Tag: ಟಿ20

  • 1 ಪಂದ್ಯದ ಆಟದಿಂದ ಕೊಹ್ಲಿ, ಸಾಲ್ಟ್‌ ಹಿಂದಿಕ್ಕಿ ಟಿ20ಯಲ್ಲಿ ಅಭಿಷೇಕ್‌ ಶರ್ಮಾ ವಿಶ್ವದಾಖಲೆ

    1 ಪಂದ್ಯದ ಆಟದಿಂದ ಕೊಹ್ಲಿ, ಸಾಲ್ಟ್‌ ಹಿಂದಿಕ್ಕಿ ಟಿ20ಯಲ್ಲಿ ಅಭಿಷೇಕ್‌ ಶರ್ಮಾ ವಿಶ್ವದಾಖಲೆ

    ದುಬೈ: ಏಷ್ಯಾ ಕಪ್‌ನಲ್ಲಿ (Asia Cup) ಸಿಕ್ಸ್‌, ಬೌಂಡರಿ ಸಿಡಿಸಿ ಸದ್ದು ಮಾಡಿದ ಅಭಿಷೇಕ್‌ ಶರ್ಮಾ (Abhishek Sharma) ಐಸಿಸಿ ಟಿ20 (ICC T20) ರ‍್ಯಾಕ್‌ ಪಟ್ಟಿಯಲ್ಲಿ ವಿಶ್ವದಾಖಲೆ (World Record) ಮಾಡಿದ್ದಾರೆ.

    25 ವರ್ಷದ ಅಭಿಷೇಕ್‌ ಶರ್ಮಾ ಮೊದಲ ಸ್ಥಾನ ಪಡೆದಿದ್ದು ಅಲ್ಲದೇ 926 ರೇಟಿಂಗ್‌ ಪಾಯಿಂಟ್‌ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಇಲ್ಲಿಯವರೆಗೆ 2020 ರಲ್ಲಿ ಇಂಗ್ಲೆಂಡಿನ ಡೇವಿಡ್‌ ಮಲಾನ್‌ 919 ರೇಟಿಂಗ್‌ ಪಾಯಿಂಟ್‌ ಪಡೆದಿದ್ದು ಇದೂವರೆಗಿನ ದಾಖಲೆಯಾಗಿತ್ತು. ಆದರೆ ಏಷ್ಯಾ ಕಪ್‌ನ 7 ಪಂದ್ಯಗಳಿಂದ 314 ರನ್‌ ಸಿಡಿಸಿದ್ದರಿಂದ ವಿಶ್ವದಾಖಲೆ ನಿರ್ಮಾಣವಾಗಿದೆ.  ಇದನ್ನೂ ಓದಿಬಿಸಿಸಿಐ ಮುಂದೆ ಮಂಡಿಯೂರಿದ ಪಾಕ್‌ ಸಚಿವ – ಕದ್ದೊಯ್ದಿದ್ದ ಏಷ್ಯಾ ಕಪ್‌ ವಾಪಸ್‌

    ವಿರಾಟ್‌ ಕೊಹ್ಲಿ ಈ ಹಿಂದೆ 909 ರೇಟಿಂಗ್‌ ಪಾಯಿಂಟ್‌ ಪಡೆದಿದ್ದರು. ಇದು ಈವರೆಗಿನ ಭಾರತೀಯ ಬ್ಯಾಟರ್‌ನ ಅತ್ಯುತ್ತಮ ರೇಟಿಂಗ್‌ ಪಾಯಿಂಟ್‌ ಆಗಿತ್ತು. ಆದರೆ ಈಗ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಷೇಕ್‌ ಶರ್ಮಾ ಮುರಿದಿದ್ದಾರೆ.

    ಸೂಪರ್‌ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶರ್ಮಾ 31 ಎಸೆತಗಳಲ್ಲಿ 61 ರನ್‌ (8 ಬೌಂಡರಿ, 2 ಸಿಕ್ಸ್‌) ಸಿಡಿಸಿದ್ದರು. ಈ ಸ್ಫೋಟಕ ಆಟದಿಂದಾಗಿ ಅಭಿಷೇಕ್‌ ಶರ್ಮಾ ಅವರ ರೇಟಿಂಗ್‌ ಪಾಯಿಂಟ್‌ ರಾಕೆಟ್‌ನಂತೆ ಮೇಲಕ್ಕೆ ಹೋಗಿದೆ.

    ಅಂಕಪಟ್ಟಿಯಲ್ಲಿ ಫಿಲ್‌ ಸಾಲ್ಟ್‌ 2ನೇ ರ‍್ಯಾಕ್‌ ಪಡೆದರೆ ತಿಲಕ್‌ ವರ್ಮಾ ಮೂರನೇ ಸ್ಥಾನ ಪಡೆದಿದ್ದಾರೆ. 2 ಸ್ಥಾನ ಕುಸಿದಿದ್ದರಿಂದ ಸೂರ್ಯಕುಮಾರ್‌ ಯಾದವ್‌ 8ನೇ ಸ್ಥಾನಕ್ಕೆ ಜಾರಿದ್ದಾರೆ.

  • ಏಕದಿನಕ್ಕೆ ಆಸೀಸ್‌ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ ದಿಢೀರ್‌ ನಿವೃತ್ತಿ

    ಏಕದಿನಕ್ಕೆ ಆಸೀಸ್‌ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ ದಿಢೀರ್‌ ನಿವೃತ್ತಿ

    ಮೆಲ್ಬರ್ನ್‌: ಆಸ್ಟ್ರೇಲಿಯಾದ (Australia) ಆಲ್‌ರೌಂಡರ್ 36 ವರ್ಷದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ (ODI cricket) ನಿವೃತ್ತಿ ಹೇಳಿದ್ದಾರೆ.

    2026 ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ ಕ್ರಿಕೆಟ್‌ (T20 world Cup) ಗಮನದಲ್ಲಿಟ್ಟುಕೊಂಡು ಫೈನಲ್ ವರ್ಡ್ ಪಾಡ್‌ಕ್ಯಾಸ್ಟ್‌ನಲ್ಲಿ ಮ್ಯಾಕ್ಸ್‌ವೆಲ್‌ ಮಹತ್ವದ ನಿವೃತ್ತಿ ನಿರ್ಧಾರ ಪ್ರಕಟಿಸಿದರು.

    2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್ ಸೋತಿತ್ತು. ಈ ಸೋಲಿನ ನಂತರ ಮಾಜಿ ನಾಯಕ ಸ್ವೀವ್‌ಸ್ಮಿತ್‌ ಏಕದಿನ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದರು. ಈಗ ಅವರ ಸಾಲಿಗೆ ಮ್ಯಾಕ್ಸ್‌ವೆಲ್‌ ಸೇರಿದ್ದಾರೆ. ಇದನ್ನೂ ಓದಿ: ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

    ಮ್ಯಾಕ್ಸ್‌ವೆಲ್‌ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳಿಲ್ಲ. ಆದರೆ ಕೊನೆಯ ಬಾರಿಗೆ ಮ್ಯಾಕ್ಸ್‌ವೆಲ್‌ ಟೆಸ್ಟ್‌ ಆಡಿದ್ದು 2017 ರಲ್ಲಿ. ನಂತರ ಅವರು ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆ ಆಗಿಲ್ಲ.

    ಒಟ್ಟು 149 ಏಕದಿನ ಪಂದ್ಯವಾಡಿರುವ ಮ್ಯಾಕ್ಸ್‌ವೆಲ್‌ 136 ಇನ್ನಿಂಗ್ಸ್‌ಗಳಿಂದ 33.81 ಸರಾಸರಿಯಲ್ಲಿ 3,990 ರನ್‌ ಹೊಡೆದಿದ್ದಾರೆ. ಈ ಆಟದಲ್ಲಿ 4 ಶತಕ, 23 ಅರ್ಧಶತಕ ಬಾರಿಸಿದ್ದಾರೆ. 77 ವಿಕೆಟ್‌ ಪಡೆದಿದ್ದಾರೆ.

    ಮ್ಯಾಕ್ಸ್‌ವೆಲ್‌ ಹಲವು ನೆನಪಿನಲ್ಲಿ ಉಳಿಯುವ ಆಟವಾಡಿದ್ದಾರೆ. 2023ರ ವಿಶ್ವಕಪ್‌ನ ಮುಂಬೈನಲ್ಲಿ ನಡೆದ ಲೀಗ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 5 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿತ್ತು. ನಂತರ ಬ್ಯಾಟ್‌ ಬೀಸಿದ್ದ ಆಸ್ಟ್ರೇಲಿಯಾ 91 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮುರಿಯದ 8ನೇ ವಿಕೆಟಿಗೆ ಮ್ಯಾಕ್ಸ್‌ವೆಲ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ 170 ಎಸೆತಗಳಲ್ಲಿ 202 ರನ್‌ ಜೊತೆಯಾಟವಾಡಿದ್ದರು. ಈ ಪಂದ್ಯದಲ್ಲಿ ಮ್ಯಾಕ್ಸ್‌ ಔಟಾಗದೇ 201 ರನ್‌(128 ಎಸೆತ, 21 ಬೌಂಡರಿ, 10 ಸಿಕ್ಸ್‌ ) ಸಿಡಿಸಿದ್ದರು.

    ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಮ್ಯಾಕ್ಸ್‌ವೆಲ್‌ 8 ಪಂದ್ಯಗಳಿಂದ 48 ರನ್‌ ಹೊಡೆದಿದ್ದರು. ಪಂದ್ಯದ ಮಧ್ಯೆ ಕೈ ಬೆರಳಿಗೆ ಗಾಯವಾಗಿದ್ದರಿಂದ ಮ್ಯಾಕ್ಸ್‌ವೆಲ್‌ ತಂಡವನ್ನು ತೊರೆದಿದ್ದರು.

  • ಬ್ಯಾಟಿಂಗ್‌, ಬೌಲಿಂಗ್‌ ಪರಾಕ್ರಮ, ಆಂಗ್ಲ ಪಡೆ ತತ್ತರ – ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಭಾರತ

    ಬ್ಯಾಟಿಂಗ್‌, ಬೌಲಿಂಗ್‌ ಪರಾಕ್ರಮ, ಆಂಗ್ಲ ಪಡೆ ತತ್ತರ – ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಭಾರತ

    ಪುಣೆ: ಶಿವಂ ದುಬೆ, ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ ಪರಾಕ್ರಮ, ರವಿ ಬಿಷ್ಣೋಯಿ, ಹರ್ಷಿತ್‌ ರಾಣಾ ಉರಿ ಚೆಂಡಿನ ದಾಳಿ ನೆರವಿನಿಂದ ಭಾರತ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 15 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 3-1 ಮುನ್ನಡೆ ಕಾಯ್ದುಕೊಂಡಿದ್ದು, ಸರಣಿ ಕೈವಶ ಮಾಡಿಕೊಂಡಿತು.

    19ನೇ ಓವರ್‌ ರೋಚಕ:
    ಕೊನೇ 12 ಎಸೆತಗಳಲ್ಲಿ ಇಂಗ್ಲೆಂಡ್‌ ಗೆಲುವಿಗೆ 25 ರನ್‌ ಅಗತ್ಯವಿತ್ತು. ಹರ್ಷಿತ್‌ ರಾಣಾ ಬೌಲಿಂಗ್‌ನಲ್ಲಿದ್ದರೆ, ಕೊನೆಯ ಬ್ಯಾಟಿಂಗ್‌ ಭರವಸೆಯಾಗಿದ್ದ ಜೇಮೀ ಓವರ್ಟನ್ ಕ್ರೀಸ್‌ನಲ್ಲಿದ್ದರು. ಹರ್ಷಿತ್‌ ರಾಣಾ ಮೊದಲ ಎಸೆತವನ್ನೇ ಓವರ್ಟನ್‌ ಬೌಂಡರಿಗಟ್ಟಿದರು. ಬಳಿಕ 2ನೇ ಬಾಲ್‌ ಡಾಟ್‌ ಆಯಿತು. 3ನೇ ಎಸೆತದಲ್ಲಿ 2 ರನ್‌ ಕದ್ದಾಗ ಪಂದ್ಯ ಕೊಂಚವೇ ಇಂಗ್ಲೆಂಡ್‌ನತ್ತ ವಾಲುತ್ತಿತ್ತು. ಆದ್ರೆ 4, 5ನೇ ಎಸೆತದಲ್ಲಿ ಯಾವುದೇ ರನ್‌ ಬಿಟ್ಟುಕೊಡದ ರಾಣಾ 6ನೇ ಎಸೆತದಲ್ಲಿ ಓವರ್ಟನ್‌ ವಿಕೆಟ್‌ ಉಡೀಸ್‌ ಮಾಡಿದ್ರು. ಇದರೊಂದಿಗೆ ಇಂಗ್ಲೆಂಡ್‌ ತಂಡದ ಗೆಲುವೂ ಕಸಿಯಿತು.

    ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿಂದು ನಡೆದ 4ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತ್ತು. 181 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 19.4 ಓವರ್‌ಗಳಲ್ಲಿ 166 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಇಂಗ್ಲೆಂಡ್‌ ಆರಂಭದಲ್ಲೇ ಅಬ್ಬರಿಸಲು ಶುರು ಮಾಡಿತು. ಆರಂಭಿಕರಾದ ಫಿಲ್‌ ಸಾಲ್ಟ್‌ ಹಾಗೂ ಬೆನ್‌ ಡಕೆಟ್‌ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಶುರು ಮಾಡಿದರು. ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಈ ಜೋಡಿ ಮೊದಲ ವಿಕೆಟ್‌ಗೆ 62 ರನ್‌ ಗಳಿಸಿತ್ತು. ಡಕೆಟ್‌ 19 ಎಸೆತಗಳಲ್ಲಿ 39 ರನ್‌ ಚಚ್ಚಿದ್ರೆ, ಸಾಲ್ಟ್‌ 21 ಎಸೆತಗಳಲ್ಲಿ ಕೇವಲ 23 ರನ್‌ ಸಿಡಿಸಿದ್ರು. ಆದ್ರೆ ಬೆಂಕಿ ಆಟವಾಡುತ್ತಿದ್ದ ಡಕೆಟ್‌ ವೇಗಕ್ಕೆ ರವಿ ಬಿಷ್ಣೋಯಿ ಬ್ರೇಕ್‌ ಹಾಕಿ ಪೆವಿಲಿಯನ್‌ಗೆ ದಾರಿ ತೋರಿದರು. ಆರಂಭಿಕ ಜೋಡಿ ಔಟಾಗುತ್ತಿದ್ದಂತೆ ಜೋಸ್‌ ಬಟ್ಲರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಾಕೋಬ್‌ ಬೇಥೆಲ್‌ ಹಾಗೂ ಆಲ್‌ರೌಂಡರ್‌ ಬ್ರೈಡನ್ ಕಾರ್ಸ್ ಅವರ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಕಳೆದುಕೊಂಡು ಇಂಗ್ಲೆಂಡ್‌ ಸಂಕಷ್ಟಕ್ಕೀಡಾಯಿತು.

    ಬ್ರೂಕ್‌ ಸ್ಫೋಟಕ ಬ್ಯಾಟಿಂಗ್‌:
    ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಇಂಗ್ಲೆಂಡ್‌ ತಂಡಕ್ಕೆ ಹ್ಯಾರಿ ಬ್ರೂಕ್‌ ಅವರ ಅರ್ಧಶತಕ ಬಲ ತುಂಬಿತು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೂಕ್‌ 26 ಎಸೆತಗಳಲ್ಲಿ ಸ್ಫೋಟಕ 51 ರನ್‌ (5 ಬೌಂಡರಿ, 2 ಸಿಕ್ಸರ್)‌ ಚಚ್ಚಿದರು. ಇದು ಇಂಗ್ಲೆಂಡ್‌ ತಂಡಕ್ಕೆ ಜೀವದಾನ ನೀಡಿತ್ತು. ಹ್ಯಾರಿ ಬ್ರೂಕ್‌ ವಿಕೆಟ್‌ ಬೀಳುತ್ತಿದ್ದಂತೆ ಮತ್ತೆ ಉಳಿದ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಿದರು. ಆದ್ರೆ ಕ್ರೀಸ್‌ನಲ್ಲಿದ್ದ ಆಲ್‌ರೌಂಡರ್‌ ಜೇಮೀ ಓವರ್ಟನ್ (19 ರನ್‌ ಗಳಿಸಿ) ಇಂಗ್ಲೆಂಡ್‌ ತಂಡಕ್ಕೆ ಗೆಲುವು ತಂದುಕೊಡುವ ನಿರೀಕ್ಷೆ ಹೆಚ್ಚಿಸಿದ್ದರು. ಈ ವೇಳೆ ಟೀಂ ಇಂಡಿಯಾ ವೇಗಿ ಹರ್ಷಿತ್‌ ರಾಣಾ 19ನೇ ಓವರ್‌ನ ಕೊನೇ ಎಸೆತದಲ್ಲಿ ಓವರ್ಟನ್‌ಗೆ ಪೆವಿಲಿಯನ್‌ ದಾರಿ ತೋರಿ ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 181 ರನ್‌ ಗಳಿಸಿತ್ತು. ಮೊದಲ 12 ರನ್‌ಗಳಿಗೆ 3 ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಭಾರತ ತಂಡಕ್ಕೆ ಒಂದೆಡೆ ಅಭಿಷೇಕ್‌ ಶರ್ಮಾ, ರಿಂಕು ಸಿಂಗ್‌, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು.

    ಪಾಂಡ್ಯ, ದುಬೆ ಅರ್ಧಶತಕಗಳ ಬ್ಯಾಟಿಂಗ್‌:
    ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಪಾಂಡ್ಯ ಇಂಗ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದರು. 27 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ ಸ್ಫೋಟಕ ಅರ್ಧಶತಕ ಸಿಡಿಸಿದ್ರು. ಒಟ್ಟು 30 ಎಸೆತಗಳಲ್ಲಿ 53 ರನ್‌ ಸಿಡಿಸಿ ಔಟಾದರು. ಇದರೊಂದಿಗೆ ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಶಿವಂ ದುಬೆ 34 ಎಸೆತಗಳಲ್ಲಿ 53 ರನ್‌ (7 ಬೌಂಡರಿ, 2 ಸಿಕ್ಸರ್)‌ ಚಚ್ಚಿದರು. ಇದರೊಂದಿಗೆ ಅಭಿಷೇಕ್‌ ಶರ್ಮಾ 29 ರನ್‌, ರಿಂಕು ಸಿಂಗ್‌ 30 ರನ್‌ಗಳ ಕೊಡುಗೆ ನೀಡಿದರು.

  • ಒಂದೇ ಓವರ್‌ನಲ್ಲಿ 39 ರನ್ – ಯುವರಾಜ್ ಸಿಂಗ್ ದಾಖಲೆ ಮುರಿದ ಡೇರಿಯಸ್

    ಒಂದೇ ಓವರ್‌ನಲ್ಲಿ 39 ರನ್ – ಯುವರಾಜ್ ಸಿಂಗ್ ದಾಖಲೆ ಮುರಿದ ಡೇರಿಯಸ್

    ಅಪಿಯಾ: ಟಿ20 ಪಂದ್ಯವೊಂದರಲ್ಲಿ (T20) ಸೋಮೊವಾದ ಡೇರಿಯಸ್ ವಿಸ್ಸೆರ್ (Samoa Darius Visser) ಅವರು ಒಂದೇ ಓವರ್‌ನಲ್ಲಿ 39 ರನ್ ಬಾರಿಸುವ ಮೂಲಕ ಯುವರಾಜ್ ಸಿಂಗ್ (Yuvraj Singh) ಅವರ ದಾಖಲೆ ಮುರಿದಿದ್ದಾರೆ.

    ಸೋಮೊವಾ ತಂಡದ ಪರವಾಗಿ ಡೇರಿಯಸ್ ವಿಸ್ಸೆರ್ ಆಡುತ್ತಿದ್ದರು. ಅಪಿಯಾದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ವನವಾಟು (Vanuatu) ತಂಡದ ವಿರುದ್ಧ ಆಟವಾಡಿದ ಅವರು 15ನೇ ಓವರ್‌ವೊಂದರಲ್ಲೇ 39 ರನ್ ಚಚ್ಚಿದ್ದರು. ಈ ಮೂಲಕ ಅವರು ಯುವರಾಜ್ ಸಿಂಗ್ ಮತ್ತು ಕ್ರಿಸ್ ಗೇಲ್ (chris gayle) ಅವರ ದಾಖಲೆ ಮುರಿದಿದ್ದಾರೆ.ಇದನ್ನೂ ಓದಿ: ಮುಟ್ಟಾಗಿದ್ದರೂ ನಿಗದಿತ ತೂಕ ಹೊಂದಿರಬೇಕು, ತೂಕದ ಮಾಪಕದಲ್ಲಿ ದೋಷವಿಲ್ಲ: ಫೋಗಟ್‌ ಅನರ್ಹತೆಗೆ ಕಾರಣ ನೀಡಿದ CAS

    39 ರನ್ ಹೇಗೆ?
    ನಳಿನ್ ನಿಪೀಕೊ (Nalin Nipiko) ಎಸೆದ 15ನೇ ಓವರ್‌ನಲ್ಲಿ 39 ರನ್ ಬಂದಿದೆ. ನೀಪಿಕೊ ಎಸೆದ ಮೊದಲ ಮೂರು ಬಾಲ್‌ಗಳನ್ನು ವಿಸ್ಸೆರ್ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದರು. ಇದರಿಂದ ಕೊಂಚ ಮಾನಸಿಕವಾಗಿ ಕುಗ್ಗಿದ ನೀಪಿಕೊ ನಾಲ್ಕನೇ ಎಸೆತ ನೋ ಬಾಲ್ (NoBall) ಹಾಕಿದರು. ನಂತರದ ಬಾಲ್ ಫ್ರೀ ಹಿಟ್ (Free Hit) ಸಿಕ್ಕ ಕಾರಣ ವಿಸ್ಸೆರ್ ಮತ್ತೆ ಸಿಕ್ಸ್ ಸಿಡಿಸಿದರು.

     

    ಐದನೇ ಬಾಲ್ ಡಾಟ್ ಆಗಿದ್ದರಿಂದ ವನವಾಟು ತಂಡದ ಆಟಗಾರರು ಸ್ವಲ್ಪ ನಿಟ್ಟುಸಿರು ಬಿಟ್ಟರು. ಆದರೆ ಅವರ ಸಂತಸ ಹೆಚ್ಚು ಸಮಯವಿರಲಿಲ್ಲ. ಆರನೇ ಎಸೆತ ನೋಬಾಲ್ ಆಗಿದ್ದರಿಂದ ಇತರೇ ರೂಪದಲ್ಲಿ 1 ರನ್ ಬಂತು. ನಂತರದ ಫ್ರಿ ಹಿಟ್ ಎಸೆತ ನೋಬಾಲ್ ಆಗಿದ್ದರಿಂದ 7 ರನ್ ಬಂತು. ಕೊನೆಯ ಎಸೆತವನ್ನು ವಿಸ್ಸೆರ್ ಸಿಕ್ಸರ್‌ಗೆ ಅಟ್ಟಿದ ಪರಿಣಾಮ ಒಂದೇ ಓವರ್‌ನಲ್ಲಿ 39 ರನ್ ಬಂದಿದೆ.ಇದನ್ನೂ ಓದಿ: ಐಪಿಎಲ್‌ನಲ್ಲಿ ತನ್ನ ನೆಚ್ಚಿನ ಪ್ರತಿಸ್ಪರ್ಧಿ ತಂಡವನ್ನು ರಿವೀಲ್ ಮಾಡಿದ ಕೊಹ್ಲಿ

    2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ (England) ಬೌಲರ್ ಸ್ಟುವರ್ಟ್ ಬ್ರಾಡ್ (Stuart Broad) ಅವರ 6 ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ವಿಶ್ವ ದಾಖಲೆ ನಿರ್ಮಿಸಿದ್ದರು.

  • ಗಿಲ್‌, ಗಾಯಕ್‌ವಾಡ್‌ ಸ್ಫೋಟಕ ಆಟ – ಟೀಂ ಇಂಡಿಯಾಗೆ 23 ರನ್‌ಗಳ ಜಯ

    ಗಿಲ್‌, ಗಾಯಕ್‌ವಾಡ್‌ ಸ್ಫೋಟಕ ಆಟ – ಟೀಂ ಇಂಡಿಯಾಗೆ 23 ರನ್‌ಗಳ ಜಯ

    –  3 ವಿಕೆಟ್‌ ಕಿತ್ತ ವಾಷಿಂಗ್ಟನ್‌ ಸುಂದರ್‌

    ಹರಾರೆ: ನಾಯಕ ಶುಭಮನ್‌ ಗಿಲ್‌ ಮತ್ತು ಋತುರಾಜ್‌ ಗಾಯಕ್‌ವಾಡ್‌ ಅವರ ಸ್ಫೋಟಕ ಆಟ ಮತ್ತು ಬೌಲರ್‌ಗಳ ಸಂಘಟಿತ ಪ್ರಯತ್ನದಿಂದಾಗಿ ಜಿಂಬಾಬ್ವೆ (Zimbabwe) ವಿರುದ್ಧದ ಮೂರನೇ ಟಿ20 (T20) ಪಂದ್ಯವನ್ನು ಭಾರತ (Team India) 23 ರನ್‌ಗಳಿಂದ ಜಯಗಳಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ರಲ್ಲಿ ಮುನ್ನಡೆ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ 4 ವಿಕೆಟ್‌ ನಷ್ಟಕ್ಕೆ 182 ರನ್‌ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 159 ರನ್‌ ಹೊಡೆದು ಸೋಲನ್ನೊಪ್ಪಿಕೊಂಡಿತು. ಇದನ್ನೂ ಓದಿ: 2.5 ಕೋಟಿ ನಗದು ಬಹುಮಾನ ನಿರಾಕರಿಸಿದ ದ್ರಾವಿಡ್‌ – ಕನ್ನಡಿಗನ ನಡೆಗೆ ವ್ಯಾಪಕ ಮೆಚ್ಚುಗೆ!

    ಜಿಂಬಾಬ್ವೆ ಪರ ಡಿಯೋನ್ ಮೈಯರ್ಸ್ ಔಟಾಗದೇ 65 ರನ್‌ (49 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಸಿಡಿಸಿದರೆ ಕ್ಲೈವ್ ಮದಂಡೆ 37 ರನ್‌ (26 ಎಸೆತ, 2 ಬೌಂಡರಿ, 2 ಸಿಕ್ಸರ್)‌ ಹೊಡೆದು ಔಟಾದರು. ವಾಷಿಂಗ್ಟನ್‌ ಸುಂದರ್‌ 3 ವಿಕೆಟ್‌, ಅವೇಶ್‌ ಖಾನ್‌ 2 , ಖಲೀಲ್‌ ಅಹ್ಮದ್‌ ತಲಾ ಒಂದು ವಿಕೆಟ್‌ ಪಡೆದರು.

    ಭಾರತದ ಪರ ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್‌ (Yashasvi Jaiswal) ಮತ್ತು ನಾಯಕ ಶುಭಮನ್‌ ಗಿಲ್‌ (Shubman Gill) 67 ರನ್‌ ಜೊತೆಯಾಟವಾಡಿದರು. ಜೈಸ್ವಾಲ್‌ 36 ರನ್‌(27 ಎಸೆತ, 4 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರೆ ಶುಭಮನ್‌ ಗಿಲ್‌ 66 ರನ್‌(49 ಎಸೆತ, 7 ಬೌಂಡರಿ, 3 ಸಿಕ್ಸ್‌) ಗಾಯಕ್‌ವಾಡ್‌ 49 ರನ್‌ (28 ಎಸೆತ, 4 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಔಟಾದರು.

    ಮೊದಲ ಪಂದ್ಯವನ್ನು ಜಿಂಬಾಬ್ವೆ 13 ರನ್‌ಗಳಿಂದ ಗೆದ್ದರೆ ಎರಡನೇ ಪಂದ್ಯವನ್ನು ಭಾರತ 100 ರನ್‌ಗಳಿಂದ ಗೆದ್ದುಕೊಂಡಿತ್ತು. ನಾಲ್ಕನೇ ಟಿ20 ಪಂದ್ಯ ಶನಿವಾರ ನಡೆಯಲಿದೆ.

  • ವಿಶ್ವಕಪ್ ಗೆದ್ದ ಭಾರತ- ಸಂಭ್ರಮಿಸಿದ ಸಿನಿತಾರೆಯರು

    ವಿಶ್ವಕಪ್ ಗೆದ್ದ ಭಾರತ- ಸಂಭ್ರಮಿಸಿದ ಸಿನಿತಾರೆಯರು

    ಭಾರತ ಕ್ರಿಕೆಟ್ ತಂಡ 2ನೇ ಬಾರಿ ಟಿ20 ವಿಶ್ವಕಪ್ ಎತ್ತಿ ಹಿಡಿದಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ರೋಹಿತ್ ಶರ್ಮಾ ನೇತೃತ್ವದ ತಂಡ ಗೆದ್ದು ಬೀಗಿದೆ. ಹೀಗಿರುವಾಗ ವಿಶ್ವಕಪ್ (World Cup 2024) ಭಾರತ ಕ್ರಿಕೆಟ್ ತಂಡದ ಸಾಧನೆಗೆ ಸಿನಿತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.

    ರೋಹಿತ್ ಶರ್ಮಾ ತಂಡವನ್ನು ಯಶ್‌ ಕೊಂಡಾಡಿದ್ದಾರೆ. ಇತಿಹಾಸದಲ್ಲಿ ಕೆತ್ತಿದ ಗೆಲುವು. ಟಿ20 ವಿಶ್ವಕಪ್ 2024 ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ‘ಜೈ ಹಿಂದ್’ ಎಂದು ನ್ಯಾಷನಲ್ ಸ್ಟಾರ್ ಯಶ್ (Yash) ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಭಾರತ ತಂಡದ ಸಾಧನೆ ಬಗ್ಗೆ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಪ್ರತಿಕ್ರಿಯಿಸಿದ್ದಾರೆ. ಈಗ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದೆ. ಅಭಿನಂದನೆಗಳು ಟೀಂ ಇಂಡಿಯಾ ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದಾರೆ. ಇದನ್ನೂ ಓದಿ:ಜನಪ್ರಿಯ ವಾಹಿನಿಯಲ್ಲಿ ಧಾರಾವಾಹಿ ಆಯ್ತು ರೇಣುಕಾಸ್ವಾಮಿ ಮರ್ಡರ್

     

    View this post on Instagram

     

    A post shared by Vinay Gowda (@vinaygowdaactor)


    ರಾಹುಲ್ ದ್ರಾವಿಡ್ ಅವರಿಗೆ ಅದ್ಭುತವಾಗಿ ವಿದಾಯ ಹೇಳಲಾಗಿದೆ. ಬಹಳ ಬಹಳ ಬಹಳ ಹೆಮ್ಮೆಯಾಗುತ್ತಿದೆ ಸರ್, ಘನತೆಯ ಶಿಖರ ಇದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರುಗಳು ನಮ್ಮ ಹೀರೋಗಳಾಗಿ ಹೊರಹೊಮ್ಮಿದ್ದಕ್ಕೆ ಧನ್ಯವಾದ ಹಾಗೂ ಆ ಕೊನೆಯ ಓವರ್‌ನಲ್ಲಿ ಅದ್ಭುತ ಕ್ಯಾಚ್ ಪಡೆದ ಸೂರ್ಯಕುಮಾರ್ ಯಾದವ್‌ಗೆ ವಿಶೇಷ ಧನ್ಯವಾದ ಎಂದಿದ್ದಾರೆ ಕಿಚ್ಚ ಸುದೀಪ್. ಅದಷ್ಟೇ ಅಲ್ಲ, ತಮ್ಮ ನಿವಾಸದಲ್ಲಿ ಆಪ್ತರಾದ ಚಕ್ರವರ್ತಿ ಚಂದ್ರಚೂಡ್, ವಿನಯ್ ಗೌಡ, ನಟ ಪ್ರದೀಪ್ ಜೊತೆ ಪಂದ್ಯ ವೀಕ್ಷಿಸಿ ಸುದೀಪ್ (Sudeep) ಸಂಭ್ರಮಿಸಿದ್ದಾರೆ.

     

    View this post on Instagram

     

    A post shared by DrShivaRajkumar (@nimmashivarajkumar)

    ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, ಗೋಡೆ ಮೇಲೆ ವರ್ಲ್ಡ್ ಕಪ್ ಇಡೋರ್ ಆಗಬೇಕು ಎಂದು ನಟ ಶಿವರಾಜ್‌ಕುಮಾರ್ ಪೋಸ್ಟ್ ಮಾಡಿ ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ. ಅದಷ್ಟೇ ಅಲ್ಲ, ಐತಿಹಾಸಿಕ ವಿಜಯ ಎಂದು ರಿಷಬ್ ಶೆಟ್ಟಿ (Rishab Shetty) ಕೂಡ ಸಂಭ್ರಮಿಸಿದ್ದಾರೆ.

    ಇದು ನಮ್ಮದು, ನೀಲಿ ಉಡುಪು ತೊಟ್ಟ ನಮ್ಮ ಹೀರೋಗಳು ಇನ್ನು ಮುಂದೆ ವಿಶ್ವ ವಿಜೇತರು ಎಂದು ಕರೆಸಿಕೊಳ್ಳುತ್ತಾರೆ. ಆಟದ ಮೈದಾನದಲ್ಲಿ ನೀವು ತೋರಿದ ಛಾತಿಗೆ ತಲೆ ಬಾಗಿ ವಂದಿಸುತ್ತೇವೆ. ಸೂರ್ಯಕುಮಾರ್ ಯಾದವ್ ನೀವು ಹಿಡಿದ ಕ್ಯಾಚ್ ಕ್ರಿಕೆಟ್ ಇತಿಹಾಸವನ್ನು ಸೇರಿ ಆಗಿದೆ. ಈ ಐತಿಹಾಸಿಕ ಜಯದ ಬಗ್ಗೆ ಹೆಮ್ಮೆಯಿದೆ ಎಂದು ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅಭಿನಂದಿಸಿದ್ದಾರೆ.

  • ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ

    ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ

    ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಭಾರತ (Team India) ಎರಡನೇ ಟಿ20 ವಿಶ್ವಕಪ್‌ ಕ್ರಿಕೆಟ್‌ (T20 World Cup) ಗೆದ್ದ ಬೆನ್ನಲ್ಲೇ ವಿರಾಟ್‌ ಕೊಹ್ಲಿ (Virat Kohli) ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ವಿಕೆಟ್‌ ಉರುಳುತ್ತಿದ್ದಾಗ ಗಟ್ಟಿ ಬಂಡೆಯಂತೆ ನಿಂತು 76 ರನ್‌ (59 ಎಸೆತ, 6 ಬೌಂಡರಿ, 2 ಸಿಕ್ಸರ್‌) ಸಿಡಿಸಿದ ವಿರಟ್‌ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದನ್ನೂ ಓದಿ: ವಿಶ್ವಕಪ್‌ ಜೊತೆ ವಿಶ್ವದಾಖಲೆ – ಟೀಂ ಇಂಡಿಯಾದ ಸಾಧನೆ ಮುರಿಯುವುದು ಬಲು ಕಷ್ಟ

    ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇದು ನನ್ನ ಕೊನೆಯ ಟಿ 20 ವಿಶ್ವಕಪ್. ಇಲ್ಲಿಯವರೆಗೆ ಇದನ್ನೇ ಸಾಧಿಸಲು ನಾವು ಬಯಸುತ್ತಿದ್ದೆವು ಎಂದು ಹೇಳಿದರು.

    ಇದು ಭಾರತಕ್ಕಾಗಿ ಆಡುತ್ತಿರುವ ನನ್ನ ಕೊನೆಯ ಟಿ20 ಪಂದ್ಯ. ಮುಂದೆ ಯುವ ಪೀಳಿಗೆ ಕ್ರಿಕೆಟ್ ತಂಡದ ನೇತೃತ್ವ ವಹಿಸಿಕೊಳ್ಳಬೇಕು ಎಂದು ತಿಳಿಸಿ ಈ ಯಶಸ್ಸಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದ ಭಾರತ

  • ವಿಶ್ವಕಪ್‌ ಜೊತೆ ವಿಶ್ವದಾಖಲೆ – ಟೀಂ ಇಂಡಿಯಾದ ಸಾಧನೆ ಮುರಿಯುವುದು ಬಲು ಕಷ್ಟ

    ವಿಶ್ವಕಪ್‌ ಜೊತೆ ವಿಶ್ವದಾಖಲೆ – ಟೀಂ ಇಂಡಿಯಾದ ಸಾಧನೆ ಮುರಿಯುವುದು ಬಲು ಕಷ್ಟ

    ಸತತ 8 ಪಂದ್ಯಗಳನ್ನು ಗೆದ್ದು ದಾಖಲೆ

    ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಭಾರತ ಟಿ20 ಚಾಂಪಿಯನ್‌ (T20 Champion) ಆಗುವುದರ ಜೊತೆ ಟಿ20 ವಿಶ್ವಕಪ್‌ನಲ್ಲಿ ವಿಶ್ವದಾಖಲೆ (World Record) ನಿರ್ಮಿಸಿದೆ. ಟೂರ್ನಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಕಪ್‌ ಜಯಿಸಿದ ಏಕಮಾತ್ರ ತಂಡ ಎಂಬ ಹೆಗ್ಗಳಿಕೆಗೆ ಭಾರತ (Team India) ಪಾತ್ರವಾಗಿದೆ.

    ಹೌದು. ಭಾರತ (Team India) ಮತ್ತು ದಕ್ಷಿಣ ಆಫ್ರಿಕಾ (South Africa) ತಂಡಗಳು ಅಜೇಯವಾಗಿ ಫೈನಲ್‌ (Final) ಪ್ರವೇಶಿಸಿದ್ದವು. ಇದುವರೆಗಿನ ಟಿ20 ಇತಿಹಾಸದಲ್ಲಿ ಎರಡು ತಂಡಗಳು ಅಜೇಯವಾಗಿ ಫೈನಲ್‌ ತಲುಪಿರುವುದು ಇದೇ ಮೊದಲು. ಎರಡು ತಂಡಗಳು ಗುಂಪು, ಸೂಪರ್‌ 8 ವಿಭಾಗದಲ್ಲಿ ಅಗ್ರಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿತ್ತು. ಇದನ್ನೂ ಓದಿ: 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದ ಭಾರತ

    ದಕ್ಷಿಣ ಆಫ್ರಿಕಾ 8 ಜಯದೊಂದಿಗೆ ಫೈನಲ್‌ ಪ್ರವೇಶಿಸಿದ್ದರೆ ಗುಂಪು ಹಂತದಲ್ಲಿ ಕೆನಡಾದೊಂದಿಗಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 7 ಜಯದೊಂದಿಗೆ ಭಾರತ ಫೈನಲ್‌ ಪ್ರವೇಸಿಸಿತ್ತು. ಹೀಗಾಗಿ ಈ ಬಾರಿ ಯಾರೇ ಗೆದ್ದರೂ ಅಜೇಯವಾಗಿ ಟಿ20 ವಿಶ್ವಕಪ್‌ ಟ್ರೋಫಿ ಗೆದ್ದ ತಂಡ ಎಂಬ ವಿಶಿಷ್ಟ ಸಾಧನೆ ನಿರ್ಮಾಣವಾಗುತಿತ್ತು. ಇದನ್ನೂ ಓದಿ: ವಿಶ್ವ ವಿಜೇತ ಭಾರತ- ಟಿ20 ವಿಶ್ವಕಪ್‌ಗೆ ಈಗ ಟೀಂ ಇಂಡಿಯಾ ಬಾಸ್‌

    ಹಾಗೆ ನೋಡಿದರೆ ಭಾರತ ಕಠಿಣ ಎದುರಾಳಿ ತಂಡಗಳನ್ನು ಮಣಿಸಿ ಫೈನಲ್‌ ಪ್ರವೇಶಿಸಿತ್ತು. ಲೀಗ್‌ನಲ್ಲಿ ಪಾಕಿಸ್ತಾನ, ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಸೆಮಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಭಾರತ ಸೋಲಿಸಿತ್ತು. ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ, ಶ್ರೀಲಂಕಾ, ಸೂಪರ್‌ 8 ರಲ್ಲಿ ಇಂಗ್ಲೆಂಡ್‌, ವಿಂಡೀಸ್‌ ತಂಡವನ್ನು ಮಣಿಸಿತ್ತು. ಸೆಮಿಯಲ್ಲಿ ಅಫ್ಘಾನಿಸ್ತಾನ ದಕ್ಷಿಣ ಅಫ್ರಿಕಾಗೆ ಪ್ರಬಲ ಸ್ಪರ್ಧೆ ನೀಡಿರಲಿಲ್ಲ.

  • 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದ ಭಾರತ

    11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದ ಭಾರತ

    ಬ್ರಿಡ್ಜ್‌ಟೌನ್‌: 11 ವರ್ಷಗಳ ನಂತರ ಕೊನೆಗೂ ಭಾರತ ಐಸಿಸಿ ಟ್ರೋಫಿಯನ್ನು (ICC Trophy) ಗೆದ್ದುಕೊಂಡಿದೆ.

    ಹೌದು. 2013ರಲ್ಲಿ ಕೊನೆಯ ಬಾರಿಗೆ ಐಸಿಸಿ (ICC) ಆಯೋಜಿಸಿದ ಟ್ರೋಫಿಯನ್ನು ಭಾರತ ಗೆದ್ದುಕೊಂಡಿತ್ತು. ನಂತರ ಭಾರತ ಕಳೆದ 10 ವರ್ಷಗಳಿಂದ ಪ್ರಶಸ್ತಿಯ ಸನಿಹ ಬಂದು ಕೊನೆಯಲ್ಲಿ ಎಡವುತಿತ್ತು.

    2013 ರಲ್ಲಿ ಎಂಎಸ್‌ ಧೋನಿ (MS Dhoni) ನಾಯಕತ್ವದ ಭಾರತ ತಂಡ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಸ್ಟೇಡಿಯಂನಲ್ಲಿ ಇಂಗ್ಲೆಂಡ್‌ ತಂಡವನ್ನು ಕೇವಲ 5 ರನ್‌ಗಳಿಂದ ಮಣಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ಮುಡಿಗೇರಿಸಿಕೊಂಡಿತ್ತು. ಈ ಟ್ರೋಫಿಯ ಬಳಿಕ ಇಲ್ಲಿಯವರೆಗೆ ಐಸಿಸಿ ಆಯೋಜಿಸಿದ ಒಂದೇ ಒಂದು ಟ್ರೋಫಿಯನ್ನು ಗೆದ್ದುಕೊಂಡಿಲ್ಲ.

    ಅದರಲ್ಲೂ ಕಳೆದ 12 ತಿಂಗಳಿನಲ್ಲಿ ಭಾರತ ಮೂರು ಬಾರಿ ಫೈನಲ್‌ ಪ್ರವೇಶಿಸಿತ್ತು. ಕಳೆದ ವರ್ಷದ ಜೂನ್‌ನಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲಿನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ನಂತರ ಭಾರತದಲ್ಲಿ ನಡೆದ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ ಆಸೀಸ್‌ ವಿರುದ್ಧ ಸೋತಿತ್ತು. ಆದರೆ ಮೂರನೇ ಬಾರಿ ಫೈನಲ್‌ ಪ್ರವೇಶಿಸಿದ್ದ ಭಾರತ ಈ ಬಾರಿ ಟಿ20 ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

    ಯಾವ ವರ್ಷ ಏನಾಗಿತ್ತು?
    2014: ಟಿ20 ವಿಶ್ವಕಪ್‌
    ವಿಶ್ವಕಪ್‌ ಟಿ20 ಫೈನಲ್‌ನಲ್ಲಿ ಶ್ರೀಲಂಕಾ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಭಾರತ 4 ವಿಕೆಟ್‌ ನಷ್ಟಕ್ಕೆ 13 ರನ್‌ ಗಳಿಸಿದರೆ ಶ್ರೀಲಂಕಾ 4 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತ್ತು.

    2015: ವಿಶ್ವಕಪ್‌
    ವಿಶ್ವಕಪ್‌ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ 7 ವಿಕೆಟ್‌ ನಷ್ಟಕ್ಕೆ 328 ರನ್‌ ಹೊಡೆದರೆ ಭಾರತ 233 ರನ್‌ಗಳಿಗೆ ಆಲೌಟ್‌ ಆಗಿತ್ತು.

    2016: ಟಿ20 ವಿಶ್ವಕಪ್‌
    ಮುಂಬೈಯಲ್ಲಿ ನಡೆದ ಟಿ20 ಸೆಮಿಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್ ರೋಚಕ 7 ವಿಕೆಟ್‌ ಜಯ ಸಾಧಿಸಿತ್ತು. ಭಾರತ 2 ವಿಕೆಟ್‌ ನಷ್ಟಕ್ಕೆ 192 ರನ್‌ ಹೊಡೆದರೆ ವಿಂಡೀಸ್‌ 19.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆದಿತ್ತು.

    2017: ಐಸಿಸಿ ಚಾಂಪಿಯನ್ಸ್‌ ಟ್ರೋಫಿ
    ಐಸಿಸಿ ಚಾಂಪಿಯನ್‌ ಟ್ರೋಫಿ ಫೈನಲ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತಿತ್ತು. ಮೊದಲು ಬ್ಯಾಟ್‌ ಮಾಡಿದದ ಪಾಕಿಸ್ತಾನ 4 ವಿಕೆಟ್‌ ನಷ್ಟಕ್ಕೆ 338 ರನ್‌ ಹೊಡೆದರೆ ಭಾರತ 158 ರನ್‌ಗಳಿಗೆ ಆಲೌಟ್‌ ಆಗಿತ್ತು.

    2019: ವಿಶ್ವಕಪ್‌
    ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌ 239 ರನ್‌ ಗಳಿಸಿದ್ದರೆ ಭಾರತ 221 ರನ್‌ ಗಳಿಸಿ ಆಲೌಟ್‌ ಆಗಿತ್ತು. ಎಂಸ್‌ ಧೋನಿ ರನೌಟ್‌ ಆಗಿದ್ದು ಪಂದ್ಯದ ಗತಿಯನ್ನೇ ಬದಲಾಯಿಸಿತ್ತು. 92 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಧೋನಿ ಮತ್ತು ಜಡೇಜಾ 7ನೇ ವಿಕೆಟಿಗೆ 104 ಎಸೆತಗಳಲ್ಲಿ 116 ರನ್‌ ಜೊತೆಯಾಟವಾಡಿ ಪಂದ್ಯವನ್ನು ಭಾರತದತ್ತ ವಾಲಿಸಿದ್ದರು. ಧೋನಿ ರನೌಟ್‌ ಬಲಿಯಾಗುವ ವೇಳೆ ಭಾರತಕ್ಕೆ 10 ಎಸೆತಗಳಲ್ಲಿ 25 ರನ್‌ ಅಗತ್ಯವಿತ್ತು

    2021 ಟಿ20 ವಿಶ್ವಕಪ್‌
    ಐಸಿಸಿ ಟೂರ್ನಿ ಪೈಕಿ 2021 ಟಿ20 ವಿಶ್ವಕಪ್‌ನಲ್ಲಿ ಭಾರತ ಅತ್ಯಂತ ಕೆಟ್ಟ ಸಾಧನೆ ಮಾಡಿತ್ತು. ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ಗುಂಪು ಹಂತದಲ್ಲೇ ಹೊರ ಬಿದ್ದಿತ್ತು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸೋತಿದ್ದರೆ ಸ್ಕಾಟ್‌ಲ್ಯಾಂಡ್‌ ವಿರುದ್ಧ ಮಾತ್ರ ಗೆದ್ದಿತ್ತು.

    2022 ಟಿ20 ವಿಶ್ವಕಪ್‌
    ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಭಾರತ 6 ವಿಕೆಟ್‌ ನಷ್ಟಕ್ಕೆ 168 ರನ್‌ ಹೊಡೆದರೆ ಇಂಗ್ಲೆಂಡ್‌ ಕೇವಲ 16 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 170 ರನ್‌ ಹೊಡೆದಿತ್ತು.

    2023 ವಿಶ್ವಕಪ್‌
    ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯಗಳಿಸಿ ಕಪ್‌ ಗೆದ್ದುಕೊಂಡಿತ್ತು. ಭಾರತ 240 ರನ್‌ಗಳಿಗೆ ಆಲೌಟ್‌ ಆಗಿದ್ದರೆ ಆಸ್ಟ್ರೇಲಿಯಾ 4 ವಿಕೆಟ್‌ ನಷ್ಟಕ್ಕೆ 241 ರನ್‌ ಗಳಿಸಿತ್ತು.

  • ವಿಶ್ವ ವಿಜೇತ ಭಾರತ- ಟಿ20 ವಿಶ್ವಕಪ್‌ಗೆ ಈಗ ಟೀಂ ಇಂಡಿಯಾ ಬಾಸ್‌

    ವಿಶ್ವ ವಿಜೇತ ಭಾರತ- ಟಿ20 ವಿಶ್ವಕಪ್‌ಗೆ ಈಗ ಟೀಂ ಇಂಡಿಯಾ ಬಾಸ್‌

    – ಬುಮ್ರಾ ಮ್ಯಾಜಿಕ್‌, ಸೂರ್ಯ ಸ್ಟನಿಂಗ್‌ ಕ್ಯಾಚ್‌
    – ಭಾರತಕ್ಕೆ ರೋಚಕ 7 ರನ್‌ ಜಯ

    ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಶತಕೋಟಿ ಭಾರತೀಯರು ಕನಸು, ಪ್ರಾರ್ಥನೆಗೆ ಕೊನೆಗೂ ಈಡೇರಿತು. 17 ವರ್ಷದ ಬಳಿಕ ಟಿ 20 ವಿಶ್ವಕಪ್‌ ಗೆಲ್ಲುವ ಭಾರತದ (Team India) ಕನಸಾಗಿದೆ. ರೋಚಕ 7 ರನ್‌ಗಳ ಜಯ ಸಾಧಿಸುವುದರೊಂದಿಗೆ ಭಾರತ ಎರಡನೇ ಬಾರಿ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

    ಗೆಲ್ಲಲು 177 ರನ್‌ಗಳ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ (South Africa) ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 169 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಕೊನೆಯ 6 ಎಸೆತಗಳಲ್ಲಿ 16 ರನ್‌ ಬೇಕಿತ್ತು. ಪಾಡ್ಯ ಎಸೆದ ಮೊದಲ ಎಸೆತವನ್ನು ಮಿಲ್ಲರ್‌ ಸಿಕ್ಸರ್‌ಗೆ ಅಟ್ಟಿದರು. ಆದರೆ ಬೌಂಡರಿ ಗೆರೆಯ ಬಳಿ ಸೂರ್ಯಕುಮಾರ್‌ ಯಾದವ್‌ ಅವರು ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಮಿಲ್ಲರ್‌ 21 ರನ್‌ ಗಳಿಸಿ ಔಟ್‌ ಆದರು. ನಂತರ ಬಂದ ರಬಡಾ ಮೊದಲ ಎಸೆತ ಬೌಂಡರಿಗೆ ಅಟ್ಟಿದರು. ನಂತರ ಎಸೆತದಲ್ಲಿ ಲೆಗ್‌ಬೈ ಮೂಲಕ 1 ರನ್‌ ಬಂತು. ನಂತರ 1 ರನ್‌ ಒಂದು ವೈಡ್‌ ಬಂತು. ಐದನೇ ಎಸೆತದಲ್ಲಿ ಸಿಕ್ಸ್‌ ಸಿಡಿಸಲು ಹೋದ ರಬಡಾ ಕ್ಯಾಚ್‌ ನೀಡಿ ಔಟಾದ ಬೆನ್ನಲ್ಲೇ ಸಂಭ್ರಮಾಚರಣೆ ಆರಂಭವಾಯಿತು. ಕೊನೆಯ ಎಸೆತದಲ್ಲಿ ಒಂದು ರನ್‌ ಬಂತು. ಈ ಮೂಲಕ ಭಾರತ ಎರಡನೇ ಬಾರಿ ವಿಶ್ವಕಪ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತು.

    ಟೀಂ ಇಂಡಿಯಾದಂತೆ ಆರಂಭದಲ್ಲೇ ದಕ್ಷಿಣ ಆಫ್ರಿಕಾ 2 ವಿಕೆಟ್‌ ಕಳೆದುಕೊಂಡಿತ್ತು. ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ 4 ರನ್‌, ನಾಯಕ ಆಡೆನ್ ಮಾರ್ಕ್ರಾಮ್ 4 ರನ್‌ ಗಳಿಸಿ ಔಟಾಗಿದ್ದರು. 12 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದದಾಗ ಕೀಪರ್‌ ಕ್ವಿಂಟಾನ್‌ ಡಿ ಕಾಕ್‌ ಮತ್ತು ಟ್ರಿಸ್ಟಾನ್ ಸ್ಟಬ್ಸ್ ನಿಧಾನವಾಗಿ ರನ್‌ ಪೇರಿಸಿ ಆಫ್ರಿಕಾ ಇನ್ನಿಂಗ್ಸ್‌ ಕಟ್ಟ ತೊಡಗಿದರು.  ಇದನ್ನೂ ಓದಿ: ಆರಂಭದಲ್ಲೇ ಆಘಾತ – ಕೊಹ್ಲಿ, ಅಕ್ಷರ್‌ ಸಮಯೋಚಿತ ಆಟ, ಆಫ್ರಿಕಾಗೆ 177 ರನ್‌ ಟಾರ್ಗೆಟ್‌ ನೀಡಿದ ಭಾರತ

    ಮೂರನೇ ವಿಕೆಟಿಗೆ ಕ್ವಿಂಟಾನ್‌ ಡಿ ಕಾಕ್‌ ಮತ್ತು ಟ್ರಿಸ್ಟಾನ್‌ ಸ್ಟಬ್ಸ್‌ 38 ಎಸೆತಗಳಲ್ಲಿ 58 ರನ್‌ ಜೊತೆಯಾಟವಾಡಿದರು. ಸ್ಟಬ್ಸ್‌ 31 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸರ್‌) ಗಳಿಸಿದ್ದಾಗ ಅಕ್ಷರ್‌ ಪಟೇಲ್‌ ಎಸೆತದಲ್ಲಿ ಬೌಲ್ಡ್‌ ಆದರು. ಕ್ವಿಂಟಾನ್‌ ಡಿ ಕಾಕ್‌ ಅವರು 39 ರನ್‌ (31 ಎಸೆತ, 4 ಬೌಂಡರಿ, 1 ಸಿಕ್ಸರ್‌), ಕ್ಲಾಸೆನ್‌ ಸ್ಫೋಟಕ 52 ರನ್‌ (27 ಎಸೆತ, 2 ಬೌಂಡರಿ, 5 ಸಿಕ್ಸರ್‌), ಡೇವಿಡ್‌ ಮಿಲ್ಲರ್‌ 21 ರನ್‌ (17 ಎಸೆತ, 1 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟ್ ಆದರು.

     

    ಹಾರ್ದಿಕ್‌ ಪಾಂಡ್ಯ 3 ವಿಕೆಟ್‌ ಕಿತ್ತರೆ ಅರ್ಶ್‌ದೀಪ್‌ ಮತ್ತು ಬುಮ್ರಾ ತಲಾ 2 ವಿಕೆಟ್‌ ಪಡೆದರು, ಅಕ್ಷರ್‌ ಪಟೇಲ್‌ 1 ವಿಕೆಟ್‌ ಕಿತ್ತರು. 59 ಎಸೆತಗಳಲ್ಲಿ 76 ರನ್‌ ಹೊಡೆದ ವಿರಾಟ್‌ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಜಸ್‌ಪ್ರೀತ್‌ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.