Tag: ಟಿ.ಕೆ.ದಯಾನಂದ್

  • ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

    ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

    ನಿನ್ನೆಯಿಂದ ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾದ ಫಸ್ಟ್ ಲುಕ್ ಟ್ರೆಂಡಿಂಗ್ ನಲ್ಲಿದೆ. ವಿಲಕ್ಷಣವಾದ ಪೋಸ್ಟರ್ ಇದಾಗಿದ್ದು, ಸಿನಿಮಾದ ಕಥೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಪೋಸ್ಟರ್ ಗೂ ಕಥೆಗೂ ಏನಾದರೂ ಸಂಬಂಧವಿದೆಯಾ ಎನ್ನುವ ಪ್ರಶ್ನೆಯೂ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

    ಈ ಸಿನಿಮಾದ ಕಥೆ, ಚಿತ್ರಕಥೆ ಬರೆದಿರುವುದು ಕಥೆಗಾರ ಟಿ.ಕೆ.ದಯಾನಂದ್ (TK Dayanand). ಅವರೇ ಸಿನಿಮಾದ ಕಥೆಯ ಗುಟ್ಟನ್ನೂ ರಟ್ಟು ಮಾಡಿದ್ದಾರೆ. ತಾವೇ ಸ್ವತಃ ನೋಡಿದ ಕಾರವಾರದ (Karwar) ವಿಲಕ್ಷಣ ವ್ಯಕ್ತಿಯ ಬದುಕನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರಂತೆ. ಆ ವ್ಯಕ್ತಿಯನ್ನು ನೋಡಿದಾಗಿಂದ, ನನ್ನಲ್ಲಿ ಆತ  ನಾನಾ ರೀತಿಯಲ್ಲಿ ಕಾಡಿದ. ಆ ಕಾಡಿದ ವ್ಯಕ್ತಿಯ ಕಥೆಯೇ ಟೋಬಿ ಸಿನಿಮಾ ಎಂದಿದ್ದಾರೆ ಟಿ.ಕೆ.ದಯಾನಂದ್.

    ನಿನ್ನೆ ‘ಟೋಬಿ’ (Toby) ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಮೂಲಕ ರಾಜ್ ಧೂಳೆಬ್ಬಿಸಲು ರೆಡಿಯಾಗಿದ್ದಾರೆ. ಸದ್ಯ ‘ಟೋಬಿ’ ಸಿನಿಮಾದ ಫಸ್ಟ್ ಲುಕ್ ಮೂಲಕ ರಾಜ್ ಬಿ ಶೆಟ್ಟಿ (Raj B Shetty) ಸಂಚಲನ ಮೂಡಿಸಿದ್ದಾರೆ. ಇದನ್ನೂ ಓದಿ:‘ಎಮರ್ಜೆನ್ಸಿ’ ನಂತರದ ಸಿನಿಮಾ ಸುಳಿವು ಕೊಟ್ಟ ಕಂಗನಾ ರಣಾವತ್

    ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ನಟ ಕಮ್ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ ಅವರು ಭಿನ್ನ ಕಥೆಗಳನ್ನ ಆಯ್ಕೆ ಮಾಡಿ, ಸಿನಿಮಾ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ರಾಜ್ ಬಿ ಶೆಟ್ಟಿ, ಅವರ ಮೇಲಿನ ಕ್ರೇಜ್ ಫ್ಯಾನ್ಸ್ಗೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ‘ಟೋಬಿ’ ಚಿತ್ರದ ಸುದ್ದಿನೂ ಅದಕ್ಕೆ ಸಾಕ್ಷಿ ಆಗಿದೆ. ಸೋಷಿಯಲ್ ಮೀಡಿಯಾದ ಯಾವುದೇ ಪೇಜ್ ತೆಗೆದ್ರು ಅಷ್ಟೇನೆ, ಅಲ್ಲಿ `ಟೋಬಿ’ ಚಿತ್ರದ ಕ್ರೇಜ್ ಕಂಡು ಬರುತ್ತಿದೆ. ಅಷ್ಟರ ಮಟ್ಟಿಗೆ ಸಿನಿಮಾ ರಿಲೀಸ್ ಮುನ್ನವೇ ಸಂಚಲನ ಸೃಷ್ಟಿಸಿದೆ.

    ಇತ್ತೀಚಿಗಷ್ಟೇ ಟೋಬಿ ಸಿನಿಮಾದ ಸಣ್ಣ ಝಲಕ್‌ವೊಂದು ರಿವೀಲ್ ಆಗಿತ್ತು. ಇದು ಸೋಷಿಯಲ್ ಮೀಡಿಯಾ ಶೇಕ್ ಮಾಡುವಷ್ಟು ಸಿನಿಪ್ರಿಯರ ಗಮನ ಸೆಳೆಯಿತು. ಈಗ ಟೋಬಿ ಚಿತ್ರದ ಫಸ್ಟ್ ರಿವೀಲ್ ಆಗಿದೆ. ಅದರಲ್ಲಿ ರಾಜ್ ಬಿ ಶೆಟ್ಟಿ ಅವರು ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೂಗಿಗೆ ರಿಂಗ್ ಧರಿಸಿದ್ದು, ಮುಖದ ಇಂಟು ಮಾರ್ಕ್ ಇದೆ. ಟೋಟಲಿ ರಾ ಲುಕ್‌ನಲ್ಲಿ ಶೆಟ್ರು ಶೈನ್ ಆಗಿದ್ದಾರೆ. ಫಸ್ಟ್‌ ಲುಕ್‌ ಟೀಸರ್‌ನಲ್ಲಿ ರಕ್ತ-ಸಿಕ್ತ ಅವತಾರದಲ್ಲಿ ನಟ ಕಾಣಿಸಿಕೊಂಡಿದ್ದಾರೆ. ‘ಟೋಬಿ’ ಸಿನಿಮಾದ ಮೂಲಕ ಶೆಟ್ರು ಏನೋ ಹೇಳೋದ್ದಕ್ಕೆ ಹೊರಟಿದ್ದಾರೆ ಏನು ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಮೂಡಿದೆ. ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ಚೈತ್ರಾ ಆಚಾರ್ ನಟಿಸಿದ್ದಾರೆ.

     

    ‘ಟೋಬಿ’ ಸಿನಿಮಾದಲ್ಲಿ ಕಂಟೆಂಟ್ ಇದೆ. ಕಮರ್ಷಿಯಲ್ ಟಚ್ ಕೂಡ ಇದೆ. ಎರಡೂ ಇರೋ ಈ ಚಿತ್ರವನ್ನ ಕಂಟೆಂಟ್ ಬೇಸ್ ಕಮರ್ಷಿಯಲ್ ಸಿನಿಮಾ ಅಂತಲೇ ರಾಜ್ ಬಿ ಶೆಟ್ರು ಹೇಳಿಕೊಂಡಿದ್ದಾರೆ. ಜೊತೆಗೆ ಈ ಚಿತ್ರದ ರಾಜ್ ಬಿ ಶೆಟ್ರ ಚಿತ್ರ ಜೀವನದ ಮೊದಲ ಕರ್ಮಷಿಯಲ್ ಸಿನಿಮಾ ಕೂಡ ಆಗಿದೆ. ಫಸ್ಟ್ ಲುಕ್ ನೋಡಿದ್ರೆ ರಾಜ್ ಬಿ ಶೆಟ್ಟಿ ಅವರ ಕೆರಿಯರ್‌ನಲ್ಲಿ ಈ ಸಿನಿಮಾ ಮೈಲುಗಲ್ಲು ಸೃಷ್ಟಿಸೋದಂತೂ ಗ್ಯಾರಂಟಿ ಅಂತಿದ್ದಾರೆ ಸಿನಿಪಂಡಿತರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ಕಥೆಗಾರ ಟಿ.ಕೆ. ದಯಾನಂದ್ ಬರೆದ ಕಥೆಯೇ ‘ಟೋಬಿ’ ಸಿನಿಮಾ

    ಖ್ಯಾತ ಕಥೆಗಾರ ಟಿ.ಕೆ. ದಯಾನಂದ್ ಬರೆದ ಕಥೆಯೇ ‘ಟೋಬಿ’ ಸಿನಿಮಾ

    ಮೊದಲಿನಿಂದಲೂ ತಮ್ಮ ವಿಭಿನ್ನಪಾತ್ರಗಳ ಮೂಲಕ ಜನರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ (Raj B Shetty) ನಾಯಕರಾಗಿ ನಟಿಸಿರುವ ‘ಟೋಬಿ’ (Toby) ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ವಿಭಿನ್ನ ಕಥೆಯ ಈ ಚಿತ್ರ ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ.‌ ಪ್ರತಿಷ್ಠಿತ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದೆ. ಟೋಬಿ ಚಿತ್ರಕ್ಕೆ ‘ಮಾರಿ ಮಾರಿ ..ಮಾರಿಗೆ ದಾರಿ’ ಎಂಬ ಅಡಿಬರಹವಿದೆ.

    ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ಮತ್ತೊಂದು ಖುಷಿ ಸಂಗತಿ ಅಂದರೆ, ಈ ಚಿತ್ರಕ್ಕೆ ಕಥೆ ಬರೆದದ್ದು ಖ್ಯಾತ ಕಥೆಗಾರ ಟಿ.ಕೆ ದಯಾನಂದ್ (T.K Dayanand). ಸಂಭಾಷಣೆಗಾರರಾಗಿ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಟಿ.ಕೆ ದಯಾನಂದ್, ಬೆಲ್ ಬಾಟಮ್, ಅಶೋಕ ಬ್ಲೇಡ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಟೋಬಿಗೂ ಕೂಡ ಇವರದ್ದೇ ಕಥೆಯಿದೆ.  ಇದನ್ನೂ ಓದಿ:8 ವರ್ಷದ ಪ್ರೀತಿಗೆ ಸೈನಿಕನ ಜೊತೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾದ ‘ಗಿಣಿರಾಮ’ ನಟಿ

    ರಾಜ್ ಬಿ ಶೆಟ್ಟಿ  ಈವರೆಗಿನ ಚಿತ್ರಗಳ ಪೈಕಿ ಟೋಬಿ ಬಿಗ್ ಬಜೆಟ್ ನ ಚಿತ್ರವಾಗಿದೆ. ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

     

    ಮೂಲಕಥೆ ಟಿ.ಕೆ ದಯಾನಂದ್ ಅವರದು. ರಾಜ್ ಬಿ ಶೆಟ್ಟಿ ರಚೆನೆ ಹಾಗೂ ಬಾಸಿಲ್ (Basil) ಅವರ ನಿರ್ದೇಶನ ಈ ಚಿತ್ರಕ್ಕಿದೆ. ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ –  ಸಂಕಲನ ಹಾಗೂ ಅರ್ಜುನ್ ರಾಜ್ – ರಾಜಶೇಖರ್ ಅವರ ಸಾಹಸ ನಿರ್ದೇಶನ ಟೋಬಿ ಚಿತ್ರಕಿದ್ದು,  ರಾಜ್ ಬಿ ಶೆಟ್ಟಿ, ಸಂಯುಕ್ತ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ  ಮುಂತಾದವರು  ತಾರಾಬಳಗದಲ್ಲಿದ್ದಾರೆ.

  • ಭಾರತೀಯ ಸಿನಿಮಾ ರಂಗದಲ್ಲೇ ಮಾಡಿರದ ಕಥೆಯೊಂದು ಕನ್ನಡದಲ್ಲಿ: ನೀನಾಸಂ ಸತೀಶ್

    ಭಾರತೀಯ ಸಿನಿಮಾ ರಂಗದಲ್ಲೇ ಮಾಡಿರದ ಕಥೆಯೊಂದು ಕನ್ನಡದಲ್ಲಿ: ನೀನಾಸಂ ಸತೀಶ್

    ನೀನಾಸಂ ಸತೀಶ್ ನಾಯಕರಾಗಿ ನಟಿಸುತ್ತಿರುವ ” ಅಶೋಕ ಬ್ಲೇಡ್” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಪಿ.ಶೇಷಾದ್ರಿ ಆರಂಭಫಲಕ ತೋರಿದರು. ಟಿ.ಎನ್.ಸೀತಾರಾಂ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಇದನ್ನೂ ಓದಿ: ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!

    ನಾನು ಹಲವಾರು ವರ್ಷಗಳಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಿ. ಶೇಷಾದ್ರಿ, ಟಿ.ಎನ್​. ಸೀತಾರಾಂ ಅವರ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ವರ್ಧನ್​ ಮತ್ತು ದೀಪಕ್​ ನಾಯ್ಡು ಅವರ ಪರಿಚಯವಾಯಿತು. ಮೂರು ಜನ ಸೇರಿ 10 ವರ್ಷಗಳ ಹಿಂದೆ ಒಂದು ಪ್ರೊಡಕ್ಷನ್​ ಹೌಸ್​ ಪ್ರಾರಂಭಿಸಿ, ಹಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದೇವೆ. ಒಂದು ಚಿತ್ರ ನಿರ್ಮಾಣ ಮಾಡುವ ಯೋಚನೆ ಇತ್ತು. ಟಿ.ಕೆ. ದಯಾನಂದ್​ ಅವರ ಹತ್ತಿರ ಒಂದೊಳ್ಳೆಯ ಕಥೆ ಇದೆ ಎಂದು ಗೊತ್ತಾಯಿತು. ಕಥೆ ಕೇಳಿದಾಗ ಬಹಳ ಇಷ್ಟವಾಯಿತು. ಇದೇ ನಮ್ಮ ಸಂಸ್ಥೆಯ ಮೊದಲ ಚಿತ್ರವಾಗಬೇಕು ಎಂದು ತೀರ್ಮಾನಿಸಿ ಚಿತ್ರ ಮಾಡುತ್ತಿದ್ದೇವೆ. ಸತೀಶ್​ ನೀನಾಸಂ ಸಹ ಕೈ ಜೋಡಿಸಿದ್ದಾರೆ. ವರ್ತಕರು ಮತ್ತು ಕಾರ್ಮಿಕರ ನಡುವೆ ನಡೆಯುವ ಯುದ್ಧದ ಕುರಿತು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಿರ್ದೇಶಕ ವಿನೋದ್ ದೋಂಡಾಳೆ ಮಾಹಿತಿ ನೀಡಿದರು.

    ದಿನ ಬೆಳಗಾದರೆ ಹಲವು ನಿರ್ದೇಶಕರು ಬಂದು ಕಥೆ ಹೇಳುತ್ತಾರೆ. ಆದರೆ, ಈ ಕಥೆ ಹುಡುಕಿದ್ದು ನಾನೇ. ಸ್ನೇಹಿತರ ಮೂಲಕ ದಯಾನಂದ್​ ಅವರ ಬಳಿ ಒಳ್ಳೆಯ ಕಥೆ ಇದೆ ಎಂದು ಕೇಳಿದೆ. ತರಿಸಿ ಓದಿದೆ. ತಕ್ಷಣ ಈ ಚಿತ್ರವನ್ನು ಮಾಡಬೇಕು ಎಂದನಿಸಿತು. ಇದೊಂದು ದೊಡ್ಡ ಕ್ಯಾನ್ವಾಸ್​ನ ಚಿತ್ರ. ಒಂದು ಐತಿಹಾಸಿಕ ಯುದ್ಧವಿದೆ. 10 ನಿಮಿಷಗಳ ಕಾಲ ಸಾವಿರ ಜನ ಭಾಗವಹಿಸುವ ಯುದ್ಧ. ಅದನ್ನು ವಿನೋದ್​ ಸಮರ್ಥವಾಗಿ ತೆರೆಯ ಮೇಲೆ ತರುತ್ತಾರೆ ಎಂಬ ನಂಬಿಕೆ ಇದೆ. ಈ ಯುದ್ಧದಲ್ಲಿ ಒಬ್ಬ ಸೂಪರ್​ ಸ್ಟಾರ್​ ಕಾಣಿಸಿಕೊಳ್ಳಲಿದ್ದಾರೆ. ಉತ್ತರಾಖಂಡ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ನಾಳೆಯಿಂದ ಚಿತ್ರೀಕರಣ ಶುರುವಾಗಲಿದ್ದು, ನಾನು ಜುಲೈನಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದೇನೆ ಎನ್ನುತ್ತಾರೆ ನೀನಾಸಂ ಸತೀಶ್. ಇನದನ್ನೂ ಓದಿ:`ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ

    ಮೊದಲ ಬಾರಿಗೆ ಇನ್​ಸ್ಪೆಕ್ಟರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ಒಳ್ಳೆಯ ಪಾತ್ರ ಇದು. ಚಿತ್ರವು ಎರಡು ಕಾಲಘಟ್ಟದಲ್ಲಿ ನಡೆಯಲಿದೆ. ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು ಕಾವ್ಯ ಶೆಟ್ಟಿ. ದಯಾನಂದ್ ಅವರು ಈ ಕಥೆ ಹೇಳಿದ ತಕ್ಷಣ ನಮಗೆ ಹಾಗೂ ನಿರ್ದೇಶಕ ವಿನೋದ್ ಅವರಿಗೆ ಹಿಡಿಸಿತು. ಇದೇ ಕಥೆಯನ್ನು ಸಿನಿಮಾ ಮಾಡಲು ತೀರ್ಮಾನಿಸಿದ್ದೆವು. ಇದೊಂದು ಬಿಗ್ ಬಜೆಟ್ ಸಿನಿಮಾ ಆಗಲಿದೆ ಎಂದಿದ್ದಾರೆ ನಿರ್ಮಾಪಕ ನರಹರಿ. ಇದನ್ನೂ ಓದಿ: ಟಗರು-2ನಲ್ಲಿ ಶಿವಣ್ಣನ ಜತೆ ನಟಿಸಬೇಕಿತ್ತು ಅಪ್ಪು!

    ನನಗೆ ಈ ಕಥೆ ಬಹಳ ವಿಶೇಷ. ಮೈಸೂರು ಸೀಮೆಯಲ್ಲಿ 70ರ ದಶಕದಲ್ಲಿ ನಡೆದ ಒಂದು ಘಟನೆ ಬಗ್ಗೆ ಕೇಳಿದ್ದೆ. ಅದು ಎಲ್ಲೂ ದಾಖಲಾಗಿಲ್ಲ. ಎಲ್ಲೂ ಅದರ ಬಗ್ಗೆ ಉಲ್ಲೇಖವಿಲ್ಲ. ಕೊನೆಗೆ ಆ ಕಥೆಯ ವಿವರಗಳನ್ನು ಹುಡುಕಿಕೊಂಡು ಹೋದಾಗ ಹಲವು ಮಹತ್ವದ ವಿಷಯಗಳು ಗೊತ್ತಾಯಿತು. ಇದು ಕನ್ನಡ ನೆಲದ ವೀರರ ಕಥೆ. ಯುದ್ಧ ಎಂದರೆ ಯುದ್ಧಭೂಮಿ ಅಥವಾ ಸಾಮ್ರಾಜ್ಯ ವಿಸ್ತರಣೆಯ ಕಥೆಯಲ್ಲ. ಎರಡು ಸಮುದಾಯಗಳ ಕುರಿತ ಕಥೆ ಇದೆ. ವ್ಯಾಪಾರಿಗಳು ಮತ್ತು ಕಾರ್ಮಿಕರ ನಡುವಿನ ಕಥೆ ಇದೆ. ಇದರಲ್ಲಿ ಭಾಗವಹಿಸಿದ ಕೆಲವರನ್ನು ಹುಡುಕಿ ಮಾತಾಡಿಸಿದೆ. ಒಂದಿಷ್ಟು ಮಾಹಿತಿ ಸಿಕ್ಕಿತು. ಅದನ್ನು ಬೆಳೆಸಿ ಚಿತ್ರಕಥೆ ಮಾಡಿದ್ದೇನೆ. ಈ ಕಥೆ ಎಲ್ಲರಿಗೂ ಇಷ್ಟವಾಗಿದೆ ಎಂದು‌ ಚಿತ್ರದ ಕಥೆಯ ಬಗ್ಗೆ ಟಿ.ಕೆ.ದಯಾನಂದ್ ಮಾತನಾಡಿದರು. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ ಲವಿತ್ ಹಾಗೂ ನಟ ಬಿ.ಸುರೇಶ್ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.