ಹಸಿಬಿಸಿ ದೃಶ್ಯಗಳಲ್ಲಿ ನಟಿಸಲ್ಲ ಎಂದಿದ್ದ ಅನುಪಮಾ ಪರಮೇಶ್ವರನ್ (Anupama Parameshwaran) ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ಹೀರೋ ಜೊತೆ ಲಿಪ್‌ಲಾಕ್ ಮಾಡುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು. ಈ ಚಿತ್ರದ ಸಕ್ಸಸ್ ನಂತರ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕಡೆಯಿಂದ ಅನುಪಮಾಗೆ ಬಂಪರ್ ಆಫರ್ ಸಿಕ್ಕಿದೆ.

ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಲು ಅನುಪಮಾಗೆ ಅವಕಾಶ ಸಿಕ್ಕಿದೆ. ಮೇ 6ರಂದು ಸಂಜೆ 5 ಗಂಟೆಗೆ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ರಿವೀಲ್ ಮಾಡೋದಾಗಿ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಇದನ್ನೂ ಓದಿ:ಆನ್‌ಲೈನ್ ಮೂಲಕ ವೋಟ್ ಮಾಡಿದ್ದೇನೆ ಎಂದ ಜ್ಯೋತಿಕಾ- ಟ್ರೋಲ್ ಆದ ಸೂರ್ಯ ಪತ್ನಿ
View this post on Instagram
ಮಹಿಳಾ ಪ್ರಧಾನ ಕಥೆಯಲ್ಲಿ ಅನುಪಮಾ ನಟಿಸಲಿದ್ದು, ನಟಿಯ ಕೆರಿಯರ್‌ನಲ್ಲಿ ತಿರುವು ಕೊಡಲಿದೆ ಎಂದು ಟಾಲಿವುಡ್‌ನಲ್ಲಿ ಚರ್ಚೆ ಶುರುವಾಗಿದೆ. ಈ ಚಿತ್ರದಲ್ಲಿ ಅನುಪಮಾ ಪಾತ್ರಕ್ಕೆ ತುಂಬಾನೇ ಮಹತ್ವವಿದ್ದು, ಎಂದೂ ನಟಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಎ.ಆರ್ ಜೀವ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚೆಗೆ ಅನುಪಮಾ ನಟನೆಯ ‘ಪರಾಧ’ ಎಂಬ ಮಹಿಳಾ ಪ್ರಧಾನ ಸಿನಿಮಾ ಅನೌನ್ಸ್ ಆಗಿತ್ತು. ನಟಿಯ ಫಸ್ಟ್ ಲುಕ್ ಅನ್ನು ಸಮಂತಾ ರಿವೀಲ್ ಮಾಡಿದ್ದರು. ಈ ಬೆನ್ನಲ್ಲೇ ಅನುಪಮಾ ಮತ್ತೊಂದು ಮಹಿಳಾ ಪ್ರಧಾನ ಚಿತ್ರ ಒಪ್ಪಿಕೊಂಡಿದ್ದಾರೆ.







ಸಿದ್ದು ಮತ್ತು ಅನುಪಮಾ (Anupama Parameshwaran) ನಟನೆಯ ‘ಟಿಲ್ಲು ಸ್ಕ್ವೇರ್’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತ ಜ್ಯೂ.ಎನ್‌ಟಿಆರ್ ‘ದೇವರ’ ಚಿತ್ರದ ಶೂಟಿಂಗ್ ಬ್ರೇಕ್ ಕೊಟ್ಟು ‘ಟಿಲ್ಲು ಸ್ಕ್ವೇರ್’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಿದ್ದು ಸಿನಿಮಾಗೆ ಭೇಷ್ ಎಂದಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ತಾರಕ್ ಜೊತೆ ಸಿದ್ದು ಹೊಸ ಸಿನಿಮಾ ಮಾಡ್ತಿದ್ದಾರಾ? ಎಂಬ ಗುಸು ಗುಸು ಶುರುವಾಗಿದೆ. ಇನ್ನೂ ಕೆಲವರು ‘ಟಿಲ್ಲು ಸ್ಕ್ವೇರ್’ ಸಿನಿಮಾ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗುತ್ತಿದ್ದಾರೆ ಎಂದು ಕೂಡ ಸುದ್ದಿ ಹಬ್ಬಿದೆ. ಅಸಲಿಗೆ ಯಾವುದು ನಿಜ? ಎಂಬುದನ್ನು ಕಾದುನೋಡಬೇಕಿದೆ.









