Tag: ಟಿ20 ತಂಡ

  • T20 ಸರಣಿಗೆ ವಿಂಡೀಸ್‌ ಬಲಿಷ್ಠ ತಂಡ ಪ್ರಕಟ – ನಿಕೋಲಸ್‌ ಪೂರನ್‌ ಈಸ್‌ ಬ್ಯಾಕ್‌

    T20 ಸರಣಿಗೆ ವಿಂಡೀಸ್‌ ಬಲಿಷ್ಠ ತಂಡ ಪ್ರಕಟ – ನಿಕೋಲಸ್‌ ಪೂರನ್‌ ಈಸ್‌ ಬ್ಯಾಕ್‌

    ಬ್ರಿಡ್ಜ್‌ಟೌನ್‌: ಇದೇ ಆಗಸ್ಟ್‌ 3 ರಿಂದ 13ರ ವರೆಗೆ ಟೀಂ ಇಂಡಿಯಾ (Team India) ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ವೆಸ್ಟ್‌ ಇಂಡೀಸ್‌ ಬಲಿಷ್ಠ ತಂಡ ಪ್ರಕಟಿಸಿದ್ದು, ನಿಕೋಲಸ್‌ ಪೂರನ್‌ (Nicholas Pooran) ತಂಡಕ್ಕೆ ಕಂಬ್ಯಾಕ್‌ ಮಾಡಿದ್ದಾರೆ.

    ಯುಎಸ್‌ನಲ್ಲಿ (USA) ಮೇಜರ್‌ ಕ್ರಿಕೆಟ್‌ ಲೀಗ್‌ನಲ್ಲಿ ಪಾಲ್ಗೊಂಡಿದ್ದ ಕಾರಣ ಏಕದಿನ ಕ್ರಿಕೆಟ್‌ ಟೂರ್ನಿಯಿಂದ ನಿಕೋಲಸ್‌ ಪೂರನ್‌ ಹೊರಗುಳಿದಿದ್ದರು. ಮುಂಬೈ ಇಂಡಿಯನ್ಸ್‌ ನ್ಯೂಯಾರ್ಕ್‌ ತಂಡದ ಪರ ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡಿದ್ದ ಪೂರನ್‌ ಸ್ಫೋಟಕ ಶತಕ ಸಿಡಿಸಿ ಚಾಂಪಿಯನ್‌ ಪಟ್ಟ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಟೀಂ ಇಂಡಿಯಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    ರೋವ್ಮನ್‌ ಪೋವೆಲ್‌ (Rovman Powell) ತಂಡದ ನಾಯಕತ್ವ ವಹಿಸಿಕೊಂಡಿದ್ದು, ಕೈಲ್‌ ಮೇಯರ್ಸ್‌ ಉಪನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ. ಶಿಮ್ರಾನ್‌ ಹೆಟ್ಮೇಯರ್‌, ಶಾಯ್‌ ಹೋಪ್‌, ಅಲ್ಝರಿ ಜೋಸೆಫ್‌, ಜೇಸನ್‌ ಹೋಲ್ಡರ್‌ ಮೊದಲಾದವರು ಬ್ಯಾಟಿಂಗ್‌ ಬಲ ತುಂಬುವ ನಿರೀಕ್ಷೆಯಲ್ಲಿದ್ದಾರೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಪಂದ್ಯಗಳು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿದ್ದು ಅಂತಿಮ ಎರಡು ಪಂದ್ಯಗಳು ಅಮೆರಿಕದಲ್ಲಿ ನಡೆಯಲಿದೆ. ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಭರ್ಜರಿ ಕಂಬ್ಯಾಕ್‌ – ಐರ್ಲೆಂಡ್‌ T20 ಸರಣಿಗೆ ಬುಮ್ರಾ ನಾಯಕ, ರಿಂಕು ಸಿಂಗ್‌ಗೆ ಚಾನ್ಸ್‌

    ವೆಸ್ಟ್​ ಇಂಡೀಸ್​ ತಂಡ
    ರೋವ್ಮನ್ ಪೊವೆಲ್‌ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರೋನ್ ಹೆಟ್​ಮೇರ್​, ಜೇಸನ್ ಹೋಲ್ಡರ್, ಶೈಯ್​ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಒಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್​, ಓಡಿಯನ್ ಸ್ಮಿತ್, ಒಶಾನೆ ಥಾಮಸ್. ಇದನ್ನೂ ಓದಿ: 10 ಬೌಂಡರಿ, 13 ಸಿಕ್ಸರ್ – ನಿಕೋಲಸ್ ಪೂರನ್ ಸ್ಫೋಟಕ ಶತಕ; ವಿದೇಶದಲ್ಲೂ ಮುಂಬೈ ಚಾಂಪಿಯನ್

    ಭಾರತ ಟಿ20 ತಂಡ
    ಇಶಾನ್​ ಕಿಶನ್​, ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​, ತಿಲಕ್​ ವರ್ಮಾ, ಸೂರ್ಯಕುಮಾರ್​ ಯಾದವ್​, ಸಂಜು ಸ್ಯಾಮ್ಸನ್​, ಹಾರ್ದಿಕ್​​ ಪಾಂಡ್ಯ(ನಾಯಕ), ಅಕ್ಷರ್​ ಪಟೇಲ್, ಯಜುವೇಂದ್ರ ಚಾಹಲ್‌​, ಕುಲ್​ದೀಪ್​ ಯಾದವ್​, ರವಿ ಬಿಷ್ಣೋಯಿ, ಅರ್ಷ್‌​ದೀಪ್​ ಸಿಂಗ್​, ಉಮ್ರಾನ್​ ಮಲಿಕ್​, ಅವೇಶ್​ ಖಾನ್​, ಮುಖೇಶ್​ ಕುಮಾರ್​.

    ಯಾವ ದಿನ ಎಲ್ಲಿ ಪಂದ್ಯ:
    ಮೊದಲ ಟಿ20 ಪಂದ್ಯ ಆಗಸ್ಟ್​ 3, ಸ್ಥಳ: ಟ್ರಿನಿಡಾಡ್
    2ನೇ ಟಿ20 ಪಂದ್ಯ ಆಗಸ್ಟ್​ 6, ಸ್ಥಳ: ಗಯಾನಾ
    3ನೇ ಟಿ20 ಪಂದ್ಯ ಆಗಸ್ಟ್​ 8, ಸ್ಥಳ: ಗಯಾನಾ
    4ನೇ ಟಿ20 ಪಂದ್ಯ ಆಗಸ್ಟ್​ 12, ಸ್ಥಳ: ಫ್ಲೋರಿಡಾ
    5ನೇ ಟಿ20 ಪಂದ್ಯ ಆಗಸ್ಟ್​ 13, ಸ್ಥಳ: ಫ್ಲೋರಿಡಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಹ್ಲಿ, ಧೋನಿ, ವಾರ್ನರ್ ಬಿಟ್ಟು ರೋಹಿತ್‍ಗೆ ನಾಯಕನ ಪಟ್ಟ

    ಕೊಹ್ಲಿ, ಧೋನಿ, ವಾರ್ನರ್ ಬಿಟ್ಟು ರೋಹಿತ್‍ಗೆ ನಾಯಕನ ಪಟ್ಟ

    – ಮೂಡಿಯಿಂದ ವಿಶ್ವಶ್ರೇಷ್ಠ ಟಿ-20 ತಂಡ
    – ನಾನು ಧೋನಿ ಅಭಿಮಾನಿ, ಆದರೆ ಅವರು ತಂಡಕ್ಕೆ ಬೇಡ

    ಮುಂಬೈ: ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ ಅವರು, ತಮ್ಮ ವಿಶ್ವಶ್ರೇಷ್ಠ ಟಿ-20 ತಂಡವನ್ನು ಆಯ್ಕೆ ಮಾಡಿದ್ದು, ಭಾರತದ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅವರಿಗೆ ನಾಯಕ ಪಟ್ಟ ದೊರೆತಿದೆ.

    ಟಾಮ್ ಮೂಡಿ ಅವರು, ಸದ್ಯದಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಇರುವ ಖ್ಯಾತ ಕೋಚ್ ಆಗಿದ್ದಾರೆ. ಇವರ ತರಬೇತಿಯಲ್ಲಿ ಹೈದರಾಬಾದ್ ತಂಡ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗ ಕಮೆಂಟೇಟರ್ ಹರ್ಷ ಭೋಗ್ಲೆ ನಡೆಸಿರುವ ಸಂದರ್ಶನದಲ್ಲಿ ಭಾಗಿಯಾಗಿದ್ದ ಮೂಡಿ ತಮ್ಮ ನೆಚ್ಚಿನ ಟಿ-20 ಪಂದ್ಯವನ್ನು ಆಯ್ಕೆ ಮಾಡಿದ್ದಾರೆ. ಈ ತಂಡಕ್ಕೆ ಕೊಹ್ಲಿ, ಧೋನಿ ಅವರನ್ನು ಬಿಟ್ಟು ಓಪನರ್ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದು, ಟಿ-20ಗೆ ಕೊಹ್ಲಿಗಿಂತ ರೋಹಿತ್ ಸರಿಯಾದ ನಾಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಸದ್ಯ ನಾನು ಹೆಸರಿಸುವ ತಂಡ ಪ್ರಸಕ್ತ ಸಾಲಿನಲ್ಲಿ ಆಡುತ್ತಿರುವ ಆಟಗಾರರನ್ನು ಒಳಗೊಂಡಿದೆ ಮತ್ತು ಮುಂದಿನ ಮೂರು ವಾರದಲ್ಲಿ ನಡೆಯುವ ಪಂದ್ಯಗಳನ್ನು ಮನದಲ್ಲಿ ಇಟ್ಟುಕೊಂಡಂತೆ ಭಾವಿಸಿ ಈ ತಂಡವನ್ನು ಹೆಸರಿಸುತ್ತಿದ್ದೇನೆ ಎಂದು ಮೂಡಿ ತಿಳಿಸಿದ್ದಾರೆ. ಹೀಗಾಗಿ ಟಾಪ್ ಆರ್ಡರ್ ಅಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಅವರನ್ನು ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಮೊದಲಿಗೆ ಎಡಗೈ ಮತ್ತು ಬಲಗೈ ಬ್ಯಾಟಿಂಗ್ ಟಾಮ್ ಒತ್ತು ನೀಡಿದ್ದಾರೆ.

