Tag: ಟಿಮ್‌ ಡೇವಿಡ್‌

  • ಆರ್‌ಸಿಬಿಗೆ ಶಾಕ್‌ – ಟಿಮ್‌ ಡೇವಿಡ್‌ ಆಡೋದು ಡೌಟ್‌!

    ಆರ್‌ಸಿಬಿಗೆ ಶಾಕ್‌ – ಟಿಮ್‌ ಡೇವಿಡ್‌ ಆಡೋದು ಡೌಟ್‌!

    ಅಹಮದಾಬಾದ್‌: ಫೈನಲ್‌ ಪಂದಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಆರ್‌ಸಿಬಿಗೆ (RCB) ಡಬಲ್‌ ಆಘಾತವಾಗಿದೆ. ಫಿಲ್‌ ಸಾಲ್ಟ್‌ (Phil Salt) ಆಡುವುದು ಅನುಮಾನ ಎನ್ನುವಾಗಲೇ ಆಲ್‌ರೌಂಡರ್‌ ಟಿಮ್‌ ಡೇವಿಡ್‌ (Tim David) ಈ ಪಂದ್ಯದಲ್ಲಿ ಆಡುತ್ತಾರಾ ಇಲ್ಲವೋ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

    ಸ್ನಾಯುಸೆಳೆತಕ್ಕೆ ಒಳಗಾಗಿರುವ ಟಿಮ್ ಡೇವಿಡ್ ಲಕ್ನೋ ಮತ್ತು ಪಂಜಾಬ್‌ ವಿರುದ್ಧದ ಕ್ವಾಲಿಫೈಯರ್‌ ಪಂದ್ಯ ಆಡಿಲ್ಲ. ಈ ಬಗ್ಗೆ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಅವರನ್ನು ಮಾಧ್ಯಮಗಳು ಪ್ರಶ್ನಿಸಿವೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    ಈ ಪ್ರಶ್ನೆಗೆ ಪಾಟಿದಾರ್‌, ಇಲ್ಲಿಯವರೆಗೆ ಟಿಮ್ ಡೇವಿಡ್ ಬಗ್ಗೆ ನನಗ್ಯಾವ ಐಡಿಯಾವೂ ಇಲ್ಲ. ಡಾಕ್ಟರ್ ಈ ಬಗ್ಗೆ ನಿಗಾ ಇರಿಸಿದ್ದಾರೆ. ವೈದ್ಯರು ಸಂಜೆ ನಮಗೆ ಮಾಹಿತಿ ನೀಡಲಿದ್ದಾರೆ ಎಂದು ಉತ್ತರಿಸಿದರು. ವೈದ್ಯರು  ಅನುಮತಿ ನೀಡಿದರೆ ಡೇವಿಡ್‌ ಆರ್‌ಸಿಬಿ ಯ ಪ್ಲೇಯಿಂಗ್‌ 11 ಸೇರಲಿದ್ದಾರೆ. ಇದನ್ನೂ ಓದಿ: ಆರ್‌ಸಿಬಿಗೆ ದೊಡ್ಡ ಶಾಕ್‌ – ಸಾಲ್ಟ್‌ ಆಡೋದು ಅನುಮಾನ

    ಟಿಮ್ ಡೇವಿಡ್ ಅನುಪಸ್ಥಿತಿಯಲ್ಲಿ ಲಿಯಾಮ್ ಲಿವಿಂಗ್‌ಸ್ಟನ್ ಲಕ್ನೋ ವಿರುದ್ಧ ಪಂದ್ಯ ಆಡಿದ್ದರು. ಆದರೆ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು.

    ಈ ಐಪಿಎಲ್‌ನಲ್ಲಿ 12 ಪಂದ್ಯವಾಡಿ 62.33 ಸರಾಸರಿಯಲ್ಲಿ 187 ರನ್‌ ಹೊಡೆದಿದ್ದಾರೆ. 185.15 ಸ್ಟ್ರೈಕ್‌ ರೇಟ್‌ ಹೊಂದಿರುವ ಡೇವಿಡ್‌ 16 ಬೌಂಡರಿ, 14 ಸಿಕ್ಸ್‌ ಮತ್ತು 7 ಕ್ಯಾಚ್‌ ಪಡೆದಿದ್ದಾರೆ.

  • ಚಿನ್ನಸ್ವಾಮಿ ಮೈದಾನದಲ್ಲಿ ಮಕ್ಕಳಂತೆ ಈಜಾಡಿದ ಡೇವಿಡ್‌!

    ಚಿನ್ನಸ್ವಾಮಿ ಮೈದಾನದಲ್ಲಿ ಮಕ್ಕಳಂತೆ ಈಜಾಡಿದ ಡೇವಿಡ್‌!

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಸ್ಟಾರ್‌ ಬ್ಯಾಟರ್‌ ಟಿಮ್‌ ಡೇವಿಡ್‌ (Tim David) ಚಿನ್ನಸ್ವಾಮಿ ಮೈದಾನದ (Chinnaswamy Stadium) ನೀರಿನಲ್ಲಿ ಈಜಾಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಈಗ ರಾತ್ರಿ ಭಾರೀ ಮಳೆ ಸುರಿಯುತ್ತಿದೆ. ಆರ್‌ಸಿಬಿ ತಂಡ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಜೋರಾಗಿ ಸುರಿದಿದೆ.

    ಮಳೆದ ಸುರಿದ ಹಿನ್ನೆಲೆಯಲ್ಲಿ ಆಟಗಾರರು ಡ್ರೆಸ್ಸಿಂಗ್‌ ಕೊಠಡಿ ಸೇರಿದ್ದರೆ ಟಿಮ್‌ ಡೇವಿಡ್‌ ಮೈದಾನದಲ್ಲಿ ನಿಂತಿದ್ದ ನೀರಿನಲ್ಲ ಈಜಾಡಿದ್ದಾರೆ. ಡೇವಿಡ್‌ ಈಜಾಡುತ್ತಿರುವ ವಿಡಿಯೋವನ್ನು ಆರ್‌ಸಿಬಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದೆ. ಇದನ್ನೂ ಓದಿ: ಮತ್ತೆ ಆರಂಭವಾಗಲಿದೆ IPL – ಬೆಂಗಳೂರಲ್ಲಿ ಪಂದ್ಯದ ದಿನ ಮೆಟ್ರೋ ಸಮಯ ವಿಸ್ತರಣೆ


    ಆಸ್ಟ್ರೇಲಿಯಾದ ಟಿಮ್‌ ಡೇವಿಡ್‌ ಅವರನ್ನು ಆರ್‌ಸಿಬಿ ಹರಾಜಿನಲ್ಲಿ 3 ಕೋಟಿ ರೂ. ನೀಡಿ ಖರೀದಿಸಿತ್ತು. ಮೊದಲ ಬಾರಿಗೆ ಐಪಿಎಲ್‌ ಪ್ರತಿನಿಧಿಸುತ್ತಿರುವ ಡೇವಿಟ್‌ 11 ಪಂದ್ಯಗಳಿಂದ 186 ರನ್‌ ಹೊಡೆದಿದ್ದಾರೆ.

    ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಸ್ಥಗಿತಗೊಂಡಿದ್ದ ಐಪಿಎಲ್‌ ಪಂದ್ಯಗಳು ಮೇ 17 ರಿಂದ ಆರಂಭವಾಗಲಿದೆ. ಶನಿವಾರ ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಕೋಲ್ಕತ್ತಾ ಮಧ್ಯೆ ಪಂದ್ಯ ನಡೆಯಲಿದೆ. ಈಗಾಗಲೇ 16 ಅಂಕ ಗಳಿಸಿರುವ ಆರ್‌ಸಿಬಿ ನಾಳಿನ ಪಂದ್ಯ ಗೆದ್ದರೆ ಪ್ಲೇ ಆಫ್‌ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

  • ಬೆಂಗಳೂರಲ್ಲಿ ಆರ್‌ಸಿಬಿ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

    ಬೆಂಗಳೂರಲ್ಲಿ ಆರ್‌ಸಿಬಿ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB vs DC) ನಡುವಿನ ಐಪಿಎಲ್‌ ಪಂದ್ಯವನ್ನು ಸಿಎಂ ಸಿದ್ದರಾಮಯ್ಯ (Siddaramaiah) ವೀಕ್ಷಿಸಿದರು.

    ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಬೈರತಿ ಸುರೇಶ್ ಜೊತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ (IPL 2025) ಪಂದ್ಯವನ್ನು ಸಿಎಂ ವೀಕ್ಷಸಿ ಎಂಜಾಯ್‌ ಮಾಡಿದರು. ಇದನ್ನೂ ಓದಿ: ಸ್ಟಾರ್ಕ್‌ಗೆ ಒಂದೇ ಓವರ್‌ನಲ್ಲಿ 30 ರನ್‌ ಚಚ್ಚಿದ ಸಾಲ್ಟ್‌ – ಹುಚ್ಚೆದ್ದು ಕುಣಿದ RCB ಫ್ಯಾನ್ಸ್‌

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಿದೆ. ಫಿಲ್ ಸಾಲ್ಟ್ 37, ವಿರಾಟ್‌ ಕೊಹ್ಲಿ 22, ರಜತ್‌ ಪಾಟಿದಾರ್‌ 25, ಟಿಮ್‌ ಡೇವಿಡ್‌ 37, ಕೃಣಾಲ್‌ ಪಾಂಡೆ 18 ರನ್‌ ಗಳಿಸಿದ್ದಾರೆ.

    ಡೆಲ್ಲಿ ಪರ ವಿಪ್ರಜ್ ನಿಗಮ್, ಕುಲ್ದೀಪ್‌ ಯಾದವ್‌ ತಲಾ 2 ಹಾಗೂ ಮುಕೇಶ್‌ ಕುಮಾರ್‌, ಮೋಹಿತ್‌ ಶರ್ಮಾ ತಲಾ 1 ವಿಕೆಟ್‌ ಪಡೆದರು. ಇದನ್ನೂ ಓದಿ: ಚೆನ್ನೈ ತಂಡದಿಂದ ರುತುರಾಜ್‌ ಔಟ್‌ – ತಲಾ ಮತ್ತೆ ಕ್ಯಾಪ್ಟನ್‌