ಇಂದೋರ್: ಆಫ್ಘಾನಿಸ್ತಾನ ವಿರುದ್ಧದ ಟಿ20 (T20I) ಸರಣಿಯ 2ನೇ ಪಂದ್ಯ ಗೆದ್ದು, ಭಾರತ 2-0 (IND vs AFG) ಮುನ್ನಡೆ ಸಾಧಿಸಿದೆ. ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.
34 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಜೈಸ್ವಾಲ್ 68 ರನ್ ಬಾರಿಸಿ ಔಟಾದರು. 32 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 63 ರನ್ ಬಾರಿಸಿ ಅಜೇಯರಾಗಿ ಉಳಿದರು. ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲೂ ಶೂನ್ಯ ಸಂಪಾದಿಸಿದರು. ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 29 ರನ್ ಗಳಿಸಿದರು.
ಟಾಸ್ ಸೋತು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 172 ರನ್ಗಳಿಗೆ ಆಲೌಟ್ ಆಯಿತು. ಆಫ್ಘನ್ ತಂಡದ ಪರವಾಗಿ ಗುಲಬ್ದೀನ್ ನಯೀಬ್ 35 ಬಾಲ್‌ನಲ್ಲಿ 57 ರನ್ ಬಾರಿಸಿದರು. ಟೀಂ ಇಂಡಿಯಾ ಪರವಾಗಿ ಆರ್ಷದೀಪ್ ಸಿಂಗ್ ಮೂರು ವಿಕೆಟ್ ಉರುಳಿಸಿದರು.
ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳಿಂದ ಗೆದ್ದಿತ್ತು. ಸರಣಿಯ ಕೊನೆಯ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿ 17ರಂದು ನಡೆಯಲಿದೆ. ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 – ಭಾರತಕ್ಕೆ ಗೆಲುವು!
ಮೊಹಾಲಿ: ಅಫ್ಘಾನಿಸ್ತಾನ (Afghanistan) ವಿರುದ್ಧದ ಟಿ20 (T20) ಸರಣಿಯ ಮೊದಲ ಪಂದ್ಯದಲ್ಲಿ ಭಾರತ (India) 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಅಫ್ಘಾನಿಸ್ತಾನ ವಿರುದ್ಧದ ಅಜೇಯ ಗೆಲುವಿನ ಸಾಧನೆ ಮುಂದುವರಿದಿದೆ. ಅಫ್ಘಾನಿಸ್ತಾನ ವಿರುದ್ಧ ಇದು ಭಾರತದ ಐದನೇ ಗೆಲುವು.
ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಜನವರಿ 14ರಂದು ಇಂದೋರ್‌ನಲ್ಲಿ ನಡೆಯಲಿದೆ.
ಮೊಹಾಲಿಯಲ್ಲಿ ಕೊರೆಯುವ ಚಳಿ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದು ಭಾರತದ ವಿರುದ್ಧ ಅಫ್ಘಾನಿಸ್ತಾನ ಅತ್ಯಧಿಕ ಮೊತ್ತವಾಗಿದೆ. 159 ರನ್ ಟಾರ್ಗೆಟ್ ಬೆನ್ನತ್ತಿದ ಭಾರತ 17.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಆಫ್ಘನ್ ತಂಡಕ್ಕೆ ಮೊಹಮ್ಮದ್ ನಬಿ 27 ಬಾಲ್‌ನಲ್ಲಿ 42 ರನ್ ಗಳಿಸಿ, ಟಾಪ್ ಸ್ಕೋರರ್ ಆದರು. ಅಜ್ಮತ್ ಉಲ್ಲ ಒಮರ್ ಝೈ 29 ರನ್ ಗಳಿಸಿದರು. ಭಾರತ ತಂಡದ ಪರವಾಗಿ ಅಕ್ಷರ್ ಪಟೇಲ್ ಹಾಗೂ ಮುಕೇಶ್ ಕುಮಾರ್ 2 ವಿಕೆಟ್ ಗಳಿಸಿದರು.
ಟೀ ಇಂಡಿಯಾ ಪರವಾಗಿ ಶಿವಂ ದುಬೆ ಅಜೇಯ 60 ರನ್ ಗಳಿಸಿ ಗೆಲುವಿನ ರೂವಾರಿಯಾದರು. 40 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 5 ಬೌಂಡರಿ ಬಾರಿಸಿದರು. ಜಿತೇಶ್ ಶರ್ಮಾ 31, ತಿಲಕ್ ವರ್ಮಾ 26, ಶುಭ್‌ಮನ್ ಗಿಲ್ 23, ರಿಂಕು ಸಿಂಗ್ ಅಜೇಯ 16 ರನ್ ಗಳಿಸಿದರು.
ಆಫ್ಘನ್ ತಂಡದ ಪರವಾಗಿ ಮುಜೀಬ್ ಉರ್ ರಹ್ಮಾನ್ 2 ವಿಕೆಟ್ ಗಳಿಸಿದರೆ, ಒಮರ್‌ಝೈ 1 ವಿಕೆಟ್ ಪಡೆದರು. ಶಿವಂ ದುಬೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ದುಬೈ: ಐಸಿಸಿ (ICC) ಟಿ20 ಬೌಲಿಂಗ್‌ನಲ್ಲಿ ಭಾರತ ತಂಡದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ (Ravi Bishnoi) ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ಆ ಮೂಲಕ ಐಸಿಸಿ ರ‍್ಯಾಂಕಿಂಗ್‌ಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ.
ರವಿ ಬಿಷ್ಣೋಯ್, ಈಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ICC T20I ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದ ರಶೀದ್ ಖಾನ್ ಅವರನ್ನು ಹಿಂದಿಕ್ಕಿ ರವಿ ಬಿಷ್ಣೋಯ್ ಅಗ್ರಸ್ಥಾನ ಗಳಿಸಿದ್ದಾರೆ. 699 ರೇಟಿಂಗ್ ಪಾಯಿಂಟ್ಸ್ ಮೂಲಕ ಬಿಷ್ಣೋಯ್ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಕ್ರಿಕೆಟಿಗನ ಮುಶ್ಫಿಕರ್ ಎಡವಟ್ಟು – ʻಹ್ಯಾಂಡ್ಲಿಂಗ್ ದಿ ಬಾಲ್ʼಗೆ ಬಲಿಯಾದ ದೇಶದ ಮೊದಲ ಬ್ಯಾಟರ್
ಶುಭಮನ್ ಗಿಲ್, ರವಿಚಂದ್ರನ್ ಅಶ್ವಿನ್ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ODI ಬ್ಯಾಟರ್, ಟೆಸ್ಟ್ ಬೌಲರ್ ಮತ್ತು T20I ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಆಲ್‌ರೌಂಡರ್‌ಗಳ ವಿಷಯಕ್ಕೆ ಬಂದರೆ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನ ಪಡೆದಿದ್ದಾರೆ. ಬಿಷ್ಣೋಯ್ ಅವರೊಂದಿಗೆ ಭಾರತೀಯ ಆಟಗಾರರು ಈಗ ಐಸಿಸಿ ಶ್ರೇಯಾಂಕದ 8 ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಈಗ ಹೇಳಿ ಯಾರು ಪನೌತಿ – ರಾಹುಲ್‍ಗೆ ಟಾಂಗ್ ಕೊಟ್ಟ ಪಾಕ್ ಮಾಜಿ ಆಟಗಾರ
ಟೆಸ್ಟ್, ಏಕದಿನ ಅಂತಾರಾಷ್ಟ್ರೀಯ, ಟಿ20 ಅಂತಾರಾಷ್ಟ್ರೀಯ, ಒಡಿಐ ಮತ್ತು ಟಿ20ಐ ಬ್ಯಾಟರ್, ಟೆಸ್ಟ್ ಮತ್ತು ಟಿ20ಐ ಬೌಲರ್, ಟೆಸ್ಟ್ ಆಲ್‌ರೌಂಡರ್ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ ನಂ.1 ಸ್ಥಾನದಲ್ಲಿದೆ.
ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 3,434 ಪಾಯಿಂಟ್ಸ್ ಮತ್ತು 118 ರೇಟಿಂಗ್ ಮೂಲಕ ಭಾರತ ತಂಡ ನಂಬರ್ 1 ಸ್ಥಾನ ಗಳಿಸಿದೆ. 16,137 ಪಾಯಿಂಟ್ಸ್ ಮತ್ತು 265 ರೇಟಿಂಗ್‌ನೊಂದಿಗೆ ಐಸಿಸಿ ಟಿ20ಐ ರ‍್ಯಾಂಕಿಂಗ್‌ನಲ್ಲೂ ಭಾರತ ಮುಂದಿದೆ.
ಗುವಾಹಟಿ: ಪುರುಷರ ಅಂತಾರಾಷ್ಟ್ರೀಯ ಟಿ20 ಯಲ್ಲಿ ಗುರಿ ಬೆನ್ನತ್ತುವ ವೇಳೆ ಕೊನೆ ಓವರ್‌ನಲ್ಲಿ ಅತಿ ಹೆಚ್ಚು ರನ್ ಸಿಡಿಸಿ ಮ್ಯಾಚ್ ಗೆದ್ದು ಹೊಸ ದಾಖಲೆಯನ್ನು ಆಸ್ಟ್ರೇಲಿಯಾ ಬರೆದಿದೆ.
ಗುವಾಹಟಿಯಲ್ಲಿ ನಡೆದ ಭಾರತದ ವಿರುದ್ಧದ ಮೂರನೇ 20 ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು. ಆ ಮೂಲಕ ಸರಣಿಯನ್ನು ಆಸೀಸ್ ಜೀವಂತವಾಗಿರಿಸಿದೆ. ಮೂರನೇ ಪಂದ್ಯದ ಗೆಲುವಿನ ಜೊತೆಗೆ ಆಸ್ಟ್ರೇಲಿಯಾ ದಾಖಲೆಯನ್ನೂ ಬರೆದಿದೆ.
ಕೊನೆ ಓವರ್‌ನಲ್ಲಿ ಹೆಚ್ಚು ರನ್ ಸಿಡಿಸಿ ಪಂದ್ಯ ಗೆದ್ದ ದಾಖಲೆಯನ್ನು ಆಸೀಸ್ ಬರೆದಿದೆ. ಮಂಗಳವಾರದ ಮ್ಯಾಚ್‌ನಲ್ಲಿ ಆಸೀಸ್ 21 ರನ್‌ಗಳನ್ನು ಯಶಸ್ವಿಯಾಗಿ ಬೆನ್ನತ್ತಿತು.
2016 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 19 ರನ್ ಗಳಿಸಿತ್ತು. ಕಳೆದ ವರ್ಷದ ಪಲ್ಲೆಕೆಲೆ ಟಿ20ಐ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 19 ರನ್ ಗಳಿಸಿದ್ದು ಹಿಂದಿನ ಗರಿಷ್ಠವಾಗಿತ್ತು. ಕೊನೆ ಓವರ್‌ನಲ್ಲಿ ದಾಖಲಾಗಿದ್ದ ಅತಿ ಹೆಚ್ಚು ರನ್ ಇದಾಗಿತ್ತು. ಆ ದಾಖಲೆಯನ್ನು ಆಸ್ಟ್ರೇಲಿಯಾ ಪುಡಿಗಟ್ಟಿದೆ.
ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸೀಸ್‌ಗೆ ಭಾರತ 223 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ರೋಚಕ ಗೆಲುವು ಸಾಧಿಸಿತು.
ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವೇಡ್ ಎರಡನೇ ಎಸೆತದಲ್ಲಿ ಒಂದು ರನ್ ತೆಗೆದರು. ಮೂರನೇ ಎಸೆತವನ್ನು ಮ್ಯಾಕ್ಸ್‌ವೆಲ್ ಸಿಕ್ಸರ್‌ಗೆ ಅಟ್ಟಿದರು. ಕೊನೆಯ ಮೂರು ಎಸೆತದಲ್ಲಿ ಹ್ಯಾಟ್ರಿಕ್ ಬೌಂಡರಿ ಹೊಡೆದರು. ಆ ಮೂಲಕ ಕೊನೆ ಓವರ್‌ನಲ್ಲಿ 23 ರನ್‌ಗಳು ಹರಿದುಬಂದವು.
ಗುವಾಹಟಿ: ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) ಸ್ಫೋಟಕ ಶತಕದ ನೆರವಿನಿಂದ ಆಸ್ಟ್ರೇಲಿಯಾ (Australia) ಭಾರತದ (Team India) ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ. 5 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿದೆ.
223 ರನ್‌ಗಳ ಕಠಿಣ ಗುರಿಯನ್ನು ಪಡೆದ ಆಸ್ಟ್ರೇಲಿಯಾ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಮ್ಯಾಕ್ಸ್‌ವೆಲ್ ಬೌಂಡರಿ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 225 ರನ್ ಹೊಡೆಯುವ ಮೂಲಕ ಸರಣಿಯಲ್ಲಿ ಮೊದಲ ಜಯ ಸಾಧಿಸಿತು.
13.3 ಓವರ್‌ಗಳಲ್ಲಿ 134 ರನ್ ಗಳಿಸಿದ್ದಾಗ ಟಿಮ್ ಡೇವಿಡ್ ಶೂನ್ಯಕ್ಕೆ ಔಟಾದಾಗ ಪಂದ್ಯ ಸ್ವಲ್ಪ ಭಾರತದ ಕಡೆ ವಾಲಿತ್ತು. ಆದರೆ ಮುರಿಯದ 6ನೇ ವಿಕೆಟಿಗೆ ಮ್ಯಾಕ್ಸ್‌ವೆಲ್ ಮತ್ತು ನಾಯಕ ಮ್ಯಾಥ್ಯೂ ವೇಡ್ 40 ಎಸೆತಗಳಲ್ಲಿ 91 ರನ್ ಚಚ್ಚಿ ಪಂದ್ಯವನ್ನು ಭಾರತದಿಂದ ಕಸಿದುಕೊಂಡರು.
ಕೊನೆಯ 12 ಎಸೆತಗಳಲ್ಲಿ ಆಸ್ಟ್ರೇಲಿಯಾಗೆ 43 ರನ್ ಬೇಕಿತ್ತು. ಅಕ್ಷರ್ ಪಟೇಲ್ ಎಸೆದ ಮೊದಲ ಮೂರು ಎಸೆತಗಳಲ್ಲಿ 4,2,4 ರನ್ ಬಂದರೆ 4ನೇ ಎಸೆತ ನೋಬಾಲ್ ಆಗಿತ್ತು. ನಂತರ ಫ್ರಿ ಹಿಟ್ ಎಸೆತವನ್ನು ವೇಡ್ ಸಿಕ್ಸರ್‌ಗೆ ಅಟ್ಟಿದ್ದರು. ನಂತರ ವೇಡ್ ಸಿಂಗಲ್ ರನ್ ತೆಗೆದರೆ ಕೊನೆಯ ಎಸೆತವನ್ನು ಇಶನ್ ಕಿಶನ್ ಹಿಡಿಯದ ಕಾರಣ ಬೈ ಮೂಲಕ 4 ರನ್ ಆಸೀಸ್ ಖಾತೆಗೆ ಸೇರಿತು.
ಪ್ರಸಿದ್ಧ್ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವೇಡ್ ಎರಡನೇ ಎಸೆತದಲ್ಲಿ ಒಂಟಿ ರನ್ ತೆಗೆದರು. ಮೂರನೇ ಎಸೆತವನ್ನು ಮ್ಯಾಕ್ಸ್‌ವೆಲ್ ಸಿಕ್ಸರ್‌ಗೆ ಅಟ್ಟಿದರು. ಕೊನೆಯ ಮೂರು ಎಸೆದತದಲ್ಲಿ ಹ್ಯಾಟ್ರಿಕ್ ಬೌಂಡರಿ ಹೊಡೆಯುವ ಮೂಲಕ ಮ್ಯಾಕ್ಸ್‌ವೆಲ್ ತಂಡಕ್ಕೆ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಆಸೀಸ್ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್
ಮ್ಯಾಕ್ಸ್‌ವೆಲ್ 28 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 47 ಎಸೆತದಲ್ಲಿ ಶತಕ ಸಿಡಿಸಿದರು. ಅಂತಿಮವಾಗಿ ಮ್ಯಾಕ್ಸ್‌ವೆಲ್ ಔಟಾಗದೇ 104 ರನ್(48 ಎಸೆತ, 8 ಬೌಂಡರಿ, 8 ಸಿಕ್ಸರ್) ಹೊಡೆದರೆ ವೇಡ್ ಔಟಾಗದೇ 28 ರನ್(16 ಎಸೆತ, 3 ಬೌಂಡರಿ, 1 ಸಿಕ್ಸರ್) ಚಚ್ಚಿದರು. ಭಾರತ ತಂಡ ಇತರ ರೂಪದಲ್ಲಿ 15 ರನ್ (ಬೈ 4, ಲೆಗ್ ಬೈ 3, ನೋಬಾಲ್ 2 , ವೈಡ್ 6) ನೀಡಿತ್ತು. ಪ್ರಸಿದ್ಧ್ ಕೃಷ್ಣ 68 ರನ್ ನೀಡಿದರೆ ಅರ್ಶ್‌ದೀಪ್ ಸಿಂಗ್ 44 ರನ್ ನೀಡಿದರು. ರವಿ ಬಿಶ್ನೋಯಿ 32 ರನ್ ನೀಡಿ 2 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 24 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದರೂ ಗಾಯಕ್‌ವಾಡ್ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು.
ಮುಂಬೈ: ವಿಶ್ವಕಪ್ ಕ್ರಿಕೆಟ್ (World Cup Cricket) ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯಾ (Australia) ವಿರುದ್ಧದ ಐದು ಟಿ20 (T20) ಪಂದ್ಯಗಳ ಸರಣಿಗೆ 15 ಮಂದಿ ಸದಸ್ಯರ ಟೀಂ ಇಂಡಿಯಾ (Team India) ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದೆ.
ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav) ತಂಡದ ನಾಯಕರಾಗಿದ್ದು, ವಿಶ್ವಕಪ್ ಆಡಿರುವ ಭಾರತ ತಂಡದ ಎಲ್ಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಸೂರ್ಯಕುಮಾರ್ ಯಾದವ್ ಜೊತೆಗೆ ಇಶಾನ್ ಕಿಶನ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಸ್ಥಾನ ಸಿಕ್ಕಿದೆ.
ಶ್ರೇಯಸ್ ಅಯ್ಯರ್ (Shreyas Iyer) ಕೊನೆಯ ಎರಡು ಪಂದ್ಯ ಆಡಲಿದ್ದು, ಈ ಅವಧಿಯಲ್ಲಿ ಉಪನಾಯಕನ ಸ್ಥಾನ ತುಂಬಲಿದ್ದಾರೆ. ಮೊದಲ ಮೂರು ಪಂದ್ಯಗಳಿಗೆ ಏಷ್ಯನ್ ಗೇಮ್ಸ್ನ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದ ಋತುರಾಜ್ ಗಾಯಕ್ವಾಡ್ಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಇದನ್ನೂ ಓದಿ: ಬೌಲಿಂಗ್‌ನಲ್ಲೂ ಕಮಾಲ್ – ರೋಹಿತ್ ಫಸ್ಟ್, ಶಮಿ ಸೆಕೆಂಡ್
ಈ ಸರಣಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ (VVS Laxman) ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಐರ್ಲೆಂಡ್ ಸರಣಿ ಆಡಿದ ಬಹುಪಾಲು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರಾವಧಿ ಅಧಿಕೃತವಾಗಿ ವಿಶ್ವಕಪ್ನೊಂದಿಗೆ ಕೊನೆಯಾಗಿದೆ. ಮುಂದೆಯೂ ದ್ರಾವಿಡ್ ಕೋಚ್ ಆಗಿ ಮುಂದುವರೆಯುತ್ತಾರಾ ಎಂಬ ಪ್ರಶ್ನೆಗೆ ಬಿಸಿಸಿಐ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲ ದನ್ನೂ ಓದಿ: ಇದೇ ಕೊನೆಯಲ್ಲ, ನಾವು ಕಪ್ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್ ಭಾವುಕ
ಟೀಂ ಇಂಡಿಯಾ ಸದಸ್ಯರು
ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್ ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ
ಯಾವ ದಿನ ಎಲ್ಲಿ ಪಂದ್ಯ? ನ.23 – ವಿಶಾಖಪಟ್ಟಣ ನ.26 – ತಿರುವನಂತಪುರಂ ನ.28 – ಗುವಾಹಟಿ ಡಿ.1 – ರಾಯ್‌ಪುರ ಡಿ.3 – ಬೆಂಗಳೂರು
ಡಬ್ಲಿನ್: ಐರ್ಲೆಂಡ್ (Ireland) ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ (Team India) 33 ರನ್‌ಗಳಿಂದ ಜಯಗಳಿಸುವ ಮೂಲಕ ಇನ್ನೂ ಒಂದು ಪಂದ್ಯ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ.
ಗೆಲ್ಲಲು 186 ರನ್‌ಗಳ ಗುರಿಯನ್ನು ಪಡೆದ ಐರ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ತಮ್ಮ ಮೊದಲ ನಾಯಕತ್ವದಲ್ಲಿ ಬುಮ್ರಾ ವಿದೇಶಿ ನೆಲದಲ್ಲಿ ಸರಣಿ ಗೆದ್ದಿದ್ದಾರೆ.
ಐರ್ಲೆಂಡ್ 63 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಾಗ ಭಾರತ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಆದರೆ 5ನೇ ವಿಕೆಟಿಗೆ ಆಂಡಿ ಬಾಲ್ಬಿರ್ನಿ ಮತ್ತು ಜಾರ್ಜ್ ಡಾಕ್ರೆಲ್ 30 ಎಸೆತಗಳಲ್ಲಿ 52 ರನ್ ಜೊತೆಯಾಟವಾಡಿ ಬಿಸಿ ಮುಟ್ಟಿಸಿದರು.
ತಂಡದ ಮೊತ್ತ 115 ರನ್ ಆಗಿದ್ದಾಗ ಜಾರ್ಜ್ ಡಾಕ್ರೆಲ್ ಎರಡನೇ ರನ್ ಓಡಲು ಯತ್ನಿಸಿದಾಗ ರನೌಟ್ ಆದರು. ಜಾರ್ಜ್ ಡಾಕ್ರೆಲ್ 13 ರನ್ ಗಳಿಸಿ ಔಟಾದರು. ಕೇವಲ 39 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಆಂಡಿ ಬಾಲ್ಬಿರ್ನಿ 72 ರನ್ (51 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿ ಔಟಾದರು. ಇವರಿಬ್ಬರು ಔಟಾದ ಬೆನ್ನಲ್ಲೇ ತಂಡದ ರನ್ ವೇಗ ಇಳಿಕೆಯಾಯಿತು. ಬುಮ್ರಾ, ಪ್ರಸಿದ್ಧ್ ಕೃಷ್ಣ, ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಪಡೆದರೆ ಅರ್ಶ್‌ದೀಪ್ ಸಿಂಗ್ 1 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 34 ರನ್‌ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರ ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟಿಗೆ ಸಂಜು ಸ್ಯಾಮ್ಸನ್ (Sanju Samson) ಮತ್ತು ಋತ್‌ರಾಜ್ ಗಾಯಕ್ವಾಡ್ (Ruturaj Gaikwad ) 49 ಎಸೆತಗಳಿಗೆ 71 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಸ್ಯಾಮ್ಸನ್ 40 ರನ್ (26 ಎಸೆತ, 5 ಬೌಂಡರಿ, 1 ಸಿಕ್ಸರ್), ಗಾಯಕ್ವಾಡ್ 58 ರನ್ (43 ಎಸೆತ, 6 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು. ನಂತರ ಶಿವಂ ದುಬೆ ಮತ್ತು ರಿಂಕು ಸಿಂಗ್ (Rinku Singh) 5ನೇ ವಿಕೆಟಿಗೆ 28 ಎಸೆತಗಳಲ್ಲಿ 55 ರನ್ ಜೊತೆಯಾಟವಾಡಿದರು. ರಿಂಕು ಸಿಂಗ್ 38 ರನ್ (21 ಎಸೆತ, 2 ಬೌಂಡರಿ, 3 ಸಿಕ್ಸರ್) ಶಿವಂ ದುಬೆ ಔಟಾಗದೇ 22 ರನ್(16 ಎಸೆತ, 2 ಸಿಕ್ಸರ್) ಹೊಡೆದರು.
