Tag: ಟಿ-20 ವಿಶ್ವಕಪ್

  • T20 World Cup: ವಿಶ್ವಚಾಂಪಿಯನ್​ ತಂಡದ ಮೇಲೆ ಹಣದ ಮಳೆ ಸುರಿಸಲಿದೆ ICC

    T20 World Cup: ವಿಶ್ವಚಾಂಪಿಯನ್​ ತಂಡದ ಮೇಲೆ ಹಣದ ಮಳೆ ಸುರಿಸಲಿದೆ ICC

    ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಸೋಮವಾರ T20 ವಿಶ್ವಕಪ್ (T 20 World Cup) ಕುರಿತು ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಪ್ರಸ್ತುತ ಟಿ20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸುತ್ತಿದೆ. ಈ ಬಾರಿಯ ವಿಶ್ವಕಪ್ ವೇಳೆ ಐಸಿಸಿ ಮಾಡಿರುವ ಘೋಷಣೆಯು ಇದೀಗ ತಂಡಗಳ ಸಂತಸವನ್ನು ಇಮ್ಮಡಿಗೊಳಿಸಿದೆ.

    ಹೌದು. ಐಸಿಸಿ ಟೂರ್ನಿಯ ಬಹುಮಾನದ ಮೊತ್ತವನ್ನು ಪ್ರಕಟಿಸಿದೆ. ಈ ಬಹುಮಾನದ ಮೊತ್ತವು ಇಲ್ಲಿಯವರೆಗಿನ ಅತ್ಯಧಿಕ ಬಹುಮಾನವಾಗಿದೆ. T-20 ವಿಶ್ವಕಪ್‌ಗಾಗಿ ICC ಸುಮಾರು ರೂ 93 ಕೋಟಿ 51 ಲಕ್ಷ (11.25 ಮಿಲಿಯನ್ ಡಾಲರ್ ) ದಾಖಲೆಯ ಬಹುಮಾನವನ್ನು ಘೋಷಿಸಿದೆ. ಇದರಲ್ಲಿ ವಿಜೇತ ತಂಡಕ್ಕೆ ಸುಮಾರು 20.36 ಕೋಟಿ ($ 2.45 ಮಿಲಿಯನ್) ಹಾಗೂ ರನ್ನರ್ ಅಪ್ ಗೆ ಸುಮಾರು 10.63 ಕೋಟಿ ರೂ.(1.28 ಮಿಲಿಯನ್ ಡಾಲರ್) ಸಿಗಲಿದೆ.

    ಸೆಮಿಫೈನಲ್‌ಗೆ ತಲುಪುವ ಉಳಿದ ಎರಡು ತಂಡಗಳಿಗೆ 6.54 ಕೋಟಿ ರೂ. (787,500 ಡಾಲರ್) ಮೊತ್ತವನ್ನು ನೀಡಲಾಗುತ್ತದೆ. ಈ ಬಾರಿ T20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಪ್ರತಿ ತಂಡಕ್ಕೂ ಐಸಿಸಿ ಒಂದಷ್ಟು ಮೊತ್ತವನ್ನು ನೀಡಲಿದೆ. ಸೂಪರ್-8 (ಎರಡನೇ ಸುತ್ತು) ಹಂತದಲ್ಲಿ ಸೋಲುವ ಪ್ರತಿಯೊಂದು ತಂಡಗಳು ಅಂದಾಜು ರೂ.3.17 ಕೋಟಿ (382,500 ಡಾಲರ್) ಪಡೆಯುತ್ತವೆ.

    ಈ ಬಾರಿ ಟಿ20 ವಿಶ್ವಕಪ್ ಪಂದ್ಯಗಳು 9 ಮೈದಾನಗಳಲ್ಲಿ ನಡೆಯುತ್ತಿವೆ. ಇವುಗಳಲ್ಲಿ 6 ವೆಸ್ಟ್ ಇಂಡೀಸ್ ಮತ್ತು 3 ಅಮೆರಿಕದಲ್ಲಿವೆ. ಟೆಕ್ಸಾಸ್, ಗಯಾನಾ, ಬಾರ್ಬಡೋಸ್‌, ನ್ಯೂಯಾರ್ಕ್, ಆ್ಯಂಟಿಗಾ, ಫ್ಲೋರಿಡಾ, ಟ್ರಿನಿಡಾಡ್, ಕಿಂಗ್ಸ್‌ಟೌನ್ ಹಾಗೂ ಸೇಂಟ್‌ ಲೂಸಿಯಾದಲ್ಲಿ ಪಂದ್ಯಗಳು ನಡೆಯುತ್ತವೆ. ಇದನ್ನೂ ಓದಿ: ಮೂರು ಮಾದರಿಯ ಕ್ರಿಕೆಟ್‌ನಿಂದ ಕೇದಾರ್ ಜಾಧವ್ ನಿವೃತ್ತಿ

