Tag: ಟಿವಿ ಆ್ಯಂಕರ್

  • 4ನೇ ಮಹಡಿಯಿಂದ ಜಿಗಿದ ಟಿವಿ ಆ್ಯಂಕರ್

    4ನೇ ಮಹಡಿಯಿಂದ ಜಿಗಿದ ಟಿವಿ ಆ್ಯಂಕರ್

    ಲಕ್ನೋ: ಅಪಾರ್ಟ್ ಮೆಂಟಿನ 4ನೇ ಮಹಡಿಯಿಂದ ಟಿವಿ ಆ್ಯಂಕರ್ ಒಬ್ಬರು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ರಾಧಿಕಾ ಕೌಶಿಕ್ ಮೃತಪಟ್ಟ ಟಿವಿ ಆ್ಯಂಕರ್. ಈಕೆ ಗುರುವಾರ ರಾತ್ರಿಯೇ ಮಹಡಿಯಿಂದ ಬಿದ್ದಿದ್ದು, ಇಂದು ನಸುಕಿನ ಜಾವ ಸುಮಾರು 3:30ಕ್ಕೆ ಮೃತಪಟ್ಟಿದ್ದಾರೆ.

    ಮೃತ ಕೌಶಿಕ್ ನೋಯ್ಡಾದ ಅಂಟಾರ್ಶ್ ಅಪಾರ್ಟ್ ಮೆಂಟ್ ಸೆಕ್ಟರ್ 77ರಲ್ಲಿ ವಾಸಿಸುತ್ತಿದ್ದರು. ಇವರ ಜೊತೆ ಸಹೋದ್ಯೋಗಿ ಕೂಡ ಇದ್ದು, ಇಬ್ಬರು ಒಂದೇ ಪ್ಲಾಟ್ ನಲ್ಲಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ ಮಹಡಿಯ ಮೇಲೆ ನಿಂತು ಮಾತನಾಡುತ್ತಿದ್ದರು. ಬಳಿಕ ಸಹೋದ್ಯೋಗಿ ಶೌಚಾಲಯಕ್ಕೆ ಹೋದಾಗ ರಾಧಿಕಾ ಕೌಶಿಕ್ 4ನೇ ಮಹಡಿಯಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಸುಕಿನ ಜಾವ 3.30ಕ್ಕೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಮೃತ ಆಂಕರ್ ತಾನೇ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಮೃತ ಸಹೋದ್ಯೋಗಿಯನ್ನು ವಶಕ್ಕೆ ಪಡೆದು, ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಬಿದ್ದಿದ್ದಾರೋ ಎನ್ನುವುದನ್ನು ವಿಚಾರಣೆ ಮಾಡುತ್ತಿದ್ದಾರೆ.

    ಮೃತ ನಿರೂಪಕಿ ಮೂಲತಃ ರಾಜಸ್ಥಾನದವರಾಗಿದ್ದು, ಪೊಲೀಸ್ ಅಧಿಕಾರಿಗಳು ಕುಟುಂಬದ ಸದಸ್ಯರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಇತ್ತ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv