ಅಹಮದಾಬಾದ್: ಒಟ್ಟು 5 ಪಂದ್ಯಗಳ ಪೈಕಿ ತಲಾ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಹಾಗೂ ಇಂಗ್ಲೆಂಡ್ ಇಂದು ನಿರ್ಣಾಯಕ ಪಂದ್ಯವನ್ನಾಡಿದ್ದು, ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಅಬ್ಬರದ ಆಟದಿಂದಾಗಿ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯ ಕೊನೇಯ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿದೆ. 36 ರನ್‍ಗಳಿಂದ ಭಾರತ ವಿಜಯಿಯಾಗಿದ್ದು, 3-2 ಅಂತರದಲ್ಲಿ ಸರಣಿಯನ್ನು ತನ್ನದಾಗಹಿಸಿಕೊಂಡಿದೆ.
ಟಾಸ್ಕ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಆರಂಭಿಕ ಆಟಗಾರಾಗಿ ರೋಹಿತ್ ಶರ್ಮಾ ಹಾಗೂ ತಂಡದ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿದರು. ಇಬ್ಬರೂ ಉತ್ತಮ ಜೊತೆಯಾಟವಾಡುವ ಮೂಲಕ ಇಂಗ್ಲೆಂಡ್ ಬೌಲರ್‍ಗಳ ಬೆವರಿಳಿಸಿದರು. ಜೊತಯಾಟದಲ್ಲಿ ಬರೋಬ್ಬರಿ 94 ರನ್ ಗಳಿಸುವ ಮೂಲಕ ಸತತ ಮೂರನೇ ಬಾರಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ನಾಯಕ ಐಯಾನ್ ಮಾರ್ಗನ್ ಅವರ ಯೋಜನೆಯನ್ನು ತಲೆ ಕೆಳಗೆ ಮಾಡಿದರು.
ಹಿಟ್ ಮ್ಯಾನ್ ಸ್ಫೋಟಕ ಅರ್ಧ ಶತಕ
ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಭಾರತ ತಂಡ ಉತ್ತಮ ರನ್ ಕಲೆ ಹಾಕಲು ಸಹಕಾರಿಯಾಯಿತು. ಕೇವಲ 34 ಎಸೆತಗಳಿಗೆ 64 ರನ್(6 ಸಿಕ್ಸ್, 4 ಬೌಂಡರಿ) ಕಲೆ ಹಾಕುವ ಮೂಲಕ ತಂಡಕ್ಕೆ ಬೃಹತ್ ರನ್‍ಗಳ ಕೊಡುಗೆ ನೀಡಿದರು. ಆರಂಭದಿಂದಲೂ ಅಬ್ಬರದ ಆಟವಾಡಿದ್ದ ರೋಹಿತ್ ಶರ್ಮಾ 8ನೇ ಓವರ್ ನ ಕೊನೆಯಲ್ಲಿ ಬೆನ್ ಸ್ಟೋಕ್ ಬಾಲ್‍ಗೆ ಕ್ಲೀನ್ ಬೋಲ್ಡ್ ಆದರು.
ಅಚ್ಚರಿ ಮೂಡಿಸಿದ ವಿರಾಟ್
ನಾಯಕ ವಿರಾಟ್ ಕೊಹ್ಲಿ ಆರಂಭಿಕ ಆಟಗಾರಾರಾಗಿ ಕಣಕ್ಕಿಳಿದು ಔಟಾಗದೆ 52 ಬಾಲ್‍ಗೆ 80 ರನ್(2 ಸಿಕ್ಸ್ 7 ಬೌಂಡರಿ) ಚೆಚ್ಚಿ ತಂಡದ ಮೊತ್ತವನ್ನು 200 ದಾಟಿಸುವಲ್ಲಿ ಬೃಹತ್ ಕೊಡುಗೆ ನೀಡಿದರು. ಪಂದ್ಯವನ್ನು ಗೆಲುವಿನ ದಡಕ್ಕೆ ತಂದರು. ಇಬ್ಬರು ಆಟಗರರೊಂದಿಗೆ ಉತ್ತಮ ಜೊತೆಯಾಟವಾಡಿ ವಿರಾಟ್ ಕೊಹ್ಲಿ ಉತ್ತಮ ರನ್ ಕಲೆ ಹಾಕಿದರು. ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟವಾಡಿ 56 ಬಾಲ್‍ಗೆ 94 ರನ್ ಸಿಡಿಸಿದ್ದು, ಈ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿದರು. ಬಳಿಕ ನಾಯಕ ವಿರಾಟ್ ಕೊಹ್ಲಿಗೆ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟದಲ್ಲಿ 26 ಬಾಲ್‍ಗೆ 49 ರನ್ ಸಿಡಿಸಿದರು. ಹಾರ್ದಿಕ್ ಪಾಂಡ್ಯ ಜೊತೆಯಾಟವಾಡಿ 3ನೇ ವಿಕೆಟ್‍ಗೆ 40 ಎಸೆತಗಳಿಗೆ 81 ರನ್ ಸಿಡಿ ತಂಡ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು.

ಕೊಹ್ಲಿ ದಾಖಲೆ
ವಿರಾಟ್ ಕೊಹ್ಲಿ ಟಿ20ಯಲ್ಲಿ 12 ಅರ್ಧ ಶತಕ ದಾಖಲಿಸಿದ ಮೊದಲ ನಾಯಕ ಎಂಬ ದಾಖಲೆ ಬರೆದರು. ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸ್ 11 ಅರ್ಧ ಶತಕ ದಾಖಲಿಸಿದ್ದಾರೆ. ಆಸ್ಟ್ರೇಲಿಯಾದ ಕ್ಯಾಪ್ಟನ್ ಅರೋನ್ ಪಿಂಚ್ 10 ಅರ್ಧ ಶತಕ ದಾಖಲಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ 17 ಎಸೆತದಲ್ಲಿ 32 ಮತ್ತು ಹಾರ್ದಿಕ್ ಪಾಂಡ್ಯ 17 ಎಸೆತದಲ್ಲಿ 39 ರನ್ ಪೇರಿಸಿದರು.
ಭುವನೇಶ್ವರ್ ಕುಮಾರ್ ಪ್ಲೇಯರ್ ಆಫ್ ದಿ ಮ್ಯಾಚ್
ಕೇವಲ 15 ರನ್ ನೀಡಿ 2 ವಿಕೆಟ್ ಪಡೆದು ಅತ್ಯದ್ಭುತವಾಗಿ ಬಾಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಗೆ ಪ್ಲೇಯರ್ ಆಫ್ ದಿ ಮ್ಯಾಚ್ ನೀಡಲಾಗಿದೆ. ನಾಯಕ ವಿರಾಟ್ ಕೊಹ್ಲಿ ಅವರಿಗೆ ಪ್ಲೇಯರ್ ಆಫ್ ದಿ ಸಿರೀಸ್ ಸಹ ನೀಡಲಾಗಿದೆ.

ಸೂರ್ಯಕುಮಾರ್ ಯಾದವ್ ಸಹ ಅದೇ ವೇಗದಲ್ಲಿ ಆಟವಡಲು ಯತ್ನಿಸಿದರು. 17 ಬಾಲ್‍ಗೆ 32ರನ್(2 ಸಿಕ್ಸ್, 3 ಬೌಂಡರಿ) ಸಿಡಿಸಿದರು. ಉತ್ತಮ ಆಡವಾಡುತ್ತಿದ್ದರೂ 13ನೇ ಓವರ್ ಆರಂಭದಲ್ಲಿ ಕ್ರಿಸ್ ಜೋರ್ಡನ್ ಬಾಲ್‍ಗೆ ಜೇಸನ್ ರಾಯ್‍ಗೆ ಕ್ಯಾಚ್ ನೀಡಿದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಔಟಾಗದೆ 17 ಬಾಲ್‍ಗೆ 39 ರನ್(2 ಸಿಕ್ಸ್, 4 ಬೌಂಡರಿ) ಸಿಡಿಸಿದರು.
ಈಗಾಗಲೇ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಹಾಗೂ ಇಂಗ್ಲೆಂಡ್ ಟಿ-20 ಸರಣಿಯಲ್ಲಿ ಸಮ ಬಲ ಸಾಧಿಸಿದ್ದವು. ಇದು ನಿರ್ಣಾಯಕ ಪಂದ್ಯವಾಗಿದ್ದರಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು.
ಗೆಲುವಿಗೆ 225 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‍ಗೆ ಆರಂಭಿಕ ಆಘಾತ ನೀಡಿದ ಭೂವನೇಶ್ವರ್ ಕುಮಾರ್ ಎರಡನೇ ಬಾಲ್‍ಗೇ ಜೇಸನ್ ರಾಯ್‍ರನ್ನು ಕ್ಲೀನ್ ಬೋಲ್ಡ್ ಮಾಡಿದರು. ಈ ಮೂಲಕ ರಾಯ್ ಡಕೌಟ್ ಆದರು. ಅಬ್ಬರದ ಆಟವಾಡಿ 34 ಎಸೆತಗಳಿಗೆ 52 ರನ್(4 ಸಿಕ್ಸ್, 2 ಬೌಂಡರಿ) ಸಿಡಿಸಿ ಬಟ್ಲರ್ ಜೋಸ್ ಬಟ್ಲರ್ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ಬಳಿಕ ಜಾನಿ ಬೈರ್‍ಸ್ಟೋವ್ 7 ರನ್ (1 ಬೌಂಡರಿ) ಸಿಡಿಸಿ ಕ್ಯಾಚ್ ಸೂರ್ಯಕುಮಾರ್ ಯಾದವ್‍ಗೆ ಕ್ಯಾಚ್ ನೀಡಿದರು. ಬಳಿಕ ಡೇವಿಡ್ ಮಲನ್ ಮಿಂಚಿನಾಟವಾಡಿ 46 ಬಾಲ್‍ಗೆ 68 ರನ್ ಸಿಡಿಸಿ(2 ಸಿಕ್ಸ್, 9 ಬೌಂಡರಿ) ಶಾರ್ದೂಲ್ ಠಾಕೂರ್ ಅವರ ಬಾಲಿಗೆ ಕ್ಲೀನ್ ಬೌಲ್ಡ್ ಆದರು. ಬಳಿಕ ಐಯಾನ್ ಮಾರ್ಗನ್ ಸಹ 1 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಬೆನ್ ಸ್ಟೋಕ್ಸ್ 12 ಬಾಲ್‍ಗೆ 14ರನ್(2 ಬೌಂಡರಿ) ಬಾರಿಸಿ 18ನೇ ಓವರ್‍ನಲ್ಲಿ ಕ್ಯಾಚ್ ನೀಡಿದರು. ಇದೇ ಓವರ್ ಕೊನೇ ಬಾಲ್‍ಗೆ ಜೋಫ್ರಾ ಆರ್ಚರ್ 1 ರನ್ ಹೊಡೆದು ರನ್‍ಔಟ್ ಆದರು. ಕೊನೆಯದಾಗಿ ಕ್ರಿಸ್ ಜಾರ್ಡನ್ 10 ಬಾಲ್‍ಗೆ 11 ರನ್(1 ಸಿಕ್ಸ್) ಬಾರಿಸಿ ಸೂರ್ಯಕುಮಾರ್ ಯಾದವ್ ಅವರಿಗೆ ಕ್ಯಾಚ್ ನೀಡಿದರು.