Tag: ಟಿ.ರಾಜಾ ಸಿಂಗ್

  • ತೆಲಂಗಾಣ | ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಸಿಗದ ಅವಕಾಶ – ಬಿಜೆಪಿಗೆ ಶಾಸಕ ರಾಜಾ ಸಿಂಗ್ ಗುಡ್‌ ಬೈ

    ತೆಲಂಗಾಣ | ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಸಿಗದ ಅವಕಾಶ – ಬಿಜೆಪಿಗೆ ಶಾಸಕ ರಾಜಾ ಸಿಂಗ್ ಗುಡ್‌ ಬೈ

    ಹೈದರಾಬಾದ್: ತೆಲಂಗಾಣ (Telangana) ಬಿಜೆಪಿಯ (BJP) ಫೈರ್ ಬ್ರಾಂಡ್ ಹಾಗೂ ಕಟ್ಟ ಹಿಂದುತ್ವವಾದಿ ಶಾಸಕ ಟಿ. ರಾಜಾ ಸಿಂಗ್ (T.Raja Sing) ಪಕ್ಷಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

    ರಾಜಾ ಸಿಂಗ್ ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ತೆಲಂಗಾಣ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಚೋದನಾತ್ಮಕ ಭಾಷಣಗಳಿಂದ ಅವರು ಆಗಾಗ ಸುದ್ದಿಯಾಗುತ್ತಿದ್ದರು. ಇದನ್ನೂ ಓದಿ: ಸ್ಲಂ ಬೋರ್ಡ್ ಮನೆ ನಿರ್ಮಾಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ತಹಶೀಲ್ದಾರ್ ವರದಿಯಲ್ಲಿ ಬಯಲಾಯ್ತು ಕರ್ಮಕಾಂಡ‌

    ರಾಜೀನಾಮೆ ಕುರಿತು ಕೇಂದ್ರ ಸಚಿವ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿಯವರಿಗೆ ಅವರು ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಪಕ್ಷದ ಕಚೇರಿಗೆ ಆಗಮಿಸಿ ಸಾಕಷ್ಟು ಸಮಯ ನಾಯಕರೊಂದಿಗೆ ಚರ್ಚಿಸಿ ಬಳಿಕ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

    ರಾಜೀನಾಮೆ ಪತ್ರದಲ್ಲಿ, ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ಎನ್ ರಾಮಚಂದ್ರ ರಾವ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ರಾವ್ ಅವರನ್ನು ನೇಮಕ ಮಾಡಲಾಗುವುದು ಎಂದು ಮಾಧ್ಯಮ ವರದಿಗಳಿಂದ ತಿಳಿದುಕೊಂಡಿದ್ದೇನೆ. ಈ ನಿರ್ಧಾರ ನನಗೆ ಮಾತ್ರವಲ್ಲ, ಪಕ್ಷದ ಜೊತೆ ಇರುವ ಲಕ್ಷಾಂತರ ಕಾರ್ಯಕರ್ತರು, ನಾಯಕರು ಮತ್ತು ಮತದಾರರಿಗೆ ನಿರಾಶೆಯನ್ನುಂಟು ಮಾಡಿದೆ ಎಂದು ಬರೆದಿದ್ದಾರೆ ಎಂದು ವರದಿಯಾಗಿದೆ.

    ರಾಜೀನಾಮೆ ಸಲ್ಲಿಸಿದ ಬಳಿಕ ಮಾತಾಡಿದ ರಾಜಾಸಿಂಗ್‌, ‘ರಾಮಚಂದ್ರ ರಾವ್ ಅವರಿಗೆ ಪಕ್ಷದ ಅಧಿಕಾರ ಹಸ್ತಾಂತರದಿಂದ ನನಗೆ ತೀವ್ರ ಬೇಸರವಿದೆ. ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಲು ಬಯಸಿದ್ದೆ. ಆದರೆ, ನನ್ನ ಬೆಂಬಲಿಗರಿಗೆ ಬೆದರಿಕೆ ಹಾಕಲಾಯಿತು. ನಾನು ನಾಮಪತ್ರ ಸಲ್ಲಿಸಲು ಬಂದಾಗ ನನಗೆ ಅವಕಾಶ ನೀಡಲಿಲ್ಲ. ಅವರು ತಮಗೆ ಬೇಕಾದ ಜನರಿಗೆ ಹುದ್ದೆಯನ್ನು ನೀಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

    ಹೈಕೋರ್ಟ್ ವಕೀಲ ಮತ್ತು ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ರಾಮಚಂದ್ರ ರಾವ್ ಅವರು ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಜನತಾ ಯುವ ಮೋರ್ಚಾ ಮತ್ತು ಬಿಜೆಪಿಯ ಕಾನೂನು ಘಟಕದಲ್ಲಿ ಕೆಲಸ ಮಾಡಿದ್ದರು. ಅವರು ಹಿಂದೆ ಪಕ್ಷದ ಹೈದರಾಬಾದ್ ಘಟಕದ ನೇತೃತ್ವ ವಹಿಸಿದ್ದರು. ಇದನ್ನೂ ಓದಿ: 5 ಹುಲಿಗಳ ಸಾವು ಪ್ರಕರಣ – ಡಿಸಿಎಫ್, ಎಸಿಎಫ್‌ಗಳಿಗೆ ಕಡ್ಡಾಯ ರಜೆ ಮೇಲೆ ತೆರಳಲು ಸರ್ಕಾರ ಆದೇಶ

  • ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನ – ತೆಲಂಗಾಣದ ಬಿಜೆಪಿ ಶಾಸಕ ಅರೆಸ್ಟ್‌

    ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನ – ತೆಲಂಗಾಣದ ಬಿಜೆಪಿ ಶಾಸಕ ಅರೆಸ್ಟ್‌

    ಹೈದರಾಬಾದ್: ಪ್ರವಾದಿ ಮೊಹಮ್ಮದ್‌ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ್ದಕ್ಕೆ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಶಾಸಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಿನ್ನೆ ರಾತ್ರಿ ಹೈದರಾಬಾದ್‌ನಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು. ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಕಾನೂನಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೈದರಾಬಾದ್‌ನ ದಕ್ಷಿಣ ವಲಯದ ಉಪ ಪೊಲೀಸ್ ಆಯುಕ್ತ ಪಿ.ಸಾಯಿ ಚೈತನ್ಯ ತಿಳಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಹತ್ಯೆಗೈಯಲು ಟರ್ಕಿಯಲ್ಲಿ ಉಗ್ರನಿಗೆ ಐಸಿಸ್ ತರಬೇತಿ!

    ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುವ ವೀಡಿಯೋವನ್ನು ಸಿಂಗ್ ಬಿಡುಗಡೆ ಮಾಡಿದ್ದರು. ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ರಾತ್ರಿ ನಗರ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ಅವರ ಕಚೇರಿ ಮತ್ತು ಹೈದರಾಬಾದ್‌ನ ಇತರ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು.

    ಸಿಂಗ್ ಅವರು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ತಕ್ಷಣ ಅವರನ್ನು ವಶಕ್ಕೆ ಪಡೆದು ನಂತರ ವಿವಿಧ ಠಾಣೆಗಳಿಗೆ ರವಾನಿಸಲಾಗಿದೆ. ಇದನ್ನೂ ಓದಿ: 2 ವರ್ಷಗಳ ನಂತರ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ಅನುಮತಿ

    ನಗರದ ಗೋಶಾಮಹಲ್‌ನ ಶಾಸಕ ಟಿ.ರಾಜಾ ಸಿಂಗ್‌ ಕಳೆದ ವಾರ ಹಾಸ್ಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದರು. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವ್ವರ್ ಫಾರೂಕಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲು ಸುಮಾರು 50 ಬೆಂಬಲಿಗರೊಂದಿಗೆ ಕಾರ್ಯಕ್ರಮದ ಸ್ಥಳಕ್ಕೆ ತಲುಪಲು ಪ್ರಯತ್ನಿಸಿದಾಗ ಅವರನ್ನು ಶುಕ್ರವಾರ ಪೊಲೀಸರು ತಡೆದು ಕಸ್ಟಡಿಗೆ ತೆಗೆದುಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಗೋ ರಕ್ಷಣೆಗಾಗಿ ಪಕ್ಷ ತೊರೆದ ಬಿಜೆಪಿ ಶಾಸಕ

    ಗೋ ರಕ್ಷಣೆಗಾಗಿ ಪಕ್ಷ ತೊರೆದ ಬಿಜೆಪಿ ಶಾಸಕ

    ಹೈದರಾಬಾದ್: ತೆಲಂಗಾಣ ರಾಜ್ಯದ ಗೋಶಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಭಾನುವಾರ ತೆಲಂಗಾಣದ ಬಿಜೆಪಿ ರಾಜ್ಯಾಧ್ಯಕ್ಷರಾದ ಕೆ. ಲಕ್ಷ್ಮಣ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಕೇಂದ್ರದಲ್ಲಿ ತಮ್ಮ ಪಕ್ಷ ಆಡಳಿತದಲ್ಲಿ ಇದ್ದರೂ, ಗೋ ರಕ್ಷಣೆ ಬಗ್ಗೆ ಸೂಕ್ತವಾದ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟಿ.ರಾಜಾ ಸಿಂಗ್ ಪರೋಕ್ಷವಾಗಿ ತಮ್ಮ ರಾಜೀನಾಮೆಯ ಕಾರಣವನ್ನು ತಿಳಿಸಿದ್ದಾರೆ.

    ಈ ಸಂಬಂಧ ಟ್ವಿಟ್ಟರ್‍ನಲ್ಲಿ ಸೆಲ್ಫಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿರುವ ಟಿ.ರಾಜಾ ಸಿಂಗ್, ನನಗೆ ಹಿಂದೂ ಧರ್ಮ, ಗೋರಕ್ಷೆ ಮೊದಲು, ನಂತರ ರಾಜಕೀಯ. ಈ ಸಂಬಂಧ ನನ್ನ ರಾಜೀನಾಮೆ ಪತ್ರವನ್ನು ಲಕ್ಷ್ಮಣ್ ಅವರಿಗೆ ನೀಡಿದ್ದೇನೆ. ನಾನು ಹಲವು ಬಾರಿ ಸದನದಲ್ಲಿ ಗೋ ರಕ್ಷಣೆಯ ಬಗ್ಗೆ ಕಟ್ಟು ನಿಟ್ಟಿನ ಕಾನೂನುಗಳನ್ನು ತರಬೇಕೆಂದು ನಾಯಕರ ಮೇಲೆ ಒತ್ತಡ ತಂದಿದ್ದೇನೆ. ಆದ್ರೆ ಯಾರು ನನ್ನ ಮಾತುಗಳನ್ನು ಕೇಳಿಲ್ಲ ಎಂದು ಟಿ.ರಾಜಾ ಅಸಮಾಧಾನ ಹೊರಹಾಕಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ನಾನು ಬಿಜೆಪಿಗೆ ರಾಜೀನಾಮೆ ನೀಡಿದ್ದು ಯಾಕೆ ಎಂದು ನನ್ನ ಬೆಂಬಲಿಗರು ಹಾಗು ಮಾಧ್ಯಮ ಮಿತ್ರರು ಪ್ರಶ್ನೆ ಮಾಡುತ್ತಿದ್ದಾರೆ. ತೆಲಂಗಾಣ ಸರ್ಕಾರ ಗೋ ಹತ್ಯೆ ಮಾಡಲು ಮುಂದಾಗುತ್ತಿದೆ. ಈ ಬಾರಿಯ ಬಕ್ರೀದ್ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ. ಬಕ್ರೀದ್ ನಲ್ಲಿ ಎಷ್ಟು ಗೋವುಗಳನ್ನು ಹತ್ಯೆ ಮಾಡಲಾಗುತ್ತೋ ಅಷ್ಟು ಮುಸ್ಲಿಂ ಮತಗಳು ಸಿಎಂ ಕೆಸಿ ಚಂದ್ರಶೇಖರ್ ಅವರಿಗೆ ಲಭಿಸಲಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗೋ ಹತ್ಯೆ ಮಾಡುವವರಿಗೆ ಪೊಲೀಸ್ ರಕ್ಷಣೆ ನೀಡಿದ್ದು, ವಿರೋಧಿಸಿದವರನ್ನು ಬಂಧಿಸಬೇಕೆಂದು ತಿಳಿಸಿದೆ. ನಾವು ಹಲವು ವರ್ಷಗಳಿಂದ ಗೋ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇವೆ. ಕಳೆದ ಬಾರಿ ನಮ್ಮ ಒತ್ತಡಗಳಿಂದ ಬಕ್ರೀದ್ ನಲ್ಲಿ ಪ್ರಾಣಿ ಬಲಿ ಕಡಿಮೆಯಾಗಿತ್ತು. ನಾನು ಗೋ ರಕ್ಷಣೆಗಾಗಿ ರಸ್ತೆಗೆ ಇಳಿದ್ರೆ ಏನು ಬೇಕಾದ್ರೂ ಆಗಬಹುದು. ನನ್ನಿಂದಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ಮೇಲೆ ಆರೋಪಗಳು ಬಾರದೇ ಇರಲಿ ಎಂದು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews