Tag: ಟಿವಿ ರೈಟ್ಸ್

  • 80 ಕೋಟಿಗೆ ಜೇಮ್ಸ್ ಟಿವಿ ರೈಟ್ಸ್ ಸೇಲಾಯ್ತಾ? ಡಿಮಾಂಡಪ್ಪೋ ಡಿಮಾಂಡ್

    80 ಕೋಟಿಗೆ ಜೇಮ್ಸ್ ಟಿವಿ ರೈಟ್ಸ್ ಸೇಲಾಯ್ತಾ? ಡಿಮಾಂಡಪ್ಪೋ ಡಿಮಾಂಡ್

    ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಕುರಿತು ಚಂದನವನ ಅಂಗಳದಿಂದ ಮತ್ತೊಂದು ಭರ್ಜರಿ ಸುದ್ದಿ ಹರಿದಾಡುತ್ತಿದೆ. ಕನ್ನಡದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಜೇಮ್ಸ್ ಚಿತ್ರದ ಟಿವಿ ರೈಟ್ಸ್ ಸೇಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

    ಈಗಾಗಲೇ ಥಿಯೇಟರ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಜೇಮ್ಸ್ ಚಿತ್ರವು, ಮುಂದಿನ ನಾಲ್ಕು ದಿನಗಳ ಟಿಕೆಟ್ ಸೋಲ್ಡೌಟ್ ಆಗಿವೆಯಂತೆ. ಇವತ್ತು ಒಂದೇ ದಿನಕ್ಕೆ ಅಂದಾಜು 20 ಕೋಟಿಗೂ ಅಧಿಕ ಆದಾಯ ಹರಿದು ಬಂದಿದೆ ಎನ್ನುತ್ತಿದೆ ಬಾಕ್ಸ್ ಆಫೀಸ್ ರಿಪೋರ್ಟ್. ಇದನ್ನೂ ಓದಿ: ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

    ಈ ನಡುವೆ ಜೇಮ್ಸ್ ಸಿನಿಮಾದ ಟಿವಿ ರೈಟ್ಸ್ ಎಲ್ಲ ಭಾಷೆಗೂ ಸೇರಿ ಅಂದಾಜು 80 ಕೋಟಿಗೆ ಸೇಲ್ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕನ್ನಡದಲ್ಲೇ ಸುವರ್ಣ ವಾಹಿನಿಯು 13.80 ಕೋಟಿಗೆ ಪ್ರಸಾರದ ಹಕ್ಕನ್ನು ಪಡೆದಿದೆಯಂತೆ. ಸೋನಿ ಡಿಜಿಟಲ್ 40 ಕೋಟಿ ಕೊಟ್ಟು ಪ್ರಸಾರದ ಹಕ್ಕನ್ನು ಪಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    ತಮಿಳಿನ ಸನ್ ನೆಟ್ ವರ್ಕ್ 2.17 ಕೋಟಿ, ತೆಲುಗಿನ ಮಾ ಟಿವಿ 5.70 ಕೋಟಿ, ಮಲೆಯಾಳಂ 1.2 ಕೋಟಿ, ಹಿಂದಿ ಸೋನಿ 2.70 ಕೋಟಿ, ಭೋಜಪುರಿ 5.50 ಕೋಟಿ ಹಾಗೂ ಮತ್ತಿತರ ಭಾಷೆಯಲ್ಲೂ ಡಬ್ ಆದ ಚಿತ್ರದಿಂದ ಅಂದಾಜು 10 ಕೋಟಿಯಷ್ಟು ಹಣ ಬಂದಿದೆಯಂತೆ. ಹಾಗಾಗಿ ಥಿಯೇಟರ್ ರಿಲೀಸ್ ಮತ್ತು ಟಿವಿ ರೈಟ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ಬಂದು ಹಣ 100 ಕೋಟಿ ತಲುಪಿದೆ. ಬಿಡುಗಡೆಯ ದಿನವೇ ನೂರು ಕೋಟಿ ಕ್ಲಬ್ ಗೆ ಸೇರಿದ ಸಿನಿಮಾವಿದು ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ.

    ನಾಲ್ಕು ದಿನಗಳ ಟಿಕೇಟ್ ಈಗಾಗಲೇ ಮಾರಾಟವಾಗಿರುವುದರಿಂದ ಮತ್ತು ಅತೀ ಹೆಚ್ಚು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿರುವುದರಿಂದ ಜೇಮ್ಸ್ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡಿದೆ.

