನೌಟ್ ಆಗುವುದರೊಂದಿಗೆ ಭಾರತ 2 ರನ್‍ಗಳ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: ಮಂಕಡ್ ಮೂಲಕ ರನೌಟ್ ಮಾಡಿದ ಜಂಪಾ – ನಾಟೌಟ್ ಎಂದ ಅಂಪೈರ್!
ಬ್ಯಾಟಿಂಗ್‍ನಲ್ಲಿ ಅಕ್ಷರ್ ಪಟೇಲ್ ಮತ್ತು ದೀಪಕ್ ಹೂಡಾ ಧೂಳೆಬ್ಬಿಸಿದರೆ, ಬೌಲಿಂಗ್‍ನಲ್ಲಿ ಶಿವಂ ಮಾವಿ ಶೈನ್ ಆದರು. ಪರಿಣಾಮ 20 ಓವರ್‌ಗಳಲ್ಲಿ 163 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ 160 ರನ್‍ಗಳಿಗೆ ಸರ್ವಪತನ ಕಂಡು ಸೋಲುಂಡಿತು. ಇತ್ತ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾದ ಗೆಲುವಿನ ಓಟ ಮುಂದುವರಿಸಿತು.
ಉತ್ತಮ ಮೊತ್ತ ಗುರಿ ಪಡೆದು ಚೇಸಿಂಗ್ ಆರಂಭಿಸಿದ ಲಂಕಾ ಆರಂಭಿಕ ಆಘಾತ ಅನುಭವಿಸಿತು. ಡೆಬ್ಯೂ ಆಟಗಾರ ಶಿವಂ ಮಾವಿ ತನ್ನ ಮೊದಲ ಓವರ್‌ನಲ್ಲೇ ವಿಕೆಟ್ ಬೇಟೆ ಆರಂಭಿಸಿದರು. ನಿಸಲಂಕ 1, ಡಿಸಿಲ್ವ 8, ಅಸಲಂಕ 12, ರಾಜಪಕ್ಸ 10 ರನ್ ಬಾರಿಸಿ ನಿರಾಸೆ ಅನುಭವಿಸಿದರು.
ಮಾವಿ ಮಾರಕ ದಾಳಿ:
ಶಿವಂ ಮಾವಿ ಆರಂಭದಿಂದಲೇ ವಿಕೆಟ್ ಕಿತ್ತು ಮೇಲುಗೈ ತಂದರೆ, ಆ ಬಳಿಕ ಹರ್ಷಲ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ಶ್ರೀಲಂಕಾವನ್ನು ಕಟ್ಟಿಹಾಕಿದರು. ಈ ನಡುವೆ ಗೆಲುವಿಗಾಗಿ ನಾಯಕ ದಾಸುನ್ ಶನಕ 45 ರನ್ (27 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ಹೋರಾಡಿ ಔಟ್ ಆಗುತ್ತಿದ್ದಂತೆ ಶ್ರೀಲಂಕಾ ಗೆಲುವಿನ ಆಸೆ ಕಮರಿತು. ಅಂತಿಮವಾಗಿ ಲಂಕಾ 20 ಓವರ್‌ಗಳಲ್ಲಿ 160 ರನ್‍ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಬುಮ್ರಾ ಈಸ್ ಬ್ಯಾಕ್ – ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ
ಭಾರತ ಪರ ಶಿವಂ ಮಾವಿ 4 ವಿಕೆಟ್ ಕಿತ್ತು ತಮ್ಮ ಡೆಬ್ಯೂ ಪಂದ್ಯವನ್ನು ಸ್ಮರಣಿಯವಾಗಿಸಿಕೊಂಡರೆ, ಉಮ್ರಾನ್ ಮಲಿಕ್ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಈ ಮೊದಲು ಟಾಸ್ ಗೆದ್ದ ಶ್ರೀಲಂಕಾ ಆತಿಥೇಯ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಇತ್ತ ಶ್ರೀಲಂಕಾ ಬೌಲರ್‌ಗಳು ನಾಯಕನ ನಿರ್ಧಾರವನ್ನು ಯಶಸ್ವಿಯಾಗಿಸುವಂತೆ ಆರಂಭದಲ್ಲೇ ವಿಕೆಟ್ ಬೇಟೆ ಆರಂಭಿಸಿದರು. ಶುಭಮನ್ ಗಿಲ್ 7, ಸೂರ್ಯಕುಮಾರ್ ಯಾದವ್ 7 ಮತ್ತು ಸಂಜು ಸ್ಯಾಮ್ಸನ್ 5 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.
ಒಂದು ಕಡೆ ವಿಕೆಟ್ ಪತನವಾಗುತ್ತಿದ್ದರೆ ಇನ್ನೊಂದೆಡೆ ಇಶಾನ್ ಕಿಶನ್ ಬೌಂಡರಿ, ಸಿಕ್ಸರ್‌ಗಳ ಮೂಲಕ ಮೆರೆದಾಡಿದರು. ಆದರೆ ಕಿಶನ್ ಆಟ 37 ರನ್ (29 ಎಸೆತ, 3 ಬೌಂಡರಿ, 2 ಸಿಕ್ಸ್)ಗೆ ಅಂತ್ಯ ಕಂಡಿತು. ಇತ್ತ ಇಶಾನ್ ಕಿಶನ್‍ಗೆ ಉತ್ತಮ ಸಾಥ್ ನೀಡುತ್ತಿದ್ದ ನಾಯಕ ಪಾಂಡ್ಯ ಕೂಡ 29 ರನ್ (27 ಎಸೆತ, 4 ಬೌಂಡರಿ) ಸಿಡಿಸಿ ಕ್ಯಾಚ್ ನೀಡಿ ಹೊರ ನಡೆದರು.
ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಹೂಡಾ, ಅಕ್ಷರ್
94 ರನ್‍ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಕುಸಿತಕಂಡಿದ್ದ ತಂಡಕ್ಕೆ ಆ ಬಳಿಕ ಸ್ಲಾಗ್ ಓವರ್‌ಗಳಲ್ಲಿ ಶಕ್ತಿ ತುಂಬಿದ್ದು, ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್. ಇವರಿಬ್ಬರೂ ಕುಸಿತದ ಭೀತಿಯಲ್ಲಿದ್ದ ತಂಡಕ್ಕೆ ಭರ್ಜರಿ ಬ್ಯಾಟಿಂಗ್ ಮೂಲಕ ಚೇತರಿಕೆ ನೀಡಿದರು. ಹೂಡಾ ತನ್ನ ಹೊಡಿಬಡಿ ಬ್ಯಾಟಿಂಗ್ ಮೂಲಕ 41 ರನ್ (23 ಎಸೆತ, 1 ಬೌಂಡರಿ, 4 ಸಿಕ್ಸ್) ಚಚ್ಚಿ ಮಿಂಚಿದರು. ಇವರೊಂದಿಗೆ ನಾನೇನು ಕಮ್ಮಿ ಇಲ್ಲ ಎಂಬಂತೆ ಅಕ್ಷರ್ ಪಟೇಲ್ 31 ರನ್ (20 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಈ ಜೋಡಿ 6ನೇ ವಿಕೆಟ್‍ಗೆ ಅಜೇಯ 68 ರನ್ (35 ಎಸೆತ) ಚಚ್ಚಿದ ಪರಿಣಾಮ 20 ಓವರ್‍ಗಳಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 162 ರನ್ ಬಾರಿಸಿತು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ, ಮಹೇಶ್ ತೀಕ್ಷಣ, ಚಾಮಿಕಾ ಕರುಣಾರತ್ನೆ, ಹಸರಂಗ, ಧನಂಜಯ ಡಿಸಿಲ್ವ ತಲಾ 1 ವಿಕೆಟ್ ಪಡೆದರು.
Live Tv
[brid partner=56869869 player=32851 video=960834 autoplay=true]
ಸಿಡ್ನಿ: ಬಿಗ್ ಬ್ಯಾಷ್ ಲೀಗ್‌ನಲ್ಲಿ(BBL) ಸಿಡ್ನಿ ಥಂಡರ್(Sydney Thunder) ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟಿ20 (T20 Cricket) ಕ್ರಿಕೆಟ್ ಇತಿಹಾಸದಲ್ಲೇ ಅತಿ ಕಡಿಮೆ ರನ್‌ಗಳಿಸಿದ ತಂಡ ಎಂಬ ಕೆಟ್ಟ ದಾಖಲೆ ಬರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್(Adelaide Strikers) 9 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. 140 ರನ್‌ಗಳ ಗುರಿಯನ್ನು ಪಡೆದ ಸಿಡ್ನಿ ತಂಡ 5.5 ಓವರ್ ಎದುರಿಸಿ 15 ರನ್‌ಗಳಿಗೆ ಆಲೌಟ್ ಆಗಿದೆ. 124 ರನ್‌ಗಳ ಭರ್ಜರಿ ಗೆಲುವು, 4.375 ನೆಟ್ ರನ್ ರೇಟ್‌ನೊಂದಿಗೆ ಅಡಿಲೇಡ್ ಸ್ಟ್ರೈಕರ್ಸ್ ಬಿಬಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
ತಂಡದ ಆಟಗಾರರು ಕ್ರಮವಾಗಿ 0, 0, 3, 0, 2, 1, 1, 0, 0, 4, 1 ರನ್ ಗಳಿಸಿದ್ದಾರೆ. 1 ಲೆಗ್‌ಬೈ, 2 ವೈಡ್ ಎಸೆತದಿಂದಾಗಿ ಇತರೇ ರೂಪದಲ್ಲಿ 3 ರನ್ ಬಂದಿದೆ. ಹೆನ್ರಿ ಥಾರ್ನ್ಟನ್ 5 ವಿಕೆಟ್, ವೆಸ್ ಅಗರ್ 4 ವಿಕೆಟ್ ಕಿತ್ತರೆ ಮ್ಯಾಥ್ಯೂ ಶಾರ್ಟ್ 1 ವಿಕೆಟ್ ಪಡೆದರು. ಇದನ್ನೂ ಓದಿ: ಗಿಲ್ ಚೊಚ್ಚಲ 100, ಪೂಜಾರ ವೇಗದ ಶತಕ – ಬಾಂಗ್ಲಾಗೆ ಬೃಹತ್ ಟಾರ್ಗೆಟ್
ಟಿ20ಯಲ್ಲಿ ಅತಿ ಕಡಿಮೆ ರನ್‌ಗಳಿಗೆ ಆಲೌಟ್ ಆಗಿರುವ ತಂಡಗಳು
15 – ಸಿಡ್ನಿ ಥಂಡರ್ Vs ಅಡಿಲೇಡ್ ಸ್ಟ್ರೈಕರ್ಸ್
21 – ಟರ್ಕಿ Vs ಝೆಕ್ ರಿಪಬ್ಲಿಕ್
26 – ಲೆಸೊಥೊ Vs ಉಗಾಂಡಾ
28 – ಟರ್ಕಿ Vs ಲಕ್ಸೆಂಬರ್ಗ್
Sydney Thunder registered the lowest ever T20 score – 15.
They're bowled out inside the powerplay, insane stuff!
ಈ ಹಿಂದೆ ಮೆಲ್ಬರ್ನ್ ರೆನೆಗೇಡ್ಸ್ 57 ರನ್‌ಗಳಿಗೆ ಆಲೌಟ್ ಆಗಿದ್ದೇ ಬಿಬಿಎಲ್‌ನಲ್ಲಿ ಕೆಟ್ಟ ದಾಖಲೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈಗ ಕ್ರಿಕೆಟ್ ಅಭಿಮಾನಿಗಳು ಸಿಡ್ನಿ ತಂಡದ ಆಟವನ್ನು ಟ್ರೋಲ್ ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಟೀಂ ಇಂಡಿಯಾದಲ್ಲಿ (India) ಸ್ಥಾನ ಪಡೆದರೂ ಆಡುವ 11ರ ಬಳಗದಲ್ಲಿ ಚಾನ್ಸ್ ಸಿಗದೆ ಪದೇ ಪದೇ ನಿರಾಸೆ ಅನುಭವಿಸುತ್ತಿರುವ ಸಂಜು ಸ್ಯಾಮ್ಸನ್ (Sanju Samson) ಅಭಿಮಾನಿಗಳು ಟೀಂ ಇಂಡಿಯಾ ವಿರುದ್ಧ ತಿರುಗಿಬಿದ್ದಿದ್ದಾರೆ.
ಸಂಜು ಸ್ಯಾಮ್ಸನ್ ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಗಿದ್ದರೂ ತಂಡದಲ್ಲಿ ರಿಷಭ್ ಪಂತ್ (Rishabh Pant) ಇರುವ ಕಾರಣ ಅವಕಾಶ ವಂಚಿತರಾಗುತ್ತಿದ್ದಾರೆ. ತಂಡದಲ್ಲಿದ್ದರೂ ಕೇವಲ ಬೆಂಚ್ ಬಿಸಿಮಾಡಲಷ್ಟೇ ಸೀಮಿತವಾಗಿದ್ದಾರೆ. ಇದನ್ನೂ ಓದಿ: ಟೈನಲ್ಲಿ ಅಂತ್ಯಕಂಡ ಫೈನಲ್ ಮ್ಯಾಚ್ – ಭಾರತಕ್ಕೆ T20 ಸರಣಿ
ನ್ಯೂಜಿಲೆಂಡ್ (New Zealand) ವಿರುದ್ಧ ಹಿರಿಯ ಆಟಗಾರರಿಗೆ ರೆಸ್ಟ್ ನೀಡಿದ ಪರಿಣಾಮ ತಂಡಕ್ಕೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್‍ಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ 3 ಪಂದ್ಯಗಳ ಟಿ20 (T20I) ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಸ್ಯಾಮ್ಸನ್‍ಗೆ ಅವಕಾಶ ನೀಡಲಿಲ್ಲ.
ಇತ್ತ ರಿಷಭ್ ಪಂತ್ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಗಿ ಮೂರು ಪಂದ್ಯದಲ್ಲೂ ಅವಕಾಶ ಪಡೆದರೂ ಬ್ಯಾಟಿಂಗ್‍ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆದರೂ ಪದೇ ಪದೇ ಸ್ಥಾನ ಕಲ್ಪಿಸಿಕೊಡಲಾಗಿದೆ. ಅವರ ಬದಲು ಒಂದು ಪಂದ್ಯದಲ್ಲಾದರೂ ಸ್ಯಾಮ್ಸನ್‍ಗೆ ಅವಕಾಶ ನೀಡಬೇಕಿತ್ತು ಎಂದು ಅಭಿಮಾನಿಗಳು ಬಿಸಿಸಿಐ (BCCI), ತಂಡದ ಕೋಚ್, ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್
If you don't wanna play him for India, let him play for other leagues like BBL. Offer him retirement. Don't ruin his life. We wish to see him play more cricket, not your favourites like Pant or Ishan,Hooda.#INDvsNZ#SanjuSamsonpic.twitter.com/nQB3g8gS58
2022ರಲ್ಲಿ ಸ್ಯಾಮ್ಸನ್ ಟೀಂ ಇಂಡಿಯಾ ಪರ 6 ಪಂದ್ಯಗಳನ್ನು ಆಡಿದ್ದು, 158.40 ಸ್ಟ್ರೈಕ್‍ರೇಟ್‍ನಲ್ಲಿ 1 ಅರ್ಧಶತಕ ಸಹಿತ 179 ರನ್ ಬಾರಿಸಿದ್ದಾರೆ. ಅಲ್ಲದೇ ಐಪಿಎಲ್‍ನಲ್ಲೂ (IPL) ಉತ್ತಮವಾಗಿ ಬ್ಯಾಟ್‍ಬೀಸಿದ್ದರು. ಆದರೆ ಟೀಂ ಇಂಡಿಯಾಗೆ ಆಯ್ಕೆ ಮಾಡಿದರೂ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುತ್ತಿಲ್ಲ. ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
Live Tv
[brid partner=56869869 player=32851 video=960834 autoplay=true]
ನೇಪಿಯರ್: ಭಾರತ (India) ಹಾಗೂ ನ್ಯೂಜಿಲೆಂಡ್ (New Zealand) ನಡುವಿನ 3ನೇ ಟಿ20 ಪಂದ್ಯ ಮಳೆಯಿಂದಾಗಿ (Rain) ರೋಚಕ ಟೈನಲ್ಲಿ (Tied) ಅಂತ್ಯ ಕಂಡಿದೆ. ಈ ನಡುವೆ 2ನೇ ಟಿ20 ಪಂದ್ಯ ಗೆದ್ದಿದ್ದ ಭಾರತ ಟಿ20 ಸರಣಿ ಗೆದ್ದುಕೊಂಡಿದೆ.
ಮೊದಲ ಪಂದ್ಯ ಒಂದೇ ಒಂದು ಎಸೆತ ಕಾಣದೆ ರದ್ದಾಗಿತ್ತು. ಎರಡನೇ ಟಿ20 ಪಂದ್ಯದಲ್ಲಿ ಭಾರತ 65 ರನ್‍ಗಳ ಭರ್ಜರಿ ಜಯ ದಾಖಲಿಸಿತ್ತು. ಮೂರನೇ ಟಿ20 ಪಂದ್ಯ ಟೈ ಕಂಡಿದೆ.
161 ರನ್‍ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಶಾನ್ ಕಿಶನ್ 10 ರನ್ (11 ಎಸೆತ, 1 ಬೌಂಡರಿ, 1 ಸಿಕ್ಸ್), ಪಂತ್ 11 ರನ್ (5 ಎಸೆತ, 2 ಬೌಂಡರಿ) ಸೂರ್ಯ ಕುಮಾರ್ ಯಾದವ್ 13 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಶ್ರೇಯಸ್ ಅಯ್ಯರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು. ಇದನ್ನೂ ಓದಿ: 3ನೇ T20 ಪಂದ್ಯದಿಂದ ವಿಲಿಯಮ್ಸನ್ ಔಟ್ – ಕಳೆದ ಪಂದ್ಯದ ಹ್ಯಾಟ್ರಿಕ್ ವೀರನಿಗೆ ನಾಯಕತ್ವದ ಪಟ್ಟ
6.3 ಓವರ್‌ಗಳಲ್ಲಿ 60 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 30 ರನ್ (18 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ಚೇತರಿಕೆ ನೀಡಲು ಮುಂದಾದರು. 9ನೇ ಓವರ್ ವೇಳೆ ಭಾರತ 4 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದ್ದಾಗ ಮಳೆ ಬಂದು ಪಂದ್ಯ ಸ್ಥಗಿತಗೊಳಿಸಲಾಯಿತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯ ಟೈಗೊಂಡಿತು. ಈ ಮೂಲಕ 2ನೇ ಪಂದ್ಯ ಗೆದ್ದಿದ್ದ ಭಾರತ ತಂಡ 1-0 ಅಂತರದಲ್ಲಿ ಸರಣಿ ಗೆದ್ದಿತು.
ಈ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಈ ನಿರ್ಧಾರವನ್ನು ಆರಂಭದಲ್ಲೇ ಭಾರತ ಬೌಲರ್‌ಗಳು ತಲೆಕೆಳಗಾಗಿಸಿದರು. ನ್ಯೂಜಿಲೆಂಡ್‍ನ ಆರಂಭಿಕ ಆಟಗಾರ ಫಿನ್ ಆಲೆನ್ 3 ರನ್ (4 ಎಸೆತ) ಬಾರಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್‍ಗೆ ತೆರಳಿದರು. ಇನ್ನೋರ್ವ ಆರಂಭಿಕ ಡೆವೂನ್ ಕಾನ್ವೇ ಮಾತ್ರ ಎಚ್ಚರಿಕೆ ಆಟಕ್ಕೆ ಮೊರೆ ಹೋದರು.
ಕಾನ್ವೇ-ಫಿಲಿಫ್ಸ್ ಜೊತೆಯಾಟ:
3ನೇ ವಿಕೆಟ್‍ಗೆ ಕಾನ್ವೇ ಜೊತೆಯಾದ ಗ್ಲೆನ್ ಫಿಲಿಪ್ಸ್ ಭರ್ಜರಿಯಾಗಿ ಬ್ಯಾಟ್‍ಬೀಸಿದರು. ತಲಾ ಇಬ್ಬರು ಅರ್ಧಶತಕ ಸಿಡಿಸಿ ಮಿಂಚಿದರು. ಅಲ್ಲದೇ ಮೂರನೇ ವಿಕೆಟ್‍ಗೆ 86 ರನ್ (63 ಎಸೆತ) ಸಿಡಿಸಿ ತಂಡಕ್ಕೆ ನೆರವಾದರು. ಫಿಲಿಪ್ಸ್ 54 ರನ್ (33 ಎಸೆತ, 5 ಬೌಂಡರಿ, 3 ಸಿಕ್ಸ್) ಮತ್ತು ಕಾನ್ವೇ 59 ರನ್ (49 ಎಸೆತ, 5 ಬೌಂಡರಿ, 2 ಸಿಕ್ಸ್) ಚಚ್ಚಿ ಔಟ್ ಆದರು.
ಸಿರಾಜ್, ಅರ್ಷದೀಪ್ ವಿಕೆಟ್ ಬೇಟೆ:
ಇವರಿಬ್ಬರ ವಿಕೆಟ್ ಪತನದ ಬಳಿಕ ನ್ಯೂಜಿಲೆಂಡ್ ದಿಢೀರ್ ಕುಸಿತ ಕಂಡಿತು. ನಂತರ ಬಂದ ಯಾವೋಬ್ಬ ಬ್ಯಾಟ್ಸ್‌ಮ್ಯಾನ್‌ಗಳಿಗೂ ಭಾರತದ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಅಬ್ಬರಿಸಲು ಅವಕಾಶ ನೀಡಲಿಲ್ಲ. ಇವರಿಬ್ಬರೂ ತಲಾ 4 ವಿಕೆಟ್ ಕಿತ್ತು ಮಿಂಚಿದರು. ಅಂತಿಮವಾಗಿ ನ್ಯೂಜಿಲೆಂಡ್ 19.4 ಓವರ್‌ಗಳ ಅಂತ್ಯಕ್ಕೆ 160 ರನ್‍ಗಳಿಸಿ ಆಲೌಟ್ ಆಯಿತು.
Live Tv
[brid partner=56869869 player=32851 video=960834 autoplay=true]