    ಆರಂಭಿಕರ ನಂತರ ಮೂರನೇ ಕ್ರಮಾಂಕದಲ್ಲಿ ಭಾರತದ ನಾಯಕ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದಾರೆ. ನಂತರ ನಾಲ್ಕನೇ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ದೈತ್ಯ ಬ್ಯಾಟ್ಸ್ ಮ್ಯಾನ್  ಎಬಿಡಿ ವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಬಳಿಕ ವಿಕೆಟ್ ಕೀಪರ್ ಅನ್ನು ಆಯ್ಕೆ ಮಾಡಿದ್ದು, ನನಗೆ ವೈಯಕ್ತಿವಾಗಿ ಇಂಗ್ಲೆಂಡ್‍ನ ಜೋಸ್ ಬಟ್ಲರ್ ಇಷ್ಟ ಆದರೆ ಕೋಚ್ ಆಗಿ ಆ ಕ್ರಮಾಂಕಕ್ಕೆ ಎಡಗೈ ಬ್ಯಾಟ್ಸ್ ಮ್ಯಾನ್ ಬೇಕಾಗಿರುವ ಕಾರಣ ವೆಸ್ಟ್ ಇಂಡೀಸ್‍ನ ನಿಕೋಲಸ್ ಪೂರನ್ ಅವರನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ.

    ಇದೇ ವೇಳೆ ತನ್ನ ಶ್ರೇಷ್ಠ ಟಿ-20 ತಂಡದಲ್ಲಿ ಭಾರತದ ಮಾಜಿ ನಾಯಕ ಧೋನಿ ಅವರನ್ನು ಆಯ್ಕೆ ಮಾಡದಕ್ಕೆ ಕಾರಣ ಹೇಳಿರುವ ಮೂಡಿ, ನಾನು ಈ ತಂಡವನ್ನು ಈಗಿನ ಪ್ರಸಕ್ತ ಸಮಯಕ್ಕೆ ಆಯ್ಕೆ ಮಾಡಿದ್ದೇನೆ. ಹೀಗಾಗಿ ಧೋನಿ ಅವರು ಈ ತಂಡಕ್ಕೆ ಬೇಡ. ಇಲ್ಲವಾದರೆ ಧೋನಿ ನನ್ನ ಮೊದಲ ಆಯ್ಕೆಯಾಗುತ್ತಿದ್ದರು. ನಾನು ಕೂಡ ಧೋನಿ ಅವರ ದೊಡ್ಡ ಅಭಿಮಾನಿ ಎಂದು ಮೂಡಿ ತಿಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆಲ್‍ರೌಂಡರ್ ಗೆ ಮಣೆ ಹಾಕಿರುವ ಮೂಡಿ ಆಂಡ್ರೆ ರೆಸಲ್, ಸುನಿಲ್ ನರೈನ್, ಮಿಚಲ್ ಸ್ಟಾರ್ಕ್, ರಶೀದ್ ಖಾನ್, ಜಸ್ಪ್ರೀತ್ ಬೂಮ್ರಾ ಮತ್ತು ಜೋಫ್ರಾ ಆರ್ಚರ್ ಅವರನ್ನು ಆಯ್ಕೆ ಮಾಡಿದ್ದಾರೆ.

    ಮೂಡಿ ಟಿ-20 ತಂಡ
    ರೋಹಿತ್ ಶರ್ಮಾ(ನಾಯಕ), ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಮಿಚೆಲ್ ಸ್ಟಾರ್ಕ್, ರಶೀದ್ ಖಾನ್, ಜಸ್ಪ್ರೀತ್ ಬೂಮ್ರಾ, ಜೋಫ್ರಾ ಆರ್ಚರ್ (ರವೀಂದ್ರ ಜಡೇಜಾ ಹನ್ನೆರಡನೇ ಆಟಗಾರ).