  • ರಿಲೀಸ್‍ಗೂ ಮುನ್ನವೇ ಕೋಟಿಗೊಬ್ಬ-3 ದಾಖಲೆ

    ರಿಲೀಸ್‍ಗೂ ಮುನ್ನವೇ ಕೋಟಿಗೊಬ್ಬ-3 ದಾಖಲೆ

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ಕುರಿತು ಅಚ್ಚರಿಯ ಮಾಹಿತಿ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

    ಕೊರೊನಾ ಮಹಾಮಾರಿ ದೇಶಕ್ಕೆ ವಕ್ಕರಿಸಿ ಅವಾಂತರ ಸೃಷ್ಟಿಸದಿದ್ದರೆ, ಮೇ 1ರ ಕಾರ್ಮಿಕರ ದಿನದಂದು ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಲಾಕ್‍ಡೌನ್ ಹಿನ್ನೆಲೆ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿದೆ. ಆದರೆ ಇದೀಗ ಅದೇ ಅಭಿಮಾನಿಗಳ ಟ್ವೀಟ್ ಖಾತೆಯಿಂದ ಕೋಟಿಗೊಬ್ಬ-3 ಸಿನಿಮಾ ಕುರಿತು ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ.

    ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಚಿತ್ರದ ಬಿಡುಗಡೆಗೆ ಕೆಲ ಫೈನಲ್ ಕೆಲಸಗಳಷ್ಟೇ ಬಾಕಿ ಇದ್ದು, ಲಾಕ್‍ಡೌನ್‍ನಿಂದಾಗಿ ಸಿನಿಮಾದ ಕೆಲಸಗಳು ಸ್ಥಗಿತಗೊಂಡಿವೆ. ಇದರ ಮಧ್ಯೆಯೇ ಇದೀಗ ಸಿನಿಮಾದ ಕುರಿತು ಅಚ್ಚರಿಯ ಮಾಹಿತಿಯೊಂದು ಹೊರ ಬಿದ್ದಿದೆ. ಅದೂ ಸಹ ಸಿನಿಮಾದ ಟಿವಿ ರೈಟ್ಸ್ ಕುರಿತು.

    ಹೌದು ಖಾಸಗಿ ವಾಹಿನಿಯೊಂದು ದಾಖಲೆಯ ಮೊತ್ತಕ್ಕೆ ಕೋಟಿಗೊಬ್ಬ-3 ಸಿನಿಮಾವನ್ನು ಖರೀದಿಸಿದೆಯಂತೆ. ಬರೋಬ್ಬರಿ 9 ಕೋಟಿ ರೂ.ಗಳಿಗೆ ವಾಹಿನಿಗೆ ಟಿವಿ ರೈಟ್ಸ್ ಮಾರಾಟವಾಗಿದೆ ಎಂದು ಕಿಚ್ಚ ಸುದೀಪ್ ಅಭಿಮಾನಿಗಳ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ಬಗ್ಗೆ ಚಿತ್ರ ತಂಡ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಟ್ವಿಟ್ಟರ್‍ನಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಇದನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ಸುದೀಪ್ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಮಡೋನ್ನಾ ಸೆಬಸ್ಟಿಯನ್, ಶ್ರದ್ಧಾ ದಾಸ್ ಹಾಗೂ ರವಿಶಂಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ಕೋಟಿಗೊಬ್ಬ-3 ಮಾತ್ರವಲ್ಲ ರಾಬರ್ಟ್, ಯುವರತ್ನ ಸೇರಿದಂತೆ ನಿರ್ಮಾಣ ಹಂತದಲ್ಲಿದ್ದ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಹೊಡೆತ ಬಿದ್ದಿದೆ. ಇದರಿಂದಾಗಿ ನೂರಾರು ಕೋಟಿ ರೂ. ನಷ್ಟ ಉಂಟಾಗಿದೆ. ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶವೇ ಸ್ತಬ್ಧವಾಗಿದ್ದು, ಸಿನಿಮಾ ಇಂಡಸ್ಟ್ರಿ ಸಹ ಸಂಪೂರ್ಣ ಬಂದ್ ಆಗಿದೆ.