    ಕಳೆದ ಬಾರಿ ಒಟ್ಟು ಬಹುಮಾನದ ಮೊತ್ತ 5.6 ಮಿಲಿಯನ್ ಡಾಲರ್ ಆಗಿತ್ತು, ಅದರಲ್ಲಿ ವಿಜೇತ ಇಂಗ್ಲೆಂಡ್ ‌ 1.6 ಮಿಲಿಯನ್ ಡಾಲರ್ ಪಡೆದಿತ್ತು. ವಿಶ್ವಕಪ್‌ನ ಒಂಬತ್ತನೇ ಆವೃತ್ತಿಯಲ್ಲಿ 20 ತಂಡಗಳ ಪಂದ್ಯಾವಳಿಯ ವಿಜೇತರಿಗೆ ನೀಡಲಾದ ಬಹುಮಾನ ಮೊತ್ತವು ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಧಿಕ ಮೊತ್ತವಾಗಿದೆ ಎಂದು ಐಸಿಸಿ ಹೇಳಿದೆ. ಇದಲ್ಲದೇ ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆಯುವ ಫೈನಲ್ ಪಂದ್ಯದ ನಂತರ ಟ್ರೋಫಿಯನ್ನು ಸಹ ನೀಡಲಾಗುವುದು ಎಂದಿದೆ.

  • ಮೂರು ಮಾದರಿಯ ಕ್ರಿಕೆಟ್‌ನಿಂದ ಕೇದಾರ್ ಜಾಧವ್ ನಿವೃತ್ತಿ

    ಮೂರು ಮಾದರಿಯ ಕ್ರಿಕೆಟ್‌ನಿಂದ ಕೇದಾರ್ ಜಾಧವ್ ನಿವೃತ್ತಿ

    ನವದೆಹಲಿ: ಟಿ20 ವಿಶ್ವಕಪ್ 2024 ಆರಂಭವಾಗಿದ್ದು, ಜೂನ್ 5 ರಿಂದ ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಆಡುವ ಮೂಲಕ ಭಾರತ ತಂಡ ಫೀಲ್ಡ್‌ಗಿಳಿಯಲಿದೆ. ಈ ನಡುವೆ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ (Kedar Jadhav) ನಿವೃತ್ತಿ ಘೋಷಿಸಿದ್ದಾರೆ.

    ಎಂಎಸ್‌ ಧೋನಿ ರೀತಿಯಲ್ಲಿಯೇ ಕೇದಾರ್ ಜಾಧವ್ ಅವರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ನಿವೃತ್ತಿಯ ಕುರಿತು ಬಹಿರಂಗಪಡಿಸಿದ್ದಾರೆ. ಇಂದು ತಮ್ಮ ತಮ್ಮಎಕ್ಸ್‌ ಖಾತೆಯಲ್ಲಿ ನಿವೃತ್ತಿ ಘೋಷಿಸಿರುವ ಅವರು, ನನ್ನನ್ನು ಬೆಂಬಲಿಸಿದ ಮತ್ತು ಪ್ರೀತಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕೇದಾರ್ ಜಾಧವ್ ಅವರು ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

    2014 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕೇದಾರ್ ಜಾಧವ್ ಪಾದಾರ್ಪಣೆ ಮಾಡಿದರು. 2014 ರ ನವೆಂಬರ್ 16‌ ರಂದು ರಾಂಚಿಯಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ODI ಆಡಿದರು. ಬಳಿಕ 2020ರ ಫೆಬ್ರವರಿ 8 ರಂದು ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ODI ಪಂದ್ಯವನ್ನು ಆಡಿದರು. ಕೇದಾರ್ ಒಟ್ಟು 73 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 1389 ರನ್ ಗಳಿಸಿರುವ ಅವರು, ಒಟ್ಟು 2 ಶತಕಗಳನ್ನು ಗಳಿಸಿದ್ದಾರೆ. ಅಲ್ಲದೇ 6 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಟಿ20ಯಲ್ಲಿ ಕೇದಾರ್ 9 ಪಂದ್ಯಗಳಲ್ಲಿ 122 ರನ್ ಗಳಿಸಿದ್ದರು.

  • ದೀಪಾವಳಿ ಶುರು – ಪಾಕ್ ವಿರುದ್ಧ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಹೊಂಬಾಳೆ ಫಿಲ್ಮ್ಸ್, ಅಮಿತ್ ಶಾ ಮೆಚ್ಚುಗೆ

    ದೀಪಾವಳಿ ಶುರು – ಪಾಕ್ ವಿರುದ್ಧ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಹೊಂಬಾಳೆ ಫಿಲ್ಮ್ಸ್, ಅಮಿತ್ ಶಾ ಮೆಚ್ಚುಗೆ

    ಬೆಂಗಳೂರು: ಟಿ-20 ವಿಶ್ವಕಪ್ ಕ್ರಿಕೆಟ್ (T-20 World Cup) ಪಂದ್ಯಾವಳಿಯಲ್ಲಿ ಪಾಕಿಸ್ತಾನ ((Pakistan) )ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ದೇಶದ ಜನತೆಗೆ ಭಾರತ ದೀಪಾವಳಿಯ ಉಡುಗೊರೆ ನೀಡಿದೆ. ಇನ್ನೂ ಈ ಹೈವೋಲ್ಟೆಜ್ ಪಂದ್ಯವನ್ನು ವೀಕ್ಷಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹಾಗೂ ಹೊಂಬಾಳೆ ಫಿಲ್ಮ್ಸ್ (Hombale Films) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ಟಿ-20 ವಿಶ್ವಕಪ್ ಪಂದ್ಯಕ್ಕೆ ಉತ್ತಮ ಶುಭಾರಂಭ. ದೀಪಾವಳಿ (Deepavali) ಶುರುವಾಗಿದೆ. ವಿರಾಟ್ ಕೊಹ್ಲಿ ಅವರಿಂದ ಎಂತಹ ರೋಚಕ ಆಟ.. 2022ರ ಟಿ-20 ವಿಶ್ವಕಪ್ ಪಂದ್ಯವಾಡುತ್ತಿರುವ ಭಾರತ ತಂಡಕ್ಕೆ (Team India) ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಡೋ-ಪಾಕ್‌ ಕದನ – ಭಾರತಕ್ಕೆ 160 ರನ್‌ಗಳ ಗುರಿ

    ಮತ್ತೊಂದೆಡೆ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸ್ಮ್, ದೀಪ ಹಚ್ಚಿ ನಿಮ್ಮ ಮನೆಗೆ ಹೋಗಲು ವಿರಾಟ್ ಮಾರ್ಗದರ್ಶನ ನೀಡಿದ್ದಾರೆ. ವಿರಾಟ್ ಅವರಿಂದ ದೀಪಾವಳಿಯ ಬೆಸ್ಟ್ ವಿಶ್. ಪ್ರತಿಯೊಬ್ಬ ಮನುಷ್ಯನಿಗೂ ಸಮಯ ಬರುತ್ತದೆ ಎಂದು ಟ್ವೀಟ್ ಮಾಡಿದೆ. ಇದನ್ನೂ ಓದಿ: ಕೊಹ್ಲಿ, ಪಾಂಡ್ಯ ಪಂಚ್‍ಗೆ ಪಾಕ್ ಪಂಚರ್ – ಶುಭಾರಂಭ ಕಂಡ ಭಾರತ

    ಟಿ-20 ವಿಶ್ವಕಪ್ ಆರಂಭವಾಗಿದ್ದು, ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದ ಪಾಕ್ ತಂಡ ಟೀಂ ಇಂಡಿಯಾಕ್ಕೆ 160 ರನ್‍ಗಳ ಗುರಿ ನೀಡಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆದರೆ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಆಲ್‍ರೌಂಡರ್ ಆಟದಿಂದ ಭರ್ಜರಿ ಗೆಲವು ಸಾಧಿಸಿದೆ. ಈ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿ, 4 ಸಿಕ್ಸರ್‌ನೊಂದಿಗೆ 82 ರನ್ ಸಿಡಿಸಿ ಟೀಂ ಇಂಡಿಯಾಗೆ ಆಸರೆಯಾದರು.

    Live Tv
    [brid partner=56869869 player=32851 video=960834 autoplay=true]

  • ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್

    ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್

    ದುಬೈ: ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ- ಪಾಕಿಸ್ತಾನದ ರಣರೋಚಕ ಪಂದ್ಯ ವೀಕ್ಷಿಸಲು ಪ್ರತಿ ಬಾರಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಅದೇ ರೀತಿ ಈ ಬಾರಿ ಸಹ ಮುಗಿಬಿದ್ದು ಟಿಕೆಟ್ ಖರೀದಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಅವಕಾಶ ಸಿಕ್ಕ ಕೆಲವೇ ನಿಮಿಷಗಳಲ್ಲಿ ಎಲ್ಲ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿವೆ.