ಮುಂಬೈ: ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ (Team India) ಸ್ಥಾನ ಪಡೆಯುವ ಅವಕಾಶವನ್ನು KKR ತಂಡದ ಫಿನಿಷರ್ ಖ್ಯಾತಿಯ ರಿಂಕು ಸಿಂಗ್ ಕಳೆದುಕೊಂಡಿದ್ದಾರೆ. ಹಾಗಾಗಿ ರಿಂಕು ಸಿಂಗ್ ಪರ ಧ್ವನಿ ಎತ್ತಿರುವ ಫ್ಯಾನ್ಸ್ ಟೀಂ ಇಂಡಿಯಾದ T20 ತಂಡದಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸಿ #ಜಸ್ಟೀಸ್ ಫಾರ್ ರಿಂಕು ಸಿಂಗ್ (#JusticeForRinkuSingh) ಕ್ಯಾಂಪೇನ್ ಆರಂಭಿಸಿದ್ದಾರೆ.
ಹೌದು. ಆಗಸ್ಟ್ 3 ರಿಂದ ಆಗಸ್ಟ್ 13ರ ವರೆಗೆ 5 ಪಂದ್ಯಗಳ T20 ಸರಣಿ ನಡೆಯಲಿದೆ. ವೆಸ್ಟ್ ಇಂಡೀಸ್ ಪ್ರವಾಸದ 5 ಪಂದ್ಯಗಳ ಟಿ20ಐ ಕ್ರಿಕೆಟ್ ಸರಣಿಗೆ 15 ಸದಸ್ಯರ ಭಾರತ ತಂಡವನ್ನು BCCI ಪ್ರಕಟಿಸಿದೆ. ಈ ತಂಡದಲ್ಲಿ 2023ರ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ಯುವ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ತಿಲಕ್ ವರ್ಮಾ ಚೊಚ್ಚಲ ಅವಕಾಶ ಪಡೆದುಕೊಂಡಿದ್ದಾರೆ. ಆದ್ರೆ ಕೆಕೆಆರ್‌ನಲ್ಲಿ ಫಿನಿಷರ್ ಎಂದೇ ಗುರುತಿಸಿಕೊಂಡಿದ್ದ ರಿಂಕು ಸಿಂಗ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಉಮೇಶ್ ಯಾದವ್ ಅವರನ್ನು T20 ತಂಡದಿಂದ ಕೈಬಿಡಲಾಗಿದ್ದರೂ ರಿಂಕು ಸಿಂಗ್ ಸಿಂಗ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದ್ರೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಅವಕಾಶ ಪಡೆದುಕೊಂಡಿದ್ದ ಯಶಸ್ವಿ ಜೈಸ್ವಾಲ್, ಇದೀಗ T20 ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅನುಭವಿ ಆಟಗಾರರಿಗೆ ಕೊಕ್ ನೀಡಲಾಗಿದ್ದು, ಹಾರ್ದಿಕ್ ಪಾಂಡ್ಯ (Hardik Pandya) ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಇದನ್ನೂ ಓದಿ: ಪೂಜಾರ ಔಟ್, ಯಶಸ್ವಿ ಇನ್ – ವಿಂಡೀಸ್ ಸರಣಿಗೆ ಭಾರತ ಟೆಸ್ಟ್, ಏಕದಿನ ತಂಡ ಪ್ರಕಟ
2023ರ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರಿಂಕು ಸಿಂಗ್ 14 ಪಂದ್ಯಗಳಲ್ಲಿ 59.25ರ ಸರಾಸರಿಯಲ್ಲಿ 474 ರನ್‌ಗಳನ್ನು ಗಳಿಸಿದ್ದರು. ಅಷ್ಟೇ ಅಲ್ಲದೆ 149.52ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಎಲ್ಲರ ಗಮನ ಸೆಳೆದಿತ್ತು. ಮುಖ್ಯವಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕ ಘಟ್ಟದಲ್ಲಿದ್ದಾಗ ಯಶ್ ದಯಾಳ್ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 5 ಭರ್ಜರಿ ಸಿಕ್ಸರ್ ಸಿಡಿಸಿ ರಿಂಕು ಎಲ್ಲರ ಗಮನ ಸೆಳೆದಿದ್ದರು.
ಭಾರತ ಟಿ20 ತಂಡ:
ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯಿ, ಅರ್ಷ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.
ಮೊದಲನೇ ಟಿ20: ಆಗಸ್ಟ್ 3, ಬ್ರಿಯಾನ್ ಲಾರಾ ಸ್ಟೇಡಿಯಂ, ಟ್ರಿನಿಡಾಡ್
2ನೇ ಟಿ20: ಆಗಸ್ಟ್ 6, ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನ
2ನೇ ಟಿ20: ಆಗಸ್ಟ್ 8, ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನ
4ನೇ ಟಿ20: ಆಗಸ್ಟ್ 12, ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಸ್ಟೇಡಿಯಂ, ಲಾಡರ್ಹಿಲ್, ಫ್ಲೋರಿಡಾ
4ನೇ ಟಿ20: ಆಗಸ್ಟ್ 13, ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಸ್ಟೇಡಿಯಂ, ಲಾಡರ್ಹಿಲ್, ಫ್ಲೋರಿಡಾ
ಮುಂಬೈ: ಮುಂಬೈ ಇಂಡಿಯನ್ಸ್ (Mumbai Indians) ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಟಿ20 (T20) ಪಂದ್ಯದಲ್ಲಿ 6,000 ರನ್‍ಗಳ ಗಡಿಯನ್ನು ದಾಟಿದ್ದಾರೆ.
ಮುಂಬೈನಲ್ಲಿ ನಡೆದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಐಪಿಎಲ್ (IPL) ಪಂದ್ಯದಲ್ಲಿ, 215 ರನ್ ಚೇಸಿಂಗ್ ವೇಳೆ ಸೂರ್ಯಕುಮಾರ್ 26 ಎಸೆತಗಳಲ್ಲಿ 57 ರನ್ ಗಳಿಸಿದರು. ಅದರಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದನ್ನೂ ಓದಿ: `ನಮ್ಮ ಹಸಿರು ಭೂಮಿಗಾಗಿʼ – ಪರಿಸರ ಕಾಳಜಿ ಸಂದೇಶ ಕೊಟ್ಟ RCB
ಈ ಇನ್ನಿಂಗ್ಸ್‌ನೊಂದಿಗೆ ಅವರು 248 ಪಂದ್ಯಗಳಲ್ಲಿ ಮತ್ತು 226 ಇನ್ನಿಂಗ್ಸ್‌ಗಳಲ್ಲಿ 34.01 ಸರಾಸರಿಯಲ್ಲಿ 6,021 ರನ್ ಗಳಿಸಿದ್ದಾರೆ. ಅವರ ರನ್ 149.55 ಸ್ಟ್ರೈಕ್ ರೇಟ್‍ನಲ್ಲಿದೆ. ಸೂರ್ಯಕುಮಾರ್ ಅವರ ಕ್ರಿಕೆಟ್ ಜೀವನದಲ್ಲಿ ಮೂರು ಶತಕಗಳು ಮತ್ತು 38 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‍ನಲ್ಲಿ ಸೂರ್ಯಕುಮಾರ್ ಅವರ ಅಂತಾರಾಷ್ಟ್ರೀಯ ಮಟ್ಟದ ಅಂಕಿ ಅಂಶಗಳು ಅಭಿಮಾನಿಗಳನ್ನು ಬೆರಗುಗೊಳಿಸಿದೆ.
ಅವರು ಟೀಂ ಇಂಡಿಯಾ (Team India) ಆಟಗಾರರಾಗಿ ಮೂರು ಶತಕಗಳು ಮತ್ತು 13 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. 2022ರ ಐಸಿಸಿ ಟಿ20 ಕ್ರಿಕೆಟರ್ ಪ್ರಶಸ್ತಿ ವಿಜೇತರಾಗಿದ್ದರು.
ಪಂದ್ಯದಲ್ಲಿ 215 ರನ್‍ಗಳನ್ನು ಬೆನ್ನಟ್ಟಿದ ಮುಂಬೈ ಇಶಾನ್ ಕಿಶನ್‍ನನ್ನು ಬೇಗನೆ ಕಳೆದುಕೊಂಡಿತು. ಆದರೆ ನಾಯಕ ರೋಹಿತ್ ಶರ್ಮಾ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 44 ರನ್ ಸೇರಿಸಿದರು. 43 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‍ಗಳೊಂದಿಗೆ ಗ್ರೀನ್ 67 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‍ನೊಂದಿಗೆ 57 ರನ್ ಗಳಿಸಿದರು. ಮುಂಬೈ ಉತ್ತಮ ಹೋರಾಟದ ನಡುವೆಯೂ ಸೋಲು ಕಂಡಿತು. ಪಂಜಾಬ್ ತಂಡ 13 ರನ್‍ಗಳಿಂದ ಗೆಲುವು ದಾಖಲಾಯಿತು.
ಈ ಗೆಲುವಿನೊಂದಿಗೆ ಪಂಜಾಬ್ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಮೂರು ಸೋಲು ಸೇರಿ ಒಟ್ಟು ಎಂಟು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಮುಂಬೈ ಆರು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಮೂರು ಸೋಲು ಕಂಡು ಒಟ್ಟು ಆರು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
ಅಹಮದಾಬಾದ್: ಶುಭಮನ್ ಗಿಲ್ (Shubman Gil) ಬ್ಯಾಟಿಂಗ್ ವೈಭವ ಮತ್ತು ಟೀಂ ಇಂಡಿಯಾದ (Team India) ಬೌಲರ್‌ಗಳ ಮಾರಕ ದಾಳಿಗೆ ಕಂಗಾಲಾದ ಪ್ರವಾಸಿ ನ್ಯೂಜಿಲೆಂಡ್ (New Zealand) 3ನೇ ಟಿ20 ಪಂದ್ಯದಲ್ಲಿ ಕೇವಲ 66 ರನ್‍ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 168 ರನ್‍ಗಳ ಭರ್ಜರಿ ಜಯದೊಂದಿಗೆ ಟಿ20 ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.
235 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಕೇವಲ 12.1 ಓವರ್‌ಗಳಲ್ಲಿ 66 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಟಿ20 ಕ್ರಿಕೆಟ್ ಇತಿಹಾಸದಲ್ಲಿ 168 ರನ್‌ಗಳ ದೊಡ್ಡ ಮೊತ್ತದ ಗೆಲುವನ್ನು ದಾಖಲಿಸಿತು. ಇದನ್ನೂ ಓದಿ: 3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್
ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ 35 ರನ್ (25 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಮಿಚೆಲ್ ಸ್ಯಾಂಟರ್ 13 ರನ್ (13 ಎಸೆತ, 1 ಬೌಂಡರಿ) ಸಿಡಿಸಿದನ್ನು ಹೊರತು ಪಡಿಸಿ ಉಳಿದ 5 ಮಂದಿ ಅಟಗಾರರು ಒಂದಂಕಿ ಮೊತ್ತಕ್ಕೆ ಔಟ್ ಆದರೆ ಮೂವರು ಶೂನ್ಯ ಸುತ್ತಿದರು.
ಈ ಮೊದಲು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇಶಾನ್ ಕಿಶನ್ ಕೇವಲ 1 ರನ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಒಂದಾದ ರಾಹುಲ್ ತ್ರಿಪಾಠಿ ಮತ್ತು ಶುಭಮನ್ ಗಿಲ್ ನ್ಯೂಜಿಲೆಂಡ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಇದನ್ನೂ ಓದಿ: Union Budget 2023: ಕ್ರೀಡೆಗೆ ದಾಖಲೆಯ 3,397.22 ಕೋಟಿ ರೂ. ಅನುದಾನ
ಈ ಜೋಡಿ ಹೊಡಿಬಡಿ ಆಟದ ಮೂಲಕ ತಂಡದ ರನ್ ಹೆಚ್ಚಿಸಿತು. 2ನೇ ವಿಕೆಟ್‍ಗೆ ಈ ಜೋಡಿ 80 ರನ್ (42 ಎಸೆತ) ಜೊತೆಯಾಟವಾಡಿ ಬೇರ್ಪಟ್ಟಿತು. ತ್ರಿಪಾಠಿ 44 ರನ್ (22 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಬಂದ ಸೂರ್ಯ ಕುಮಾರ್ ಯಾದವ್ ಬಿರುಸಿನ 24 ರನ್ (13 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು.
ಗಿಲ್ ಘರ್ಜನೆ:
ಇತ್ತ ಶುಭಮನ್ ಗಿಲ್ ಅಬ್ಬರ ಮಾತ್ರ ಕಡಿಮೆಯಾಗಲಿಲ್ಲ. ನ್ಯೂಜಿಲೆಂಡ್ ಬೌಲರ್‌ಗಳ ಬೆವರಿಳಿಸಿದ ಗಿಲ್ ಸ್ಫೋಟಕ ಆಟಕ್ಕೆ ಮುಂದಾದರು. ನಾಯಕ ಪಾಂಡ್ಯ ಜೊತೆಗೂಡಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಗಿಲ್ ಟಿ20 ಕ್ರಿಕೆಟ್‍ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ಗಿಲ್ ಶತಕದ ಬೆನ್ನಲ್ಲೇ ಪಾಂಡ್ಯ 30 ರನ್ (17 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ಈ ಮೊದಲು ಈ ಜೋಡಿ 4ನೇ ವಿಕೆಟ್‍ಗೆ 103 ರನ್ (40 ಎಸೆತ) ಜೊತೆಯಾಟವಾಡಿತು.
ಅಂತಿಮವಾಗಿ ಗಿಲ್ ಅಜೇಯ 126 ರನ್ (63 ಎಸೆತ, 12 ಬೌಂಡರಿ, 7 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್‍ಗಳ ಬೃಹತ್ ಮೊತ್ತ ಪೇರಿಸಿತು.
ರನ್ ಏರಿದ್ದು ಹೇಗೆ?
50 ರನ್ 33 ಎಸೆತ
100 ರನ್ 58 ಎಸೆತ
150 ರನ್ 87 ಎಸೆತ
200 ರನ್ 104 ಎಸೆತ
234 ರನ್ 120 ಎಸೆತ
Live Tv
[brid partner=56869869 player=32851 video=960834 autoplay=true]