Tag: ಟಿ20

  • ಟಿ20 ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ: ಡ್ವೇನ್‌ ಬ್ರಾವೋ

    ಟಿ20 ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ: ಡ್ವೇನ್‌ ಬ್ರಾವೋ

    ದುಬೈ: ಟಿ20 ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ವೆಸ್ಟ್‌ ಇಂಡೀಸ್‌ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ ಘೋಷಿಸಿದ್ದಾರೆ.

    ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಸೋಲನುಭವಿಸಿದ ವೆಸ್ಟ್‌ ಇಂಡೀಸ್‌ ತಂಡ ಸೆಮಿಫೈನಲ್‌ನಿಂದ ಹೊರಬಿದ್ದಿದೆ. ಇದನ್ನೂ ಓದಿ: ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲು ಇದೊಂದೇ ಮಾರ್ಗ

    ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಾವೋ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸೂಕ್ತ ಸಮಯ ಎಂದೆನಿಸಿದೆ. ನಾನು ಉತ್ತಮ ವೃತ್ತಿ ಜೀವನ ಹೊಂದಿದ್ದೇನೆ. 18 ವರ್ಷಗಳ ಕಾಲ ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರತಿನಿಧಿಸಿದ ಸಂದರ್ಭದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದೇನೆ. ಇದನ್ನೂ ಓದಿ: ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿದ ಚೋಪ್ರಾ-ನಿಕ್

    2006ರಲ್ಲಿ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈವರೆಗೆ 90 ಪಂದ್ಯಗಳನ್ನು ಆಡಿದ್ದಾರೆ. ಬ್ರಾವೋ 2018ರಲ್ಲೂ ನಿವೃತ್ತಿ ಘೋಷಿಸಿದ್ದರು. ಆದರೆ 2019ರಲ್ಲಿ ನಿವೃತ್ತಿ ವಾಪಸ್‌ ಪಡೆದು ತಂಡಕ್ಕೆ ಮರಳಿದ್ದರು. 2012, 2016ರ ಟಿ20 ವಿಶ್ವಕಪ್‌ ಗೆದ್ದ ವೆಸ್ಟ್‌ ಇಂಡೀಸ್‌ ತಂಡದಲ್ಲಿ ಬ್ರಾವೋ ಪ್ರಮುಖ ಪಾತ್ರ ವಹಿಸಿದ್ದರು.

  • ಹರ್ಭಜನ್, ಅಮೀರ್ ಮಧ್ಯೆ ಸಿಕ್ಸರ್, ನೋಬಾಲ್ ಫೈಟ್

    ಹರ್ಭಜನ್, ಅಮೀರ್ ಮಧ್ಯೆ ಸಿಕ್ಸರ್, ನೋಬಾಲ್ ಫೈಟ್

    ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಪಾಕಿಸ್ತಾನದ ಮಾಜಿ ಪೇಸರ್ ಮಹಮ್ಮದ್ ಅಮೀರ್ ಮಧ್ಯೆ ಟ್ವಿಟರ್ ವಾರ್ ನಡೆಯುತ್ತಿರುವುದು ಸಖತ್ ಸುದ್ದಿಯಾಗುತ್ತಿದೆ.

    ಟಿ20ಯಲ್ಲಿ ಪಾಕಿಸ್ತಾನ ವಿರುದ್ಧವಾಗಿ ಭಾರತ ಕ್ರಿಕೆಟ್ ತಂಡ ಸೋತಿದೆ. ಪಾಕ್ ಗೆಲುವಿಗಾಗಿ ಪಟಾಕಿ ಹೊಡೆದ್ದು, ಶಮಿಯನ್ನು ನಿಂದಿಸುತ್ತಿರುವ ವಿಚಾರ ತೀರಾ ವೈಯಕ್ತಿ ಕಿತ್ತಾಟಗಳಿಗೆ ಕಾಣವಾಗುತ್ತಿದ್ದು, ಈ ವಿಚಾರ ಚರ್ಚೆ ಬೇರೆಯದ್ದೇ ಸ್ವರೂಪ ಪಡೆದುಕೊಂಡಿದೆ.

    ಭಾರತದ ಸೋಲನ್ನು ಅಮೀರ್ ಗೇಲಿ ಮಾಡಿದ್ದರು. ಅಲ್ಲದೇ ಹರ್ಭಜನ್ ಸಿಂಗ್‍ಗೆ ಟ್ಯಾಗ್ ಮಾಡಿದ್ದರು. ಅಮೀರ್ ಮಾಡಿದ ಟ್ವೀಟ್‍ಗೆ ಹರ್ಭಜನ್ ಪ್ರತಿಕ್ರಿಯಿಸುವ ಮೂಲಕವಾಗಿ ವಾರ್ ಪ್ರಾರಂಭವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್ 2010ರ ಏಷ್ಯಾ ಕಪ್‍ನ ವೀಡಿಯೋವನ್ನು ಹಂಚಿಕೊಂಡಿದ್ದರು. ಅಮೀರ್ ಬೌಲ್‍ಗೆ ಸಿಕ್ಸರ್ ಸಿಡಿಸಿ ಹರ್ಭಜನ್ ಭಾರತಕ್ಕೆ ಜಯವನ್ನು ತಂದುಕೊಟ್ಟಿದ್ದರು.


    .
    ಇದಕ್ಕೆ ತಿರುಗೇಟು ಕೊಟ್ಟ ಅಮೀರ್, 2006ರಲ್ಲಿ ಲಾಹೋರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶಾಹೀದ್ ಅಫ್ರಿದಿ, ಹರ್ಭಜನ್ ಸಿಂಗ್ ಬಾಲ್‍ಗೆ ಸತತ ಸಿಕ್ಸರ್‌ಗಳನ್ನ ಬಾರಿಸುವ ವೀಡಿಯೋ ಶೇರ್ ಮಾಡಿ ಕಿಚಾಯಿಸಿದ್ದಾರೆ.

    ಸ್ವಾಟ್ ಫಿಕ್ಸಿಂಗ್ ಹಗರಣವನ್ನು ಅಮೀರ್ ಹಂಚಿಕೊಂಡಿದ್ದಾರೆ. 2010ರಲ್ಲಿ ಇಂಗ್ಲೆಂಡ್ ವಿರುದ್ಧದ ಲಾಡ್ಸ್ ಟೆಸ್ಟ್ ನಲ್ಲಿ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಟ್ವೀಟ್ ಸಮರವಾಗಿದೆ. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ಲಾರ್ಡ್ಸ್ ನಲ್ಲಿ ನೋಬಾಲ್ ಹೇಗೆ ಆಯಿತು? ಅಷ್ಟುಕ್ಕೂ ನೀವು ಎಷ್ಟು ಹಣವನ್ನು ತೆಗೆದುಕೊಂಡಿದ್ದೀರಿ? ಯಾರು ನಿಮಗೆ ಹಣವನ್ನು ನೀಡಿದರು? ಟೆಸ್ಟ್ ಕ್ರಿಕೆಟ್‍ನಲ್ಲಿ ಯಾರಾದರೂ ನೋ ಬಾಲ್ ಹಾಗೆ ಹಾಕುತ್ತಾರಾ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಬೆಂಬಲಿಗರಿಗೆ ನಾಚಿಕೆಯಾಗಬೇಕು ಎನ್ನುವ ರೀತಿಯಲ್ಲಿ ಹರ್ಭಜನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಮುಸಲ್ಮಾನರಿಂದಲೂ ಪಾಕಿಸ್ತಾನ ತಂಡಕ್ಕೆ ಬೆಂಬಲ: ಪಾಕ್ ಸಚಿವ

    2010ರಲ್ಲಿ ಅಮೀರ್ ಹಾಕಿದ್ದ ನೋಬಾಲ್ ಫೋಟೋವನ್ನು ಶೇರ್ ಮಾಡಿದ್ದಾರೆ. ಇನ್ನೊಂದು ಪೋಸ್ಟ್ ನಲ್ಲಿ 2010ರ ಏಷ್ಯಾ ಕಪ್‍ನಲ್ಲಿ ಸಿಕ್ಸರ್ ಸಿಡಿಸಿದ ವೀಡಿಯೋವನ್ನು ಹರ್ಭಜನ್ ಸಿಂಗ್ ಶೇರ್ ಮಾಡಿದ್ದಾರೆ. ಈ ವೀಡಿಯೋವನ್ನು ನೋಡಿದ ಅಮೀರ್ ನಿಮ್ಮ ಬೌಲಿಂಗ್ ಆಕ್ಷನ್ ಹೇಗಿದೆ ಎಂದು ಹರ್ಭಜನ್ ಸಿಂಗ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆಯಾಗಿ ಇಬ್ಬರ ಮಧ್ಯೆ ಟ್ವೀಟ್ ಸಮರ ನಡೆಯುತ್ತಿದ್ದು, ಒಬ್ಬರಮೇಲೊಬ್ಬರು ಆರೋಪವನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಪಾಕ್ ಗೆಲವು ಸಂಭ್ರಮಿಸಿದವ್ರ ವಿರುದ್ಧ ದೂರು ದಾಖಲಿಸಿದವರಿಗೆ ಉಗ್ರರ ವಾರ್ನಿಂಗ್

  • ಮೊದಲ ಟಿ20 ವಿಶ್ವಕಪ್ ಬಾಲ್‍ಔಟ್ ಮೂಲಕ ಪಾಕ್‍ಗೆ ಶಾಕ್ ಕೊಟ್ಟ ಭಾರತ

    ಮೊದಲ ಟಿ20 ವಿಶ್ವಕಪ್ ಬಾಲ್‍ಔಟ್ ಮೂಲಕ ಪಾಕ್‍ಗೆ ಶಾಕ್ ಕೊಟ್ಟ ಭಾರತ

    ದುಬೈ: ಟಿ20 ವಿಶ್ವಕಪ್ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳೆಲ್ಲರೂ ಭಾರತ ಹಾಗೂ ಪಾಕಿಸ್ತಾನ ಕಾದಾಟಕ್ಕಾಗಿ ಕಾಯುತ್ತಿದ್ದಾರೆ. ಇದೇ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರು ಬದರಾಗಲಿದೆ. ಈ ಮೊದಲು 2007ರ ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡ ಬಾಲ್‍ಔಟ್ ಮೂಲಕ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು. ಈ ಪಂದ್ಯದ ಹಿನ್ನೋಟ ಮತ್ತೊಮ್ಮೆ ತಿರುವಿ ನೋಡೋಣ.

    2007ರ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎದುರಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 141 ರನ್ ಮಾಡಿತು. 142 ರನ್‍ಗಳ ಟಾರ್ಗೆಟ್‍ನೊಂದಿಗೆ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಕೂಡ ನಿಗದಿತ ಓವರ್ ಅಂತ್ಯಕ್ಕೆ 141 ರನ್ ಮಾಡಿ ಪಂದ್ಯ ಟೈ ಆಯಿತು. ಈ ಸಂದರ್ಭ ಟಿ20 ವಿಶ್ವಕಪ್‍ನಲ್ಲಿ ಬಾಲ್ ಔಟ್ ನಿಯಮವಿತ್ತು. ಯಾರು ಹೆಚ್ಚು ಬಾಲ್‍ಔಟ್ ಮಾಡುತ್ತಾರೆ ಆ ತಂಡ ವಿಜಯಿ ಎಂದು ನಿರ್ಧರಿಸಲಾಗಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್ – ಕರ್ಟಿಸ್ ಕ್ಯಾಂಫರ್ ಹ್ಯಾಟ್ರಿಕ್ ವಿಕೆಟ್ ಸಾಧನೆ

    2007ರ ಹೊತ್ತಲ್ಲಿ ಭಾರತದ ಯುವ ನಾಯಕ ಮಹೇಂದ್ರ ಸಿಂಗ್ ಯುಗ ಆರಂಭದ ದಿನಗಳದು. ಧೋನಿ ಆ ವಿಶ್ವಕಪ್‍ನಿಂದಲೇ ತನ್ನ ವಿಭಿನ್ನ ನಿರ್ಧರಕ್ಕೆ ಸಾಕ್ಷಿಯಾಗಿದ್ದರು. ಬಾಲ್‍ಔಟ್ ಗಾಗಿ ಭಾರತ ತಂಡದಿಂದ 5 ಜನ ಆಟಗಾರರು ಮತ್ತು ಪಾಕಿಸ್ತಾನ ತಂಡದಿಂದ 5 ಜನ ಆಟಗಾರರು ನಿಗದಿಯಾಗಿತ್ತು. ಭಾರತ ಪರ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ರಾಬಿನ್ ಉತ್ತಪ್ಪ, ಶ್ರೀಶಾಂತ್ ಮತ್ತು ಇರ್ಫಾನ್ ಪಠಾಣ್ ಅವರ ಹೆಸರನ್ನು ಧೋನಿ ಆಯ್ಕೆ ಮಾಡಿದ್ದರು. ಪಾಕಿಸ್ತಾನ ಪರ ಯಾಸಿರ್ ಅರಾಫತ್, ಉಮರ್ ಗುಲ್, ಸುಹೈಲ್ ತನ್‍ವೀರ್, ಆಸಿಫ್ ಮತ್ತು ಶಾಹೀದ್ ಅಫ್ರಿದಿ ಇದ್ದರು. ಇದನ್ನೂ ಓದಿ: ಟೀಂ ಇಂಡಿಯಾಗೆ ಕ್ಲಾಸ್ ಆರಂಭಿಸಿದ ಧೋನಿ – ವಿಶ್ವಕಪ್‍ಗಾಗಿ ಭರ್ಜರಿ ತಯಾರಿ

    ಬಾಲ್‍ಔಟ್ ಆರಂಭವಾಯಿತು. ಭಾರತದ ಪರ ಮೊದಲು ಬಾಲ್ ಮಾಡಿದ ಸೆಹ್ವಾಗ್ ವಿಕೆಟ್‍ಗೆ ಬಾಲ್ ಮಾಡಿದರು. ನಂತರ ಪಾಕಿಸ್ತಾನ ಪರ ಬಾಲ್ ಎಸೆಯಲು ಬಂದ ಅರಾಫತ್ ವಿಕೆಟ್‍ಗೆ ಎಸೆಯಲು ವಿಫಲರಾದರು. ಆಗ ಭಾರತ 1-0 ಮುನ್ನಡೆ ಪಡೆಯಿತು. ನಂತರ ಹರ್ಭಜನ್ ಬಾಲ್‍ಔಟ್‍ಗೆ ಬಂದು ವಿಕೆಟ್ ಕಿತ್ತು ಮಿಂಚಿದರು. ಆ ಬಳಿಕ ಪಾಕ್ ಪರ ಬೌಲಿಂಗ್ ಮಾಡಿದ ಉಮರ್ ಗುಲ್ ಕೂಡ ವಿಕೆಟ್‍ಗೆ ಎಸೆಯಲು ವಿಫಲರಾದರು. ಇದರೊಂದಿಗೆ ಭಾರತ ತಂಡ 2-0 ಮುನ್ನಡೆ ಪಡೆದುಕೊಂಡಿತು. ನಂತರ ಮೂರನೇಯವರಾಗಿ ಭಾರತದ ಪರ ಉತ್ತಪ್ಪ ಬೌಲಿಂಗ್ ಮಾಡಿ ವಿಕೆಟ್ ಚದುರಿಸಿದರು. ಪಾಕ್ ಪರ ಮೂರನೇ ಅವರಾಗಿ ಬಾಲ್ ಎಸೆದ ಅಫ್ರಿದಿ ಕೂಡ ಯಶಸ್ಸು ಕಾಣದೆ ಭಾರತ 3-0 ಬಾಲ್‍ಔಟ್ ಮೂಲಕ ಗೆದ್ದು ಬೀಗಿತ್ತು. ಈ ಪಂದ್ಯ ಕ್ರಿಕೆಟ್ ಪ್ರಿಯರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ.

  • T20 ವಿಶ್ವಕಪ್‍ಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ

    T20 ವಿಶ್ವಕಪ್‍ಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ

    ಮುಂಬೈ: ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ದಿನಗಣನೇ ಆರಂಭವಾಗಿದೆ. ಈ ನಡುವೆ ಟೀಂ ಇಂಡಿಯಾ ಟಿ20 ವಿಶ್ವಕಪ್‍ಗೆ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದು, ಇಂದು ನೂತನ ಜೆರ್ಸಿ ಅನಾವರಣಗೊಂಡಿದೆ.

    ವಿಶ್ವಕಪ್‍ನಂತಹ ಮಹತ್ವದ ಟೂರ್ನಿಗಳಲ್ಲಿ ಭಾಗವಹಿಸುವ ಮುನ್ನ ನೂತನ ಜೆರ್ಸಿಯೊಂದಿಗೆ ಕಣಕ್ಕಿಳಿಯುವುದು ವಾಡಿಕೆ ಅದರಂತೆ ಈ ಬಾರಿಯೂ ಟೀ ಇಂಡಿಯಾ ನೂತನ ಜೆರ್ಸಿತೊಟ್ಟು ಮೈದಾನಕ್ಕೆ ಇಳಿಯಲಿದೆ. ಭಾರತ ತಂಡ ತೊಡುವ ನೂತನ ಜೆರ್ಸಿಯನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದ ಮೂಲಕ ಅನಾವರಣಗೊಳಿಸಿದ್ದು, ಕೋಟ್ಯಂತರ ಜನರ ಚೀಯರ್ಸ್‍ನಿಂದ ಪ್ರೇರಿತಗೊಂಡು ಸಿದ್ಧವಾದ ಜೆರ್ಸಿ ಎಂದು ಬರೆದುಕೊಂಡಿದೆ. ಜೆರ್ಸಿ ಕಡು ನೀಲಿ ಬಣ್ಣ ಮಿಶ್ರಿತವಾಗಿದ್ದು, ಈ ಹಿಂದಿನ ಜೆರ್ಸಿ ಶೈಲಿಯನ್ನು ಹಾಗೆ ಮುಂದುವರಿಸಿದಂತಿದೆ. ತಂಡದ ನೂತನ ಜೆರ್ಸಿ ಕಿಟ್‍ಗಳನ್ನು ಪ್ರಯೋಜಕತ್ವ ಹೊಂದಿರುವ ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಸಿದ್ಧಪಡಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಧೋನಿ ಕ್ರಿಕೆಟ್ ಅಕಾಡೆಮಿ ಪ್ರಾರಂಭ – ಗೇಮ್‍ಪ್ಲೇ ಘೋಷಣೆ

    ಟಿ20 ವಿಶ್ವಕಪ್ ಅಕ್ಟೋಬರ್ 17ರಿಂದ ಆರಂಭಗೊಂಡು, ನವೆಂಬರ್ 14ರಂದು ಮುಕ್ತಾಯಗೊಳ್ಳಲಿದೆ. ಭಾರತ ತಂಡ ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಬಯಸಿದರೆ ಪಾಕ್‌ ಕ್ರಿಕೆಟ್‌ ಕತೆ ಮುಗಿದಂತೆ: ರಮೀಝ್‌ ರಾಜಾ

  • ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ರಾಹುಲ್‌ – ಪಂಜಾಬ್‌ಗೆ 6 ವಿಕೆಟ್‌ಗಳ ಜಯ

    ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ರಾಹುಲ್‌ – ಪಂಜಾಬ್‌ಗೆ 6 ವಿಕೆಟ್‌ಗಳ ಜಯ

    ದುಬೈ: ನಾಯಕ ಕೆಎಲ್‌ ರಾಹುಲ್‌ ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ 6 ವಿಕೆಟ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 135 ರನ್‌ಗಳ ಗುರಿಯನ್ನು ಪಡೆದ ಪಂಜಾಬ್‌ 13 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 139 ರನ್‌ ಹೊಡೆಯುವ ಮೂಲಕ ಗುರಿಯನ್ನು ತಲುಪಿತು. ಇನ್ನಿಂಗ್ಸ್‌ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ರಾಹುಲ್‌ ಔಟಾಗದೇ 98 ರನ್‌(42 ಎಸೆತ, 7 ಬೌಂಡರಿ, 8 ಸಿಕ್ಸರ್‌) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಈ ಪಂದ್ಯಕ್ಕೂ ಮೊದಲು ಪಂಜಾಬ್‌ ರನ್‌ ರೆಟ್‌ -0.241ಇತ್ತು. ಈಗ ಇದು -0.001 ಏರಿಕೆಯಾಗಿದೆ. ಪಂಜಾಬ್‌ ಪರ ರಾಹುಲ್‌ ಬಿಟ್ಟರೆ ಮಯಾಂಕ್‌ ಅಗರವಾಲ್‌ 12 ರನ್‌, ಏಡನ್ ಮಾರ್ಕ್ರಮ್ 13 ರನ್‌ ಗಳಿಸಿ ಔಟಾದರು.

    ಇಂದಿನ ಪಂದ್ಯವನ್ನು ಪಂಜಾಬ್‌ ಗೆದ್ದರೂ ಪ್ಲೇ ಆಫ್‌ಗೆ ಹೋಗುವ ಆಸೆ ಬಹಳ ಕ್ಷೀಣವಾಗಿದೆ. ಯಾಕೆಂದರೆ ರಾಜಸ್ಥಾನ ವಿರುದ್ಧ ಕೋಲ್ಕತ್ತಾ ಭಾರೀ ಅಂತರದಿಂದ ಸೋಲಬೇಕು. ಅಷ್ಟೇ ಅಲ್ಲದೇ ನಾಳೆ ನಡೆಯಲಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ಗೆಲ್ಲಬೇಕು. ಸದ್ಯದ ಮಟ್ಟಿಗೆ ಈ ಫಲಿತಾಂಶ ಬರುವುದು ಬಹಳ ಕಷ್ಟ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಭಾರತದ ನೂತನ ಸಿಕ್ಸರ್ ಕಿಂಗ್ ಆದ ಹಿಟ್‍ಮ್ಯಾನ್

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಚೆನ್ನೈ ಪಂಜಾಬ್‌ ಬೌಲರ್‌ಗಳ ಬಿಗಿಯಾದ ದಾಳಿಗೆ 6 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತು. ಫಾಫ್‌ ಡುಪ್ಲೆಸಿಸ್‌ 76 ರನ್‌(55 ಎಸೆತ, 8 ಬೌಂಡರಿ, 2 ಸಿಕ್ಸರ್‌) ಹೊಡೆದು ಪ್ರತಿರೋಧ ತೋರಿದ್ದು ಬಿಟ್ಟರೆ ಬೇರೆ ಆಟಗಾರರಿಂದ ಹೋರಾಟ ಕಂಡು ಬರಲಿಲ್ಲ.

    ರವೀಂದ್ರ ಜಡೇಜಾ ಔಟಾಗದೇ 15 ರನ್‌, ಧೊನಿ ಮತ್ತು ಋತುರಾಜ್‌ ಗಾಯಕ್‌ವಾಡ್‌ 12 ರನ್‌ ಹೊಡೆದು ಔಟಾದರು. ಚೆನ್ನೈ ಪರ ಕ್ರಿಸ್‌ ಜೋರ್ಡನ್‌, ಅರ್ಶದೀಪ್‌ ಸಿಂಗ್‌ ತಲಾ 2 ವಿಕೆಟ್‌ ಪಡೆದರೆ ಮೊಹಮ್ಮದ್‌ ಶಮಿ, ರವಿ ಬಿಶ್ನೋಯಿ ತಲಾ 1 ವಿಕೆಟ್‌ ಪಡೆದರು.

  • ಟಿ20 ಕ್ರಿಕೆಟ್‍ನಲ್ಲಿ ಭಾರತದ ನೂತನ ಸಿಕ್ಸರ್ ಕಿಂಗ್ ಆದ ಹಿಟ್‍ಮ್ಯಾನ್

    ಟಿ20 ಕ್ರಿಕೆಟ್‍ನಲ್ಲಿ ಭಾರತದ ನೂತನ ಸಿಕ್ಸರ್ ಕಿಂಗ್ ಆದ ಹಿಟ್‍ಮ್ಯಾನ್

    ದುಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್‍ನಲ್ಲಿ 400 ಸಿಕ್ಸರ್ ಹೊಡೆದ ಭಾರತದ ಮೊದಲ ಬ್ಯಾಟ್ಸ್‌ಮ್ಯಾನ್‌ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

    ಐಪಿಎಲ್ ಸಹಿತ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಒಟ್ಟು 355 ಟಿ20 ಪಂದ್ಯಗಳಿಂದ 400 ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ 400 ಸಿಕ್ಸ್ ಬಾರಿಸಿದ ಮೊದಲ ಭಾರತದ ಆಟಗಾರನಾಗಿ ಶರ್ಮಾ ಹೊರ ಹೊಮ್ಮಿದ್ದಾರೆ. ಉಳಿದಂತೆ ಚೆನ್ನೈ ತಂಡದ ಆಟಗಾರ ಸುರೇಶ್ ರೈನಾ 325 ಸಿಕ್ಸ್ ಸಿಡಿಸಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಆಟಗಾರರ ಪೈಕಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ 320 ಸಿಕ್ಸರ್‍ ಗಳೊಂದಿಗೆ ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 304 ಸಿಕ್ಸ್ ಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಆ ಒಂದು ಆಸೆಗಾಗಿ ಧೋನಿ ಈ ಬಾರಿ ಐಪಿಎಲ್‍ಗೆ ನಿವೃತ್ತಿ ಘೋಷಿಸಿಲ್ಲ

    ರೋಹಿತ್ ಶರ್ಮಾ 400 ಸಿಕ್ಸ್ ಗಳ ಪೈಕಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 133 ಸಿಕ್ಸ್ ಸಿಡಿಸಿದರೆ, 227 ಸಿಕ್ಸ್ ಐಪಿಎಲ್, 16 ಸಿಕ್ಸ್ ಚಾಂಪಿಯನ್ಸ್ ಲೀಗ್ ಮತ್ತು 24 ಸಿಕ್ಸ್ ಇತರ ಟಿ20 ಪಂದ್ಯದಲ್ಲಿ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್

    ವಿಶ್ವ ಟಿ20 ಕ್ರಿಕೆಟ್‍ನಲ್ಲಿ ಗಮನಿಸಿದರೆ ಅತೀ ಹೆಚ್ಚು ಸಿಕ್ಸರ್‍ ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ 1024 ಸಿಕ್ಸ್ ಗಳೊಂದಿಗೆ ಮೊದಲಿಗರಾಗಿ ಕಾಣಿಸಿಕೊಂಡರೆ, ವೆಸ್ಟ್ ಇಂಡೀಸ್ ತಂಡದ ಕೀರಾನ್ ಪೋಲಾರ್ಡ್ 758 ಸಿಕ್ಸ್ ಮತ್ತು ಆಂಡ್ರೆ ರಸೆಲ್ 510 ಸಿಕ್ಸ್ ಚಚ್ಚಿ ಸಿಕ್ಸರ್ ವೀರರಾಗಿ ಗುರುತಿಸಿಕೊಂಡಿದ್ದಾರೆ.

  • ಹೈದರಾಬಾದ್‌ಗೆ ರೋಚಕ 4 ರನ್‌ ಜಯ – ಕೊನೆಯಲ್ಲಿ ಪಂದ್ಯ ಕೈ ಚೆಲ್ಲಿದ ಆರ್‌ಸಿಬಿ

    ಹೈದರಾಬಾದ್‌ಗೆ ರೋಚಕ 4 ರನ್‌ ಜಯ – ಕೊನೆಯಲ್ಲಿ ಪಂದ್ಯ ಕೈ ಚೆಲ್ಲಿದ ಆರ್‌ಸಿಬಿ

    ಅಬುಧಾಬಿ: ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ರೋಚಕವಾಗಿ 4 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ.

    142 ರನ್‌ಗಳ ಸವಾಲು ಪಡೆದ ಬೆಂಗಳೂರು 6 ವಿಕೆಟ್‌ ನಷ್ಟಕ್ಕೆ 137 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರುವ ಅವಕಾಶವನ್ನು ಕಳೆದುಕೊಂಡಿತು.

    ಕೊನೆಯ ಎರಡು ಓವರ್‌ಗಳಲ್ಲಿ 18 ರನ್‌ ಬೇಕಿತ್ತು. ಹೋಲ್ಡರ್‌ ಎಸೆದ 19ನೇ ಓವರಿನಲ್ಲಿ 5 ರನ್‌ ಬಂತು. ಕೊನೆಯ ಓವರಿನಲ್ಲಿ 13 ರನ್‌ ಬೇಕಿತ್ತು. ಭುವನೇಶ್ವರ್‌ ಕುಮಾರ್‌ ಎಸೆದ ಕೊನೆಯ ಮೂರು ಎಸೆತಗಳಲ್ಲಿ 12 ರನ್‌ ಬೇಕಿತ್ತು. ಎಬಿಡಿ ವಿಲಿಯರ್ಸ್‌ 4ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದರು. ಆದರೆ 5ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 6ನೇ ಎಸೆತದಲ್ಲಿ 1 ರನ್‌ ಬಂತು. 1, 3, 5ನೇ ಎಸೆತದಲ್ಲಿ ಯಾವುದೇ ರನ್‌ ಬಾರದ ಕಾರಣ ಆರ್‌ಸಿಬಿ ಪಂದ್ಯವನ್ನು ಸೋತಿತು.

    ಪಡಿಕಲ್‌ 41 ರನ್‌(52 ಎಸೆತ, 4 ಬೌಂಡರಿ), ಮ್ಯಾಕ್ಸ್‌ವೆಲ್‌ 40 ರನ್‌(25 ಎಸೆತ, 3 ಬೌಂಡರಿ, 2 ಸಿಕ್ಸರ್‌), ಎಬಿಡಿ ಔಟಾಗದೇ 19 ರನ್‌(13 ಎಸೆತ, 1 ಬೌಂಡರಿ, 1 ಸಿಕ್ಸರ್‌), ಶಹಬಾಜ್‌ ಅಹ್ಮದ್‌ 14 ರನ್‌(9 ಎಸೆತ, 2 ಬೌಂಡರಿ) ಹೊಡೆದರು.

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಹೈದರಬಾದ್‌ ಆರಂಭದಲ್ಲೇ ಅಭಿಷೇಕ್‌ ಶರ್ಮಾ ಅವರ ವಿಕೆಟ್‌ ಕಳೆದುಕೊಂಡರೂ ಎರಡನೇ ವಿಕೆಟಿಗೆ ಜೇಸನ್‌ ರಾಯ್‌ ಮತ್ತು ಕೇನ್‌ ವಿಲಿಯಮ್ಸನ್‌ 58 ಎಸೆತಗಳಲ್ಲಿ 70 ರನ್‌ ಜೊತೆಯಾಟವಾಡಿದರು.

    ಕೇನ್‌ ವಿಲಿಯಮ್ಸನ್‌ 31 ರನ್‌(29 ಎಸೆತ, 4 ಬೌಂಡರಿ) ಹೊಡೆದು ಔಟಾದರೆ ಜೇಸನ್‌ ರಾಯ್‌ 44 ರನ್‌(38 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಸ್ಲಾಗ್‌ ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳು ರನ್‌ಗೆ ಕಡಿವಾಣ ಹಾಕಿದ ಕಾರಣ ಹೈದರಾಬಾದ್‌ ಮೊತ್ತ ಏರಲಿಲ್ಲ.

    ಹರ್ಷಲ್‌ ಪಟೇಲ್‌ 3, ಡೇನ್‌ ಕ್ರಿಸ್ಟಿಯನ್‌ 2, ಚಹಲ್‌ ಮತ್ತು ಜಾರ್ಜ್‌ ಗಾರ್ಟನ್‌ ತಲಾ ಒಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಆ ಒಂದು ಆಸೆಗಾಗಿ ಧೋನಿ ಈ ಬಾರಿ ಐಪಿಎಲ್‍ಗೆ ನಿವೃತ್ತಿ ಘೋಷಿಸಿಲ್ಲ 

  • ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸುತ್ತೇನೆಂದ ವಿರಾಟ್ ಕೊಹ್ಲಿ

    ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸುತ್ತೇನೆಂದ ವಿರಾಟ್ ಕೊಹ್ಲಿ

    ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವವನ್ನು ತ್ಯಜಿಸುತ್ತೇನೆ ಎಂದು ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕೊಹ್ಲಿ, ನಾನು ಕಳೆದ 8-9 ವರ್ಷಗಳಿಂದ ಭಾರತ ತಂಡಕ್ಕಾಗಿ ಆಡುತ್ತಿದ್ದೇನೆ. ನನಗೆ ತಂಡದ ನಾಯಕತ್ವ ನೀಡಿ 5-6 ವರ್ಷಗಳು ಕಳೆದಿದೆ. ಈಗಾಗಲೇ ಸಾಕಷ್ಟು ಯಶಸ್ಸನ್ನು ಕಂಡಿದ್ದೇನೆ. ಇದೀಗ ನಾನು ನನ್ನ ಬ್ಯಾಟಿಂಗ್ ಸಾಮರ್ಥ್ಯದ ಕಡೆಗೆ ಹೆಚ್ಚು ಆಸಕ್ತಿ ವಹಿಸುವ ಉದ್ದೇಶದಿಂದ ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವ ತ್ಯಜಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ನಾನು ನಾಯಕತ್ವ ಮಾತ್ರ ಬಿಟ್ಟುಕೊಡುತ್ತಿದ್ದು, ಟಿ20 ಕ್ರಿಕೆಟ್‍ನಲ್ಲಿ ಓರ್ವ ಬ್ಯಾಟ್ಸ್‌ಮ್ಯಾನ್‌ ಆಗಿ ಭಾರತ ತಂಡದಲ್ಲಿ ಮುಂದುವರಿಯುತ್ತೇನೆ. ನಾನು ನಾಯಕನಾಗಿದ್ದಾಗ ನನಗೆ ತಂಡದ ಆಟಗಾರರಿಂದ ಹಿಡಿದು ತಂಡದ ಸಹಾಯಕ ಸಿಬ್ಬಂದಿ, ಆಯ್ಕೆ ಸಮಿತಿ, ಬಿಸಿಸಿಐ ಹೀಗೆ ಎಲ್ಲರೂ ಕೂಡ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು. ಇದನ್ನೂ ಓದಿ: ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ

    ನಾನು ನನ್ನ ಆಪ್ತವಲಯದಲ್ಲಿ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ನಾಯಕತ್ವ ತ್ಯಜಿಸಿ ತಂಡದಲ್ಲಿ ಆಟಗಾರನಾಗಿ ಆಡಲು ಬಯಸುತ್ತೇನೆ. ನಾನು ಭಾರತ ತಂಡಕ್ಕಾಗಿ ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಉತ್ತಮ ಸೇವೆಯನ್ನು ಸಲ್ಲಿಸುತ್ತೇನೆ ಎಂದು ಬರೆದಿದ್ದಾರೆ.

    32 ವರ್ಷದ ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ20 ನಾಯಕ ಪಟ್ಟದಿಂದ ಕೆಳಗೆ ಇಳಿಯಲು ನಿರ್ಧರಿಸಿದ್ದು, 34 ವರ್ಷದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಟೀಂ ಇಂಡಿಯವನ್ನು ಮುನ್ನಡೆಸಲಿದ್ದಾರೆ ಎಂದು ಕೆಲದಿನಗಳ ಹಿಂದೆ ಸುದ್ದಿಯಾಗಿದ್ದು, ಈ ಸುದ್ದಿ ಇದೀಗ ನಿಜವಾಗಿದೆ. ಮುಂದಿನ ನಾಯಕ ಯಾರು ಎಂಬುದನ್ನು ಬಿಸಿಸಿಐ ನಿರ್ಧರಿಸಲಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಅಚ್ಚರಿಯಾಗಿ ಆಯ್ಕೆಗೊಂಡ ಆಟಗಾರರಿವರು

  • ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾಗೆ ಧೋನಿ ಮೆಂಟರ್

    ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾಗೆ ಧೋನಿ ಮೆಂಟರ್

    ಮುಂಬೈ: ಟಿ20 ವಿಶ್ವಕಪ್ ಕ್ರಿಕೆಟ್‍ಗೆ ಬಿಸಿಸಿಐ ತಂಡವನ್ನು ಆಯ್ಕೆ ಮಾಡಿದೆ. ಇದರ ಜೊತೆ ತಂಡಕ್ಕೆ ಮಾರ್ಗದರ್ಶನ ನೀಡಲು ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ನೇಮಕ ಮಾಡಿದೆ.

    ವಿರಾಟ್ ಕೊಹ್ಲಿ ನಾಯಕ, ರೋಹಿತ್ ಶರ್ಮಾ ಅವರನ್ನು ಉಪನಾಯಕ, ವಿಕೆಟ್ ಕೀಪರ್ ಗಳಾಗಿ ರಿಷಭ್ ಪಂತ್ ಮತ್ತು ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದೆ. ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರರನ್ನಾಗಿ ಆಯ್ಕೆ ಮಾಡಿದೆ. ಇದನ್ನೂ ಓದಿ: ಸಿಕ್ಸರ್‌ನೊಂದಿಗೆ ಅರ್ಧಶತಕ – ಭಾರತದ ಪರ ವಿಶೇಷ ಸಾಧನೆಗೈದ ಶಾರ್ದೂಲ್

    ಆಯ್ಕೆಯಾದ ಆಟಗಾರರು:
    ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ. ಇದನ್ನೂ ಓದಿ: ಮೇಯರ್ ಸ್ಥಾನ ಕೊಟ್ಟವರ ಜೊತೆ ಮೈತ್ರಿ – ಕಲಬುರಗಿ ಜೆಡಿಎಸ್ ಸದಸ್ಯರು

  • ಧನಂಜಯ ಡಿ ಸಿಲ್ವಾ ಹೋರಾಟ – ಶ್ರೀಲಂಕಾಗೆ 4 ವಿಕೆಟ್‍ಗಳ ಜಯ

    ಧನಂಜಯ ಡಿ ಸಿಲ್ವಾ ಹೋರಾಟ – ಶ್ರೀಲಂಕಾಗೆ 4 ವಿಕೆಟ್‍ಗಳ ಜಯ

    – ಸರಣಿ 1-1 ಸಮಬಲ

    ಕೊಲಂಬೋ: ಧನಂಜಯ ಡಿ ಸಿಲ್ವಾ ಬ್ಯಾಟಿಂಗ್ ಹೋರಾಟ ಮತ್ತು ಬೌಲರ್‍ ಗಳ ಉತ್ತಮ ನಿರ್ವಹಣೆಯಿಂದಾಗಿ ಎರಡನೇ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ 4 ವಿಕೆಟ್‍ಗಳ ಜಯ ಗಳಿಸಿದೆ. ಈ ಮೂಲಕ ಸರಣಿ 1-1 ಸಮಬಲವಾಗಿದೆ.

    ಭಾರತ ನೀಡಿದ 133ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ ಅವಿಷ್ಕಾ ಫರ್ನಾಂಡೊ ಕೇವಲ 11ರನ್(13 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಆದರೆ ಇನ್ನೋರ್ವ ಆರಂಭಿಕ ಆಟಗಾರ ಮಿನೋಡ್ ಭನುಕಾ ಸಿಡಿಯುವ ಸೂಚನೆ ನೀಡಿದರು ಕೂಡ 36ರನ್(31 ಎಸೆತ, 4ಬೌಂಡರಿ) ಸಿಡಿಸಿ ಔಟ್ ಆದರು.

    ಕೆಳಕ್ರಮಾಂಕದಲ್ಲಿ ಬಂದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಆದರೆ ಮಧ್ಯಮಕ್ರಮಾಂಕದಲ್ಲಿ ಬಂದ ಧನಂಜಯ ಡಿ ಸಿಲ್ವಾ 40ರನ್(34 ಎಸೆತ, 1ಬೌಂಡರಿ, 1 ಸಿಕ್ಸ್) ಬಾರಿಸಿ ಅಜೇಯರಾಗಿ ಕಡೆಯವರೆಗೆ ಹೋರಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಶ್ರೀಲಂಕಾ ತಂಡ 19.4 ಓವರ್‍ ಗಳಲ್ಲಿ 6 ವಿಕೆಟ್ ಕಳೆದುಕೊಂಡು 133ರನ್ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿತು.

    ಭಾರತ ಪರ ಕುಲ್‍ದೀಪ್ ಯಾದವ್ 2 ವಿಕೆಟ್ ಪಡೆದರೆ. ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ, ರಾಹುಲ್ ಚಹರ್ ತಲಾ 1 ವಿಕೆಟ್ ಕಿತ್ತರು.

    ಸಾಧರಣ ಮೊತ್ತ ಕಳೆಹಾಕಿದ ಭಾರತ:
    ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಭಾರತ ತಂಡಕ್ಕೆ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಋತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‍ಗೆ ಈ ಜೋಡಿ 49ರನ್(42 ಎಸೆತ) ಜೊತೆಯಾಟವಾಡಿತು. ಋತುರಾಜ್ ಗಾಯಕ್ವಾಡ್ 21ರನ್( 18 ಎಸೆತ, 1 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿದರೆ. ಧವನ್ ಆಟ 40ರನ್(42 ಎಸೆತ,5 ಬೌಂಡರಿ)ಗೆ ಸೀಮಿತವಾಯಿತು. ದೇವದತ್ ಪಡಿಕ್ಕಲ್ 29ರನ್(23 ಎಸೆತ, 1 ಬೌಂಡರಿ, 1 ಸಿಕ್ಸ್) ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸಂಜು ಸ್ಯಾಮ್ಸನ್, ನಿತೇಶ್ ರಾಣಾ ಒಂದಕ್ಕಿ ಮೊತ್ತಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಭುವನೇಶ್ವರ್ ಕುಮಾರ್ 13ರನ್(11 ಎಸೆತ, ) ಬಾರಿಸಿ ಅಜೇಯರಾಗಿ ಉಳಿಯುವುದರೊಂದಿಗೆ ತಂಡದ ಮೊತ್ತವನ್ನು 130ರ ಗಡಿದಾಟಿಸಿದರು. ಅಂತಿಮವಾಗಿ ನಿಗದಿತ 20 ಓವರ್‍ ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು.

    ಅಕಿಲಾ ದನಂಜಯ 2 ವಿಕೆಟ್ ಪಡೆದರೆ. ವಾನಿಂದು ಹಸರಂಗ , ದಾಸುನ್ ಶಾನಕಾ ಮತ್ತು ದುಷ್ಮಂತ್ ಚಮೀರ ತಲಾ 1 ವಿಕೆಟ್ ಕಿತ್ತರು.