Tag: ಟಿ-ಶರ್ಟ್

  • ಟಿ-ಶರ್ಟ್ ಹಾಕಲ್ಲ ಅಂದ್ರೆ ಶುಭಾಗೆ ಬೈಯ್ಯೋದ್ಯಾರು ಗೊತ್ತಾ?

    ಟಿ-ಶರ್ಟ್ ಹಾಕಲ್ಲ ಅಂದ್ರೆ ಶುಭಾಗೆ ಬೈಯ್ಯೋದ್ಯಾರು ಗೊತ್ತಾ?

    ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಸ್ಪರ್ಧಿಗಳು ಪ್ರತಿದಿನ ತಮಗೆ ಇಷ್ಟವಾದಂತಹ ಟ್ರೆಂಡಿ ಹಾಗೂ ಡಿಫರೆಂಟ್, ಡ್ರೆಸ್‍ಗಳನ್ನು ಹಾಕಿಕೊಳ್ಳುವ ಮೂಲಕ ಕಂಗೊಳಿಸುತ್ತಿದ್ದಾರೆ. ಸದ್ಯ ಬಿಗ್‍ಬಾಸ್, ಕ್ಯಾಪ್ಟನ್ ಮಂಜು ಸಾರಥ್ಯದಲ್ಲಿ ಮನೆಯ ಸದಸ್ಯರನ್ನು ನಾಲ್ಕು ಗುಂಪುಗಳಾಗಿ ಮಾಡಿ ಟಾಸ್ಕ್ ನೀಡುತ್ತಿದ್ದಾರೆ. ಅಲ್ಲದೆ ಈ ನಾಲ್ಕು ತಂಡದ ಸದಸ್ಯರಿಗೆ ಕೆಂಪು, ಬಿಳಿ, ಪಿಂಕ್ ಹಾಗೂ ಹಸಿರು ಬಣ್ಣದ ಟಿ-ಶರ್ಟ್‍ಗಳನ್ನು ನೀಡಿದ್ದಾರೆ.

    ಹೀಗಾಗಿ ಮನೆಯ ಎಲ್ಲಾ ಸದಸ್ಯರು ಟಿ-ಶರ್ಟ್ ಧರಿಸಿ ಟಾಸ್ಕ್ ಆಡಲು ಮುಂದಾಗಿದ್ದಾರೆ. ಈ ವೇಳೆ ವೈಷ್ಣವಿ ಹಾಗೂ ಶುಭಾ ಪೂಂಜಾ ಕೂಡ ಟಿ-ಶರ್ಟ್ ಧರಿಸಿ ಡ್ರೆಸಿಂಗ್ ಟೇಬಲ್‍ನ ಮೀರರ್ ಮುಂದೆ ನಿಂತು ಮೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಆಗ ವೈಷ್ಣವಿ, ಶುಭಾ ಪೂಂಜಾಗೆ ಯಾಕೆ ಟಿ-ಶರ್ಟ್ ಇಷ್ಟ ಇಲ್ವಾ ಅಂತ ಕೇಳ್ತಾರೆ. ಅದಕ್ಕೆ ಶುಭಾ, ಚಿಕ್ಕ ಮಕ್ಕಳಂತೆ ನನಗೆ ಇಷ್ಟ ಇಲ್ಲಾ ವೈಶು, ನನಗೆ ಈ ತರ ಟಿ-ಶಟ್ರ್ಸ್ ಇಷ್ಟ ಆಗಲ್ಲ. ನಾನು ಮನೆಯಲ್ಲೂ ಈ ತರ ಟಿ-ಶಟ್ರ್ಸ್ ಹಾಕಿಕೊಳ್ಳುವುದಿಲ್ಲ ಅಂತಾರೆ. ಅದಕ್ಕೆ ವೈಷ್ಣವಿ ಹಾಗಾದರೆ ಹಾಕಿಕೊಳ್ಳಬೇಡಿ ಬಿಚ್ಚಿಬಿಡಿ. ಗೌನ್ ಹಾಕಿಕೊಳ್ಳಿ ಎಂದು ಹೇಳುತ್ತಾರೆ.

    ಇದಕ್ಕೆ ಶುಭಾ ಇಲ್ಲ,.. ಅವರು ಬೈತಾರೆ, ಹ್ಯಾಸ್ ಇಟ್ ಈಸ್ ಅವರು ನನಗೆ ತುಂಬಾನೇ ಬೈತಿದ್ದಾರೆ ಇತ್ತೀಚಿಗೆ ಅಂತಾ ಹೇಳ್ತಾರೆ. ಆಗ ವೈಷ್ಣವಿ ನಿಮಗೆ ಬೈಯ್ಯಲು ಧೈರ್ಯ ಯಾರಿಗಿದೆ ಹೇಳಿ ಎಂದು ಕೇಳುತ್ತಾರೆ. ಇಲ್ಲ ಬೈತಿದ್ದಾರೆ, ತುಂಬಾ ತುಂಬಾ ಬೈತಿದ್ದಾರೆ, ನಾನು ಏನು ಮಾಡಿದೆ ಎಂದು ಶುಭ ಹೇಳಿದಾಗ, ವೈಷ್ಣವಿ ಮೈಕ್ ಹಾಕಲ್ಲ. ಗ್ಲಾಸ್ ಕದಿತ್ತಿರಾ ಅದಕ್ಕೆ ಬೈಯ್ತಾರೆ ಅಂತಾರೆ. ಇಲ್ಲ ನಾನು ನನ್ನ ಪಾಡಿಗೆ ಆಟ ಆಡ್ತಿದ್ದೀನಿ. ನನಗೆ ಯಾರಾದರೂ ಬೈದರೆ ನನಗೆ ಅರ್ಥನೇ ಆಗುವುದಿಲ್ಲ. ಯಾಕ್ ಬೈಬೇಕು? ನನ್ನ ಪಾಡಿಗೆ ನಾನು ಇದ್ದೇನೆ ಎಂದು ಕ್ಯೂಟ್ ಕ್ಯೂಟ್ ಆಗಿ ಸಣ್ಣ ಮಕ್ಕಳಂತೆ ಶುಭಾ.. ವೈಷ್ಣವಿ ಜೊತೆ ಮಾತನಾಡಿದ್ದಾರೆ.

    ಒಟ್ಟಾರೆ ಮಗುವಿನಂತೆ ಮನಸ್ಸು ಹೊಂದಿರುವ ಶುಭಾ, ನಿಜವಾಗಿಯೂ ಮಗುವಿನಂತೆ ಮುದ್ದು-ಮುದ್ದಾಗಿ ಮಾತನಾಡಿರುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು.

  • ಪತಿಯ ಶರ್ಟ್ ಮಿಸ್ ಮಾಡ್ಕೊಳ್ತಿದ್ದಾರೆ ರಾಧಿಕಾ

    ಪತಿಯ ಶರ್ಟ್ ಮಿಸ್ ಮಾಡ್ಕೊಳ್ತಿದ್ದಾರೆ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅವರು, ತಾವು ಗರ್ಭಿಣಿಯಾಗಿದ್ದಾಗ ಧರಿಸುತ್ತಿದ್ದ ಬಟ್ಟೆಯನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಹೌದು.. ರಾಧಿಕಾ ಪಂಡಿತ್ ಅವರು ಗರ್ಭಿಣಿಯಾದಾಗ ಪತಿ ಯಶ್ ಅವರ ಶರ್ಟ್ ಅನ್ನು ಧರಿಸುತ್ತಿದ್ದರು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಗರ್ಭಿಣಿಯಾಗಿದ್ದಾಗ ಪತಿ ಯಶ್ ಶರ್ಟ್ ಧರಿಸಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಈ ಬಗ್ಗೆ ರಾಧಿಕಾ ಅವರೇ ಹೇಳಿಕೊಂಡಿದ್ದಾರೆ.

    ನಟಿ ರಾಧಿಕಾ ಅವರು ಗರ್ಭಿಣಿಯಾಗಿದ್ದಾಗ ಯಶ್ ಟಿ-ಶರ್ಟ್ ಧರಿಸಿ, ಸ್ಪೆಕ್ಸ್ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದರು. ಆ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂ ಮತ್ತು ಫೇಸ್‍ಬುಕ್ ನಲ್ಲಿ ಈಗ ಅಪ್ಲೋಡ್ ಮಾಡಿದ್ದಾರೆ. ಫೋಟೋ ಜೊತೆಗೆ “ನಾನು ಗರ್ಭಿಣಿಯಾಗಿದ್ದಾಗ ಪತಿ ಯಶ್ ಟಿ-ಶರ್ಟ್ ಧರಿಸುತ್ತಿದ್ದೆ. ಆದರೆ ಈಗ ಅದನ್ನು ಧರಿಸಲು ಸಾಧ್ಯವಾಗುತ್ತಿಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಬರೆದು ಕೊಂಡಿದ್ದಾರೆ.

    ಪತಿ ಯಶ್ ಟಿ-ಶರ್ಟ್ ಧರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು, ಚೆನ್ನಾಗಿದೆ, ಸೂಪರ್ ಇಂತಹ ಅನೇಕ ಕಮೆಂಟ್ ಮಾಡುತ್ತಿದ್ದಾರೆ. ಈಗಾಗಲೇ 84 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.

    https://www.instagram.com/p/BrfsBMKBsbZ/

    ನಟಿ ರಾಧಿಕಾ ಪಂಡಿತ್ ಅವರು ಡಿಸೆಂಬರ್ 2 ಭಾನುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv