Tag: ಟಿ10

  • ಟಿ20ಯಿಂದ ಟಿ10ನತ್ತ ಕ್ರಿಕೆಟ್‌

    ಟಿ20ಯಿಂದ ಟಿ10ನತ್ತ ಕ್ರಿಕೆಟ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟಿ20ಯಿಂದ ಟಿ10ನತ್ತ ಕ್ರಿಕೆಟ್

    ಟಿ20ಯಿಂದ ಟಿ10ನತ್ತ ಕ್ರಿಕೆಟ್

    ಆಂಗ್ಲರ ನಾಡಲ್ಲಿ ಜನಕವಾದ ಕ್ರಿಕೆಟ್ (Cricket) ಇದೀಗ ವಿಶ್ವದೆಲ್ಲೆಡೆ ಹಬ್ಬಿದೆ. ಫುಟ್‍ಬಾಲ್ (Football) ಬಿಟ್ಟರೆ ಜನ ಕ್ರಿಕೆಟ್‍ಗೆ ಹೆಚ್ಚು ಮರುಳಾಗಿದ್ದಾರೆ. ಅದರಲ್ಲೂ ಮೂರು ಮಾದರಿ ಕ್ರಿಕೆಟ್‍ನಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‍ಗಿಂತ ಟಿ20 ಮಾದರಿ (T20) ಕ್ರಿಕೆಟ್‍ಗೆ ಜನ ಹೆಚ್ಚು ಮನಸೋತಿದ್ದಾರೆ.

    ಕ್ರಿಕೆಟ್ ಆರಂಭಿಕ ಘಟ್ಟದಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಇದ್ದಂತಹ ಮಹತ್ವ 50 ಓವರ್‌ಗಳ ಪಂದ್ಯ (ಏಕದಿನ ಕ್ರಿಕೆಟ್) ಆರಂಭವಾದ ಬಳಿಕ ಕುಗ್ಗಿತು. ಟೆಸ್ಟ್ ಎಂದರೆ 5 ದಿನಗಳ ಕಾಲ ನಡೆಯುವ ಸುದೀರ್ಘ ಕ್ರಿಕೆಟ್ ಪಂದ್ಯಾಟ. ಕ್ರಮೇಣ ಜನ ಟೆಸ್ಟ್ ಕ್ರಿಕೆಟ್‍ಗೆ ಬದಲಾವಣೆ ಬೇಕು ಎಂದು ಬಯಸತೊಡಗಿದರು. ಆಗ ಪರ್ಯಾಯವಾಗಿ 50 ಓವರ್‌ಗಳ ಪಂದ್ಯ ನಡೆಸಲು ತೀರ್ಮಾನಿಸಿ ಒಂದೇ ದಿನದಲ್ಲಿ ಮುಗಿಸುವ ರೀತಿ ಆಡಲು ಪ್ರಾರಂಭಿಸಲಾಯಿತು. ಏಕದಿನ ಕ್ರಿಕೆಟ್ 9 ರಿಂದ 10 ಗಂಟೆಗಳ ಕಾಲ ಆಡಿ ಫಲಿತಾಂಶ ಹೊರಬರುವಂತಾಯಿತು. ಇದು ಕೂಡ ಕೆಲ ಸಮಯಗಳ ಬಳಿಕ ಅಭಿಮಾನಿಗಳಿಗೆ ಬೋರ್ ಹೊಡೆಸಿತು. ಬಳಿಕ 20 ಓವರ್‌ಗಳಿಗೆ ಪಂದ್ಯ ನಡೆಸಲು ತೀರ್ಮಾನಿಸಲಾಯಿತು. ಈ ಮೂಲಕ ಟಿ20 ಮಾದರಿ ಕ್ರಿಕೆಟ್‍ನಲ್ಲಿ ಹೊಸ ಹುರುಪು ತರಿಸಿತು. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ

    ಟಿ20 ಮಾದರಿ ಕ್ರಿಕೆಟ್ ಇದೀಗ ವಿಶ್ವ ಕ್ರಿಕೆಟ್‍ನಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಕ್ರಿಕೆಟ್ ಮಾತ್ರವಲ್ಲ, ಓಟದ ಸ್ಪರ್ಧೆಗಳಲ್ಲಿ ನೀವು ನೋಡಿರಬಹುದು. 100 ಮೀ, 200 ಮೀ ಓಟಕ್ಕಿರುವ ಪ್ರಾಶಸ್ತ್ಯ 1,500 ಮೀ, 5,000 ಮೀ ಓಟದ ಸ್ಪರ್ಧೆಗಿಲ್ಲ. ವಿಶ್ವದಾದ್ಯಂತ ಹುಸೇನ್ ಬೋಲ್ಟ್ ಎಲ್ಲರಿಗೂ ಗೊತ್ತು. ಆದರೆ ಮೋ ಫರಾಹ್ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಒಲಿಪಿಂಕ್ಸ್‌ನಲ್ಲಿ 100, 200 ಮೀ.ನಲ್ಲಿ ಬೋಲ್ಟ್ ಚಿನ್ನದ ಪದಕ ಪಡೆದ ವೇಗದ ಓಟಗಾರ. ಆದರೆ ಮೋ ಫರಾಹ್ ಅದೇ ಒಲಿಂಪಿಕ್ಸ್‌ನಲ್ಲಿ 5,000 ಮೀ. ಓಟದಲ್ಲಿ ಚಿನ್ನ ಗೆದ್ದ ಓಟಗಾರ. ಆದರೆ ಆತನನ್ನು ಯಾರು ಹೆಚ್ಚಾಗಿ ಗಮನಿಸಲಿಲ್ಲ. ಯಾಕೆಂದರೆ ಲಾಂಗ್ ರನ್ನಿಂಗ್ ಮತ್ತು ಶಾರ್ಟ್ ರನ್ನಿಂಗ್ ನಡುವಿನ ವ್ಯಾತ್ಯಾಸ. ಇಬ್ಬರೂ ಕೂಡ ಚಿನ್ನದ ಸಾಧನೆಗೈದವರೆ. ಆದರೆ ವೇಗದ ನಡುವೆ ನಿಧಾನ ನಿಲ್ಲಲಿಲ್ಲ. ಹಾಗೆ ಕ್ರಿಕೆಟ್‍ನಲ್ಲೂ ಸುದೀರ್ಘ ಕ್ರಿಕೆಟ್ ಅಭಿರುಚಿ ಕಡಿಮೆಯಾಗುತ್ತಿದ್ದಂತೆ, ಜನ ಶಾರ್ಟ್ ಫಾರ್ಮೆಟ್ ಬೇಕೆಂಬ ಯೋಚನೆಗೆ ಮುಂದಾದರು.

    ಟಿ20 ಮಾದರಿ
    ಟಿ20, 20 ಓವರ್‌ಗಳ ಪಂದ್ಯ ಕೇವಲ 4 ಗಂಟೆಯಲ್ಲಿ ಪಂದ್ಯವನ್ನು ಮುಗಿಸುವ ಫಾರ್ಮೆಟ್ ಇದು. ಟಿ20 ಮಾದರಿ ಜಾರಿಗೆ ಬಂದ ಬಳಿಕ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಮಾದರಿ ಕ್ರಿಕೆಟ್‍ಗಿಂತ ಹೆಚ್ಚು ಜನಪ್ರಿಯವಾಯಿತು. ಏಕೆಂದರೆ ಇಲ್ಲಿ ಬ್ಯಾಟ್ಸ್‌ಮ್ಯಾನ್‌ಗಳ ಮನಮೋಹಕ ಹೊಡೆತ ನೋಡುವುದೇ ಒಂದು ಹಬ್ಬ. ಟಿ20 ಫಾರ್ಮೆಟ್‍ನಲ್ಲಿ ಇದೀಗ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅದು 360 ಡಿಗ್ರಿ ಬ್ಯಾಟಿಂಗ್. ಈ ಹಿಂದೆಯೇ ಟಿ20 ಕ್ರಿಕೆಟ್ ಎಂದರೆ ಅದು ಬ್ಯಾಟ್ಸ್‌ಮ್ಯಾನ್‌ಗಳ ಸ್ವರ್ಗ ಎಂಬ ಮಾತಿದೆ. ಇಲ್ಲಿ ಬೌಲರ್‌ಗಳ ಪಾಡು ಬಹಳ ಅನಾಯಸ. ಬ್ಯಾಟಿಂಗ್‍ನಲ್ಲಿ ಬೌಂಡರಿ, ಸಿಕ್ಸ್ ಚಚ್ಚುವ ಪರಿಗೆ ಬೌಲರ್ ಬೆಂಡಾಗುವುದೇ ಟಿ20 ಕ್ರಿಕೆಟ್. ಇಲ್ಲಿ ಹೊಡಿಬಡಿ ಆಟಗಾರ ಎಂದರೇ ಕ್ರಿಕೆಟ್ ಪ್ರಿಯರಿಗೆ ಅಚ್ಚುಮೆಚ್ಚು. ಅದರಲ್ಲೂ ಇದೀಗ 360 ಡಿಗ್ರಿ ಬ್ಯಾಟ್ಸ್‌ಮ್ಯಾನ್‌ಗಳಿಗೆ ಹೆಚ್ಚಿನ ಬೇಡಿಕೆ. ಇದನ್ನೂ ಓದಿ: ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ

    360 ಡಿಗ್ರಿ ಬ್ಯಾಟಿಂಗ್
    ಟಿ20 ಮಾದರಿಯಲ್ಲೂ ಇದೀಗ ಹೆಚ್ಚು ಬೇಡಿಕೆ ಇರುವುದು, ಮೈದಾನದ ಮೂಲೆ ಮೂಲೆಗೂ ಹೊಡೆದು ಭರ್ಜರಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ಆಟಗಾರನಿಗೆ. 360 ಡಿಗ್ರಿ ಬ್ಯಾಟ್ಸ್‌ಮ್ಯಾನ್ ಎಂದರೆ ಆತ ಯಾವುದೇ ಎಸೆತವನ್ನು ಮೈದಾನದ ಯಾವುದೇ ಮೂಲೆಗೂ ಹೊಡೆದಾಡುವ ಶಕ್ತಿ ಇರುವ ದಾಂಡಿಗ. ವಿಶ್ವ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಎಬಿ‌ ಡಿವಿಲಿಯರ್ಸ್ 360 ಡಿಗ್ರಿ ಬ್ಯಾಟ್ಸ್‌ಮ್ಯಾನ್‌ ಎಂದೇ ಖ್ಯಾತರಾಗಿದ್ದವರು. ಅವರನ್ನು ಹೊರತುಪಡಿಸಿದರೆ ಇದೀಗ 360 ಡಿಗ್ರಿ ಬ್ಯಾಟ್ಸ್‌ಮ್ಯಾನ್‌ ಆಗಿ ಭಾರತದ ಆಟಗಾರ ಸೂರ್ಯ ಕುಮಾರ್ ಯಾದವ್ ಗುರುತಿಸಿಕೊಂಡಿದ್ದಾರೆ. ಇವರ ಆಟ ನೋಡಲು ಅಭಿಮಾನಿಗಳು ಹೆಚ್ಚು ಇಷ್ಟ ಪಡುತ್ತಾರೆ. ಹಾಗಾಗಿ ಈ ಹೊಡಿಬಡಿ ಆಟ ಇನ್ನಷ್ಟು ರೋಚಕತೆ ಮೂಡಿಸಿದೆ. ಈ ನಡುವೆ ಟಿ20 ಮಾದರಿಯಿಂದ ಜನ ಬದಲಾವಣೆ ಬಯಸುತ್ತಿದ್ದಾರೆ.

    ಟಿ10ನತ್ತ ಚಿತ್ತ
    ಇದೀಗ ಕ್ರಿಕೆಟ್ ಪ್ರಿಯರ ದೃಷ್ಟಿ ಟಿ20 ಯಿಂದ ಟಿ10ನತ್ತ (T10) ನೆಟ್ಟಿದೆ. 20 ಓವರ್‌ಗಳ ಪಂದ್ಯಕ್ಕಿಂತಲೂ 10 ಓವರ್‌ಗಳ ಪಂದ್ಯದೆಡೆಗೆ ಸಾಗುತ್ತಿದೆ. ಈಗಾಗಲೇ ದುಬೈ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾಗಳಲ್ಲಿ ಟಿ10 ಮಾದರಿ ಲೀಗ್ ಯಶಸ್ಸು ಕಂಡಿದೆ. ಇದು ಟಿ20 ಗಿಂತ ಕಡಿಮೆ ಅವಧಿಯಲ್ಲಿ ಮುಗಿಯುತ್ತಿದ್ದು, ಕೇವಲ 2 ಗಂಟೆಯಲ್ಲಿ ಹೆಚ್ಚು ಅಬ್ಬರ ಕಾಣಸಿಗುವಂತಾಗಿಸಿದೆ. ಜನ ನಿಧಾನವಾಗಿ ಟಿ10 ಕ್ರಿಕೆಟ್‍ನತ್ತ ಮುಖ ಮಾಡುತ್ತಿದ್ದಾರೆ.

    ಮುಂದಿನ ದಿನಗಳಲ್ಲಿ ಇದು ಕೂಡ ಬದಲಾಗಬಹುದು. ಜನ ಸಮಯದ ಅಭಾವದಿಂದಾಗಿ 10 ರಿಂದ 5 ಓವರ್‌ಗಳ ಪಂದ್ಯದ ಕಡೆಗೂ ಸಾಗಬಹುದು. ಈ ರೀತಿಯ ಟೂರ್ನಿ ಲೋಕಲ್ ಆಟದಲ್ಲಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಕಾಣಸಿಕ್ಕರೂ ಅಚ್ಚರಿ ಪಡಬೇಕಾಗಿಲ್ಲ. ಇದನ್ನೂ ಓದಿ: ತನ್ನ ವಿಕೆಟ್ ಪಡೆದ ಬಾಂಗ್ಲಾ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ

    Live Tv
    [brid partner=56869869 player=32851 video=960834 autoplay=true]

  • ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಒಲವು

    ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಒಲವು

    ಲಂಡನ್: ವಿಶ್ವವೇ ಚುಟುಕು ಕ್ರಿಕೆಟ್ ಕದನದತ್ತ ಮುಖ ಮಾಡಿದ್ದು, ಪ್ರತಿಯೊಂದು ಪಂದ್ಯಗಳೂ ರೋಚಕತೆಗೆ ಸಾಕ್ಷಿಯಾಗುತ್ತಿದೆ. ಟಿ20 ಕ್ರಿಕೆಟ್ ಟೂರ್ನಿಗಳನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ ಈಗ ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್‍ಗೆ ಒಲವು ವ್ಯಕ್ತವಾಗಿದೆ.

    ಕೇವಲ 10 ದಿನಗಳಲ್ಲಿ ಇಡೀ ಟೂರ್ನಿಯನ್ನ ಮುಗಿಸುವುದು ಕಷ್ಟ. ಹೀಗಾಗಿ ಒಲಿಂಪಿಕ್ಸ್ ನಂತಹ ಜಾಗತಿಕ ಕ್ರೀಡಾಕೂಟದಲ್ಲಿ 10 ಓವರ್‌ಗಳ ಕ್ರಿಕೆಟ್ ಮಾದರಿ ಸೂಕ್ತವಾಗಿದೆ ಎಂದು ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    1900ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿತ್ತು. ಬಳಿಕ 1998ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಆಡಲ್ಪಟ್ಟಿತ್ತು. ಆ ಬಳಿಕ ಅನೇಕ ಕ್ರೀಡಾಕೂಟಗಳಲ್ಲಿ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಆದರೆ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುವ 2022ರ ಕಾಮನ್ವೆಲ್ತ್ ಕ್ರೀಡಾಕೂಟವು ಮಹಿಳೆಯರ ಟಿ20 ಟೂರ್ನಿಯನ್ನು ಒಳಗೊಂಡಿದೆ. ಆದರೆ ಮೋರ್ಗನ್ ಅವರು ಟಿ10 ಮಾದರಿಯು ಟಿ20, 50 ಓವರ್‍ಗಳ ಅಥವಾ ಟೆಸ್ಟ್ ಕ್ರಿಕೆಟ್‍ಗಿಂತ ಉತ್ತಮ ಎಂದು ಹೇಳಿದ್ದಾರೆ.

    “ಟೆಸ್ಟ್, ಏಕದಿನ, ಟಿ20 ಮೂರು ಮಾದರಿಗಳಿಗಿಂತ ಟಿ10 ಒಲಿಂಪಿಕ್ಸ್ ಅಥವಾ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಹೊಂದಿಕೊಳ್ಳುತ್ತದೆ. ಈ ಮೂಲಕ 10 ದಿನಗಳಲ್ಲಿ ಇಡೀ ಟೂರ್ನಿಯನ್ನು ಮುಗಿಸಬಹುದಾಗಿದೆ” ಎಂದು ಇಯಾನ್ ಮೋರ್ಗಾನ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿದ್ದಾರೆ.

    “ಟಿ20 ಪಂದ್ಯದಿಂದ 8-10 ದಿನಗಳಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಡಲು ಸಾಧ್ಯವಾಗುತ್ತದೆ. ಹೀಗಾಗಿ ಈ ಆಯ್ಕೆಯು ಎಲ್ಲರಿಗೂ ಇಷ್ಟವಾಗುತ್ತದೆ, ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೊಂದಿಕೊಳ್ಳುತ್ತದೆ. ಮತ್ತೊಂದು ವಿಚಾರವೆಂದರೆ ಟಿ10 ಪಂದ್ಯದಿಂದ ಹೆಚ್ಚಿನ ಮನರಂಜನೆ ಸಿಗುತ್ತದೆ” ಎಂದು ಮೋರ್ಗಾನ್ ಹೇಳಿದ್ದಾರೆ.

    ಲಾಭದಾಯಕ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ವಿಶ್ವಾದ್ಯಂತ ಹಲವಾರು ಫ್ರ್ಯಾಂಚೈಸ್ ಆಧಾರಿತ ಲೀಗ್‍ಗಳನ್ನು ಹುಟ್ಟುಹಾಕಿದ ಟಿ20 ಕ್ರಿಕೆಟ್ ಅತ್ಯಂತ ಜನಪ್ರಿಯ ಸ್ವರೂಪವಾಗಿ ಹೊರಹೊಮ್ಮಿದೆ. ಈಗ ಟಿ10 ಮಾದರಿಯ ಕ್ರಿಕೆಟ್ ಒಲವು ವ್ಯಕ್ತವಾಗಿದ್ದು ಅಚ್ಚರಿಯೆನಲ್ಲ. ಕೆಲ ಅಭಿಮಾನಿಗಳು ಟೆಸ್ಟ್, ಏಕದಿನ ಪಂದ್ಯಕ್ಕಿಂತಲೂ ಚುಟುಕು ಕ್ರಿಕೆಟ್‍ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ.

  • 16 ಎಸೆತಗಳಿಗೆ 74 ರನ್ ಚಚ್ಚಿ ದಾಖಲೆ ಬರೆದ ಅಫ್ಘಾನ್ ಆಟಗಾರ

    16 ಎಸೆತಗಳಿಗೆ 74 ರನ್ ಚಚ್ಚಿ ದಾಖಲೆ ಬರೆದ ಅಫ್ಘಾನ್ ಆಟಗಾರ

    ಶಾರ್ಜಾ: ಅಫ್ಘಾನಿಸ್ತಾನ ತಂಡದ ಸ್ಫೋಟಕ ಆರಂಭಿಕ ಆಟಗಾರ ಮೊಹಮ್ಮದ್ ಶಹಜಾದ್ ಟಿ10 ಲೀಗ್ ಆರಂಭದ ಪಂದ್ಯದಲ್ಲೇ ಅಬ್ಬರಿಸಿದ್ದು, ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.

    2018ರ ಪ್ರಥಮ ಟಿ10 ಲೀಗ್ ಆರಂಭದ ಪಂದ್ಯದಲ್ಲಿ ರಜಪೂತ್ ತಂಡದ ಪರ ಆಡುತ್ತಿರುವ ಮೊಹಮ್ಮದ್ ಶಹಜಾದ್ 16 ಎಸೆತಗಳಲ್ಲಿ 74 ರನ್ ಸಿಡಿಸಿ ಮಿಂಚಿದರು. ಇದರಲ್ಲಿ ಅಮೋಘ 8 ಸಿಕ್ಸರ್, 6 ಬೌಂಡರಿಗಳು ಸೇರಿದೆ. ಉಳಿದ ಎರಡು ಎಸೆತಗಳಲ್ಲಿ ಸಿಂಗಲ್ ರನ್ ತೆಗೆದಿದ್ದರು. ಈ ಮೂಲಕ ಯಾವುದೇ ಎಸೆತವನ್ನು ವ್ಯರ್ಥ ಮಾಡದೇ ರನ್ ಗಳಿಸಿದ್ದರು.

    ಕೇವಲ 17 ನಿಮಿಷದಲ್ಲಿ 4 ಓವರ್ ಗಳ ಮೂಲಕ 94 ರನ್ ಗಳ ಗುರಿಯನ್ನು ತಲುಪಿದ ರಜಪೂತ್ ತಂಡ ಗೆಲುವಿನ ನಗೆ ಬೀರಿತು. ಇದರೊಂದಿಗೆ ಟಿ10 ಲೀಗ್‍ನಲ್ಲಿ 74 ರನ್ ಸಿಡಿಸಿದ 30 ವರ್ಷದ ಶಹಜಾದ್ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ಶಹಜಾದ್‍ಗೆ ಸಾಥ್ ನೀಡಿದ ಬ್ರೆಂಡನ್ ಮೆಕಲಮ್ 8 ಎಸೆತಗಳಲ್ಲಿ 21 ರನ್ ಸಿಡಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಸಿಂಧಿಸ್ ತಂಡ ನಿಗದಿತ 10 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತ್ತು. ಸಿಂಧಿಸ್ ಪರ ವ್ಯಾಟ್ಸನ್ ಮಾತ್ರ ಎರಡಂಕಿ ದಾಟಿದ್ದರು. ರಜಪೂತ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಮುನಾಫ್ ಪಟೇಲ್ 20 ರನ್ ನೀಡಿ 3 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv