Tag: ಟಿ.ಎನ್.ಸೀತಾರಾಂ. ಸಿನಿಮಾ

  • ನಾಳೆಯಿಂದ ಚಂದನವನದಲ್ಲಿ ಬೀಸಲಿದೆ ‘ಕಾಫಿ ತೋಟ’ದ ಪರಿಮಳ

    ನಾಳೆಯಿಂದ ಚಂದನವನದಲ್ಲಿ ಬೀಸಲಿದೆ ‘ಕಾಫಿ ತೋಟ’ದ ಪರಿಮಳ

    ಬೆಂಗಳೂರು: ಕಿರುತೆರೆಯಲ್ಲಿ ತಮ್ಮದೇ ಶೈಲಿಯ ಧಾರವಾಹಿಗಳನ್ನು ನೀಡುವ ಮೂಲಕ ಮನೆಮಾತಾಗಿರುವ ಸ್ಯಾಂಡಲ್‍ವುಡ್ ಮೇಷ್ಟ್ರು ಟಿ.ಎನ್.ಸೀತಾರಂ ಬಹು ಕಾಲದ ನಂತರ ‘ಕಾಫಿ ತೋಟ’ ಸಿನಿಮಾವೊಂದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ನಾಳೆಯಿಂದ ರಾಜ್ಯಾದ್ಯಂತ ತೆರೆಕಾಣಲಿದೆ.

    ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಸಿನಿ ರಸಿಕರನ್ನು ಸೆಳೆದಿರುವ ಕಾಫಿ ತೋಟ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದೆ. ಎಲ್ಲರಿಗಿಂತಲೂ ಭಿನ್ನವಾಗಿ ಕಥೆ ಹೇಳುವ ಸೀತಾರಂ ಇಲ್ಲಿಯೂ ತಮ್ಮ ಚಾಪನ್ನು ಮೂಡಿಸಿದ್ದು, ಮಾಯಾಮೃಗ, ಮುಕ್ತ, ಮುಕ್ತ..ಮುಕ್ತ, ಧಾರವಾಹಿಗಳ ಮೂಲಕ ಸೆಸ್ಪನ್ಸ್ ಕಥೆಗಳನ್ನು ನಿರ್ದೇಶಿಸುವ ಮೂಲಕ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

    ಚಿತ್ರವು ಸಂಪೂರ್ಣ ಹೊಸ ಕಲಾವಿದರನ್ನು ಒಳಗೊಂಡಿದ್ದು, ಸಸ್ಪೆನ್ಸ್ ಕಥಾ ಹಂದರವನ್ನು ಒಳಗೊಂಡಿದೆ. ಟ್ರೇಲರ್‍ನಲ್ಲಿ ತೋರಿಸಿರುವಂತೆ ಸಿನಿಮಾ ಕೊಲೆಯ ಕೇಸ್‍ನ್ನು ಭೇದಿಸುವ ರಹಸ್ಯ ಕಥಾನಕವನ್ನು ಹೊಂದಿದೆ. ಇದೂವರೆಗೂ ಸೀತಾರಂ ಅವರ ಧಾರವಾಹಿಗಳಲ್ಲಿ ನಟಿಸಿರುವ ಅನುಭವಿ ಕಲಾವಿದರ ಬಳಗವನ್ನೇ ಚಿತ್ರತಂಡ ಹೊಂದಿದೆ.

    ಇನ್ನೂ ಚಿತ್ರದ ಮುಖ್ಯಭೂಮಿಕೆಯಲ್ಲಿ ರಂಗಿತರಂಗ ಬೆಡಗಿ ರಾಧಿಕಾ ಚೇತನ್ ಮತ್ತು ರಘು ಮುಖರ್ಜಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ವಕೀಲರ ಪಾತ್ರದಲ್ಲಿ ಸೀತಾರಂ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಂಯುಕ್ತ ಹೊರನಾಡು, ಅಚ್ಯುತ್ ಕುಮಾರ್, ರಾಹುಲ್ ಮಾಧವ್, ಅಪೇಕ್ಷ ಪುರೋತ್, ವೀಣಾ ಸುಂದರ್, ಸುಂದರ್‍ರಾಜ್, ಅಮೋಘ (ಡ್ರಾಮ ಜ್ಯೂನಿಯರ್ಸ್) ಮುಂತಾದವರಿದ್ದಾರೆ. ಬಿ.ಸಿ. ಪಾಟೀಲ್ ಹಾಗೂ ಅಂಬಿಕಾ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಇನ್ನು ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ಜಯಂತ್ ಕಾಯ್ಕಿಣಿ ಹಾಗೂ ಜೋಗಿಯವರು ಬರೆದಿರುವ ಹಾಡುಗಳಿಗೆ ಅನೂಪ್ ಸಿಲೀನ್, ಹರಿಚರಣ್, ಸಿಂಚನಾ ದೀಕ್ಷಿತ್, ಮಿಥುನ್ ಮುಕುಂದನ್, ರಾಜಗುರು ಹೊಸಕೋಟೆ, ಅನನ್ಯಾ ಭಗತ್ ಇನ್ನಿತರರು ತಮ್ಮ ಸುಮಧುರ ಕಂಠದಾನ ಮಾಡಿದ್ದಾರೆ.