    ಈ ಬಾರಿಯ ವಿಶ್ವಕಪ್ ಪಂದ್ಯಾವಳಿ ಯುಎಇನಲ್ಲಿ ನಡೆಯುತ್ತಿದ್ದು, ಟಿಕೆಟ್ ಬುಕ್ಕಿಂಗ್‍ಗೆ ಅವಕಾಶ ಕಲ್ಪಿಸಲಾಗಿತ್ತು. ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡಿದ್ದಾರೆ. ಹೀಗಾಗಿ ಕೆಲವೇ ನಿಮಿಷಗಳಲ್ಲಿ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿವೆ. 2019ರ ವಿಶ್ವಕಪ್ ಬಳಿಕ ಎರಡೂ ತಂಡಗಳು ಮುಖಾಮುಖಿಯಾಗುತ್ತಿದ್ದು, ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಚೆನ್ನೈ – ಡೆಲ್ಲಿಗೆ 3 ವಿಕೆಟ್ ರೋಚಕ ಜಯ

    ಭಾರತ ಹಾಗೂ ಪಾಕಿಸ್ಥಾನ ಗ್ರೂಪ್ 2ನಲ್ಲಿ ಮುಖಾಮುಖಿಯಾಗುತ್ತಿದ್ದು, ಅಕ್ಟೋಬರ್ 24ರಂದು ದುಬೈ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಟಿಕೆಟ್ ಸೋಲ್ಡ್ ಔಟ್ ಆಗಿರುವ ಕುರಿತು ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಜನರಲ್, ಜನರಲ್ ಈಸ್ಟ್, ಪ್ರೀಮಿಯಂ, ಪೆವಿಲಿಯನ್ ಈಸ್ಟ್ ಹಾಗೂ ಪ್ಲಾಟಿನಂ ಎಲ್ಲ ರೀತಿಯ ಟಿಕೆಟ್ ಬುಕ್ ಆಗಿವೆ ಎಂದು ಹೇಳಿದೆ. ಟಿಕೆಟ್ ಬುಕ್ ಮಾಡಲು ಪ್ಲಾಟಿನಂಲಿಸ್ಟ್ ವೆಬ್‍ಸೈಟ್ ಓಪನ್ ಆಗುತ್ತಿಲ್ಲ ಎಂದು ವರದಿ ಮಾಡಿದೆ.

    ಟಿ20 ವಿಶ್ವಕಪ್‍ನ ಟಿಕೆಟ್‍ಗಳನ್ನು ಬುಕ್ ಮಾಡಲು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅವಕಾಶ ನೀಡಿದ್ದೇ ತಡ, ಸಾವಿರಾರು ಕ್ರಿಕೆಟ್ ಅಭಿಮಾನಿಗಳು ವೆಬ್‍ಸೈಟ್‍ಗೆ ಮುಗಿಬಿದ್ದು, ತಮ್ಮ ಸೀಟ್‍ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಹತ್ತಾರು ಸಾವಿರ ಜನ ಒಂದು ಗಂಟೆಗೂ ಅಧಿಕ ಕಾಲ ಆನ್‍ಲೈನ್ ಕ್ಯೂನಲ್ಲಿ ಕಾದಿದ್ದಾರೆ. ಇದನ್ನೂ ಓದಿ: ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

    ಭಾನುವಾರ ರಾತ್ರಿ ಪ್ರೀಮಿಯಂ ಟಿಕೆಟ್ ಬೆಲೆ 30,431 ರೂ. ಇದ್ದರೆ, ಪ್ಲಾಟಿನಂ ಟಿಕೆಟ್ ಬೆಲೆ 52,745 ರೂ. ಇತ್ತು. ಆದರೆ ಸೋಮವಾರ ಬೆಳಗ್ಗೆ ಪ್ಲಾಟಿನಂ ಲಿಸ್ಟ್ ವೆಬ್‍ಸೈಟ್ ನಲ್ಲಿ ಯಾವುದೇ ಟಿಕೆಟ್ ಲಭ್ಯವಿರಲಿಲ್ಲ.

  • ಟಿ-20 ವಿಶ್ವಕಪ್ ಆಡಬೇಕೆಂದಿದ್ದ ಧೋನಿ ಸಡನ್ ನಿವೃತ್ತಿ ಘೋಷಿಸಿದ್ದು ಯಾಕೆ?

    ಟಿ-20 ವಿಶ್ವಕಪ್ ಆಡಬೇಕೆಂದಿದ್ದ ಧೋನಿ ಸಡನ್ ನಿವೃತ್ತಿ ಘೋಷಿಸಿದ್ದು ಯಾಕೆ?

    ನವದೆಹಲಿ: ಟಿ-20 ವಿಶ್ವಕಪ್ ಆಡಿ ನಿವೃತ್ತಿ ಆಗಬೇಕು ಎಂದುಕೊಂಡಿದ್ದ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಶನಿವಾರ ಸಂಜೆ ಡಿಢೀರ್‌ ನಿವೃತ್ತಿ ಘೋಷಣೆ ಮಾಡಿದ್ದಾರೆ.

    ಶನಿವಾರ ಸಂಜೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಧೋನಿಯವರು ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ಈ ಮೂಲಕ ಟಿ-20 ವಿಶ್ವಕಪ್ ಆಡುತ್ತಾರೆ ಎಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಆದರೆ ಟಿ-20 ವಿಶ್ವಕಪ್ ಆಡುವ ಪ್ಲಾನ್‍ನಲ್ಲಿ ಇದ್ದ ಧೋನಿ ಸಡನ್ ಆಗಿ ನಿವೃತ್ತಿ ಹೊಂದಲು ಕಾರಣ ತಿಳಿದು ಬಂದಿದೆ.

    ಧೋನಿಯವರ ಅಪ್ತ ವಲಯದಿಂದ ಬಂದ ಮಾಹಿತಿ ಪ್ರಕಾರ, ಧೋನಿ ಈ ವರ್ಷ ನಡೆಯಬೇಕಿದ್ದ ಟಿ-20 ವಿಶ್ವಕಪ್‍ನಲ್ಲಿ ಆಡಲು ತೀರ್ಮಾನಿಸಿದ್ದರು. ಆದರೆ ಕೊರೊನಾ ವೈರಸ್ ಕಾರಣದಿಂದ ಟಿ-20 ವಿಶ್ವಕಪ್ ಅನ್ನು ಐಸಿಸಿ ಮುಂದೂಡಿತ್ತು. ಆದರೆ ಈಗ ಟಿ-20 ವಿಶ್ವಕಪ್ ಅನ್ನು ಐಸಿಸಿ 2022ಕ್ಕೆ ನಡೆಸಲು ತೀರ್ಮಾನ ಮಾಡಿದೆ. ಹೀಗಾಗಿ ಧೋನಿಯವರು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ ಎಂದು ಹೇಳಲಾಗಿದೆ.

    ಕಳೆದ ವಿಶ್ವಕಪ್ ಸೈಮಿ ಫೈನಲ್ ಪಂದ್ಯದ ನಂತರ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಧೋನಿಯವರು, ವಿದಾಯ ಘೋಷಿಸುವ ಯಾವುದೇ ಸುಳಿವನ್ನು ನೀಡಿರಲಿಲ್ಲ. ಆದರೆ ಶನಿವಾರ ಸಂಜೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಸುದ್ದಿ ನೀಡಿದ್ದಾರೆ. ಈ ಮೂಲಕ ಧೋನಿಯನ್ನು ಮತ್ತೆ ನೀಲಿ ಜೆರ್ಸಿಯಲ್ಲಿ ನೋಡ ಬಯಸಿದ್ದ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆದರೆ ಅವರು ಈ ಬಾರಿಯ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಅಭಿಮಾನಿಗಳು ಧೋನಿಯನ್ನು ಮೈದಾನದಲ್ಲಿ ನೋಡು ಕಾತುರದಿಂದ ಕಾಯುತ್ತಿದ್ದಾರೆ.

    ಧೋನಿ ಈ ವರೆಗೆ 350 ಏಕದಿನ ಹಾಗೂ 98 ಟಿ-20 ಪಂದ್ಯಗಳನ್ನು ಆಡಿದ್ದಾರೆ. 350 ಏಕದಿನ ಪಂದ್ಯಗಳಲ್ಲಿ ಧೋನಿ 10,773 ರನ್‍ಗಳನ್ನು ಕಲೆ ಹಾಕಿದ್ದಾರೆ. 10 ಶತಗಳನ್ನು ಬಾರಿಸಿದ್ದಾರೆ. ಅಲ್ಲದೆ, 73 ಅರ್ಧ ಶತಕ ಹೊಡೆದಿದ್ದಾರೆ. ಅಲ್ಲದೆ 98 ಟಿ-20 ಪಂದ್ಯಗಳಲ್ಲಿ 1,617 ರನ್‍ಗಳನ್ನು ಗಳಿಸಿದ್ದು, ಎರಡು ಅರ್ಧ ಶತಕ ಬಾರಿಸಿದ್ದಾರೆ.

  • ಸಚಿನ್‍ರಂತೆ ಎಂಎಸ್‍ಡಿಯನ್ನು ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು: ಶ್ರೀಶಾಂತ್

    ಸಚಿನ್‍ರಂತೆ ಎಂಎಸ್‍ಡಿಯನ್ನು ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು: ಶ್ರೀಶಾಂತ್

    – ಧೋನಿ ಟಿ-20 ವಿಶ್ವಕಪ್ ಆಡಬೇಕು

    ನವದೆಹಲಿ: ಭಾರತ ಮಾಜಿ ನಾಯಕ ಎಂಎಸ್ ಧೋನಿ ಅವರು ಈ ಬಾರಿಯ ಟಿ-20 ವಿಶ್ವಕಪ್ ಆಡಬೇಕು ಮತ್ತು ಅವರನ್ನು ಕೂಡ ಸಚಿನ್ ಅವರಂತೆ ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು ಎಂದು ಭಾರತದ ವೇಗದ ಬೌಲರ್ ಶ್ರೀಶಾಂತ್ ಹೇಳಿದ್ದಾರೆ.

    ಕೊನೆಯ ಬಾರಿಗೆ 2019ರ ವಿಶ್ವಕಪ್‍ನಲ್ಲಿ ಬ್ಯಾಟ್ ಬೀಸಿದ್ದ ಧೋನಿ, ಆ ನಂತರ ಕ್ರಿಕೆಟ್‍ಯಿಂದ ದೂರ ಉಳಿದಿದ್ದರು. ಈ ನಡುವೆ ಐಪಿಎಲ್ ಆಡಲು ಧೋನಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಅದೂ ಸಾಧ್ಯವಾಗಿಲ್ಲ. ಈ ಎಲ್ಲದರ ನಡುವೆ ಧೋನಿ ಮತ್ತೆ ಕಮ್‍ಬ್ಯಾಕ್ ಮಾಡ್ತಾರಾ? ಇಲ್ಲ ನಿವೃತ್ತಿ ಪಡೆಯುತ್ತಾರಾ ಎಂಬ ಚರ್ಚೆಗಳು ಜೋರಾಗಿ ನಡೆದಿವೆ. ಈಗ ಶ್ರೀಶಾಂತ್ ಅವರು ಧೋನಿ ಮತ್ತೆ ಕ್ರಿಕೆಟ್ ಆಡಬೇಕು ಎಂದು ಹೇಳಿದ್ದಾರೆ.

    ಖಾಸಗಿ ಕ್ರಿಕೆಟ್ ವಾಹಿನಿಯೊಂದರ ಜೊತೆ ಮಾತನಾಡಿರುವ ಶ್ರೀಶಾಂತ್ ಅವರು, ಭಾರತೀಯ ಕ್ರಿಕೆಟ್ ಕ್ಷೇತ್ರಕ್ಕೆ ಧೋನಿ ಅವರ ಕೊಡುಗೆ ಅಪಾರ. ನಾಯಕನಾಗಿ ಅವರು ಮಾಡಿರುವ ಸಾಧನೆಗೆ ಸಾಟಿಯೇ ಇಲ್ಲ. ಈಗ ಧೋನಿ ಅವರನ್ನು ಟೀಕೆ ಮಾಡುತ್ತಿರುವವರಿಗೆ ಅವರು ಮುಂದೆ ಬ್ಯಾಟ್ ಮೂಲಕ ಉತ್ತರ ಕೊಡಲಿದ್ದಾರೆ. ಅವರು ಖಂಡಿತವಾಗಿಯೂ ಈ ಬಾರಿಯ ಟಿ-20 ವಿಶ್ವಕಪ್ ಆಡಬೇಕು ಎಂದು ತಿಳಿಸಿದ್ದಾರೆ.

    ನನಗೆ ವಿಶ್ವಪಕ್ ಮುಂಚೆಯೇ ಐಪಿಎಲ್ ನಡೆಯುತ್ತದೆ ಎಂದು ಭರವಸೆ ಇದೆ. ಈ ಐಪಿಎಲ್‍ನಲ್ಲಿ ಧೋನಿ ಭಾಯ್, ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರೆ. ಅವರು ಈಗ ಮೌನವಾಗಿ ಇರಬಹುದು. ಆದರೆ ಅವರಿಗೆ ಗೊತ್ತು ಏನೂ ಮಾಡಬೇಕು ಎಂದು. ಅವರು ದೇಶಕ್ಕಾಗಿ ಆಡಿದ್ದಾರೆ. ದೇಶಕ್ಕಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೆಲ್ಲ ಅವರು ದೇಶಕ್ಕಾಗಿ ಮಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ಕೆಲವರು ಯೋಚಿಸಬೇಕು ಎಂದು ಶ್ರೀಶಾಂತ್ ಹೇಳಿದ್ದಾರೆ.

    ಅವರ ನಿವೃತ್ತಿಯನ್ನು ಧೋನಿ ಅವರೇ ನಿರ್ಧಾರ ಮಾಡಲಿ. ಅವರು ಅಭಿಮಾನಿಗಳಿಗಾಗಿ ಅವರು ಮುಂದಿನ ಟಿ-20 ವಿಶ್ವಕಪ್ ಆಡಲಿ. 2011ರ ವಿಶ್ವಕಪ್‍ನಲ್ಲಿ ಸಚಿನ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಹಾಗೇ ಯಾರದಾರೂ ಮೈದಾನದಲ್ಲಿ ಧೋನಿ ಅವರನ್ನು ಹೊತ್ತು ಓಡಾಡಬೇಕು ಎಂಬುದು ನನ್ನ ಆಸೆ. ಅವರು ಅದಕ್ಕೆ ಅರ್ಹರಾಗಿದ್ದಾರೆ ಎಂದು ಶ್ರೀಶಾಂತ್ ಅಭಿಪ್ರಾಯ ಪಟ್ಟಿದ್ದಾರೆ.

    ಐಪಿಎಲ್ ಮ್ಯಾಚ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿದ್ದಾರೆ ಎಂದು ಬಿಸಿಸಿಐ ಶ್ರೀಶಾಂತ್ ಅವರನ್ನು ಕ್ರಿಕೆಟ್‍ನಿಂದ ನಿಷೇಧ ಮಾಡಿತ್ತು. ಈ ಅವಧಿ ಇದೇ ವರ್ಷದ ಸೆಪ್ಟಂಬರ್ ಗೆ ಮುಗಿಯಲಿದೆ. ಈಗಾಗಲೇ ಶ್ರೀಶಾಂತ್ ಕೇರಳದ ಪರವಾಗಿ ರಣಜಿ ಪಂದ್ಯವಾಡಲು ಸಿದ್ಧವಾಗಿದ್ದಾರೆ. ಜೊತೆಗೆ 2023ರಲ್ಲಿ ನಡೆಯುವ ವಿಶ್ವಕಪ್ ಆಡುವುದೇ ನನ್ನ ಗುರಿ ಎಂದು ಕೂಡ ಹೇಳಿಕೊಂಡಿದ್ದಾರೆ.

  • ಟಿ-20 ವಿಶ್ವಕಪ್‍ಗೆ ಹೊಸ ತಂಡ ಎಂಟ್ರಿ

    ಟಿ-20 ವಿಶ್ವಕಪ್‍ಗೆ ಹೊಸ ತಂಡ ಎಂಟ್ರಿ

    ದುಬೈ: ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ಪಪುವಾ ನ್ಯೂಗಿನಿ ತಂಡವು (ಪಿಎನ್‍ಜಿ) ಮೊದಲ ಬಾರಿಗೆ ಅರ್ಹತೆ ಪಡೆದುಕೊಂಡಿದೆ.

    ದುಬೈನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಭಾನುವಾರ ನಡೆದ ಬಲಿಷ್ಠ ಕೀನ್ಯಾ ವಿರುದ್ಧ ಪಿಎನ್‍ಜಿ 45 ರನ್‍ಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ಮೊತ್ತ ಮೊದಲ ಬಾರಿ ಟಿ-20 ವಿಶ್ವಕಪ್ ಟೂರ್ನಿಗೆ ಎಂಟ್ರಿ ಕೊಟ್ಟಿದೆ. ಇದನ್ನೂ ಓದಿ: ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್- 2020ಗೆ ಕಮ್‍ಬ್ಯಾಕ್

    ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಿಎನ್‍ಜಿ ತಂಡವು, ಸೆಸೆ ಬಾವ್ 17 ರನ್, ನೋರ್ಮನ್ ವನುವಾ 54 ರನ್, ಜೇಸನ್ ಕಿಲಾ 12 ರನ್ ಸಹಾಯದಿಂದ ಎಲ್ಲ ವಿಕೆಟ್ ಕಳೆದುಕೊಂಡು 19.3 ಓವರ್‌ಗಳಲ್ಲಿ 118 ರನ್‍ಗಳನ್ನು ಪೇರಿಸಿತು. ಬಳಿಕ ಬೌಲಿಂಗ್‍ನಲ್ಲಿ ಮಿಂಚಿದ ಪಿಎನ್‍ಜಿ ಕೀನ್ಯಾ ತಂಡವನ್ನು 18.4 ಓವರ್‌ಗಳಲ್ಲಿ 73 ರನ್‍ಗಳಿಗೆ ಆಲ್‍ಔಟ್ ಮಾಡಿತು.

    ಕಿನ್ಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರೂ ಪಿಎನ್‍ಜಿಗೆ ಟಿ-20 ವಿಶ್ವಕಪ್ ಅರ್ಹತೆ ಖಚಿತವಾಗಿರಲಿಲ್ಲ. ಏಕೆಂದರೆ ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯದ ಫಲಿತಾಂಶವನ್ನು ಆಧರಿಸಿತ್ತು. ಗ್ರೂಪ್ ಹಂತದಲ್ಲಿ ಆಡಿದ 6 ಪಂದ್ಯಗಳಲ್ಲಿ ಪಿಎನ್‍ಜಿ 5 ಗೆಲುವು ಮತ್ತು 1 ಸೋಲಿನೊಂದಿಗೆ ಒಟ್ಟು 10 ಅಂಕಗಳನ್ನು ಗಳಿಸಿತ್ತು. ಅಂತಿಮವಾಗಿ ಉತ್ತಮ ರನ್‍ರೇಟ್ ಆಧಾರದ ಮೇರೆಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ವಿಶ್ವಕಪ್ ಟಿಕೆಟ್ ಪಡೆದುಕೊಂಡಿದೆ.

    ಬ್ರಿಟೀಷ್ ಮಿಷಿನರಿಗಳು ಪಪುವಾ ನ್ಯೂಗಿನಿಯಲ್ಲಿ 1900ರಲ್ಲಿಯೇ ಕ್ರಿಕೆಟ್ ಪರಿಚಯಿಸಿದ್ದವು. ಆದರೆ ನ್ಯೂಗಿನಿ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಒಂದು ಶತಮಾನವನ್ನೇ ತೆಗೆದುಕೊಂಡಿದೆ. ಟಿ-20 ವಿಶ್ವಕಪ್‍ಗೆ ಎಂಟ್ರಿ ಪಡೆದ ಪಿಎನ್‍ಜಿಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

    ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ 14 ರಾಷ್ಟ್ರಗಳ ತಂಡಗಳು ಭಾಗವಹಿಸುತ್ತಿದ್ದು, ಈ ಪೈಕಿ ಪಿಎನ್‍ಜಿ ಮತ್ತು ಐರ್ಲೆಂಡ್ ಸೇರಿದಂತೆ ಆರು ತಂಡಗಳು 2020ರ ಟಿ-20 ವಿಶ್ವಕಪ್‍ನ ಮೊದಲ ಸುತ್ತಿನಲ್ಲಿ ಆಡುವ ಅವಕಾಶವನ್ನು ಪಡೆಯಲಿವೆ. ಇತರ ನಾಲ್ಕು ತಂಡಗಳನ್ನು ಅರ್ಹತಾ ಪಂದ್ಯಾವಳಿಯಿಂದಲೇ ನಿರ್ಧರಿಸಲಾಗುತ್ತದೆ. ಟಿ-20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ 2020ರ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ.

  • ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್- 2020ಗೆ ಕಮ್‍ಬ್ಯಾಕ್

    ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್- 2020ಗೆ ಕಮ್‍ಬ್ಯಾಕ್

    ನವದೆಹಲಿ: ಏಕದಿನ ವಿಶ್ವಪಕ್ ಟೂರ್ನಿ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‍ನಿಂದ ದೂರ ಉಳಿದಿದ್ದು, ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಧೋನಿ ಯಾವಾಗ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಮರಳುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿ ಗುಡ್ ನ್ಯೂಸ್ ಸಿಕ್ಕಿದೆ.

    ಧೋನಿ ಮುಂದಿನ ವರ್ಷದಿಂದ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಮರಳಲಿದ್ದಾರೆ. ಟಿ-20 ವಿಶ್ವಕಪ್‍ಗೆ ಸಿದ್ಧತೆ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ತವರಿನಲ್ಲಿ ಬಾಂಗ್ಲಾ ತಂಡದ ವಿರುದ್ಧ ಮೂರು ಪಂದ್ಯ ಆಟಲಿದೆ. ಆದರೆ ಟೂರ್ನಿಗೆ ಧೋನಿ ಅಲಭ್ಯರಾಗಿದ್ದಾರೆ. ಇದನ್ನೂ ಓದಿ: ಅಪ್ಪನ ಜೊತೆ ಹೊಸ ಜೀಪ್ ತೊಳೆದ ಧೋನಿ ಪುತ್ರಿ: ವಿಡಿಯೋ

    ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಎಂ.ಎಸ್.ಧೋನಿ ಅವರನ್ನು ಮರಳಿ ತರುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷ ಸೌರವ್ ಗಂಗೂಲಿ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಆಯ್ಕೆ ಸಮಿತಿ ಹಾಗೂ ಟೀಂ ಮ್ಯಾನೇಜ್‍ಮೆಂಟ್ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಟಿ-20 ವಿಶ್ವಕಪ್‍ಗೆ ಧೋನಿ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

    2020ರಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಗೂ ಐಸಿಸಿ ಟಿ-20 ವಿಶ್ವಕಪ್‍ನಲ್ಲಿ ಎಂ.ಎಸ್.ಧೋನಿ ಭಾಗವಹಿಸಲಿದ್ದಾರೆ. ಇದು ಧೋನಿ ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿ ತಂದಿದೆ.

    ಟೀಂ ಇಂಡಿಯಾ 2020ರ ಜನವರಿ ತಿಂಗಳಲ್ಲಿ ಶ್ರೀಲಂಕಾ ಭಾರತ ಪ್ರವಾಸವನ್ನು ಕೈಗೊಳ್ಳಲಿದೆ. ಜೊತೆಗೆ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಆಡಲಿದೆ. ಬಳಿಕ ನಾಯಕ ವಿರಾಟ್ ಕೊಹ್ಲಿ ಪಡೆಯು ಆಸ್ಟ್ರೇಲಿಯಾ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಇದಾದ ನಂತರ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ.

    ಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ 2020ರ ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ನಡೆಯಲಿದೆ. ಈ ನಿಟ್ಟಿನಲ್ಲಿ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದ್ದು, ಧೋನಿ ಅವರನ್ನು ಒಳಗೊಂಡಂತೆ ತಂಡ ಸಿದ್ಧ ಪಡಿಸಲು ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.