Tag: ಟಿ. ದಾಸರಹಳ್ಳಿ

  • ದಾಸರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟ – ಮಗು ಸೇರಿ ನಾಲ್ವರಿಗೆ ಗಾಯ

    ದಾಸರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟ – ಮಗು ಸೇರಿ ನಾಲ್ವರಿಗೆ ಗಾಯ

    ಬೆಂಗಳೂರು: ಇಲ್ಲಿನ ಟಿ.ದಾಸರಹಳ್ಳಿಯ (T.Dasarahalli) ಚೊಕ್ಕಸಂದ್ರದಲ್ಲಿ (Chokkasandra) ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡ ಪರಿಣಾಮ ಮಗು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

    ಇಂದು (ಜ.13) ಬೆಳಗ್ಗೆ 8:25ಕ್ಕೆ ಈ ಅವಘಡ ಸಂಭವಿಸಿದ್ದು, ಸ್ಫೋಟದಿಂದ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ತೀವ್ರತೆಗೆ ಬಾಗಿಲು, ಕಿಟಕಿ ಚೂರಾಗಿದ್ದು, ಕಿಟಕಿಗೆ ಹಾಕಿದ್ದ ಬಟ್ಟೆ ಸುಟ್ಟು ಕರಕಲಾಗಿದೆ. ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ಹಾನಿಯುಂಟು ಮಾಡಿದೆ.ಇದನ್ನೂ ಓದಿ: ಚಿತ್ರದುರ್ಗ | ಕೋಡಿಬಿದ್ದ ವಾಣಿವಿಲಾಸ ಸಾಗರ ಜಲಾಶಯ – ಜ.18ಕ್ಕೆ ಸಿಎಂ ಬಾಗಿನ

    ಒಂದು ಮಗು ಹಾಗೂ ಎದುರು ಮನೆಯಲ್ಲಿದ್ದ 25 ವರ್ಷದ ವ್ಯಕ್ತಿ ಸೇರಿ ಇಬ್ಬರು ಪುರುಷರು ಗಾಯಗೊಂಡಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದು, ಸ್ಥಳೀಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಪ್ರೀತಿಸುವಂತೆ ಮುಸ್ಲಿಂ ಯುವಕನಿಂದ ಕಿರುಕುಳ – ಅಪ್ರಾಪ್ತೆ ಆತ್ಮಹತ್ಯೆ, ಆರೋಪಿ ಬಂಧನ

  • ದಾಸರಹಳ್ಳಿಯಲ್ಲಿ ತಲೆಯೆತ್ತಿದ್ದ ಗುಂಡಿ ಸಮಸ್ಯೆ – ಡೆಡ್‌ಲೈನ್ ಮುಗಿದರೂ ದುರಸ್ತಿಯಿಲ್ಲ

    ದಾಸರಹಳ್ಳಿಯಲ್ಲಿ ತಲೆಯೆತ್ತಿದ್ದ ಗುಂಡಿ ಸಮಸ್ಯೆ – ಡೆಡ್‌ಲೈನ್ ಮುಗಿದರೂ ದುರಸ್ತಿಯಿಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಇತ್ತೀಚಿಗಷ್ಟೇ ಗುಂಡಿಯನ್ನು ಮುಚ್ಚಬೇಕು ಎನ್ನುವ ಡೆಡ್‌ಲೈನ್ (DeadLine) ಮುಗಿದಿದ್ದು, ನಗರದ ಹೊರವಲಯದಲ್ಲಿರುವ ಚಿಕ್ಕಸಂದ್ರ (Chikkasandra) ಮುಖ್ಯ ರಸ್ತೆಯಿಂದ ಹೆಸರುಘಟ್ಟ (Hesaraghatta) ರಸ್ತೆಯ ಸಾಕಷ್ಟು ಮುಖ್ಯ ರಸ್ತೆಗಳ ಗುಂಡಿಗಳು ಮುಚ್ಚದೇ ಹಾಗೇ ಉಳಿದಿವೆ.

    ಡಿಸಿಎಂ ಡಿ.ಕೆ.ಶಿವಕುಮಾರ್‌ರವರು (DCM DKShivakumar) ಬೆಂಗಳೂರು ನಗರವನ್ನು ಬ್ರಾಂಡ್ ಬೆಂಗಳೂರು (Brand Bengaluru) ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ನಡುವೆ ಬಿಬಿಎಂಪಿ (BBMP) ಅಧಿಕಾರಿಗಳಿಗೆ ನಗರದ ಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದರು. ಈಗಾಗಲೇ ಗಡುವು ಮುಗಿದು ಹಲವು ದಿನಗಳು ಕಳೆದಿವೆ. ಆದರೆ ಟಿ.ದಾಸರಹಳ್ಳಿ (T Dasarahalli) ವಿಧಾನಸಭಾ ಕ್ಷೇತ್ರದ ಚಿಕ್ಕಸಂದ್ರ ಮುಖ್ಯ ರಸ್ತೆಯಿಂದ ಹೆಸರುಘಟ್ಟ ರಸ್ತೆಯ ಸಾಕಷ್ಟು ಮುಖ್ಯ ರಸ್ತೆಗಳು ಗುಂಡಿ ಗಂಡಾಂತರಗಳಿಂದ ಕೂಡಿದ್ದು, ಅವ್ಯವಸ್ಥೆಯಾಗಿ ಉಳಿದಿದೆ.ಇದನ್ನೂ ಓದಿ: 2027ರ ವೇಳೆಗೆ ಚಂದ್ರಯಾನ-4ರ ಸುಳಿವು ಕೊಟ್ಟ ಇಸ್ರೋ; ಚಂದ್ರನಲ್ಲಿಗೆ ಗಗನಯಾತ್ರಿಗಳು ಹೆಜ್ಜೆ ಇಡಲು ಹೇಗೆ ಸಹಕಾರಿ?

    ಗಡುವು ನೀಡಿದ್ದರೂ ಈ ವಿಧಾನಸಭಾ ಕ್ಷೇತ್ರದಲ್ಲಿ ಜನರ ಪಾಡು ಕೇಳುವವರೇ ಇಲ್ಲದಂತಾಗಿದೆ. ಸಾಕಷ್ಟು ಬಾರಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಈ ಸಮಸ್ಯೆ ಹಾಗೆಯೇ ಉಳಿದಿದೆ. ಹೀಗಾಗಿ ರಸ್ತೆ ದುರಸ್ತಿಗಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

    ಮಂಡಿಯುದ್ದದ ಗುಂಡಿಗಳು ವಾಹನ ಸವಾರರಲ್ಲಿ ಮೃತ್ಯು ಕೂಪವಾಗಿ ಪರಿಣಮಿಸಿವೆ. ಯಮಸ್ವರೂಪಿ ಗುಂಡಿ ಗಂಡಾಂತರದಿಂದ ಎದ್ದು ಬಿದ್ದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ, ಶಾಲೆಯಿಂದ ಮನೆಗೆ ಕರೆತರಬೇಕಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇನ್ನೂ ಮಳೆಗಾಲದಲ್ಲಿ ಎಲ್ಲಿ ಗುಂಡಿ ಇದೆಯೋ, ಎಲ್ಲಿ ಮಳೆಯ ನೀರು ಇದೆಯೋ ಎಂಬುದು ತಿಳಿಯದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಮ್ಮ ಅಳಲನ್ನು ಆಕ್ರೋಶದ ರೀತಿಯಲ್ಲಿ ದುರಸ್ತಿ ಮಾಡಲು ಮನವಿ ಮಾಡಿದ್ದಾರೆ.

    ಒಟ್ಟಾರೆ ಬೃಹತ್ ಮಹಾನಗರ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಗಳು ಈ ವರ್ಷದಲ್ಲಿ ದುರಸ್ತಿಯಾಗುತ್ತದೆಯಾ? ಎಂಬ ಅನುಮಾನವಿದ್ದು, ಬಿಬಿಎಂಪಿ ಅಧಿಕಾರಿಗಳು ಡಿಸಿಎಂ ಆದೇಶಕ್ಕೆ ದುರಸ್ತಿ ಮಾಡುತ್ತಾರಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ – ಕಾಮುಕ ಶಿಕ್ಷಕ ಅರೆಸ್ಟ್‌

    &

  • ಹಳ್ಳಕೊಳ್ಳದಂತಿರುವ ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡಿ ಪ್ರತಿಭಟನೆ

    ಹಳ್ಳಕೊಳ್ಳದಂತಿರುವ ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡಿ ಪ್ರತಿಭಟನೆ

    ಬೆಂಗಳೂರು: ರಸ್ತೆಯನ್ನು ದುರಸ್ತಿ ಮಾಡದ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ  ವಿರುದ್ಧ ಸ್ಥಳೀಯ ನಿವಾಸಿಗಳು ರಸ್ತೆಯಲ್ಲಿ ಭತ್ತದ ಪೂರು ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ನಾಲ್ಕು ವರ್ಷದ ಹಿಂದೆ ಕಾವೇರಿ ನೀರಾವರಿ ಪೈಪ್ ಲೈನ್ ಹಾಗೂ ಒಳಚರಂಡಿಗೆ ರಸ್ತೆಯನ್ನ ದುರಸ್ತಿ ಮಾಡಲಾಗಿತ್ತು, ದುರಸ್ತಿ ಕೆಲಸ ಮುಗಿದು ವರ್ಷಗಳೇ ಕಳೆದರು ರಸ್ತೆ ಮಾಡದ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!

    ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾಡ್9ನ ಮೆದರಹಳ್ಳಿಯಲ್ಲಿ ಜನರು ಕೆಸರಿನಂತೆ ಇರುವ ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನ ಈ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಸ್ಲಾಂಪುರದಲ್ಲಿ ನೂತನ ಈದ್ಗಾ ಲೋಕಾರ್ಪಣೆ

    ಮಳೆ ಬಂದರೆ ಸಾಕು ಹಳ್ಳಕೊಳ್ಳದಂತಿರುವ ಈ ಕೆಸರಿನಂತ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ. ಮಕ್ಕಳು ವೃದ್ಧರು, ಮಹಿಳೆಯರು ಜಾರು ಬಿದ್ದು, ಎದ್ದ ಪ್ರಸಂಗಗಳು ನಿತ್ಯದ ಗೋಳಾಗಿದೆ. ಈಗಾಗಲೇ ಸಾಕಷ್ಟು ಮಂದಿ ಸ್ಥಳೀಯರು ಶಾಸಕ ಹಾಗೂ ಅಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈ ಮುಖ್ಯ ರಸ್ತೆ ಮೆದರಹಳ್ಳಿ ಯಿಂದ ಚಿಕ್ಕಬಾಣವಾರ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿನಿತ್ಯ ಸಾವಿರಾರು ಜನರು ಓಡಾಡುವ ಮುಖ್ಯ ರಸ್ತೆಯಲ್ಲಿ ನರಕಯಾತನೆಯಾಗಿ ಪರಿಗಣಿಸಿದೆ.

    ಟಿ.ದಾಸರಹಳ್ಳಿಯ ಶಾಸಕ ಆರ್. ಮಂಜುನಾಥ್ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ರಸ್ತೆ ದುರಸ್ತಿ ಮಾಡಿ ಟಾರ್ ಹಾಕುವಂತೆ, ರಸ್ತೆಯಲ್ಲಿ ಭತ್ತದ ಪೈರನ್ನ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

  • ಲಾಕ್‍ಡೌನ್ ನಡುವೆ ಆಪರೇಷನ್ ಕಮಲ – ಜೆಡಿಎಸ್‍ಗೆ ಶಾಕ್ ನೀಡಿದ ಮಾಜಿ ಬಿಜೆಪಿ ಶಾಸಕ

    ಲಾಕ್‍ಡೌನ್ ನಡುವೆ ಆಪರೇಷನ್ ಕಮಲ – ಜೆಡಿಎಸ್‍ಗೆ ಶಾಕ್ ನೀಡಿದ ಮಾಜಿ ಬಿಜೆಪಿ ಶಾಸಕ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‍ನ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ ಬಿಜೆಪಿಯ ಮಾಜಿ ಶಾಸಕ ಜೆಡಿಎಸ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

    ಬೆಂಗಳೂರು ನಗರದ ಹೊರವಲಯ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹಾಲಿ ಶಾಸಕ ಆರ್. ಮಂಜುನಾಥ್‍ಗೆ ಮಾಜಿ ಶಾಸಕ ಎಸ್. ಮುನಿರಾಜು ಶಾಕ್ ನೀಡಿದ್ದಾರೆ. ಟಿ.ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ರಾಜಗೋಪಾಲ ನಗರದ ಜೆಡಿಎಸ್ ಪಕ್ಷದ ಮಾಜಿ ಉಪಮೇಯರ್ ಪದ್ಮಾವತಿ ಪತಿ ನರಸಿಂಹಮೂರ್ತಿ ಸೇರಿದಂತೆ ರಾಜ್ಯ ಜೆಡಿಎಸ್ ಯುವ ಘಟಕದ ಹಿರಿಯ ಉಪಾಧ್ಯಕ್ಷ ಗೋಪಾಲಕೃಷ್ಣ ಹಾಗೂ ನೂರಾರು ಸಂಗಡಿಗರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ದಾಸರಹಳ್ಳಿಯ ಮಾಜಿ ಶಾಸಕ ಎಸ್. ಮುನಿರಾಜು ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಇಂದು ಅಧಿಕೃತವಾಗಿ ಸೇರ್ಪಡೆಯಾದರು. ಈ ವೇಳೆ ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಎನ್ ಲೋಕೇಶ್, ಮುಖಂಡರಾದ ಸಿ.ಎಂ ನಾಗರಾಜು ಮತ್ತಿತರರು ಹಾಜರಿದ್ದರು.

  • ನಿಖಿಲ್ ನೇತೃತ್ವದಲ್ಲಿ ಮಲ್ಲಸಂದ್ರ ವಾರ್ಡಿನಲ್ಲಿ ತರಕಾರಿ ಹಂಚಿಕೆ

    ನಿಖಿಲ್ ನೇತೃತ್ವದಲ್ಲಿ ಮಲ್ಲಸಂದ್ರ ವಾರ್ಡಿನಲ್ಲಿ ತರಕಾರಿ ಹಂಚಿಕೆ

    – ಸರ್ಕಾರದ ಸಹಾಯ ಪಡೆಯದೇ ಉಚಿತವಾಗಿ ಹಂಚಿಕೆ

    ಬೆಂಗಳೂರು: ನಗರದ ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರ ವಾರ್ಡಿನ ಬಡವರಿಗೆ ಇಂದು ಉಚಿತ ತರಕಾರಿ ವಿತರಣೆ ಮಾಡಲಾಯಿತು.

    ನಿಖಿಲ್ ಕುಮರಾಸ್ವಾಮಿ ನೇತೃತ್ವದಲ್ಲಿ ತರಕಾರಿ ವಿತರಣೆ ಮಾಡಿದ್ದು, ಸುಮಾರು 100 ಟನ್ ತರಾಕರಿ ಹಂಚಿಕೆಯಾಗಿದೆ. ಟಿ.ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಪುತ್ರ ಕಿರಣ್ ಮಂಜುನಾಥ್ ಹಂಚಿಕೆ ಮಾಡಿ ಮಾದರಿಯಾಗಿದ್ದಾರೆ. ರೈತರಿಂದ ನೇರವಾಗಿ ಕೊಂಡು ತಂದ ತರಕಾರಿಯನ್ನು ಜನರಿಗೆ ಹಂಚಿಕೆ ಮಾಡಲಾಯಿತು. ತರಕಾರಿ ವಿತರಣೆ ವೇಳೆ ಅಂತರ ಕಾಯ್ದುಕೊಳ್ಳದೆ ಜನರು ತರಕಾರಿಗೆ ಮುಗಿಬಿದ್ದ ಪ್ರಸಂಗವೂ ನಡೆಯಿತು.

    ಬಳಿಕ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಇಂದು ತರಕಾರಿ ಹಂಚಿಕೆ ಕಾರ್ಯಕ್ರಮಕ್ಕೆ ನಾನೇ ಚಾಲನೆ ನೀಡಿದ್ದೇನೆ. ಇದೊಂದು ಬಡವರ ಪರವಾದ ಉತ್ತಮ ಕೆಲಸವಾಗಿದೆ. ಜೆಡಿಎಸ್ ಎಲ್ಲ ಕಾರ್ಯಕರ್ತರು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಉತ್ತಮ ಗುಣಮಟ್ಟದ ತರಕಾರಿಯನ್ನು ಖರೀದಿಸಿ ವಿತರಿಸುತ್ತಿದ್ದಾರೆ. ಶಾಸಕ ಆರ್.ಮಂಜುನಾಥ್ ಈ ಕ್ಷೇತ್ರದಲ್ಲಿ ಲಾಕ್ ಡೌನ್ ಶುರುವಾದಾಗಿನಿಂದ ಉತ್ತಮ ಕೆಲಸ ಕಾರ್ಯ ಮಾಡ್ತಿದ್ದಾರೆ. ನೂರಾರು ಜನರಿಗೆ ತರಕಾರಿ ಕೊಡೊದ್ರಿಂದ ಸಹಾಯಕವಾಗಿದೆ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿಯನ್ನು ನೆನಪಿಸಿಕೊಂಡ ನಿಖಿಲ್ ದಾಸರಹಳ್ಳಿ ಶಾಸಕರಿಗೆ ಶುಭ ಕೋರಿದರು.

    ಶಾಸಕ ಆರ್.ಮಂಜುನಾಥ್ ಕೊರೊನಾ ಸಂಕಷ್ಟದಲ್ಲಿರುವ ರೈತರಿಂದ ನೇರವಾಗಿ ಖರೀದಿಸಿದ್ದೇವೆ. 116 ಟನ್ ತರಕಾರಿಗಳನ್ನು ತಂದು ಹಂಚಿಕೆ ಮಾಡ್ತಿದ್ದೇವೆ. ದಾಸರಹಳ್ಳಿ ಜನರ ಕಷ್ಟ ಕಾಲದಲ್ಲಿ ಯಾವತ್ತೂ ನಾನಿದ್ದೇನೆ 10ಕ್ಕೂ ಬಗೆಯ ತರಕಾರಿಗಳನ್ನು ತಂದು ಉಚಿತವಾಗಿ ಹಂಚುತ್ತಿದ್ದೇವೆ. ಸರ್ಕಾರದಿಂದ ಯಾವುದೇ ಸಹಾಯ ಕೂಡ ಪಡೆದಿಲ್ಲ. ನನ್ನ ಸ್ವಂತ ಖರ್ಚಿನಿಂದ ಫ್ರೆಶ್ ತರಕಾರಿಗಳನ್ನು ಹಂಚುತ್ತಿದ್ದೇವೆ ಎಂದರು.

  • ನಾಪತ್ತೆಯಾಗಿದ್ದ ಬೆಂಗ್ಳೂರಿನ ಇಬ್ಬರು ವಿದ್ಯಾರ್ಥಿಗಳು ಶಿವಮೊಗ್ಗದಲ್ಲಿ ಪತ್ತೆ!

    ನಾಪತ್ತೆಯಾಗಿದ್ದ ಬೆಂಗ್ಳೂರಿನ ಇಬ್ಬರು ವಿದ್ಯಾರ್ಥಿಗಳು ಶಿವಮೊಗ್ಗದಲ್ಲಿ ಪತ್ತೆ!

    ಶಿವಮೊಗ್ಗ: 12 ದಿನದ ಹಿಂದೆ ಮನೆ ಬಿಟ್ಟು ಬಂದ ಇಬ್ಬರು ಬಾಲಕರು ಸೋಮವಾರ ತಡರಾತ್ರಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.

    ಬೆಂಗಳೂರು ಟಿ.ದಾಸರಹಳ್ಳಿಯ ಪ್ರಶಾಂತ್ ನಗರದ ಶ್ರೀಗೀತಾ ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಾದ ಪ್ರಮೋದ್ ಹಾಗೂ ಧನುಷ್ ಮನೆ ಬಿಟ್ಟು ಊರೂರು ತಿರುಗಿ ಬಳಿಕ ಇದೀಗ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾರೆ.

    ಶಾಲೆಯಲ್ಲಿ ಪ್ರಮೋದ್ ಗೆಳೆಯರ ಜೊತೆ ಹೊಡೆದಾಡಿಕೊಂಡಿದ್ದಾನೆ. ಈ ವಿಷಯ ಮನೆಯವರಿಗೆ ಗೊತ್ತಾಗಿದೆ. ಮನೆಯವರು ಹೊಡೆಯುತ್ತಾರೆ ಎಂಬ ಭಯದಿಂದ ಗೆಳೆಯ ಧನುಷ್ ನನ್ನೂ ಕರೆದುಕೊಂಡು ಸೀದಾ ಶಿವಮೊಗ್ಗ ರೈಲು ಹತ್ತಿ ಬಂದಿದ್ದಾನೆ. ಇಲ್ಲಿ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಊಟ-ತಿಂಡಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅದು ಬೇಸರವಾದಾಗ ಬೇರೆ ಊರಿಗೆ ಹೋಗುವ ಪ್ಲಾನ್ ಮಾಡಿಕೊಂಡು ರೈಲ್ವೆ ನಿಲ್ದಾಣಕ್ಕೆ ತಡರಾತ್ರಿ ಬಂದಿರುವುದಾಗಿ ತಿಳಿದುಬಂದಿದೆ.

    ರೈಲ್ವೆ ನಿಲ್ದಾಣದಲ್ಲಿ ಇವರ ಬಗ್ಗೆ ಅನುಮಾನ ಪಟ್ಟ ಆಟೋ ಚಾಲಕರೊಬ್ಬರು ಕೂಡಲೇ ಬಾಲಕರನ್ನು ಸಮೀಪದ ಜಯನಗರ ಠಾಣೆಗೆ ಬಿಟ್ಟಿದ್ದಾರೆ.

    ಸದ್ಯ ಜಯನಗರ ಪೊಲೀಸರು ಈ ಬಾಲಕರ ಪೋಷಕರನ್ನು ಪತ್ತೆ ಹಚ್ಚಿ ಅವರನ್ನು ಕರೆಸಲು ಕ್ರಮಕೈಗೊಂಡಿದ್ದಾರೆ.